ಕಾರವಾರ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ (Shree Marikamba Temple) ನಟ ಶಿವರಾಜ್ ಕುಮಾರ್ (Shiva Rajkumar) ದಂಪತಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ ಶಿವಣ್ಣ ದಂಪತಿ ತಮ್ಮ ಇಷ್ಟ ದೈವಕ್ಕೆ ಪೂಜೆ ಸಲ್ಲಿಸಿದರು. ಈ ಹಿಂದೆ ನಟ ಶಿವರಾಜ್ ಕುಮಾರ್ ಅನಾರೋಗ್ಯಕ್ಕೆ ಒಳಗಾಗಿದ್ದಾಗ ಸಹ ಶಿರಸಿ ಮಾರಿಕಾಂಬೆ ಸನ್ನಿದಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರು.
ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿರುವ ಶಿವರಾಜ್ ಕುಮಾರ್ ಶಿರಸಿಗೆ ಆಗಮಿಸಿದ್ದು, ಮಾರಿಕಾಂಬಾ ಸನ್ನಿದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre). ಹೇಮಂತ್ ರಾವ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಒಂದು ಹೇಮಂತ್ ಡೈರೆಕ್ಷನ್ ಹಾಗೂ ಶಿವಣ್ಣ-ಧನಂಜಯ್ ಮತ್ತೆ ಒಂದಾಗಿರುವುದು. ಟಗರು (Tagaru) ಜೋಡಿಯ ಹೊಸ ಪ್ರಾಜೆಕ್ಟ್ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಪೋಸ್ಟರ್ ಮೂಲಕವೇ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ರೆಟ್ರೋ ಲುಕ್‌ನಲ್ಲಿ ಶಿವಣ್ಣ ಹಾಗೂ ಧನಂಜಯ್ (Daali Dhananjay) ಕಾಣಿಸಿಕೊಂಡಿದ್ದು, ಈ ಲುಕ್ ನೋಡುತ್ತಿದ್ದರೆ ಡಾ. ರಾಜಕುಮಾರ್ ಅವರ ಸ್ಪೈ ಸಿನಿಮಾಗಳು ನೆನಪಾಗುತ್ತವೆ. ಸದ್ಯ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ, 2ನೇ ಹಂತಕ್ಕೆ ಸಜ್ಜಾಗುತ್ತಿದೆ.
ಫಸ್ಟ್ ಶೆಡ್ಯೂಲ್ಡ್ ಶೂಟಿಂಗ್‌ನಲ್ಲಿ ಶಿವಣ್ಣ (Shiva Rajkumar) ಹಾಗೂ ಧನಂಜಯ್ ಭಾಗಿಯಾಗಿದ್ದರು. ಇದೀಗ ಇದೇ ತಿಂಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಬೃಹತ್ ಆಕಾರದ ಸೆಟ್ ನಲ್ಲಿ ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಡೆಸಲಾಗುವುದು.
ಸೆಟ್ ಬಗ್ಗೆ ಮಾತನಾಡಿದ ನಿರ್ಮಾಪಕ ಡಾ. ವೈಶಾಕ್ ಜೆ ಗೌಡ, ‘666 ಆಪರೇಷನ್ ಡ್ರೀಮ್ ಥಿಯೇಟರ್ ಬಗ್ಗೆ ಎಲ್ಲವನ್ನೂ ಹೇಮಂತ್ ಎಂ ರಾವ್ ಮತ್ತು ಅವರ ತಂಡ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದೆ. ನಾವು ಇಂದಿನ ಪೀಳಿಗೆಯನ್ನು ಬೆರಗುಗೊಳಿಸುವ ಮತ್ತು ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಜಗತ್ತನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಯಾವ ಸೆಟ್‌ಗಳನ್ನ ನಿರ್ಮಿಸಲಾಗುತ್ತಿದೆ ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಅನುಭವಿಸಬಹುದಾದ ವಿಷಯ ಅದು. ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ಕುರಿತ ಮತ್ತಷ್ಟು ಅಪ್ ಡೇಟ್ ಶೀಘ್ರದಲ್ಲೇ ನೀಡುತ್ತೇವೆ’ ಎಂದು ಹೇಳಿದ್ದಾರೆ.
ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ ನಟ ಶಿವರಾಜ್‌ಕುಮಾರ್ (Shiva Rajkumar) ತಮ್ಮ ಪತ್ನಿ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳವಾರ ರಾತ್ರಿ ಬೆಟ್ಟಕ್ಕೆ ಆಗಮಿಸಿದ ಶಿವಣ್ಣ ದಂಪತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಇದನ್ನೂ ಓದಿ: ಉದಯಪುರದಲ್ಲಿ ಭರ್ಜರಿ ಡೆವಿಲ್ ಮೇಕಿಂಗ್!
ಕಳೆದ ಕೆಲ ದಿನಗಳಿಂದ ಶಿವರಾಜ್‌ಕುಮಾರ್ ಮೈಸೂರು ಭಾಗದ ಸುತ್ತಮುತ್ತ ಪ್ರವಾಸ ಕೈಗೊಂಡಿದ್ದಾರೆ. ಮೊನ್ನೆಯಷ್ಟೇ ಪತ್ನಿ ಜೊತೆಗೂಡಿ ಶಿವಣ್ಣ ಕಬಿನಿ ಡ್ಯಾಂಗೆ ಭೇಟಿ ನೀಡಿದ್ದರು. ಈ ವೇಳೆ ಹಾಡಿ ಮಕ್ಕಳ ಜೊತೆ ಫೋಟೊ ಕೂಡ ತೆಗೆಸಿಕೊಂಡಿದ್ದರು.
1986ರಲ್ಲಿ ‘ಆನಂದ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಶಿವಣ್ಣ ಎಂಟ್ರಿ ಕೊಟ್ಟರು. ಸಿನಿ ಜರ್ನಿಯಲ್ಲಿ 40 ವರ್ಷ ಪೂರೈಸಿದ್ದಾರೆ. ಕನ್ನಡದ ಜನಮಾನಸದಲ್ಲಿ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಆಗಿ ಉಳಿದಿದ್ದಾರೆ. ಇದನ್ನೂ ಓದಿ: ಇಂಡಸ್ಟ್ರಿಯಲ್ಲಿ ನನಗೆ ಯಾರೂ ಫ್ರೆಂಡ್ಸ್ ಇಲ್ಲ… ಹೀಗ್ಯಾಕಂದ್ರು ನಯನತಾರ..?
ಶಿವರಾಜ್‌ಕುಮಾರ್ ಸದ್ಯ 125 ಸಿನಿಮಾಗಳನ್ನು ಪೂರೈಸಿದ್ದಾರೆ. ಸದ್ಯ ಅವರ ಕೈಯಲ್ಲಿ ಐದಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಿವೆ. ಕೆಲ ದಿನಗಳ ಹಿಂದಷ್ಟೇ ಸಿನಿಪಯಣದಲ್ಲಿ 40 ವರ್ಷದ ಪೂರೈಸಿದ ಸಂಭ್ರಮವನ್ನು ಶಿವಣ್ಣ ಮಿಂದೆದ್ದರು.
ಬೆಂಗಳೂರು: ಕಮಲ್ ಹಾಸನ್ (Kamal Haasan) ಕ್ಷಮೆ ಕೇಳೋವರೆಗೂ ಬಿಡೋದಿಲ್ಲ. ಕ್ಷಮೆ ಕೇಳಿಲ್ಲ ಅಂದರೆ ಅವರ ಸಿನಿಮಾ ಬ್ಯಾನ್ ಮಾಡ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Thangadagi) ಪುನರುಚ್ಚರಿಸಿದರು.
ಕಮಲ್ ಹಾಸನ್ ಕ್ಷಮೆ ಕೇಳದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಮಲ್ ಹಾಸನ್ ಕ್ಷಮೆ ಕೇಳಿಲ್ಲ. ಅಂದರೆ ಬಿಡೋರು ಯಾರು. ಹಿರಿಯ ನಟ ಅವರು. ಇದನ್ನ ನಾವು ಇಲ್ಲಿಗೆ ಬಿಡೊಲ್ಲ. ಫಿಲ್ಮ್ ಚೇಂಬರ್ ಅವರ ಜೊತೆ ಮಾತಾಡಿದ್ದೇನೆ. ಕ್ಷಮೆ ಕೇಳದೇ ಹೋದ್ರೆ ಅವರ ಸಿನಿಮಾ ಬಿಡುಗಡೆ ಮಾಡೋಕೆ ಬಿಡೊಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಮಲ್ ಹಾಸನ್ ಕನ್ನಡ ಕಾಂಟ್ರವರ್ಸಿ ಬಗ್ಗೆ ಕೇಳ್ತಿದ್ದಂತೆ ಕೈಮುಗಿದ ಶಿವಣ್ಣ!
