Tag: Shirazi

  • ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

    ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿಗಳಾದ ನಟಿ ಶುಭಾ ಪೂಂಜಾ ಹಾಗೂ ಮಂಜು ಪಾವಗಡ ಟ್ರಿಪ್ ಹೊಡೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಬಿಗ್‍ಬಾಸ್ ಸೀಸನ್-8ರಲ್ಲಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದ್ದ ಇವರು ದೊಡ್ಮನೆಯಲ್ಲಿ ಎಷ್ಟು ಒಳ್ಳೆಯ ಸ್ನೇಹಿತರಾಗಿದ್ದರೋ ಹಾಗೆಯೇ ಕಾರ್ಯಕ್ರಮ ಮುಗಿದ ನಂತರ ಕೂಡ ಅಷ್ಟೇ ಬೆಸ್ಟ್ ಫ್ರೆಂಡ್ಸ್ ಈಗಲೂ ಇದ್ದಾರೆ. ಈ ಹಿಂದೆ ಕಿಟ್ಟಿ ಪಾರ್ಟಿ, ಬರ್ತ್‍ಡೇ ಪಾರ್ಟಿ, ಹಬ್ಬ ಸಮಾರಂಭಗಳಲ್ಲಿ ಆಗಾಗ ಭೇಟಿಯಾಗುತ್ತಿದ್ದ ಶುಭಾ ಪೂಂಜಾ ಹಾಗೂ ಮಂಜು ಪಾವಗಡ ಇದೀಗ ಜಾಲಿಯಾಗಿ ಟ್ರಿಪ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

    shubha poonja

    ಇಂದು ಶುಭಾ ಪೂಂಜಾ, ಅವರ ಭಾವಿ ಪತಿ ಸುಮಂತ್, ಮಂಜು ಪಾವಗಡ, ಹಾಸ್ಯ ಕಲಾವಿದ ರಾಘವೇಂದ್ರ ಅವರು ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನೂ ಈ ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಆಶೀರ್ವಾದ ಪಡೆದುಕೊಳ್ಳಲು ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಆಗಮಿಸಿದ್ದೇವೆ. ಜೊತೆಗೆ ಯಾಣ, ಕುಮಟಾ ಮತ್ತು ಗೋಕರ್ಣಕ್ಕೆ ಒಂದು ಸಣ್ಣ ಪ್ರವಾಸ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

     

    View this post on Instagram

     

    A post shared by shubha Poonja . (@shubhapoonja)

    ಇಷ್ಟೇ ಅಲ್ಲದೇ ಶುಭಾ ಪೂಂಜಾ ಕುದುರೆ ಸವಾರಿ ಮಾಡುತ್ತಿರುವ, ಸಮಂತ್, ಮಂಜು ಹಾಗೂ ರಾಘವೇಂದ್ರ ಅವರೊಟ್ಟಿಗೆ ಸಮುದ್ರದಲ್ಲಿ ಬೋಟ್‍ನಲ್ಲಿ ಹೋಗುತ್ತಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

  • ಪ್ರಾಥಮಿಕ ಶಾಲೆ ಆರಂಭ – ಕಾರವಾರದಲ್ಲಿ ಉತ್ತಮ ಸ್ಪಂದನೆ

    ಪ್ರಾಥಮಿಕ ಶಾಲೆ ಆರಂಭ – ಕಾರವಾರದಲ್ಲಿ ಉತ್ತಮ ಸ್ಪಂದನೆ

    – ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳ ದಾಖಲಾತಿಯಲ್ಲಿ ಇಳಿಕೆ

    ಕಾರವಾರ: 1 ರಿಂದ 5ನೇ ತರಗತಿಯು ಇಂದು ಪ್ರಾರಂಭವಾಗುತ್ತಿದ್ದಂತೆ ಉ.ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಮೂಲಕ ಶಿರಸಿ ಜಿಲ್ಲೆಯನ್ನು ಹಿಂದಿಕ್ಕಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಳಿಯಾಳದಲ್ಲಿ ಅತ್ಯಲ್ಪ ಮಕ್ಕಳು ಶಾಲೆಗೆ ಇಂದು ಹಾಜರಾಗಿದ್ದಾರೆ. ಇದನ್ನೂ ಓದಿ: ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಬುಲೆಟ್ ಪ್ರೂಫ್ ಶೀಲ್ಡ್ ತೆಗೆದ ಶಾ

    ಕಾರವಾರ ಶೈಕ್ಷಣಿಕ ಜಿಲ್ಲೆ

    ಕಾರವಾರ – 93.33%
    ಅಂಕೋಲ – 82.74%
    ಭಟ್ಕಳ – 94.59%
    ಹೊನ್ನಾವರ – 83.40%
    ಕುಮಟಾ – 89.94%
    ಖಾಸಗಿ ಶಾಲೆಗಳ ಹಾಜರಾತಿ(ಕಾರವಾರ ಜಿಲ್ಲಾವಾರು) – 89.51%
    ಅನುದಾನಿತ ಶಾಲೆಗಳ ಒಟ್ಟು ಹಾಜರಾತಿ – 86.81%
    ಸರ್ಕಾರಿ ಶಾಲೆಗಳು ಒಟ್ಟು ಹಾಜರಾತಿ – 89.29%

    ಶಿರಸಿ ಶೈಕ್ಷಣಿಕ ಜಿಲ್ಲೆ

    ಶಿರಸಿ – 91.4%
    ಸಿದ್ದಾಪುರ – 71.34%
    ಯಲ್ಲಾಪುರ – 80.99%
    ಮುಂಡಗೋಡು – 60.37%
    ಹಳಿಯಾಳ – 44.02%
    ಜೋಯಿಡಾ – 85.79 %
    ಒಟ್ಟು ಹಾಜರಾದ ಮಕ್ಕಳ ಸಂಖ್ಯೆ – 66.37%

  • ತಂದೆ ಶವ ಸಂಸ್ಕಾರಕ್ಕೆ ಹೂ ತರಲು ಹೋದ ಮಗ ದುರ್ಮರಣ

    ತಂದೆ ಶವ ಸಂಸ್ಕಾರಕ್ಕೆ ಹೂ ತರಲು ಹೋದ ಮಗ ದುರ್ಮರಣ

    – ಬಸ್, ಬೈಕ್ ನಡುವೆ ಡಿಕ್ಕಿಯಿಂದ ಪ್ರಾಣ ಬಿಟ್ಟ ಯುವಕರು

    ಕಾರವಾರ: ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ ನಗರದ ಎಸ್‍ಬಿಐ ಸರ್ಕಲ್ ಬಳಿ ನಡೆದಿದೆ.

    ಶಿರಸಿಯ ಗಣೇಶ ನಗರದ ನಿವಾಸಿಗಳಾದ ರವಿಚಂದ್ರ ವಡ್ಡರ್ (34), ಸುನೀಲ ಇಂದೂರ (26) ಮೃತರಗಿದ್ದಾರೆ. ಇಬ್ಬರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಬಸ್ ಬಂದು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪಿದ್ದಾರೆ.

    ರವಿಚಂದ್ರ ತಂದೆ ಹನುಮಂತಪ್ಪ ಇಂದು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು ಇಬ್ಬರು ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‍ನಲ್ಲಿದ್ದ ಯುವಕರಿಬ್ಬರು ಬಸ್ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆಪ್ಪರ್ ಸ್ಪ್ರೇ ಬಳಸಿ ಮಗಳನ್ನೇ ಅಪಹರಿಸಿದ ತಾಯಿ!

    ಪೆಪ್ಪರ್ ಸ್ಪ್ರೇ ಬಳಸಿ ಮಗಳನ್ನೇ ಅಪಹರಿಸಿದ ತಾಯಿ!

    ಕಾರವಾರ: ತನಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿದ್ದಕ್ಕೆ ತಾಯಿಯೇ ಮಗಳನ್ನು ಅಪಹರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂದು ವರದಿಯಾಗಿದೆ.

    ತಾಯಿಯಿಂದ ಅಪಹರಣಕ್ಕೊಳಗಾದ ಯುವತಿಯನ್ನು ರುತಿಕಾ ಎಂದು ಗುರುತಿಸಲಾಗಿದೆ. ಈಕೆಯ ತಾಯಿ ರೂಪ ಶಿರ್ಸಿಕರ್ ಆಗಿದ್ದು, ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದಳು.

    ರುತಿಕಾ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬ ಯುವಕನನ್ನು ಪ್ರೀತಿಸಿ ಕೆಲವು ದಿನದ ಹಿಂದೆ ವಿವಾಹವಾಗಿದ್ದಳು. ಈ ಬಗ್ಗೆ ತಾಯಿ ರೂಪ ಶಿರ್ಸಿಕರ್‍ಗೆ ಇಷ್ಟವಿರಲಿಲ್ಲ. ಮಗಳು ತನ್ನ ಮಾತು ಕೇಳದೆ ಬೇರೆ ಯುವಕನನ್ನು ವಿವಾಹವಾಗಿದ್ದಕ್ಕೆ ಕುಪಿತಗೊಂಡ ತಾಯಿ ಇಂದು ಬೆಳಗ್ಗೆ ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದಲ್ಲಿದ್ದ ರುತಿಕಾ ಮನೆಗೆ ಏಕಾಏಕಿ ಬಂದಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಎಲ್ಲರಿಗೂ ಪೆಪ್ಪರ್ ಸ್ಪ್ರೇಯನ್ನು ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರೇ ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ.

    ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಮಣಿಕಂಠ ಅವರು ಪತ್ನಿ ಅಪಹರಣದ ಬಗ್ಗೆ ದೂರು ನೀಡಿದ್ದಾರೆ. ಇನ್ನು ಅಪಹರಣ ಮಾಡಿದ ರೂಪ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ, ಕುಟುಂಬದೊಂದಿಗೆ ಪರಾರಿಯಾಗಿದ್ದು ಈಕೆಯ ಹುಡುಕಾಟ ನಡೆಸಲಾಗುತ್ತಿದೆ.