Tag: shivajinagar

  • ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಮಾಡಿ ಅಂತಾ ಶಿಫಾರಸು ಮಾಡ್ತೇನೆ: ರಿಜ್ವಾನ್ ಅರ್ಷದ್

    ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಮಾಡಿ ಅಂತಾ ಶಿಫಾರಸು ಮಾಡ್ತೇನೆ: ರಿಜ್ವಾನ್ ಅರ್ಷದ್

    ಬೆಂಗಳೂರು: ನಾನು ನಾಳೆಯೇ ಶಿವಾಜಿನಗರ (Shivajinagar) ಸೇಂಟ್ ಮೇರಿಸ್ (St Mary) ಮೆಟ್ರೋ ನಿಲ್ದಾಣ ಮಾಡಿ ಎಂದು ಶಿಫಾರಸು ಮಾಡುತ್ತೇನೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಹೇಳಿದ್ದಾರೆ.

    ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು ಇಡುವ ವಿಚಾರವಾಗಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಇನ್ನೂ ಶಿಫಾರಸು ಮಾಡಿಲ್ಲ. ಮೊನ್ನೆ ತಾನೇ ಶಿವಾಜಿನಗರ ಹಾಗೂ ಕ್ರೈಸ್ತ ಸಮುದಾಯದ ಬಹಳಷ್ಟು ಜನ ಮನವಿ ಮಾಡಿದ್ದಾರೆ. ಸೇಂಟ್ ಮೇರಿ ಮೆಟ್ರೋ ನಿಲ್ದಾಣ ಅಂತಾ ನಾಮಕರಣ ಮಾಡಿ ಅಂತಾ ಕೇಳಿಕೊಂಡಿದ್ದಾರೆ. ಆಗ ಸಿಎಂ ಸ್ಥಳೀಯ ಶಾಸಕರು ಏರಿಯಾ ಜನರಿಗೆ ಮಾತನಾಡಿ ಶಿಫಾರಸು ಕೊಡಲಿ. ಆ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತೇನೆ ಎಂದಿದ್ದಾರೆ. ನಾನು ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಎಂದು ಮಾಡಿ ಅಂತ ಶಿಫಾರಸು ಮಾಡುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಶಿವಾಜಿನಗರ ಮೆಟ್ರೋ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸಿಎಂ ವಿರೋಧ

    ಶಿವಾಜಿನಗರ ಅನ್ನೋ ಹೆಸರು ತೆಗೆಯುತ್ತಿಲ್ಲ. ಶಿವಾಜಿ ಮಹಾರಾಜ ಗ್ರೇಟ್ ಮ್ಯಾನ್. ಇವರೆಲ್ಲಾ ಬಂದು ಅವರ ಹೆಸರು ಕಾಪಾಡಬೇಕಾ? ಶಿವಾಜಿನಗರ ಐತಿಹಾಸಿಕ ಪ್ರದೇಶ, ನನಗೆ ಹೆಮ್ಮೆಯಿದೆ. ಶಿವಾಜಿನಗರ-ಸೇಂಟ್ ಮೇರಿಸ್ ಬೆಸಿಲಿಕಾ ಅಂತಾ ಹೆಸರಲ್ಲಿದೆ. ಶಿವಾಜಿನಗರದಲ್ಲಿ ಎರಡು-ಮೂರು ಮೆಟ್ರೋ ನಿಲ್ದಾಣಗಳಿವೆ. ಒಂದು ಶಿವಾಜಿನಗರ-ಬೊಂಬು ಬಜಾರ್, ಇನ್ನೊಂದು ಶಿವಾಜಿ ನಗರ-ಸೇಂಟ್ ಬೆಸಲಿಕಾ ಅಂತಾ ಬರಲಿದೆ. ಬಾಲಗಂಗಾಧರ ಸ್ವಾಮೀಜಿ ಹೆಸರು ಸಹ ಇದೆ. ಜನ ಕೂಡಾ ಅದೇ ಹೇಳಿದ್ದಾರೆ. ಎರಡು-ಮೂರು ಸ್ಟೇಷನ್ ಇರುವುದರಿಂದ ಗುರುತಿಗಾಗಿ ಹೇಳಿದ್ದೇವೆ. ಸೇಂಟ್ ಬೆಸಲಿಕಾ ಮೆಟ್ರೋ ಸ್ಟೇಷನ್ ಹೆಸರಿಗೆ ವಿರೋಧ ಮಾಡೋರು ಯಾರೂ ಶಿವಾಜಿನಗರದಲ್ಲಿ ಇರೋದಿಲ್ಲ. ಎಷ್ಟು ವಿರೋಧ ಮಾಡುತ್ತಾರೋ ಅಷ್ಟು ಜೋರಾಗಿ ಶಿಫಾರಸು ಮಾಡುತ್ತೇನೆ. ನಾಳೆಯೇ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ಮೋದಿ ಭೇಟಿ – 1,200 ಕೋಟಿ ನೆರವು ಘೋಷಣೆ

  • ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಬೆಂಗಳೂರು: ಹನುಮಧ್ವಜ (Hanuma Flag) ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು (Keragodu Mandya) ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜ ಗಲಾಟೆ ಕಾಲಿಟ್ಟಿದೆ.

    ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ್ರು. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದ ಜನರು ಪ್ರಶ್ನೆ ಮಾಡ್ತಾ ಇದ್ರು. ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ರು.

    ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ರು. ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲದೇ ಚಾಂದಿನಿ ಚೌಕ್ ನ ಸರ್ಕಲ್ ಗೆ ಪೂರ ತ್ರಿವರ್ಣ ಧ್ವಜ ಹಾರಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಅಕ್ಮಲ್ ಎಂಬವರು ಪ್ರತಿಕ್ರಿಯೆ ನೀಡಿದ್ದು, ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

    ಘಟನೆ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‍ಸಿ ರವಿಕುಮಾರ್ ಕಿಡಿಕಾರಿದ್ದು, ಹನುಮ ಧ್ವಜ ತೆಗೆಸಿದ್ರಿ. ಇದಕ್ಕೆ ಹೇಗೆ ಅನುಮತಿ ಕೊಟ್ಟಿರಿ. ಇದು ಮುಲ್ಲಾ, ಮೌಲ್ವಿ ಸರ್ಕಾರ ಎಂದು ಟೀಕಿಸಿದ್ರು. ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜ ಇಳಿಸಿರೋದನ್ನ ಬಿಜೆಪಿ ಖಂಡಿಸಲಿದೆ. ಹಿಂದೂ ದೇವಸ್ಥಾನಗಳ ಹಣ ಬೇಕು, ಹಿಂದೂ ಎಂಎಲ್‍ಎ ಬೇಕು, ಹಿಂದೂ ಎಂಪಿ ಬೇಕು. ಆದರೆ ಹಿಂದೂ ದೇವರ ಧ್ವಜ ಹಾರಿಸೋದು ಬೇಡ ಅಂತಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 12 ಪ್ರಶ್ನೆ ಕೇಳ್ತಿದ್ದೀವಿ ಎಂದರು.

  • ಶಿವಾಜಿನಗರದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗೆ ಚಾಕು ಇರಿತ – ಕೈಗೆ ಬಿತ್ತು 26 ಹೊಲಿಗೆ

    ಶಿವಾಜಿನಗರದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗೆ ಚಾಕು ಇರಿತ – ಕೈಗೆ ಬಿತ್ತು 26 ಹೊಲಿಗೆ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ನಿಜಕ್ಕೂ ಹದಗೆಟ್ಟಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ನಗರದಲ್ಲಿ ಆರೋಪಿಯೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೇ ಚಾಕು ಇರಿದ ಘಟನೆಯಿಂದ ಈ ಪ್ರಶ್ನೆ ಈಗ ಎದ್ದಿದೆ.

    ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿತವಾಗಿರುವ ಘಟನೆ ಶಿವಾಜಿನಗರದಲ್ಲಿ (Shivajinagar) ನಡೆದಿದೆ. ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾಗೆ ಚಾಕು ಇರಿತವಾಗಿದ್ದು, ಆರೋಪಿಯ ಕೃತ್ಯದಿಂದ ಅವರ ಕೈಗೆ ಬರೋಬ್ಬರಿ 26 ಹೊಲಿಗೆ ಬಿದ್ದಿದೆ.

    ಹಸನ್ ಖಾನ್ ಎಂಬ ಆರೋಪಿಯಿಂದ ಚಾಕು ಇರಿತವಾಗಿದೆ. ಸಿಸಿಬಿ ಒಸಿಡಬ್ಲ್ಯು ಅಧಿಕಾರಿಗಳು ಹಸನ್ ಖಾನ್‌ನನ್ನು ಬಂಧಿಸುವ ಪ್ರಯತ್ನದಲ್ಲಿದ್ದರು. ಹಸನ್ ಖಾನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆ ಸಿಸಿಬಿ ಪೊಲೀಸರು  ಶಿವಾಜಿ ನಗರದ ಆರೋಪಿಯ ಮನೆಗೆ ಬಂದಿದ್ದರು. ಅದೇ ಏರಿಯಾದಲ್ಲಿ ವಾಸವಾಗಿದ್ದ ಸದಾಶಿವನಗರ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಖಾನ್ ಕೂಡಾ ಸಿಸಿಬಿ ಅಧಿಕಾರಿಗಳಿಗೆ ಸಹಾಯ ಮಾಡಲು ಹಾಗೂ ಆರೋಪಿಯನ್ನು ಹಿಡಿಯಲು ಹೋಗಿದ್ದರು. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ

    ಹೆಚ್‌ಕೆಪಿ ದರ್ಗಾದ ಸರ್ಕಲ್‌ನ ಗೂಡ್ಸ್ ಆಟೋಸ್ಟ್ಯಾಂಡ್ ಬಳಿ ನಿಂತಿದ್ದ ಹಸನ್ ಖಾನ್‌ನನ್ನು ಹಿಡಿಯಲು ಹೋದಾಗ ಸೈಯದ್ ಸಮೀವುಲ್ಲಾಗೆ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರ ಎದುರೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಸಮೀವುಲ್ಲಾ ಸ್ಥಳೀಯರ ನೆರವಿನಿಂದ ಬಚಾವ್ ಆಗಿದ್ದಾರೆ.

    ಇಂತಹ ಘಟನೆಗಳಿಂದ ನಗರದಲ್ಲಿ ಪೊಲೀಸರು ಎನ್ನುವ ಭಯವೇ ಇಲ್ಲ ಎಂಬಂತಾಗಿದೆ. ಪೊಲೀಸರಿಗೇ ಹೀಗಾದರೆ, ಜನಸಾಮಾನ್ಯರ ಪರಿಸ್ಥಿತಿ ಇನ್ನು ಹೇಗೆ ಎನ್ನುತ್ತಿದ್ದಾರೆ ಜನ. ಸದ್ಯ ಶಿವಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ – ನಾಲ್ವರು ಸ್ಥಳದಲ್ಲೇ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

    ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

    ಬೆಂಗಳೂರು: ಬಹು ಮಹಡಿ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ (Water Tank) ಹಾಗೂ ಗೋಡೆ ಕುಸಿದು ಬಿದ್ದು ಅಮಾಯಕರಿಬ್ಬರು ಸಾವನ್ನಪ್ಪಿರುವ ಘಟನೆ ಶಿವಾಜಿ ನಗರ (Shivajinagar) ಬಸ್ ನಿಲ್ದಾಣದಲ್ಲಿ (Bus Stand) ನಡೆದಿದೆ.

    ಶಿವಾಜಿನಗರ ಬಸ್ ನಿಲ್ದಾಣದಲ್ಲಿರುವ ಓಕ್ ಫರ್ನೀಚರ್ ಕಟ್ಟಡದ ಮೇಲೆ 5 ಸಾವಿರ ಲೀಟರ್‌ನ ಎರಡು ನೀರಿನ ಟ್ಯಾಂಕ್ ಇರಿಸಿಲಾಗಿತ್ತು. ಬುಧವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ನೀರಿನ ಟ್ಯಾಂಕ್ ಇರಿಸಿದ್ದ ಗೋಡೆ (Wall) ಕುಸಿದು ಬಿದ್ದ ಪರಿಣಾಮ ನೀರಿನ ಟ್ಯಾಂಕ್‌ಗಳು ನಾಲ್ಕನೇ ಮಹಡಿಯಿಂದ ಕೆಳಗಡೆ ಬಿದ್ದಿವೆ. ಇದನ್ನೂ ಓದಿ: ಜಾಮೀನಿಗಾಗಿ ವಕೀಲನ ಕಿಡ್ನಾಪ್ – ರಾತ್ರಿ ಇಡೀ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ರೌಡಿಶೀಟರ್

    ಟ್ಯಾಂಕ್ ಹಾಗೂ ಗೋಡೆ ಬಿದ್ದ ರಭಸಕ್ಕೆ ಕಟ್ಟಡದ ಕೆಳಗಡೆ ಇದ್ದ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅದೇ ಸಮಯಕ್ಕೆ ಎಗ್ ರೈಸ್ ಸವಿಯಲು ಬಂದಿದ್ದ ಮೂವರ ಮೇಲೆ ಟ್ಯಾಂಕ್ ಹಾಗೂ ಗೋಡೆ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟಿರುವ ಇಬ್ಬರಲ್ಲಿ ಒಬ್ಬರು ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಮತ್ತೊಬ್ಬರು ಗ್ರಾಹಕ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್‌ ನಡುವೆ ಸಂಚಾರ

    ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯರ ಸಹಾಯದಿಂದ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಕಟ್ಟಡದ ಮಾಲೀಕ ಟ್ಯಾಂಕ್ ಇಡಲು ಅವೈಜ್ಞಾನಿಕವಾಗಿ ಕಟ್ಟಡ ಕಟ್ಟಿದ್ದರ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಕಂಡು ಬಂದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

