Tag: Shivamogga Dasara

  • ಶಿವಮೊಗ್ಗ ದಸರಾ – ತಾಲೀಮು ಆರಂಭಿಸಿದ ಗಜಪಡೆ

    ಶಿವಮೊಗ್ಗ ದಸರಾ – ತಾಲೀಮು ಆರಂಭಿಸಿದ ಗಜಪಡೆ

    ಶಿವಮೊಗ್ಗ: ನಗರದಲ್ಲಿ ಸಂಭ್ರಮದ ದಸರಾ ಆಚರಣೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲಿನಿಂದ ಗಜಪಡೆ ಆಗಮಿಸಿದೆ.

    ಮೂರು ಆನೆಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ಗಜಪಡೆಗೆ ಶಾಸಕ ಎಸ್.ಎನ್ ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಆರತಿ ಎತ್ತಿ ಸ್ವಾಗತ ಕೋರಿದ್ದಾರೆ. ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದ 2ನೇ ದೊಡ್ಡ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ ಚಾಲನೆ

    ಶಿವಮೊಗ್ಗ ನಗರದಲ್ಲಿ ಗಜಪಡೆ ತಾಲೀಮು ಆರಂಭಿಸಿವೆ. ದಸರಾದ ಕೊನೆಯ ದಿನ ಅದ್ದೂರಿ ಜಂಬೂಸವಾರಿ ನಡೆಯಲಿದೆ. ಈ ಭಾರಿಯೂ ಸಾಗರ್ ಆನೆ ಅಂಬಾರಿ ಹೋರಲಿದೆ. ಸಾಗರ್‍ಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. 650 ಕೆಜಿ ಬೆಳ್ಳಿಯ ಅಂಬಾರಿಯಲ್ಲಿ ನಾಡದೇವಿ ಚಾಮುಂಡಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

    ರಾಜ್ಯದಲ್ಲಿ ಎರಡನೇ ಅತಿದೊಡ್ಡ ದಸರಾ ಎಂಬ ಖ್ಯಾತಿ ಶಿವಮೊಗ್ಗ ದಸರಾಕ್ಕೆ ಇದೆ. ಈ ಭಾರಿ ದಸರಾ ಜಂಬೂ ಸವಾರಿ ನೋಡಲು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಗಜಪಡೆಗೆ ಆಹ್ವಾನ – ಈ ಬಾರಿ 10 ದಿನಗಳ ಕಾಲ ಸಂಭ್ರಮದ ಉತ್ಸವ

  • ರಾಜ್ಯದ 2ನೇ ದೊಡ್ಡ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ ಚಾಲನೆ

    ರಾಜ್ಯದ 2ನೇ ದೊಡ್ಡ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ ಚಾಲನೆ

    ಶಿವಮೊಗ್ಗ: ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದೇ ಖ್ಯಾತಿಯಾದ ಶಿವಮೊಗ್ಗ ದಸರಾಕ್ಕೆ (Shivamogga Dasara) ಚಾಲನೆ ಸಿಕ್ಕಿದೆ. ಪಾಲಿಕೆಯಿಂದ ಬೆಳ್ಳಿ ಅಂಬಾರಿಯನ್ನು ಲಾರಿಯ ಮೇಲೆ 650 ಕೆಜಿ ತೂಕದ ಬೆಳ್ಳಿ ಅಂಬಾರಿಯನ್ನು ಮೆರವಣಿಗೆ ಮಾಡಿ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಕೊಂಡೊಯ್ಯಲಾಗಿದೆ.

