Tag: shipping

  • ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಲಕ್ಷ ಮೌಲ್ಯದ ಗಾಂಜಾ ಜಪ್ತಿ

    ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಲಕ್ಷ ಮೌಲ್ಯದ ಗಾಂಜಾ ಜಪ್ತಿ

    ಬೀದರ್: ಖಚಿತ ಮಾಹಿತಿ ಮೇರೆಗೆ ಸಿನಿಮಿಯಾ ರೀತಿಯಲ್ಲಿ ಕಾರು ಅಡ್ಡಗಟ್ಟಿ, ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. 34 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ನಡೆದಿದೆ.

    ಬೀದರ್ ಕಡೆಯಿಂದ ಮಹಾರಾಷ್ಟ್ರಕ್ಕೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಗುತ್ತಿತ್ತು. ಈ ವೇಳೆ 34 ಲಕ್ಷ ಮೌಲ್ಯದ ಬರೋಬ್ಬರಿ 342 ಕೆಜಿ ಗಾಂಜಾವನ್ನು ಬೀದರ್ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪುರುಷರ ಟಾಯ್ಲೆಟ್‍ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!

    ಒಂದು ಕಾರಿನಲ್ಲಿ ನಾಲ್ಕು ಜನ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಮೂರು ಜನ ಆರೋಪಿ ಪರಾರಿಯಾಗಿದ್ದು ಒಬ್ಬ ಆರೋಪಿಯನ್ನು ಮಾತ್ರ ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಎಸ್‍ಪಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಈ  ಬಗ್ಗೆ ಹುಮ್ನಾಬಾದ್ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಲಕಿಗೆ ಲವ್ ಲೆಟರ್ ಕೊಟ್ಟ 6ನೇ ತರಗತಿ ವಿದ್ಯಾರ್ಥಿ- ಬಾಸುಂಡೆ ಬರುವಂತೆ ಬಾರಿಸಿದ ಶಿಕ್ಷಕಿ!

  • ರಾಯಚೂರಿನಲ್ಲಿ ರಾತ್ರೋರಾತ್ರಿ ನಡೆಯುತ್ತೆ ಅಕ್ರಮ ಮರಳು ಸಾಗಾಟ

    ರಾಯಚೂರಿನಲ್ಲಿ ರಾತ್ರೋರಾತ್ರಿ ನಡೆಯುತ್ತೆ ಅಕ್ರಮ ಮರಳು ಸಾಗಾಟ

    ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿ ಮೀರಿದೆ. ಅಕ್ರಮ ಮರಳು ಸಾಗಾಟ ರಾತ್ರಿ ಹೊತ್ತು ನಡೆಯುತ್ತಿರುವುದು ತಹಶೀಲ್ದಾರ್ ದಾಳಿಯಿಂದ ತಿಳಿದುಬಂದಿದೆ.

    ಟ್ರ್ಯಾಕ್ಟರ್,ಟಿಪ್ಪರ್‌ಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತದೆ. ಅಕ್ರಮ ಮರಳು ಸಾಗಣೆ ಹಿನ್ನೆಲೆ ಮಸ್ಕಿ ತಹಶೀಲ್ದಾರ್ ಆರ್ ಕವಿತಾ ದಾಳಿ ನಡೆಸಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ:  ಬಾಲ್ಯ ವಿವಾಹ- ಬಾಲಕಿಯ ಪತಿ, ಪೋಷಕರ ವಿರುದ್ಧ ದೂರು ದಾಖಲು

    ಮಸ್ಕಿ ತಾಲೂಕಿನ ಗುಡದೂರು, ಹಂಪನಾಳ ಗ್ರಾಮದಲ್ಲಿ ತಹಶೀಲ್ದಾರ್ ನೇತೃತ್ವದ ತಂಡ ರೇಡ್ ಮಾಡಿದೆ. ಅಕ್ರಮವಾಗಿ ಮರಳು ಸಾಗಿಸಲು ಸಿದ್ಧವಿದ್ದ ಟ್ರ್ಯಾಕ್ಟರ್‌ಗಳ ಮೇಲೆ ದಾಳಿ ಮಾಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ನಿಷೇಧ ಇದ್ದರು, ಮರಳು ಸಾಗಾಟ ನಡೆದಿದೆ. ತಹಶೀಲ್ದಾರ್ ದಾಳಿ ಹಿನ್ನೆಲೆ ಸ್ಥಳಕ್ಕೆ ತುರುವಿಹಾಳ ಪೊಲೀಸರು ಭೇಟಿ ನೀಡಿದ್ದು, ಟ್ರ್ಯಾಕ್ಟರ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

  • ಡಿಸೈನ್ ಮಾಡಲಾದ ಒಳಉಡುಪಿನಲ್ಲಿ ಚಿನ್ನ ಸಾಗಾಟ ಮಾಡ್ತಿದ್ದ ವ್ಯಕ್ತಿ ಅರೆಸ್ಟ್

    ಡಿಸೈನ್ ಮಾಡಲಾದ ಒಳಉಡುಪಿನಲ್ಲಿ ಚಿನ್ನ ಸಾಗಾಟ ಮಾಡ್ತಿದ್ದ ವ್ಯಕ್ತಿ ಅರೆಸ್ಟ್

    – 92 ಲಕ್ಷ ಮೌಲ್ಯದ ಚಿನ್ನ ವಶ

    ಮಂಗಳೂರು: ಒಳ ಉಡುಪಿನಲ್ಲಿ ಚಿನ್ನ ಇಟ್ಟು ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಬಂಧಿತ ಆರೋಪಿಯನ್ನು ಉಳ್ಳಾಲ ಮೂಲದ ಮಹಮ್ಮದ್ ಆಶಿಫ್ ಎಂದು ಗುರುತಿಸಲಾಗಿದೆ. ಆತನಿಂದ ಬರೋಬ್ಬರಿ 92 ಲಕ್ಷದ ಮೌಲ್ಯದ ಚಿನ್ನ ವಶಪಡಿಸಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಆಶಿಫ್ ಬಲೆಗೆ ಬಿದ್ದಿದ್ದಾನೆ.

    ದುಬೈನಿಂದ ಬಂದ ಏರ್ ಇಂಡಿಯಾ IX384 ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದಾನೆ. ಆಶಿಫ್ ಡಿಸೈನ್ ಮಾಡಲಾದ ಒಳಉಡುಪು, ಪ್ಯಾಂಟ್ ಮತ್ತು ಮೊಣಕಾಲು ಬ್ಯಾಂಡ್‍ನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದನು. ಚಿನ್ನದ ಪೌಡರನ್ನು ಗಮ್ ಆಗಿ ಪರಿವರ್ತಿಸಿ ಡಿಸೈನ್ ಮಾಡಿ ತರುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಈತನಲ್ಲಿ ಒಟ್ಟು 1.993 ಕೆಜಿ ತೂಕದ 92.27 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಗಿದೆ.

    ಆರೋಪಿಯನ್ನು ಬಜಪೆ ಪೊಲೀಸರು ಕಸ್ಟಮ್ ಅಧಿಕಾರಿಗಳು ಹಸ್ತಾಂತರಿಸಿದ್ದು, ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚೀನಾ ಹಡಗನ್ನು ಓಡಿಸಿದ ಭಾರತೀಯ ನೌಕಾಪಡೆ

    ಚೀನಾ ಹಡಗನ್ನು ಓಡಿಸಿದ ಭಾರತೀಯ ನೌಕಾಪಡೆ

    ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾ ಸೇನೆ ಚೀನಾದ ಹಡಗನ್ನು ಓಡಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಭಾರತದ ಗಡಿ ವ್ಯಾಪ್ತಿಯ ಅಂಡಮಾನ್ ನಿಕೋಬರ್ ದ್ವೀಪದ ಬಳಿ ಚೀನಾದ ಹಡಗು ಶಂಕಾಸ್ಪದ ರೀತಿಯಲ್ಲಿ ಕಾರ್ಯಚರಣೆ ನಡೆಸುತ್ತಿರುವ ವಿಚಾರವನ್ನು ಭಾರತ ನೌಕಾಸೇನೆಯ ಕಣ್ಗಾವಲು ಪಡೆಯ ವಿಮಾನ ಗುರುತಿಸಿತ್ತು.

    ಆಗ್ನೇಯ ಏಷ್ಯಾದ ಸಮುದ್ರದಲ್ಲಿ ಚೀನಾದ ಶಿ ಯಾನ್ 1 ಎಂಬ ಹಡಗು ಭಾರತದ ಸಮುದ್ರ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಬಂದು ಕಾರ್ಯಾಚರಣೆ ನಡೆಸುತ್ತಿತ್ತು. ಇದು ಭಾರತೀಯ ನೌಕಪಡೆಗೆ ತಿಳಿದ ತಕ್ಷಣ ಭಾರತೀಯ ಯುದ್ಧನೌಕೆಯನ್ನು ಕಳುಹಿಸಿ ಚೀನಾದ ಹಡಗಿನ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಈ ವೇಳೆ ಅ ಹಡಗು ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಸಂಶೋಧಾನಾ ಚಟುವಟಿಕೆ ನಡೆಸುತಿತ್ತು ಎಂಬ ವಿಚಾರ ತಿಳಿದು ಬಂದಿದೆ.

    ನಿಯಮದ ಪ್ರಕಾರ ವಿದೇಶಿ ಹಡಗುಗಳು ಭಾರತದ ಕಡಲ ತೀರದಲ್ಲಿ ಯಾವುದೇ ರೀತಿಯ ಸಂಶೋಧನೆಗಳನ್ನು ನಡೆಸಲು ಅನುಮತಿ ಇಲ್ಲ. ಭಾರತೀಯ ನೌಕಸೇನೆಯೂ ಚೀನಾದವರಿಗೆ ಯಾವುದೇ ಸಂಶೋಧನೆ ನಡೆಸಲು ಬಿಡದೆ, ಅದನ್ನು ಭಾರತ ಸಮುದ್ರ ತೀರ ಬಿಟ್ಟು ಹೋಗುವಂತೆ ಸೂಚಿಸಿದೆ. ಭಾರತೀಯ ನೌಕಪಡೆಯ ಸೂಚನೆಗೆ ಹೆದರಿದ ಚೀನಾ ಹಡಗು ತಕ್ಷಣ ಭಾರತದ ಕಡಲ ತೀರ ಬಿಟ್ಟು ಚೀನಾದ ಕಡೆಗೆ ಹೋಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಭಾರತೀಯ ನೌಕಪಡೆಯು ಚೀನಾದದಿಂದ ಬರುವ ಹಡಗುಗಳ ಮೇಲೆ ಸದಾ ಜಾಗರೂಕತೆಯಿಂದ ಇದ್ದು, ಇತ್ತೀಚಿಗೆ ಭಾರತದ ಪಿ-8ಐ ಕಣ್ಗಾವಲು ವಿಮಾನಗಳು ಭಾರತದ ಕಡಲ ತೀರದ ಸುತ್ತು ಕಾರ್ಯಚರಣೆ ಮಾಡುತ್ತಿದ್ದ ಏಳು ಚೀನಾ ಹಡಗುಗಳ ಬಗ್ಗೆ ಮಾಹಿತಿ ಕಲೆಹಾಕಿ ಅವುಗಳ ಚಿತ್ರಗಳನ್ನು ಕ್ಲಿಕ್ ಮಾಡಿ ಕಳುಹಿಸಿದ್ದವು.

    ಕಡಲ್ಗಳ್ಳತನ ವಿರೋಧಿ ಗಸ್ತು ತಿರುಗುವ ಉದ್ದೇಶದಿಂದ ಚೀನಾದ ನೌಕಾಪಡೆಯು ಆಗಾಗ ಭಾರತದ ಸಮುದ್ರವನ್ನು ಪ್ರವೇಶಿಸುತ್ತದೆ. ಚೀನಾದ ಯುದ್ಧನೌಕೆಗಳು ಪರಮಾಣು ಮತ್ತು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳೊಂದಿಗೆ ಬರುವುದರಿಂದ ಭಾರತೀಯ ನೌಕಪಡೆ ಚೀನಾ ಹಡಗುಗಳನ್ನು ಸಂಪೂರ್ಣವಾಗಿ ಗಮನಿಸುತ್ತಿರುತ್ತವೆ.

  • ವಯನಾಡಿನಿಂದ ಮೂರು ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಗೋವುಗಳು ಪೊಲೀಸರ ವಶಕ್ಕೆ

    ವಯನಾಡಿನಿಂದ ಮೂರು ಟ್ರಕ್‍ಗಳಲ್ಲಿ ಸಾಗಿಸುತ್ತಿದ್ದ ಗೋವುಗಳು ಪೊಲೀಸರ ವಶಕ್ಕೆ

    ಉಡುಪಿ: ಮೂರು ಟ್ರಕ್‍ಗಳಲ್ಲಿ ಕೇರಳದ ವಯನಾಡಿನಿಂದ ಗೋಶಾಲೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಉಡುಪಿ ಜಿಲ್ಲೆ ಕಾಪುವಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ದಾಖಲೆ ಯಾವುದೂ ಇಲ್ಲದೆ ಅಕ್ರಮ ಗೋವು ಸಾಗಾಟದ ಶಂಕೆಯಲ್ಲಿ ಬೆನ್ನು ಹತ್ತಿದ್ದ ಮಂಗಳೂರು ಪೊಲೀಸರು ಕಾಪು ಠಾಣಾ ವ್ಯಾಪ್ತಿಯಲ್ಲಿ 3 ಟ್ರಕ್‍ನಲ್ಲಿದ್ದ ಜಾನುವಾರುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಶಿರ್ವದಲ್ಲಿ ಹೊಸದಾಗಿ ಆರಂಭಿಸಿದ ಗೋ ಶಾಲೆಗೆ ಗೋವುಗಳನ್ನು ತರಲಾಗಿದೆ ಎಂದು ಗೋಶಾಲೆ ಮ್ಯಾನೇಜರ್ ಗಿರೀಶ ಅವರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಅಕ್ರಮ ಸಾಗಾಟದ ರೀತಿ ಕಂಡು ಬಂದಿದ್ದು ಆರ್‍.ಟಿ.ಓ ನಿಯಮ ಉಲ್ಲಂಘನೆ, ಅಕ್ರಮ ಸಾಗಾಟ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    ಕೇರಳದಿಂದ ತಂದ ಜಾನುವಾರುಗಳನ್ನು ಗೋವು ಶಾಲೆಗೆ ರವಾನಿಸಲಾಗಿದೆ. ಸಾಗಾಟದ ಸಂದರ್ಭದಲ್ಲಿ ಒಂದು ಗೋವು ಸಾವನಪ್ಪಿರುವುದು ಕೂಡಾ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು.

  • ಜಾನುವಾರು ಸಾಗಿಸುತ್ತಿದ್ದ ಐವರ ಬಂಧನ

    ಜಾನುವಾರು ಸಾಗಿಸುತ್ತಿದ್ದ ಐವರ ಬಂಧನ

    ಬೆಂಗಳೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಐವರನ್ನು ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಐವರು ಆರೋಪಿಗಳು ಅಕ್ರಮವಾಗಿ ಆನೇಕಲ್ ನ ಚಂದಾಪುರ ಸಂತೆಯಿಂದ ತಮಿಳುನಾಡಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಕೌ ಕ್ಯಾನ್ ಪೌಂಡೇಶನ್ ಸಂಸ್ಥೆಯ ರಮಣ್ ಎಂಬವರ ನೇತೃತ್ವದ ತಂಡವು, ಅತ್ತಿಬೆಲೆಯ ಟೋಲ್ ಗೇಟ್ ಬಳಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದೆ.

    ಈ ವೇಳೆ ವಾಹನದಲ್ಲಿ ಅಕ್ರಮವಾಗಿ 7 ಎತ್ತುಗಳು ಹಾಗೂ 21 ಸೀಮೆಹಸುವಿನ ಕರುಗಳನ್ನು ಕಂಡುಬಂದಿದ್ದು, ಕೂಡಲೇ ವಾಹನದಲ್ಲಿದ್ದ ಐವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಸಂಘಟನೆಯು ವಶಪಡಿಸಿಕೊಂಡ ಜಾನುವಾರುಗಳನ್ನು ಆದಿಚುಂಚನಗಿರಿ ಮಠದ ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

    ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews