Tag: Shivam dube

  • ಕೆಣಕಿದ ಪೋಲಾರ್ಡ್‍ಗೆ 3 ಸಿಕ್ಸರ್‌ಗಳಿಂದ ಉತ್ತರ ನೀಡಿದ ಶಿವಂ- ವಿಂಡೀಸ್‍ಗೆ 171 ರನ್‍ಗಳ ಗುರಿ

    ಕೆಣಕಿದ ಪೋಲಾರ್ಡ್‍ಗೆ 3 ಸಿಕ್ಸರ್‌ಗಳಿಂದ ಉತ್ತರ ನೀಡಿದ ಶಿವಂ- ವಿಂಡೀಸ್‍ಗೆ 171 ರನ್‍ಗಳ ಗುರಿ

    ತಿರುವನಂತಪುರಂ: ಕೆಣಕಿದ ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ ಟೀಂ ಇಂಡಿಯಾ ಆಲ್‍ರೌಂಡರ್ ಶಿವಂ ದುಬೆ ಸಿಕ್ಸರ್‌ಗಳ ಮೂಲಕವೇ ಉತ್ತರ ನೀಡಿದ್ದಾರೆ. ದುಬೆ ಅರ್ಧಶತಕದ ಸಹಾಯದಿಂದ ಭಾರತವು ವಿಂಡೀಸ್ ತಂಡಕ್ಕೆ 171 ರನ್‍ಗಳ ಗುರಿ ನೀಡಿದೆ.

    ತಿರುವನಂತಪುರಂನ ಗ್ರೀನ್‍ಫಿಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ಭಾರತ ಶಿವಂ ದುಬೆ 54 ರನ್, ರಿಷಭ್ ಪಂತ್ 33 ರನ್ ಗಳ ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಆರಂಭದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಶಕ್ತವಾಯಿತು. ಇನ್ನಿಂಗ್ಸ್ ನ 4ನೇ ಓವರ್ ನಲ್ಲಿ ಕೆ.ಎಲ್.ರಾಹುಲ್ (11 ರನ್) ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕೆ ಇಳಿದ ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ಆರಂಭಿಸಿ, ರೋಹಿತ್ ಶರ್ಮಾಗೆ ಸಾಥ್ ನೀಡಿದರು. ಇನ್ನಿಂಗ್ಸ್ ನ 7ನೇ ಓವರ್ ಮುಕ್ತಾಯಕ್ಕೆ ಭಾರತ 45 ರನ್ ಗಳಿಸಿತ್ತು. ಈ ವೇಳೆ ರನ್ ರೇಟ್ ಏರಿಸಲು ಮುಂದಾಗಿದ್ದ ರೋಹಿತ್ ಶರ್ಮಾ (15 ರನ್) ವಿಕೆಟ್ ಒಪ್ಪಿಸಿದರು.

    ಶಿವಂ ಅರ್ಧಶತಕ:
    ಇನ್ನಿಂಗ್ಸ್ ನ 9ನೇ ಓವರ್‌ನ 2 ಎರಡನೇ ಎಸೆತದಲ್ಲಿ ಶಿವಂ ದುಬೆ ಎರಡು ರನ್ ಕದಿಯಲು ಮುಂದಾಗಿದ್ದರು. ಈ ವೇಳೆ ಬೌಲರ್ ಪೋಲಾರ್ಡ್ ಪಿಚ್ ಮಧ್ಯೆ ನಿಂತು ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡ ಶಿವಂ ದುಬೆ, ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದರು. ಇದರಿಂದ ವಿಚಲಿತಗೊಂಡ ಪೋಲಾರ್ಡ್ ನಿರಂತರ ಎರಡು ವೈಡ್ ಎಸೆದರು. ಬಳಿಕ ಬ್ಯಾಟ್‌ಗೆ ಸಿಕ್ಕ ಎರಡು ಎಸೆತಗಳನ್ನು ಶಿವಂ ದುಬೆ ಸಿಕ್ಸ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಶಿವಂ ಒಂದು ರನ್ ಗಳಿಸಿದರು. ಈ ಮೂಲಕ ಇನ್ನಿಂಗ್ಸ್‌‌ನ 9ನೇ ಓವರ್‌ನಲ್ಲಿ ಪೋಲಾರ್ಡ್ 23 ರನ್ ನೀಡಿದರು.

