ಹಾವೇರಿ: ಉದ್ದ ತೋಳಿನ ಶರ್ಟ್ ಧರಿಸಿದ್ದ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡದಿರುವ ಪ್ರಸಂಗ ನಡೆದಿದೆ.
ಇಂದು (ಭಾನುವಾರ) ರಾಜ್ಯಾದ್ಯಂತ ಕೆಇಎ ಪರೀಕ್ಷೆ (KEA Exam) ನಡೆಯುತ್ತಿದೆ. ಈ ಹಿನ್ನೆಲೆ, ಉದ್ದ ತೋಳಿನ ಅಂಗಿ ಹಾಗೂ ಫಿಟ್ ಜೀನ್ಸ್ ಧರಿಸಿದ್ದ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ. ಹಾವೇರಿ (Haveri) ನಗರದ ಬಹುತೇಕ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಈ ಘಟನೆ ಕಂಡು ಬಂದಿದೆ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ – ಸರ್ಕಾರಕ್ಕೆ ಮಾಹಿತಿ ಇದ್ದರೂ ನಿರ್ಲಕ್ಷ್ಯ
ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆ, ಅನಿವಾರ್ಯವಾಗಿ ಕೆಲವರು ಬಟ್ಟೆ ಅಂಗಡಿಗೆ ಹೋಗಿ ಹೊಸ ಶರ್ಟ್ ಧರಿಸಿಕೊಂಡು ಬಂದರೆ ಇನ್ನೂ ಕೆಲವರು ಇರುವ ಶರ್ಟ್ ಅನ್ನೇ ಕತ್ತರಿಸಿಕೊಂಡು ಹಾಫ್ ತೋಳಿನ ಶರ್ಟ್ ಮಾಡಿಕೊಂಡು ಪರೀಕ್ಷೆ ಬರೆದಿದ್ದಾರೆ. ಇದನ್ನೂ ಓದಿ: ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ- ಲಕ್ಷ್ಮಿ ಗೋವಿಂದರಾಜು ಭಾವುಕ
ತಿರುವನಂತಪುರಂ: ವ್ಯಕ್ತಿಯೊಬ್ಬ ಟೀ (Tea) ಕುಡಿಯುತ್ತಾ ಕುಳಿತಿದ್ದ ಸಂದರ್ಭದಲ್ಲಿ ಶರ್ಟ್ ಕಿಸೆಯಲ್ಲಿದ್ದ ಮೊಬೈಲ್ (Mobile Blast) ಏಕಾಏಕಿ ಬ್ಲಾಸ್ಟ್ ಆದ ಘಟನೆ ಕೇರಳ (Kerala) ದಲ್ಲಿ ನಡೆದಿದೆ.
ಈ ಘಟನೆ ಮರೋಟಿಚಾಲ್ ಎಂಬಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. 70 ವರ್ಷದ ಇಲಿಯಾಸ್ ಎಂಬವರು ಹೋಟೆಲಿನಲ್ಲಿ ತನ್ನ ಪಾಡಿಗೆ ತಾನು ಟೀ ಕುಡಿಯುತ್ತಾ ಕುಳಿತಿದ್ದರು. ಈ ವೇಳೆ ಅವರ ಕಿಸೆಯಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದನ್ನೂ ಓದಿ: ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವು
ಕೂಡಲೇ ಅವರ ಶರ್ಟ್‍ಗೂ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಇಲಿಯಾಸ್ ಕಿಸೆಯಲ್ಲಿದ್ದ ಮೊಬೈಲ್ ಬಿಸಾಕಿದ್ದಾರೆ. ಅಲ್ಲದೆ ಹೋಟೆಲ್ ಸಿಬ್ಬಂದಿ ಕೂಡ ಅವರ ರಕ್ಷಣೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬ್ಯಾಟರಿ (Battery) ಯೇ ಸ್ಫೋಟಕ್ಕೆ ಕಾರಣವಾಗಿರಬಹುದು ಎಂಬುದಾಗಿ ಶಂಕಿಸಲಾಗಿದೆ.
ಸ್ಫೋಟಗೊಂಡ ಫೋನ್ ಯಾವ ಕಂಪನಿಯದ್ದು ಎಂಬುದಾಗಿ ತಿಳಿದುಬಂದಿಲ್ಲ. ಘಟನಯ ಸಂಪೂರ್ಣ ದೃಶ್ಯ ಹೋಟೆಲಿನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಪ್ಪಳ: ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಉದ್ದ ತೋಳಿನ ಅಂಗಿ ಹಾಕಿಕೊಂಡು ಬಂದಿದ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ತೋಳು ಕತ್ತರಿಸುವ ಮೂಲಕ ಶಾಕ್ ನೀಡಿದ್ದಾರೆ.
ರಾಜ್ಯಾದ್ಯಂತ ಇಂದು ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ನಡೆಯುತ್ತಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರದ ನವಚೇತನ ಪಬ್ಲಿಕ್ ಶಾಲೆ ಕೇಂದ್ರದಲ್ಲೂ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಪರೀಕ್ಷೆಗೆ ಉದ್ದನೆಯ ತೋಳಿನ ಅಂಗಿ ಹಾಕಿ ಬಂದವರನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ. ಬೇರೆ ಶರ್ಟ್ ಧರಿಸಿ ಬರುವಂತೆ ಸೂಚಿಸಲಾಗಿದೆ.
ದೂರ ದೂರಿಂದ ಬಂದವರಿಗೆ ಬದಲಿ ಶರ್ಟ್ ಇಲ್ಲದಿದ್ದರೆ, ತೋಳು ಕತ್ತರಿಸಿಕೊಂಡು ಒಳಬರುವಂತೆ ತಿಳಿಸಿದ್ದಾರೆ. ಇಲ್ಲದಿದ್ದರೆ ಒಳ ಬಿಡುವುದಿಲ್ಲವೆಂದು ನಿಷೇಧ ಹೇರಿದ್ದಾರೆ. ಅನಿವಾರ್ಯವಾಗಿ ಅಭ್ಯರ್ಥಿಗಳ ತೋಳನ್ನು ಸಿಬ್ಬಂದಿ ಕತ್ತರಿಸಿ ಒಳಗೆ ಕಳುಹಿಸಿದ್ದಾರೆ. ಕೆಲವರು ಬೇರೆ ಅಂಗಿ ಖರೀದಿಸಿ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಶೂ ಹಾಕಿಕೊಂಡೆ ದಸರಾ ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಉಮೇಶ್ ಕತ್ತಿ
ಈಗಾಗಲೇ ಪೂನಂ ಪಾಂಡೆ ಈ ಶೋನಲ್ಲಿ ಮಾಡಿಕೊಂಡ ರಾದ್ಧಾಂತ ಒಂದೆರಡಲ್ಲ. ಸ್ವತಃ ತಮ್ಮ ಮಾಜಿ ಪತಿಯ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಖಾಸಗಿ ಸಂಗತಿಗಳನ್ನು ಮುಲಾಜಿಲ್ಲದೇ ಹೇಳಿಕೊಂಡಿದ್ದಾರೆ. ಮತ್ತೊಂದು ಬಾರಿ ಅಸಹ್ಯ ಎನಿಸುವಂತಹ ಮಧ್ಯೆ ಬೆರಳು ತೋರಿಸಿ ವಿವಾದ ಮಾಡಿಕೊಂಡರು. ಈಗ ಇನ್ನೊಂದು ಕೆಲಸಕ್ಕೆ ಮುಂದಾಗಿದ್ದಾರೆ. ಅದು ಕ್ಯಾಮೆರಾ ಮುಂದೆಯೇ ಶರ್ಟ್ ಬಿಚ್ಚುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್
