Tag: Shivalinga sparsha

  • ಶಿವನ ಪೂಜೆ ಮಾಡೋದು ಹೇಗೆ? ವ್ರತದ ಮಹತ್ವ ಏನು?

    ಶಿವನ ಪೂಜೆ ಮಾಡೋದು ಹೇಗೆ? ವ್ರತದ ಮಹತ್ವ ಏನು?

    ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕೊರೊನಾ ಹಿನ್ನೆಲೆ ಸರ್ಕಾರ ಕೆಲವು ನಿಯಮಗಳನ್ನ ಜಾರಿಗೆ ತಂದಿದ್ದು, ಹೆಚ್ಚು ಜನರು ಸೇರದಂತೆ ಸೂಚನೆ ನೀಡಿದೆ. ಹಾಗಾಗಿ ಮನೆಯಲ್ಲಿಯೇ ಸರಳವಾಗಿ ಶಿವನ ಪೂಜೆ ಮಾಡೋದು ಉತ್ತಮ. ಶಿವನ ಪೂಜೆ ಮತ್ತು ಉಪವಾಸ ವ್ರತದ ಮಹತ್ವ ಇಲ್ಲಿದೆ.

    ಶಿವನ ಪೂಜೆ ಮಾಡುವುದು ಹೇಗೆ:
    ಮಹಾಶಿವರಾತ್ರಿ ದಿನ ಹಸುವಿನ ತುಪ್ಪದ ಜೊತೆ ಕರ್ಪೂರವನ್ನು ಬೆರೆಸಿ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಈ ದಿನ ರುದ್ರಾಕ್ಷಿಯ ಮಾಲೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಚಂದನ, ಹೂ, ದೀಪ ಹಾಗೂ ಧೂಪ ಹಚ್ಚಿ ಪೂಜೆ ಮಾಡಬೇಕು.

    ವ್ರತದ ಮಹತ್ವ:
    ಮಹಾಶಿವರಾತ್ರಿ ಹಬ್ಬದಂದು ವ್ರತ ಮಾಡುವುದರಿಂದ ಪಾಪ ದೂರ ಆಗುತ್ತದೆ ಹಾಗೂ ಆತ್ಮ ಶುದ್ಧ ಆಗುತ್ತದೆ. ಎಲ್ಲೆಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗುತ್ತದೋ ಅಲ್ಲಿ ಶಿವ ಖಂಡಿತವಾಗಿಯೂ ಇರುತ್ತಾನೆ ಎಂಬುದು ಜನರ ನಂಬಿಕೆ. ಮಹಾಶಿವರಾತ್ರಿ ಇಡೀ ದಿನ ಶ್ರದ್ಧೆಯಿಂದ ವ್ರತ ಮಾಡಿದರೆ, ಶಿವ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಮಹಾಶಿವರಾತ್ರಿ ದಿನ ಮಾಡುವ ವ್ರತ ಪ್ರಭಾವಶಾಲಿ ಎಂದು ಹಿರಿಯರು ಹೇಳುತ್ತಾರೆ.

    ಶಿವನನ್ನು ಪ್ರಸನ್ನಗೊಳಿಸಲು ಮಹಾಶಿವರಾತ್ರಿ ಇಡೀ ದಿನ ಜನರು ಉಪವಾಸವಿರುತ್ತಾರೆ. ಕೆಲವರು ಇಡೀ ದಿನ ಅನ್ನ ಹಾಗೂ ನೀರು ಸೇವಿಸದೇ ಉಪವಾಸ ಮಾಡಿದರೆ, ಮತ್ತೆ ಕೆಲವರು ಹಣ್ಣು, ಡ್ರೈ ಫ್ರೂಟ್ಸ್ ಮಾತ್ರ ಸೇವಿಸುತ್ತಾರೆ.

  • ಶಿವರಾತ್ರಿಯಂದು ಲಿಂಗಸ್ಪರ್ಶ ಮಾಡೋದು ಹೇಗೆ?

    ಶಿವರಾತ್ರಿಯಂದು ಲಿಂಗಸ್ಪರ್ಶ ಮಾಡೋದು ಹೇಗೆ?

