Tag: Shivamma

  • ಬೆಂಗಳೂರು ‘ಫಿಲ್ಮ್ ಫೆಸ್ಟಿವಲ್’ನಲ್ಲಿ ರಿಷಬ್ ಶೆಟ್ಟಿ ಚಿತ್ರಕ್ಕೆ ಅನ್ಯಾಯ

    ಬೆಂಗಳೂರು ‘ಫಿಲ್ಮ್ ಫೆಸ್ಟಿವಲ್’ನಲ್ಲಿ ರಿಷಬ್ ಶೆಟ್ಟಿ ಚಿತ್ರಕ್ಕೆ ಅನ್ಯಾಯ

    ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Bangalore, Film Festival)  ಜೈ ಶಂಕರ್ (Jai Shankar) ನಿರ್ದೇಶನದ, ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ ಆಯ್ಕೆಯಾಗದೇ ಇರುವುದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸೇರಿದಂತೆ ಸಾಕಷ್ಟು ಸಿನಿಮಾ ಪ್ರೇಮಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

    ಸುದ್ದಿಯೊಂದರಲ್ಲಿಓದಿದ ಪ್ರಕಾರ ಅವರ ಸಿನೆಮಾ 2023 ರಲ್ಲಿ ಸೆನ್ಸಾರ್ ಪ್ರಮಾಣಪತ್ರ ಪಡೆದಿದೆ ಎಂದರೆ, ಚಿತ್ರೋತ್ಸವದ ಮಾನದಂಡದ ಪ್ರಕಾರ ಆಯ್ಕೆಯಾಗಲು ಎಲ್ಲಾ ಅರ್ಹತೆಯನ್ನು ಪಡೆದಿದೆ. ಬುಸಾನ್ ಸೇರಿದಂತೆ ವಿವಿಧ ದೇಶಗಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವ ಸಿನಿಮಾ ಆಯ್ಕೆಯಾಗದಿರುವುದಕ್ಕೆ ನೀಡಿರುವ ಕಾರಣ ಸಮಂಜಸವಾಗಿಲ್ಲ. ಅರ್ಹ ಸಿನಿಮಾನ ಆಯ್ಕೆ ಮಾಡದಿರುವುದು ದುರಂತ. ಶಿವಮ್ಮ ಸಿನಿಮಾಗೆ ನ್ಯಾಯ ಸಿಗಲೇಬೇಕು ಎಂದು ಮಂಸೋರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಅದರಲ್ಲಿ ನಮ್ಮ ರಿಷಬ್ ಶೆಟ್ಟಿ (Rishabh Shetty) ಸಂಸ್ಥೆಯ ‘ಶಿವಮ್ಮ’ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.  ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ಈ ಸಿನಿಮಾ  ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ಕೊಡುಗೆ.

    ಈವರೆಗೂ ಶಿವಮ್ಮ (Shivamma) ಗೆದ್ದ  ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022, ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್ 2022, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್  ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್  ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ  ಅಂತರ್ರಾಷ್ಟ್ರೀಯ ಚಿತ್ರೋತ್ಸವ  ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

     

    ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಂಡಿದೆ. ಶಿವಮ್ಮ ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ. ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ. ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

  • ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರದ ಟೀಸರ್ ರಿಲೀಸ್

    ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರದ ಟೀಸರ್ ರಿಲೀಸ್

    ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯಂತ ಮೆಚ್ಚುಗೆ ಪಡೆದ  ರಿಷಬ್ ಶೆಟ್ಟಿ (Rishabh Shetty) ಸಂಸ್ಥೆಯ ಹೆಮ್ಮೆಯ ಚಲನಚಿತ್ರ, ‘ಶಿವಮ್ಮ’ (Shivamma) ಬುಸಾನ್ ಚಲನಚಿತ್ರೋತ್ಸವ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಮೂಲಕ ಒಂದು ವರ್ಷದ ಪ್ರಯಾಣದ ನಂತರ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ.

    ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಾಣುತ್ತಿದೆ. ಶಿವಮ್ಮ ಚಿತ್ರವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಮುಖ್ಯ ತಾರಾಗಣದಲ್ಲಿದ್ದಾರೆ.

    ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಕಥೆಯಾಗಿದೆ.  ಇರಾನ್‌ನಲ್ಲಿ ನಡೆದ ಫಜರ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಚಿತ್ರ ಇದಾಗಿದ್ದು, ಚಿತ್ರವು ಈಗಾಗಲೇ ಐದು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದು  ಚಿತ್ರದ ಟೀಸರ್ (Teaser) ನಿನ್ನೆ ಬಿಡುಗಡೆ ಆಗಿದೆ. ಇದನ್ನೂ ಓದಿ:ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

    ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದ, ರಿಷಬ್ ಶೆಟ್ಟಿ ನಿರ್ಮಾಪಕರಾಗಿರುವ ಶಿವಮ್ಮ ಸಿನಿಮಾಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಈಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿದೆ. ಜೈಶಂಕರ್ ಅರ್ಯರ (Jai Shankar) ನಿರ್ದೇಶನದ ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

     

    ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ೪೬ ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ  ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದಷ್ಟು ನೈಜವಾಗಿಯೇ ಇಡೀ ಸಿನಿಮಾವನ್ನು ಕಟ್ಟಿರುವುದು ಮತ್ತೊಂದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

    ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

    ದೊಡ್ಡ ಬಜೆಟ್ಟಿನ ಚಿತ್ರಗಳ ಅಬ್ಬರದ ನಡುವೆ ಕನ್ನಡದ ಕೆಲವು ಸಣ್ಣ ಸಿನಿಮಾಗಳು ಭಾರತದ ಗಡಿಯಾಚೆಗೆ ಸಂಚರಿಸಿ ಅಲ್ಲಿನ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸಿ ಕನ್ನಡ ಚಿತ್ರೋದ್ಯಮದ ಕೀರ್ತಿ ಪತಾಕೆಯನ್ನು ಹಾರಿಸಿವೆ. ಅದರಲ್ಲಿ ನಮ್ಮ ರಿಷಬ್ ಶೆಟ್ಟಿ (Rishabh Shetty) ಸಂಸ್ಥೆಯ ‘ಶಿವಮ್ಮ’ ಚಿತ್ರ ಪ್ರಪಂಚಾದ್ಯಂತ ತನ್ನ ತೆಕ್ಕೆಗೆ ಪ್ರಶಸ್ತಿ, ಪ್ರಶಂಸೆಯನ್ನು ಗಳಿಸಿ ತನ್ನ ವರ್ಲ್ಡ್ ಟೂರಿನ ಮ್ಯಾರಥಾನ್ ಅನ್ನು ಮುಂದುವರಿಸಿದೆ.

    ಇದು ಜೈ ಶಂಕರ್ ಆರ್ಯರ್ (Jai Shankar Aryar), ನಿರ್ದೇಶನದ ಚೊಚ್ಚಲ ಚಿತ್ರ. ಕೊಪ್ಪಳ ಜಿಲ್ಲೆಯ ಯಾರೇಹಂಚಿನಾಳ ಗ್ರಾಮದಿಂದ ಶುರುವಾದ ಪ್ರಯಾಣ ಹತ್ತಾರು ದೇಶಗಳಲ್ಲಿ ಹಲವಾರು ಪ್ರಶಸ್ತಿ, ಪ್ರಶಂಸೆಗಳನ್ನು ಗಳಿಸಿದ್ದಲ್ಲದೆ ವಿದೇಶಿಗರ ಪ್ರೀತಿಗೂ ಪಾತ್ರವಾದ ಈ ಸಿನಿಮಾ  ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಸಂಸ್ಥೆಯ ಹೆಮ್ಮೆಯ ಕೊಡುಗೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

    ಈವರೆಗೂ ಶಿವಮ್ಮ (Shivamma) ಗೆದ್ದ  ಪ್ರಶಸ್ತಿಗಳ ಪಟ್ಟಿ ದೊಡ್ಡದಿದೆ. ನ್ಯೂ ಕರೆಂಟ್ಸ್ ಪುರಸ್ಕಾರ, ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022, ಯಂಗ್ ಜೂರಿ ಪುರಸ್ಕಾರ, ಫೆಸ್ಟಿವಲ್ ಡೆಸ್ 3 ಕಾಂಟಿನೆಂಟಸ್, ನಾಂಟೆಸ್ 2022, ಅತ್ಯುತ್ತಮ ನಿರ್ದೇಶಕ, ಫಾಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗ್ರಾಂಡ್ ಪ್ರಿಕ್ಸ್  ಅಟ್ ಜೆರ್ಕೋಲೊ ಹೈನಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೀನಾ ಬ್ಲಾಕ್ ಮೂವಿ, ಸ್ವಿಟ್ಜರ್ಲ್ಯಾಂಡ್ ಫಜರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ , ಇರಾನ್ ಗೋಥೆಂಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸ್ಪೀಡನ್ ಫಿಲ್ಮ್ ಫೆಸ್ಟ್ ಮುಂಚಿಯನ್, ಮ್ಯುನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜೆರ್ಕಾಲೋ , ರಷ್ಯಾ ಇಮೆಜಿನ್ ಇಂಡಿಯಾ, ಸ್ಪೇನ್ ಅಲ್ಬರ್ಟಾ ಭಾರತೀಯ ಚಲನಚಿತ್ರೋತ್ಸವ, ಕೆನಡ ಇಂಡಿಯನ್ ಪಿಲ್ಮ್  ಫೆಸ್ಟಿವಲ್, ಮೆಲ್ಬೋರ್ನ್ ಅಂಡ್ರಿ ತರ್ಕೊವ್ಸ್ಕಿ  ಅಂತರ್ರಾಷ್ಟ್ರೀಯ ಚಿತ್ರೋತ್ಸವ  ಮುಂತಾದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

     

    ಈ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಹೆಮ್ಮೆಯಿಂದಲೇ ಮಾತನಾಡಿದ್ದಾರೆ. ಇಂಥದ್ದೊಂದು ಸಿನಿಮಾ ತಮ್ಮದೇ ಬ್ಯಾನರ್ ನಲ್ಲಿ ಬಂದಿದ್ದು, ಸಹಜವಾಗಿಯೇ ಅವರಿಗೆ ಸಂಭ್ರಮ ತಂದಿದೆ. ಈ ಸಿನಿಮಾ ಇನ್ನೂ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲಿ ಎಂದು ನಿರ್ದೇಶಕರಿಗೆ ರಿಷಬ್ ಹಾರೈಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ ಫ್ರಾನ್ಸ್ ಪ್ರಶಸ್ತಿ

    ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ ಫ್ರಾನ್ಸ್ ಪ್ರಶಸ್ತಿ

    ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದ, ರಿಷಬ್ ಶೆಟ್ಟಿ ನಿರ್ಮಾಪಕರಾಗಿರುವ ಶಿವಮ್ಮ ಸಿನಿಮಾಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಈಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿದೆ. ಜೈಶಂಕರ್ ಅರ್ಯರ ನಿರ್ದೇಶನದ ಈ ಸಿನಿಮಾದಲ್ಲಿ ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

    ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ೪೬ ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ  ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದಷ್ಟು ನೈಜವಾಗಿಯೇ ಇಡೀ ಸಿನಿಮಾವನ್ನು ಕಟ್ಟಿರುವುದು ಮತ್ತೊಂದು ವಿಶೇಷ.

    ಈ ಚಿತ್ರ ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣ ವಾಗಿದ್ದು,  ಸಂಪೂರ್ಣ ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ನಟಿಸಿದ್ದಾರೆ.  NFDC ಆಯೋಜಿತ ಫಿಲಂ ಬಜಾರ್ ನ ವರ್ಕ್ ಇನ್ ಪ್ರೋಗ್ರೆಸ್ ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡು, ಈಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿದೆ. ಈಗಾಗಲೇ ಹಲವಾರು ಚಿತ್ರೋತ್ಸವ ವದಲ್ಲಿ ಆಯ್ಕೆ ಆಗಿದ್ದು ಮತ್ತಷ್ಟು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ : ಎಲ್ಲೆಲ್ಲೂ ಕಾಂತಾರ

    ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ : ಎಲ್ಲೆಲ್ಲೂ ಕಾಂತಾರ

    ನ್ನಡದ ಕಾಂತಾರ (Kantara) ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಚಿತ್ರವನ್ನು ಮೆಚ್ಚಿದ್ದಾರೆ. ಆಯಾ ಭಾಷೆಯ ಬಹುತೇಕ ನಟರು ಸಿನಿಮಾ ಕುರಿತು ಮಾತನಾಡಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟಿ (Rishabh Shetty) ನಟನೆಗೆ ಫಿದಾ ಆಗಿದ್ದಾರೆ. ಕನ್ನಡಕ್ಕೆ ಮಾತ್ರ ಸೀಮಿತರಾಗಿದ್ದ ರಿಷಬ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಬದಲಾಗಿದ್ದಾರೆ.

    ಮತ್ತೊಂದಡೆ ನಟ ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದ್ದಾರೆ. ಒಂದು ಕಡೆ ಇವರು ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮೂಡಿಸಿದ್ದರೆ, ಮತ್ತೊಂದು ಕಡೆ ಇವರ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ 27ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಇದು ಜೈ ಶಂಕರ್ ನಿರ್ದೇಶನ ಮಾಡಿ, ರಿಷಬ್ ನಿರ್ಮಾಣ ಮಾಡಿರುವ ಸಿನಿಮಾ. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಬೂಸಾನ್ ನಲ್ಲಿ ನಡೆಯುತ್ತಿರುವ 27ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಶಿವಮ್ಮ’ (Shivamma) ಚಿತ್ರ ಆಯ್ಕೆಯಾಗಿತ್ತು. ಇದೀಗ ಸ್ಪರ್ಧೆಯಲ್ಲೂ ಅದು ಗೆದ್ದಿದ್ದು, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನೆಟ್ ವರ್ಕ್ ವಹಿವಾಟಿನಲ್ಲಿ ಹೂಡಿಕೆ ಮಾಡಿ, ಅದರಿಂದ ಪಡುವ ಸಂಕಟವನ್ನು ಕುರಿತಾದ ಸಿನಿಮಾವಿದು.

    ಈ ಸಿನಿಮಾ ವೀಕ್ಷಿಸಿದ ತೀರ್ಪುಗಾರರು ನಿರ್ದೇಶಕ ಜೈ ಶಂಕರ್ (Jai Shankar) ಅವರ ಪ್ರಯತ್ನವನ್ನು ಶ್ಲ್ಯಾಘಿಸಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಕಥೆಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಕಟ್ಟಿಕೊಟ್ಟ ನಿರ್ದೇಶಕರ ಜಾಣ್ಮೆಯನ್ನು ಕೊಂಡಾಡಿದ್ದಾರೆ. ಇಂತಹ ಸಿನಿಮಾಗೆ ರಿಷಬ್ ಹಣ ಹೂಡುವ ಮೂಲಕ ಹೊಸ ಹುಡುಗನ ಚಿತ್ರಕ್ಕೆ ಉತ್ತೇಜನ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

    ರಿಷಬ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ

    ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದ್ದಾರೆ. ಒಂದು ಕಡೆ ಇವರು ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ (Kantara) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮೂಡಿಸಿದ್ದರೆ, ಮತ್ತೊಂದು ಕಡೆ ಇವರ ನಿರ್ಮಾಣದ ‘ಶಿವಮ್ಮ’ ಚಿತ್ರಕ್ಕೆ 27ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರೆತಿದೆ. ಇದು ಜೈ ಶಂಕರ್ ನಿರ್ದೇಶನ ಮಾಡಿ, ರಿಷಬ್ ನಿರ್ಮಾಣ ಮಾಡಿರುವ ಸಿನಿಮಾ.

    ಬೂಸಾನ್ ನಲ್ಲಿ ನಡೆಯುತ್ತಿರುವ 27ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಶಿವಮ್ಮ’ (Shivamma) ಚಿತ್ರ ಆಯ್ಕೆಯಾಗಿತ್ತು. ಇದೀಗ ಸ್ಪರ್ಧೆಯಲ್ಲೂ ಅದು ಗೆದ್ದಿದ್ದು, ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು (award) ತನ್ನದಾಗಿಸಿಕೊಂಡಿದೆ. ಹಳ್ಳಿಗಾಡಿನ ಮಹಿಳೆಯೊಬ್ಬರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನೆಟ್ ವರ್ಕ್ ವಹಿವಾಟಿನಲ್ಲಿ ಹೂಡಿಕೆ ಮಾಡಿ, ಅದರಿಂದ ಪಡುವ ಸಂಕಟವನ್ನು ಕುರಿತಾದ ಸಿನಿಮಾವಿದು. ಇದನ್ನೂ ಓದಿ:ತಂಡು ಬಟ್ಟೆ ಧರಿಸಿ, ನಡೆಯೋಕು ಕಷ್ಟಪಡ್ತಿದ್ದ ಉರ್ಫಿಗೆ ನೆಟ್ಟಿಗರಿಂದ ತರಾಟೆ

    ಈ ಸಿನಿಮಾ ವೀಕ್ಷಿಸಿದ ತೀರ್ಪುಗಾರರು ನಿರ್ದೇಶಕ ಜೈ ಶಂಕರ್ (Jai Shankar) ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಹಳ್ಳಿಗಾಡಿನಲ್ಲಿ ನಡೆಯುವ ಕಥೆಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಕಟ್ಟಿಕೊಟ್ಟ ನಿರ್ದೇಶಕರ ಜಾಣ್ಮೆಯನ್ನು ಕೊಂಡಾಡಿದ್ದಾರೆ. ಇಂತಹ ಸಿನಿಮಾಗೆ ರಿಷಬ್ ಹಣ ಹೂಡುವ ಮೂಲಕ ಹೊಸ ಹುಡುಗನ ಚಿತ್ರಕ್ಕೆ ಉತ್ತೇಜನ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]