ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಭಾಗಿಯಾಗಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar), ಗೃಹ ಸಚಿವ ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ, ಸುತ್ತೂರು ಶ್ರೀಗಳು ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ: ಮಹಿಳೆ ಅನುಮಾನಾಸ್ಪದ ಸಾವು – ಪತಿಯ ಅಕ್ರಮ ಸಂಬಂಧದಿಂದ ಕೊಲೆ ಆರೋಪ
ಶಿವಕುಮಾರ್ ಸ್ವಾಮೀಜಿ ಮೂರ್ತಿ ಒಡೆಯಲು ಕನಸನಲ್ಲಿ ಬಂದು ಏಸು ಹೇಳಿದ್ದರಂತೆ. ಏಸು ಹೇಳಿದ್ದಕ್ಕೆ ಶಿವಕುಮಾರ್ ಸ್ವಾಮೀಜಿ ಮೂರ್ತಿ ವಿರೂಪಗೊಳಿಸಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
7 ವರ್ಷಗಳ ಹಿಂದೆ ರಾಜ್ ಶಿವು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಹಿಂದೂ ದೇವತೆಗಳು, ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದ. ಕ್ರಿಶ್ಚಿಯನ್‌ಗೆ ಮತಾಂತರವಾದ ಮೇಲೆ ಧರ್ಮಾಂದನಂತೆ ವರ್ತಿಸುತ್ತಿದ್ದ. ಹೀಗಾಗಿ, ಶಿವಕುಮಾರ ಸ್ವಾಮೀಜಿ ಮೂರ್ತಿಯನ್ನು ಒಡೆಯಲು ಪ್ಲಾನ್ ಮಾಡಿಕೊಂಡಿದ್ದ. ಇದನ್ನೂ ಓದಿ: ಕೆನರಾ ಬ್ಯಾಂಕ್ ಜೊತೆಗೆ KKRTC ಒಪ್ಪಂದ – ಸಾರಿಗೆ ನೌಕರರಿಗೆ 1 ಕೋಟಿ ಅಪಘಾತ ವಿಮೆ ಯೋಜನೆ ಜಾರಿ
ಶನಿವಾರ ರಾತ್ರಿ ಸುತ್ತಿಗೆ ಸಮೇತ ಆರೋಪಿ ಬಂದು, ರಾತ್ರಿ ಯಾರು ಇಲ್ಲದ ವೇಳೆ ಪುತ್ಥಳಿ ವಿರೂಪಗೊಳಿಸಿ ಎಸ್ಕೇಪ್ ಆಗಿದ್ದ. ಇದರ ಜೊತೆಗೆ ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಭಿತ್ತಿಪತ್ರ ಹಂಚುತ್ತಿದ್ದ. ಪತ್ರದಲ್ಲಿನ ಕೋಡ್ ಸ್ಕ್ಯಾನ್ ಮಾಡಿದ್ರೆ ಬೈಬಲ್ ಸಿಗುವಂತೆ ಭಿತ್ತಿಪತ್ರ ಹಂಚುತ್ತಿದ್ದ.
ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತವಾಗಿರುವ ಡಾ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಲು ನಿರ್ಧರಿಸಿದ್ದು, ಸಾವಿರಾರು ಭಕ್ತರ ಕಣ್ಮನ ತಣಿಸಲು 60 ಎಕರೆ ವಿಸ್ತೀರ್ಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ (Theme Park) ಸಿದ್ಧಗೊಳ್ಳುತ್ತಿದೆ.
ಈ ಥೀಮ್ ಪಾರ್ಕ್ ಸಿದ್ದಗಂಗಾ ಮಠ (Siddaganga Mutt) ಬೆಳೆದು ಬಂದ ಸಮಗ್ರ ಇತಿಹಾಸ ಮತ್ತು ಶಿವಕುಮಾರ ಶ್ರೀಗಳ (Shivakumara Swamiji) ಜೀವನ ಚರಿತೆಯನ್ನು ಹೇಳುವ ಕಲಾಕೃತಿಗಳನ್ನು ಒಳಗೊಂಡಿದ್ದು, ಪಾರ್ಕ್‌ನಲ್ಲಿ 100ಕ್ಕೂ ಹೆಚ್ಚು ಶಿಲ್ಪಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದ್ದು, ಉದ್ಯಾನವನದಲ್ಲಿ 10 ಜನ ಕಲಾವಿದರು ಹಗಲು ರಾತ್ರಿ ಈ ಕಾರ್ಯದಲ್ಲಿ ಶ್ರಮಿಸುತಿದ್ದಾರೆ. ಒಂದು ವರ್ಷದಿಂದ ಕಲಾವಿದರ ಅವಿರತ ಪ್ರಯತ್ನ ಥೀಮ್ ಪಾರ್ಕ್‌ಗೆ ಮತ್ತಷ್ಟು ಕಳೆ ತುಂಬಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ರೈಲ್ವೇ ಕಂಬಿಗಳ ಸಾಗಾಟ – ಮಾಲು ಸಮೇತ ವಾಹನ ವಶಕ್ಕೆ
ತ್ರಿವಿಧಿ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜೊತೆಗೆ ಸಿದ್ದಗಂಗಾ ಮಠದ ಇತಿಹಾಸ ಹೇಳುವ ಪಾರ್ಕ್ ಕೂಡ ಹೌದು. 60 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಒಂದೆಡೆ ಸಿದ್ದಲಿಂಗೇಶ್ವರರು, ಅಟವಿ ಶ್ರೀಗಳು, ಉದ್ಧಾನ ಶಿವಯೋಗಿಗಳು, ಡಾ.ಶ್ರೀ.ಶಿವಕುಮಾರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಿಲ್ಪಗಳು ಗಮನ ಸೆಳೆದರೆ ಇನ್ನೊಂದೆಡೆ ಡಾ.ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ, ವಿದ್ಯಾಭ್ಯಾಸ, ಸನ್ಯಾಸತ್ವ ದೀಕ್ಷೆ, ಜೀವನ ಸಾಧನೆ ಸಾರುವ ಪ್ರತಿಯೊಂದು ಸಾಧನೆಗಳ ಹೂರಣವೇ ಇಲ್ಲಿ ಶಿಲ್ಪ ಕಲೆಯಾಗಿ ಹೊರ ಹೊಮ್ಮಿದೆ. ನಿರ್ಮಾಣ ಹಂತ ತಲುಪಿರುವ ಉದ್ಯಾನವನ ಈಗಾಗಲೇ ಲಕ್ಷಾಂತರ ಜನರ ಮನಸೂರೆಗೊಂಡಿದೆ. ಭಕ್ತರು, ಪ್ರವಾಸಿಗಳು, ಸ್ಥಳೀಯರು ಬೆಟ್ಟ ಹತ್ತುವ ಪ್ರತಿಯೊಬ್ಬರೂ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು ಎಂದು ಅನಿಸಿದರೆ ಆಶ್ಚರ್ಯವೆನಿಲ್ಲ. ಇದನ್ನೂ ಓದಿ: 21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆ ಕೇಸ್ – ಹಣದೊಂದಿಗೆ ಚಾಲಕ, ಕ್ಲೀನರ್ ಪರಾರಿ
ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಜೊತೆಗೆ ವಿದೇಶಗಳಿಂದಲೂ ಶ್ರೀಗಳ ಗದ್ದಿಗೆ ದರ್ಶನಕ್ಕೆ ಭಕ್ತಾದಿಗಳು, ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಷ್ಟು ದಿನ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರ ಸ್ವಾಮಿಜಿಗಳ ಗದ್ದಿಗೆ ದರ್ಶನದಿಂದ ಪುನೀತರಾಗುತಿದ್ದ ಭಕ್ತರು ಇನ್ನುಮುಂದೆ ಲಿಂಗೈಕ್ಯ ಶ್ರಿಗಳ ಜೀವನ ಚರಿತ್ರೆಯ ಸಂಪೂರ್ಣ ಶಿಲ್ಪ ಕಲಾಕೃತಿಗಳನ್ನು ಕಂಡು ಪುಳಕಿತರಾಗೋದು ಗ್ಯಾರಂಟಿ. ವೀಕೆಂಡ್, ಜಾತ್ರೆ ಮತ್ತಿತರ ಸಂದರ್ಭದಲ್ಲಿ ಶ್ರೀ ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರಿಗೆ ಥೀಮ್ ಪಾರ್ಕ್ ಆಕರ್ಷಣೆಯ ಕೇಂದ್ರವಾಗಲಿದೆ. ಇದನ್ನೂ ಓದಿ: Udupi College Video Row – ತನಿಖೆ ಶುರು ಮಾಡಿದ ಕುಂದಾಪುರ ಡಿವೈಎಸ್ಪಿ
