Tag: shiva temple

  • ಶಿವನ ದೇವಸ್ಥಾನಕ್ಕಾಗಿ ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಗಡಿಯಲ್ಲಿ ಘರ್ಷಣೆ!

    ಶಿವನ ದೇವಸ್ಥಾನಕ್ಕಾಗಿ ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಗಡಿಯಲ್ಲಿ ಘರ್ಷಣೆ!

    ಬ್ಯಾಂಕಾಕ್‌: ಶಿವನ ದೇವಸ್ಥಾನದ (Shiva Temple) ವಿಚಾರದ ಬಗ್ಗೆ ಥಾಯ್ಲೆಂಡ್ ಮತ್ತು ಕಾಂಬೋಡಿಯಾದ (Thailand-Cambodia Clash) ಮಧ್ಯೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿದ್ದು ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.

    ಬುಧವಾರ ದಟ್ಟವಾದ ಅರಣ್ಯದಿಂದ ಕೂಡಿದ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯನ್ ಡ್ರೋನ್ (Drone) ಪತ್ತೆಯಾಗಿದೆ ಎಂದು ಥಾಯ್ಲೆಂಡ್‌ ಹೇಳಿತ್ತು. ಇದಾದ ಸ್ವಲ್ಪ ಸಮಯದ ನಂತರ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್‌ ಸೈನಿಕರು ಗಾಯಗೊಂಡಿದ್ದು ಈಗ ಗಲಾಟೆಗೆ ಮೂಲ ಕಾರಣ. ಈ ನೆಲ ಬಾಂಬ್‌ ಅನ್ನು ಕಾಂಬೋಡಿಯಾ ಇಟ್ಟಿತ್ತು ಎಂದು ಥಾಯ್ಲೆಂಡ್‌ ದೂರಿದೆ.

    ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಬೆನ್ನಲ್ಲೇ ಎರಡೂ ದೇಶಗಳು ರಾಯಭಾರಿಗಳನ್ನು ಹೊರ ಹಾಕಿವೆ. ನಂತರ ಥಾಯ್ಲೆಂಡ್‌ ಕಾಂಬೋಡಿಯಾದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯಾದ ಫಿರಂಗಿ ಗುಂಡಿನ ದಾಳಿ ನಡೆಸಿದೆ. ಎರಡು ದೇಶಗಳು ಗಡಿಯನ್ನು ಮುಚ್ಚಿದ್ದು ತನ್ನ ದೇಶದ ಜನರು ಮರಳುವಂತೆ ಸೂಚಿಸಿವೆ. ಇದನ್ನೂ ಓದಿ: ಮುಂಬೈ ದಾಳಿಯ ರುವಾರಿ, ಸಂಸತ್‌ ಮೇಲಿನ ದಾಳಿಯ ಸಂಚುಕೋರ ಲಷ್ಕರ್ ಉಗ್ರ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಾವು

    ಕಾಂಬೋಡಿಯಾದ ದಾಳಿಯಿಂದ ಒಂಬತ್ತು ಥಾಯ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ವರ್ಷದ ಬಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಥಾಯ್ ಅಧಿಕಾರಿಗಳು ಹೇಳಿದಾರೆ. ಇದಕ್ಕೆ ಪ್ರತಿಯಾಗಿ ಥಾಯ್ ಸೈನ್ಯವು ಕಾಂಬೋಡಿಯನ್ ಪಡೆಗಳ ಮೇಲೆ BM-21 ರಾಕೆಟ್‌ಗಳನ್ನು ಹಾರಿಸಿವೆ. ಅಷ್ಟೇ ಅಲ್ಲದೇ ಎಫ್‌ 16 ಯುದ್ಧ ವಿಮಾನದ ಮೂಲಕ ಏರ್‌ ಸ್ಟ್ರೈಕ್‌ ಮಾಡಿದೆ ಎಂದು ವರದಿಯಾಗಿದೆ. ಎರಡೂ ದೇಶಗಳ 800 ಕಿಮೀ ಗಡಿಯಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ.


    ಏನಿದು ದೇವಸ್ಥಾನ ವಿವಾದ?
    ಖಮೇರ್ ರಾಜವಂಶದ ಒಂದನೇ ಸೂರ್ಯವರ್ಮ 11ನೇ ಶತಮಾನದಲ್ಲಿ ಶಿವನ ದೇವಸ್ಥಾನ ಕಟ್ಟಿಸಿದ್ದಾನೆ. ಈ ದೇವಸ್ಥಾನ ಎರಡೂ ದೇಶಗಳ ಗಡಿಯಲ್ಲಿದೆ. ಈ ದೇವಸ್ಥಾನ ಯಾವ ದೇಶಕ್ಕೆ ಸೇರಬೇಕು ಎನ್ನುವ ವಿಚಾರಕ್ಕೆ ಈಗ ಕಿತ್ತಾಟ ನಡೆಯುತ್ತಿದೆ. ವಿಶೇಷ ಏನೆಂದರೆ ಈ ಎರಡೂ ದೇಶಗಳ ಬೌದ್ಧ ಧರ್ಮದ ದೇಶಗಳಾಗಿದ್ದು, 95% ಹೆಚ್ಚು ಬೌದ್ಧರೇ ನೆಲೆಸಿದ್ದಾರೆ.

    ಈ ದೇವಾಲಯಗಳು ಖಮೇರ್ ಸಾಮ್ರಾಜ್ಯದ ಐತಿಹಾಸಿಕ ಗಡಿಯೊಳಗೆ ಬರುತ್ತವೆ ಎಂದು ಕಾಂಬೋಡಿಯಾ ಹೇಳಿದರೆ ಥಾಯ್ಲೆಂಡ್‌ ವಸಾಹತುಶಾಹಿ ಯುಗದ ನಕ್ಷೆಗಳನ್ನು ಉಲ್ಲೇಖಿಸುತ್ತದೆ ಮತ್ತು ದೇವಾಲಯಗಳು ತನ್ನ ಪ್ರದೇಶದೊಳಗೆ ಇವೆ ಎಂದು ಥಾಯ್ಲೆಂಡ್‌ ಪ್ರತಿಪಾದಿಸುತ್ತಿದೆ. ಈ ದೇವಸ್ಥಾನವನ್ನು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎಂದು ಕಾಂಬೋಡಿಯಾ ಭಾರೀ ಪ್ರಯತ್ನ ನಡೆಸಿತ್ತು. ಆದರೆ ಥಾಯ್ಲೆಂಡ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಯುಕೆ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಭಾರತಕ್ಕೆ ಏನು ಲಾಭ?

    ಬೌದ್ಧ ಕೇಂದ್ರಗಳಾಗಿ ಹೇಗೆ ಮಾರ್ಪಟ್ಟವು?
    ಮೂಲತಃ ಶೈವ ಹಿಂದೂ ಪೂಜೆಗಾಗಿ ನಿರ್ಮಿಸಲ್ಪಟ್ಟಿದ್ದರೂ, ಖಮೇರ್ ಸಾಮ್ರಾಜ್ಯವು ಮಹಾಯಾನ ಬೌದ್ಧಧರ್ಮವನ್ನು ಸ್ವೀಕರಿಸಿದಂತೆ ದೇವಾಲಯಗಳನ್ನು ಕ್ರಮೇಣ ಬೌದ್ಧ ಬಳಕೆಗೆ ಬಳಸಲಾಯಿತು. ರಾಜ ಜಯವರ್ಮನ್ VII ರ ಅಡಿಯಲ್ಲಿ, ಧರ್ಮ ಸಲಾಸ್ (ವಿಶ್ರಾಂತಿ ಗೃಹಗಳು) ನಂತಹ ಹೆಚ್ಚುವರಿ ರಚನೆಗಳನ್ನು ಸೇರಿಸಲಾಯಿತು.

