Tag: shiroor

  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಯಿಂದ ಶಿರೂರಿನಲ್ಲಿ ಗುಡ್ಡ ಕುಸಿತ : ಕೃಷ್ಣಭೈರೇಗೌಡ

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಯಿಂದ ಶಿರೂರಿನಲ್ಲಿ ಗುಡ್ಡ ಕುಸಿತ : ಕೃಷ್ಣಭೈರೇಗೌಡ

    ಬೆಂಗಳೂರು: ಅಂಕೋಲಾದ ಶಿರೂರಿನ (Shiroor)ಗುಡ್ಡ ಕುಸಿತ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಬೇಜವಾಬ್ದಾರಿಯೇ ಕಾರಣ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಆರೋಪಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ರಸ್ತೆ ಮಾಡಿದ್ದ ಕಂಪನಿ ಐಆರ್‌ಬಿ (IRB) ಕಂಪನಿ ಮೇಲೆ ಒತ್ತಡ ತಂದು 8-10 ಜೆಸಿಬಿ, ಇಟಾಚಿ ಬಳಸಿ ರಸ್ತೆ ಕ್ಲಿಯರ್ ಮಾಡೋ ಕೆಲಸ ಮಾಡಿದ್ದೇವೆ. ಬಹುತೇಕ ರಸ್ತೆ ಕ್ಲೀಯರ್‌  ಮಾಡುವ ಕೆಲಸ ಆಗಿದೆ. ರಸ್ತೆ  ಕ್ಲೀಯರ್‌ ಆದ ಮೇಲೆ ಸಂಚಾರಕ್ಕೆ ಬಿಡಬೇಕಾ ಅಂತ ಪೊಲೀಸ್ ಮತ್ತು ನ್ಯಾಷನಲ್ ಹೈವೇ ಅವರು ತೀರ್ಮಾನ ಮಾಡ್ತಾರೆ. ಗುಡ್ಡ ಇನ್ನು ತೇವಾಂಶ ಇರುವುದರಿಂದ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಸೇಫ್ಟಿ ಎಂಜಿನಿಯರ್ ಗಳು ಪರಿಶೀಲನೆ ಮಾಡಿದ ಮೇಲೆ ತೀರ್ಮಾನ ಮಾಡ್ತೀವಿ. ಕುಸಿತ ಅಗಿರುವ ಜಾಗದಲ್ಲಿ ಕ್ಲೀಯರ್ ಮಾಡೋ ಕೆಲಸ ಆಗ್ತಿದೆ ಅಂತ ಮಾಹಿತಿ ನೀಡಿದರು. ಇದನ್ನೂ ಓದಿ: ಗಂಗಾವಳಿ ನದಿಯಲ್ಲಿ ಕೊಚ್ಚಿ‌ ಹೋಗಿದ್ದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದೆ ಗ್ಯಾಸ್‌

    ನಿರಂತರವಾಗಿ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಇದರಿಂದ ಕೆಲಸಕ್ಕೆ ತೊಂದರೆ ಆಗುತ್ತಿದೆ. ವಾಹನಗಳ ಸಂಚಾರವನ್ನು ಈಗ ಬೇರೆ ಕಡೆ ಡೈವರ್ಟ್ ಮಾಡಲಾಗಿದೆ. ಒಂದು ಕುಟುಂಬದ 5 ಜನರು ಮಣ್ಣು ಕುಸಿತಕ್ಕೆ ಸಿಲುಕಿದ್ದಾರೆ ‌3 ಜನರ ಶವ ಸಿಕ್ಕಿದೆ‌. ಇದರಲ್ಲಿ ಒಬ್ಬರು ತಮಿಳುನಾಡಿನ ಮೂಲದ ಡ್ರೈವರ್ ದೇಹ ಸಿಕ್ಕಿದೆ.ಇಬ್ಬರ ಬಾಡಿ ಸಿಗಬೇಕಾಗಿದ್ದು ಶೋಧ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಪಂಚೆಯುಟ್ಟ ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನಿಸಿದ್ದ ಸಿಬ್ಬಂದಿಯಿಂದ ಕ್ಷಮೆಯಾಚನೆ