ತುಮಕೂರು: ಇಂದು ಸಿದ್ದಗಂಗಾ ಮಠ (Siddaganga Mutt) ದ ಶಿವಕುಮಾರ ಶ್ರೀಗಳ 116 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಸಿದ್ದಲಿಂಗ ಸ್ವಾಮೀಜಿಯವರು ಶಿವಕುಮಾರ ಶ್ರೀ (Shivakumara Shree)ಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಜಯಂತಿ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಪ್ರತಿಮೆ ಇಟ್ಟು ಮೆರವಣಿಗೆ ಮಾಡಲಾಯಿತು. ಬೆಳಗ್ಗೆ 11 ಗಂಟೆಗೆ ಶ್ರೀ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು. ನೀತಿ ಸಂಹಿತೆ ಇರುವುದರಿಂದ ರಾಜಕಾರಣಿಗಳಿಗೆ ಆಹ್ವಾನ ನೀಡಿಲ್ಲ. ಹೀಗಾಗಿ ರಾಜಕರಣಿಗಳು, ಜನಪ್ರತಿನಿಧಿಗಳು ಭಾಗಿಯಾಗಿಲ್ಲ. ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ, ಸುತ್ತೂರು ಮಠದ ಶ್ರೀ ಗಳ ಸಾನಿಧ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ (Thawar Chand Gehlot), ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಭಕ್ತರು ಭಾಗಿಯಾದರು. ಪರಮಪೂಜ್ಯರ ಪುಣ್ಯದ ಕಾರ್ಯಗಳನ್ನು ಶ್ರೀಮಠ ಮುಂದುವರಿಸಿಕೊಂಡು ಹೋಗಲಾಗುತ್ತಿದೆ.
ಶಿವೈಕ್ಯ ಶಿವಕುಮಾರ ಶ್ರೀಗಳ 116 ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ 116 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರು ನಾಮಕರಣ ಮಾಡಲಾಯಿತು. ವಜ್ರಮಹೋತ್ಸವ ಕಟ್ಟಡದ ಆವರಣದಲ್ಲಿ ಶಾಸ್ತ್ರೋಕ್ತವಾಗಿ ಗಂಡು ಮಗುವಿಗೆ ಶಿವಕುಮಾರ ಎಂದು, ಹೆಣ್ಣು ಮಗುವಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಒಟ್ಟು 116 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ ಮಾಡಲಾಯಿತು. ನಾಮಕರಣವಾದ ಮಗುವಿಗೆ ತೊಟ್ಟಿಲು ಹಾಗೂ ಬಟ್ಟೆ ವಿತರಣೆ ಮಾಡಲಾಯಿತು.
ತುಮಕೂರು: ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ಇಂದು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, ಇಂದು ಸಂಭ್ರಮ ಸಡಗರದ ದಿನ. ವಿಶ್ವದಲ್ಲಿ ಪೂಜಿಸಿದ ಪುಣ್ಯಪುರುಷ, ಆಧುನಿಕ ಬಸವಣ್ಣ ಸಿದ್ದಗಂಗಾ ಶ್ರೀಗಳು. ತ್ರಿವಿಧ ದಾಸೋಹಿಗಳ ಜನ್ಮ ದಿನೋತ್ಸವ. ಸರ್ದಾರ್ ಪಟೇಲ್ ನಂತ್ರ ಧೀಮಂತ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಇಂದು ಗೃಹ ಸಚಿವರು ಮಾತ್ರ ಆಗಿರದೇ, ಮಠದ ಭಕ್ತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು.