  • ಅಮೆರಿಕ | ಲಿವರ್‌ಮೋರ್‌ನ ಶಿವ-ವಿಷ್ಣು ದೇವಾಲಯದಲ್ಲಿ ನಿತ್ಯ ಆರಾಧನೆ

    ಅಮೆರಿಕ | ಲಿವರ್‌ಮೋರ್‌ನ ಶಿವ-ವಿಷ್ಣು ದೇವಾಲಯದಲ್ಲಿ ನಿತ್ಯ ಆರಾಧನೆ

    ಲಿವರ್‌ ಮೋರ್‌ನ ಶಿವವಿಷ್ಣು ದೇವಾಲಯ ಅಮೆರಿಕದ ಬೃಹತ್‌ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ನಿರ್ಮಾಣ ಕಾರ್ಯ 1985ರಲ್ಲಿ ಆರಂಭವಾಗಿ 1992ರಲ್ಲಿ ಪೂರ್ಣಗೊಂಡಿತು.

    ದೇವಾಲಯದ ವಾಸ್ತುನಿರ್ಮಾಣದಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ವಾಸ್ತುಶೈಲಿಗಳು ಸುಂದರವಾಗಿ ಸೇರಿಕೊಂಡಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ದೇವಾಲಯದ ಅಂಗಣದ ಸುತ್ತ ಗಣೇಶ, ಲಕ್ಷ್ಮೀದೇವಿ, ದುರ್ಗೆ, ಅಯ್ಯಪ್ಪ ಸ್ವಾಮಿ ಗುಡಿಗಳಿವೆ. ಇಲ್ಲಿಗೆ ಹೆಚ್ಚಿನ ವಿಗ್ರಹಗಳನ್ನು 1985ರಲ್ಲಿ ತಮಿಳುನಾಡು ಸರ್ಕಾರ ಕಾಣಿಕೆಯ ರೂಪದಲ್ಲಿ ನೀಡಿತ್ತು. ಅಸಂಖ್ಯ ಭಕ್ತರನ್ನು ಆಕರ್ಷಿಸುವ ಈ ದೇವಾಲಯದಲ್ಲಿ ಎಲ್ಲ ಸಮುದಾಯಗಳ ಜನರಿಗೂ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಇದೆ. ಪ್ರತಿ ವರ್ಷವೂ ಇಲ್ಲಿ ಶಿವರಾತ್ರಿ ಹಬ್ಬದ ದಿನ ವಿಶೇಷ ಪೂಜಾ ಕೈಂಕರ್ಯ, ವಿವಿಧ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ.

    ಅಮೆರಿಕದಲ್ಲಿ ಇನ್ನೂ ಹಲವು ಶಿವದೇವಾಲಯಗಳಿವೆ. ಡೆನ್ವರ್ (ಕೊಲರಾಡೋ)ನ ಶಿವ ದೇವಾಲಯ ಹದಿನೈದು ವರ್ಷಗಳಷ್ಟು ಹಳೆಯದು. ನಾರ್ತ್ ಕೆರೋಲಿನಾದ ಮೌಂಟ್ ಸೋಮ ಎಂಬ ಪರ್ವತದಲ್ಲಿ ಶ್ರೀಸೋಮೇಶ್ವರ ದೇವಾಲಯ ಇದೆ. ಇದನ್ನು ʻಪಶ್ಚಿಮದ ಕೈಲಾಸ’ ಎಂದು ಕರೆಯಲಾಗುತ್ತದೆ. ವಾಷಿಂಗ್ಟನ್ ಡಿಸಿ ಮತ್ತು ದಕ್ಷಿಣ ಫ್ಲೋರಿಡಾದಲ್ಲಿ ಶಿವ-ವಿಷ್ಣು ದೇವಾಲಯಗಳಿವೆ.

  • ಶಿವನ ಕಣ್ಣೀರಿಂದಲೇ ಶಿವಾಲಯವಾದ ಕಥೆ – ಪಾಕಿಸ್ತಾನದ ಕಟಾಸ್‌ ರಾಜ್‌ಬಗ್ಗೆ ನಿಮಗೆಷ್ಟು ಗೊತ್ತು?

    ಶಿವನ ಕಣ್ಣೀರಿಂದಲೇ ಶಿವಾಲಯವಾದ ಕಥೆ – ಪಾಕಿಸ್ತಾನದ ಕಟಾಸ್‌ ರಾಜ್‌ಬಗ್ಗೆ ನಿಮಗೆಷ್ಟು ಗೊತ್ತು?

    ಭಾರತದಲ್ಲಿ ಶಿವಾಲಯವಿಲ್ಲದ ಊರೇ ಇಲ್ಲ. ಹೆಚ್ಚಿನ ಶಿವಾಲಯಗಳು ನೂರಾರು ವರ್ಷಗಳಷ್ಟು ಪುರಾತನವಾಗಿವೆ, ಕೆಲ ಶಿವಾಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರೆ, ಇನ್ನೂ ಕೆಲ ಶಿವಾಲಯಗಳು ಊರ ಜನರ ಶ್ರೀರಕ್ಷೆಯ ನಂಬಿಕೆಯಾಗಿ ಉಳಿದಿವೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ, ಅಸ್ಸಾಂ, ಅರುಣಾಚಲ ಪ್ರದೇಶಗಳಿಂದ ಹಿಡಿದು ಗುಜರಾತ್ ತನಕ ಪ್ರತಿಯೊಂದು ಪ್ರಾಂತ್ಯದಲ್ಲೂ ಭವ್ಯ, ಐತಿಹಾಸಿಕ ಶಿವ ದೇವಾಲಯಗಳು ಒಂದನ್ನೊಂದು ಮೀರಿಸುವಂತಿವೆ.

    ಕೇದಾರನಾಥ ಮಂದಿರ, ಭಾರತದ ಸುಪ್ರಸಿದ್ಧ ಮತ್ತು ಆದ್ಯ ಶಿವ ದೇವಾಲಯ (Shiva Temple). ಅಮರನಾಥ ಕ್ಷೇತ್ರ, ಸ್ವಯಂಭೂ ಹಿಮಲಿಂಗದ ಅದ್ಭುತ ದೇವಾಲಯ. ಕಾಶೀ ವಿಶ್ವನಾಥ ದೇವಾಲಯದಿಂದಾಗಿ ಈ ಕ್ಷೇತ್ರ ಅವಿಮುಕ್ತ ಸ್ಥಾನ ಎಂದು ಪ್ರಸಿದ್ಧ. ಮಹಾಕಾಲೇಶ್ವರ, ಬಾಬಾ ಭೂತನಾಥ ಮಂದಿರ, ತುಂಗನಾಥ ಮಹಾದೇವ, ಬಾಬಾ ಬೈದ್ಯನಾಥ ಮಂದಿರ, ಸೋಮನಾಥ ದೇವಾಲಯ, ಓಂಕಾರೇಶ್ವರ, ತಾರಕೇಶ್ವರ, ತ್ರ್ಯಂಬಕೇಶ್ವರ ಸನ್ನಿಧಾನ ಇವೆಲ್ಲ ಉತ್ತರ ಭಾರತದ ಸುಪ್ರಸಿದ್ಧ ಶಿವದೇವಾಲಯಗಳಾದರೆ, ದಕ್ಷಿಣ ಭಾರತದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಚಿದಂಬರಂನ ನಟರಾಜ, ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯ, ಕರ್ನಾಟಕದ ಕಡಲ ತೀರದ ಮುರುಡೇಶ್ವರ ದೇವಾಲಯ, ಕೇರಳದ ವಡಕ್ಕುನಾಥನ್ ದೇವಾಲಯ… ಹೀಗೆ ಜನಪ್ರಿಯ ಶಿವದೇವಾಲಯಗಳ ಯಾದಿ ಬಹುದೀರ್ಘವಾಗಿದೆ.

