Tag: shivakarthikeyan

  • ಶಿವಕಾರ್ತಿಕೇಯನ್ ಹೊಸ ಸಿನಿಮಾಗೆ ‘ಮದರಾಸಿ’ ಟೈಟಲ್ ಫಿಕ್ಸ್

    ಶಿವಕಾರ್ತಿಕೇಯನ್ ಹೊಸ ಸಿನಿಮಾಗೆ ‘ಮದರಾಸಿ’ ಟೈಟಲ್ ಫಿಕ್ಸ್

    ಮರನ್ ಬ್ಲಾಕ್ ಬಸ್ಟರ್ ಸಕ್ಸಸ್ ಬಳಿಕ ಶಿವಕಾರ್ತಿಕೇಯನ್ (Shivakarthikeyan) ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರ ಮದರಾಸಿ (Madrasi) ಎಂಬ ಹೊಸ ಚಿತ್ರ ಘೋಷಣೆಯಾಗಿದೆ. ಮೊದಲ ಬಾರಿಗೆ ಶಿವಕಾರ್ತಿಕೇಯನ್ ಎ.ಆರ್.ಮುರುಗದಾಸ್ (Murugadoss) ಜೊತೆ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹೊಸ ಚಿತ್ರಕ್ಕೆ ಮದರಾಸಿ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ..

    ಇಂದು ಶಿವಕಾರ್ತಿಕೇಯನ್ ಜನ್ಮದಿನ. ಅವರ ಹುಟ್ಟುಹಬ್ಬದ ಪ್ರಯುಕ್ತ ಮದರಾಸಿ ಸಿನಿಮಾದ ಆಕ್ಷನ್ ಪ್ಯಾಕ್ಡ್ ಗ್ಲಿಂಪ್ಸ್ ಅನಾವರಣ ಮಾಡಲಾಗಿದೆ. ಮಾಸ್ ಅವತಾರದಲ್ಲಿ ಶಿವಕಾರ್ತಿಕೇಯನ್ ಅಬ್ಬರಿಸಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಸುದೀಪ್ ಎಲಾಮನ್ ಕ್ಯಾಮೆರಟ ವರ್ಕ್, ರಾಕ್ ಸ್ಟಾರ್ ಅನಿರುದ್ದ್ ರವಿಚಂದರ್ ಗ್ಲಿಂಪ್ಸ್ ಶ್ರೀಮಂತಿಕೆ ಹೆಚ್ಚಿಸಿದೆ.

    ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಸಾಥ್ ಕೊಟ್ಟಿದ್ದಾರೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಅಭಿನಯಿಸಿದ್ದಾರೆ.  ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್ ಮದರಾಸಿ ಚಿತ್ರಕ್ಕಿದೆ.

  • ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿದ ತಲೈವಾ, ಶಿವಕಾರ್ತಿಕೇಯನ್

    ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿದ ತಲೈವಾ, ಶಿವಕಾರ್ತಿಕೇಯನ್

    ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ (D Gukesh) ಇಂದು (ಡಿ.26) ರಜನಿಕಾಂತ್ (Rajinikanth) ಮತ್ತು ‘ಅಮರನ್’ ನಟ ಶಿವಕಾರ್ತಿಕೇಯನ್ (Sivakarthikeyan) ಅವರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ಹೆಮ್ಮೆ ತಂದಿರುವ ಗುಕೇಶ್ ಸಾಧನೆಯನ್ನು ಕೊಂಡಾಡಿ ತಲೈವಾ ಮತ್ತು ಶಿವಕಾರ್ತಿಕೇಯನ್ ಶುಭಹಾರೈಸಿದ್ದಾರೆ.

    ಗುಕೇಶ್ ತಮ್ಮ ಪೋಷಕರೊಂದಿಗೆ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ತಲೈವಾ ಗುಕೇಶ್‌ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ ತಲೈವಾ. ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ‘ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್’ ಎಂದು ಗುಕೇಶ್ ಬರೆದುಕೊಂಡಿದ್ದಾರೆ.

    ಬಳಿಕ ‘ಅಮರನ್’ ನಟ ಶಿವಕಾರ್ತಿಕೇಯನ್ ಅವರ ನಿವಾಸಕ್ಕೆ ಗುಕೇಶ್ ಫ್ಯಾಮಿಲಿ ಭೇಟಿ ಮಾಡಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ (Chess Champion) ಆಗಿ ಗೆದ್ದ ಖುಷಿಯನ್ನು ನಟನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಳಿಕ ಗುಕೇಶ್‌ಗೆ ದುಬಾರಿ ವಾಚ್‌ವೊಂದನ್ನು ಶಿವಕಾರ್ತಿಕೇಯನ್ ಉಡುಗೊರೆಯಾಗಿ ನೀಡಿದ್ದಾರೆ.