    ಇನ್ನೊಂದು ಟ್ಯಾಂಕರ್ ಸಿಕ್ಕಿ ಹಾಕಿಕೊಂಡಿದೆಯಾ ಅನ್ನೋ ಅನುಮಾನ ಇದೆ. ಆದರೆ BPCL ಮತ್ತು HPCL ಕಂಪನಿಯಾಗಲಿ ಯಾವುದೇ ಟ್ರಾನ್ಸ್ ಪೋರ್ಟ್ ಕಂಪನಿಗಳು ಟ್ಯಾಂಕರ್ ಮಿಸ್ ಆಗಿದೆ ಅಂತ ದೂರು ಕೊಟ್ಟಿಲ್ಲ. ನಮಗೆ ಖಚಿತ ಇರೋ ಮಾಹಿತಿ ಒಂದು ಟ್ಯಾಂಕರ್ ಮಾತ್ರ ನೀರಿನಲ್ಲಿ ಸಿಲುಕಿದೆ. ಅ ಟ್ಯಾಂಕರ್‌ನಲ್ಲೂ ಗ್ಯಾಸ್ ಇದೆ. ನಿನ್ನೆ ಗ್ಯಾಸ್ ಸ್ವಲ್ಪ ಲೀಕ್ ಆಗ್ತಿತ್ತು. HPCL, BPCL ನೇವಿ ಅವರ ಸಹಾಯದಿಂದ ಲೀಕೇಜ್ ತಡೆಯೋ‌ ಕೆಲಸ ಮಾಡಿದ್ದಾರೆ. HPCL ಮತ್ತು BPCL ಕಂಪನಿಗೆ ಜಿಲ್ಲಾಡಳಿತದ ಮೂಲಕ ನೊಟೀಸ್ ಜಾರಿ ಮಾಡಿದ್ದೇವೆ. ಸುರಕ್ಷಿತವಾಗಿ ನೀರಲ್ಲಿ ಇರೋ ಟ್ಯಾಂಕರ್ ಹೊರಗೆ ತೆಗೆಯಬೇಕು. ಗ್ಯಾಸ್‌ನಿಂದ ಯಾವುದೇ ಅನಾಹುತ ಅಗಬಾರದು. ದುರ್ಘಟನೆ ಆಗದೇ ಹಾಗೇ ಗ್ಯಾಸ್ ಟ್ಯಾಂಕ್ ನಿರ್ವಹಣೆ ಮಾಡಬೇಕು ಅಂತ ಹೇಳಿದ್ದೇವೆ ಅಂತ ಮಾಹಿತಿ ನೀಡಿದ್ರು.

     

    NDRF, SDRF, ನೇವಿ, ಪೊಲೀಸರು, ಅಗ್ನಿಶಾಮಕ ದಳ ಎಲ್ಲರು ಸ್ಥಳದಲ್ಲಿ ಕೆಲಸ ಮಾಡ್ತಿದ್ದಾರೆ. ಗುಡ್ಡ ಕುಸಿತ ಅಗುತ್ತೆ‌ ಅಂತ ಗೊತ್ತಿದ್ದರೂ ಕಳೆದ ವರ್ಷವೇ ನಾವು ಇದರ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಗುಡ್ಡ ಕುಸಿತ ತಡೆಗಟ್ಟುವ ಕೆಲಸ ಅವರು ಮಾಡಲಿಲ್ಲ. ನಿನ್ನೆಯೂ ಅವರು ತ್ವರಿತವಾಗಿ ರಾಷ್ಟ್ರೀಯ ಹೆದ್ದಾರಿಯವರು ಸ್ಪಂದಿಸಲಿಲ್ಲ. ಸ್ಥಳೀಯ ಶಾಸಕರು ರಾಷ್ಟ್ರೀಯ ಹೆದ್ದಾರಿಯವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ ಎಂದು ದೂರು ನೀಡಿದ್ದಾರೆ. ನಿನ್ನೆ ಸಂಜೆ IRB ಕಂಪನಿ ಮತ್ತು ನ್ಯಾಷನಲ್ ಹೈವೆ ಮೇಲೆ FIR ದಾಖಲು ಮಾಡಿದ್ದೇವೆ. ಈ ಪ್ರಕರಣಕ್ಕೆ ಅವರ ಬೇಜವಾಬ್ದಾರಿ, ಮೊಂಡುತನ ಕಾರಣ. ಕಳೆದ ವರ್ಷ ನಾನೇ ಸಭೆ ನಡೆಸಿ ಮುಖ್ಯ ಕಾರ್ಯದರ್ಶಿ ಮೂಲಕ ವರ್ತಮಾನ ಕೊಟ್ಟಿದ್ದೆವು. ಆದರು ಯಾವುದೇ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

