Tag: Shishir Shastri

  • ಫೆಬ್ರವರಿ 7ಕ್ಕೆ ‘ಬಿಲ್‍ಗೇಟ್ಸ್’ ಎಂಟ್ರಿ!

    ಫೆಬ್ರವರಿ 7ಕ್ಕೆ ‘ಬಿಲ್‍ಗೇಟ್ಸ್’ ಎಂಟ್ರಿ!

    ‘ಬಿಲ್ ಗೇಟ್ಸ್’ ಈ ಹೆಸರು ಕೇಳಿದಾಕ್ಷಣ ಅಮೇರಿಕಾದ ಸಿರಿವಂತ, ಉದ್ಯಮಿ ನೆನಪಿಗೆ ಬರ್ತಿದ್ರು. ಆದರೆ ಈಗ ಇದೇ ಹೆಸರಿನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡ್ತಿರೋ ಬಿಲ್‍ಗೇಟ್ಸ್ ಸಿನ್ಮಾ ನೆನಪಾಗತ್ತೆ. ಚಂದನವನದಲ್ಲಿ ಇಷ್ಟು ದಿನ ತಮ್ಮ ಕಚಗುಳಿಯ ಕಾಮಿಡಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗೂ ಶಿಶಿರ್ ಶಾಸ್ತ್ರಿ ಈ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

    ಈಗಾಗಲೇ ರಿಲೀಸ್ ಆದ ಟೀಸರ್ ಎಲ್ಲೆಡೆ ಸದ್ದು ಮಾಡೋ ಮೂಲಕ ಸಿನೆಮಾದ ಯಮಲೋಕದ ಅರಮನೆಯ ಅನಾವರಣದ ಅದ್ದೂರಿ ಸೆಟ್ ನಿಂದ ಎಲ್ಲರ ಚಿತ್ತ ತನ್ನತ್ತ ಹರಿಯುವಂತೆ ಮಾಡಿತ್ತು.

    ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರೋ ಬಿಲ್‍ಗೇಟ್ಸ್ ಸಿನಿಮಾ ಪೋಸ್ಟರ್ ನಿಂದಾಗಿಯೇ ದೊಡ್ಡ ಹೈಪ್ ಸೃಷ್ಟಿಸಿತ್ತು. ಕಾಮಿಡಿ ಕಥಾ ಹಂದರ ಹೊಂದಿರೋ ಸಿನಿಮಾ ಇದಾಗಿದ್ದು, ಈಗಾಗಲೇ ‘ಬಿಲ್‍ಗೇಟ್ಸ್’ ಸೆನ್ಸಾರ್ ಪರೀಕ್ಷೆ ಮುಗಿಸಿ, ಫೆಬ್ರವರಿ 7ಕ್ಕೆ ಪ್ರೇಕ್ಷಕರೆದುರು ಬರಲಿದೆ.

    ಚಿತ್ರದಲ್ಲಿ ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜನಾರ್ಧನ್, ವಿ.ಮನೋಹರ್ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಒಟ್ಟಾರೆ ಸಿನೆಮಾ ನೋಡಲು ಕೂತ ಸಿನಿಪ್ರೇಕ್ಷಕನಿಗೆ ಎಲ್ಲೂ ಬೋರಾಗದಂತೆ ನೋಡಿಕೋಳ್ಳೋ ಎಲಿಮೆಂಟ್ಸ್ ಜೊತೆ ಬರ್ತಿರೋ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಏನಂತಾರೆ ಅನ್ನೋದನ್ನ ರಿಲೀಸ್ ಬಳಿಕವೇ ನೋಡ್ಬೇಕಿದೆ.

  • ‘ಬಿಲ್‍ಗೇಟ್ಸ್’ನಲ್ಲಿದೆ ಯಮಲೋಕದ ಅರಮನೆಯ ವೈಭವ

    ‘ಬಿಲ್‍ಗೇಟ್ಸ್’ನಲ್ಲಿದೆ ಯಮಲೋಕದ ಅರಮನೆಯ ವೈಭವ

    ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‍ವುಡ್ ನಲ್ಲಿ ಭಾರೀ ಕುತೂಹಲ ಹಾಗು ನಿರೀಕ್ಷೆ ಮೂಡಿಸುವ ಟೈಟಲ್‍ನ ಚಿತ್ರಗಳು ಬರ್ತಿವೆ. ಇಂತಹ ಚಿತ್ರಗಳಲ್ಲಿ ‘ಬಿಲ್‍ಗೇಟ್ಸ್’ ಸಹ ಒಂದು. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಸ್ನೇಹಿತರೆಲ್ಲರು ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಡ್ಯ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಕಾಮಿಡಿ ಸ್ಟಾರ್ ಚಿಕ್ಕಣ್ಣ ಹಾಗೂ ಶಿಶಿರ್ ಶಾಸ್ತ್ರಿ ಕಾಂಬಿನೇಷನ್‍ನ ನಾಯಕತ್ವದ ಈ ಚಿತ್ರಕ್ಕೆ ಹೆಸರಿಗೆ ತಕ್ಕಂತೆ ದೊಡ್ಡ-ಡೊಡ್ಡ ಅದ್ದೂರಿ ಸೆಟ್ ನಿರ್ಮಿಸಿ, ಕಲ್ಪನೆಯಂತೆ ಯಮಲೋಕದ ಅರಮನೆಯ ಅದ್ದೂರಿತನವನ್ನು ತೋರಿಸಲಾಗ್ತಿದೆ ಅಂತೆ. ಇನ್ನು ಈ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಕೆಜಿಎಫ್ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಸ್ಯಾಂಡಲ್‍ವುಡ್‍ನ ಪ್ರಖ್ಯಾತ ಕಲಾ ನಿರ್ದೇಶಕ ಶಿವಕುಮಾರ್ ಅವರು ಹೊತ್ತು ಇದರ ಜಲಕ್ ಟೀಸರ್ ನಲ್ಲೇ ಗೊತ್ತಾಗುತ್ತೆ.

    ‘ಬಿಲ್‍ಗೇಟ್ಸ್’ನಲ್ಲಿ ಕುರಿ ಪ್ರತಾಪ್, ರಾಜಶೇಖರ್, ರಶ್ಮಿತಾ, ವಿ ಮನೊಹರ್, ಅಕ್ಷರ ರೆಡ್ಡಿ, ಬ್ಯಾಂಕ್ ಜನಾರ್ದನ್, ಗಿರಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರವು ಅದ್ಭುತವಾಗಿ ಮೂಡಿ ಬಂದಿದ್ದು, ಫೆಬ್ರವರಿ 7ಕ್ಕೆ ಬಿಡುಗಡೆಯಾಗಲು ರೆಡಿಯಾಗಿದೆ. ಅಂತೂ ಇಂತೂ ಕಾಮಿಡಿ ಕೌಟುಂಬಿಕ ಸಿನಿಮಾವಾದ ‘ಬಿಲ್‍ಗೇಟ್ಸ್’ ಅನ್ನು ಎಲ್ಲಾ ವರ್ಗದವರು ಕುಳಿತು ನೋಡುವಂತಿದ್ದು, ಈ ಮನೋರಂಜನೆಯ ಊಟಕ್ಕೆ ನೀವು ಫೆಬ್ರವರಿ 7ರ ತನಕ ಕಾಯಲೇಬೇಕು.