  • ರಜನಿ ಬಯೋಪಿಕ್: ಧನುಷ್ ಆಸೆ ಈಡೇರೋದು ಅನುಮಾನ

    ರಜನಿ ಬಯೋಪಿಕ್: ಧನುಷ್ ಆಸೆ ಈಡೇರೋದು ಅನುಮಾನ

    ಹೆಸರಾಂತ ನಟ ರಜನಿಕಾಂತ್  (Rajinikanth) ಅವರ ಜೀವನವನ್ನು (Biopic) ಆಧರಿಸಿದ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಂತೆಯೇ , ಈ ಸಿನಿಮಾದಲ್ಲಿ ರಜನಿ ಪಾತ್ರ ಮಾಡೋರು ಯಾರು ಎನ್ನುವ ಚರ್ಚೆ ಶುರುವಾಗಿದೆ. ರಜನಿಕಾಂತ್ ಅವರ ಬಯೋಪಿಕ್ ಬಂದರೆ, ಅವರ ಪಾತ್ರವನ್ನು ನಾನು ಮಾಡುತ್ತೇನೆ ಎಂದು ಧನುಷ್ (Dhanush) ಹೇಳಿದ್ದರು. ಸದ್ಯದ ಪರಿಸ್ಥಿತಿಯಂತೆ ಅವರಿಗೆ ಆ ಪಾತ್ರ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

    ತಮಿಳು ಸಿನಿಮಾ ರಂಗದಲ್ಲಿ ಓಡಾಡುತ್ತಿರುವ ಹೆಸರಿನ ಪ್ರಕಾರ ರಜನಿ ಅವರ ಪಾತ್ರವನ್ನು ಶಿವಕಾರ್ತಿಕೇಯನ್ (Shivakarthikeyan) ನಿರ್ವಹಿಸಲಿದ್ದಾರಂತೆ. ಹಾಗಾಗಿ ಧನುಷ್ ಅವರಿಗೆ ಈ ಪಾತ್ರ ಸಿಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಈ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳನ್ನು ತಯಾರಿಸಿರುವ ಸಾಜಿದ್ ನಾಡಿಯಾದ್ವಾಲ್ (Sajid Nadiadwal) ಅವರು ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.

    ಹಲವಾರು ವರ್ಷಗಳಿಂದ ರಜನಿ ಬಯೋಪಿಕ್ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಆದರೆ, ಯಾವುದೂ ನಿಕ್ಕಿ ಆಗಿರಲಿಲ್ಲ. ಈ ಬಾರಿ ನಿರ್ಮಾಪಕರ ಹೆಸರೂ ಬಹಿರಂಗ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರ ಬರಬಹುದು. ಅದು ಹಲವು ಭಾಷೆಗಳಲ್ಲೂ ನಿರ್ಮಾಣ ಆಗಬಹುದು.

     

    ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರು ಮಾತ್ರ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರು, ತಾಂತ್ರಿಕ ವರ್ಗ ಹಾಗೂ ರಜನಿ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಹುದು.

  • SK 23: ಶಿವಕಾರ್ತಿಕೇಯನ್‌ಗೆ ಮೃಣಾಲ್ ಠಾಕೂರ್ ಅಲ್ಲ, ರುಕ್ಮಿಣಿ ನಾಯಕಿ

    SK 23: ಶಿವಕಾರ್ತಿಕೇಯನ್‌ಗೆ ಮೃಣಾಲ್ ಠಾಕೂರ್ ಅಲ್ಲ, ರುಕ್ಮಿಣಿ ನಾಯಕಿ

    ‘ಸಪ್ತಸಾಗರದಾಚೆ ಎಲ್ಲೋ’ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್ (Sivakarthikeyan) ನಟನೆಯ ಸಿನಿಮಾಗೆ ಕನ್ನಡದ ನಟಿ ರುಕ್ಮಿಣಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಸಿನಿಮಾ ಮಾಡುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ಬೆಂಗಳೂರಿನ ಬೆಡಗಿ ರುಕ್ಮಿಣಿಗೆ ಪರಭಾಷೆಗಳಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ವಿಜಯ್ ಸೇತುಪತಿ ಚಿತ್ರದಲ್ಲಿ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿರುವಾಗಲೇ ಮತ್ತೊಂದು ಗೋಲ್ಡನ್ ಚಾನ್ಸ್ ಕನ್ನಡದ ನಟಿಗೆ ಸಿಕ್ಕಿದೆ. ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ಮತ್ತು ಶಿವಕಾರ್ತಿಕೇಯನ್ ಕಾಂಬಿನೇಷನ್ ಸಿನಿಮಾದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ.