    ಈಗ ಮುಂಬೈನಿಂದ ಕಾರು ಕಂಪನಿಯೊಂದು ಫೋನ್ ಮಾಡಿ ಒಂದು ಜಿಪಿಎಸ್ ಗುಡ್ಡ ಕುಸಿತ ಜಾಗದಲ್ಲಿ ಸಿಕ್ಕಿ ಹಾಕಿಕೊಂಡಿದೆ ಅಂತ ಮಾಹಿತಿ ಕೊಟ್ಡಿದ್ದಾರೆ. ಒಂದು ಕಾರ್ ಕೂಡಾ ಸಿಕ್ಕಿ ಹಾಕಿಕೊಂಡಿರೋ ಸಾಧ್ಯತೆ ಇದೆ .ಅದರ ಪರಿಶೀಲನೆ ಆಗುತ್ತಿದೆ. ಕಾರು ಕಂಪನಿಗೆ ಮಾಲೀಕರು ಯಾರುಎನ್ನುವ ಮಾಹಿತಿ ಕೇಳಿದ್ದೇನೆ ಅಂತ ತಿಳಿಸಿದರು.

  • ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭ!

    ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭ!

    ಉಡುಪಿ: ಜಿಲ್ಲೆಯ ಶಿರೂರು ಮೂಲ ಮಠದಲ್ಲಿ ನೈವೇದ್ಯ ಪೂಜೆ ಆರಂಭವಾಗಿದೆ. ಶಿರೂರು ಲಕ್ಷ್ಮೀವರ ತೀರ್ಥಶೀಗಳು ವೃಂದಾವನಸ್ಥರಾದ ಹಿನ್ನೆಲೆಯಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳನ್ನು ನಿಲ್ಲಿಸಲಾಗಿತ್ತು.

    ಹಿರಿಯಡ್ಕ ಸಮೀಪದ ಮೂಲ ಮಠದಲ್ಲಿ ಇಂದಿನಿಂದ ದೈನಂದಿನ ಪೂಜೆ ಆರಂಭವಾಗಿದೆ. ಮುಖ್ಯ ಪ್ರಾಣ ಮತ್ತು ಮೂಲ ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗಿದೆ. ಸ್ಚಾಮೀಜಿ ಇದ್ದಾಗ ಪ್ರತಿದಿನ 4 ಸೇರು ಅಕ್ಕಿಯ ನೈವೇದ್ಯ ದೇವರಿಗೆ ಅರ್ಪಣೆಯಾಗುತ್ತಿತ್ತು. ಮೂರು ಹೊತ್ತು ಪೂಜೆ ನಡೆಯುತ್ತಿತ್ತು.

    ಸ್ವಾಮೀಜಿಯ ಸಾವಿನ ನಂತರ ಕಳೆದ 7 ದಿನಗಳ ಕಾಲ ಕೇವಲ ಆರತಿಯನ್ನು ಎತ್ತಿ ದೇವರಿಗೆ ಪೂಜೆ ಆಗುತ್ತಿತ್ತು. ದೇವರಿಗೆ ನೈವೇದ್ಯ ಸಹಿತ ಎಲ್ಲಾ ಪೂಜೆಗಳು ಇಂದಿನಿಂದ ಶುರುವಾಗಿದೆ. ಆದರೆ ಶಿರೂರು ಮೂಲ ಮಠದ ಅರ್ಚಕರು, ಮಠದ ಸಿಬ್ಬಂದಿಗಳಿಗೆ ಮಾತ್ರ ಮಠದೊಳಗೆ ಪ್ರವೇಶ ನೀಡಲಾಗಿದೆ.

    ಮೂಲ ಮಠದ ಸುತ್ತಲೂ ಪೊಲೀಸ್ ಭದ್ರತೆಯಿದೆ. ಉಡುಪಿಯಲ್ಲಿರುವ ಶಿರೂರು ಮಠದಲ್ಲೂ ನೈವೇದ್ಯ ಸಹಿತ ಪೂಜೆ ಇಂದಿನಿಂದ ಶುರುವಾಗಿದೆ.

