Tag: Shivaji Suratkal 2

  • ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಟ್ರೈಲರ್ ರಿಲೀಸ್

    ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಟ್ರೈಲರ್ ರಿಲೀಸ್

    ಮೇಶ್ ಅರವಿಂದ್ (Ramesh Aravind) ನಾಯಕರಾಗಿ  ನಟಿಸಿರುವ ‘ಶಿವಾಜಿ ಸುರತ್ಕಲ್ 2’ (Shivaji Suratkal 2) ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೈಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.

    ಶಿವಾಜಿ ಸುರತ್ಕಲ್ 2 ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ‌ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೈಲರ್ ಬಿಡುಗಡೆಯಾಗಿದೆ. ಎಲ್ಲರಲ್ಲೂ ಮನೆ ಮಾಡಿರುವ ‘ಮಾಯಾವಿ ಯಾರು?’ ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ (Akash Srivatsa) ತಿಳಿಸಿದರು.

    “ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಚೆನ್ನಾಗಿದೆ. ಇದೇ ಏಪ್ರಿಲ್ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ’ ಎಂದರು ನಟ ರಮೇಶ್ ಅರವಿಂದ್. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ನನ್ನ ಮಿತ್ರರ ಸಹಕಾರದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್ (Radhika Chetan), ಮೇಘನಾ ಗಾಂವ್ಕರ್ (Meghana Gaonkar), ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

  • ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

    ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ (Akash Srivatsa) ನಿರ್ದೇಶನದಲ್ಲಿ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಿವಾಜಿ ಸುರತ್ಕಲ್ 2’ (Shivaji Suratkal 2) ಚಿತ್ರದ ‘ಟ್ವಿಂಕಲ್’ ಹಾಡು ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಹಾಡಿದ್ದಾರೆ.

    ‘ಶಿವಾಜಿ ಸುರತ್ಕಲ್ 1’ ಚಿತ್ರವನ್ನು ನಮ್ಮ ಹಾಗೂ ರಾಹುಲ್ ದ್ರಾವಿಡ್ ಕುಟುಂಬದವರು ಇದೇ ಜಾಗದಲ್ಲಿ ಒಟ್ಟಿಗೆ ನೋಡಿದ್ದೆವು. ಈಗ ‘ಶಿವಾಜಿ ಸುರತ್ಕಲ್ 2’ ತೆರೆಗೆ ಬರಲು ಸಿದ್ದಾವಾಗಿದೆ. ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ ‘ಒಂದಾ ಜೈಲಿಗೆ, ಇಲ್ಲವಾ ಸ್ಮಶಾನಕ್ಕೆ’ ಎಂದು ಪ್ರಸಿದ್ದಿ. ‘ಶಿವಾಜಿ ಸುರತ್ಕಲ್ ೨’ ಚಿತ್ರದಲ್ಲಿ ಶಿವಾಜಿ ಯಾವ ಕೇಸ್? ತೆಗದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ ಎಂದರು ನಟ ರಮೇಶ್ ಅರವಿಂದ್ (Ramesh Aravind).

    ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಟಿ ಸಂಗೀತ ಶೃಂಗೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂಡ ಸ್ಯಾಂಡಿ ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರಮೇಶ್ ಅವರು, ಜೀಪ್ ನಲ್ಲೂ ಸಹ ಕಾಣಿಸಿಕೊಳ್ಳುತ್ತಾರೆ. ಈ ಕುತೂಹಲ ಸದ್ಯಕ್ಕೆ ಹಾಗೆ ಇರಲಿ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗುತ್ತಿದೆ ಅಂದು ಆ ಕುತೂಹಲಕ್ಕೆ ಉತ್ತರ ಸಿಗಲಿದೆ. ಸಹಕಾರ ನೀಡಿದ್ದ ಇಡೀ ನನ್ನ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಆಕಾಶ್ ಶ್ರೀವತ್ಸ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ಈ ಚಿತ್ರದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ, ನನಗೆ “ಅಮೃತ ವರ್ಷಿಣಿ” ಚಿತ್ರದ ಪಾತ್ರ ನೆನಪಾಗುತ್ತದೆ. ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಜನ ಮೆಚ್ಚಿಕೊಳ್ಳುವ ಭರವಸೆಯಿದೆ ಎನ್ನುತ್ತಾರೆ ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ಐದು ಹಾಡುಗಳಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಡುಗಳನ್ನು ಬರೆದಿರುವವರ ಹಾಗೂ ಹಾಡಿರುವವರ ಹೆಸರುಗಳನ್ನು ಪರಿಚಯಿಸಿದರು.

