Tag: Shivamogga Rural Police

  • ಶಿವಮೊಗ್ಗ | ರಾಗಿಗುಡ್ಡದಲ್ಲಿ ಅನ್ಯಕೋಮಿನ ಯುವಕರ ದುಷ್ಕೃತ್ಯ – ಗಣಪತಿ ವಿಗ್ರಹ, ನಾಗರ ಕಲ್ಲಿಗೆ ಅಪಮಾನ ಆರೋಪ

    ಶಿವಮೊಗ್ಗ | ರಾಗಿಗುಡ್ಡದಲ್ಲಿ ಅನ್ಯಕೋಮಿನ ಯುವಕರ ದುಷ್ಕೃತ್ಯ – ಗಣಪತಿ ವಿಗ್ರಹ, ನಾಗರ ಕಲ್ಲಿಗೆ ಅಪಮಾನ ಆರೋಪ

    ಶಿವಮೊಗ್ಗ: ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರಿಂದ ಗಣಪತಿ ವಿಗ್ರಹ ಹಾಗೂ ನಾಗರ ಕಲ್ಲಿಗೆ ಅಪಮಾನ ಮಾಡಿರುವ ಆರೋಪ ಕೇಳಿಬಂದಿದೆ.

    ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಿಂದೂ ಮುಖಂಡರು ಕೆರಳಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಜಿ.ಕೆ ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-2 ಡಿವೈಎಸ್ಪಿ ಸಂಜೀವ್ ಕುಮಾರ್ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

    ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದು, ದೂರು ನೀಡುವಂತೆ ಮನವಿ ಮಾಡಿದ್ದಾರೆ. ದೂರು ನೀಡಿ ತಪ್ಪಿತಸ್ಥರನ್ನು ಬಂಧಿಸುತ್ತೇವೆಂದು ಭರವಸೆ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ-ಭದ್ರತೆ ನಿಯೋಜಿಸಲಾಗಿದೆ.

  • ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

    ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

    – ಹೂ ಬೆಳೆಯೋ ಪಾಟ್‌ಗಳಲ್ಲೇ ಗಾಂಜಾ ಬೆಳೆದು ಮಾರಾಟ
    – ಟೇಬಲ್‌ಫ್ಯಾನ್ ಗಾಳಿಯಿಂದ ಗಾಂಜಾ ಒಣಗಿಸಿ ಪ್ಯಾಕ್ ಮಾಡ್ತಿದ್ರು

    ಶಿವಮೊಗ್ಗ: ತಾವು ವಾಸವಿದ್ದ ಬಾಡಿಗೆ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಐವರು MBBS ವಿದ್ಯಾರ್ಥಿಗಳನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು (Shivamogga Rural Police) ಬಂಧಿಸಿರುವ ಘಟನೆ ನಡೆದಿದೆ.

    ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ (Medical College Students) ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳು (Accused). ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದು ತಾಯಿ ಚಾಮುಂಡಿಗೆ ಸೆರಗೊಡ್ಡಿ ಬೇಡಿಕೊಂಡಿದ್ದೆ: ಲಕ್ಷ್ಮಿ ಹೆಬ್ಬಾಳ್ಕರ್

    ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ರು:
    ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ವಾಸಕ್ಕೆ ಬಾಡಿಗೆ ಮನೆ ಪಡೆದಿದ್ದರು. ಅದೇ ಮನೆಯಲ್ಲೇ ಹೂ ಬೆಳೆಯುವ ಪಾಟ್‌ಗಳಲ್ಲಿ ಗಾಂಜಾ ಬೆಳೆದು, ಅದನ್ನು ಟೇಬಲ್‌ಫ್ಯಾನ್ (Table Fan) ಗಾಳಿಯಿಂದ ಒಣಗಿಸಿ, ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಇವರ ಬಳಿ ಗಾಂಜಾ ಕೊಳ್ಳಲು ಪಾಂಡಿದೊರೈ ಹಾಗೂ ವಿನೋದ್ ಕುಮಾರ್ ಹೋಗಿದ್ದರು. ಇದನ್ನೂ ಓದಿ: KRS ನೀರಿನ ಮಟ್ಟ ಭಾರೀ ಕುಸಿತ – ಕುಡಿಯುವ ನೀರಿಗೆ ಶುರುವಾಗಿದೆ ಆತಂಕ

    ಖಚಿತ ಮಾಹಿತಿ ಮೇರೆಗೆ ಶಿವಗಂಗಾ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಗಳಿಂದ 6 ಸಾವಿರ ರೂ. ಮೌಲ್ಯದ ಹಸಿ ಗಾಂಜಾ, 20 ಸಾವಿರ ರೂ. ಮೌಲ್ಯದ ಒಣ ಗಾಂಜಾ, 30 ಸಾವಿರ ರೂ. ಮೌಲ್ಯದ ಚರಸ್, ಸೀರಿಂಜ್‌ಗಳು, ಹುಕ್ಕಾ ಕೊಳವೆ, 6 ಟೇಬಲ್ ಫ್ಯಾನ್ ಸೇರಿದಂತೆ ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.

    ಶಿವಮೊಗ್ಗಕ್ಕೆ MBBS ವ್ಯಾಸಂಗ ಮಾಡಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಹೆತ್ತವರು ಸಹ ತಮ್ಮ ಮಕ್ಕಳು ಡಾಕ್ಟರ್ ಆಗುತ್ತಾರೆ ಎಂಬ ಕನಸು ಕಂಡಿದ್ದರು. ಶಿವಮೊಗ್ಗದ ಖಾಸಗಿ ಕಾಲೇಜಿಗೆ ಲಕ್ಷಾಂತರ ಹಣ ಕೊಟ್ಟು ಎಂಬಿಬಿಎಸ್ ಪದವಿಗೆ ಸೇರಿಸಿದ್ದರು. ಆದ್ರೆ ಈ ವಿದ್ಯಾರ್ಥಿಗಳು ತಾವು ವಾಸವಿದ್ದ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರು. ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗಬೇಕಿದ್ದ ವಿದ್ಯಾರ್ಥಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.