ಪೂನಂ ಪಾಂಡೆ ಆ ಶೋನ ಎಲಿಮಿನೇಷನ್ ರೌಂಡ್ ನಲ್ಲಿದ್ದಾರೆ. ಹೀಗೆ ಎಲಿಮಿನೇಷನ್ ಆದವರು, ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು, ಅದೂ ಯಾರಿಗೂ ಗೊತ್ತಿರದ ಸಂಗತಿಯನ್ನು ಹೇಳಿಕೊಂಡು ಬಚಾವ್ ಆಗಬಹುದು. ಅಥವಾ ಪ್ರೇಕ್ಷಕರಿಂದ ಬೇರೆ ರೀತಿಯಲ್ಲಿ ವೋಟು ಪಡೆದುಕೊಂಡು, ಅತೀ ಹೆಚ್ಚು ವೋಟು ಬಂದರೆ ಉಳಿದುಕೊಳ್ಳಬಹುದು. ಪೂನಂ ಆಯ್ಕೆ ಮಾಡಿಕೊಂಡಿದ್ದು ಜನರ ಹತ್ತಿರ ವೋಟು ಕೇಳುವುದನ್ನು. ಇದನ್ನೂ ಓದಿ: ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್
ಕ್ಯಾಮೆರಾ ಮುಂದೆಯೇ ಬಂದ ಪೂನಂ ‘ನನಗೆ ವೋಟು ಮಾಡಿದರೆ ನಿಮಗೆ ಸರ್ ಪ್ರೈಸ್ ಕಾದಿದೆ. ನಾನು ನನ್ನ ಎಂದಿನ ಶೈಲಿಯಲ್ಲಿ ನಿಮಗೆ ದರ್ಶನ ಕೊಡುತ್ತೇನೆ’ ಎಂದು ಸೂಕ್ಷ್ಮವಾಗಿ ಹೇಳುತ್ತಾರೆ. ಆದರೆ, ಪ್ರತಿಸ್ಪರ್ಧಿಗಳು ‘ಎಂದಿನಂತೆ ಅಂದರೆ?’ ಎಂದು ಪ್ರಶ್ನೆ ಮಾಡುತ್ತಾರೆ. ನೀವು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂದೂ ಚುಡಾಯಿಸುತ್ತಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಮತ್ತೆ ಕ್ಯಾಮೆರಾ ಮುಂದೆ ಬರುವ ಪೂನಂ ‘ನನ್ನ ಅಭಿಮಾನಿಗಳಿಗೆ ನಾನು ಏನು ಅಂತ ಗೊತ್ತು. ಅವರಿಗೆ ಸೂಕ್ಷ್ಮತೆ ಅರ್ಥವಾಗುತ್ತದೆ’ ಎನ್ನುತ್ತಾರೆ. ಆದರೂ, ಸಹ ಸ್ಪರ್ಧಿ ಅಜ್ಮಾ ಮತ್ತು ಮುನಾವರ್ ರೇಗಿಸುತ್ತಾ, ಅದೇನು ಅಂತ ಹೇಳು ಎಂದು ಒತ್ತಾಯಿಸಿದಾಗ ‘ನನಗೆ ವೋಟು ಮಾಡಿದರೆ, ಕ್ಯಾಮೆರಾ ಮುಂದೆಯೇ ಶರ್ಟ್ ಬಿಚ್ಚುತ್ತೇನೆ’ ಎನ್ನುತ್ತಾರೆ ಪೂನಂ. ಶೋನಲ್ಲಿ ಆಡಿದ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಕೇಳಿ ಬರುತ್ತಿದೆ. ಪೂನಂ ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ. ಶೋನಲ್ಲಿ ಆ ರೀತಿ ಹೇಳುವುದು ಸರಿಯಲ್ಲ ಎಂದಿದ್ದಾರೆ ನೆಟ್ಟಿಗರು.
ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೌಂಟ್‍ಡೌನ್ ಶುರುವಾಗಿದೆ. ಸಾಮಾನ್ಯವಾಗಿ ಈ ದಿನದಂದು ಯಾವ ರೀತಿಯ ಡ್ರೆಸ್ ಧರಿಸಬೇಕೆಂದು ಪುರುಷರು ಗೊಂದಲದಲ್ಲಿರುತ್ತಾರೆ. ಈ ವಿಶೇಷ ದಿನದಂದು ನಿಮ್ಮ ಪ್ರೇಯಸಿಯ ಜೊತೆಗೆ ಡೇಟಿಂಗ್ ಹೋಗುವುದರೊಂದಿಗೆ ಅವರನ್ನು ಮತ್ತಷ್ಟು ಇಂಪ್ರೆಸ್ ಮಾಡುವುದು ಪುರುಷರು ಧರಿಸುವ ಡ್ರೆಸ್‍ಗಳಾಗಿದೆ.
ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯೊಂದಿಗೆ ನೀವೆನಾದರೂ ಪ್ಲಾನ್ಸ್ ಹೊಂದಿದ್ದರೆ, ನೀವು ಏನು ಧರಿಸಿದರೆ ಚೆನ್ನಾಗಿ ಕಾಣಿಸಬಹುದು ಎಂದು ಚಿಂತಿಸುತ್ತಿದ್ದರೆ, ನಿಮಗೆ ಒಂದಷ್ಟು ಟಿಪ್ಸ್‌ಗಳನ್ನು ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ
ಡೆನಿಮ್
ಪುರುಷರಿಗೆ ಡೆನಿಮ್ ಜಾಕೆಟ್ ಸುಂದರವಾಗಿ ಕಾಣಿಸುತ್ತದೆ. ಡೆನಿಮ್ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ, ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಧರಿಸಬಹುದಾಗಿದೆ. ವಿಶೇಷವೆಂದರೆ ಡೆನಿಮ್ ಜಾಕೆಟ್ ಎಲ್ಲಾ ರೀತಿಯ ಶರ್ಟ್ ಹಾಗೂ ಟಿ ಶರ್ಟ್‍ಗಳಿಗೆ ಸೂಟ್ ಆಗುತ್ತದೆ.
ಸಿಂಪಲ್ ಶರ್ಟ್
ನಿಮ್ಮ ಗೆಳತಿ ಸರಳತೆಯನ್ನು ಹೆಚ್ಚಾಗಿ ಇಷ್ಟಪಡುವ ವ್ಯಕ್ತಿಯಾಗಿದ್ದರೆ, ನೀವು ಅವರನ್ನು ಇಂಪ್ರೆಸ್ ಮಾಡಲು ಸಿಂಪಲ್ ಆಗಿರುವ ಶರ್ಟ್ ಧರಿಸುವುದು ಉತ್ತಮ. ಜೊತೆಗೆ ಸಿಂಪಲ್ ಆಗಿರುವ ಶರ್ಟ್ ನಿಮಗೆ ಧರಿಸಲು ಆರಾಮದಾಯಕವಾಗಿರುತ್ತದೆ. ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್
ವಿಂಟರ್ ಜಾಕೆಟ್
ಫೆಬ್ರವರಿ ತಿಂಗಳಿನಲ್ಲಿ ಉತ್ತರ ಭಾರತದಲ್ಲಿ ಸಾಕಷ್ಟು ಚಳಿ ಇರುತ್ತದೆ. ಈ ವೇಳೆ ನಿಮಗೆ ಜಾಕೆಟ್ ಬಹಳ ಅಗತ್ಯವಾಗಿರುತ್ತದೆ. ನಿಮ್ಮನ್ನು ಚಳಿಯಿಂದ ಜಾಕೆಟ್ ರಕ್ಷಿಸುವುದರ ಜೊತೆಗೆ ಬೆಚ್ಚಗಿರಿಸುತ್ತದೆ. ಇದನ್ನೂ ಓದಿ:ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ
ಬ್ಲೇಜರ್
ಕೆಲವು ಹುಡುಗಿಯರು ಕ್ಯಾಶುಯಲ್ ಲುಕ್‍ನಲ್ಲಿ ಕಾಣಿಸಿಕೊಳ್ಳುವ ಪುರುಷರನ್ನು ಬಹಳ ಇಷ್ಟಪಡುತ್ತಾರೆ. ನಿಮ್ಮ ಗೆಳತಿ ಕೂಡ ಕ್ಯಾಶುಯಲ್ ಲುಕ್‍ನಲ್ಲಿ ನೋಡಲು ನಿಮ್ಮನ್ನು ಇಷ್ಟಪಟ್ಟರೆ, ನೀವು ಕ್ಲಾಸಿ ಬ್ಲೇಜರ್ ಧರಿಸಲು ಟ್ರೈ ಮಾಡಿ. ಜೊತೆಗೆ ಪಫ್ಯೂಮ್ ಹಾಕಿಕೊಳ್ಳುವುದನ್ನು ಮರೆಯಬೇಡಿ.
ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ವಿಶೇಷ ಶರ್ಟ್ ಹೊಲಿದು, ಅವರ ನೆಚ್ಚಿನ ಹನುಮಂತು ಹೋಟೆಲ್ ಪಲಾವ್ ತೆಗೆದುಕೊಂಡು ಅಪ್ಪು ಸಮಾಧಿಗೆ ಅಭಿಮಾನಿಯೊಬ್ಬರು ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದಾರೆ.
ಮೈಸೂರಿನ ದೇವರಾಜ ಮೊಹಲ್ಲಾದಲ್ಲಿನ ಫ್ರೆಂಡ್ಸ್ ಸ್ಟಿಚ್ ಟೈಲರ್ ಸಾಗರ್ ಪುನೀತ್ ಅವರಿಗಾಗಿ ಒಂದು ಶರ್ಟ್ ಹೊಲಿದುಕೊಂಡು, ಅವರಿಗೆ ಪ್ರಿಯವಾದ ಮೈಸೂರಿನ ಹನುಮಂತು ಮಟನ್ ಪಲಾವ್, ಕಜ್ಜಾಯ, ರವೆ ಉಂಡೆಯನ್ನು ಪಾರ್ಸಲ್ ಮಾಡಿಸಿಕೊಂಡು ಬೆಂಗಳೂರಿನಲ್ಲಿನ ಅಪ್ಪು ಸಮಾಧಿಗೆ ಅವರ ತಂದೆ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ. ಇದನ್ನೂ ಓದಿ:ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್
ಅಪ್ಪುವಿಗಾಗಿ ವಿಶೇಷವಾದ ಶರ್ಟ್ ಹೊಲಿಯುವುದು ಸಾಗರ್ ಕನಸಾಗಿತ್ತು. ಆದರೆ ಆ ಕನಸು ಈಡೇರುವ ಮುನ್ನವೇ ಅಪ್ಪು ನಿಧನರಾಗಿದ್ದಾರೆ. ಹೀಗಾಗಿ ಇಂದು ಅಪ್ಪುವಿಗಾಗಿ ಪ್ರೀತಿಯಿಂದ ಹೊಲಿದ ಶರ್ಟ್, ಅವರು ಇಷ್ಟಪಡುತ್ತಿದ್ದ ಊಟವನ್ನು ತೆಗೆದುಕೊಂಡು ಅಪ್ಪು ಸಮಾಧಿ ದರ್ಶನಕ್ಕೆ ತೆರಳಿದ್ದಾರೆ.
ಇಂದು ನಡೆದ ಕೋಲಾರ ನಗರಸಭೆಯ ವಿಶೇಷ ತುರ್ತು ಸಭೆಯಲ್ಲಿ ಘಟನೆ ನಡೆದಿದ್ದು, ನಗರ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ಭವನಗಳ ನವೀಕರಣಕ್ಕೆ ಹಣ ಮೀಸಲಿಡುವ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಘಟನೆ ನಡೆದಿದೆ. ಈಗಾಗಲೇ ನಿರ್ಮಾಣವಾಗಿರುವ ಭವನಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಇದಕ್ಕೆ ಹಣ ಮೀಸಲಿಡಬೇಕು ಎಂದು ಒಂದು ಬಣ ಒತ್ತಾಯಿಸಿದೆ.