    ನವರಾತ್ರಿ ಉತ್ಸವಗಳಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಚಾಲನೆ ನೀಡಿದರು. ಬೆಳ್ಳಿ ಮಂಟಪದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಇಂದಿನಿಂದ ಅ.4 ರವರೆಗೆ ನವರಾತ್ರಿ ಉತ್ಸವ ದೇವಾಲಯದಲ್ಲಿ ಸಂಭ್ರಮದಿಂದ ನಡೆಯಲಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಗಜಪಡೆಗೆ ಆಹ್ವಾನ – ಈ ಬಾರಿ 10 ದಿನಗಳ ಕಾಲ ಸಂಭ್ರಮದ ಉತ್ಸವ

    ಬಿ.ಎಸ್.ರಾಜು ಅವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದಾರೆ. ಇದನ್ನೂ ಓದಿ: ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

  • ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    – ಕರ್ನಾಟಕದಲ್ಲಿ ದಸರಾ ವೈಭವ

    ಸರಾ ಎಂದೊಡನೆ ಥಟ್ಟನೆ ನೆನಪಾಗುವುದು ಸಾಂಸ್ಕೃತಿಕ ನಗರಿ ಮೈಸೂರು (Mysuru Dasara). ಆದರೆ, ಈ ಸಾಂಸ್ಕೃತಿಕ ಉತ್ಸವದ ಬೇರುಗಳು ಒಂದೊಂದು ಕಡೆಗೆ ಕವಲೊಡೆದು ನಿಂತಿದೆ. ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ದಸರಾದ ಮೂಲ ವಿಜಯನಗರ ಸಾಮ್ರಾಜ್ಯದಲ್ಲಿದೆ. ರಾಜ ಕೃಷ್ಣದೇವರಾಯ ಅವರ ಕಾಲದಲ್ಲಿ ವೈಭವದಿಂದ ಈ ಹಬ್ಬ ಆಚರಿಸಲಾಗುತ್ತಿತ್ತು. ಅದು ಅಲ್ಲಿಂದ ನೇರವಾಗಿ ಮೈಸೂರಿಗೆ ಬಳುವಳಿಯಾಗಿ ಬಂದಿಲ್ಲ. ಇಲ್ಲೂ ಒಂದು ಇತಿಹಾಸವಿದೆ. ಹಳೆ ಮೈಸೂರು ಭಾಗದ ಪಟ್ಟಣವೊಂದರಲ್ಲಿ ದಸರಾವನ್ನು ಮೊದಲು ಆಚರಿಸಲಾಯಿತು. ಅದುವೇ ಈಗಿನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna Dasara). ನಂತರ ಇದರ ಪ್ರಭಾವ ಎಲ್ಲೆಡೆ ಹಬ್ಬಿತು. ಹಲವು ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದಸರಾ ಆಚರಣೆ ಪ್ರಾರಂಭಗೊಂಡವು. ಅದು ಪರಂಪರಾಗತವಾಗಿ ಮುಂದುವರಿದುಕೊಂಡು ಬಂದವು.

    ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭ
    ಕರ್ನಾಟಕದಲ್ಲಿ ದಸರಾ ಆಚರಣೆಗಳು ವಾಸ್ತವವಾಗಿ 1610 ರಲ್ಲಿ ಪ್ರಾರಂಭವಾಯಿತು. ರಾಜ ರಾಜ ಒಡೆಯರ್ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣ ಎಂಬ ಸಣ್ಣ ಪಟ್ಟಣದಲ್ಲಿ ಇದು ಆರಂಭಗೊಂಡಿತು ಎಂದು ಇತಿಹಾಸ ಹೇಳುತ್ತದೆ. ಆಗ ಶ್ರೀರಂಗಪಟ್ಟಣವು ಒಡೆಯರ್ ರಾಜವಂಶದ ರಾಜಧಾನಿಯಾಗಿತ್ತು. ಮುಂದಿನ ಶತಮಾನದ ವರೆಗೆ ಹಾಗೆಯೇ ಮುಂದುವರಿದಿತ್ತು. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಮೈಸೂರಿಗೆ ರಾಜಧಾನಿ ಸ್ಥಳಾಂತರ
    17 ನೇ ಶತಮಾನದ ಅಂತ್ಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅದರೊಂದಿಗೆ, ಅದ್ಧೂರಿ ದಸರಾ ಆಚರಣೆಗಳು ಸಹ ಮೈಸೂರಿಗೆ ಸ್ಥಳಾಂತರಗೊಂಡವು. ಒಂಬತ್ತು ದಿನಗಳ ಉತ್ಸವದ ಸಮಯದಲ್ಲಿ ಸ್ಥಳೀಯ ಜನರು (ಶ್ರೀರಂಗಪಟ್ಟಣ) ಸರಳ ಆಚರಣೆಗಳನ್ನು ಮಾತ್ರ ಕೈಬಿಡದೇ ಮುಂದುವರೆಸಿದರು. ಆದರೆ, 2009 ರಲ್ಲಿ ಸ್ಥಳೀಯರ ಭಾರಿ ಬೇಡಿಕೆಯಿಂದಾಗಿ ಜಂಬೂ ಸವಾರಿ ಸೇರಿದಂತೆ ಮೂರು ದಿನಗಳ ದಸರಾ ಆಚರಣೆಯನ್ನು ಶ್ರೀರಂಗಪಟ್ಟಣದಲ್ಲಿ ನಡೆಸಲಾಯಿತು. ಆ ಪರಂಪರೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಆದ್ದರಿಂದಲೇ ಮೈಸೂರು ದಸರಾ ಸಂದರ್ಭದಲ್ಲೇ ಶ್ರೀರಂಗಪಟ್ಟಣದಲ್ಲೂ ದಸರಾ ನಡೆಯಲಿದೆ.

    ಮಂಗಳೂರು ದಸರಾ: ಬಾರಿ ಚಂದ
    ಮಂಗಳೂರಿನಲ್ಲಿ ದಸರಾವನ್ನು ಆಡುಮಾತಿನಲ್ಲಿ ಮಾರ್ನಾಮಿ ಎಂದು ಕರೆಯಲಾಗುತ್ತದೆ. ಕರಾವಳಿ ನಗರದಲ್ಲಿ ಈ ಹಬ್ಬವು ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳ ಸುತ್ತ ಸುತ್ತುತ್ತದೆ. ಸರ್ವಜನಿಕ ಶಾರದಾ ಪೂಜಾ ಮಹೋತ್ಸವ (ಸಾರ್ವಜನಿಕ ಆಚರಣೆ) ಮತ್ತೊಂದು ಪ್ರಮುಖ ಅಂಶವಾಗಿದೆ. ಎಲ್ಲಾ ದೇವಾಲಯಗಳು ಶಾರದಾ ದೇವಿಯ ಅಲಂಕೃತ ವಿಗ್ರಹಗಳನ್ನು ತಯಾರಿಸುತ್ತವೆ. ದೈನಂದಿನ ಪೂಜೆಗಳ ನಂತರ ಭವ್ಯ ಮೆರವಣಿಗೆಗಳನ್ನು ನಡೆಸುತ್ತವೆ. ಒಂಬತ್ತು ದಿನಗಳು ಸಾವಿರಾರು ಭಕ್ತರು ಸಾಕ್ಷಿಯಾಗುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಿಂದ ತುಂಬಿರುತ್ತವೆ. ಹುಲಿ ವೇಷ ಅಥವಾ ಹುಲಿ ನೃತ್ಯವು ಉತ್ಸವಕ್ಕೆ ಭೂಷಣದಂತಿರುತ್ತದೆ. ವಿವಿಧ ಕಲಾ ಪ್ರಕಾರಗಳು, ನೃತ್ಯ, ಸಂಗೀತ ಮತ್ತು ಸಾಂಪ್ರದಾಯಿಕ ರಥಗಳನ್ನು ಒಳಗೊಂಡಿರುವ ಭವ್ಯವಾದ ಟ್ಯಾಬ್ಲೋಗಳ ಮೆರವಣಿಗೆಯೂ ಇರುತ್ತದೆ. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?

