Tag: shirtless

  • ಶರ್ಟ್ ಧರಿಸದೇ ಸಭೆಗೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿ!

    ಶರ್ಟ್ ಧರಿಸದೇ ಸಭೆಗೆ ಹಾಜರಾದ ಶಿಕ್ಷಣ ಇಲಾಖೆ ಅಧಿಕಾರಿ!

    ಲಕ್ನೋ: ಉತ್ತರಪ್ರದೇಶದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ (Shirtless) ಧರಿಸದೇ ಸಭೆಗೆ ಹಾಜರಾಗಿ ಫಜೀತಿಗೆ ಒಳಗಾಗಿದ್ದಾರೆ.

    ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್, ವಿವಿಧ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೊಂದಿಗೆ ಇಲಾಖಾ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಕರೆದಿದ್ದರು. ಈ ಸಭೆಗೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ ಹಾಕದೆ, ಬನಿಯನ್ ಧರಿಸಿ ಬಂದಿದ್ದರು.

    ಇದನ್ನು ಗಮನಿಸಿದ ವಿಜಯ್ ಕಿರಣ್ ಆನಂದ್ (Vijay Kiran Anand) ಅವರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಿರುವುದನ್ನು ಅನುಚಿತ ವರ್ತನೆ ಎಂದು ಪರಿಗಣಿಸಿ ಕೆಲಸದಿಂದ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ತಮಿಳುನಾಡು ಅಬಕಾರಿ ಸಚಿವರ ಬಂಧನ; ಇದು BJP ಸೇಡಿನ ರಾಜಕಾರಣ – ಎಂ.ಕೆ ಸ್ಟಾಲಿನ್‌

    ಈ ವೇಳೆ ಅಧಿಕಾರಿ ಬನಿಯನ್ ಧರಿಸಿ ಹಾಜರಾಗಿರುವುದು ಎಲ್ಲರ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ಹೀಗಾಗಿ ಅವರು ಅಮಾನತುಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ. ಆದರೆ ಅಮಾನತುಗೊಂಡಿರುವ ಅಧಿಕಾರಿ ಯಾವ ಜಿಲ್ಲೆಯವರು ಎಂಬುದು ಬಹಿರಂಗವಾಗಿಲ್ಲ.

     

  • ಹುಡುಗರು ಶರ್ಟ್‍ಲೆಸ್ ಆಗಿದ್ರೆ ನಂಗೆ ಇಷ್ಟ ಆಗಲ್ಲ: ರಶ್ಮಿಕಾ

    ಹುಡುಗರು ಶರ್ಟ್‍ಲೆಸ್ ಆಗಿದ್ರೆ ನಂಗೆ ಇಷ್ಟ ಆಗಲ್ಲ: ರಶ್ಮಿಕಾ

    ಬೆಂಗಳೂರು: ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಾ ಸಖತ್ ಆ್ಯಕ್ಟಿವ್ ಆಗಿರುವ ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣಇದೀಗ ಹುಡುಗರು ಶರ್ಟ್‍ಲೆಸ್ ಆಗಿದ್ದರೆ ನಂಗೆ ಇಷ್ಟ ಆಗಲ್ಲೆಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ಒಂದು ಡೇಟಿಂಗ್ ಆ್ಯಪ್ (Dating App) ಸಂಬಂಧಿಸಿದ ಟಾಕ್ ಶೋನಲ್ಲಿ ಭಾಗಿ ಆಗಿದ್ದರು. ಆ ವೇಳೆ ಅವರಿಗೆ ಡೇಟಿಂಗ್ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಅವುಗಳಿಗೆ ರಶ್ಮಿಕಾ ನೇರವಾಗಿ ಉತ್ತರ ನೀಡಿದ್ದಾರೆ. ಡೇಟಿಂಗ್ ಆ್ಯಪ್‍ನಲ್ಲಿ ಹುಡುಗರ ಪ್ರೊಫೈಲ್​ ಫೋಟೋ ಹೇಗಿರಬೇಕು ಯುವಕರ ಬಾಡಿ ಹೇಗೆ ಫಿಟ್ ಆಗಿರಬೇಕು ಡೇಟಿಂಗ್ ಮಾಡಲು ವಯಸ್ಸು ಮುಖ್ಯನಾ ಎನ್ನುವ ವಿಚಾರಗಳ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ನಾನು ಓದಿದ್ದು ಬೋರ್ಡಿಂಗ್ ಶಾಲೆಯಲ್ಲಿ. ಆ ಸ್ಕೂಲ್‍ನಲ್ಲಿ ಒಬ್ಬ ಹುಡುಗನನ್ನು ಕಣ್ಣಿಟ್ಟು ನೋಡಿದರೆ ಸಾಕು ಅದನ್ನೇ ಡೇಟಿಂಗ್ ಎನ್ನಲಾಗುತ್ತಿತ್ತು. ಚೆನ್ನಾಗಿ ವರ್ಕೌಟ್ ಮಾಡಿ, ದೇಹವನ್ನು ಫಿಟ್ ಆಗಿರಿಸಿಕೊಳ್ಳುವ ಹುಡುಗರನ್ನು ನಾನು ಹೊಗಳುತ್ತೇನೆ. ಅದು ಅವರ ಬದ್ಧತೆಯನ್ನು ತೋರಿಸುತ್ತದೆ. ಆದರೆ ಅವರು ಶರ್ಟ್‍ಲೆಸ್ ಫೋಟೋವನ್ನು ಯಾಕೆ ತಮ್ಮ ಪ್ರೊಫೈಲ್​ಗೆ ಹಾಕಬೇಕು ನನಗೆ ಇದು ಅರ್ಥವಾಗುವುದೇ ಇಲ್ಲ. ಈ ವಿಚಾರದಲ್ಲಿ ನಾನು ಸ್ವಲ್ಪ ಹಳೇ ಕಾಲದ ಆಲೋಚನೆ ಹೊಂದಿದ್ದೇನೆ. ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ಮಾತನಾಡಿದ ರಶ್ಮಿಕಾ ವಯಸ್ಸು ಮುಖ್ಯವಾಗುವುದಿಲ್ಲ. ವ್ಯಕ್ತಿ ಮುಖ್ಯವಾಗುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:   ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

    ರಶ್ಮಿಕಾ ಮಂದಣ್ಣ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸ್ಟಾರ್ ನಟರ ಸಿನಿಮಾಗಳಿಗೆ ಅವರೇ ನಾಯಕಿ ಆಗಬೇಕು ಎನ್ನುವ ಬೇಡಿಕೆ ದಿನದಿಂದದಿನಕ್ಕೆ ಹೆಚ್ಚಾಗುತ್ತಿದೆ. ತೆಲುಗು, ತಮಿಳು ಮಾತ್ರವಲ್ಲದೇ ಹಿಂದಿ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಇವರಿಗೆ ಸಿಕ್ಕಿದೆ. ಇದನ್ನೂ ಓದಿ:   ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮಶಿನ್, ಫ್ರಿಡ್ಜ್, ಟಿವಿ ಬಹುಮಾನ