    ಸದ್ಯ ನಿರ್ಲಕ್ಷ್ಯ ಆರೋಪದಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಟ್ಟಡದ ಮಾಲೀಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಂಪಿ ಬೀದಿ ಬದಿ ವ್ಯಾಪಾರಿಯ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೆಹರು ಸ್ಕೂಲ್ ಓಪನ್‍ಗೆ ಮಧ್ಯಂತರ ಆದೇಶ- ಪೋಷಕರಿಗೆ ಹೈಕೋರ್ಟ್ ರಿಲೀಫ್

    ನೆಹರು ಸ್ಕೂಲ್ ಓಪನ್‍ಗೆ ಮಧ್ಯಂತರ ಆದೇಶ- ಪೋಷಕರಿಗೆ ಹೈಕೋರ್ಟ್ ರಿಲೀಫ್

    ಬೆಂಗಳೂರು: ಐಎಂಎ (IMA) ನಡೆಸುತ್ತಿದ್ದ ಸ್ಕೂಲ್‍ಗೆ ಇಂದು ಅಧಿಕೃತವಾಗಿ ಬೀಗ ಬಿದ್ದಿದೆ. ಸ್ಕೂಲ್ ಆಸ್ತಿ ಮುಟ್ಟುಗೋಲು ಪ್ರಶ್ನಿಸಿ ಪೋಷಕರು ಹೈಕೋರ್ಟ್ (HighCourt) ಮೊರೆ ಹೋಗಿದ್ದಾರೆ. ಶಾಲೆ ಸೀಝ್ ಮಾಡುವಾಗ ಆವರಣದಲ್ಲಿ ಪೋಷಕರ ಕಣ್ಣೀರ ಕೋಡಿಯೇ ಹರಿದಿದ್ದು, ಸ್ಕೂಲ್ ಕ್ಲೋಸ್ ಮಾಡದಂತೆ ಗಲಾಟೆ ಮಾಡಿದ್ದಾರೆ.

    ಬೆಂಗಳೂರಿನ ಶಿವಾಜಿನಗರದ ನೆಹರು ಸ್ಕೂಲ್‍ (Nehru School) ನಲ್ಲಿ, ದಯವಿಟ್ಟು ನಿಮಗೆ ಕೈಮುಗಿಯುತ್ತೇವೆ ಶಾಲೆಗೆ ಬೀಗ ಹಾಕಬೇಡಿ. ನಮ್ಮ ಮಕ್ಕಳನ್ನು ಬೀದಿಗೆ ತರಬೇಡಿ.. ಆರು ತಿಂಗಳು ಕಾಲಾವಕಾಶ ಕೊಡಿ. ಹೀಗೆ ಕಣ್ಣೀರು ಹಾಕಿಕೊಂಡು ಶಾಲಾ ಆವರಣದಲ್ಲಿ ಪೋಷಕರು (Parents) ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಇನ್ನೊಂದಡೆ ಇದ್ಯಾವುದನ್ನು ಕೇಳದೇ ಕಂದಾಯ ಅಧಿಕಾರಿಗಳು ಶಾಲೆ ಸೀಝ್ ಮಾಡಿ ಬೀಗ ಜಡಿದರು.

    ಐಎಂಎ ನಡೆಸುತ್ತಿದ್ದ ಸ್ಕೂಲ್ ಅನ್ನು ಇಂದು ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಂಡು ಬೀಗ ಹಾಕಲಾಯ್ತು. ಆದ್ರೆ ಪೋಷಕರು ಇದರ ವಿರುದ್ಧ ನಮ್ಗೆ ಮಾಹಿತಿ ನೀಡದೇ ಬೀಗ ಹಾಕೋದು ಸರಿಯಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಶಾಲೆಯ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಬಿಗಿಭದ್ರತೆ ನೀಡಲಾಯ್ತು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ

    ಈ ಬೆಳವಣಿಗೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಪೋಷಕರಿಗೆ ಹೈಕೋರ್ಟ್‌ (HighCourt) ತೀರ್ಪು ಕೊಂಚ ರಿಲೀಫ್ ಕೊಟ್ಟದೆ. ನೆಹರೂ ಸ್ಕೂಲ್‍ನ್ನು ಮುಂದಿನ ವಿಚಾರಣೆಯವರೆಗೆ ತೆರೆಯುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಟಿದ್ದು ಆಕ್ಟೋಬರ್ 12 ಕ್ಕೆ ಸದ್ಯ ವಿಚಾರಣೆ ಮುಂದೂಡಿದೆ.