    ಮೈಸೂರು ದಸರಾ: ಎಷ್ಟೊಂದು ಸುಂದರ
    ದಸರ ಆಚರಣೆಯನ್ನು ಮೂಲತಃ ವಿಜಯನಗರ ರಾಜರು ಆಚರಿಸುತ್ತಿದ್ದರು. ನಂತರ ಇದನ್ನು ಮಹಾನವಮಿ ಎಂದು ಕರೆಯಲಾಯಿತು. ಸಾಮ್ರಾಜ್ಯದ ಪತನದ ನಂತರ, ಮೈಸೂರಿನ ಒಡೆಯರ್, ಮುಖ್ಯವಾಗಿ ರಾಜ ಒಡೆಯರ್ ಈ ಸಂಪ್ರದಾಯವನ್ನು ಮುಂದುವರೆಸಿದರು. 10 ದಿನಗಳ ಉತ್ಸವದ ಸಮಯದಲ್ಲಿ ಅವರು ರಾಜ ನಗರದಲ್ಲಿ ಆಚರಣೆಗಳಿಗೆ ಹೊಸ ಪರಂಪರೆಯನ್ನು ಸೇರಿಸಿದರು. ಅದರ ಪ್ರತಿಬಿಂಬ ಎಂಬಂತೆ ರಾಜಮನೆತನ, ಸ್ಮಾರಕಗಳು, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ನಗರದ ಪ್ರಮುಖ ಪ್ರದೇಶಗಳು ಈಗ ಬೆಳಗುತ್ತಿವೆ. ಮೈಸೂರಿನ ಹಳೆಯ-ಪ್ರಪಂಚದ ಮೋಡಿಯನ್ನು ಪ್ರತಿಬಿಂಬಿಸುವ ದರ್ಬಾರ್‌ಗಳು ಆತಿಥೇಯ ಕವಿ ಸಭೆಗಳು, ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮತ್ತು ಚಲನಚಿತ್ರೋತ್ಸವಗಳು ಎಲ್ಲವೂ ಮೇಳೈಸಿವೆ. ವಿಜಯದಶಮಿ ದಿನದಂದು ಉತ್ಸವಗಳು ಪ್ರಸಿದ್ಧ ಜಂಬೂ ಸವಾರಿಯೊಂದಿಗೆ ವಿಜೃಂಭಣೆಯಿಂದ ಕೊನೆಗೊಳ್ಳುತ್ತವೆ. ಇದು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಅಲಂಕರಿಸಿದ ಆನೆಯ ಮೇಲೆ ಚಿನ್ನದಂಬಾರಿ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗುವುದು ಪ್ರಮುಖ ಆಕರ್ಷಣೆಯಾಗಿದೆ. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಎಲ್ಲಾ ಉತ್ಸವಗಳ ಮುಕ್ತಾಯವನ್ನು ಸೂಚಿಸುತ್ತದೆ.

    ಮಡಿಕೇರಿ ದಸರಾ: ಮಾರಿಯಮ್ಮ ಸರ್ವೋಚ್ಚ ಆಳ್ವಿಕೆ ನಡೆಸುವ ಸ್ಥಳ
    ರಾಜ ದೊಡ್ಡವೀರ ರಾಜೇಂದ್ರ ಮೈಸೂರಿನ ಪ್ರತಿರೂಪಗಳಂತೆಯೇ ಆಯುಧ ಪೂಜೆ ಮತ್ತು ದೇವಿ ಪೂಜೆಯನ್ನು ಮಾಡಿ ನವರಾತ್ರಿಯನ್ನು ಆಚರಿಸುತ್ತಿದ್ದನೆಂದು ಹೇಳಲಾಗುತ್ತದೆ. ಬೆಟ್ಟದ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವವು ಮಾರಿಯಮ್ಮ ದೇವತೆಗೆ ಸಮರ್ಪಿತವಾಗಿದೆ. ಕೊಡಗಿನಲ್ಲಿ ದೇವಿ ಹೆಸರಿನಲ್ಲಿ ನಾಲ್ಕು ದೇವಾಲಯಗಳಿವೆ. ಮಾರಿಯಮ್ಮನ ನೃತ್ಯವು ವಿಶಿಷ್ಟವಾದ ಧಾರ್ಮಿಕ ಜಾನಪದ ನೃತ್ಯ (ಕರಗ)ವನ್ನು ಹೊಂದಿದೆ. ಇಲ್ಲಿ ಹಬ್ಬವು ಭಕ್ತರಿಗೆ ಸಂಬಂಧಿಸಿದೆ. ಆದ್ದರಿಂದ ಇದನ್ನು ಜನೋತ್ಸವ ಎಂದೂ ಕರೆಯುತ್ತಾರೆ. ಈ ಪ್ರದೇಶದ ಪ್ರತಿಯೊಂದು ದೇವಾಲಯವು ‘ಮಂಟಪ’ ಅಥವಾ ಟ್ಯಾಬ್ಲೋಗಳಿಗೆ ತನ್ನದೇ ಆದ ಥೀಮ್ ಅನ್ನು ಹೊಂದಿದೆ.

