Tag: Shivaji Maharaj

  • ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಡಿವೈನ್‌ ಸ್ಟಾರ್-‌ ರಿಷಬ್‌ ಶೆಟ್ಟಿ ಪೋಸ್ಟರ್‌ ಔಟ್

    ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಡಿವೈನ್‌ ಸ್ಟಾರ್-‌ ರಿಷಬ್‌ ಶೆಟ್ಟಿ ಪೋಸ್ಟರ್‌ ಔಟ್

    ‘ಕಾಂತಾರ ಚಾಪ್ಟರ್‌ 1′ ಸಿನಿಮಾ ಕೆಲಸದ ನಡುವೆಯೇ ಇತ್ತೀಚೆಗೆ ರಿಷಬ್‌ ಶೆಟ್ಟಿ (Rishab Shetty) ತೆಲುಗಿನ ‘ಜೈ ಹನುಮಾನ್‌’ ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಇದೀಗ ಛತ್ರಪತಿ ಶಿವಾಜಿ  ಮಹಾರಾಜ್‌ (Chhatrapati Shivaji Maharaj) ಪಾತ್ರದಲ್ಲಿ ಡಿವೈನ್‌ ಸ್ಟಾರ್‌ ರಿಷಬ್‌ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಗ್ಗೆ ಇದೀಗ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ.

     

    View this post on Instagram

     

    A post shared by SANDEEP SINGH (@officialsandipssingh)

    ಡೈರೆಕ್ಟರ್‌ ಸಂದೀಪ್‌ ಸಿಂಗ್‌ ಅವರ ಹಿಸ್ಟೋರಿಕಲ್‌ ಡ್ರಾಮಾ ಸಿನಿಮಾದಲ್ಲಿ ರಿಷಬ್‌ ನಟಿಸಲಿದ್ದಾರೆ. ಸದ್ಯ ಶಿವಾಜಿ  ಮಹಾರಾಜ್‌ ಲುಕ್‌ನಲ್ಲಿ ಖಡ್ಗ ಹಿಡಿದು ರಿಷಬ್‌ ಕಾಣಿಸಿಕೊಂಡಿರುವ ಲುಕ್‌ ರಿವೀಲ್‌ ಆಗಿದೆ.  ಈ ಪೋಸ್ಟರ್‌ ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

    ಅದಷ್ಟೇ ಅಲ್ಲ, ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಈ ಬಯೋಪಿಕ್‌ ಸಿನಿಮಾವು 2027ರ ಜನವರಿ 21ರಂದು ಬಿಡುಗಡೆಯಾಗುವುದಾಗಿ ಕೂಡ ಚಿತ್ರತಂಡ ಅನೌನ್ಸ್‌ ಮಾಡಿದೆ.

  • ರಾಹುಲ್ ಗಾಂಧಿ ಬೆಂಬಲ: ದೇಶ ಬಿಟ್ಟು ನರಕಕ್ಕೆ ಹೋಗಿ ಎಂದ ಬಿಗ್ ಬಾಸ್ ವಿನ್ನರ್

    ರಾಹುಲ್ ಗಾಂಧಿ ಬೆಂಬಲ: ದೇಶ ಬಿಟ್ಟು ನರಕಕ್ಕೆ ಹೋಗಿ ಎಂದ ಬಿಗ್ ಬಾಸ್ ವಿನ್ನರ್

    ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರನ್ನು ಟೀಕಿಸುವುದು ಕಾಮನ್. ಆದರೆ, ಫುಲ್ ಟೈಮ್ ರಾಜಕಾರಣಿ ಅಲ್ಲದ ನಟಿಯೊಬ್ಬರು ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ರಾಹುಲ್ ಬೆಂಬಲಿಸಿದವರಿಗೂ ಚಾಟಿ ಬೀಸಿರುವ ಅವರು ನೀವೆಲ್ಲರೂ ನರಕಕ್ಕೆ ಹೋಗಿ ಅಂದಿದ್ದಾರೆ.

    ರಾಹುಲ್ ಬಗ್ಗೆ ಇಂತಹ ಮಾತುಗಳನ್ನು ಆಡಿದ್ದು ಬೇರೆ ಯಾರೂ ಅಲ್ಲ, ಬಿಗ್ ಬಾಸ್ ಮರಾಠಿಯ ವಿನ್ನರ್, ನಟಿ ಮೇಘಾ ಧಾಡೆ (Megha Dhade) ಆಕ್ರೋಶ ಹೊರ ಹಾಕಿದ್ದಾರೆ. ಅವರು ಈ ರೀತಿ ಮಾತನಾಡಿದ್ದಕ್ಕೆ ಕಾರಣವೂ ಇದೆ. ಚುನಾವಣಾ ಪ್ರಚಾರದ ವೇಳೆ ರಾಹುಲ್ ಅವರಿಗೆ ಶಿವಾಜಿ ಮಹರಾಜರ (Shivaji Maharaj) ಪ್ರತಿಮೆಯನ್ನು ನೀಡಲಾಗಿದೆ. ಫೋಟೋಗಾಗಿ ಅದನ್ನು ಸ್ವೀಕರಿಸಿ, ನಂತರ ಅಲ್ಲಿಯೇ ಪ್ರತಿಮೆಯನ್ನು ಬಿಟ್ಟು ಹೋಗಿದ್ದಾರಂತೆ.