  • ಶಿರೂರು ಶ್ರೀ ಅಸಹಜ ಸಾವು- ನನ್ನನ್ನೂ ಮುಕ್ತವಾಗಿ ವಿಚಾರಣೆ ನಡೆಸಿ ಅಂದ್ರು ಪೇಜಾವರ ಶ್ರೀ

    ಶಿರೂರು ಶ್ರೀ ಅಸಹಜ ಸಾವು- ನನ್ನನ್ನೂ ಮುಕ್ತವಾಗಿ ವಿಚಾರಣೆ ನಡೆಸಿ ಅಂದ್ರು ಪೇಜಾವರ ಶ್ರೀ

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಕುರಿತು ನನ್ನನ್ನು ಬೇಕಾದರೂ ಪೊಲೀಸರು ವಿಚಾರಣೆ ನಡೆಸಲಿ. ಈ ಕುರಿತು ಮುಕ್ತವಾಗಿ ತನಿಖೆ ಮಾಡಬಹುದು. ಒಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆಯಾಗಲಿ ಎಂಬುದೇ ನಮ್ಮ ಆಶಯ ಅಂತ ಪೇಜಾವರ ಶ್ರೀಗಳು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರೂರು ಶ್ರೀಗೆ ಮೊದಲಿಂದಲೂ ಅನಾರೋಗ್ಯ ಇತ್ತು. ಹೀಗಾಗಿ ಅವರ ಸಾವು ಕೊಲೆಯಲ್ಲ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು ಅಂದ್ರು. ಇದೇ ವೇಳೆ ಕರಾವಳಿಯ ಸ್ವಾಮೀಜಿಗಳಾದ ಸಂತೋಷ್ ಗುರೂಜಿ, ಕೇಮಾರು ಸ್ವಾಮೀಜಿ, ವಿಶ್ವ ವಿಜಯರು ಸರಿಯಾಗಿ ವಿಚಾರ ಮಾಡಿ ಜವಾಬ್ದಾರಿಯುತ ಹೇಳಿಕೆ ಕೊಡಬೇಕೆಂದು ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ

    ಮಠದವ್ರಿಂದಲೇ ಕೃತ್ಯ ಶಂಕೆ:
    ಶ್ರೀಗಳ ನಿಧನದಂದು ನಾನು ಉಡುಪಿಯಲ್ಲಿ ಇರಲಿಲ್ಲ. ಅನ್ನಾಹಾರ ವಿಷವಾಗಿದೆಯೋ ಗೊತ್ತಿಲ್ಲ. ಕಿಡ್ನಿ, ಲಿವರ್ ಸಮಸ್ಯೆ ಅಂತ ಕೆಲವರು ಹೇಳುತ್ತಾರೆ. ಮಹಿಳೆ ಜೊತೆ ಜಗಳ ಆಗಿದೆ ಎಂಬ ಊಹಾಪೋಹ ಇದೆ. ಜೊತೆಗಿರುವವರಿಂದ ಸಮಸ್ಯೆಯಾಯ್ತೋ ಗೊತ್ತಿಲ್ಲ. ಪಲಾವ್ ತಿಂದಿರುವ ಬಗ್ಗೆ ಸಹೋದರ ಹೇಳಿದ್ದಾರೆ. ಬೇರೆ ಯಾವ ಮಠದಿಂದ ಯಾವುದೇ ಕೃತ್ಯ ನಡೆದಿಲ್ಲ. ಅವರ ಮಠದವರಿಂದಲೇ ಕೃತ್ಯ ನಡೆದಿರಬಹುದು ಅಂತ ಶಂಕೆ ವ್ಯಕ್ತಪಡಿಸಿದ್ರು.