    ಶಿವಮೊಗ್ಗ ದಸರಾ: ಒಂದು ಮಿನಿ ಮೈಸೂರು ದಸರಾ
    ಶಿವಮೊಗ್ಗದ ಆಚರಣೆಗಳು ಇತ್ತೀಚಿನದ್ದಾಗಿದ್ದು ಮೈಸೂರು ದಸರಾ ಮಾದರಿಯಲ್ಲಿವೆ. ಹಬ್ಬಗಳ ಕೇಂದ್ರವಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಶಿವಮೊಗ್ಗವು ನವರಾತ್ರಿಯ ಸಮಯದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಮೇಳಗಳು ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತದೆ. ಇತ್ತೀಚೆಗೆ, ಈ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಲನಚಿತ್ರ ತಾರೆಯರು ಮತ್ತು ಗಾಯಕರು ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಜಂಬೂಸವಾರಿ ಕೂಡ ಇಲ್ಲಿ ನಡೆಯುವ ಉತ್ಸವಗಳ ಭಾಗವಾಗಿದೆ. ಈ ಪ್ರದೇಶದ ಸುತ್ತಮುತ್ತಲಿನ ದೇವಾಲಯಗಳು ಸಹ ಉತ್ಸವಗಳಲ್ಲಿ ಭಾಗವಹಿಸುತ್ತವೆ. ಶಿವಮೊಗ್ಗದಲ್ಲಿ ನಡೆಯುವ ದಸರಾ ಆಚರಣೆಗಳು ಬರಹಗಾರರು, ಕವಿಗಳು, ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಇತರ ಕಲಾವಿದರ ಸಂಗಮಕ್ಕೆ ಕಾರಣವಾಗುತ್ತವೆ.

  • ಶಿವಮೊಗ್ಗ ದಸರಾ | ಗಜಪಡೆಗೆ ಆಹ್ವಾನ – ಈ ಬಾರಿ 10 ದಿನಗಳ ಕಾಲ ಸಂಭ್ರಮದ ಉತ್ಸವ

    ಶಿವಮೊಗ್ಗ ದಸರಾ | ಗಜಪಡೆಗೆ ಆಹ್ವಾನ – ಈ ಬಾರಿ 10 ದಿನಗಳ ಕಾಲ ಸಂಭ್ರಮದ ಉತ್ಸವ

    ಶಿವಮೊಗ್ಗ: ನಾಡಹಬ್ಬ ದಸರಾವನ್ನು ಈ ಭಾರಿ ಶಿವಮೊಗ್ಗದಲ್ಲಿ (Shivamogga Dasara) ಅತ್ಯಂತ ವಿಜೃಂಭಣೆಯಿಂದ 10 ದಿನಗಳ ಕಾಲ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ (S.N Channabasappa) ಹೇಳಿದರು. ಮಹಾನಗರ ಪಾಲಿಕೆಯ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