    ಅಕ್ಟೋಬರ್ 12ವರೆಗೆ ಸದ್ಯ ಸ್ಕೂಲ್‍ನಲ್ಲಿ ಎಂದಿನಂತೆ ತರಗತಿ ನಡೆಯುವಂತೆ ಹೈಕೋರ್ಟ್ ಆದೇಶ ಪೋಷಕರಲ್ಲಿ ಸಂಭ್ರಮ ತಂದಿದೆ. ಆದರೆ ಮುಂದಿನ ದಿನದಲ್ಲಿ ಏನಾಗಲಿದೆ ಎನ್ನುವ ಆತಂಕವೂ ಇದೆ.

    Live Tv
    [brid partner=56869869 player=32851 video=960834 autoplay=true]

  • ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

    ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

    – ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಮತ್ತೆ ಪುಂಡರ ಉಪಟಳ

    ಬೆಂಗಳೂರು: ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಶಿವಾಜಿನಗರದಲ್ಲಿ ಪುಂಡರ ಉಪಟಳ ಹೆಚ್ಚಾಗಿದ್ದು, ಗಾಂಜಾ ಮತ್ತಿನಲ್ಲಿ ಪುಂಡರಿಬ್ಬರು ಬಡಿದಾಡಿಕೊಂಡಿದ್ದಾರೆ.

    ಶಿವಾಜಿನಗರ ಸರ್ಕಲ್‍ನಲ್ಲಿ ಗಲಾಟೆ ನಡೆದಿದ್ದು, ನಡು ಬೀದಿಯಲ್ಲೇ ಪುಂಡರಿಬ್ಬರು ಕಿತ್ತಾಡಿಕೊಂಡಿದ್ದನ್ನು ಕಂಡು ಸ್ಥಳೀಯರು ಭಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡುಬೀದಿಯಲ್ಲಿ ಪುಂಡರು ಬಡಿದಾಡಿಕೊಂಡಿದ್ದು, ಆಟೋ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ.

    ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಮಾರ್ಕೆಟ್‍ನಲ್ಲಿ ಅಷ್ಟು ಜನರಿದ್ದರೂ ಯಾವುದನ್ನೂ ಲೆಕ್ಕಿಸದೆ ಪುಂಡರು ಮಾರಾಮಾರಿ ನಡೆಸಿದ್ದಾರೆ. ಘಟನೆಯಿಂದಾಗಿ ಮಾರುಕಟ್ಟೆಯಲ್ಲಿನ ಜನ ಆತಂಕಗೊಂಡು ಚದುರಿದ್ದಾರೆ.

  • ಸೀಲ್‍ಡೌನ್‍ಗೂ ಕ್ಯಾರೆ ಎನ್ನದ ಶಿವಾಜಿನಗರ ಜನ- ಬೇಕಾಬಿಟ್ಟಿ ಸಂಚಾರ

    ಸೀಲ್‍ಡೌನ್‍ಗೂ ಕ್ಯಾರೆ ಎನ್ನದ ಶಿವಾಜಿನಗರ ಜನ- ಬೇಕಾಬಿಟ್ಟಿ ಸಂಚಾರ

    – ಯಾರು ಬೇಕಾದರೂ ಎಲ್ಲಿಗೆ ಬೇಕಾದರೂ ಸಂಚರಿಸಬಹುದು
    – ವ್ಯಾಪಾರ ವಹಿವಾಟು ಜೋರು

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊರೊನಾ ಹಾಟ್‍ಸ್ಪಾಟ್‍ಗಳ ಪೈಕಿ ಒಂದಾಗಿರುವ ಶಿವಾಜಿನಗರದಲ್ಲಿ ಹೆಸರಿಗಷ್ಟೇ ಸೀಲ್‍ಡೌನ್ ಮಾಡಲಾಗಿದ್ದು, ಇಲ್ಲಿಂದ ಎಲ್ಲಿಗೆ ಬೇಕಾದರೂ ತೆರಳಬಹುದಾಗಿದೆ ಎಂಬುದು ಪಬ್ಲಿಕ್ ಟಿವಿಯ ಗ್ರೌಂಡ್ ರಿಪೋರ್ಟ್ ನಲ್ಲಿ ಬಹಿರಂಗವಾಗಿದೆ.