ಇನ್ನೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಮಾಜಕಲ್ಯಾಣ ಇಲಾಖೆ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಹ ಹಣ ಬಿಡುಗಡೆಯಾಗುತ್ತದೆ. ನಗರಸಭೆಯಿಂದಲೂ ಅದಕ್ಕೆ ಅನುದಾನ ಏಕೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಪರ ವಿರೋಧದ ಚರ್ಚೆ ತಾರಕಕ್ಕೆ ಹೋಗಿ ಸದಸ್ಯರು ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.
ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಸದಸ್ಯರು ದೊಂಬಿ ಸೃಷ್ಟಿಸಿ, ಗಲಾಟೆ ಮಾಡಿದರು. ಈ ವೇಳೆ ಕಾಂಗ್ರೆಸ್‍ನ ಅಂಬರೀಶ್ ಮತ್ತು ಸ್ಥಾಯಿ ಸಮೀತಿ ಅಧ್ಯಕ್ಷ ಮಂಜುನಾಥ್, ಮತ್ತೊರ್ವ ಸದಸ್ಯ ಮುಬಾರಕ್ ಸೇರಿದಂತೆ ಬಹುತೇಕರು ವಾಗ್ವಾದಕ್ಕೆ ಇಳಿದು ಪರಿಸ್ಥಿತಿ ಮಿತಿ ಮೀರಿತು. ಸದಸ್ಯ ಅಂಬರೀಶ್ ತಮ್ಮ ಅಂಗಿಯನ್ನ ಕಳಚಿ ಪ್ರತಿಭಟನೆಗೆ ಇಳಿದರು. ನಗರಸಭೆ ಕಮೀಷನರ್ ಶ್ರೀಕಾಂತ್ ಮತ್ತು ಅಧ್ಯಕ್ಷೆ ಶ್ವೇತ ಶಬರೀಶ್ ಏನೂ ಮಾಡಲಾಗದೆ ಅಸಹಾಯಕರಾಗಿ ಕುಳಿತಿದ್ದರು. ನಂತರ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಇದಕ್ಕೆ ಹಣ ಬಿಡುಗಡೆ ಮಾಡಬೇಕೆಂಬ ವಿಚಾರ ಇನ್ನೂ ಗೊಂದಲದಲ್ಲಿಯೇ ಮುಂದುವರೆಯಿತು.
ಮೈಕ್ರೋ ಬ್ಲಾಗಿಂಗ್‍ನಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 28,400 ಲೈಕ್ಸ್ ಹಾಗೂ 1,900 ಕಮೆಂಟ್‍ಗಳು ಹರಿದುಬಂದಿದೆ. ಕೆಲವರು ಆನೆ ಡ್ರಸ್‍ನಲ್ಲಿ ಬಹಳ ಮುದ್ದಾಗಿ ಕಾಣಿಸಿಕೊಂಡಿದೆ ಎಂದರೆ ಇನ್ನೂ ಕೆಲವರು ಆನೆ ವಿಚಿತ್ರವಾಗಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
10 ಮಂದಿ ಟೈಲರ್ ಗಳು ಆನೆ ಅಳತೆಯನ್ನು ತೆಗೆದುಕೊಂಡು ಪ್ಯಾಂಟ್ ಹೊಲಿದಿರಬೇಕು ಮತ್ತೊಬ್ಬರು ಹಾಸ್ಯಮಯವಾಗಿ ಕಮೆಂಟ್ ಮಾಡಿದ್ದಾರೆ.