    ಸ್ಫೋಟಕ ಬ್ಯಾಟಿಂಗ್‍ನಿಂದ ಶಿವಂ ದುಬೆ 27 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರು. ಇದು ಅವರ ಟಿ20 ವೃತ್ತಿಜೀವನದ ಮೊದಲ ಅರ್ಧಶತಕವಾಗಿದೆ. ಶಿವಂ ಅರ್ಧಶತಕದ ಬಳಿಕ ಎಸೆತಗಳನ್ನು ಬೌಂಡರಿಗೆ ಅಟ್ಟಲು ಮುಂದಾಗಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 30 ಎಸೆತಗಳಲ್ಲಿ (3 ಬೌಂಡರಿ, 4 ಸಿಕ್ಸರ್) 54 ರನ್ ಗಳಿಸಿ ಕ್ಯಾಚ್ ನೀಡಿ, ಪೆವಿಲಿಯನ್‍ಗೆ ತೆರಳಿದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ (19 ರನ್) ವಿಕೆಟ್ ಒಪ್ಪಿಸಿದರು.

    ರೋಹಿತ್‍ರನ್ನ ಹಿಂದಿಕ್ಕಿದ ಕೊಹ್ಲಿ:
    ಅಂತರಾಷ್ಟ್ರೀಯ ಟಿ20 ರನ್ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ದಾಖಲೆಸಿದ ಬ್ಯಾಟ್ಸ್‌ಮನ್ ಪೈಕಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರು. ಪಂದ್ಯದಲ್ಲಿ 19 ಗಳಿಸಿದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 2,563 ರನ್ ಗಳಿಸುವ ಮೂಲಕ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. 2,547 ಗಳಿಸಿದ ರೋಹಿತ್ ಶರ್ಮಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

    ವಿರಾಟ್ ಕೊಹ್ಲಿ ವಿಕೆಟ್ ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ (10 ರನ್) ಹಾಗೂ ರವೀಂದ್ರ ಜಡೇಜಾ (9 ರನ್) ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸುತ್ತ ಸಾಗಿಸಿದರು. ಔಟಾಗದೆ ರಿಷಭ್ ಪಂತ್ 22 ಎಸೆತಗಳಲ್ಲಿ (3 ಬೌಂಡರಿ, ಸಿಕ್ಸ್) 33 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

  • ಕ್ಯಾಚ್ ಡ್ರಾಪ್,  ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ನವದೆಹಲಿ: ಮುಷ್ಫಿಕರ್ ರಹೀಮ್  ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬಾಂಗ್ಲಾದೇಶ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯವನ್ನು ಸಾಧಿಸಿದೆ. ಈ ಮೂಲಕ ಟಿ-20 ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮಣಿಸಿದೆ‌. 2009ರಿಂದ ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿದ್ದ ಬಾಂಗ್ಲಾ ಮೊದಲ ಗೆಲುವು ಪಡೆದಿದೆ. ಈ ಪಂದ್ಯ ವಿಶ್ವ ಟಿ-20 ಇತಿಹಾಸದ 1,000ನೇ ಪಂದ್ಯವಾಗಿರುವುದು ವಿಶೇಷ.

    ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಭಾನುವಾರ ನಡೆದ ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ನೆಲದಲ್ಲೇ ಸೋಲಿಸಿ ವಿಶೇಷ ಸಾಧನೆ ಮಾಡಿದೆ. ಮೊದಲು‌ ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದರೆ ಬಾಂಗ್ಲಾದೇಶ 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ154 ರನ್ ಚಚ್ಚುವ ಮ‌ೂಲಕ ಜಯ ಸಾಧಿಸಿತು. ಮುಷ್ಫಿಕರ್ ರಹೀಮ್ ಔಟಾಗದೆ 60 ರನ್, ಸೌಮ್ಯ ಸರ್ಕಾರ್ 39 ರನ್ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