    ಶಿರೂರು ಸ್ವಾಮೀಜಿಗೆ ಮದ್ಯಪಾನದಿಂದ ಹೀಗಾಯ್ತೋ ಗೊತ್ತಿಲ್ಲ. ವನ ಮಹೋತ್ಸವಕ್ಕೆ ಬಂದ ವಿದ್ಯಾರ್ಥಿಗಳಿಗೂ ಇರಿಸು ಮುರುಸಾಗಿತ್ತು. ಈ ಬಗ್ಗೆ ಕೂಡಾ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಗಬಹುದು ಅಂದ್ರು. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಸನ್ಯಾಸ ಧರ್ಮ ಪಾಲಿಸಿಲ್ಲ:
    ಶಿರೂರು ಶ್ರೀ ಹಲವಾರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಕೆಲಸ ಮಾಡಿದ್ದಾರೆ. ಆದ್ರೆ ಅವರು ಸನ್ಯಾಸ ಧರ್ಮ ಪಾಲಿಸಿಲ್ಲ. ಶಿರೂರು ಸ್ವಾಮೀಜಿ ಪುಂಡಾಟಿಕೆ ಮಾಡುತ್ತಿದ್ದರು. ಕೆಲವೊಂದು ದುರ್ವ್ಯಸನಗಳು ಇತ್ತು. ಸ್ತ್ರೀಯರ ಮೇಲಿನ ಆಸಕ್ತಿ ಅವರಿಗೆ ಇತ್ತು. ಈ ಬಗ್ಗೆ ಪರ್ಯಾಯ ಸಭೆಯಲ್ಲೇ ಶ್ರೀಗಳನ್ನು ತಿದ್ದಿಕೊಳ್ಳಲು ಹೇಳಿದ್ದೆ. ಅಲ್ಲದೇ ಹಲವು ಬಾರಿ ವೈಯಕ್ತಿಕವಾಗಿಯೂ ನಾನು ಸಲಹೆ ನೀಡಿದ್ದೇನೆ. ಆದ್ರೆ ಲಕ್ಷ್ಮೀವರರು ಯಾವುದನ್ನೂ ಪಾಲಿಸಿಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಎಲ್ಲಿ ಹುಡುಕಿದ್ರೂ ಸ್ವಾಮೀಜಿ ಇಲ್ಲ – ಶಿರೂರು ಮಠದಲ್ಲಿ ರೂಬಿಯ ಮೂಕ ರೋಧನ!

  • ಕೊಡಮಣಿತ್ತಾಯ ದೈವದ ಶಾಪಕ್ಕೆ ತುತ್ತಾದ್ರಾ ಶಿರೂರು ಶ್ರೀ?

    ಕೊಡಮಣಿತ್ತಾಯ ದೈವದ ಶಾಪಕ್ಕೆ ತುತ್ತಾದ್ರಾ ಶಿರೂರು ಶ್ರೀ?

    ಉಡುಪಿ: ಶಿರೂರು ಸ್ವಾಮೀಜಿ ವೃಂದಾವನ ಸೇರುತ್ತಿದ್ದಂತೆಯೇ ಅವರ ಬಗೆಗಿನ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    5 ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು, ಇದೀಗ ಶ್ರೀಗಳು ವಿಧಿವಶರಾದ ಬಳಿಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗ್ತಿದೆ. ಈ ಮೂಲಕ ಲಕ್ಷ್ಮೀವರ ತೀರ್ಥರು ಧರ್ಮದೈವವಾದ ಶ್ರೀಕೊಡಮಣಿತ್ತಾಯನ ಉಗ್ರಕೋಪಕ್ಕೆ ಗುರಿಯಾದರೇ ಎಂಬ ಪ್ರಶ್ನೆಗಳನ್ನು ಭಕ್ತರು ಮಾಡುತ್ತಿದ್ದಾರೆ.

    ಉಡುಪಿಯ ಪಡುಬಿದ್ರೆಯ ಬಾಲುಪೂಜಾರಿ ಎಂಬವರ ಕುಟುಂಬದ ಮನೆಯಲ್ಲಿ ನಡೆದ ನೇಮದ ಸಂದರ್ಭದಲ್ಲಿ ಸ್ವಾಮೀಜಿ ಅನುಚಿತ ವರ್ತನೆ ತೋರಿದ್ದರು ಎನ್ನಲಾಗಿದೆ. ಇದೇ ಘಟನೆ ಶ್ರೀಗಳ ಬದುಕಿಗೆ ಕುತ್ತಾಯಿತೇ ಎಂಬ ಪ್ರಶ್ನೆಗಳನ್ನು ಹಾಕಿ ಜನ ವೀಡಿಯೋ ಶೇರ್ ಮಾಡುತ್ತಿದ್ದಾರೆ.

    ಶ್ರೀಗಳ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಅದರ ಪರಿಣಾಮ ಇದಾಗಿರಬಹುದೇ ಎಂಬುದು ಈಗ ಚರ್ಚೆಯಾಗುತ್ತಿದೆ. ದರ್ಶನದಲ್ಲಿ ಇರುವಾಗ ಕೊಡಮಣಿತ್ತಾಯ ದೈವದ ಬಳಿ ಮಾತನಾಡುವ ಸ್ವಾಮೀಜಿ, ನೀನು ನನಗೆ ಏನು ಕೊಟ್ಟಿದ್ದೀಯ? ಏನೂ ಕೊಟ್ಟಿಲ್ಲ ಎಂದು ಸನ್ನೆ ಮಾಡಿದ್ದರು. ನಿನ್ನಿಂದ ಏನೂ ಸಹಾಯವಾಗಿಲ್ಲ ಅಂತ ದೈವದ ಮುಂದೆ ಹೇಳಿಕೊಂಡಿದ್ದರು.

