Tag: shivagange

  • ಶಿವಗಂಗೆಯಲ್ಲಿ ಮಧುಗಿರಿ PWD ಅಧಿಕಾರಿ ಆತ್ಮಹತ್ಯೆಗೆ ಶರಣು

    ಶಿವಗಂಗೆಯಲ್ಲಿ ಮಧುಗಿರಿ PWD ಅಧಿಕಾರಿ ಆತ್ಮಹತ್ಯೆಗೆ ಶರಣು

    ನೆಲಮಂಗಲ: ತುಮಕೂರು ಜಿಲ್ಲೆಯ ಮಧುಗಿರಿಯ ಪಿಡಬ್ಲ್ಯೂಡಿ (PWD) ಇಲಾಖೆಯಲ್ಲಿ ಎಫ್‌ಡಿಸಿಯಾಗಿ ಕೆಲಸ ನಿರ್ವಹಣೆ ಮಾಡುತಿದ್ದ ಅಧಿಕಾರಿ ಅನುಮಾನಾಸ್ಪದ (Suspicious Death) ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯ (Shivagange) ಪ್ರವಾಸಿ ಮಂದಿರದ ಶೌಚಾಲಯದಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮಧುಗಿರಿ (Madhugiri) ನಿವಾಸಿ ಲಕ್ಷ್ಮೀನರಸಿಂಹಯ್ಯ(54) ಶವ ಪತ್ತೆಯಾಗಿದೆ. ಇದನ್ನೂ ಓದಿ: ಡಬಲ್ ಹಣ ನೀಡುವುದಾಗಿ ನಿವೃತ್ತ ನೌಕರರಿಗೆ ಬ್ಯಾಂಕ್‌ನಿಂದ ಪಂಗನಾಮ

    ಮೂರು ದಿನಗಳ ಹಿಂದೆ ಬೆಂಗಳೂರಿನ (Bengaluru) ಮುಖ್ಯ ಕಚೇರಿಗೆ ಲಕ್ಷ್ಮೀನರಸಿಂಹಯ್ಯ ಆಗಮಿಸಿದ್ದರು. ಈ ವೇಳೆ ಕಛೇರಿಗೆ ಸಂಬಂಧಪಟ್ಟ ಫೈಲ್ ನಾಪತ್ತೆಯಾಗಿತ್ತು. ಈ ಹಿನ್ನಲೆ ಒತ್ತಡದಿಂದ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಚಾರ ತಿಳಿಯುತಿದ್ದಂತೆ ಸ್ಥಳಕ್ಕೆ ಡಾಬಸ್‌ಪೇಟೆ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಕ್ಷಿಣ ಕಾಶಿ ಶ್ರೀಕ್ಷೇತ್ರ ಶಿವಗಂಗೆಯಲ್ಲಿ ಗಾಂಜಾ ಮಾರಾಟ – ಆರೋಪಿ ಬಂಧನ

    ದಕ್ಷಿಣ ಕಾಶಿ ಶ್ರೀಕ್ಷೇತ್ರ ಶಿವಗಂಗೆಯಲ್ಲಿ ಗಾಂಜಾ ಮಾರಾಟ – ಆರೋಪಿ ಬಂಧನ

    ನೆಲಮಂಗಲ: ನಗರ ಪ್ರದೇಶದಿಂದ ಗ್ರಾಮಕ್ಕೂ ವ್ಯಾಪಿಸಿದ ಗಾಂಜಾ ಮಾರಾಟ, ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಪ್ರವಾಸಿ ತಾಣವಾಗಿರುವ ಶಿವಗಂಗೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರಿನ ಬನಶಂಕರಿ ಮೂಲದ ವ್ಯಕ್ತಿ ಮಧು ಬಂಧಿತ ಆರೋಪಿ. ಆರೋಪಿ ಮಧುವಿನಿಂದ ಪೊಲೀಸರು ಸುಮಾರು 1 ಕೆಜಿಗೂ ಅಧಿಕ ಗಾಂಜಾ ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ವಯಸ್ಕರು ಮತ್ತು ಗಾಂಜಾ ಚಟುವಟಿಕೆಯನ್ನು ಗಮನಿಸಿ ಆರೋಪಿಯನ್ನ ಗ್ರಾಮಸ್ಥರ ನೆರವಿನಿಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಸ್ಥಳಕ್ಕೆ ಡಿವೈಎಸ್‍ಪಿ ಗೌತಮ್ ಹಾಗೂ ಪಿಎಸ್‍ಐ ಮುರುಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ಶಿವಗಂಗೆ ಬೆಟ್ಟದಲ್ಲಿ ವಾನರ ಗುಂಪಿಗೆ ಆಹಾರ ಸಮಸ್ಯೆ – ಸ್ಥಳೀಯರ ನೆರವು