    17ನೇ ಓವರ್ ವರೆಗೂ ಪಂದ್ಯ ಭಾರತದ ಕೈಯಲ್ಲೇ ಇತ್ತು. ಚಹಲ್ ಎಸೆದ 18ನೇ ಓವರಿನ ಮೂರನೇ ಎಸೆತವನ್ನು ಮುಷ್ಫಿಕರ್ ರಹೀಮ್ ಬಲವಾಗಿ ಹೊಡೆದಿದ್ದರು. ಆದರೆ ಬೌಂಡರಿ ಗೆರೆ ಬಳಿ ಇದ್ದ ಕೃನಾಲ್ ಪಾಂಡ್ಯ ಕ್ಯಾಚ್ ಕೈ ಚೆಲ್ಲಿದ ಪರಿಣಾಮ 4 ರನ್ ಬಂತು. ಮ್ಯಾಚ್ ಇಲ್ಲಿಂದ ತಿರುವು ಪಡೆದು ನಂತರ ಖಲೀಲ್ ಮೊಹಮ್ಮದ್ ಎಸೆದ 19ನೇ ಓವರಿನಲ್ಲಿ ಮುಷ್ಫಿಕರ್ ಸತತ 4 ಬೌಂಡರಿ ಹೊಡೆದರು. ಅಂತಿಮ ಓವರಿನಲ್ಲಿ ಮಹ್ಮದುಲ್ಲಾ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು‌.

    ಟೀಂ ಇಂಡಿಯಾ ಬೌಲರ್ ದೀಪಕ್ ಚಹರ್ ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿ ವಿಕೆಟ್ ಉಳಿಸಿದರು. ಆದರೆ ಬಾಂಗ್ಲಾ ಆರಂಭಿಕ ಆಟಗಾರ ಮೊಹಮ್ಮದ್ ನಯಿಮ್ ಹಾಗೂ ಸೌಮ್ಯ ಸರ್ಕಾರ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಇನ್ನಿಂಗ್ಸ್ ನ ಏಳು ಓವರ್ ಗಳ ಮುಕ್ತಾಯಕ್ಕೆ 53 ದಾಖಲಿಸಿತ್ತು. ಬಾಂಗ್ಲಾ ತಂಡದ ಮೊತ್ತವನ್ನು ತಗ್ಗಿಸಲು ಟೀಂ ಇಂಡಿಯಾ ಯಜುವೇಂದ್ರ ಚಹಲ್‌ಗೆ ಬೌಲಿಂಗ್ ನೀಡಿತು. ಚಹಲ್ ಪಂದ್ಯದ ಮೊದಲ ಓವರ್ ನಲ್ಲಿ ಕೇವಲ ಒಂದು ರನ್ ನೀಡಿ, ಮೊಹಮ್ಮದ್ ನಯಿಮ್ ವಿಕೆಟ್ ಕಬಳಿಸಿ ಮಿಂಚಿದರು. 28 ಎಸೆಗಳಲ್ಲಿ ಮೊಹಮ್ಮದ್ ನಯಿಮ್ ಸಿಕ್ಸ್, ಎರಡು ಬೌಂಡರಿ ಸಹಾಯದಿಂದ 26 ರನ್ ಗಳಿಸಿದರು.

