Tag: Shivakumar udasi

  • ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ

    ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ

    ಹಾವೇರಿ: ಭಾಷೆ ವಿಚಾರ ಬಂದಾಗ ಮಾತೃಭಾಷೆಯೇ ಮೊದಲು. ಯಾರೇ ಆಗಿರಲಿ, ದೇಶದಲ್ಲಿ ಆಗಲಿ, ಪ್ರಪಂಚದಲ್ಲೇ ಆಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು. ಸಣ್ಣ ಮಗುವಿದ್ದಾಗ ಭಾಷೆ ಕಲಿಸಿದರೆ ಬಹುಭಾಷೆ ಕಲಿಯುತ್ತವೆ. ಆಸಕ್ತಿ ಇದ್ದವರು ಬೇರೆ ಭಾಷೆಯನ್ನು ಕಲಿಯುತ್ತಾರೆ. ಭಾಷಾ ಕಲಿಕೆ ಆಸಕ್ತಿ ಮೇಲೆ ಹೋಗುತ್ತೆ. ಆದರೆ ಮಾತೃಭಾಷೆಯೆ ಶ್ರೇಷ್ಠ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

    ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಬಳಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ನಂತರ ಮಾತನಾಡಿದ ಅವರು, ಇದು ಯಾಕೆ ಇಷ್ಟು ದೊಡ್ಡ ನ್ಯೂಸ್ ಆಗ್ತಿದೆ. ನನಗೆ ಗೊತ್ತಿಲ್ಲ. ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಬಗ್ಗೆ ಅವರನ್ನೆ ಕೇಳಬೇಕು. ನಾನು ಒಬ್ಬ ಲೋಕಸಭಾ ಸದಸ್ಯ ಅಷ್ಟೇ. ಪಕ್ಷದ ಬಗ್ಗೆ ಮಾತಾಡೋಕೆ ಅಧ್ಯಕ್ಷರಿದ್ದಾರೆ. ನಾನೊಬ್ಬ ಎಂಪಿಯಾಗಿ ನನ್ನ ಆವೃತ್ತಿಯಲ್ಲಿ ಬರುವ ಕೆಲಸ ಮಾಡುವವನು. ಈ ಬಗ್ಗೆ ಪಕ್ಷದವರು ಪ್ರೆಸ್‍ಮೀಟ್ ಮಾಡು ಎಂದರೆ ನಾನು ಮಾಡಬೇಕು ಎಂದರು. ಇದನ್ನೂ ಓದಿ:  ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ 

    ಪಿಎಸ್‍ಐ ನೇಮಕಾತಿಯಲ್ಲಿ ರದ್ದು ಮಾಡಿ, ಸರ್ಕಾರ ಮರುಪರೀಕ್ಷೆ ಮಾಡುವ ತೀರ್ಮಾನ ಕೈಗೊಂಡಿದೆ. ತನಿಖೆಯೂ ಅದರ ಜೊತೆಗೆ ನಡೆಯುತ್ತಿದೆ. ಈ ದ್ವಂದ್ವ ಇದ್ದೇ ಇರುತ್ತೆ. ತಪ್ಪು ಮಾಡಿದವರನ್ನು ಬಿಟ್ಟು ಉಳಿದವರಿಗೆ ಪರೀಕ್ಷೆ ಮಾಡಲಾಗ್ತಿದೆ. ತನಿಖೆಯಲ್ಲಿ ಇರೋ ಅಭ್ಯರ್ಥಿಗಳನ್ನು ಬಿಟ್ಟು ಉಳಿದವರಿಗೆ ಮರುಪರೀಕ್ಷೆ ನಡೆಯುತ್ತದೆ. ಸಾಮಾನ್ಯವಾಗಿ ನಾನೂ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೆ ಅಂದರೆ ನನಗೂ ಹಾಗೆ ಅನಿಸುತ್ತಿತ್ತು. ಆದರೆ ಹೊಸ ಅಭ್ಯರ್ಥಿಗಳನ್ನೇನೂ ಸೇರ್ಪಡೆ ಮಾಡಲ್ಲ ಎಂದು ಈಗಾಗಲೇ ಸರ್ಕಾರ ಹೇಳಿದೆ. ಅಪ್ರಮಾಣಿಕರ್ಯಾರು ಅವರು ಹೊರಗಡೆ ಹೋಗಬೇಕಿದೆ ಎಂದರು.

  • ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು- ಬೆಂಗಳೂರಲ್ಲೇ ಬೀಡುಬಿಟ್ಟ ಶಿವಕುಮಾರ ಉದಾಸಿ

    ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು- ಬೆಂಗಳೂರಲ್ಲೇ ಬೀಡುಬಿಟ್ಟ ಶಿವಕುಮಾರ ಉದಾಸಿ

    ಹಾವೇರಿ: ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಮ್ಮದೆಯಾದ ಕಸರತ್ತು ನಡೆಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಸಂಸದ ಶಿವಕುಮಾರ್ ಉದಾಸಿಯವರು ತಮ್ಮ ಪತ್ನಿ ರೇವತಿ ಉದಾಸಿಯವರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದು, ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ. ಈ ಮೂಲಕ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ಕೋವಿಡ್ ಬಂದ ಮೇಲೆ ಏನೇನೋ ಮಾತಾಡ್ತಿದ್ದಾರೆ: ಸೋಮಶೇಖರ್

    ಸಂಸದ ಶಿವಕುಮಾರ ಉದಾಸಿ ಪತ್ನಿ ರೇವತಿ ಉದಾಸಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಕೃಷ್ಣ ಈಳಗೇರ, ಮಾಜಿ ಶಾಸಕ ಶಿವರಾಜ ಸಜ್ಜನ ಸೇರಿದಂತೆ ಹಲವು ಆಕಾಂಕ್ಷಿಗಳು ತಮ್ಮದೆ ಪಯತ್ನ ನಡೆಸಿದ್ದಾರೆ. ಇವತ್ತು ಆಕಾಂಕ್ಷಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಸಭೆ ನಡೆಸಲಿದ್ದಾರೆ.

    ಸಂಜೆ ಐದು ಗಂಟೆಗೆ ಹಾನಗಲ್ ಪಟ್ಟಣದ ಉದಾಸಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಭೆಯಲ್ಲಿ ಆಕಾಂಕ್ಷಿಗಳ ಜೊತೆ ಮಾತುಕತೆ ಮತ್ತು ಆಕಾಂಕ್ಷಿಗಳಿಂದ ಮನವಿ ಸ್ವೀಕರಿಸಲಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೋರ್ ಕಮಿಟಿ ಸಭೆ ನಂತರ ರಾಜ್ಯ ಘಟಕದಿಂದ ಅಭ್ಯರ್ಥಿ ಹೆಸರು ಅಂತಿಮಯಾಗಲಿದೆ. ಅದರೆ ಉಪಚುನಾವಣೆ ಘೋಷಣೆ ನಂತರ ಶಿವಕುಮಾರ ಉದಾಸಿ ಬೆಂಗಳೂರಿನಲ್ಲೇ ಬೀಡುಬಿಟ್ಟು ಪತ್ನಿ ರೇವತಿ ಉದಾಸಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

  • ಸಚಿವ ಸ್ಥಾನ ಯಾರಿಗೆ ಕೊಟ್ರೂ ನನಗೆ ಕೊಟ್ಟಷ್ಟೇ ಸಂತೋಷ: ಶಿವಕುಮಾರ್ ಉದಾಸಿ

    ಸಚಿವ ಸ್ಥಾನ ಯಾರಿಗೆ ಕೊಟ್ರೂ ನನಗೆ ಕೊಟ್ಟಷ್ಟೇ ಸಂತೋಷ: ಶಿವಕುಮಾರ್ ಉದಾಸಿ

    ಹಾವೇರಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡುವುದು ಅದು ಪ್ರಧಾನ ಮಂತ್ರಿಗಳ ಪವರ್. ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಹೇಳುವ ಮೂಲಕ ಶಿವಕುಮಾರ ಉದಾಸಿ ಕೈ ಮುಗಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಬಿ.ವೈ ವಿಜಯೇಂದ್ರ ಹೆಸರು ಕೇಳಿಬಂದಿರೋ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಹಮತವಿದೆ: ಆರ್.ಅಶೋಕ್

    ನಮ್ಮ ಅಪ್ಪ ತೀರಿಕೊಂಡು ಇಪ್ಪತ್ತು ದಿವಸ ಆಗೈತಿ. ಹೀಗಾಗಿ ನಾನು ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನನ್ನ ಪಾಡಿಗೆ ನಾನು ಎಂಪಿ ಕೆಲಸ ಮಾಡ್ತಿದ್ದೇನೆ. ಸದ್ಯ ನಾನು ಎಂಪಿ ಕೆಲಸ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಉದಾಸಿ ಹೇಳಿದ್ದಾರೆ.

  • ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

    ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

    – ಸಮಸ್ಯೆ ಹೇಳಲು ಬಂದ ವ್ಯಕ್ತಿಯನ್ನ ತಳ್ಳಿದ ಎಂಪಿ

    ಹಾವೇರಿ: ಸಮಸ್ಯೆ ಹೇಳಲು ಬಂದಿದ್ದ ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ನವೆಂಬರ್ 20ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಭೂಮಿ ಪೂಜೆಗೆ ಸಂಸದ ಶಿವಕುಮಾರ್ ಉದಾಸಿ ಆಗಮಿಸಿದ್ದರು. ಪೂಜೆ ಬಳಿಕ ಸಂಸದರ ಬಳಿ ಗ್ರಾಮದ ಶೇಖಪ್ಪ ಎಂಬವರು ತಮ್ಮ ಏರಿಯಾದ ಸಮಸ್ಯೆ ಹೇಳಲು ದೌಡಾಯಿಸಿದ್ದರು. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಬಳಿ ಸಮಸ್ಯೆ ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿ ಶಿವಕುಮಾರ್ ಉದಾಸಿ, ರಸ್ತೆ ಬಂದಾಗ ಬರ್ತಿಯಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಬಂದದ್ದು ಆಯ್ತು, ನೋಡ್ಕೊಂಡದ್ದು ಆಯ್ತು ಎಂದು ಶೇಖರಪ್ಪ ಪ್ರತ್ಯುತ್ತರ ನೀಡಿದರು.

    ಗ್ರಾಮಸ್ಥನ ತಿರುಗೇಟಿಗೆ ಕೋಪಗೊಂಡ ಸಂಸದರು ಆಯ್ತು ನೋಡ್ಕೋ ಹೋಗ್ ಎಂದು ಎಡಗೈಯಿಂದ ಗ್ರಾಮಸ್ಥನನ್ನ ನೂಕಿದರು. ಗ್ರಾಮಸ್ಥನನ್ನು ನೂಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

  • ದೇಶಕ್ಕೆ ಅಚ್ಚೇ ದಿನ್ ಆಗಿದೆ, ಕಾಂಗ್ರೆಸ್‍ಗೆ ಮಾತ್ರ ಆಗಿಲ್ಲ: ಶಿವಕುಮಾರ ಉದಾಸಿ ಕಿಡಿ

    ದೇಶಕ್ಕೆ ಅಚ್ಚೇ ದಿನ್ ಆಗಿದೆ, ಕಾಂಗ್ರೆಸ್‍ಗೆ ಮಾತ್ರ ಆಗಿಲ್ಲ: ಶಿವಕುಮಾರ ಉದಾಸಿ ಕಿಡಿ

    ವಿಜಯಪುರ: ಇಡೀ ದೇಶಾದ್ಯಂತ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಯಾವ ರೀತಿ ರಾಜನೀತಿ ಮಾಡ್ತಿದ್ದಾರೆ ಎನ್ನುವುದು ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಮಾತ್ರ ಅಚ್ಚೇ ದಿನ್ ಆಗಿಲ್ಲ. ಸಾರ್ವಜನಿಕ ಪ್ರಕಾರ ಅಚ್ಚೇ ದಿನ್ ಆಗಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಿಗಜಿಣಗಿ ಜಗಳದ ವಿಚಾರ ಪ್ರತಿಕ್ರಿಯಿಸಿ, ಎಲ್ಲಾ ಕ್ಷೇತ್ರದಲ್ಲಿ ರಾಜಕಾರಣ ಇದ್ದೇ ಇರುತ್ತೆ. ಪಾರ್ಲಿಮೆಂಟರಿ ಬೋರ್ಡ್ ಯಾರಿಗೆ ಟಿಕೆಟ್ ನೀಡಬೇಕು ಅಂತ ನಿರ್ಣಯ ಮಾಡುತ್ತೆ. ಪಕ್ಷದ ಮಾನದಂಡಗಳ ಆಧಾರದ ಮೇಲೆ ಟಿಕೆಟ್ ನೀಡುತ್ತಾರೆ ಎಂದರು. ಬಳಿಕ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಆಡಳಿತಕ್ಕೆ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೆಲವೇ ಕೆಲವು ಜನರ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗುತ್ತೆ. 2014ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇತ್ತು. ಆದ್ರೆ ಲೋಕಸಭೆಯಲ್ಲಿ ಕಡಿಮೆ ಸೀಟು ಬಂದಿದೆ. ಯಾರನ್ನು ಗೆಲ್ಲಿಸಬೇಕು ಅಂತ ಜನರಿಗೆ ಗೊತ್ತಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯ ಸಮೀಕ್ಷೆಗಳಿಗೆ ಟಾಂಗ್ ನೀಡಿದ್ದಾರೆ.