    ಶಿವಗಂಗೆ ಬೆಟ್ಟದಲ್ಲಿ ವಾನರ ಗುಂಪಿಗೆ ಆಹಾರ ಸಮಸ್ಯೆ – ಸ್ಥಳೀಯರ ನೆರವು

    ನೆಲಮಂಗಲ: ಮಾರಣಾಂತಿಕ ಕೋವಿಡ್-19 ಜನರಿಗೆ ತೀವ್ರ ಸಂಕಷ್ಟ ನೀಡಿದಲ್ಲದೆ, ಇದೀಗ ಪ್ರಾಣಿಗಳಿಗೂ ಸಮಸ್ಯೆಯಾಗಿದೆ. ಲಾಕ್‍ಡೌನ್ ಎಫೆಕ್ಟ್‍ನಿಂದಾಗಿ ಶ್ರೀ ಕ್ಷೇತ್ರ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ವಾನರ ಗುಂಪು ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ಮನಗಂಡ ಸ್ಥಳೀಯರು ಕೋತಿಗಳಿಗೆ ಆಹಾರ ನೀಡಿ ನೆರವಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಬೆಟ್ಟದ ತುತ್ತತುದಿಯಲ್ಲಿ ನೆಲೆಸಿರುವ ಮಂಗಗಳಿಗೆ ಲಾಕ್‍ಡೌನಿಂದಾಗಿ ಆಹಾರದ ಸಮಸ್ಯೆ ಕಾಡಿದೆ. ಇದನ್ನು ಗಮನಿಸಿದ ಸ್ಥಳೀಯರು, ಮೂಕ ವೇದನೆ ಪಡುತ್ತಿದ್ದ ಪ್ರಾಣಿ ವರ್ಗಕ್ಕೆ ಆಹಾರ ನೀಡಿದ್ದಾರೆ. ಕೋವಿಡ್-19ನಿಂದಾಗಿ ಆಹಾರವಿಲ್ಲದೆ ಕೋತಿಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಇದಕ್ಕೆ ತಾತ್ಕಾಲಿಕ ಪರಿಹಾರ ಎಂಬಂತೆ ಹಣ್ಣು ಹಂಪಲು ಮತ್ತು ತಿಂಡಿ ತಿನಿಸುಗಳನ್ನು ಹೊತ್ತೊಯ್ಯದು ಶಿವಗಂಗೆ ಬೆಟ್ಟದಲ್ಲಿರುವ ವಾನರ ಗುಂಪಿಗೆ ಸ್ಥಳೀಯರು ಆಹಾರ ನೀಡುತ್ತಿದ್ದಾರೆ. ಇದನ್ನೂ ಓದಿ: ದಕ್ಷಿಣ ಕಾಶಿ ಶಿವಗಂಗೆ ತೀರ್ಥ ಕಂಬದ ಬಳಿ ತೆಗೆದ ಚಂದನ್, ಕವಿತಾ ಫೋಟೋ ವೈರಲ್