    ಬಳಿಕ ಸೌಮ್ಯ ಸರ್ಕಾರ್ ಹಾಗೂ ಮುಷ್ಫಿಕರ್ ರಹೀಮ್ ಜೋಡಿಯು ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿತು. ಇನ್ನಿಂಗ್ಸ್ ನ 17 ಓವರ್ ನಲ್ಲಿ 114 ರನ್ ದಾಖಲಿಸಿತ್ತು. ಆದರೆ ಟೀಂ ಇಂಡಿಯಾ ಬೌಲರ್ ಖಲೀಲ್ ಅಹ್ಮದ್, ಸೌಮ್ಯ ಸರ್ಕಾರ್ ವಿಕೆಟ್ ಉರುಳಿಸಿದರು. ರನ್ ಗಳಿಸುವ ಒತ್ತಡವಿದ್ದರೂ ಮುಷ್ಫಿಕರ್ ರಹೀಮ್ ಔಟಾಗದೆ 43 ಎಸೆತಗಳಲ್ಲಿ ಒಂದು ಸಿಕ್ಸ್, 8 ಬೌಂಡರಿ 60 ರನ್ ಗಳಿಸಿದರೆ, ಮಹ್ಮದುಲ್ಲಾ ರಿಯಾದ್ ಔಟಾಗದೆ 7 ರನ್ ಸಿಡಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಶಿಖರ್ ಧವನ್ 41 ರನ್, ಶ್ರೇಯಸ್ ಅಯ್ಯರ್ 22 ರನ್, ರಿಷಭ್ ಪಂತ್ 27 ರನ್ ಸಹಾಯದಿಂದ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿತ್ತು. ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದ್ದರು. 5 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಎರಡು ಬೌಂಡರಿ ಸೇರಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಬಳಿಕ ಮೈದಾನಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 17 ಎಸೆತಗಳನ್ನು ಎದುರಿಸಿದ ಕೆ.ಎಲ್.ರಾಹುಲ್ ಎರಡು ಬೌಂಡರಿ ಸಹಾಯದಿಂದ 15 ರನ್ ಗಳಿಸಲು ಶಕ್ತರಾಗಿದ್ದರು.

    ಶ್ರೇಯಸ್ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 2 ಸಿಕ್ಸರ್, ಒಂದು ಬೌಂಡರಿ ಸಹಾಯದಿಂದ 22 ರನ್ ಸಿಡಿಸಿದರು. ಈ ಬೆನ್ನಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಶಿಖರ್ ದವನ್ 42 ಎಸೆತಗಳಲ್ಲಿ ಒಂದು ಸಿಕ್ಸ್, 3 ಬೌಂಡರಿ ಸೇರಿ 41 ರನ್ ದಾಖಲಿಸಿದರು. ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ 15 ರನ್ ಹಾಗೂ ವಾಷಿಂಗ್ಟನ್ ಸುಂದರ್ 14 ಸಿಡಿಸುವ ಮೂಲಕ ತಂಡದ ಮೊತ್ತವನ್ನು ಕೊನೆಯ ಹಂತದಲ್ಲಿ ಏರಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ದಾಖಲಿಸಿತ್ತು.

    ರೋಹಿತ್ ವಿಶ್ವದಾಖಲೆ:
    ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟಿ-20 ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಈ ಹಿಂದೆ 2,450 ರನ್ ಗಳಿರುವ ವಿರಾಟ್ ಕೊಹ್ಲಿ ನಂ.1 ಪಟ್ಟದಲ್ಲಿದ್ದರು. ಆದರೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 9 ರನ್ ಗಳಿಸಿದ ಹಿಟ್‌ಮ್ಯಾನ್ ಒಟ್ಟು 2,452 ರನ್ ಗಳೊಂದಿಗೆ ನಂ.1 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರಿಣಾಮ ಕೊಹ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

    ಎಡವಿದ ಶಿವಂ:
    ಮುಂಬೈ ಮೂಲದ ಶಿವಂ ದುಬೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಭರ್ಜರಿ ಮಿಂಚಿದ್ದ ಆಲ್‌ರೌಂಡರ್ ಶಿವಂ ಬಾಂಗ್ಲಾ ವಿರುದ್ಧದ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದರು.

    ಪಂದ್ಯಕ್ಕೂ ಮುನ್ನ ಶಿವಂ ದುಬೇ ನೆಟ್ ಅಭ್ಯಾಸ ನಡೆಸುವ ವೇಳೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಶಿವಂ ದುಬೇ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಜೂನಿಯರ್ ಯುವರಾಜ್ ಸಿಂಗ್ ಎಂದೇ ಕರೆಯಲಾರಂಭಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ದುಬೈ ಕೇವಲ 1 ರನ್ ಗಳಿಸಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಈ ಪಂದ್ಯದಲ್ಲಿ ಕೊನೆಯ‌ ಓವರ್ ಎಸೆದಿದ್ದರು.