    ಶಿವಕಾರ್ತಿಕೇಯನ್ ನಟನೆಯ 23ನೇ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಸಮಾರಂಭ ನಡೆದಿದೆ. ರುಕ್ಮಿಣಿ ವಸಂತ್, ‘ಜೈಲರ್’ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಈ ಅದ್ಭುತ ತಂಡದಲ್ಲಿ ನಾನು ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳು. ಶೂಟಿಂಗ್‌ಗಾಗಿ ಎದುರು ನೋಡುತ್ತಿದ್ದೇನೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Rukmini Vasanth (@rukmini_vasanth)

    ಇದೊಂದು ಆ್ಯಕ್ಷನ್ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಶಿವಕಾರ್ತಿಕೇಯನ್ ಮತ್ತು ರುಕ್ಮಿಣಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಕೆಲದಿನಗಳ ಹಿಂದೆ ಮೃಣಾಲ್ ಠಾಕೂರ್ ನಾಯಕಿ ಎನ್ನಲಾಗಿತ್ತು. ಆದರೆ ನಾಯಕಿ ಸ್ಥಾನಕ್ಕೆ ಕನ್ನಡದ ನಟಿಗೆ ಚಿತ್ರತಂಡ ಮಣೆ ಹಾಕಿರುವುದಕ್ಕೆ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ:‘ರಾಜಧಾನಿ ಎಕ್ಸ್ ಪ್ರೆಸ್’ ಚಿತ್ರದಲ್ಲಿ ಸಿಎಂ ಜಗನ್ ವಿಲನ್?: ಕೋರ್ಟ್ ಮೆಟ್ಟಿಲೇರಿದ ವಿವಾದ

    ಶ್ರೀಮುರಳಿ ಜೊತೆ ‘ಬಘೀರ’, ಶಿವಣ್ಣ ಜೊತೆ ‘ಭೈರತಿ ರಣಗಲ್’, ವಿಜಯ್ ಸೇತುಪತಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರುಕ್ಮಿಣಿ ಕೈಯಲ್ಲಿವೆ.

  • ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ : ಶಿವಕಾರ್ತಿಕೇಯನ್ ಹೀರೋ

    ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ : ಶಿವಕಾರ್ತಿಕೇಯನ್ ಹೀರೋ

    ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ (Shivakarthikeyan) ತುಂಬಾ ಪರಿಶ್ರಮಪಟ್ಟು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದವರು. ರಿಯಾಲಿಟಿ ಶೋಗಳಿಂದ ಗುರುತಿಸಿಕೊಂಡು ನಂತರ ಕಾಲಿವುಡ್ ನಲ್ಲಿ ಕಾಮಿಡಿಯನ್ ಆಗಿ, ನಟನಾಗಿ, ಬರಹಗಾರನಾಗಿ, ನಿರ್ಮಾಪಕನಾಗಿ ತಮ್ಮದೇ ರೀತಿಯಲ್ಲಿ ಛಾಪೂ ಮೂಡಿಸಿದ್ದಾರೆ. ಮಾಸ್ ಆಗಿ ತಮಿಳು ಸಿನಿಪ್ರಿಯರನ್ನು ರಂಜಿಸುತ್ತಿರುವ ಶಿವಕಾರ್ತಿಕೇಯನ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ‘ಅಯಲಾನ್’ (Ayalaan) ಬಿಡುಗಡೆಗೆ (released) ಹೊಸ್ತಿಲಿನಲ್ಲಿ ನಿಂತಿದೆ.

    ಆರ್.ರವಿಕುಮಾರ್ ಕಥೆ ಬರೆದು ನಿರ್ದೇಶಿಸುತ್ತಿರುವ ಅಯಲಾನ್ ಸಿನಿಮಾ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವದಾದ್ಯಂತ ಚಿತ್ರ ರಿಲೀಸ್ ಆಗಲಿದೆ. 24ಎಎಂ ಸ್ಟುಡಿಯೋಸ್ ನಡಿ ಆರ್. ಡಿ. ರಾಜ ಅದ್ಧೂರಿಯಾಗಿ ನಿರ್ಮಿಸಿರುವ ಫ್ಯಾಂಟಸಿ ಎಂಟರ್ ಟೈನರ್ ಅಲಯಾನ್ ಸಿನಿಮಾವನ್ನು ಕೆಜೆಆರ್ ಸ್ಟುಡಿಯೋನ ಕೋಟಪಾಡಿ ಜೆ ರಾಜೇಶ್ ವರ್ಲ್ಡ್ ವೈಡ್ ಬಿಡುಗಡೆ ಮಾಡಲಿದೆ. ಇದನ್ನೂ ಓದಿ:ತಮಿಳಿನಲ್ಲಿ ಸದ್ದು ಮಾಡುತ್ತಿದ್ದಾರೆ ಕನ್ನಡದ ಮತ್ತೋರ್ವ ನಟ ಸರ್ದಾರ್ ಸತ್ಯ