    ಕೋತಿಗಳಿಗೆ ಭಕ್ತರಿಂದ ಲಾಕ್‍ಡೌನ್ ಬಿಟ್ಟು ಬೇರೆ ಅವಧಿಯಲ್ಲಿ ಆಹಾರ ದೊರಕುತ್ತಿತ್ತು, ಆದರೆ ಲಾಕ್‍ಡೌನ್ ನಿಂದ ಶಿವಗಂಗೆಗೆ ಯಾರು ಭಕ್ತರು ಆಗಮಿಸುತ್ತಿಲ್ಲ. ಈ ಹಿನ್ನೆಲೆ ಶಿವಗಂಗೆ ಬೆಟ್ಟದಲ್ಲಿರುವ ಸಾವಿರಾರು ಕೋತಿಗಳಿಗೆ ಆಹಾರ ಇಲ್ಲದಂತಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಬೆಟ್ಟಕ್ಕೆ ಏರಿ ಹಲಸಿನ ಹಣ್ಣು, ಮಾವಿನ ಹಣ್ಣು, ಬಾಳೆ ಹಣ್ಣು, ಕಡಲೆಕಾಯಿ ಇನ್ನೀತರ ತಿಂಡಿ ತಿನಿಸುಗಳನ್ನು ಆಹಾರವನ್ನಾಗಿ ನೀಡುತ್ತಿದ್ದಾರೆ. ಈ ವ್ಯವಸ್ಥೆಗೆ ಶಿವಗಂಗೆ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ನೆರವು ನೀಡುತ್ತಿದ್ದಾರೆ.

  • ಶ್ರೀ ರೇಣುಕಾಚಾರ್ಯರ ಜಯಂತಿ- ಸುದೀಪ್‍ಗೆ ಶಿವಗಂಗಾ ಶ್ರೀ ಪ್ರಶಸ್ತಿ

    ಶ್ರೀ ರೇಣುಕಾಚಾರ್ಯರ ಜಯಂತಿ- ಸುದೀಪ್‍ಗೆ ಶಿವಗಂಗಾ ಶ್ರೀ ಪ್ರಶಸ್ತಿ

    ನೆಲಮಂಗಲ: ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಮೇಲಣಗವಿ ಮಠದಿಂದ ನಟ ಕಿಚ್ಚ ಸುದೀಪ್‍ಗೆ ಶಿವಗಂಗಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆಯ ಮೇಲಣಗವಿ ಮಠದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ನಟ ಸುದೀಪ್ ಗೆ ಪ್ರತಿಷ್ಟಿತ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನಟ ಸುದೀಪ್, ಕೊರೊನಾ ಅರಿವು ಮೂಡಿಸಿದರು. ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಮಾರಣಾಂತಿಕ ರೋಗದ ಬಗ್ಗೆ ಅರಿವಿರಲಿ, ಮಾಸ್ಕ್ ಹಾಕಿ ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ಬಹಳ ತೂಕ ತೆಗೆದುಕೊಂಡು ಮನೆಗೆ ಹೋಗತ್ತಿದ್ದೇನೆ ಈ ಪ್ರಶಸ್ತಿಯಿಂದ ಕುಟುಂಬದ ಬಗ್ಗೆ ಹೆಮ್ಮೆ ಇರಲಿ ಎಲ್ಲರೂ ಅಭಿಮಾನದಿಂದ ಶರಣಾಗೋಣ ಎಂದರು.

    ಈ ಬಾರಿ ‘ಶಿವಗಂಗಾ ಶ್ರೀ’ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಅವರಿಗೆ ನೀಡುತ್ತಿರುವುದು ಮತ್ತು ಚಿತ್ರರಂಗದಲ್ಲಿ ಅವರು 25 ವರ್ಷ ಸೇವೆಯಲ್ಲಿರುವುದು ಅವರ ಮತ್ತೊಂದು ಸಾಧನೆಯ ಗರಿಯಾಗಿದೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಲಣಗವಿ ಮಠದ ಶ್ರೀಗಳು, ಕೋವಿಡ್ ಮಧ್ಯೆಯೂ ಸರಳವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿದ್ದೇವೆ. ಕಳೆದ ಬಾರಿ ಶಿವಗಂಗಾ ಶ್ರೀ ಪ್ರಶಸ್ತಿಗೆ ಭಾಜನರಾದ ಸಾವಯವ ಕೃಷಿ ಸಾಧಕಿ ಕವಿತಾ ಮಿಶ್ರಾ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ರನ್ನು ಸನ್ಮಾನಿಸಲಾಯಿತು. ಎಲ್ಲರೂ ಕೊರೊನಾ ಬಗ್ಗೆ ಜಾಗೃತರಾಗಿರಿ ಎಂದು ಶ್ರೀಗಳು ತಿಳಿಸಿದರು.

  • ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಪನ್ನ

    ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಪನ್ನ

    ನೆಲಮಂಗಲ: ಮಕರ ಸಂಕ್ರಾಂತಿ ದಿನದಂದು ಎಲ್ಲಡೆ ವಿವಿಧ ದೇವಾಲಯಗಳಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಇತ್ತ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಶಿವಗಂಗೆಯಲ್ಲಿ ಬೆಳ್ಳಂಬೆಳಗ್ಗೆ ತೀರ್ಥೋದ್ಭವ ಆಗಿದ್ದು, ಗಿರಿಜಾ ಕಲ್ಯಾಣ ಮಹೋತ್ಸವ ನಡೆದಿದೆ.

    ಬೆಳಗ್ಗೆ 6:30ರಿಂದ 7:00 ಗಂಟೆಯೊಳಗೆ ಗಿರಿಜಾ ಕಲ್ಯಾಣೋತ್ಸವ ನಡೆದಿದ್ದು, ಈ ಅಪೂರ್ವ ದೃಶ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಇಲ್ಲಿನ ಅರ್ಚಕ ಸೋಮಸುಂದರ ದೀಕ್ಷಿತ್ ನೇತೃತ್ವದಲ್ಲಿ ಗಿರಿಜಾ ಕಲ್ಯಾಣೋತ್ಸವ ನೇರವೇರಿದೆ. ಲೋಕ ಕಲ್ಯಾಣಕ್ಕಾಗಿ ಗಿರಿಜಾ ಮತ್ತು ಶಿವನಿಗೆ ವಿವಾಹ ಜರುಗಿದೆ. ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೆಲಮಂಗಲ ಪೊಲೀಸರು ಬಿಗಿ ಭದ್ರತೆಯನ್ನ ನೀಡಿದ್ದಾರೆ.

    ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದಿದೆ. ಇಂದು ಶಿವಗಂಗೆ ಬೆಟ್ಟಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ಗಂಗಾಧರೇಶ್ವರನ ದರ್ಶನ ಪಡೆಯುತ್ತಿದ್ದಾರೆ.

  • ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ನನ್ನ ಆದ್ಯತೆ: ಎಸ್.ಟಿ ಸಿದ್ದರಾಜು

    ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ನನ್ನ ಆದ್ಯತೆ: ಎಸ್.ಟಿ ಸಿದ್ದರಾಜು

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಕ್ಷೇತ್ರ, ಚಾರಣಿಗರ ಸ್ವರ್ಗ, ದಕ್ಷಿಣಕಾಶಿ ಶಿವಗಂಗೆ ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಕಾರ್ಯಕ್ರಮ ಅನುಷ್ಠಾನಕ್ಕೆ ನೂತನ ಅಧ್ಯಕ್ಷರಾಗಿ ಎಸ್.ಟಿ ಸಿದ್ದರಾಜು ಆಯ್ಕೆಯಾಗಿದ್ದಾರೆ ಎಂದು ಉಪತಹಶೀಲ್ದಾರ್ ಜುಂಜೇಗೌಡ ಘೋಷಣೆ ಮಾಡಿದರು.

    ಶಿವಗಂಗೆ ಬೆಟ್ಟದ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ದಾಸೋಹ ಭವನದ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ರೇಣುಕೇಶ್ವರ್ ಸ್ವ ನಿರ್ಧಾರದಿಂದ ಅಧ್ಯಕ್ಷ ಸ್ಥಾನ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಸಭೆಯ ಒಮ್ಮತ ತೀರ್ಮಾನದಂತೆ ಸಿದ್ದರಾಜುರನ್ನು ಆಯ್ಕೆ ಮಾಡಿದರು.