    ಸದ್ಯ ಇದೀಗ ಈ ವೀಡಿಯೋ ಬಹು ಚರ್ಚಿತ ವಿಷಯವಾಗಿದೆ. ದೈವದ ನಡೆಯಲ್ಲಿ ನಡೆಯುವ ಕಟ್ಟು-ಪಾಡುಗಳ ವಿಡಂಬನೆ ಜೀವಹಾನಿಗೆ ಕಾರಣವಾಗಿರಬಹುದು ಎಂದು ದೈವ ಭಕ್ತರು ಹೇಳುತ್ತಿದ್ದಾರೆ.

  • ಶಿರೂರು ಮಠಕ್ಕೆ ಯೋಗ್ಯವಟು ಉತ್ತರಾಧಿಕಾರಿ -ಸೋದೆ ಮಠಾಧೀಶರಿಂದ ಸ್ಪಷ್ಟನೆ

    ಶಿರೂರು ಮಠಕ್ಕೆ ಯೋಗ್ಯವಟು ಉತ್ತರಾಧಿಕಾರಿ -ಸೋದೆ ಮಠಾಧೀಶರಿಂದ ಸ್ಪಷ್ಟನೆ

    ಉಡುಪಿ: ಶೀರೂರು ಮಠಕ್ಕೆ ಯೋಗ್ಯ ವಟುವೊಬ್ಬರು ಉತ್ತರಾಧಿಕಾರಿಯಾಗುತ್ತಾರೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಉಡುಪಿಯ ಶೀರೂರು ಶ್ರೀಗಳ ವೃಂದಾವನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಶೀರೂರು ಮಠದ ಸ್ವತ್ತುಗಳ ಸ್ವಾಧೀಕರಣ ಆಗಬೇಕು. ಈಗ ಎಲ್ಲವೂ ಪೊಲೀಸರ ಸುಪರ್ಧಿಯಲ್ಲಿದೆ. ಪೊಲಿಸರ ಮೂಲಕ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತೇವೆ. ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಆಗಬೇಕು. ಒಬ್ಬ ಯೋಗ್ಯ ವಟುವನ್ನು ನೋಡಿ ಉತ್ತರಾಧಿಕಾರಿ ಮಾಡ್ತೇವೆ. ಈ ಬಗ್ಗೆ ಹಿರಿಯ ಯತಿಗಳ ಅಭಿಪ್ರಾಯವನ್ನು ಪಡೆಯುತ್ತೇವೆ. ಶೀರೂರು- ಹಿರಿಯಡ್ಕದ ಎರಡು ಮಠದಲ್ಲಿ ಹಿಂದಿನವರೇ ಪೂಜೆ ಮಾಡ್ತಾರೆ ಅಂತ ಹೇಳಿದ್ರು.

    ಸ್ವಾಮೀಜಿಗಳಿಗೆ ವಿಷಪ್ರಾಶನ ಆಗಿತ್ತು ಎಂದು ಮಾಧ್ಯಮದ ಮೂಲಕವೇ ವಿಚಾರ ತಿಳಿಯಿತು. ವೈದ್ಯರ ಪರೀಕ್ಷೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ವಿಷಪ್ರಾಶನ ಮಾಡುವಂತಹ ಉದ್ದೇಶ ಇಲ್ಲ. ಪಟ್ಟದ ದೇವರ ವಿಚಾರದಲ್ಲಿ ಚರ್ಚೆ ಮಾಡಿದ್ದೇವೆ ಅಷ್ಟೇ. ವಿಷಪ್ರಾಶನ ಎಲ್ಲ ಮಾಡೋಕೆ ಸಾಧ್ಯವಿಲ್ಲ ಅಂದ್ರು.