    ಗಜಪಡೆಗೆ ಆಹ್ವಾನ
    ದಸರಾ ಮಹೋತ್ಸವದ ವೈಭವವನ್ನು ಹೆಚ್ಚಿಸಲಿರುವ ಗಜಪಡೆಗೆ (Gajapade) ಇಂದು (ಸೆ.20) ಸಕ್ರೆಬೈಲ್‌ನಲ್ಲಿ ಚನ್ನಬಸಪ್ಪ ಅವರು ಆಹ್ವಾನ ನೀಡಿದರು. ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿರುವ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಅದ್ದೂರಿ ಅಂಬಾರಿ ಉತ್ಸವಕ್ಕೆ ಗಜಪಡೆಗಳು ಬರುವುದು ಮತ್ತಷ್ಟೂ ಸಂಭ್ರಮ ಹೆಚ್ಚಿಸಲಿದೆ. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಅಂಬಾರಿ ಉತ್ಸವದಲ್ಲಿ ಪಾಲ್ಗೊಳ್ಳಲಿರುವ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳನ್ನು ಶಿವಮೊಗ್ಗಕ್ಕೆ ತರಲು ಈಗಾಗಲೇ ಅಗತ್ಯವಾದ ಎಲ್ಲಾ ಅನುಮತಿಗಳನ್ನು ಸಂಬಂಧಿತ ಇಲಾಖೆಯಿಂದ ಪಡೆಯಲಾಗಿದೆ. ಸಿಬ್ಬಂದಿ ಹಾಗೂ ತಂಡದ ಸಿದ್ಧತೆಯನ್ನು ಸಂಪೂರ್ಣವಾಗಿ ಖಚಿತಪಡಿಸಲಾಗಿದೆ. ಆನೆಗಳಿಗೆ ತರಬೇತಿ ಹಾಗೂ ಸಿಬ್ಬಂದಿಯ ತರಬೇತಿ ಸಹ ನಡೆದಿದೆ.

    ಗಜಪಡೆಗೆ ಆಹ್ವಾನ ನೀಡುವಾಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳು, ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: Mysuru Dasara | ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿ

  • ಶಿವಮೊಗ್ಗ ದಸರಾ | ಬೆಳ್ಳಿ ಅಂಬಾರಿ ಜಂಬೂಸವಾರಿಗೆ ಸಕಲ ಸಿದ್ಧತೆ

    ಶಿವಮೊಗ್ಗ ದಸರಾ | ಬೆಳ್ಳಿ ಅಂಬಾರಿ ಜಂಬೂಸವಾರಿಗೆ ಸಕಲ ಸಿದ್ಧತೆ

    ಶಿವಮೊಗ್ಗ: ದಸರಾ (Dasara) ಅಂಗವಾಗಿ ನಗರದಲ್ಲಿ (Shivamogga) ನಡೆಯಲಿರುವ ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ.

    650 ಕೆಜಿ ತೂಕದ ಬೆಳ್ಳಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಸಾಗರ್ ಆನೆ ಹೊತ್ತು ಸಾಗಲಿದೆ. ಈ ಆನೆಗೆ ಬಹದ್ದೂರ್, ಬಾಲಣ್ಣ ಆನೆಗಳು ಸಾಥ್ ನೀಡಲಿವೆ. ಕೋಟೆ ರಸ್ತೆಯ ಶಿವಪ್ಪನಾಯಕನ ಅರಮನೆಯಿಂದ ಜಂಬೂ ಸವಾರಿ ಆರಂಭಗೊಳ್ಳಲಿದೆ. ಇದನ್ನೂ ಓದಿ: ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

    ಮಧ್ಯಾಹ್ನ 2:30ಕ್ಕೆ ಜಂಬೂಸವಾರಿಗೆ ಚಾಲನೆ ದೊರೆಯಲಿದ್ದು, ಕೋಟೆ ರಸ್ತೆಯಿಂದ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಎಎ ವೃತ್ತ, ಗೋಪಿ ವೃತ್ತ, ಜೈಲು ರಸ್ತೆ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ.