    ಯಾರು ಬೇಕಾದರೂ ಶಿವಾಜಿನಗರಕ್ಕೆ ಬರಬಹುದು, ಯಾರು ಬೇಕಾದರೂ ಇಲ್ಲಿಂದ ಹೊರಗೆ ಹೋಗಬಹುದಾಗಿದೆ. ಅಲ್ಲದೆ ಗುಜರಿ ಅಂಗಡಿಗಳನ್ನು ಕದ್ದು ಮುಚ್ಚಿ ತೆರೆಯಲಾಗಿದ್ದು, ಇಡ್ಲಿ ವ್ಯಾಪಾರವೂ ಜೋರಾಗಿ ಸಾಗಿದೆ. ಕೊರೊನಾ ಭಯ ಹಾಗೂ ಸರ್ಕಾರದ ಸೀಲ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಜನರು ಓಡಾಡುತ್ತಿದ್ದಾರೆ. ಇಡ್ಲಿ ಮಾರಾಟ, ಮಳಿಗೆಗಳು ತೆರೆದಿವೆ. ಅಲ್ಲದೆ ರಸ್ತೆಯಲ್ಲೇ ಕೂತು ಕಾಫಿ ಕುಡಿಯುವುದು, ದ್ವಿಚಕ್ರ ವಾಹನ ಎತ್ತಿಕೊಂಡು ಸೀಲ್‍ಡೌನ್ ಮಿತಿ ದಾಟಿ ಬೀದಿ ಬೀದಿ ತಿರುಗುವುದು ಎಗ್ಗಿಲ್ಲದೆ ನಡೆದಿದೆ.

    ಅಲ್ಲದೆ ಇಲ್ಲಿಯ ಜನರು ಸಹ ಮಾಸ್ಕ್ ಹಾಕುವ ಗೋಜಿಗೆ ಹೋಗಿಲ್ಲ. ಪೊಲೀಸರು, ಆರೋಗ್ಯಾಧಿಕಾರಿಗಳು ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ಹೆಸರಿಗೆ ಮಾತ್ರ ಸೀಲ್‍ಡೌನ್ ಎನ್ನುವಂತಾಗಿದ್ದು, ಇವರು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ ಎನ್ನವಂತೆ ಎಗ್ಗಿಲ್ಲದೆ ತಮ್ಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಸೀಲ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ರಾಜ್ಯಕ್ಕೆ ಬಿಗ್ ಶಾಕ್- ಶಿವಾಜಿನಗರದಲ್ಲಿ ಮತ್ತೆ 14 ಮಂದಿಗೆ ಕೊರೊನಾ

    ಬೆಳ್ಳಂಬೆಳಗ್ಗೆ ರಾಜ್ಯಕ್ಕೆ ಬಿಗ್ ಶಾಕ್- ಶಿವಾಜಿನಗರದಲ್ಲಿ ಮತ್ತೆ 14 ಮಂದಿಗೆ ಕೊರೊನಾ

    ಬೆಂಗಳೂರು: ಕೊರೊನಾ ಹಾಟ್ ಸ್ಪಾಟ್ ಆಗಿರುವ ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಇದೀಗ ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

    ಹೌಸ್ ಕೀಪಿಂಗ್ ಜೊತೆ ದ್ವಿತೀಯ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 14 ಮಂದಿಗೆ ಪಾಸಿಟಿವ್ ಇರುವುದು ದೃಢವಾಗಿದೆ.

    ಶುಕ್ರವಾರ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಜನರಿಗೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಶಿವಾಜಿನಗರದಲ್ಲಿ ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 202 ಪ್ರಕರಣ ಪತ್ತೆಯಾಗಿದ್ದು, ಇಂದಿನ 14 ಪ್ರಕರಣ ಸೇರಿ 216ಕ್ಕೆ ಏರಿಕೆಯಾಗಿದೆ. ಈ ಮೂಲಕ ಶಿವಾಜಿನಗರ ಕೊರೊನಾ ಹಬ್ ಆಗಿದೆ.

    ಒಂದೇ ಬಿಲ್ಡಿಂಗ್ ನಲ್ಲಿ ಇದ್ದ 72 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ನಿನ್ನೆ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಪಾಸಿಟಿವ್ ದೃಢಪಟ್ಟಿತ್ತು. ಇಂದು 20 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 14 ಪಾಸಿಟಿವ್ ಬಂದಿದೆ. ಈ 14 ಜನ ಹಾಗೂ ನಿನ್ನೆ ಪಾಸಿಟಿವ್ ಬಂದ 11 ಜನ ಒಂದೇ ಪ್ಲೋರ್ ನಲ್ಲಿ ಇದ್ದರು.

