Tag: shishya film

  • ಫ್ಯಾನ್ಸ್‌ಗೆ ದೀಪಕ್ ಗುಡ್ ನ್ಯೂಸ್- ಸದ್ದಿಲ್ಲದೇ ‘ಶಿಷ್ಯ’ ಹೀರೋ ಎಂಗೇಜ್

    ಫ್ಯಾನ್ಸ್‌ಗೆ ದೀಪಕ್ ಗುಡ್ ನ್ಯೂಸ್- ಸದ್ದಿಲ್ಲದೇ ‘ಶಿಷ್ಯ’ ಹೀರೋ ಎಂಗೇಜ್

    ‘ಶಿಷ್ಯ’ (Shishya) ಖ್ಯಾತಿಯ ದೀಪಕ್ (Actor Deepak) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ದಿಲ್ಲದೇ ನಟ ದೀಪಕ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ವರ್ಷಾ ಕಾವೇರಿಗೆ ಮೋಸ? ವರುಣ್‌ ಸ್ಪಷ್ಟನೆ

    ಸ್ಯಾಂಡಲ್‌ವುಡ್ (Sandalwood) ಪ್ರತಿಭಾನ್ವಿತ ನಟ ದೀಪಕ್ ಇದೀಗ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ದೀಪಕ್ ಅವರ ಎಂಗೇಜ್‌ಮೆಂಟ್ ಇತ್ತೀಚೆಗಷ್ಟೇ ನೆರವೇರಿತು. ಶಿಷ್ಯ ದೀಪಕ್ ಅವರ ಮದುವೆ ಫಿಕ್ಸ್ ಆಗಿದ್ದು, ಹುಡುಗಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ದೀಪಕ್ ಅವರ ಎಂಗೇಜ್‌ಮೆಂಟ್ ಸಂಭ್ರಮದ ಫೋಟೋಗಳು ಸದ್ದು ಮಾಡುತ್ತಿದೆ.

    ‘ಶಿಷ್ಯ’ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ದೀಪಕ್ ಕನ್ನಡ ಚಿತ್ರರಂಗದಲ್ಲಿ ಶಿಷ್ಯ ದೀಪಕ್ ಎಂದೇ ಫೇಮಸ್ ಆಗಿದ್ದಾರೆ. ಮಾಗಡಿ, ಬೆಳ್ಳಿ, 18th ಕ್ರಾಸ್, ಏಕ್ ಲವ್ ಯಾ, ವೀರಂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಟಾಲಿವುಡ್- ಮಾಲಿವುಡ್‌ಗೂ (Mollywood) ಕಾಲಿಟ್ಟಿದ್ದಾರೆ. ತೆಲುಗಿನಲ್ಲಿ ಎರಡು, ಮಲಯಾಳಂನಲ್ಲಿ ಒಂದು ಸಿನಿಮಾದಲ್ಲಿ ನಟ ದೀಪಕ್ ಅಭಿನಯಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]