ಶಿವರಾಜ್ ಕುಮಾರ್ (Shiva Rajkumar) ಹಿರಿಯ ನಟರು, ಅವರಿಗೆ ಕಮಲ್ ಹಾಸನ್ ಬಗ್ಗೆ ಗೌರವ ಇದ್ದರೆ ಇರಲಿ. ಆದರೆ ಮೊದಲು ನಮ್ಮ ಭಾಷೆ ಮುಖ್ಯ. ಅವರು ಕ್ಷಮೆ ಕೇಳದೇ ಹೋದ್ರೆ ಅವರ ಸಿನಿಮಾ ಬ್ಯಾನ್ ಮಾಡುತ್ತೇವೆ. ಸರ್ಕಾರದ ವತಿಯಿಂದ ಏನು ಮಾಡಬಹುದು ಅಂತ ಸಿಎಂ ಜೊತೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.
ಉಡುಪಿ: ಅಮೆರಿಕದಲ್ಲಿ (America) ಚಿಕಿತ್ಸೆ ಪಡೆದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತವರಿಗೆ ವಾಪಸ್ಸಾಗಿದ್ದಾರೆ. ಉಡುಪಿಯಲ್ಲಿ (Udupi) ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಈ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ನಟ ಶಿವರಾಜ್ ಕುಮಾರ್ ನಮ್ಮ ರಾಜ್ಯದ ಆಸ್ತಿ ಎಂದಿದ್ದಾರೆ.
ಶಿವಣ್ಣ ಓರ್ವ ಅಪರೂಪದ ಸರಳ ವ್ಯಕ್ತಿ, ಅಷ್ಟೊಂದು ದೊಡ್ಡ ಕುಟುಂಬದಿಂದ ಬಂದರೂ ಅವರ ಶರೀರದಲ್ಲಿ ಒಂದು ಕಣದಷ್ಟು ಅಹಂ ಇಲ್ಲ. ಜನಪ್ರಿಯತೆ ಶಿವರಾಜ್ ಕುಮಾರ್ ಅವರ ತಲೆಗೆ ಹೋಗಿಲ್ಲ. ಸರಳ ಸ್ನೇಹಜೀವಿ ಮತ್ತು ಒಳ್ಳೆಯ ವ್ಯಕ್ತಿತ್ವದ ನಟ. ಹೊರದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದ್ದು ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ
ಬಹಳ ಗಂಭೀರವಾದ ಕಾಯಿಲೆಯಿಂದ ಅವರು ಬಳಲಿದ್ದರು. ಅವರಿಗೆ ನೀಡಿದ ಚಿಕಿತ್ಸೆ ಫಲಪ್ರದವಾಗಿದೆ. ಸಂಪೂರ್ಣ ಗುಣಮುಖರಾಗುತ್ತಾರೆ. ನಾಡಿನ ಜನತೆಯ ಪರವಾಗಿ ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಕೋರುತ್ತೇನೆ. ಸಿನಿಮಾ ನಟರು ಅನ್ನುವುದಕ್ಕಿಂತಲೂ ಒಳ್ಳೆ ವ್ಯಕ್ತಿತ್ವದ ಮನುಷ್ಯ. ಶಿವರಾಜ್ ಕುಮಾರ್‌ರಂತಹ ಜನ ನಮ್ಮ ಜೊತೆಗೆ ಬಹಳ ಸಮಯ ಉಳಿಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಡಿಸ್ಚಾರ್ಜ್ – ಸಚಿವೆ ಭಾವುಕ
– ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶಿವರಾಜ್‌ಕುಮಾರ್
ಶಸ್ತ್ರಚಿಕಿತ್ಸೆ ಬಳಿಕ ಅಮೆರಿಕದಲ್ಲಿ ವಿಶ್ರಾಂತಿ ಮೂಡ್‌ನಲ್ಲಿರುವ ನಟ ಶಿವರಾಜ್‌ಕುಮಾರ್ (Shivarajkumar) ಕೊನೆಗೂ ತವರಿಗೆ ವಾಪಸ್ ಆಗುವ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಇದೇ ಜ.26 ರ ಗಣರಾಜ್ಯೋತ್ಸವದಂದು ಬೆಂಗಳೂರಿಗೆ ವಾಪಸ್ ಆಗುವುದಾಗಿ ಶಿವಣ್ಣ ತಿಳಿಸಿದ್ದಾರೆ.
ವೀಡಿಯೋದಲ್ಲಿ ಏನಿದೆ?
‘ಹಾಯ್.. ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ಶಿವರಾಜ್‌ಕುಮಾರ್. ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮೆಲ್ಲರನ್ನೂ ನೋಡುವುದಕ್ಕೆ ನಾನು ಜ.26 ರ ಗಣರಾಜ್ಯೋತ್ಸವದಂದು ಬೆಂಗಳೂರಿಗೆ ಬರುತ್ತಿದ್ದೇನೆ’ ಎಂದು ಅಭಿಮಾನಿಗಳಿಗೆ ನಟ ಶಿವರಾಜ್‌ಕುಮಾರ್ ತಿಳಿಸಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವರಾಜ್‌ಕುಮಾರ್ ಅವರು ಈಚೆಗೆ ಅಮೆರಿಕಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯುಎಸ್‌ನ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಕೆಲವು ದಿನಗಳ ಕಾಲ ಅಲ್ಲೇ ಉಳಿದು ವಿಶ್ರಾಂತಿ ಪಡೆದರು. ಈ ವೇಳೆ ಸ್ನೇಹಿತರು, ಆಪ್ತರು, ಅಭಿಮಾನಿಗಳ ಜೊತೆ ಒಡನಾಡಿ ಎಂಜಾಯ್ ಮಾಡಿದರು. ಅಮೆರಿಕದಲ್ಲಿ ಶಿವಣ್ಣನ ಜೊತೆ ಪತ್ನಿ ಗೀತಾ ಶಿವರಾಜ್‌ಕುಮಾರ್ ಕೂಡ ಇದ್ದಾರೆ. ಈಗ ನಟ ಸಂಪೂರ್ಣ ಚೇತರಿಸಿಕೊಂಡಿದ್ದು, ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಇದನ್ನೂ ಓದಿ: ನಟ ಶಿವರಾಜ್‌ಕುಮಾರ್‌ಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ – ಮಲೆ ಮಹದೇಶ್ವರ ಮೊರೆಹೋದ ಫ್ಯಾನ್ಸ್
ವಾಷಿಂಗ್ಟನ್: ಅಭಿಮಾನಿಗಳು ನಮಗೆ ದೇವರ ರೀತಿ. ಅದೇ ರೀತಿ ಇದೀಗ ಡಾಕ್ಟರ್ ಕೂಡ ನಮ್ಮ ಪಾಲಿಗೆ ದೇವರಾಗಿದ್ದಾರೆ ಎಂದು ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shiva Rajkumar) ಹೇಳಿದ್ದಾರೆ.
ಶಿವರಾಜ್‌ಕುಮಾರ್ ಸರ್ಜರಿ ಯಶಸ್ವಿಯಾದ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ಶಿವಣ್ಣ ಆಪರೇಷನ್ ಯಶಸ್ವಿಯಾಗಿದೆ. ಈಗ ಶಿವಣ್ಣ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಶಿವರಾಜ್‌ಕುಮಾರ್‌ಗಾಗಿ ನೀವೆಲ್ಲರೂ ಪೂಜೆಗಳನ್ನು ಮಾಡಿ ಅವರಿಗೆ ಒಳ್ಳೆಯದಾಗಲಿ ಎಂದು ಬಯಸಿದ್ದೀರಿ, ಆಶೀರ್ವಾದ ಕೂಡ ಮಾಡಿದ್ದೀರಿ. ಇವತ್ತು ಶಿವಣ್ಣ ಅವರ ಆಪರೇಷನ್ ಯಶಸ್ವಿಯಾಗಲು ಡಾ. ಮನೋಹರನ್ ಅವರೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಣ್ಣ ಸರ್ಜರಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ, ಆರೋಗ್ಯ ಸ್ಥಿರ: ಡಾ.ಮುರುಗೇಶ್ ಮನೋಹರನ್
ಸದ್ಯದಲ್ಲೇ ಶಿವರಾಜ್‌ಕುಮಾರ್ ಅವರು ನಿಮ್ಮ ಜೊತೆ ಮಾಡನಾಡಲಿದ್ದಾರೆ. ಆಪರೇಷನ್‌ನಿಂದಾಗಿ ಸುಸ್ತಾಗಿರುವುದರಿಂದ ಇನ್ನು 3-4 ದಿನಗಳಲ್ಲಿ ನಿಮ್ಮ ಜೊತೆ ಮಾತನಾಡಲಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲು ಚಿರಋಣಿ. ಇದನ್ನು ನಾನು ಜನ್ಮದಲ್ಲಿ ಮರೆಯಲ್ಲ ಎಂದು ಗೀತಕ್ಕ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ವಾಷಿಂಗ್ಟನ್: ಸ್ಯಾಂಡಲ್‌ವುಡ್‌ನ (Sandalwood) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shiva Rajkumar) ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ (Miami Cancer Institute) ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರು ಶಿವಣ್ಣನಿಗೆ ಆಪರೇಷನ್ ಮಾಡಿದ್ದಾರೆ.
ಭಾರತೀಯ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 8 ಗಂಟೆಗೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 6 ಗಂಟೆಗೆ ಆಪರೇಷನ್ ಥಿಯೇಟರ್‌ಗೆ ಶಿವಣ್ಣರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸುಮಾರು 6 ಗಂಟೆಗಳ ಕಾಲ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಜೊತೆಗಿದ್ದಾರೆ. ಇದನ್ನೂ ಓದಿ: ಪೂಂಚ್‌ನಲ್ಲಿ 300 ಅಡಿ ಆಳದ ಕಂದಕಕ್ಕೆ ಬಿತ್ತು ಸೇನಾ ವಾಹನ – ಚಿಕ್ಕೋಡಿ ಯೋಧ ಹುತಾತ್ಮ
ಇನ್ನು ಕ್ಯಾನ್ಸರ್ ಚಿಕಿತ್ಸೆಗೊಳಾಗಿರುವ ಶಿವಣ್ಣನಿಗೆ ಆಸ್ಪತ್ರೆಯಲ್ಲೇ ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ. ನುರಿತ ವೈದ್ಯರ ನಿಗಾದಲ್ಲಿ ಶಿವಣ್ಣ ಇರಲಿದ್ದಾರೆ. ಬಳಿಕ ಮನೆಗೆ ಶಿಫ್ಟ್ ಆಗಲಿದ್ದಾರೆ. ಇನ್ನೊಂದು ತಿಂಗಳು ಅಮೆರಿಕದಲ್ಲೇ ಇರುವ ಶಿವರಾಜ್‌ಕುಮಾರ್ ಜನವರಿ 26ರಂದು ಭಾರತಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಫೋನ್ ಮಾಡಿ ಶಿವಣ್ಣ ಆರೋಗ್ಯ ವಿಚಾರಿಸಿದ ಸಿಎಂ
ಚಾಮರಾಜನಗರ: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಯಶಸ್ವಿಯಾಗಿ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮಲೆ ಮಹದೇಶ್ವರನ (Male Mahadeshwara Temple) ಮೊರೆ ಹೋಗಿದ್ದಾರೆ.
ಮೈಸೂರಿನ ಕೆ.ಜಿ.ಕೊಪ್ಪಲಿನ ಶಿವು ಹಾಗೂ ಸ್ನೇಹಿತರು ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕೆ.ಜಿ.ಕೊಪ್ಪಲಿನ ಶಿವು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವ ಅಷ್ಟೋತರ ಬಿಲ್ವಾರ್ಚನೆ ಪೂಜೆ ಮಾಡಿಸಿದ್ದಾರೆ. ಇವರಿಗೆ ಸ್ನೇಹಿತರಾದ ದರ್ಶನ್, ಅಭಿರಾಜ್, ಮನೋಹರ್, ಟಿ ನಾರಾಯಣ್ ಶಿವಮಲ್ಲು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಭಗವಂತ ನನ್ನಷ್ಟೂ ಆಯಸ್ಸನ್ನ ಶಿವಣ್ಣನಿಗೇ ಕೊಡಲಿ: ಧ್ರುವ ಸರ್ಜಾ
ಇದಲ್ಲದೆ, ದೇವಸ್ಥಾನದ ಸುತ್ತಲೂ ಮೂರು ಬಾರಿ ಉರುಳು ಸೇವೆ ಮಾಡಿ ಕೇಶ ಮುಂಡನೆ ಮಾಡಿಸುವ ಮೂಲಕ ವಿಶೇಷವಾಗಿ ಹರಕೆ ಸಲ್ಲಿಸಿದ್ದಾರೆ. ‘ಭೈರತಿ ರಣಗಲ್’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಭರ್ಜರಿ ಸ್ವಾಗತ ಕೋರಿ ಚಿತ್ರ ಶತದಿನೋತ್ಸವ ಪೂರೈಸಲೆಂದು ಶುಭ ಕೋರಿದ್ದರು.
ಶಿವರಾಜ್‌ಕುಮಾರ್ ಅವರು ಶಸ್ತ್ರಚಿಕಿತ್ಸೆಗೆ ಅಮೆರಿಕಗೆ ತೆರಳುತ್ತಿದ್ದಾಗಲು ಶಿವು ತಂಡ ಏರ್ಪೋರ್ಟ್‌ಗೆ ಭೇಟಿ ನೀಡಿ ಬೀಳ್ಕೊಡುಗೆ ಮಾಡಿ ವಾಪಸ್ ತೆರಳಿದ್ದರು. ಇದನ್ನೂ ಓದಿ: ಚಿಕಿತ್ಸೆಗಾಗಿ ಅಮೆರಿಕಗೆ ತೆರಳುವ ಮುನ್ನ ಶಿವಣ್ಣ ಭಾವುಕ
ರಾಮನಗರ: ಇಂದು (ಮಂಗಳವಾರ) ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಶಿವಣ್ಣ ಅಭಿಮಾನಿಗಳು ಪೂಜೆ ನೆರವೇರಿಸಿದ್ದಾರೆ.
ರಾಜ್ಯದ ಹಲವೆಡೆ ಶಿವಣ್ಣನ ಆರೋಗ್ಯಕ್ಕೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದು, ಚನ್ನಪಟ್ಟಣದ (Channapatna) ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲೂ ಅಭಿಮಾನಿಗಳು ಶಿವಣ್ಣನ ಹೆಸರಿನಲ್ಲಿ ಅರ್ಚನೆ ಮಾಡಿಸಿ ಪ್ರಸಾದ ಹಂಚಿಕೆ ಮಾಡಿದ್ದಾರೆ. 101 ಈಡುಗಾಯಿ ಹೊಡೆದು ಶಿವರಾಜ್‌ಕುಮಾರ್ ಪೋಟೋ ಹಿಡಿದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಸದಸ್ಯರ ಆಯ್ಕೆಗೆ ಕಾಂಗ್ರೆಸ್ ಆಕ್ಷೇಪ
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲೂ ಶಿವಣ್ಣ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವರಾಜ್ ಕುಮಾರ್ ಅಭಿಮಾನಿಗಳು ಹಾಗೂ ನವಕರ್ನಾಟಕ ಯುವಶಕ್ತಿ ಸಂಘಟನೆ ವತಿಯಿಂದ ಶಿವರಾಜ್ ಕುಮಾರ್ ಪೋಟೋ ಇಟ್ಟು ಸಂಕಲ್ಪ ಮಾಡಿಸುವ ಮೂಲಕ ದೇವರಲ್ಲಿ ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿಕೊಂಡರು. ಬೇಗ ಗುಣಮುಖರಾಗಿ ತವರಿಗೆ ವಾಪಾಸ್ಸಾಗಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರ ಸಾವು