ಅನ್ನದಾಸೋಹ ದೇವರ ಕೆಲಸ ಅಂತ ಭಾವಿಸಿ ಶ್ರೀಗಳು ಕೆಲಸ ಮಾಡಿದರು. ಬಸವಣ್ಣರ ವಚನದಂತೆ ಈ ಶತಮಾನದಲ್ಲಿ ಬಡವರ ಪರ ಕೆಲಸ ಮಾಡಲು ಮಠ ಕಟ್ಟಿದರು. ಮಠಕ್ಕಾಗಿ ಭಿಕ್ಷೆ ಬೇಡಿ ಮಠ ಕಟ್ಟಿದವರು ಶ್ರೀಗಳು. ಶ್ರೀಗಳು ಕರ್ನಾಟಕದ ಆಧ್ಯಾತ್ಮಿಕ ಮೇರು ಪರ್ವತವಾಗಿ ಇದ್ದವರು. ಯಡಿಯೂರಪ್ಪನವರು 4 ಬಾರಿ ಸಿಎಂ ಆಗೋಕೆ ಶ್ರೀಗಳ ಆಶೀರ್ವಾದ ಕಾರಣ. ಸಿಎಂ ಅವರು ದಾಸೋಹ ದಿನ ಅಂತ ಘೋಷಣೆ ಮಾಡಿದ್ರು. ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮಿಗಳ ಹೆಸರು ಇಡಬೇಕು ಅಂತ ಇದೇ ವೇಳೆ ಸಿಎಂಗೆ ವಿಜಯೇಂದ್ರ ಮನವಿ ಮಾಡಿದರು.
ಯಡಿಯೂರಪ್ಪ ಅವರು ಜನವರಿ 31ನ್ನು ದಾಸೋಹ ದಿನ ಅಂತ ಘೋಷಣೆ ಮಾಡಬೇಕು ಅಂತ ಸಿಎಂಗೆ ಮನವಿ ಮಾಡಿದ್ರು. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ರು. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡುವಂತೆ ಕೇಳಿಕೊಂಡರು. ಇದನ್ನೂ ಓದಿ: ನಡೆದಾಡುವ ದೇವರ ಗದ್ದುಗೆ ದರ್ಶನ ಪಡೆದ ಗೃಹ ಸಚಿವ ಅಮಿತ್ ಶಾ
ಕರ್ನಾಟಕ ರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕೃತ, 21 ಶತಮಾನದಲ್ಲಿ ಮತ್ತೆ ಅಧುನಿಕ ಬಸವಣ್ಣನಾಗಿ ಶಿವಕುಮಾರ ಸ್ವಾಮೀಜಿಗಳು ಹುಟ್ಟಿ ಬಂದಿದ್ದಾರೆ. ಶ್ರೀಗಳ 115 ನೇ ಜಯಂತೋತ್ಸವದಲ್ಲಿ ಭಾಗಿಯಾಗಿದ್ದೇವೆ ಎಂದರು.
ಬೆಂಗಳೂರು: ನಡೆದಾಡುವ ದೇವರು ಎಂದೇ ಭಕ್ತ ಕುಲಕೋಟಿಯಿಂದ ಕರೆಸಿಕೊಳ್ಳುತ್ತಿದ್ದ ಸಿದ್ದಗಂಗೆಯ ಲಿಂಗ್ಯಕ್ಯ ಶ್ರೀ ಶಿವಕುಮಾರ ಶ್ರೀಗಳು ತಮ್ಮ ಸೇವಾ ಕಾರ್ಯಗಳ ಮೂಲಕ ಜನಮಾನ ಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೃಷಭಾವತಿ ನಗರದ 102ನೇ ವಾರ್ಡ್ ನಲ್ಲಿಂದು ಹಮ್ಮಿಕೊಂಡಿದ್ದ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅನ್ನ, ಅಕ್ಷರ, ಆಶ್ರಯ ಈ ತ್ರಿವಿಧ ದಾಸೋಹದ ಮೂಲಕ ನಾಡಿನ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ ಶ್ರೀಗಳು ಹಾಕಿಕೊಟ್ಟು ಹೋದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಬಡ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಎನ್ನುವ ಕೊರಗನ್ನು ನಿವಾರಿಸುವ ಸಲುವಾಗಿ ಕ್ಷೇತ್ರದ ನಾಲ್ಕು ಕಡೆಗಳಲ್ಲಿ ದೆಹಲಿ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಶಾಲೆಗಳಿಗೆ ಮಕ್ಕಳ ಸೇರ್ಪಡೆಗೆ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಹೆಚ್ಚುವರಿ ಕೊಠಡಿ ಮತ್ತು ಹೆಚ್ಚುವರಿ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 3ನೇ ವರ್ಷದ ಪುಣ್ಯಸ್ಮರಣೆ- ಮಠದ ಗದ್ದಿಗೆಯಲ್ಲಿ ಸರಳ ಪೂಜೆ
ಇಂದು ಮಕ್ಕಳಲ್ಲಿ ಉತ್ತಮ ಶಿಕ್ಷಣದ ಬೀಜ ಬಿತ್ತಿದರೆ ಭವಿಷ್ಯದಲ್ಲಿ ಅದು ಬೆಳೆದು ವಿಶಾಲವಾದ ಮರವಾಗಿ ಹರಡಿ ಸಾವಿರಾರು ಜನರಿಗೆ ಆಶ್ರಯ ನೀಡಬಲ್ಲದು. ಇದೇ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಸಿದ್ದಗಂಗಾ ಶ್ರೀಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ಸಿದ್ದಗಂಗಾ ವಿದ್ಯಾಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ಮಕ್ಕಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಆಯೋಜಕರು, ಸ್ಥಳೀಯರು ಉಪಸ್ಥಿತರಿದ್ದರು.
ನೆಲಮಂಗಲ: ಲಿಂಗೈಕ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು ವೀರಾಪುರ ಗ್ರಾಮದ ಅಭಿವೃದ್ಧಿ ಹಿನ್ನೆಲೆ ಇಂದು ರಾಮನಗರ ಜಿಲ್ಲಾಡಳಿತ ಮತ್ತು ಮಾಗಡಿ ತಾಲೂಕು ಆಡಳಿತ ಜಂಟಿ ಭೇಟಿ ನಡೆಸಿದರು.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರು ಹೋಬಳಿಯ ವೀರಾಪುರ ಗ್ರಾಮದಲ್ಲಿ ಎಲ್ಲಾ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀಸಿದ್ದಲಿಂಗ ಸ್ವಾಮೀಜಿ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸಿ ಮಂಜುನಾಥ್, ಕೆ.ಆರ್.ಐ.ಡಿ.ಎಲ್ ಎಂ.ಡಿ ಕುಮಾರಸ್ವಾಮಿ ಗುದ್ದಲಿ ಪೂಜೆ ನಡೆಸಿದರು. ಕೆ.ಆರ್.ಐ.ಡಿ.ಎಲ್ ಅಡಿಯಲ್ಲಿ ನಿರ್ಮಾಣ ವಾಗುತ್ತಿರುವ 111 ಅಡಿಗಳ ಶ್ರೀಗಳ ಪುತ್ಥಳಿ ಜೊತೆಗೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ಕಾಮಗಾರಿ ವೀಕ್ಷಣೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಸಮಸ್ಯೆಗೆ ಸ್ಥಳದಲ್ಲೆ ಪರಿಶೀಲನೆ, 27 ಇಲಾಖೆಗೆ ಸಮನ್ವಯತೆ ನಡೆಸಲಾಯಿತು. ನೆಲಮಂಗಲ ಸಮೀಪದ ಸೋಲೂರು ಹೋಬಳಿ ವೀರಾಪುರ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಹ ಭಾಗಿಯಾಗಿ ವೇದಿಕೆಯಲ್ಲಿ ಮಾತನಾಡಿದರು. ಇದೇ ವೇಳೆಯಲ್ಲಿ ಹಲವು ಮಠದ ಸ್ವಾಮೀಜಿಗಳು ಭಾಗಿಯಾಗಿದ್ದು ಹಿರಿಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ನಡೆಸಿದರು.
ಗುರುವಾರ ಹಿರಿಯ ಶ್ರೀಗಳ ಹುಟ್ಟು ಹಬ್ಬದ ದಿನ ಚಾಲನೆಗೊಳ್ಳಬೆಕ್ಕಿದ್ದ ಕಾರ್ಯಕ್ರಮ, ಇಂದು ಚಾಲನೆಗೊಂಡಿತು. ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಸಮಾರಂಭ ಜರಗಿದ್ದು ವಿಶೇಷವಾಗಿತ್ತು. ಡಾ ಶ್ರೀ. ಶ್ರೀ. ಶಿವಕುಮಾರ ಸ್ವಾಮೀಜಿ ಜನ್ಮಸ್ಥಳ ವೀರಾಪುರ ಅಭಿವೃದ್ಧಿಗೆ ಒತ್ತು, ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯ 111 ಅಡಿ ಉದ್ದದ ಪುತ್ಥಳಿ ನಿರ್ಮಾಣ ಜೊತೆ ಜೊತೆಗೆ ಇಂದು ಸಮುದಾಯ ಭವನ, ದೇವಾಲಯ, ಶ್ರೀಗಳ ಹಳೆಯ ಮನೆ, ಗ್ರಾಮದ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಸಿದರು.
ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಜೈವಿಕ ವನ ಹೊತ್ತಿ ಉರಿದಿದೆ.
ತುಮಕೂರು ತಾಲೂಕು ಬಸ್ತಿ ಬೆಟ್ಟದ ಬಳಿ ಇರುವ ಗಿಡಮೂಲಿಕೆ ಬೆಳೆಯುತ್ತಿದ್ದ ಜೈವಿಕ ವನಕ್ಕೆ ಬೆಂಕಿ ಬಿದ್ದಿದೆ. ಈ ವನ ಸಿದ್ದಗಂಗಾ ಸಂಸ್ಥೆಗೆ ಸೇರಿದೆ.
ಇಲ್ಲಿ ಹಲವು ರೋಗಗಳ ಮೇಲೆ ಪ್ರಭಾವ ಬೀರುವ ಗಿಡಮೂಲಿಕೆಗಳನ್ನ ಬೆಳೆಸಲಾಗುತ್ತಿತ್ತು. ಇದೀಗ ಈ ವನಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಗಟನೆಯಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶಗೊಂಡಿದೆ.
ಈ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಇಂದು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಶ್ರೀಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂತೆಯೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಶ್ರೀಗಳಿದ್ದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ದಾಸ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ವಿಶ್ವಖ್ಯಾತಿ ಗಳಿಸಿದ್ದ ನಮ್ಮೆಲರ ಪ್ರೀತಿಯ ಶ್ರೀ ಶಿವಕುಮಾರ ಸ್ವಾಮೀಜಿ ರವರ 2ನೇ ಪುಣ್ಯಸ್ಮರಣೆ ಇಂದು. ಅವರ ಸಾಮಾಜಿಕ ಕಳಕಳಿಯ ಕಾರ್ಯಗಳು ಎಷ್ಟೋ ಜನರಿಗೆ ಸ್ಪೂರ್ತಿಯಾಗಿವೆ. ಲಕ್ಷಾಂತರ ಮಕ್ಕಳಿಗೆ ದಾರಿದೀಪ ಆಗಿದ್ದರು. ಅವರ ಕೆಲಸದಿಂದ ಸದಾ ಜೀವಂತ ಎಂದು ಬರೆದುಕೊಂಡಿದ್ದಾರೆ. ಸದ್ಯ ತಮ್ಮ ನೆಚ್ಚಿನ ನಟ ಶ್ರೀಗಳ ಕುರಿತು ಮಾಡಿರುವ ಟ್ವೀಟ್ ಗಳನ್ನು ಅವರ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ವಿಶ್ವಖ್ಯಾತಿ ಗಳಿಸಿದ್ದ ನಮ್ಮೆಲರ ಪ್ರೀತಿಯ ಶ್ರೀ ಶಿವಕುಮಾರ ಸ್ವಾಮೀಜಿ ರವರ ೨ನೇ ಪುಣ್ಯಸ್ಮರಣೆ ಇಂದು. ಅವರ ಸಾಮಾಜಿಕ ಕಳಕಳಿಯ ಕಾರ್ಯಗಳು ಎಷ್ಟೋ ಜನರಿಗೆ ಸ್ಪೂರ್ತಿಯಾಗಿವೆ. ಲಕ್ಷಾಂತರ ಮಕ್ಕಳಿಗೆ ದಾರಿದೀಪ ಆಗಿದ್ದರು. ಅವರ ಕೆಲಸದಿಂದ ಸದಾ ಜೀವಂತ pic.twitter.com/DXqHpYRyQG
ಶ್ರೀ ಕ್ಷೇತ್ರ ಸಿದ್ದಗಂಗೆಯಲ್ಲಿ ಇಂದು ನಸುಕಿನ ಜಾವ 4 ಗಂಟೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಆರಂಭವಾಗಿವೆ. ಅಲಂಕೃತ ಗೊಂಡ ಶ್ರೀಗಳ ಗದ್ದುಗೆಯಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿವೆ. ಲಗುನ್ಯಾಸ ಸಹಿತ ಮುದ್ರಾ ರುದ್ರಾಭಿಷೇಕ, ಚಮಕ ಸಹಿತ ರುದ್ರಾಭಿಷೇಕಗಳನ್ನು ಮಾಡಲಾಗುತ್ತಿದೆ. ಶ್ರಿ ಸಿದ್ದಲಿಂಗ ಸ್ವಾಮೀಜಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಗ್ಗಿನಿಂದಲೆ ಶ್ರೀಮಠಕ್ಕೆ ಭಕ್ತರ ದಂಡು ಆಗಮಿಸ್ತಿದೆ.
ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ವಿಶ್ವಖ್ಯಾತಿ ಗಳಿಸಿದ್ದ ನಮ್ಮೆಲರ ಪ್ರೀತಿಯ ಶ್ರೀ ಶಿವಕುಮಾರ ಸ್ವಾಮೀಜಿ ರವರ ೨ನೇ ಪುಣ್ಯಸ್ಮರಣೆ ಇಂದು. ಅವರ ಸಾಮಾಜಿಕ ಕಳಕಳಿಯ ಕಾರ್ಯಗಳು ಎಷ್ಟೋ ಜನರಿಗೆ ಸ್ಪೂರ್ತಿಯಾಗಿವೆ. ಲಕ್ಷಾಂತರ ಮಕ್ಕಳಿಗೆ ದಾರಿದೀಪ ಆಗಿದ್ದರು. ಅವರ ಕೆಲಸದಿಂದ ಸದಾ ಜೀವಂತ pic.twitter.com/QovEz8ZJUrhttps://t.co/c049oR9wR2
– ಕೊಠಡಿ ಸಾಲದಿದ್ದಾಗ ತಮ್ಮ ಕೊಠಡಿಯನ್ನೇ ಬಿಟ್ಟುಕೊಟ್ಟಿದ್ದರು
ತುಮಕೂರು: ಇಂದು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರು ಶಿವಕುಮಾರ ಸ್ವಾಮೀಜಿಗಳಿದ್ದ ದಿನಗಳನ್ನು ಮೆಲುಕು ಹಾಕಿಕೊಂಡರು.
ಈ ಸಂಬಂಧ ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಎರಡು ವರ್ಷದ ಹಿಂದೆ ಅವರು ದರ್ಶನಾಹಾರವಾಗಿದ್ದರು. ಇದೀಗ ಅವರ ಸ್ಮರಣೆಯೇ ದರ್ಶನಾಹಾರವಾಗಿದೆ. ಸ್ವಾಮೀಜಿ ಸೇವೆ, ದಾಸೋಹಕ್ಕೆ ಜೀವವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಆತ್ಮನಿರ್ಬರ್ ಅನ್ನುವುದನ್ನು ಬಸವಣ್ಣನವರು ಕಲಿಸಿದ್ದಾರೆ. ಶ್ರೀಗಳು ಕಾಯಕವೇ ಕೈಲಾಸ ಎಂಬ ಭಾವನೆಯೊಂದಿಗೆ ಜೀವನ ಸಾರ್ಥಕತೆ ಮಾಡಿಕೊಂಡವರು. ಎಷ್ಟೇ ಮಕ್ಕಳು ಬಂದರೂ ಆಶ್ರಯ ನೀಡುತ್ತಿದ್ದರು. ಒಂದು ಸಾರಿ ಕೊಠಡಿ ಸಾಲದಿದ್ದಾಗ ತಮ್ಮ ಕೊಠಡಿಯನ್ನು ಬಿಟ್ಟುಕೊಟ್ಟರು. ಗದ್ದುಗೆಯಲ್ಲಿ ಕುಳಿತಾಗ ಅವರ ಎದುರು ಮಕ್ಕಳು ಓಡಾಡಿದ್ರೆ ಖುಷಿಯಾಗುತ್ತಿದ್ದರು ಎಂದು ಕಾಯಕ ಯೋಗಿಯನ್ನು ನೆನಪು ಮಾಡಿಕೊಂಡರು.
ಸರಳವಾಗಿ ಆಚರಿಸಬೇಕಾಗಿತ್ತು. ಸಿಎಂ ಅವರನ್ನು ಬರುವಂತೆ ಮನವಿ ಮಾಡಿದ್ವಿ, ಅಂತೆಯೇ ಸಿಎಂ ಒಪ್ಪಿಕೊಂಡರು, ಅವರು ಶ್ರೀಗಳ ಆಂತರಂಗದ ಶಿಷ್ಯರು. ವೀರಾಪುರ ಗ್ರಾಮದಲ್ಲಿ ವಿಶೇಷವಾಗಿ ಅಭಿವೃದ್ಧಿ ಮಾಡುತ್ತಿದ್ದು, ಸಿಎಂ 80 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.