    ನಂತರ ಮಾತನಾಡಿದ ನೂತನ ಅಧ್ಯಕ್ಷ ಸಿದ್ದರಾಜು, ಮೂರು ವರ್ಷಗಳ ಅವಧಿಗೆ, ಮೂರು ಜನರ ಮಧ್ಯೆ ಹೊಂದಾಣಿಕೆ ಸೂತ್ರವನ್ನು ಅನುಸರಿಸಿ ಇಂದು ನಾನು ಅಧಿಕಾರ ಸ್ವೀಕರಿಸಿದ್ದೇನೆ. ಶ್ರೀಗಂಗಾಧರೇಶ್ವರ ಸ್ವಾಮಿ ಗಿರಿಜಾ ಕಲ್ಯಾಣೋತ್ಸವಕ್ಕೆ ಇನ್ನೂ 15 ದಿನಗಳು ಬಾಕಿ ಉಳಿದಿರುವ ದಿನದಲ್ಲಿ, ದಾಸೋಹ ವ್ಯವಸ್ಥೆ, ಮೆಟ್ಟಿಲು ನಿರ್ಮಾಣ, ಜೊತೆಗೆ ದೇವಾಲಯದ ಆಡಳಿತ ಮಂಡಳಿಯಲ್ಲಿರುವ 11 ಲಕ್ಷ ಹಿಂಡಿಗಂಟ್ಟು ಹಾಗೂ 25 ಲಕ್ಷ ಸಾಲದ ಮೊತ್ತದ ನಿಯಂತ್ರಣ, ಆದಾಯ ಮೂಲ ಹೆಚ್ಚಿಸುವುದು ಮತ್ತು ವಿವಿಧ ಸಂಘಸಂಸ್ಥೆ ಹಾಗೂ ಅರಣ್ಯ ಇಲಾಖೆ ನೆಟ್ಟಿರುವ ಗಿಡಗಳ ಪೋಷಣೆ ಹಾಗೂ ಸ್ವಚ್ಚತೆ ಬಗ್ಗೆ ಗಮನ ಹರಿಸುವೇ, ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತಂದು ಹೆಚ್ಚಿನ ಅಭಿವೃದ್ಧಿ ಮಾಡುತ್ತೇವೆ ಎಂದರು.

    ಈ ವೇಳೆಯಲ್ಲಿ ದೇವಾಲಯದ ಸಿಇಓ ಚಂದ್ರಶೇಖರ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತರಾಯಪ್ಪ, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಬರಗೇನಹಳ್ಳಿ ರಾಜಣ್ಣ, ಶಿವರಾಂ, ಯಡಿಯೂರಾಪ್ಪ, ರಾಜು ದೀಕ್ಷಿತ್, ಮಂಗಳಾ, ಸಿದ್ದಗಂಗಮ್ಮ, ರೇಣುಕೇಶ್ವರ್, ಮುಖಂಡರಾದ ಆಂಜನಮೂರ್ತಿ, ದಿನೇಶ್, ನಟರಾಜು, ರೇಣುಕಪ್ರಸಾದ್, ಇನ್ನೀತರರಿದ್ದರು.