    ಇವೆಲ್ಲ ಭಾರತದ ಶಿವದೇವಾಲಯಗಳು… ಶಿವದೇವಾಲಯಗಳ ವ್ಯಾಪ್ತಿ ಇಲ್ಲಿಗೇ ನಿಲ್ಲುವುದಿಲ್ಲ. ಸದಾಶಿವನ ಕೀರ್ತಿಪತಾಕೆ ಭಾರತದ ಹೊರಗೂ ವಿಜೃಂಭಿಸುತ್ತಿದೆ. ಪಾಕಿಸ್ತಾನ (Pakistan), ಶ್ರೀಲಂಕೆಯಿಂದ ಹಿಡಿದು, ಆಗೇಯ ಏಷ್ಯಾದ ದೇಶಗಳ ತನಕ ನೂರಾರು ಜಾಗಗಳಲ್ಲಿ ಪ್ರಾಚೀನ ಶಿವಾಲಯಗಳಿವೆ. ಇದೀಗ ಪಾಶ್ಚಾತ್ಯ ದೇಶಗಳಲ್ಲೂ ಭಾರತೀಯರು ತಾವು ಹೋದ ಕಡೆಗಳಲ್ಲೆಲ್ಲ ಮುಂದಿನ ಪೀಳಿಗೆಗಾಗಿ ಭವ್ಯ ಶಿವಾಲಯ ನಿರ್ಮಿಸುತ್ತಿದ್ದಾರೆ.

    ವರ್ಷದಿಂದ ವರ್ಷಕ್ಕೆ ಶಿವರಾತ್ರಿಯ ಸಂಭ್ರಮವನ್ನು ಆಚರಿಸುತ್ತಿರುವ ಈ ಗಡಿಯಾಚೆಗಿನ ಶಿವಾಲಯದ ಬಗ್ಗೆ ಒಂದಿಷ್ಟು ತಿಳಿಯೋಣ….

    ಪಾಕಿಸ್ತಾನದ ಕಟಾಸ್‌ ರಾಜ್‌ ದೇವಾಲಯ ಚಕ್ವಾಲ್‌:
    ಕಟಾಸ್‌ರಾಜ್ ಶಿವ ದೇವಾಲಯ (Katas Raj Temple) ಇರುವುದು ಪಾಕಿಸ್ತಾನದ ಪಂಜಾಬ್ ರಾಜ್ಯದ ಚಟ್ಬಾಲ್ ಜಿಲ್ಲೆಯಲ್ಲಿ, ಇದು ರಾಮಾಯಣ, ಮಹಾಭಾರತಗಳಷ್ಟೇ ಹಳೆಯದು ಎಂದು ಹೇಳುತ್ತಾರೆ. ಪಾಂಡವರು ತಮ್ಮ ವನವಾಸದ ಹೆಚ್ಚಿನ ಭಾಗವನ್ನು ಇಲ್ಲಿ ಕಳೆದಿದ್ದರು ಎಂದು ಸ್ಥಳಪುರಾಣ ಹೇಳುತ್ತದೆ.

    ಕಟಾಸ್‌ರಾಜ್‌ ಎಂಬುದು ಇಲ್ಲಿರುವ ಕೊಳದ ಹೆಸರು. ಈ ಕೊಳದಲ್ಲಿ ದೈವಿಕ ಶಕ್ತಿ ಇದೆ ಎಂದು ಜನರು ನಂಬುತ್ತಾರೆ. ಸ್ಥಳಪುರಾಣದ ಪ್ರಕಾರ ದಕ್ಷಯಜ್ಞದಲ್ಲಿ ಆತ್ಮಾಹುತಿ ಮಾಡಿಕೊಂಡಾಗ ಶಿವನ ಕಣ್ಣೀರಿನಿಂದ ಎರಡು ಕೊಳಗಳು ನಿರ್ಮಾಣವಾದವು. ಇವುಗಳಲ್ಲಿ ಒಂದು ಪುಷ್ಕರ, ಇನ್ನೊಂದು ಕೇತಾಕ್ಷ ಅರ್ಥಾತ್ ಕಣ್ಣೀರು. ಇದೇ ಶಬ್ದ ಜನರ ಬಾಯಿಯಲ್ಲಿ ʻಕಟಾಸ್ʼ ಎಂದು ಸ್ಥಳಪುರಾಣದಲ್ಲಿದೆ.

    ಕಟಾಸ್‌ರಾಜ್‌ ಇರುವುದು ಭೂಮಟ್ಟದಿಂದ 2,000 ಅಡಿ ಎತ್ತರದ ಪ್ರದೇಶದಲ್ಲಿ. ಇದರ ಸುತ್ತಲೂ ಬಯಲುಭೂಮಿ ಇದೆ. ಕಟಾಸ್‌ರಾಜ್‌ನ ಸುತ್ತ ಏಳು ದೇವಾಲಯಗಳಿವೆ. ಇವುಗಳಿಗೆ ಸಾತ್‌ಘರ್ ಎಂದು ಹೆಸರಿದೆ. ಚೌಕಾಕಾರದ ವೇದಿಕೆಗಳ ಮೇಲೆ ನಿರ್ಮಾಣವಾಗಿರುವ ಸರಳ ವಾಸ್ತುರಚನೆಯ ಈ ದೇವಾಲಯಗಳು ಕಾಶ್ಮೀರದ ದೇವಾಲಯಗಳನ್ನು ಹೋಲುತ್ತವೆ. ಇವುಗಳಲ್ಲಿ ಸುಪ್ರಸಿದ್ಧವಾಗಿರುವುದು ಶಿವ ದೇವಾಲಯ. ಮಹಾಭಾರತ ಕಾಲದಲ್ಲಿ ಶ್ರೀಕೃಷ್ಣ ಸ್ವಯಂ ಇಲ್ಲಿನ ಶಿವ ದೇವಾಲಯ ನಿರ್ಮಿಸಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದ ಎನ್ನುತ್ತದೆ ಸ್ಥಳಪುರಾಣ. ಪಾಂಡವರು ವನವಾಸ ಕಳೆದಿದ್ದು ಇದೇ ಪರಿಸರದಲ್ಲಿ ಎಂದೂ ಸಹ ಹೇಳಲಾಗಿದೆ.