    ಚಿತ್ರದಲ್ಲಿ ಅಭಿನಯಿಸಿರುವ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ (Meghana Gaonkar), ಹಾಡಿನಲ್ಲಿ ನಟಿಸಿರುವ ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ಮುಂತಾದವರು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಮಾತನಾಡಿದರು.

  • ಬಿಡುಗಡೆಗೆ ಸಿದ್ಧವಾಯಿತು ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ

    ಬಿಡುಗಡೆಗೆ ಸಿದ್ಧವಾಯಿತು ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ

    ‘ಶಿವಾಜಿ ಸುರತ್ಕಲ್ 2 – ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ (Shivaji Suratkal 2) ಚಿತ್ರವು ಏಪ್ರಿಲ್ ತಿಂಗಳ 14ನೇ ತಾರೀಖು ಬಿಡುಗಡೆಯಾಗಲಿದೆ ಎಂದು ಚಿತ್ರತಂಡದಿಂದ ತಿಳಿದು ಬಂದಿದೆ. ಆಕಾಶ್ ಶ್ರೀವತ್ಸ (Akash Srivatsa) ಚಿತ್ರಕಥೆ ಬರೆದು, ಸಂಕಲನ ಮಾಡಿ, ನಿರ್ದೇಶನ ಮಾಡಿರುವ ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವವರು ಅನೂಪ್ ಗೌಡ ಮತ್ತು ರೇಖಾ ಕೆ ಎನ್. ಚಿತ್ರಕಥೆ ಗೆ ನೆರವು ನೀಡಿ ಸ್ಕ್ರಿಪ್ಟ್ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿರುವ ಈ ಚಿತ್ರ ರಮೇಶ್ ಅರವಿಂದ್ (Ramesh Aravind) ಅವರ 103 ಸಿನಿಮಾ ಆಗಲಿದೆ ‘ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’. ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ ಗುರುಪ್ರಸಾದ್ ಎಂ ಜಿ ಮತ್ತು ದರ್ಶನ್ ಅಂಬಟ್.

    ಪ್ರಸ್ತುತ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಚಿತ್ರದ ಕೊನೆಯ ಹಾಗೂ ಒಂದು ವಿಶಿಷ್ಟ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿದೆ ಚಿತ್ರತಂಡ. ಈ ಹಾಡಿಗೆ ಮೆರಗು ಹೆಚ್ಚಿಸಿದ್ದು 777 ಚಾರ್ಲಿ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ (Sangeeta Sringeri). ಹಾಡಿನ ಕೊರಿಯೋಗ್ರಫಿ ಮಾಡಿದ್ದು ಧನಂಜಯ್ ಮಾಸ್ಟರ್. ಚಿತ್ರದಲ್ಲಿ ರಮೇಶ್ ಅರವಿಂದ್ ರವರ ಜೊತೆ ರಾಧಿಕಾ ನಾರಾಯಣ್ (Radhika Narayan) ಹಾಗೂ ಮೇಘನಾ ಗಾಂವ್ಕರ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ಸೇರಿದಂತೆ ಹಲವಾರು ಕಲಾವಿದರು ಚಿತ್ರಕ್ಕೆ ಮೆರಗು ತುಂಬಿದ್ದಾರೆ. ಇದನ್ನೂ ಓದಿ: Breaking: ಯುವ ರಾಜ್‌ಕುಮಾರ್‌ಗೆ ನಾಯಕಿಯಾದ `ಕಾಂತಾರ’ ಬ್ಯೂಟಿ ಸಪ್ತಮಿ