  • ದಕ್ಷಿಣ ಕಾಶಿ ಶಿವಗಂಗೆಯ ದೇಗುಲಕ್ಕೆ ಇಂದು ಸಂಜೆಯೇ ಬೀಗ- ಶಿವನಿಗೆ ದರ್ಬೆಯಿಂದ ದಿಗ್ಬಂಧನ

    ದಕ್ಷಿಣ ಕಾಶಿ ಶಿವಗಂಗೆಯ ದೇಗುಲಕ್ಕೆ ಇಂದು ಸಂಜೆಯೇ ಬೀಗ- ಶಿವನಿಗೆ ದರ್ಬೆಯಿಂದ ದಿಗ್ಬಂಧನ

    ನೆಲಮಂಗಲ: ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೂ ಸಂಭವಿಸಲಿರುವ ಸೂರ್ಯಗ್ರಹಣದ ವೇಳೆ ಎಲ್ಲಾ ದೇಗುಲಗಳನ್ನು ಮುಚ್ಚಲಾಗುತ್ತದೆ. ಈ ಹಿನ್ನೆಲೆ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಇಂದು ಸಂಜೆಯೇ ದೇವಸ್ಥಾನದಲ್ಲಿ ಶಿವನಿಗೆ ದರ್ಬೆಯಿಂದ ದಿಗ್ಬಂಧನ ಹಾಕಿ ಬಾಗಿಲು ಮುಚ್ಚಲಾಗುತ್ತಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಖ್ಯಾತಿಯ ಶಿವಗಂಗೆಯ ಗವಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಸ್ವರ್ಣಾಂಭ ದೇವಾಲಯದಲ್ಲಿ ಗ್ರಹಣದ ಆಚರಣೆ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ.

    ಸಂಜೆ 5:30ಕ್ಕೆ ದರ್ಬೆಯಿಂದ ಸ್ವರ್ಣಾಂಭ ಸಮೇತ ಶ್ರೀ ಗಂಗಾಧರೇಶ್ವರ ದೇವರಿಗೆ ದಿಗ್ಬಂಧನ ಮಾಡಿ, ನಾಳೆ ಮಧ್ಯಾಹ್ನ 12:30ಕ್ಕೆ ದರ್ಬೆಯಿಂದ ವಿಮುಕ್ತಿ ಮಾಡಲಾಗುತ್ತದೆ. ನಂತರ ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

  • ಚುಮುಚುಮು ಚಳಿಯ ಮಂಜಿನಿಂದ ಸಂಪೂರ್ಣ ಆವೃತ್ತಗೊಂಡ ಶಿವಗಂಗೆ: ವಿಡಿಯೋ

    ಚುಮುಚುಮು ಚಳಿಯ ಮಂಜಿನಿಂದ ಸಂಪೂರ್ಣ ಆವೃತ್ತಗೊಂಡ ಶಿವಗಂಗೆ: ವಿಡಿಯೋ

    ಬೆಂಗಳೂರು: ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಪುಣ್ಯ ಕ್ಷೇತ್ರ, ಬಯಲು ಸೀಮೆಯಲ್ಲಿದ್ದರು ಮಲೆನಾಡ ಸೊಬಗನ್ನು ಶಿವಗಂಗೆ ಗಿರಿಯಲ್ಲಿ ಕಾಣಬಹುದು. ಶಿವಗಂಗೆ ಸಂಪೂರ್ಣ ಚುಮುಚುಮು ಚಳಿ ಹಾಗೂ ಮಂಜಿನಿಂದ ಆವೃತ್ತವಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಇತಿಹಾಸ ಪ್ರಸಿದ್ದ, ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಜಿನ ಮಳೆಯಂತೆ ಆವೃತ್ತವಾಗಿರುವ ದೃಶ್ಯ ಸೆರೆಯಾಗಿದೆ. ಎತ್ತ ನೋಡಿದ್ರೂ ಮಂಜು, ಮುಗಿಲೆತ್ತರ ನಿಂತಿರುವ ಗಿರಿ ಶಿಖರ. ಇಂತಹ ದೃಶ್ಯಗಳನ್ನ ನೋಡೋಕೆ ಕರಾವಳಿ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ಆದರೆ ಬೆಂಗಳೂರಿನ ಕೂಗಳತೆ ದೂರದಲ್ಲೇ ಇಂತಹ ರೋಮಾಂಚನವನ್ನು ಕಣ್ತುಂಬಿಕೊಳ್ಳಬಹುದು.