  • ಹೌಸ್‍ಕೀಪರ್ ನಿಂದ ನಾಲ್ವರಿಗೆ ಕೊರೊನಾ – ಬೆಚ್ಚಿ ಬೀಳಿಸುತ್ತೆ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಹೌಸ್‍ಕೀಪರ್ ನಿಂದ ನಾಲ್ವರಿಗೆ ಕೊರೊನಾ – ಬೆಚ್ಚಿ ಬೀಳಿಸುತ್ತೆ ಸೋಂಕಿತರ ಟ್ರಾವೆಲ್ ಹಿಸ್ಟರಿ

    – ಸೋಂಕಿತ 13 ಜನರೊಂದಿಗೆ ರೂಂ ಶೇರ್
    – ಒಬ್ಬ ಮಟನ್, ಮತ್ತೊಬ್ಬ ತರಕಾರಿ ವ್ಯಾಪರಿ

    ಬೆಂಗಳೂರು: ಪಾದರಾಯನಪುರದಲ್ಲಿ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಇದೀಗ ಶಿವಾಜಿನಗರ ಮತ್ತೊಂದು ಪಾದರಾಯನಪುರ ಆಗುತ್ತಿದಿಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ಗುರುವಾರ ಒಂದೇ ದಿನ ಶಿವಾಜಿನಗರದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ರೋಗಿ ನಂಬರ್ 653ನಿಂದ ನಾಲ್ವರಿಗೆ ಸೋಂಕು ಬಂದಿದೆ. ಈ ಮೂಲಕ ಹೌಸ್‍ಕೀಪರ್ ನಿಂದ ತನ್ನ ನಾಲ್ವರು ರೂಂಮೇಟ್ಸ್‌ಗೆ ಕೊರೊನಾ ಸೋಂಕು ಬಂದಿದೆ. ಮಣಿಪುರ ಮತ್ತು ಅಸ್ಸಾಂ ಮೂಲದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತ ಹೌಸ್‍ಕೀಪರ್ 13 ಜನರೊಂದಿಗೆ ರೂಂ ಶೇರ್ ಮಾಡಿದ್ದ. 13 ಜನರ ಪೈಕಿ ನಾಲ್ವರಿಗೆ ಸೋಂಕು ದೃಢವಾಗಿದೆ. ಇಂದು ಉಳಿದ 9 ಮಂದಿ ರಿಪೋರ್ಟ್ ಹೊರಬೀಳಲಿದೆ.

    ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾದ ನಾಲ್ವರು:
    ಹೌಸ್‍ಕೀಪರ್ ನ ಸ್ನೇಹಿತರೆಲ್ಲಾ ಬೇರೆ ಬೇರೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಈ ನಾಲ್ವರಿಂದ ದೊಡ್ಡ ತಲೆ ನೋವು ಶುರುವಾಗಿದೆ. ಮೊದಲ ಸೋಂಕಿತನಿಗೆ 19 ವರ್ಷವಾಗಿದ್ದು, ಜ್ಯುವೆಲ್ಲರಿ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಎರಡನೇ ಸೋಂಕಿತನಿಗೆ 22 ವರ್ಷವಾಗಿದ್ದು, ಮಟನ್ ವ್ಯಾಪಾರಿಯಾಗಿದ್ದ. 25 ವರ್ಷದ ಮೂರನೇ ಸೋಂಕಿತ ಹೋಟೆಲ್‍ಗೆ ತರಕಾರಿ ಹಾಕುವ ಕೆಲಸ ಮಾಡುತ್ತಿದ್ದನು. ಇನ್ನೂ ನಾಲ್ಕನೇ ಸೋಂಕಿತನಿಗೆ 40 ವರ್ಷವಾಗಿದ್ದು, ಇವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು.

    ಶಿವಾಜಿನಗರದ ಸೋಂಕಿತರ ಟ್ರಾವೆಲ್ ಹಿಸ್ಟ್ರಿ:
    ಶಿವಾಜಿನಗರದ ನಾಲ್ವರು ಅಸ್ಸಾಂ ಮತ್ತು ಮಣಿಪುರ ಮೂಲದವರಾಗಿದ್ದು, ಇವರು ಫ್ರೀ ಊಟಕ್ಕಾಗಿ ಇಡೀ ಶಿವಾಜಿನಗರದ ಮೂಲೆ ಮೂಲೆ ಸುತ್ತಿದ್ದರು. ಶಿವಾಜಿನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡಿದ್ದಾರೆ. ಅದರಲ್ಲೂ ನಾಲ್ವರು ಸೋಂಕಿತರಲ್ಲಿ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನಿಂದ ಟೆನ್ಶನ್ ಶುರುವಾಗಿದೆ. ಲಾಕ್‍ಡೌನ್ ಇದ್ದರೂ ಭಾನುವಾರವಾಗುತ್ತಿದ್ದಂತೆ ಮಟನ್‍ಗಾಗಿ ಗ್ರಾಹಕರ ಕ್ಯೂ ನಿಂತುಕೊಳ್ಳುತ್ತಿದ್ದರು. ಅಲ್ಲದೇ ಎಲ್ಲಾ ದಿನವೂ ಈ ಸೋಂಕಿತ ಗ್ರಾಹಕರಿಗೆ ಮಟನ್ ಹಂಚಿದ್ದ. ಈ ಮೂಲಕ ಮಾಂಸ ಮಾರಿದವನಿಂದ ಎಷ್ಟು ಜನರಿಗೆ ಸೋಂಕು ಹರಡಿದಿಯೋ ಎಂಬ ಆತಂಕ ಶುರುವಾಗಿದೆ.

