Tag: Shiruru

  • ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!

    ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!

    – 90 ಲಕ್ಷ ರೂ. ವೆಚ್ಚದಲ್ಲಿ ಕಾಣೆಯಾದವರ ಶೋಧ ಕಾರ್ಯ

    ಕಾರವಾರ: ಜುಲೈ ತಿಂಗಳಿನಲ್ಲಿ ಸಂಭವಿಸಿದ್ದ ಶಿರೂರು ಭೂಕುಸಿತ ದುರಂತದ (Shiruru LandSlide) ಹಿನ್ನಲೆ ಇದೀಗ ಮತ್ತೆ ಶವಗಳ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾದ (Ankola) ಶಿರೂರಿನಲ್ಲಿ (Shiruru) ಜುಲೈ 16ರಂದು ಭೂಕುಸಿತವಾಗಿ 11 ಜನ ಮೃತಪಟ್ಟಿದ್ದು, 8 ಜನರ ಶವ ಶೋಧ ಮಾಡಲಾಗಿತ್ತು. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಮೃತದೇಹಗಳು ದೊರೆಯದೇ ಮುಳುಗು ತಜ್ಞರು ಶೋಧ ನಡೆಸಿದರೂ ಮಳೆಯ ಕಾರಣ ಯತ್ನಗಳು ವಿಫಲವಾಗಿದ್ದವು. ಹೀಗಾಗಿ ಜುಲೈ 28 ರಂದು ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಇದರ ನಂತರ ಶೋಧಕ್ಕೆ ಪ್ರಯತ್ನ ನಡೆಸಿದರೂ ಗಂಗಾವಳಿ ನದಿಯಲ್ಲಿ ಮಳೆಯಿಂದ ನೀರು ಹೆಚ್ಚಾದ ಪರಿಣಾಮ ಮುಳುಗು ತಜ್ಞರು ಸಹ ಕೈಚೆಲ್ಲಿ ಕೂರುವಂತಾಗಿತ್ತು.ಇದನ್ನೂ ಓದಿ: ಪೇಜರ್‌ ಆಯ್ತು ಈಗ ಹಿಜ್ಬುಲ್ಲಾ ಘಟಕಗಳಲ್ಲಿ ವಾಕಿಟಾಕಿಗಳ ಸ್ಫೋಟ – 14 ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ

    ಈ ಹಿನ್ನೆಲೆಯಲ್ಲಿ ಗೋವಾದ ಅಭಿಷೇನಿಯ ಓಷನ್ ಸರ್ವಿಸಸ್ ಕಂಪನಿಗೆ 90 ಲಕ್ಷದ ಟೆಂಡರ್ ನೀಡಿ ಇದೀಗ ಕಾರವಾರಕ್ಕೆ ಡ್ರಜ್ಜಿಂಗ್ ಬೋಟ್ (Dredging Boat) ತರಿಸಲಾಗಿದ್ದು, ಶುಕ್ರವಾರದಿಂದ ಕಾರ್ಯಾಚರಣೆ ನಡೆಸಲಿದೆ.

    ಇನ್ನೂ ಹೆದ್ದಾರಿ ಪ್ರಾಧಿಕಾರ, ಶಾಸಕರ ನಿಧಿ ಹಾಗೂ ದಾನಿಗಳ ಸಹಾಯದಿಂದ 90 ಲಕ್ಷ ಹಣ ಒದಗಿಸಲಾಗಿದ್ದು, ಮುಂಗಡವಾಗಿ ಡ್ರಜ್ಜಿಂಗ್ ಬೋಟ್‌ಗೆ 40 ಲಕ್ಷ ರೂ. ಹಣ ಸಂದಾಯ ಮಾಡಲಾಗಿದೆ. ಈ ಮೊದಲು ಶವ ಶೋಧದ ನಂತರ ಗಂಗಾವಳಿ ನದಿಯಲ್ಲಿ ಭೂ ಕುಸಿತದಿಂದ ಉಂಟಾದ ಗುಡ್ಡದ ಮಣ್ಣನ್ನು ತೆರವು ಮಾಡುವುದಾಗಿ ಕಾರವಾರದ ಶಾಸಕ ಸತೀಶ್ ಸೈಲ್ ತಿಳಿಸಿದ್ದರು. ಕಾರವಾರದ ಬಂದರಿನಿಂದ ಗಂಗಾವಳಿ ನದಿಯವರೆಗೆ ಸಮುದ್ರದ ಮೂಲಕ ಡ್ರಜ್ಜಿಂಗ್ ಬೋಟ್ ಕೊಂಡೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