     

    ಮೇಘಾ ನಟನೆಯ ಜೊತೆಗೆ ರಾಜಕಾರಣದಲ್ಲೂ ಸಕ್ರೀಯರಾಗಿದ್ದಾರೆ. ಹಾಗಾಗಿ ಮೇಘಾ ಮಾತುಗಳು ವೈರಲ್ ಆಗಿವೆ. ಅದರಲ್ಲೂ ಶಿವಾಜಿ ಪ್ರತಿಮೆ ಇಟ್ಟುಕೊಂಡು ರಾಹುಲ್ ಗಾಂಧಿ ಅವರನ್ನು ಅನೇಕರು ಟೀಕಿಸಿದ್ದಾರೆ.

  • ಬ್ರಿಟಿಷರ ಕಾಲದ ಚಿನ್ಹೆಗೆ ಕೊಕ್ – ನೌಕಾಪಡೆಗೆ ಶಿವಾಜಿಯ ಧ್ವಜ ಸೇರ್ಪಡೆ

    ಬ್ರಿಟಿಷರ ಕಾಲದ ಚಿನ್ಹೆಗೆ ಕೊಕ್ – ನೌಕಾಪಡೆಗೆ ಶಿವಾಜಿಯ ಧ್ವಜ ಸೇರ್ಪಡೆ

    ನವದೆಹಲಿ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ `IAC ವಿಕ್ರಾಂತ್’ ಅನ್ನು ಇಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಇದೇ ವೇಳೆ ಭಾರತೀಯ ನೌಕಾಪಡೆಯು ಹೊಸ ಧ್ವಜವನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಧ್ವಜವನ್ನೂ ಅನಾವರಣಗೊಳಿಸಿದ್ದಾರೆ.

    ಮರಾಠ ಸಾಮ್ರಾಜ್ಯದ ಚಕ್ರವರ್ತಿ ಶಿವಾಜಿಗೆ ಗೌರವ ಸೂಚಿಸುವ ಈ ಧ್ವಜವು ತಮ್ಮ ಆಳ್ವಿಕೆಯ ಕಾಲದಲ್ಲಿ ನೌಕಾಪಡೆಯನ್ನು ಹೊಂದಿದ್ದರು ಎಂಬುದನ್ನು ನೆಪಿಸುತ್ತದೆ. ಈ ನಿಟ್ಟಿನಲ್ಲಿಂದು ಭಾರತೀಯ ನೌಕಾಪಡೆಯು ಹೊಸ ಹೆಜ್ಜೆಯನ್ನಿರಿಸಿದೆ. ಇದನ್ನೂ ಓದಿ: ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಕ್ರಾಂತ್‌ಗೆ ಮೋದಿ ಚಾಲನೆ

    ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರೂ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಇನ್ನೂ ಉಳಿದುಕೊಂಡಿದ್ದ ವಸಾಹತುಶಾಹಿ ನೆನಪಿಸುವ ಅಂಶಗಳಿಗೆ ಇಂದು ತೆರೆ ಎಳೆಯಲಾಗಿದೆ. ಹೊಸ ಧ್ವಜ ಪರಿಚಯಿಸುವ ಮೂಲಕ ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲಾಗಿದೆ.

    ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದ್ದು, `ನಿಶಾನ್’ ಎಂದು ಹೆಸರಿಡಲಾಗಿದೆ. ಇದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಉದ್ದೇಶವನ್ನೂ ಹೊಂದಿದೆ.

    ಈ ಹಿಂದಿನ ಧ್ವಜವು ಬಿಳಿಯ ಬಣ್ಣದಲ್ಲಿದ್ದು, ಲಂಬ ಮತ್ತು ಅಡ್ಡವಾಗಿ ಕೆಂಪು ಪಟ್ಟಿಗಳನ್ನು ಒಳಗೊಂಡಿತ್ತು. ಅದನ್ನು ಸೇಂಟ್ ಜಾರ್ಜ್ ಕ್ರಾಸ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷ್ ಆಡಳಿತಗಾರರು ಅದನ್ನು ಹಾಕಿದ್ದರು. ಇದೀಗ ಸೇಂಟ್ ಜಾರ್ಜ್ ಶಿಲುಬೆಯನ್ನ ಹೊಸ ಭಾರತೀಯ ನೌಕಾ ಧ್ವಜದಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