    ಮೂರು ಯಾಮಗಳಲ್ಲಿ ನಿದ್ರಿಸದೇ ಜಾಗರಣೆ ಮಾಡಿ ಲಿಂಗಸ್ಪರ್ಶವನ್ನು ಯಾರು ಮಾಡುತ್ತಾರೋ ಅಂತಹವರಿಗೆ ತ್ರಿಜನ್ಮದಲ್ಲಿ ಮಾಡಿರುವಂತಹ ಪಾಪಗಳು ಪರಿಹಾರ ಆಗುತ್ತೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ. ಮನುಷ್ಯ ಜೀವಿ ತನ್ನ ಜೀವಿತಾವಧಿಯಲ್ಲಿ ಅಥವಾ ಹಿಂದಿನ ಜನ್ಮದಲ್ಲಿ ಆತ ಮಾಡಿದ ಕರ್ಮಗಳಿರುತ್ತವೆ. ಆ ಎಲ್ಲ ಕರ್ಮ(ಪಾಪ)ಗಳ ನಿವಾರಣೆಗೆ ಶಿವರಾತ್ರಿಯಂದು ಜಾಗರಣೆ ಮಾಡಿ ಲಿಂಗಸ್ಪರ್ಶ ಮಾಡುವದರಿಂದ ಕರ್ಮಾದಿಗಳೆಲ್ಲ ಪರಿಹಾರ ಆಗುತ್ತದೆ.

    ಶಿವರಾತ್ರಿಯಲ್ಲಿ ಲಿಂಗಸ್ಪರ್ಶ ಮಾಡಿದ್ರೆ ಗ್ರಹದೋಷಗಳು ಪರಿಹಾರ ಆಗುತ್ತದೆ. ಎಲ್ಲೆಲ್ಲಿ ಲಿಂಗ ದರ್ಶನ ಮತ್ತು ಸ್ಪರ್ಶದ ಅವಕಾಶ ನೀಡುತ್ತಾರೆ ಅಲ್ಲಿಗೆ ತೆರಳಿ ಜಾಗರಣೆ ಮಾಡಿ ಲಿಂಗವನ್ನು ಸ್ಪರ್ಶ ಮಾಡಬೇಕು.

    ಲಿಂಗಸ್ಪರ್ಶ ಮಾಡೋದು ಹೇಗೆ?
    ಲಿಂಗಸ್ಪರ್ಶಕ್ಕೆ ತೆರಳುವ ಭಕ್ತರು ತಮ್ಮ ಜೊತೆಗೆ ಶುದ್ಧವಾದ ನೀರು, ಹಾಲು ಮತ್ತು ಬಿಲ್ವಪತ್ರೆಯನ್ನು ತೆಗೆದುಕೊಂಡು ಹೋಗಬೇಕು. ಮೂರು ವಸ್ತುಗಳನ್ನು ಲಿಂಗದ ಮೇಲೆ ಹಾಕಿ, ಎರಡು ಕೈಗಳಿಂದ ಲಿಂಗವನ್ನು ಮುಟ್ಟಿ ವ್ಯವಸ್ಥಿತವಾಗಿ ಪ್ರಾರ್ಥನೆ ಮಾಡಬೇಕು.

    `ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿಯ ಮಂತ್ರನ್ನು ಸ್ಮರಣೆ ಮಾಡಬೇಕು. ಮನುಷ್ಯ ಮಾಡಿರುವ ಕೆಲಸ ಇರೋವರೆಗೂ, ಪರಮೇಶ್ವರ ಕೊಟ್ಟಿದ್ದು ಕೊನೆಯ ತನಕ ಎಂಬ ಮಾತಿದೆ. ಹಾಗಾಗಿ ಪರಮೇಶ್ವರನ ಕೃಪೆಗೆ ಪಾತ್ರರಾಗಲು ಶುಭ ಸೋಮವಾರ ಶಿವರಾತ್ರಿ ಬಂದಿದೆ. ಕೇವಲ ಶಿವ, ಶಿವ ಎಂದು ಜಪ ಮಾಡೋದಕ್ಕಿಂತಲೂ ವ್ಯವಸ್ಥಿತವಾಗಿ `ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು ಸ್ಮರಿಸೋದು ಉತ್ತಮ.

    ಶಿವರಾತ್ರಿಯಂದು ಲಿಂಗಸ್ಪರ್ಶ ಮಾಡುವದರಿಂದ ಪುಣ್ಯ ಲಭಿಸುತ್ತೆ ಎಂದರೆ ತಪ್ಪಾಗುತ್ತದೆ. ನಮ್ಮ ಕೆಲಸಗಳಿಗುನವಾಗಿ ಪುಣ್ಯ ಸಿಗುತ್ತೆ ಎಂದು ಹೇಳುತ್ತಾರೆ. ಹಾಗಾಗಿ ಶಿವರಾತ್ರಿಯಂದು ಬಡಮಕ್ಕಳಿಗೆ ಅನ್ನದಾನ, ವಸ್ತ್ರದಾನ ಮಾಡುವುದು ಅಥವಾ ಅಂಧ ಮಕ್ಕಳಿಗೆ ಅಥವಾ ನಿರ್ಗತಿಕರಿಗೆ ಸಹಾಯವನ್ನು ಮಾಡಿದ್ರೆ ಪರಮೇಶ್ವರನ ಕೃಪೆಗೆ ಪಾತ್ರರಾಗಬಹುದು.