    4ನೇ ಶತಮಾನದಲ್ಲಿ ಚೀನೀ ಯಾತ್ರಿ ಫಾಹಿಯಾನ್ ಇಲ್ಲಿಗೆ ಭೇಟಿ ನೀಡಿ, ಇಲ್ಲಿನ ದೇವಾಲಯಗಳ ಬಗ್ಗೆ ಬರೆದಿದ್ದ. ಗುರುನಾನಕ್ ಈ ದೇವಾಲಯಗಳಿಗೆ ಭೇಟಿ ನೀಡಿದ್ದರು, ಇಲ್ಲಿ ತಪಸ್ಸಿಗೆ ಕುಳಿತಿದ್ದರು ಎಂದು ಸಿಖ್ಖರು ನಂಬುತ್ತಾರೆ. ಸಿಕ್ಖ್‌ ಚಕ್ರವರ್ತಿ ರಣಜಿತ್ ಸಿಂಗ್ ಎರಡು ಬಾರಿ ಇಲ್ಲಿಗೆ ತೀರ್ಥಯಾತ್ರೆ ಮಾಡಿದ್ದ.

    ಭಾರತ ವಿಭಜನೆಗೆ ಮೊದಲು ಈ ದೇವಾಲಯ ಉತ್ತರ ಭಾರತೀಯ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿತ್ತು. ಈ ದೇವಾಲಯ ಹಲವು ಸಂಪ್ರದಾಯಗಳ ಜನರ ಪವಿತ್ರ ಕ್ಷೇತ್ರವಾಗಿತ್ತು. ಹಿಂದೂಗಳು 1947ರಲ್ಲಿ ಭಾರತಕ್ಕೆ ವಲಸೆ ಹೋದರೂ ಈ ದೇವಾಲಯದ ನಂಟು ಬಿಡಲಿಲ್ಲ. ಇಂದಿಗೂ ಎಲ್ಲ ಸಂಪ್ರದಾಯಗಳ ಜನರು ಇಲ್ಲಿ ತೀರ್ಥಯಾತ್ರೆಗೆ ಬರುತ್ತಾರೆ. ಇವರು ದೇವಾಲಯದ ಮುಂದಿನ ಕೊಳದಲ್ಲಿ ಸ್ನಾನಮಾಡಿ, ದೇವಾಲಯವನ್ನು ಪ್ರವೇಶಿಸುತ್ತಾರೆ.

    ಕಟಾಸ್‌ರಾಜ್‌ ಕೊಳಕ್ಕೆ ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಇದೆ. ವನವಾಸದ ವೇಳೆ ಯುಧಿಷ್ಠಿರನನ್ನು ಯಮಧರ್ಮರಾಯ ಯಕ್ಷನ ರೂಪದಲ್ಲಿ ಭೇಟಿಯಾಗಿ ಯಕ್ಷಪ್ರಶ್ನೆಗಳನ್ನು ಕೇಳಿದ್ದು ಇದೇ ಕೊಳದ ದಂಡೆಯ ಮೇಲೆ ಎಂದು ಸ್ಥಳಪುರಾಣ ಹೇಳುತ್ತದೆ.

    1965ರ ಭಾರತ-ಪಾಕ್ ಯುದ್ಧದ ಬಳಿಕ ಇಲ್ಲಿಗೆ ಹಿಂದೂಗಳು ಬರಲು ಅನುಮತಿ ಇರಲಿಲ್ಲ. 1984ರ ತನಕವೂ ಇಲ್ಲಿಗೆ ಭೇಟಿ ನೀಡಲು ಭಾರತೀಯರಿಗೆ ಅನುಮತಿ ಸಿಗುತ್ತಿರಲಿಲ್ಲ. ಆದರೀಗ ಸ್ಥಳೀಯ ಮುಸ್ಲಿಮರು ದೇವಾಲಯಗಳ ಜಾಗದಲ್ಲಿ ನಿವಾಸ ಹೂಡಿದ್ದಾರೆ, ಕಟಾಸ್‌ರಾಜ್ ಕೊಳದ ನೀರನ್ನು ಕೊಳಚೆ ಹೊಂಡವಾಗಿ ಮಾಡಿದ್ದಾರೆ. ಕಟಾಸ್‌ರಾಜ್ ದೇವಾಲಯಗಳ ಪರಿಸರದಲ್ಲಿ ಹಲವಾರು ಬೋರ್‌ವೆಲ್‌ಗಳಿದ್ದು, ಇಲ್ಲಿನ ನೀರನ್ನು ಔದ್ಯೋಗಿಕ ಕಾರ್ಯಗಳಿಗೆ ಬಳಸುತ್ತಿರುವ ಕಾರಣ ದೇವಾಲಯದ ಮುಂದಿರುವ ಕೊಳದ ನೀರು ಬತ್ತುತ್ತಿದೆ ಎಂದು ಈಗಾಗಲೇ ಅನೇಕ ವರದಿಗಳು ತಿಳಿಸಿವೆ. ಆದರೂ ಪಾಕಿಸ್ತಾನದ ಹಿಂದೂಗಳ ಶ್ರದ್ಧಾಭಕ್ತಿ ಕಡಿಮೆಯಾಗಿಲ್ಲ. ಇಲ್ಲಿ ಶಿವರಾತ್ರಿ ಆಚರಿಸಲು ಗಣನೀಯ ಸಂಖ್ಯೆಯಲ್ಲಿ ಪಾಕಿಸ್ತಾನಿ ಹಿಂದೂಗಳು ಬರುತ್ತಾರೆ.

    ಸ್ವಾತಂತ್ರ್ಯದ ಬಳಿಕ ಹಲವಾರು ದಶಕಗಳ ಕಾಲ ಈ ದೇವಾಲಯ ಸಂಕೀರ್ಣ ದುಃಸ್ಥಿತಿಯಲ್ಲಿತ್ತು. ಇವುಗಳನ್ನು ನವೀಕರಿಸಲು 2006ರಿಂದ ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ. 2005ರಲ್ಲಿ ಭಾರತದ ಮಾಜಿ ಉಪಪ್ರಧಾನಿ ಲಾಲ್‌ ಕೃಷ್ಣ ಆಡ್ವಾಣಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಇಲ್ಲಿಗೆ ಬಂದಿದ್ದರು.

    ಕಟಾಸ್‌ರಾಜ್‌ನ ಸುತ್ತ ಮುತ್ತ ಶಿಲಾಯುಗದ ಸಲಕರಣೆಗಳು ಮತ್ತು ಆಯುಧಗಳು, ಮಣ್ಣಿನ ಮಡಕೆಗಳು ಹಾಗೂ ಬಳೆಗಳು ದೊರೆತಿವೆ. ಇದರ ಪಕ್ಕದ ಉಪ್ಪಿನ ಬೆಟ್ಟಗಳಲ್ಲಿ ಹಲವಾರು ಪ್ರಾಗೈತಿಹಾಸಿಕ ಪಳೆಯುಳಿಕೆಗಳಿವೆ ಎನ್ನುತ್ತಾರೆ. ಇವುಗಳಲ್ಲಿ ಮ್ಯಾಮೊತ್ ಮತ್ತು ಡೈನಾಸರ್‌ಗಳನ್ನು ಹೋಲುವ ಪ್ರಾಣಿಗಳ ಎಲುಬುಗಳು ಸಿಕ್ಕಿವೆ ಎಂದೂ ಹೇಳುತ್ತಾರೆ.