    ಹೊಸ ಧ್ವಜದ ಬಲಭಾಗದ ಮೂಲೆಯಲ್ಲಿ ಭಾರತೀಯ ನೌಕಾಪಡೆಯ ಹೊಸ ಚಿನ್ಹೆಯನ್ನೂ ಒಳಗೊಂಡಿದೆ. ದೇವನಾಗರಿ ಲಿಪಿಯಲ್ಲಿ `ಸತ್ಯ ಮೇವ ಜಯತೆ’ ಎಂಬ ರಾಷ್ಟ್ರೀಯ ಧ್ಯೇಯವಾಕ್ಯದೊಂದಿಗೆ ಭಾರತೀಯ ರಾಷ್ಟ್ರೀಯ ಲಾಂಚನವೂ ಇದರಲ್ಲಿದೆ. ಇದರ ಅಷ್ಟಭುಜಾಕೃತಿಯು 8 ದಿಕ್ಕುಗಳನ್ನು ಸೂಚಿಸುತ್ತದೆ. ಜೊತೆಗೆ ಶಿವಾಜಿಯ ರಾಜಮುದ್ರೆಯನ್ನೂ ಪರಿಚಯಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    ಆಗ್ರಾ ಮೊಘಲ್ ಮ್ಯೂಸಿಯಂಗೆ ಶಿವಾಜಿ ಮಹಾರಾಜ್ ಹೆಸರು: ಯೋಗಿ ಆದಿತ್ಯನಾಥ್

    – ಉತ್ತರ ಪ್ರದೇಶದಲ್ಲಿ ಗುಲಾಮ ಮನಸ್ಥಿತಿಗೆ ಸ್ಥಾನವಿಲ್ಲ

    ಲಕ್ನೋ: ಆಗ್ರಾದ ಸುಪ್ರಸಿದ್ಧ ತಾಜ್ ಮಹಲ್ ಆವರಣದಲ್ಲಿರುವ ಮೊಘಲ್ ವಸ್ತು ಸಂಗ್ರಹಾಲಯಕ್ಕೆ ಮರು ನಾಮಕರಣ ಮಾಡಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಎಂದು ಹೆಸರಿಡಲಾಗಿದೆ. ಈ ಕುರಿತು ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಪಷ್ಟಪಡಿಸಿದ್ದಾರೆ.

    ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ ಎಂದು ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಇಂತಹ ಗುಲಾಮ ಮನಸ್ಥಿತಿಯ ಯಾವುದೇ ವಿಷಯವನ್ನು ಬಿಜೆಪಿ ಸರ್ಕಾರ ತೆಗೆದು ಹಾಕುತ್ತದೆ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಅವರು, ನಿರ್ಮಾಣ ಹಂತದಲ್ಲಿರುವ ಆಗ್ರಾದ ವಸ್ತುಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಎಂದು ನಾಮಕರಣ ಮಾಡಲಾಗಿದೆ. ಹೊಸ ಉತ್ತರ ಪ್ರದೇಶದಲ್ಲಿ ಗುಲಾಮಿ ಮನಸ್ಥಿತಿಗಳಿಗೆ ಯಾವುದೇ ರೀತಿಯ ಸ್ಥಾನವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್ ಎಂದು ಅವರು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೇವಲ ಆಗ್ರಾದ ವಸ್ತುಸಂಗ್ರಹಾಲಯ ಮಾತ್ರವಲ್ಲ ಅಲಹಬಾದ್‍ಗೆ ಪ್ರಯಾಗ್‍ರಾಜ್ ಸೇರಿ ಯೋಗಿ ಆದಿತ್ಯನಾಥ್ ಅವರು ತಮ್ಮ 3 ವರ್ಷಗಳ ಆಡಳಿತಾವಧಿಯಲ್ಲಿ ಹಲವು ಸ್ಥಳಗಳು, ರಸ್ತೆಗಳ ಹೆಸರನ್ನು ಬದಲಾಯಿಸಿದ್ದಾರೆ. ಅಲ್ಲದೆ ಗುಲಾಮಿ ಸಂಸ್ಕೃತಿಗೆ ಉತ್ತರ ಪ್ರದೇಶದಲ್ಲಿ ಸ್ಥಾನಮಾನವಿಲ್ಲ ಎಂದು ಹೇಳಿದ್ದಾರೆ.

    ಮೊಘಲ್ ಮ್ಯೂಸಿಮ್ ಯೋಜನೆಯನ್ನು ಕಳೆದ ಬಾರಿಯ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ 2015ರಲ್ಲಿ ಜಾರಿಗೆ ತರಲಾಗಿತ್ತು. ತಾಜ್ ಮಹಲ್ ಬಳಿಯ ಒಟ್ಟು 6 ಎಕರೆ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಮೊಘಲ್ ಸಂಸ್ಕೃತಿ, ಕಲಾಕೃತಿಗಳು, ವರ್ಣಚಿತ್ರಗಳು, ಪಾಕ ಪದ್ಧತಿ, ವೇಷ ಭೂಷಣ, ಮೊಘಲ್ ಯುಗ, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡು ಹಾಗೂ ಪ್ರದರ್ಶನ ಕಲೆಗಳನ್ನು ಒಳಗೊಂಡಿದೆ.