     

  • ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಸದ್ದು- ಹೂಡಿಕೆದಾರರಿಂದ ಅಸ್ತ್ರ ಪ್ರಯೋಗ

    ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಸದ್ದು- ಹೂಡಿಕೆದಾರರಿಂದ ಅಸ್ತ್ರ ಪ್ರಯೋಗ

    ಬೆಂಗಳೂರು: ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಹಗರಣ ಸದ್ದು ಮಾಡುತ್ತಿದ್ದು, ಹೂಡಿಕೆದಾರರು ಎಲೆಕ್ಷನ್ ನಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

    ಎಲ್ಲಾ ಪಕ್ಷಗಳ ಮುಖಂಡರುಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಉಪಚುನಾವಣೆ ರಂಗು ಪಡೆದುಕೊಂಡಿರುವ ಶಿವಾಜಿ ನಗರದಲ್ಲಿ ಜನರ ಆಕ್ರೋಶ ಕಟ್ಟೆಯೊಡೆದಿದ್ದು, ಅಭ್ಯರ್ಥಿಗಳ ವಿರುದ್ಧ ಸಿಡಿದೆದಿದ್ದಾರೆ. ಕಳೆದ ಆರೇಳು ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಐಎಂಎ ಪ್ರಕರಣ ಈಗ ಮತ್ತೆ ಸದ್ದು ಮಾಡುತ್ತಿದೆ.

    ಈ ಪ್ರಕರಣದಲ್ಲಿ ಮೋಸಕ್ಕೆ ಒಳಗಾದ ಹೂಡಿಕೆದಾರರಿಗೆ ಇದುವರೆಗೂ ಯಾವ ಸರ್ಕಾರ ಹಾಗೂ ಯಾವೊಬ್ಬ ಅಭ್ಯರ್ಥಿಗಳು ನ್ಯಾಯ ಕೊಡಿಸಿಲ್ಲ. ನಮಗೆ ಅನ್ಯಾಯವಾಗಿದೆ. ಹೀಗಾಗಿ ಕೆಲ ಮತದಾರರು ಈ ಸಲ ನಮ್ಮ ವೋಟ್ ನೋಟಾಗೆ ಅಂದರೆ, ಮತ್ತೇ ಕೆಲವರು ನಮಗೆ ಎಲೆಕ್ಷನ್ ಬೇಡ ಯಾರಿಗೂ ವೋಟ್ ಹಾಕಲ್ಲ ಎಂದು ಹೇಳುತ್ತಿದ್ದಾರೆ.

    ಐಎಂಎನಲ್ಲಿ ಸುಮಾರು 63 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿದ್ದು, ಇವರಲ್ಲಿ ಅತಿ ಹೆಚ್ಚು ಶಿವಾಜಿನಗರದ ಸ್ಥಳೀಯರೇ ಇದ್ದಾರೆ. ಅದರಲ್ಲೂ ಶೇಕಡ 60 ರಿಂದ 70ರಷ್ಟು ಮುಸ್ಲಿಂ ಸಮುದಾಯದವರೇ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಶಿವಾಜಿನಗರದ ಅಭ್ಯರ್ಥಿಗಳಿಗೆ ಐಎಂಎ ದೊಡ್ಡ ತಲೆ ಬಿಸಿಯಾಗಿದೆ. ಇನ್ನೂ ಕೆಲವರು ಐಎಂಎ ಆಸ್ತ್ರವನ್ನ ಪ್ರಣಾಳಿಕೆಯನ್ನಾಗಿಸಿಕೊಂಡು ಮತ ಪಡೆಯಲು ಮುಂದಾಗಿದ್ದಾರೆ. ಉಪಚುನಾವಣೆಯ ಮತದಾನಕ್ಕೆ ಎರಡು ದಿನಗಳಿವೆ. ಈ ಬೆನ್ನಲ್ಲೆ ಐಎಂಎ ನಲ್ಲಿ ಹಣ ಹೂಡಿದ ಜನರು ಚುನಾವಣೆಯಲ್ಲಿ ‘ನೋಟಾ’ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.