    ಕಟಾಸ್‌ರಾಜ್ ದೇವಾಲಯ ಸಂಕುಲ ಇರುವುದು ಚಕ್ವಾಲ್ ಜಿಲ್ಲಾಕೇಂದ್ರದಿಂದ 40 ಕಿ.ಮೀ. ದೂರದಲ್ಲಿ. ಇಸ್ಲಾಮಾಬಾದ್-ಲಾಹೋರ್ ಮೋಟಾರ್‌ವೇಯಲ್ಲಿ ಸಾಗಿ, ಕಲ್ಲಾರ್-ಕಹಾರ್ ಜಂಕ್ಷನ್ ಬಳಿ ಹೊರಬಿದ್ದು, ಚೋವಾ ಸೈದನ್ ಶಾ ರಸ್ತೆಯಲ್ಲಿ 24 ಕಿ.ಮೀ. ಸಾಗಿದರೆ ಈ ದೇವಾಲಯ ಸಂಕೀರ್ಣ ಸಿಗುತ್ತದೆ.

  • ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!

    ಮೈಸೂರು ಮಹಾರಾಜರು ಕಟ್ಟಿಸಿದ್ದ ಶಿವನ ದೇವಾಲಯವಾಯ್ತು ಬಾರ್ & ರೆಸ್ಟೋರೆಂಟ್!

    ಚಾಮರಾಜನಗರ: ಪಾಳು ಬಿದ್ದ ಶಿವನ ದೇವಾಲಯವನ್ನು ಬಾರ್ ಮಾಡಿಕೊಂಡು ಶಿವಲಿಂಗದ ಮುಂದೆ ಮದ್ಯ ಸೇವಿಸಿ ವಿಕೃತಿ ಮೆರೆದಿರುವ ಘಟನೆ ಚಾಮರಾಜನಗರದ (Chamarajanagar) ಉಪ್ಪಾರ ಬೀದಿಯಲ್ಲಿರುವ ದೇವಾಲಯದಲ್ಲಿ ನಡೆದಿದೆ.ಇದನ್ನೂ ಓದಿ: ರೈಲ್ವೆ ಪ್ರಯಾಣದ ವೇಳೆ ಮಗುವಿಗೆ ಏಕಾಏಕಿ ಅನಾರೋಗ್ಯ – ನೆರವಿಗೆ ಬಂದ ಸಮಾಜಸೇವಕ

    ಈ ಪುರಾತನ ಶಿವ ದೇವಾಲಯನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು. ದೇವಾಲಯ ಹಾಳು ಬಿದ್ದಿದ್ದು, ಅದನ್ನು ಪುಂಡ ಪೋಕರಿಗಳು ತಮ್ಮ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ಶಿವಲಿಂಗದ ಮುಂದೆ ಮದ್ಯವನ್ನು ಕುಡಿದು ವಿಕೃತಿ ಮೆರೆಯುತ್ತಿದ್ದಾರೆ.

    ಮೀಸೆ ಚಿಗುರುವ ಮುನ್ನವೇ ಮದ್ಯದ ದಾಸರಾಗಿರುವ ಪಡ್ಡೆ ಹುಡುಗರು ಪೊಲೀಸರ ಭಯವಿಲ್ಲದೇ, ಶಿವಲಿಂಗದ ಮೇಲೆ ಮದ್ಯವಿಟ್ಟು ಸೇವಿಸುತ್ತಿದ್ದಾರೆ. ಇದೀಗ ಮಟ ಮಟ ಮದ್ಯಾಹ್ನವೇ ಕಂಠಪೂರ್ತಿ ಕುಡಿದು ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಕ್ಯಾಮರಾ ಕಂಡ ತಕ್ಷಣ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾರೆ.ಇದನ್ನೂ ಓದಿ: ಮೇವು ತಿನ್ನುವ ವೇಳೆ ಕಚ್ಚಾ ನಾಡಬಾಂಬ್ ಬ್ಲಾಸ್ಟ್ – ಎಮ್ಮೆ ಸಾವು

     

  • ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಮಸ್ಕತ್: ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (Union Minister of State for External Affairs) ವಿ ಮುರಳೀಧರನ್ (V Muraleedharan) ಅವರು ಗುರುವಾರ ಮಸ್ಕತ್‌ನಲ್ಲಿರುವ (Muscat) ಐತಿಹಾಸಿಕ ಶಿವ ದೇವಾಲಯಕ್ಕೆ (Shiva Temple) ಭೇಟಿ ನೀಡಿ ಭಾರತ ಮತ್ತು ಓಮನ್ (Oman) ದೇಶಗಳ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

    ಈ ಕುರಿತು ಮುರಳೀಧರನ್ ಎಕ್ಸ್‌ನಲ್ಲಿ (X) ಮಾಹಿತಿ ಹಂಚಿಕೊಂಡಿದ್ದಾರೆ. ಮೋತೀಶ್ವರ್ ಮಹಾದೇವ್ ಎಂದು ಕರೆಯಲ್ಪಡುವ ಮಸ್ಕತ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ದೇವಾಲಯ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿದೆ. ಇದು ಭಾರತ ಮತ್ತು ಒಮನ್ ನಡುವಿನ ನಿರಂತರ ಸಾಂಸ್ಕೃತಿಕ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಭಾರತ ಮತ್ತು ಒಮನ್ ಜನರ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಅಕ್ಟೋಬರ್ 18 ಮತ್ತು 19ರಂದು ಒಮನ್ ಸುಲ್ತಾನೇಟ್‌ಗೆ ತಮ್ಮ ಮೂರನೇ ಅಧಿಕೃತ ಭೇಟಿಯನ್ನು ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತ್ತು. ಅವರ ಭೇಟಿಯ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು ಒಮಾನಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿಲ್ಲ: ಬೈಡೆನ್

    ಈ ವೇಳೆ ಮುರಳೀಧರನ್ ಅವರು ‘ಮಾಂಡವಿಯಿಂದ ಮಸ್ಕತ್‌ಗೆ: ಭಾರತೀಯ ಸಮುದಾಯ ಮತ್ತು ಭಾರತ ಮತ್ತು ಓಮನ್‌ನ ಹಂಚಿಕೆಯ ಇತಿಹಾಸ’ ಎಂಬ ಉಪನ್ಯಾಸ ಸರಣಿಯನ್ನು ಉದ್ಘಾಟಿಸಲಿದ್ದಾರೆ. ಓಮನ್‌ನಲ್ಲಿರುವ ಭಾರತೀಯ ಸಮುದಾಯದ ಇತಿಹಾಸ ಮತ್ತು ಭಾರತ ಮತ್ತು ಓಮನ್ ನಡುವಿನ ಸಂಬಂಧಗಳಿಗೆ ಅದರ ಕೊಡುಗೆಯ ಮೇಲೆ ಬೆಳಕು ಚೆಲ್ಲುವ ಉಪನ್ಯಾಸ ಸರಣಿಯನ್ನು ಭಾರತೀಯ ರಾಯಭಾರ ಕಚೇರಿ ಆಯೋಜಿಸಿದೆ. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    ಭೇಟಿಯ ಸಮಯದಲ್ಲಿ, ಅವರು ಒಮಾನಿ ನಾಯಕತ್ವ ಮತ್ತು ಗಣ್ಯರೊಂದಿಗೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲಿದ್ದಾರೆ. ಅಲ್ಲದೇ ಓಮನ್‌ನ ನ್ಯಾಷನಲ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಸಂಗ್ರಹದಿಂದ ವಿಶೇಷವಾಗಿ ಸಂಗ್ರಹಿಸಲಾದ 20 ಕಲಾಕೃತಿಗಳ ಸಂಗ್ರಹವಾಗಿರುವ ‘ಇಂಡಿಯಾ ಆನ್ ಕ್ಯಾನ್ವಾಸ್: ಮಾಸ್ಟರ್‌ಪೀಸ್ ಆಫ್ ಮಾಡರ್ನ್ ಇಂಡಿಯನ್ ಪೇಂಟಿಂಗ್’ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು

    ಮುರಳೀಧರನ್ ಅವರು ವಿವಿಧ ಭಾರತೀಯ ಸಮುದಾಯ ಸಂಸ್ಥೆಗಳೊಂದಿಗೆ ಮತ್ತು ವೃತ್ತಿಪರರು, ನೀಲಿ ಕಾಲರ್ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಓಮನ್‌ನಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

    ಜ್ಞಾನವಾಪಿ ಕೇಸ್‌ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು

    ಲಕ್ನೋ: ವಾರಣಾಸಿ ಜ್ಞಾನವಾಪಿ ಮಸೀದಿಯ (Gyanvapi Masjid) ಒಳಗಡೆ ಪೂಜೆ ಮಾಡುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರು (5 Hindu  Women) ಸಲ್ಲಿಸಿದ್ದ ಸಿವಿಲ್‌ ಅರ್ಜಿಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ (Allahabad High Court) ವಜಾಗೊಳಿಸಿದೆ.