    ಗುಪ್ತ ಸಭೆ ಆಗಿರೋ ಮಾಹಿತಿ ಇಲ್ಲ. ಈಗ ಶಿರೂರು ಶ್ರೀಗಳ ಬೃಂದಾವನ ದರ್ಶನಕ್ಕೆ ಬಂದಿದ್ದೇವೆ. ಕಿರಿಯ ಯತಿಗಳು ಶಿರೂರು ಶ್ರೀಗಳ ದರ್ಶನ ಪಡೆದಿದ್ದೇವೆ. ಶಿರೂರು ಶ್ರೀಗಳಿಗಿಂತ ಹಿರಿಯ ಯತಿಗಳು ದರ್ಶನ ಪಡಿಬೇಕೆಂದು ಇಲ್ಲ ಅಂತ ಅವರು ಸ್ಪಷ್ಟಪಡಿಸಿದ್ರು.

    https://www.youtube.com/watch?v=oIVAFQigp0M

    https://www.youtube.com/watch?v=mBcWLA7VQJM

  • ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಉಡುಪಿ ಶೀರೂರು ಮಠದಿಂದ ಹಸು ಕಳ್ಳತನ- ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮೂಲಮಠದ ಹಟ್ಟಿಯಿಂದ ಗಬ್ಬದ (ಗರ್ಭಿಣಿ) ಹಸುವಿನ ಕಳ್ಳತನವಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕನೇ ಬಾರಿಗೆ ಗೋಶಾಲೆಗೆ ನುಗ್ಗಿದ್ದಾರೆ.

    ಉಡುಪಿ ಶ್ರೀಕೃಷ್ಣ ಮಠಕ್ಕೆ ಒಳಪಟ್ಟ ಶೀರೂರು ಮಠದ ಮೂಲ ಸಂಸ್ಥಾನ ಉಡುಪಿಯ ಹೊರವಲಯದಲ್ಲಿರುವ ಹಿರಿಯಡ್ಕದಲ್ಲಿದೆ. ಇಲ್ಲಿಗೆ ಭಾನುವಾರ ರಾತ್ರಿ ನಾಲ್ಕು ಮಂದಿ ಕಳ್ಳರು ಕಾರಿನಲ್ಲಿ ಬಂದಿದ್ದಾರೆ. ಟಾರ್ಚ್ ಹಿಡಿದು ಮಠದ ಕಡೆ ಬಂದ ಇಬ್ಬರು ಗೋಶಾಲೆಗೆ ನುಗ್ಗಿದ್ದಾರೆ.

    ಕೆಲವೇ ಕ್ಷಣಗಳಲ್ಲಿ ಒಂದು ಹಸುವನ್ನು ಹಗ್ಗ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಠದ ಸಿಬ್ಬಂದಿಗೆ ಕಳ್ಳತನದ ಶಬ್ದ ಕೇಳಿ ಎದ್ದು ಬಂದಿದ್ದಾರೆ. ಅಷ್ಟರಲ್ಲಿ ಒಂದು ಹಸುವನ್ನು ಕಾರಿಗೆ ತುಂಬಿಕೊಂಡಾಗಿತ್ತು. ಸಿಬ್ಬಂದಿ ತಕ್ಷಣ ಸೈರನ್ ಮೊಳಗಿಸಿದ್ದಾರೆ. ಬಂದ ದುಷ್ಟರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಶೀರೂರು ಮಠದಲ್ಲಿ ಇದು ಮೂರನೇ ಬಾರಿ ಕಳ್ಳತನ ಆಗುತ್ತಿರೋದು. ಒಂದು ಬಾರಿ ಖಾಲಿ ಕೈಯಲ್ಲಿ ಪರಾರಿಯಾದ ಕಳ್ಳರು, ಮತ್ತೊಮ್ಮೆ ವಾಹನವನ್ನು ಮರಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಇದೀಗ ಮೂರನೇ ಬಾರಿ ಒಂದು ಹಸುವನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಹಿಂದೆ ಒಮ್ಮೆ ಕಳ್ಳತನ ಮಾಡುತ್ತಿದ್ದ ವಾಹನವನ್ನು ಸ್ವತಃ ಶೀರೂರು ಸ್ವಾಮೀಜಿಯೆ ಕಾರಿನಲ್ಲಿ ಬೆನ್ನಟ್ಟಿ ಹೋಗಿದ್ದರು. ಈ ಸಂದರ್ಭ ಸ್ವಾಮೀಜಿಯ ಕಾರು ಅಪಘಾತಕ್ಕೊಳಗಾಗಿತ್ತು. ಈ ಸಂದರ್ಭ ಕೂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.