    ಹೇಳಿಕೇಳಿ ಅಲಯಾನ್ ಫ್ಯಾಂಟಿಸಿ ಎಂಟಟ್ರೈನರ್ ಸಿನಿಮಾ. ಹೀಗಾಗಿ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿಯಾಗದೇ ಅದ್ಭುತ ಸಿಜಿ ವರ್ಕ್ ಸಿನಿಮಾದಲ್ಲಿರಲಿದೆ. ಭಾರತೀಯ ಚಿತ್ರರಂಗದಲ್ಲಿ 4500+ VFX ಶಾಟ್‌ಗಳನ್ನು ಹೊಂದಿರುವ ಮೊದಲ ಪೂರ್ಣ-ಉದ್ದದ ಲೈವ್-ಆಕ್ಷನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಅಲಯಾನ್ ಪಾತ್ರವಾಗಿದೆ. ಅದ್ಭುತ ಸಿಜಿ ಕೆಲಸ ಹಿಂದಿನ ಕೃರ್ತ ಫ್ಯಾಂಟಮ್ FX ಸಂಸ್ಥೆ. ಹಾಲಿವುಡ್ ಹಲವು ಚಿತ್ರಗಳಿಗೆ ಸಿಜಿ ವರ್ಕ್ ಮಾಡಿರುವ ಈ ಕಂಪನಿ ಈಗ ಅಲಯಾನ್ ಚಿತ್ರಕ್ಕೂ ಕೈ ಜೋಡಿಸಿದೆ. ಇನ್ನೂ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಗೆ ಜೋಡಿಯಾಗಿ ಕನ್ನಡದ ಗಿಲ್ಲಿ ಸಿನಿಮಾ ಬ್ಯೂಟಿ ರಕುಲ್ ಪ್ರೀತ್ ಸಿಂಗ್  (Rakul Preet Singh) ನಟಿಸಿದ್ದು, ಕರುಣಾಕರನ್, ಯೋಗಿ ಬಾಬು, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಬಾನುಪ್ರಿಯಾ, ಬಾಲಸರವಣನ್ ಸೇರಿದಂತೆ ಹಲವರು ತಾರಾಬಳಗ ಚಿತ್ರದ ಭಾಗವಾಗಿದ್ದಾರೆ. ಆಸ್ಕರ್ ವಿಜೇತ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಅಲಯಾನ್ ಚಿತ್ರಕ್ಕಿದೆ.

  • `ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    `ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    ಜನಿಕಾಂತ್ (Rajanikanth) 169ನೇ ಚಿತ್ರ `ಜೈಲರ್’ (Jailer) ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ(Shivarajkumar) ಕೂಡ ತಲೈವಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಚಿತ್ರದ ಸೆಟ್‌ನಲ್ಲಿ ಶಿವನನ್ನು ಶಿವಕಾರ್ತಿಕೇಯನ್ ಭೇಟಿಯಾಗಿದ್ದಾರೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ `ಜೈಲರ್’ (Jailer)ಸಿನಿಮಾದಲ್ಲಿ ರಜನಿಕಾಂತ್ ಜೊತೆ ಕನ್ನಡದ ಸೂಪರ್ ಹೀರೋ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣನ ಫಸ್ಟ್ ಲುಕ್ ಸಖತ್ ಸದ್ದು ಮಾಡಿತ್ತು. ಈ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಶಿವನನ್ನು ತಮಿಳಿನ ಹೀರೋ ಶಿವಕಾರ್ತಿಕೇಯನ್ (Sivakarthikeyan) ಮೀಟ್ ಮಾಡಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    `ಜೈಲರ್’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಲೈವಾ ಬಹುನಿರೀಕ್ಷಿತ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಇರಲಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಗುಟ್ಟುನ್ನ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಶಿವಣ್ಣನನ್ನು ಮೀಟ್ ಆಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಎಂಗೇಜ್ ಆದ ಖುಷಿಯಲ್ಲಿ ಗೆಳೆಯನ ಜೊತೆ ಆಮೀರ್‌ ಖಾನ್‌ ಪುತ್ರಿಯ ಲಿಪ್‌ಲಾಕ್

    ತಲೈವಾ 169ನೇ ಸಿನಿಮಾವಾಗಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]