    ರಾಖಿಸಿಂಗ್ ಸೇರಿ ಐವರು ಮಹಿಳೆಯರು ಮಸೀದಿ ಆವರಣದಲ್ಲಿ ಇದೆ ಎನ್ನಲಾಗುತ್ತಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯ 2022ರ ಸೆಪ್ಟೆಂಬರ್‌ನಲ್ಲಿ ಈ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ತೀರ್ಪು (Verdict) ಪ್ರಕಟಿಸಿತ್ತು.

    ಈ ಆದೇಶವನ್ನು ಅಂಜುಮಾನ್‌ ಇಂತಾಜಾಮಿಯಾ ಮಸೀದಿ ಸಮಿತಿ (Anjuman Intezamia Masjid Committee) ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ವಾದ ಪ್ರತಿವಾದವನ್ನು ಅಲಿಸಿದ್ದ ಜೆಜೆ ಮುನೀರ್‌ ಅವರಿದ್ದ ಪೀಠ ಕಳೆದ ಡಿಸೆಂಬರ್‌ನಲ್ಲಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಹೈಕೋರ್ಟ್‌ ಐವರು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

    ಹಿಂದೂ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ಹರಿಶಂಕರ್‌ ಜೈನ್‌ ಹೈಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯಿಸಿ, ಇದೊಂದು ದೊಡ್ಡ ಗೆಲುವು ಮತ್ತು ಮೈಲಿಗಲ್ಲು. ಪ್ರಸ್ತುತ ಇರುವ ರಚನೆಯನ್ನು ತೆಗೆದು ನಾವು ಅಲ್ಲಿ ಭವ್ಯವಾದ ಶಿವ ದೇವಾಲಯವನ್ನು ನಿರ್ಮಿಸುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.   ಇದನ್ನೂ ಓದಿ: ಸಾಕ್ಷಿ ಕೊಲ್ಲಲು 15 ದಿನಗಳ ಹಿಂದೆಯೇ ಹರಿದ್ವಾರದಿಂದ ಚಾಕು ಖರೀದಿಸಿದ್ದ ಸಾಹಿಲ್!

    ಈ ಹಿಂದೆ ಜ್ಞಾನವ್ಯಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲ್ಲೇ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು.

    ಏನಿದು ಪ್ರಕರಣ?
    ಈ ಹಿಂದೆ ಕೆಳ ಹಂತದ ಕೋರ್ಟ್ ಮಸೀದಿಯಲ್ಲಿ ಉತ್ಖನನಕ್ಕೆ ಅನುಮತಿ ನೀಡಿತ್ತು. ಉತ್ಖನನ ವೇಳೆ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಮತ್ತು ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಬಳಿಕ ಹಿಂದೂ ಧಾರ್ಮಿಕ ಕುರುಹುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅನುಮತಿ ಕೋರಿ ಸೀತಾ ಸಾಹು ಸೇರಿ, ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಮಸೀದಿಯ ಆಡಳಿತ ಮಂಡಳಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಐವರ ಅರ್ಜಿಗಳು ವಿಚಾರಣೆಗೆ ಯೋಗ್ಯವೇ ಎಂಬುದನ್ನು ಮೊದಲು ನಿರ್ಧರಿಸಿ ಎಂದು ವಾರಣಾಸಿ ಕೋರ್ಟ್‍ಗೆ ನಿರ್ದೇಶನ ನೀಡಿತ್ತು.

    ಮುಸ್ಲಿಮ್‌ ಸಮಿತಿಯ ವಾದ ಏನಿತ್ತು?
    ಮುಸ್ಲಿಮರ ಪರ ವಾದ ಮಂಡಿಸಿದ ವಕೀಲರು 1991ರ ವಿಶೇಷ ಪೂಜಾ ಸ್ಥಳ ಕಾಯ್ದೆಯನ್ನು ಪ್ರಮುಖವಾಗಿ ವಿಚಾರಣೆ ವೇಳೆ ಉಲ್ಲೇಖಿಸಿದ್ದರು. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ಧಾರ್ಮಿಕ ಸ್ವರೂಪವನ್ನು ಬದಲಿಸುವಂತಿಲ್ಲ. 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ಕಾಯ್ದೆಯ ಅನ್ವಯ ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಸಾಧ್ಯವಿಲ್ಲ. ಜ್ಞಾನವ್ಯಾಪಿ ಮಸೀದಿ 16-17 ಶತಮಾನದ ಪುರಾತನ ಧಾರ್ಮಿಕ ಪ್ರದೇಶವಾಗಿರುವ ಈ ಹಿನ್ನಲೆ ಈ ನಿಯಮ ಅನ್ವಯವಾಗಲಿದೆ. ಒಂದು ವೇಳೆ ಪೂಜೆಗೆ ಅವಕಾಶ ನೀಡಿದ್ದಲ್ಲಿ ದೇಶದಲ್ಲಿ ಇಂತಹ ಹತ್ತಾರು ವಿವಾದಾತ್ಮಕ ಪ್ರದೇಶಗಳಲ್ಲೂ ಪೂಜೆ ಅವಕಾಶ ಕೇಳುವ ಸಾಧ್ಯತೆಗಳಿರುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ವಝುಖಾನದಲ್ಲಿ ಪತ್ತೆಯಾಗಿರುವುದು ನೀರಿನ ಕಾರಂಜಿ ಮತ್ತು ಅಲ್ಲಿ ಯಾವುದೇ ಶೃಂಗಾರ ಗೌರಿ ಮೂರ್ತಿಗಳಿಲ್ಲ, ಅದು ಹಳೆಯ ವಾಸ್ತು ಶಿಲ್ಪ ಶೈಲಿಯಾಗಿದೆ ಎಂದು ವಾದ ಮಂಡಿಸಿದ್ದರು.

    ವಾರಣಾಸಿ ಜಿಲ್ಲಾ ನ್ಯಾಯಾಲಯ ಹೇಳಿದ್ದೇನು?
    ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್‌ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ.