    ಸಂಜೆ 6.30ಕ್ಕೆ ಫ್ರೀಡಂ ಪಾರ್ಕ್‍ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ಇದನ್ನೂ ಓದಿ: ಕಣ್ಮನ ಸೆಳೆಯುವ ಕುದ್ರೋಳಿ ದಸರಾ ವೈಭವ

  • ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

    ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

    ಶಿವಮೊಗ್ಗ : ದಸರಾ (Dasara) ಅಂದ್ರೆ ಮೈಸೂರು, ಮೈಸೂರು ಅಂದ್ರೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ. ಹೌದು! ಮೈಸೂರು ದಸರಾ ರಾಜ್ಯ, ದೇಶ ಮಾತ್ರ ಅಲ್ಲ, ವಿಶ್ವದ ಗಮನ ಸೆಳೆದಿದೆ. ಅದೇ ರೀತಿ ರಾಜ್ಯದ ಎರಡನೇ ದಸರಾ ಶಿವಮೊಗ್ಗದಲ್ಲಿ  (Shivamogga Dasara) ನಡೆಯಲಿದೆ.

    ಶಿವಮೊಗ್ಗದಲ್ಲಿ ಈ ಮೊದಲು ನಗರದ ಆಯಾ ದೇವಸ್ಥಾನಗಳಲ್ಲಿ ದಸರಾ ಆಚರಣೆ ನಡೆಯತ್ತಿತ್ತು. ಬಳಿಕ ʻಶಿವಮೊಗ್ಗ ದಸರಾʼಎಂಬ ರೂಪ ಪಡೆದುಕೊಂಡಿದ್ದು 1980ರಲ್ಲಿ. ಆಗಿನ ಕಾಲಘಟ್ಟದ ಪತ್ರಕರ್ತ ಹಾಗೂ ನಗರಸಭೆ ಅಧ್ಯಕ್ಷರಾಗಿದ್ದ ಎಂ.ನಾಗೇಂದ್ರ ರಾವ್ ಅವರು ʻಶಿವಮೊಗ್ಗ ದಸರಾʼಗೆ ಒಂದು ರೂಪ ತಂದುಕೊಟ್ಟರು.‌ ಶಿವಮೊಗ್ಗದಲ್ಲಿ ವಿಜ್ರಂಭಣೆಯ ದಸರಾ ಆಚರಿಸಬೇಕೆಂಬ ಉದ್ದೇಶದಿಂದ ಈ ಆಚರಣೆಗೆ ಹೊಸ ಭಾಷ್ಯ ಬರೆದರು.

    ʻಶಿವಮೊಗ್ಗ ದಸರಾʼ ಆರಂಭಕ್ಕೂ ಮೊದಲು ಆಯಾ ದೇವಸ್ಥಾನಗಳಲ್ಲಿ ಅಂಬು ಕಡಿಯುವ ಪ್ರತೀತಿ ನಡೆದುಕೊಂಡು ಬರುತ್ತಿತ್ತು. ಆರಂಭದಲ್ಲಿ ಮರದ ಅಂಬಾರಿಯನ್ನು ವಾಹನದ ಮುಖಾಂತರ ನೆಹರೂ ಕ್ರೀಡಾಂಗಣಕ್ಕೆ ತಂದು ಅಂಬು ಕಡಿಯಲಾಗುತ್ತಿತ್ತು. ಕಳೆದ 10 ವರ್ಷದಿಂದ ಬೆಳ್ಳಿಯ ಅಂಬಾರಿಯನ್ನು ಆನೆಯ ಮೇಲೆ ಕೂರಿಸಿ, ಅದರಲ್ಲಿ ಚಾಮುಂಡೇಶ್ವರಿ ವಿಗ್ರಹ ಇರಿಸಿ. ಅಲ್ಲಮಪ್ರಭು ಫ್ರೀಡಂ ಪಾರ್ಕ್‌ನವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಫ್ರೀಡಂ ಪಾರ್ಕ್ ಆವರಣದಲ್ಲಿ ಅಂಬು ಕಡಿದು ಬಳಿಕ ವಿಜಯದಶಮಿ ಆಚರಿಸಲಾಗುತ್ತದೆ.