    ಮೊದಲ ಕಂತಾದ ರಣಗಿರಿ ರಹಸ್ಯದಲ್ಲ ಶಿವಾಜಿಯ ಅಗಾಧವಾದ ಬುದ್ಧಿವಂತಿಕೆಯನ್ನು ಕೆಲಸಕ್ಕೆ ಹಚ್ಚಿದ್ದು ಎಲ್ಲರಿಗೂ ನೆನಪಿದೆ. ಆದರೆ ಈ ಚಿತ್ರದಲ್ಲಿ ಕೇಸ್ ನಂ 131, ಶಿವಾಜಿಯನ್ನು ಇನ್ನಷ್ಟು ಸಾವಾಲುಗಳಿಗೆ ಒಡ್ಡಲಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಆ ಚಿತ್ರದಲ್ಲಿದ್ದಂತೆಯೇ, ಇಲ್ಲಿಯೂ ಶಿವಾಜಿಯ ಖಾಸಗಿ ಬದುಕಿನ ಒಂದು ಕಿರುನೋಟವೂ ಬರುತ್ತದೆ. ಮೊದಲ ಕಂತಿನಂತೆಯೇ ಈ ಚಿತ್ರವೂ ಒಂದು ಥಿಯೇಟರ್ ಅನುಭವ ಎನ್ನುತ್ತಾರೆ ಆಕಾಶ್. ಚಿತ್ರಕ್ಕೆ ಆರು ತಿಂಗಳು ಶ್ರಮ ವಹಿಸಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಜೂಡಾ ಸ್ಯಾಂಡಿ. ಚಿತ್ರದ ಸೌಂಡ್  ಎಫೆಕ್ಟ್ ಕೂಡಾ ರಾಜನ್ ಅವರು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಓಟಿಟಿ, ಟಿವಿಯ ಅನುಭವಕ್ಕಿಂತ, ಮಾಯಾವಿಯ ಜಾಲವನ್ನು ಶಿವಾಜಿ ಹೇಗೆ ಭೇದಿಸುತ್ತಾರೆ ಎಂದು ನೋಡುವುದಕ್ಕೆ ಚಿತ್ರಮಂದಿರದ ವೀಕ್ಷಣೆಯೇ ಸೂಕ್ತ ಎನ್ನುತ್ತಾರೆ ಆಕಾಶ್.

    ಚಿತ್ರದ ನಿರ್ಮಾಪಕರು ಪ್ರತಿ ಹಂತದಲ್ಲಿಯೂ, ಚಿತ್ರದ ಗುಣಮಟ್ಟ ಎಲ್ಲಿಯೂ ಕುಂದದಂತೆ ಮುತುವರ್ಜಿ ವಹಿಸಿದ್ದಾರೆ. ಚಿತ್ರಕಥೆಗೆ ಕನ್ಸಲ್ಟೆಂಟ್ ಆಗಿ ಅಭಿಜಿತ್ ವೈ ಆರ್ ಕೆಲಸ ಮಾಡಿದ್ದಾರೆ. ಮೊದಲನೇ ಕಂತಿನಲ್ಲೇ ನಿರೀಕ್ಷೆ ಮೂಡಿಸಿದ್ದ ಶಿವಾಜಿ ಸುರತ್ಕಲ್ ಈಗ ತನ್ನ ಎರಡನೇ ಕಂತಿನೊಂದಿಗೆ ಏಪ್ರಿಲ್ 14 ರಂದು ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆ ಆರ್ ಜಿ ಸ್ಟೂಡಿಯೋಸ್ ಬಿಡುಗಡೆ ಮಾಡುತ್ತಿದೆ. ಚಿತ್ರದ ಶೀರ್ಷಿಕೆಯಲ್ಲಿರುವ ಆ ಮಾಯಾವಿ ಯಾರು? ಅವನ ಇಂದ್ರಜಾಲವನ್ನು ಶಿವಾಜಿ ಹೇಗೆ ಮೀರಿ ಗೆಲ್ಲುತ್ತಾರೆ – ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗುತ್ತದೆ ಎಂದು ಆಕಾಶ್ ಶ್ರೀವತ್ಸ ಉತ್ಸಾಹದಿಂದ ಹೇಳುತ್ತಾರೆ.