    ಗಿರಿಯ ತುತ್ತತುದಿ ಮಂಜಿನಿಂದ ಸ್ನಾನ ಮಾಡಿಸಿದ ರೀತಿ ಗಿರಿಯ ವಿಹಂಗಮ ನೋಟ ಕಂಡುಬಂದಿದೆ. ಒಟ್ಟಾರೆ ಆಕರ್ಷಕವಾದ ಗಿರಿಯ ಮೇಲ್ಭಾಗದಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದ್ದು, ಚಾರಣಿಗರಿಗೆ ಮಲೆನಾಡಿನ ಅನುಭವ ಶಿವಗಂಗೆ ಬೆಟ್ಟದಲ್ಲಿ ಸಿಗುವುದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=y9NLIZzBlj0&feature=youtu.be

     

  • ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ

    ಬೆಂಗಳೂರು: ಒಂದೆಡೆ ದಟ್ಟ ಮಂಜಿನಿಂದ ಆವೃತ್ತವಾಗಿರುವ ಬೆಟ್ಟ. ಮತ್ತೊಂದೆಡೆ ಬೆಟ್ಟ ಹತ್ತುತ್ತಿರುವ ಪ್ರವಾಸಿಗರ ದಂಡು. ಈ ದೃಶ್ಯಗಳೆಲ್ಲ ಕಂಡುಬಂದದ್ದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆ ಬೆಟ್ಟದಲ್ಲಿ.

    ಚುಮುಚುಮು ಚಳಿಯಲ್ಲಿ ದಟ್ಟವಾದ ಮಂಜಿನ ಪ್ರಕೃತಿ ಸೌಂದರ್ಯವನ್ನು ಸವಿಯಲು, ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಪುಣ್ಯ ಕ್ಷೇತ್ರ ಶಿವಗಂಗೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.

    ಮಳೆಗಾಲ ಮುಗಿದು ಈಗಾಗಲೇ ಚಳಿಗಾಲ ಕೂಡ ಅಂತ್ಯದಲ್ಲಿದೆ. ಆದರೆ ಪ್ರವಾಸಿಗರ ತಾಣ ಹಾಗೂ ಪುಣ್ಯ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಶಿವಗಂಗೆ ಬೆಟ್ಟದಲ್ಲಿ ದಟ್ಟ ಮಂಜು ಆವರಿಸುತ್ತಿದ್ದು ಚಾರಣಿಗರನ್ನ ಕೈಬೀಸಿ ಕರೆಯುತ್ತಿದೆ. ಪ್ರಕೃತಿ ಸೊಬಗನ್ನ ಸವಿಯಲು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಶಿವಗಂಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

    ಈ ದಟ್ಟ ಮಂಜಿನಲ್ಲಿ ಬೆಟ್ಟದ ಮೇಲೆ ಹತ್ತುತ್ತಿದ್ದರೆ ಮೋಡದ ಒಳಗೆ ಓಡಾಡಿದ ರೀತಿಯಲ್ಲಿ ಅನುಭವವಾಗುತ್ತದೆ. ಈ ರೀತಿಯ ಮಂಜಿನ ಅನುಭವ ಪಡೆಯಬೇಕೆಂದರೆ ಮಲೆನಾಡು ಅಥವಾ ಕರಾವಳಿ ಪ್ರದೇಶಕ್ಕೆ ಹೋಗಬೇಕಿತ್ತು. ಆದ್ರೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿಯೇ ಈ ಪ್ರಕೃತಿ ಸೊಬಗನ್ನು ಸವಿಯಲು ಅವಕಾಶ ಸಿಕ್ಕಿರುವುದು ಪ್ರವಾಸಿಗರಿಗೆ ಸಂತಸ ತಂದಿದೆ.

     

    ಬಂಡೆಗಳು ತೇವಗೊಳ್ಳುವ ಹಿನ್ನೆಲೆಯಲ್ಲಿ ಕೆಲವರು ಸಂಪೂರ್ಣ ಬೆಟ್ಟ ಹತ್ತಲಾಗದೆ ಅರ್ಧಕ್ಕೆ ಕೆಳಗಿಯುತ್ತಾರೆ. ಈ ಪ್ರಕೃತಿಯ ವಿಸ್ಮಯ ನೋಡುಗರನ್ನ ಕೈ ಬೀಸಿ ಕರೆಯುತ್ತಿದೆ ಅಂತಾರೆ ಪ್ರವಾಸಿಗರು.