    ಮಹಾನಗರ ಪಾಲಿಕೆ ವತಿಯಿಂದ 9 ದಿನಗಳ ಕಾಲ ಕಲಾ, ಸಾಂಸ್ಕೃತಿಕ, ಮಕ್ಕಳ, ಮಹಿಳಾ ದಸರಾ ಹೀಗೆ ವಿವಿಧ ದಸರಾಗಳನ್ನು ಸಂಘಟಿಸಲಾಗುತ್ತದೆ. ಅದಕ್ಕೋಸ್ಕರ ಸರ್ಕಾರದಿಂದ ಸಾಕಷ್ಟು ಅನುದಾನ ಸಹ ನೀಡುತ್ತಾ ಬಂದಿದೆ.

  • ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    – ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಉದ್ಘಾಟನೆ

    ಶಿವಮೊಗ್ಗ: ಶಿವಮೊಗ್ಗದ  ನಾಡಹಬ್ಬ ದಸರಾಗೆ (Shivamogga Dasara) ಚಾಲನೆ ಸಿಕ್ಕಿದೆ. ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವಕ್ಕೆ ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ (Sunil Kumar Desai) ಚಾಲನೆ ನೀಡಿದರು.

    ಉದ್ಘಾಟನೆ ಬಳಿಕ ಮಾತನಾಡಿದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ಹಬ್ಬದ ಆಚರಣೆಗಳ ಹಿಂದೆ ಉತ್ತಮ ಉದ್ದೇಶ ಇದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇದೆ. ಕೆಟ್ಟದ್ದನ್ನು ನಾಶ ಮಾಡಬೇಕು ಎಂಬುದು ಈ ಆಚರಣೆಗಳ ಉದ್ದೇಶ. ರಾವಣ ಅತ್ಯಂತ ಪ್ರಚಂಡ, ಉತ್ತಮ ಆಡಳಿತಗಾರ, ಶಿವಭಕ್ತ. ಆದರೆ ಆತನಿಗೆ ಅಹಂಕಾರವಿತ್ತು. ಒಂಭತ್ತು ಒಳ್ಳೆಯ ಗುಣವಿದ್ದರೂ ಅಹಂಕಾರ ಇದ್ದರೆ ಪ್ರಯೋಜನವಿಲ್ಲ. ರಾಮನಿಂದ ರಾವಣನ ನಾಶವಾಗುತ್ತದೆ. ರಾವಣನ ದಹನ ಕೆಟ್ಟದ್ದರ ನಾಶದ ಸಂಕೇತವಾಗಿದೆ ಎಂದರು. ಇದನ್ನೂ ಓದಿ: ಸಿಎಂ ಕೇಸ್‌ನಲ್ಲಿ ಅವರೇ ಜಡ್ಜ್, ಅವರೇ ಲಾಯರ್- ಸಿ.ಟಿ ರವಿ

    ಪಾಲಿಕೆ ಆವರಣದಿಂದ ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದವರಗೆ ನಾಡ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಪಾಲಿಕೆಯ ಅಧಿಕಾರಿಗಳು, ಮಾಜಿ ಸದಸ್ಯರು ವಾದ್ಯಗಳಿಗೆ ನೃತ್ಯ ಮಾಡಿದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗ ಮೆರವಣಿಗೆ ಪೂರ್ಣಗೊಳ್ಳುತ್ತಿದ್ದಂತೆ ಚಾಮುಂಡೇಶ್ವರಿ ದೇವಿಗೆ ಮಂಗಳಾರತಿ ಬೆಳಗಲಾಯಿತು. ಸಂಸದ ರಾಘವೇಂದ್ರ, ಶಾಸಕ ಎಸ್‌ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಸೇರಿ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: Breaking | ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್