– ಅಮಾನತು ಮಾಡಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ
ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಹೈಡ್ರಾಮಾ ನಡೆದಿದೆ. ಸದನದ ಬಾವಿಗಿಳಿದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅಂಗಿ ಬಿಚ್ಚಿ ದುರ್ವರ್ತನೆ ತೋರಿದ್ದಾರೆ. ಇದನ್ನು ಖಂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ವಾರಗಳ ಕಾಲ ಸದನಕ್ಕೆ ಭಾಗವಹಿಸದಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಸದನದಲ್ಲಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಅಶಿಸ್ತು ಪ್ರದರ್ಶಿಸಿದ್ದು, ಈ ಹಿನ್ನೆಲೆ ಮಾರ್ಚ್ 12ರ ವರೆಗೆ ಸಂಗಮೇಶ್‍ರನ್ನು ಕಲಾಪದಿಂದ ಅಮಾನತು ಮಾಡಿ ಸ್ಪೀಕರ್ ಆದೇಶಿಸಿದ್ದಾರೆ. ನಿಯಮ 348ರ ಅಡಿ ಅಮಾನತು ಮಾಡಿ ಸ್ಪೀಕರ್ ಮಧ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿದರು.
ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಚರ್ಚೆ ನಡೆಸುವ ಬಗ್ಗೆ ಸ್ಪೀಕರ್ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಡಿಸಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾವ ನಿಯಮಾವಳಿಗಳಲ್ಲಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ತಕ್ಷಣವೇ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗದ್ದಲ ಎಬ್ಬಿಸಿದರು. ಅಲ್ಲದೆ ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಸಂಗಮೇಶ್ ಬಾವಿಗಿಳಿದಾಗ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ದಾರೆ.
ವಿಧಾನಸಭೆ ಕಲಾಪಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ತನ್ವೀರ್ ಸೇಠ್, ಅಖಂಡ ಶ್ರೀನಿವಾಸಮೂರ್ತಿ ಕಲಾಪಕ್ಕೆ ಗೈರಾಗಿದ್ದಾರೆ ಎಂದರು. ಈ ವೇಳೆ ಸಿದ್ದರಾಮಯ್ಯರವರಿಗೆ ಸಾಥ್ ನೀಡಿದ ರಮೇಶ್ ಕುಮಾರ್ ಮತ್ತು ಹೆಚ್.ಕೆ.ಪಾಟೀಲ್ ಒನ್ ನೇಷನ್, ಒನ್ ಎಲೆಕ್ಷನ್ ಚರ್ಚೆಗೆ ಅವಕಾಶ ಕೊಟ್ಟರೆ ಕ್ರಿಯಾಲೋಪ ಆಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಎದ್ದು ನಿಂತ ಸಿಎಂ ಬಿಎಸ್ ಯಡಿಯೂರಪ್ಪ, ಸ್ಪೀಕರ್ ಅವರು ಸಂವಿಧಾನದ ಚೌಕಟ್ಟಿನಲ್ಲೇ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ ಸಹಕರಿಸಿ ಎಂದು ಮನವಿ ಮಾಡಿದರು.
ಈ ಎಲ್ಲ ಗೊಂದಲಗಳ ನಡುವೆ ಸ್ಪೀಕರ್ ಒಂದು ದೇಶ, ಒಂದು ಚುನಾವಣೆ ಚರ್ಚೆಯ ಪ್ರಸ್ತಾವನೆ ಓದಲು ಮುಂದುವರಿಸಿದರು. ಈ ವೇಳೆ ಇದು ಆರ್‍ಎಸ್‍ಎಸ್ ಅಜೆಂಡಾ, ಪ್ರಧಾನಿ ಡಿಕ್ಟೇಟರ್ ಎಂದು ಸಿದ್ದರಾಮಯ್ಯ ಜರಿದರು. ಅಲ್ಲದೆ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಇದರಿಂದ ಕೋಪಗೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 19 ಜನ ಮಾತನಾಡುವವರ ಪಟ್ಟಿಯನ್ನು ಕೊಟ್ಟಿದ್ದೀರಿ. ಮೊದಲಿನಿಂದಲೂ ಇದನ್ನು ಒಪ್ಪಿಕೊಂಡು ಈಗ ಬೆಳಗ್ಗೆ ಏಕಾಏಕಿ ಬೇಡ ಅಂದರೆ ಏನು ಅರ್ಥ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದರು.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ, ಬೇಕು ಅಂತಾನೇ ಅಂಗಿ ಬಿಚ್ಚಿದ್ದು, ನನಗೆ ವಿಷಾದ ಇಲ್ಲ. ನ್ಯಾಯ ಸಿಗಬೇಕು ಎಂದೇ ಅಂಗಿ ಬಿಚ್ಚಿದ್ದು. ನನ್ನ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ಬಿಜೆಪಿ ಪರ, ನಾನು ಧರಣಿ ಮುಂದುವರಿಸುತ್ತೇನೆ. ಅಪ್ಪ, ಮಕ್ಕಳು, ಈಶ್ವರಪ್ಪ ಭದ್ರಾವತಿಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ನಿಂತಿದ್ದಾರೆ ಎಂದರು.