    ಸದ್ಯ ಅಬ್ಬರದ ಮಳೆ ನಿಂತಿದೆ. ಈಗಾಗಲೇ ಭೂ ಕುಸಿತದಿಂದ ಹಾನಿಯಾಗಿರುವ ಪ್ರದೇಶದ ಮಣ್ಣು ತೆರವಿಗೆ ಕೋಟಿಗಟ್ಟಲೇ ಹಣ ವ್ಯಯಿಸಲಾಗಿದೆ. ಜೊತೆಗೆ ದೆಹಲಿಯಿಂದ ಬಂದ ಕ್ವಿಕ್ ಸೆಕ್ಯುರಿಟಿ ಸರ್ವಿಸ್ ಸೆಲ್ಯೂಷನ್‌ನ ದ್ರೋಣ್ ವಿಶೇಷ ತಂಡಕ್ಕೆ ಲಕ್ಷಗಟ್ಟಲೆ ಹಣ ನೀಡಬೇಕಿದ್ದು, ಇದೀಗ ಹಣದ ಕೊರತೆಯಿದ್ದರೂ ದಾನಿಗಳು, ಶಾಸಕರ ನಿಧಿಯ ಹಣ ಬಳಸಿ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

  • ಶಿರೂರಿನಲ್ಲಿ ಮತ್ತೆ ಭೂ ಕುಸಿತ- ಸ್ಥಳೀಯರಲ್ಲಿ ಮತ್ತೆ ಆತಂಕ

    ಶಿರೂರಿನಲ್ಲಿ ಮತ್ತೆ ಭೂ ಕುಸಿತ- ಸ್ಥಳೀಯರಲ್ಲಿ ಮತ್ತೆ ಆತಂಕ

    – ಜಿಎಸ್‌ಐನಿಂದ ಮತ್ತೆ ಭೂ ಕುಸಿತ ವರದಿ

    ಕಾರವಾರ: ರಾಷ್ಟ್ರೀಯ ಹೆದ್ದಾರಿ (National Highway) 66ರ ಶಿರೂರು (Shiruru) ಭಾಗದಲ್ಲಿ ಮತ್ತೆ ಭೂ ಕುಸಿತ (Landslide) ಸಂಭವಿಸಿದೆ. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಭೂ ಕುಸಿತವಾಗುವ ವರದಿಯನ್ನು ನೀಡಿದೆ.

    ಒಂದೆಡೆ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನಗಳಾದರೆ, ಮತ್ತೊಂದೆಡೆ ಅಲ್ಲಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಶಿರೂರಿನ ಹೆದ್ದಾರಿಯ ಮತ್ತೊಂದು ಭಾಗದಲ್ಲಿ ನಾಲ್ಕಕ್ಕೂ ಹೆಚ್ಚು ಕಡೆ ಭೂ ಕುಸಿತವಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.  ಇದನ್ನೂ ಓದಿ: ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್‌ ಶಿಫ್ಟ್‌

    ಜುಲೈ 16 ರಂದು ಭೂ ಕುಸಿತವಾಗಿ 11 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಮೂರು ಜನರ ಶವ ಶೋಧಕ್ಕಾಗಿ ಕಾರ್ಯಾಚರಣೆ ಮಾಡಲಾಗಿದೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಜಿಎಸ್‌ಐ ತಜ್ಞರ ತಂಡ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಭೂ ಕುಸಿತದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾದುಹೋಗುವ ಕಾರವಾರದ ಬಿಣಗ, ಅಂಕೋಲದ ಶಿರೂರು, ಹೊನ್ನಾವರದ ಗುಣವಂತೆ ಹೆದ್ದಾರಿ, ಭಟ್ಕಳದ ಹೆದ್ದಾರಿ ಭಾಗದಲ್ಲಿ ಮತ್ತೆ ಭೂ ಕುಸಿತವಾಗಲಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು. ಜೊತೆಗೆ ಜಿಲ್ಲೆಯ ಭೂ ಕುಸಿತ ಭಾಗವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಕಾರವಾರ, ಅಂಕೋಲ, ಹೊನ್ನಾವರ, ಭಟ್ಕಳ ಭಾಗದ ಗುಡ್ಡ ಪ್ರದೇಶದಲ್ಲಿ ಮತ್ತೆ ಭೂ ಕುಸಿತ ಯಾವ ಸಂದರ್ಭದಲ್ಲಿಯಾದರೂ ಆಗಬಹುದು ಎಂದು ಎಚ್ಚರಿಸಿದೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ; ಮತ್ತೆ ಮೂವರು ಪೊಲೀಸರು ಅಮಾನತು