     

    ಅರ್ಜಿದಾರರು ಇಲ್ಲಿ ಪೂಜೆ ಮಾಡಲು ಮಾತ್ರ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಹೊರತು ಈ ವಿವಾದಿತ ಜಾಗದ ಸಂಪೂರ್ಣ ಹಕ್ಕು ದೇವಸ್ಥಾನಕ್ಕೆ ಸೇರಬೇಕೆಂದು ಕೇಳಿಲ್ಲ. ಹೀಗಾಗಿ ಇದು ಪೂಜಾ ಸ್ಥಳಗಳ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. ಪೂಜೆಗೆ ಮಾತ್ರ ಸೀಮಿತವಾಗಿ ಅರ್ಜಿ ಸಲ್ಲಿಸಿದರಿಂದ ಇದು ಮೂಲಭೂತ ಹಕ್ಕು ಜೊತೆಗೆ ಇದು ಸಾಂಪ್ರದಾಯಿಕ ಧಾರ್ಮಿಕ ಹಕ್ಕು ಆಗಿದೆ.

    ಸುಪ್ರೀಂನಲ್ಲಿದೆ ಅರ್ಜಿ
    ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ.

    ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ. ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನದ ಜಾಗಕ್ಕಾಗಿ ಹಿಂದೂಗಳು ನೂರಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಶಾಂತಿಯುತವಾದ ಚಳವಳಿ ನಡೆಸುತ್ತಿದ್ದಾರೆ. ಆದರೆ ಈ ಕಾಯ್ದೆ ರೂಪಿಸುವಾಗ ಕೇಂದ್ರ ಸರ್ಕಾರ ಆಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಕೃಷ್ಣ ಜನ್ಮಸ್ಥಾನವಾದ ಮಥುರಾವನ್ನು ಹೊರಗೆ ಇರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

  • ರಾಜಸ್ಥಾನದಲ್ಲಿ ಬೀದಿಗಿಳಿದ ಬುಲ್ಡೋಜರ್ – 300 ವರ್ಷ ಹಳೆಯ ಶಿವಮಂದಿರ ನೆಲಸಮ

    ರಾಜಸ್ಥಾನದಲ್ಲಿ ಬೀದಿಗಿಳಿದ ಬುಲ್ಡೋಜರ್ – 300 ವರ್ಷ ಹಳೆಯ ಶಿವಮಂದಿರ ನೆಲಸಮ

    ಜೈಪುರ: ಉತ್ತರಪ್ರದೇಶದಿಂದ ಪ್ರಾರಂಭವಾದ ಬುಲ್ಡೋಜರ್ ಸದ್ದು ಇದೀಗ ದೇಶಾದ್ಯಂತ ಅಬ್ಬರಿಸುತ್ತಿದೆ. ಈಗ ಕಾಂಗ್ರೆಸ್ ಅಧಿಕಾರವಿರುವ ರಾಜಸ್ಥಾನದಲ್ಲಿ ಜುಲ್ಡೋಜರ್ ಒಂದು 300 ವರ್ಷ ಹಳೆಯ ದೇವಾಯಲವನ್ನು ಕೆಡವಿದ್ದು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದೆ.

    ರಾಜಸ್ಥಾನದ ಅಲ್ವಾರ್ ಜಿಲ್ಲೆ ಸರಾಯ್ ಪ್ರದೇಶದಲ್ಲಿರುವ 300 ವರ್ಷಗಳಷ್ಟು ಹಳೆಯ ಶಿವ ದೇವಾಲಯವನ್ನು ಶುಕ್ರವಾರ ಬುಲ್ಡೋಜರ್ ನೆಲಸಮ ಮಾಡಿದೆ. ಪುರಾತನ ದೇವಾಲಯವನ್ನು ಕೆಡವಿ ಹಾಕಿರುವ ಕಾರಣ ಗ್ರಾಮಸ್ಥರು ಆಕ್ರೋಶಗೊಂಡು, ನಗರ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಉಪ ವಿಭಾಗೀಯ ಮ್ಯಾಜಿಸ್ಟೆçÃಟ್ ಹಾಗೂ ಪುರಸಭೆಯ ರಾಜಗಢ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಜಹಾಂಗೀರ್‌ಪುರಿ ಗಲಭೆ ಪ್ರಕರಣಕ್ಕೆ ಟ್ವಿಸ್ಟ್ – ಇಡಿಗೆ ಪತ್ರ ಬರೆದ ದೆಹಲಿ ಪೊಲೀಸ್ ಆಯುಕ್ತ

    ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್‌ ಯಾದವ್‌ಗೆ ಜಾಮೀನು

     

  • ಸ್ವಾಮೀಜಿಗಳಿಗೆ ಮಣಿದು ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಮವಸ್ತ್ರ ಬದಲು

    ಸ್ವಾಮೀಜಿಗಳಿಗೆ ಮಣಿದು ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಮವಸ್ತ್ರ ಬದಲು

    ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಕೇಸರಿಮಣಿಗಳ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಮವಸ್ತ್ರವನ್ನು ಬದಲಾಯಿಸಿದೆ.

    ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿ, ಕೇಸರಿ ಸಮವಸ್ತ್ರಕ್ಕೆ ಪ್ರತಿಭಟಿಸಿದ್ದಕ್ಕೆ ಸಿಬ್ಬಂದಿಯ ಉಡುಪನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಇದನ್ನೂ ಓದಿ: 100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್

    ramayana express

    ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ರಾಮಾಯಣ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಿಬ್ಬಂದಿ ಕೇಸರಿ ಸಮವಸ್ತ್ರ ಧರಿಸಿದ್ದಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕೂಡಲೇ ಸಮವಸ್ತ್ರ ಹಿಂಪಡೆಯದಿದ್ದರೇ ಡಿ.12ರಂದು ರೈಲನ್ನು ದೆಹಲಿಯಲ್ಲಿ ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

    ramayana express

    ರೈಲಲ್ಲಿ ಉಪಹಾರ ನೀಡುವ ವೇಟರ್ ಸಾಧುಗಳಂತೆ ಕೆಸರಿ ಉಡುಪು ಧರಿಸಿ ರುದ್ರಾಕ್ಷಿ ಮಾಲೆಗಳನ್ನು ಹಾಕಿಕೊಳ್ಳುವುದು ಹಿಂದೂ ಧರ್ಮ ಹಾಗೂ ಸಾಧುಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಉಜ್ಜಯಿನಿ ಅಖಾಡ ಪರಿಷತ್ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ ಪುರಿ ಹೇಳಿದ್ದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

    ಎರಡು ದಿನಗಳ ಹಿಂದೆಯೇ ರಾಮಾಯಣ ವೇಟರ್‌ಗಳ ಸಮವಸ್ತ್ರವನ್ನು ವಿರೋಧಿಸಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆಯಲಾಗಿದೆ. ಸಮವಸ್ತ್ರ ಬದಲಾವಣೆಗೊಳ್ಳದಿದರೇ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟಿಸಲಾಗುವುದು ಎಂದಿದ್ದರು.

    ದೇಶದ ಮೊದಲ ರಾಮಾಯಣ ಸರ್ಕ್ಯೂಟ್ ರೈಲನ್ನು ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ನ.7ರಂದು ಪ್ರಾರಂಭಿಸಲಾಗಿದೆ. ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ 15 ಸ್ಥಳಗಳಿಗೆ ಈ ರೈಲ್ವೆ ಮೂಲಕ ಪ್ರಯಾಣಿಸಬಹುದು.

    7 ಸಾವಿರಕ್ಕೂ ಹೆಚ್ಚು ಕಿಮೀ ಚಲಿಸುವ ಈ ರೈಲು ಅಯೋಧ್ಯೆ, ಪ್ರಯಾಗ್, ನಂದಿಗ್ರಾಮ, ಜನಕಪುರ, ಚಿತ್ರಕೂಟ, ಸೀತಾಮರ್ಹಿ, ನಾಸಿಕ್, ಹಂಪಿ ಮತ್ತು ರಾಮೇಶ್ವರ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಕರೆದೊಯ್ಯುತ್ತದೆ. ಈ ರೈಲಿನ ಪ್ರಥಮ ದರ್ಜೆ ರೆಸ್ಟೋರೆಂಟ್, ಗ್ರಂಥಾಲಯ, ಶವರ್ ಕ್ಯೂಬಿಕಲ್‍ಗಳನ್ನು ಹೊಂದಿದೆ. ಶಿವನ ದೇಗುಲವಿರುವ ಉಜ್ಜಯಿನಿಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

  • ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

    ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಹಾರ್ನೋಡ ಗ್ರಾಮದಲ್ಲಿ ನಿಧಿಯ ಆಸೆಗಾಗಿ ಪ್ರಾಚೀನ ಕಾಲದ ಶಿವನ ದೇವಾಲಯದ ಮೂರ್ತಿಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.

    ದೇವಸ್ಥಾನವು ಪ್ರಾಚೀನ ಕಾಲದ್ದಾಗಿದ್ದು, ಸುಂದರ ಕಲ್ಲಿನ ಕೆತ್ತನೆ, ಶಿವನ ಲಿಂಗ ವಿಶೇಷವಾಗಿದೆ. ಇಡೀ ದೇವಸ್ಥಾನ ಕಲ್ಲಿನಿಂದ ನಿರ್ಮಾಣವಾಗಿದೆ. ದೇವಸ್ಥಾನ ದಟ್ಟ ಅರಣ್ಯದಲ್ಲಿ ಇರುವುದರಿಂದ ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿಲ್ಲ. ಇದರ ಲಾಭ ಪಡೆದ ನಿಧಿ ಕಳ್ಳರು, ಈಶ್ವರ ಲಿಂಗ ಪೀಡವನ್ನು ಕಿತ್ತು ಹಾಳು ಮಾಡಿ ತಳಭಾಗದಲ್ಲಿ ಅಗೆದಿದ್ದಾರೆ. ಈಶ್ವರ ಲಿಂಗಕ್ಕೂ ಘಾಸಿ ಮಾಡಿದ್ದು, ಲಿಂಗವೂ ಎರಡು ತುಂಡಾಗಿದೆ. ಇಲ್ಲಿನ ಕೆಲವು ಮೂರ್ತಿಗಳಿಗೂ ಹಾನಿಮಾಡಿದ್ದಾರೆ. ಇದನ್ನೂ ಓದಿ: ಕಬಿನಿ ಫಾರೆಸ್ಟ್‌ನಲ್ಲಿ  ಗಣೇಶ್, ರಾಜೂಗೌಡ ಫ್ಯಾಮಿಲಿ ಟ್ರಿಪ್

    ಘಟನೆ ನಡೆದಿರುವುದು ಇದೀಗ ಸ್ಥಳೀಯ ಜನರಿಗೆ ತಿಳಿದಿದ್ದು, ಸ್ಥಳಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸುಧಾಕರ್ ರೆಡ್ಡಿ ಆಗಮಿಸಿ ವೀಕ್ಷಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಇಲ್ಲಿನ ದೇವಸ್ಥಾನಗಳ ಬಗ್ಗೆ ಅಧ್ಯಯನ ನೆಡೆಯಬೇಕು, ಈ ರೀತಿಯ ಪುರಾತನ ದೇವಸ್ಥಾನವನ್ನು ಪುರಾತತ್ವ ಇಲಾಖೆ ರಕ್ಷಣೆ ಮಾಡಿ, ಜನರಿಗೆ ಇತಿಹಾಸದ ಮಹತ್ವ ಅರಿಯಲು ಇಂತಹ ಪ್ರದೇಶವನ್ನು ಪ್ರವಾಸಿ ಸ್ಥಳವಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಶ್ರಾವಣ ಮಾಸದಿಂದಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ – ಕೋವಿಡ್ ನಿಯಮ ಉಲ್ಲಂಘನೆ

    ಶ್ರಾವಣ ಮಾಸದಿಂದಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ – ಕೋವಿಡ್ ನಿಯಮ ಉಲ್ಲಂಘನೆ

    ರಾಯಚೂರು: ಇಂದಿನಿಂದ ಶ್ರಾವಣ ಮಾಸ ಪ್ರಾರಂಭವಾಗಿದ್ದು, ಜಿಲ್ಲೆಯ ಈಶ್ವರ ದೇವಾಲಯಗಳಲ್ಲಿ ಒಂದು ತಿಂಗಳ ಪೂರ್ತಿ ವಿಶೇಷ ಪೂಜೆ, ಭಜನೆಗಳು ನಡೆಯುತ್ತಿವೆ. ಕೋವಿಡ್ ಹಿನ್ನೆಲೆ ಜಿಲ್ಲಾಡಳಿತ ಷರತ್ತುಗಳ ಮೇಲೆ ವಿಶೇಷ ಪೂಜೆ ಅಭಿಷೇಕಗಳನ್ನು ಮಾಡಲು ಅನುಮತಿ ನೀಡಿದೆ. ಆದರೆ ರಾಯಚೂರು ನಗರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಎಲ್ಲಾ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

    ಜಿಲ್ಲಾಡಳಿತದ ಆದೇಶವನ್ನ ಅಕ್ಷರಶಃ ಉಲ್ಲಂಘಿಸಿ ಪೂಜೆಗಳನ್ನು ಮಾಡಲಾಗುತ್ತಿದೆ. ಭಕ್ತರು ಕೋವಿಡ್ ನಿಯಮ ಪಾಲಿಸಲು ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ. ಸಾಮಾಜಿಕ ಅಂತರ ಕಾಪಾಡಲು ಮಾರ್ಕ್ ಮಾಡಿಲ್ಲ, ಸ್ಯಾನಿಟೈಸರ್ ವ್ಯವಸ್ಥೆಯಿಲ್ಲ. ವಿಶೇಷ ಪೂಜೆ ಮಾಡಿಸುವ ಭಕ್ತರನ್ನು ಗರ್ಭಗುಡಿಯೊಳಗೆ ಬಿಟ್ಟುಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಇಲ್ಲಿನ ಅರ್ಚಕರು ಹಾಗೂ ಆಡಳಿತ ಮಂಡಳಿ ಉಲ್ಲಂಘಿಸಿದೆ.

    ಭಕ್ತರು ಸಹ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಸಹ ಧರಿಸದೇ ದೇವರ ದರ್ಶನ ಪಡೆಯುತ್ತಿದ್ದಾರೆ. ಶ್ರಾವಣ ಮಾಸದ ನೆಪದಲ್ಲಿ ದೇವಾಲಯಗಳೇ ಕೊರೊನಾ ಹಾಟ್ ಸ್ಪಾಟ್ ಆಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಶ್ರಾವಣ ಮಾಸದ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆ. ಹೀಗಾಗಿ ಶ್ರಾವಣ ಸೋಮವಾರ ದಿನ ದೇವಾಲಯಗಳಿಗೆ ಹೆಚ್ಚು ಜನ ಬರುತ್ತಾರೆ. ಕೋವಿಡ್ ನಿಯಮ ಪಾಲನೆ ಅಗತ್ಯವಾಗಿದೆ. ಇದನ್ನೂ ಓದಿ:ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರಾ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್