ಲಕ್ನೋ: ಓರ್ವ ಪೊಲೀಸಪ್ಪ ಶರ್ಟ್ ಕದ್ದು ತಗ್ಲಾಕೊಂಡ ಪೊಲೀಸಪ್ಪ ಧರ್ಮದೇಟು ತಿಂದಿರುವ ಘಟನೆ ಲಕ್ನೋ ನಗರದ ಶಾಪಿಂಗ್ ಮಾಲ್ ನಲ್ಲಿ ನಡೆದಿದೆ. ಪೊಲೀಸಪ್ಪನಿಗೆ ಸ್ಥಳೀಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದೇಶ್ ಕುಮಾರ್ ಶರ್ಟ್ ಕದ್ದು ಧರ್ಮದೇಟು ತಿಂದ ಪೊಲೀಸ್. ಆದೇಶ್ ಕುಮಾರ್ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಲಕ್ನೋ ನಗರದ ಹುಸೇನಗಂಜ್ ನಲ್ಲಿರುವ ಶಾಪಿಂಗ್ ಮಾಲ್‍ಗೆ ತೆರಳಿದ್ದಾನೆ. ಶಾಪಿಂಗ್ ಮಾಲ್ ನಿಂದ ಹೊರ ಬರುವಾಗ ಪ್ರವೇಶದ್ವಾರದ ಸೈರನ್ ಆನ್ ಆಗಿದೆ. ಮಾಲ್ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಯುನಿಫಾರ್ಮಿನೊಳಗೆ ಮೂರು ಶರ್ಟ್ ಧರಿಸಿರೋದು ಪತ್ತೆಯಾಗಿದೆ. ಸಿಬ್ಬಂದಿ ನಕಲಿ ಪೊಲೀಸ್ ಎಂದು ನಾಲ್ಕು ಧರ್ಮದೇಟು ಸಹ ನೀಡಿದ್ದಾರೆ. ತದನಂತರ ಆತ ಅಸಲಿ ಪೊಲೀಸ್ ಅನ್ನೋದು ತಿಳಿದಿದೆ.
ಶರ್ಟ್ ಕಳ್ಳತನ ಸಿಸಿಟಿವಿಯಲ್ಲಿ ಸೆರೆ: ಆದೇಶ್ ಕುಮಾರ್ ಮೂರು ಶರ್ಟ್ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಟ್ರಯಲ್ ರೂಮಿಗೆ ಶರ್ಟ್ ತೆಗೆದುಕೊಂಡ ಆದೇಶ್ ಖಾಲಿ ಕೈಯಲ್ಲಿ ಹಿಂದಿರುಗಿರೋದು ಸೆರೆಯಾಗಿದೆ.
ಆದೇಶ್ ಕುಮಾರ್ ಗೋಮತಿ ನಗರದ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ನಂತರ ಆತನನ್ನ ಪೊಲೀಸ್ ಲೈನ್ ಸೇವೆಯಲ್ಲಿ ನಿಯುಕ್ತಿಗೊಳಿಸಲಾಗಿತ್ತು. ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಆದೇಶ್ ಅಮಾನತುಗೊಂಡಿದ್ದಾನೆ ಎಂದು ಪೊಲೀಸ್ ಕಮೀಷನರ್ ಸಿಬ್ಬಂದಿ ಹೇಳಿದ್ದಾರೆ.