  • ವಿಶ್ವದಾಖಲೆ ಬರೆದ ರೋಹಿತ್- ಪಾದಾರ್ಪಣೆ ಪಂದ್ಯದಲ್ಲೇ ಎಡವಿದ ಶಿವಂ

    ವಿಶ್ವದಾಖಲೆ ಬರೆದ ರೋಹಿತ್- ಪಾದಾರ್ಪಣೆ ಪಂದ್ಯದಲ್ಲೇ ಎಡವಿದ ಶಿವಂ

    – ಬಾಂಗ್ಲಾ ಪಡೆಗೆ 149 ರನ್ ಗುರಿ ನೀಡಿದ ಟೀಂ ಇಂಡಿಯಾ

    ನವದೆಹಲಿ: ಅತಿಥಿ ಬಾಂಗ್ಲಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 148 ರನ್ ಗಳ ಗುರಿ ನೀಡಿದೆ.

    ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಭಾನುವಾರ ನಡೆದ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಶಿಖರ್ ಧವನ್ 41 ರನ್, ಶ್ರೇಯಸ್ ಅಯ್ಯರ್ 22 ರನ್, ರಿಷಭ್ ಪಂತ್ 27 ರನ್ ಸಹಾಯದಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿತು.

    ಟಾಸ್ ಗೆದ್ದ ಬಾಂಗ್ಲಾ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. 5 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಎರಡು ಬೌಂಡರಿ ಸೇರಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 17 ಎಸೆತಗಳನ್ನು ಎದುರಿಸಿದ ಕೆ.ಎಲ್.ರಾಹುಲ್ ಎರಡು ಬೌಂಡರಿ ಸಹಾಯದಿಂದ 15 ರನ್ ಗಳಿಸಲು ಶಕ್ತರಾದರು.

    ಶ್ರೇಯಸ್ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 2 ಸಿಕ್ಸರ್, ಒಂದು ಬೌಂಡರಿ ಸಹಾಯದಿಂದ 22 ರನ್ ಸಿಡಿಸಿದರು. ಈ ಬೆನ್ನಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಶಿಖರ್ ದವನ್ 42 ಎಸೆತಗಳಲ್ಲಿ ಒಂದು ಸಿಕ್ಸ್, 3 ಬೌಂಡರಿ ಸೇರಿ 41 ರನ್ ದಾಖಲಿಸಿದರು. ಟೀಂ ಇಂಡಿಯಾ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ 15 ರನ್ ಹಾಗೂ ವಾಷಿಂಗ್ಟನ್ ಸುಂದರ್ 14 ಸಿಡಿಸುವ ಮೂಲಕ ತಂಡದ ಮೊತ್ತವನ್ನು ಕೊನೆಯ ಹಂತದಲ್ಲಿ ಏರಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ದಾಖಲಿಸಿತು.

    ರೋಹಿತ್ ವಿಶ್ವದಾಖಲೆ:
    ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟಿ-20 ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಈ ಹಿಂದೆ 2,450 ರನ್ ಗಳಿರುವ ವಿರಾಟ್ ಕೊಹ್ಲಿ ನಂ.1 ಪಟ್ಟದಲ್ಲಿದ್ದರು. ಆದರೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 9 ರನ್ ಗಳಿಸಿದ ಹಿಟ್‌ಮ್ಯಾನ್ ಒಟ್ಟು 2,452 ರನ್ ಗಳೊಂದಿಗೆ ನಂ.1 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರಿಣಾಮ ಕೊಹ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

    ಎಡವಿದ ಶಿವಂ:
    ಮುಂಬೈ ಮೂಲದ ಶಿವಂ ದುಬೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಭರ್ಜರಿ ಮಿಂಚಿದ್ದ ಆಲ್‌ರೌಂಡರ್ ಶಿವಂ ಬಾಂಗ್ಲಾ ವಿರುದ್ಧದ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.


    ಪಂದ್ಯಕ್ಕೂ ಮುನ್ನ ಶಿವಂ ದುಬೇ ನೆಟ್ ಅಭ್ಯಾಸ ನಡೆಸುವ ವೇಳೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಶಿವಂ ದುಬೇ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಜೂನಿಯರ್ ಯುವರಾಜ್ ಸಿಂಗ್ ಎಂದೇ ಕರೆಯಲಾರಂಭಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ದುಬೈ ಕೇವಲ 1 ರನ್ ಗಳಿಸಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.