    ಶಿರೂರಿನಲ್ಲಿ ಜುಲೈ 16ರಲ್ಲಿ ಭೂ ಕುಸಿತದಿಂದ ದುರಂತ ಸಾವು ಕಂಡ 11 ಜನರಲ್ಲಿ ಮೂರು ಜನರ ಶವ ಶೋಧಕಾರ್ಯ ಇನ್ನು ನಡೆಯಬೇಕಿದೆ. ಕೇರಳ (Kerela) ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿ ಜಗನ್ನಾಥ್ ಲೋಕೇಶ್ ಶವ ಪತ್ತೆಯಾಗಬೇಕಿದೆ. ಸದ್ಯ ಮಳೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತ ಮಾಡಲಾಗಿದೆ. ಹೆದ್ದಾರಿಯಲ್ಲಿ ಘಟನೆ ನಡೆದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇದೇ ಭಾಗದಲ್ಲಿ ಮತ್ತೆ ಭೂ ಕುಸಿತವಾಗುವುದರಿಂದ ಶಿರೂರಿನ ಗುಡ್ಡದ ಪ್ರದೇಶದ ನಿವಾಸಿಗಳು ಹಾಗೂ ಗಂಗಾವಳಿ ತೀರ ಪ್ರದೇಶದ ಉಳುವೆರೆ ಗ್ರಾಮದ ಜನರಿಗೆ ಬೇರೆಡೆ ವಸತಿ ವ್ಯವಸ್ಥೆ ಮಾಡಿಕೊಳ್ಳುವಂತೆ ಅಂಕೋಲ ತಹಶಿಲ್ದಾರ್ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಜೀವನ ಪಠ್ಯಕ್ಕೆ ಸೇರ್ಪಡೆಗೆ ವಿ.ಸೋಮಣ್ಣ ಮನವಿ

    ಸದ್ಯ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಹೆದ್ದಾರಿಯ ಹಲವು ಭಾಗಗಳಲ್ಲಿ ನಿರಂತರ ಭೂ ಕುಸಿತ ನಡೆಯುತ್ತಲೇ ಇದೆ. ಇದೇ ಭಾಗಗಳಲ್ಲಿ ಭೂ ಕುಸಿತವಾಗುವ ಎಚ್ಚರಿಕೆಯನ್ನು ಜಿಎಸ್‌ಐ ನೀಡಿದ್ದು, ಇದೀಗ ಹೆದ್ದಾರಿಯಲ್ಲಿ ಸಂಚರಿಸುವ ಜನರಲ್ಲಿ ಮತ್ತೆ ಆತಂಕ ತಂದೊಡ್ಡಿದೆ. ಇದನ್ನೂ ಓದಿ: ಕೋರ್ಟ್‍ಗೆ ಹೋದ್ಮೇಲೆ ಕೊಡ್ತೀನಿ, ಕ್ಯಾಬ್‍ಗೆ 500 ರೂ. ಕಳ್ಸಿ! – ಸಿಜೆಐ ಚಂದ್ರಚೂಡ್ ಹೆಸರಲ್ಲಿ ಆನ್‍ಲೈನ್ ವಂಚಕನ ಕಳ್ಳಾಟ

  • ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತಕ್ಕೆ 7 ಮಂದಿ ಬಲಿ – ನದಿಗೆ ಬಿತ್ತು ಟ್ಯಾಂಕರ್‌

    ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತಕ್ಕೆ 7 ಮಂದಿ ಬಲಿ – ನದಿಗೆ ಬಿತ್ತು ಟ್ಯಾಂಕರ್‌

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಾದ್ಯಂತ ಭಾರಿ ಮಳೆ (Rain) ಸುರಿಯುತ್ತಿದ್ದು, ಅಂಕೋಲಾ (Ankola) ತಾಲೂಕಿನ ಶಿರೂರು (Shiruru) ಬಳಿ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ.

    ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 7 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಟ್ಯಾಂಕರ್‌ ಚಾಲಕ, ಕ್ಲೀನರ್‌ ಸೇರಿ 7 ಮಂದಿ ಮೃತಪಟ್ಟಿದ್ದಾರೆ.

    ಗುಡ್ಡ ಕುಸಿದು 7 ಜನ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಿಸಲು ಸೂಚನೆ ನೀಡಿದ್ದೇನೆ. ಎನ್‌ಡಿ​ಆರ್​ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಂಸದರು ತಿಳಿಸಿದರು.

    ಭಾರೀ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಕ್ಷಣಾ ತಂಡ ಶಾಂತಿ ನಾಯ್ಕ(37) ಎನ್ನುವವರ ಮೃತದೇಹವನ್ನು ಮಣ್ಣಿನಿಂದ ಹೊರಕ್ಕೆ ತೆಗೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

     

    ಗುಡ್ಡ ಕುಸಿತವಾದ ಜಾಗದಲ್ಲಿ ಒಂದು ಚಹಾ ಅಂಗಡಿ ಇತ್ತು. ಇಲ್ಲಿ ಕೆಲವರು ಚಹಾ ಸೇವಿಸುತ್ತಿದ್ದರು. ಹೀಗಾಗಿ ಎಷ್ಟು ಮಂದಿ ಅಲ್ಲಿದ್ದರು ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಟ್ಯಾಂಕರ್ ಚಾಲಕ ಮತ್ತು ಕ್ಲೀನರ್‌ ಟ್ಯಾಂಕರ್‌ ನಿಲ್ಲಿಸಿ ಚಹಾ ಸೇವಿಸುತ್ತಿದ್ದಾಗ ದುರಂತ ಸಂಂಭವಿಸಿದೆ.

  • ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇವತ್ತು ನಡೆಯಲಿದ್ದು, ಶಿರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮಕ್ಕೆ ಏರ್ಪಾಟು ಮಾಡಿಕೊಂಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಮಠದಲ್ಲಿರುವ ಮುಖ್ಯಪ್ರಾಣ ದೇವರು, ಅನ್ನವಿಠಲ ದೇವರಿಗೆ ಎಳನೀರಿನ ಅಭಿಷೇಕ ನಡೆಯಲಿದೆ. ಆರಾಧನಾ ಪ್ರಕ್ರಿಯೆಯ ನಂತರ ಸುಮಾರು 300 ಜನರಿಗೆ ಅನ್ನದಾನ ನಡೆಯಲಿದೆ. ಕಾಪು ತಾಲೂಕಿನ ಹಿರಿಯಡ್ಕ ಸಮೀಪದ ಶಿರೂರು ಗ್ರಾಮದಲ್ಲಿ ಈ ಎಲ್ಲಾ ವಿಧಿವಿಧಾನ ನಡೆಯುತ್ತಿದ್ದು, ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಆರಾಧನಾ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದೆ.

    ಜುಲೈ 19 ರಂದು ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ 13 ನೇ ದಿನಕ್ಕೆ ಆರಾಧನೆ ನಡೆಯಬೇಕಿತ್ತು. ಆದರೆ ವಾರದ ಹಿಂದೆಯಷ್ಟೇ ಪೊಲೀಸರು ಮೂಲಮಠವನ್ನು ದ್ವಂದ್ವ ಸೋದೆ ಮಠಕ್ಕೆ ಬಿಟ್ಟುಕೊಟ್ಟಿದ್ದರು. ಪ್ರಕರಣ ತನಿಖೆ ಹಂತದಲ್ಲಿ ಇದ್ದುದರಿಂದ ಆರಾಧನಾ ಪ್ರಕ್ರಿಯೆ ವಿಳಂಬವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv