Tag: ship

  • ಚಲಿಸುತ್ತಿದ್ದ ಹಡಗಿನಲ್ಲಿ ಬೆಂಕಿ – 32 ಮಂದಿ ದುರ್ಮರಣ

    ಚಲಿಸುತ್ತಿದ್ದ ಹಡಗಿನಲ್ಲಿ ಬೆಂಕಿ – 32 ಮಂದಿ ದುರ್ಮರಣ

    ಢಾಕಾ: ಬಾಂಗ್ಲಾದೇಶದ ನದಿಯೊಂದರಲ್ಲಿ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಬೆಂಕಿಹೊತ್ತಿಕೊಂಡ  ಪರಿಣಾಮ ಸುಮಾರು 32 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

    ರಾಜಧಾನಿ ಢಾಕಾದಿಂದ 250 ಕಿಲೋಮೀಟರ್ ದೂರವಿರುವ ದಕ್ಷಿಣ ಗ್ರಾಮ ಪಟ್ಟಣವಾದ ಜಲೋಕತಿ ಬಳಿ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಹಡಗಿನಲ್ಲಿ ಸುಮಾರು 500 ಜನ ಪ್ರಯಾಣಿಕರು ಇದ್ದರು. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್

    ಮೂರು ಮಹಡಿಯ ಹಡಗಿನಲ್ಲಿ ನದಿಯ ಮಧ್ಯಭಾಗದಲ್ಲಿ ಇದ್ದಾಗ ಬೆಂಕಿ ಹೊತ್ತಿಕೊಂಡಿತು. ಘಟನೆಯ ಬಳಿಕ ಪೊಲೀಸ್ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಈವರೆಗೆ 32 ಜನರ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚಿನವರು ಬೆಂಕಿಯಿಂದ  ಗಂಭೀರ ಸುಟ್ಟಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದರಿಂದ 100 ಮಂದಿಯನ್ನು ಪಕ್ಕದಲ್ಲಿರುವ ಬರಿಸಲಾನ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ಹಿನ್ನೆಲೆ ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

  • ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    – ಗೋವಾಕ್ಕೆ ಹೋಗ್ತಿದ್ದ ಐಷಾರಾಮಿ ಹಡಗಿನ ಮೇಲೆ ದಾಳಿ

    ಮುಂಬೈ: ಸಮುದ್ರದ ಮಧ್ಯದಲ್ಲಿ ಗೋವಾಕ್ಕೆ ಹೋಗುತ್ತಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದು, ಬಾಲಿವುಡ್ ಸ್ಟಾರ್ ನಟನ ಮಗ ಸೇರಿ ಒಟ್ಟು ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮುಂಬೈ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಡ್ರಗ್ಸ್ ರೇವ್ ಪಾರ್ಟಿ ಮಾಡುತ್ತಿದ್ದ ಸ್ಟಾರ್ ನಟನ ಮಗ ಸೇರಿ ಒಟ್ಟು 10 ಮಂದಿಯನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸ್ವಿಗ್ಗಿ ಮೂಲಕ ಗಾಂಜಾ ಸಪ್ಲೈ – 7 ಮಂದಿ ಬಂಧನ

    ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗ್ತಿತ್ತು. ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳದಿಂದ ಕಾರ್ಯಾಚರಣೆ ನಡೆದಿದ್ದು, ಮಾಲ್ ಸಮೇತ 10 ಜನರನ್ನು ವಶಕ್ಕೆ ಪಡೆದಿದ್ದಾರೆ.

  • ಜಪಾನ್ ಸಮುದ್ರದಲ್ಲಿ ಎರಡು ತುಂಡಾದ ಹಡಗು – 24 ಕಿ.ಮೀ.ವರೆಗೆ ಹರಡಿದ ತೈಲ

    ಜಪಾನ್ ಸಮುದ್ರದಲ್ಲಿ ಎರಡು ತುಂಡಾದ ಹಡಗು – 24 ಕಿ.ಮೀ.ವರೆಗೆ ಹರಡಿದ ತೈಲ

    ಟೋಕಿಯೋ: ಉತ್ತರ ಜಪಾನಿನ ಬಂದರು ಬಳಿ ಸರಕು ಸಾಗಣೆಯ ಹಡಗು ಇಬ್ಭಾಗವಾಗಿದ್ದು, ಸುಮಾರು 24 ಕಿಲೋ ಮೀಟರ್ ವರೆಗೆ ತೈಲ ವ್ಯಾಪಿಸಿದೆ. ಬುಧವಾರ ಈ ಘಟನೆ ನಡೆದಿದೆ ಎಂದು ಜಪಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಕಿಮ್ಸನ್ ಪೊಲಾರಿಸ್ ಹೆಸರಿನ ಹಡಗು ದಡಕ್ಕೆ ರಭಸವಾಗಿ ತಾಕಿದ್ದರಿಂದ ಹಡಗು ಎರಡು ತುಂಡಾಗಿದೆ. ಬುಧವಾರ ಉತ್ತರ ಜಪಾನಿನ ಹಚಿನೊಹೆ ಬಂದರಿನಲ್ಲಿ ಈ ಅವಘಡ ಸಂಬಂಧಿಸಿದೆ.

    39 ಸಾವಿರ ಟನ್ ತೂಕದ ಕಿಮ್ಸನ್ ಪೊಲಾರಿಸ್, ಕಟ್ಟಿಗೆಯ ತುಂಡುಗಳನ್ನ ತೆಗೆದುಕೊಂಡು ಸಾಗುತ್ತಿತ್ತು. ದಡದ ಬಳಿ ಬಂದಾಗ ಸಮುದ್ರ ಆಳ ಕಡಿಮೆ ಇರುವ ಕಾರಣ, ಮುಂಭಾಗ ದಡಕ್ಕೆ ತಾಕಿದ್ದರಿಂದ ಕ್ರ್ಯಾಕ್ ಉಂಟಾಗಿ ಎರಡು ತುಂಡಾಗಿದೆ.  ಕೂಡಲೇ ಕೋಸ್ಟಲ್ ಸಿಬ್ಬಂದಿ ಮತ್ತೊಂದು ಹಡಗಿನ ಮೂಲಕ ತೆರಳಿ ಎಲ್ಲ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

    ಅಧಿಕಾರಿಗಳು ತೈಲ ಸೋರಿಕೆ ತಡೆಯಲು ಪ್ರಯತ್ನಿಸಿದ್ರೂ, ಅಪಾರ ಪ್ರಮಾಣದ ಇಂಧನ ಸಮುದ್ರ ಸೇರಿದೆ. ತೈಲ ಸೋರಿಕೆಯಿಂದ ಜಲಚರ ಜೀವಿ ಮತ್ತು ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಹಡಗಿನ ಎಲ್ಲ ಸಿಬ್ಬಂದಿ ಚೀನಾ ಮತ್ತು ಫಿಲಿಫೈನ್ಸ್ ಮೂಲದವರು ಎಂದು ವರದಿಯಾಗಿದೆ. ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್

  • 30 ವರ್ಷದ ಹಿಂದೆ ಮುಳುಗಡೆಯಾಗಿದ್ದ ವಿದೇಶಿ ಹಡಗಿನ ಅವಶೇಷ ಪತ್ತೆ

    30 ವರ್ಷದ ಹಿಂದೆ ಮುಳುಗಡೆಯಾಗಿದ್ದ ವಿದೇಶಿ ಹಡಗಿನ ಅವಶೇಷ ಪತ್ತೆ

    ಕಾರವಾರ: ಸುಮಾರು ಮೂವತ್ತು ವರ್ಷಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರ ದೇಶದ ಚೆರಿಮಾಜು ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿದೆ.

    1981 ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಬಂದಿದ್ದ ಈ ಹಡಗು 14.418 ಟನ್ ಡಾಂಬರ್ ಅನ್ನು ಹೊತ್ತು ತಂದಿತ್ತು. ಈ ವೇಳೆ ಕಡಲಬ್ಬರಕ್ಕೆ ಸಿಲುಕಿದ್ದ ಈ ಹಡಗು ಇಲ್ಲಿಯೇ ಸಂಪೂರ್ಣ ಸಮುದ್ರದಾಳಕ್ಕೆ ಸೇರಿ ಹೋಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು. ಇದನ್ನೂ ಓದಿ: ಕಾರವಾರದಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆ್ಯಕ್ಟಿವ್- ಐಎಸ್‍ಡಿಯಿಂದ ಅರಣ್ಯದಲ್ಲಿ ಕೂಮಿಂಗ್ ಕಾರ್ಯಚರಣೆ

    ಹುದುಗಿ ಹೋಗಿದ್ದ ಹಡಗನ್ನು ಮೇಲೆತ್ತಲು ವಿಫಲ
    1981ರಲ್ಲಿ ಕಾರವಾರದ ಸಮುದ್ರದಲ್ಲಿ ಹುದುಗಿ ಹೋಗಿದ್ದ ಸಿಂಗಾಪುರ ಮೂಲದ ಈ ಹಡಗನ್ನು ಮೇಲೆತ್ತಲು ಪ್ರಯತ್ನ ಮಾಡಲಾಗಿತ್ತು. ಆದರೇ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಲ್ಲಿನ ಕಂಪನಿ ಸಮುದ್ರಾಳದಲ್ಲೇ ಹಡಗಿನ ಅವಶೇಷಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತ್ತು. ಆದರೇ ಅತೀ ಆಳ ಹಾಗೂ ಹೆಚ್ಚು ಮರಳು ತುಂಬಿದ್ದರಿಂದ ಅಲ್ಪ ಭಾಗವನ್ನಷ್ಟೇ ಮೇಲೆತ್ತಲಾಗಿತ್ತು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

    ಆದರೇ ಇದೀಗ ಕ್ವಿಂಟಾಲ್ ಗಟ್ಟಲೇ ತೂಕವಿರುವ ಕಬ್ಬಿಣದ ಹಡಗಿನ ಅವಶೇಷ ತನ್ನಿಂದ ತಾನೇ ಮೇಲೆದ್ದು ಬಂದಿರುವುದು ಸ್ಥಳೀಯ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ- ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಮೀನುಗಾರರು

  • ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

    ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

    – ಇಬನ್ನೂ 75 ಜನ ನಾಪತ್ತೆ, ಮುಂದುವರಿದ ನೌಕಾಪಡೆ ಕಾರ್ಯಾಚರಣೆ

    ನವದೆಹಲಿ: ಗುಜರಾತ್ ಹಾಗೂ ಮುಂಬೈನಲ್ಲಿ ತೌಕ್ತೆ ಅಬ್ಬರ ಹೆಚ್ಚಾಗಿದ್ದು, ಒಎನ್‍ಜಿಸಿಯ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. 188 ಜನರನ್ನು ರಕ್ಷಣೆ ಮಾಡಲಾಗಿದ್ದು, 75 ಜನ ಸಿಬ್ಬಂದಿ ಕಾಣೆಯಾಗಿದ್ದಾರೆ. ಇತ್ತ ಗುಜರಾತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ.

    ಗುಜರಾತ್ ಹಾಗೂ ಪಕ್ಕದ ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಗುಜರಾತ್‍ನ ಗಿರ್-ಸೋಮನಾಥ್, ಭಾವನಗರ ಹಾಗೂ ಅಮ್ರೇಲಿ ಜಿಲ್ಲೆಗಳಲ್ಲಿ ಹಾಗೂ ದಿಯುನ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸರ್ವೇ ಬಳಿಕ ಅಹ್ಮದಾಬಾದ್‍ನಲ್ಲಿ ಪರಿಶೀಲನಾ ಸಭೆಯನ್ನು ಸಹ ನಡೆಸಿದ್ದಾರೆ.

    ತೌಕ್ತೆ ಮುಂಬೈನಲ್ಲಿ ಸಹ ಭಾರೀ ಅನಾಹುತ ಸೃಷ್ಟಿಸಿದ್ದು, ಮುಂಬೈನಿಂದ 35 ನಾಟಿಕಲ್ ಮೈಲಿ ದೂರದಲ್ಲಿ 261 ಜನರಿದ್ದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್(ಒಎನ್‍ಜಿಸಿ)ನ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. ಇನ್ನೂ 57 ಜನ ಕಾಣೆಯಾಗಿದ್ದಾರೆ. 188 ಜನರನ್ನು ಈ ವರೆಗೆ ರಕ್ಷಣೆ ಮಾಡಲಾಗಿದೆ. ಭಾರತೀಯ ನೌಕಾಪಡೆ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

    ಇದೀಗ ತೌಕ್ತೆ ಚಂಡಮಾರುತ ದುರ್ಬಲಗೊಂಡಿದ್ದು, ಬುಧವಾರ ಬೆಳಗ್ಗೆ ದಕ್ಷಿಣ ರಾಜಸ್ಥಾನ ಹಾಗೈ ಪಕ್ಕದ ಗುಜರಾತ್ ಪ್ರದೇಶಗಳಲ್ಲಿ ಅಬ್ಬರಿಸಿತ್ತು. ರಾಜಸ್ಥಾನದ ಉದಯಪುರದ ಪಶ್ಚಿಮ-ನೈಋತ್ಯದಲ್ಲಿ 60.ಕಿ.ಮೀ ಹಾಗೂ ಗುಜರಾತ್‍ನ 110 ಕಿ.ಮೀ.ದೂರದಲ್ಲಿ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  • ಕಡಲ ನಡುವೆ ರಕ್ಷಣೆಗಾಗಿ ಅಂಗಲಾಚುತ್ತಿರುವ 9 ಕಾರ್ಮಿಕರು

    ಕಡಲ ನಡುವೆ ರಕ್ಷಣೆಗಾಗಿ ಅಂಗಲಾಚುತ್ತಿರುವ 9 ಕಾರ್ಮಿಕರು

    ಉಡುಪಿ: ಇಲ್ಲಿನ ಎನ್‍ಎಂಪಿಟಿಯ ಕೋರಮಂಡಲ ಎಕ್ಸ್‍ಪ್ರೆಸ್ ಟಗ್‍ನ 9 ಮಂದಿ ಸಿಬ್ಬಂದಿ ಕಳೆದ ಮೂರು ದಿನದಿಂದ ಸಮುದ್ರದಲ್ಲೇ ಸಿಲುಕಿಕೊಂಡಿದ್ದಾರೆ. ಸಮುದ್ರದಲ್ಲಿ ಗಾಳಿ ಇರುವ ಕಾರಣ ಇನ್ನೂ ಕೂಡಾ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿಲ್ಲ. ಈ ನಡುವೆ ಟಗ್‍ನಲ್ಲಿರುವ ಸಿಬ್ಬಂದಿ ಅಪಾಯದಲ್ಲಿರುವ ಸ್ಥಿತಿ ವಿವರಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಶುಕ್ರವಾರ ಬೆಳಗ್ಗೆ 11.30 ರಿಂದ ಕಡಲಲ್ಲಿ ತೇಲುತ್ತಿರುವ ಕೋರಮಂಡಲ ಎಕ್ಸ್‍ಪ್ರೆಸ್ ಟಗ್, ಶನಿವಾರ ಬೆಳಗ್ಗೆ 8.30ಕ್ಕೆ ಕಾಪು ಲೈಟ್ ಹೌಸ್ ಬಳಿಯಿಂದ ಸುಮಾರು ಹದಿನೈದು ಕಿಲೋ ಮೀಟರ್ ದೂರದ ಕಾಪು ಪಾರ್ ಬಳಿ ಬಂಡೆಗೆ ಡಿಕ್ಕಿ ಹೊಡೆದು ನಿಂತಿರುವುದು ಪತ್ತೆಯಾಗಿದೆ. ತಮ್ಮನ್ನು ರಕ್ಷಿಸುವಂತೆ 9 ಮಂದಿ ಸಿಬ್ಬಂದಿ ಎಲ್ಲರಲ್ಲಿ ಅಂಗಲಾಚುತ್ತಿದ್ದಾರೆ. ವೀಡಿಯೋಗಳನ್ನು ಮಾಡಿ ಕಳುಹಿಸಿರುವ ಸಿಬ್ಬಂದಿ, ಅಪಾಯದಲ್ಲಿರುವುದನ್ನು ದಡದಲ್ಲಿರುವವರಿಗೆ ಮನವರಿಕೆ ಮಾಡಿದ್ದಾರೆ. ಜೀವಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಟಗ್‍ನಲ್ಲಿರುವ 9 ಮಂದಿ ಸಿಬ್ಬಂದಿ 40 ಗಂಟೆಗಳನ್ನು ಈಗಾಗಲೇ ಸಮುದ್ರ ಮಧ್ಯದಲ್ಲೇ ಕಳೆದಿದ್ದಾರೆ. ಟಗ್‍ನಲ್ಲಿ ಇರುವ ನೀರು, ಆಹಾರ ಪದಾರ್ಥಗಳು ಖಾಲಿಯಾಗುತ್ತಿದೆ. ಮಳೆ, ಗಾಳಿ ಮತ್ತು ಜೀವ ಭಯದಿಂದ ಎಲ್ಲರೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಟಗ್‍ನಲ್ಲಿರುವ ಸಿಬ್ಬಂದಿ ದೂರವಾಣಿಯ ಮೂಲಕ ಮಾತನಾಡಿ, ಕೋಸ್ಟ್ ಗಾರ್ಡ್ ಹಡಗು ನಮಗಿಂತ ದೂರದ 2 ಮೈಲಿಯಲ್ಲಿ ನಿಂತುಕೊಂಡಿದೆ. ಯಾವಾಗ ನಮ್ಮನ್ನು ರಕ್ಷಿಸುತ್ತಾರೆ ಎನ್ನುವುದನ್ನು ಜೀವ ಕೈಯ್ಯಲ್ಲಿ ಹಿಡಿದು ಕಾಯುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬದುಕಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿ ಎಂದು ದಡದಲ್ಲಿರುವ ಬೋಟ್ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕರಾವಳಿ ಕಾವಲು ಪಡೆ ಎಸ್ಪಿ ಚೇತನ್, ಮಂಗಳೂರಿಗೆ ನೇವಿ ಹೆಲಿಕಾಪ್ಟರ್ ಬಂದಿದೆ. ಹವಾಮಾನ ನೋಡಿಕೊಂಡು ರಕ್ಷಣಾ ಕಾರ್ಯ ಆರಂಭಿಸುತ್ತಾರೆ. ನಮ್ಮ ಅಥವಾ ಕೋಸ್ಟ್ ಗಾರ್ಡ್ ಬಂಡೆ ಸಮೀಪ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

    ಅರಬ್ಬೀ ಸಮುದ್ರದಲ್ಲಿ ಆರೇಳು ಮೀಟರ್ ಅಲೆಗಳು ಏಳುತ್ತಿರುವ ಕಾರಣ, ಬೋಟ್ ಬೃಹತ್ ಬಂಡೆಯಲ್ಲಿ ಸಿಲುಕಿದ ಕಾರಣ ರಕ್ಷಣೆ ವಿಳಂಬವಾಗಿದೆ.

  • ಬಹರೈನ್ ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್

    ಬಹರೈನ್ ನಿಂದ ಮಂಗಳೂರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್

    ಮಂಗಳೂರು: ರಾಜ್ಯದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನೀಗಿಸಲು ದೂರದ ಬಹರೈನ್ ನಿಂದ ಮಂಗಳೂರಿಗೆ ಆಕ್ಸಿಜನ್ ಹಡಗಿನ ಮೂಲಕ ಬಂದಿದೆ.

    ಬಹರೈನ್ ನ ಮನಾಮಾ ಬಂದರ್ ನಿಂದ 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತು ನೌಕಾಪಡೆಯ ಐಎನ್‍ಎಸ್ ತಲ್ವಾರ್ ಹೆಸರಿನ ಹಡಗು ನವಮಂಗಳೂರು ಬಂದರ್ ಗೆ ಇಂದು ತಲುಪಿದೆ. ಎರಡು ಕ್ರಯೋಜೆನಿಕ್ ಐಸೋ ಕಂಟೇನರ್ ರನ್ನು ಹೊತ್ತು ತಂದ ಹಡಗಿನಿಂದ ಕಂಟೇನರನ್ನು ಇಳಿಸಲಾಗಿದ್ದು, ಜಿಲ್ಲಾಡಳಿತದ ನೇತೃತ್ವದಲ್ಲಿ ಸಂಗ್ರಹಿಸಿಡಲಾಗುತ್ತದೆ.

    20 ಮೆಟ್ರಿಕ್ ಟನ್‍ನ್ನು ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಪೂರೈಕೆ ಮಾಡಲಾಗುವುದು, ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್‍ನನ್ನು ರಾಜ್ಯದ ವಿವಿಧೆಡೆ ಅಗತ್ಯ ಇರುವಲ್ಲಿ ಸರಬರಾಜು ಮಾಡಲಾಗುವುದು. ಜೊತೆಗೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ತರಲಾಗಿದೆ.

    ಭಾರತದೊಂದಿಗೆ ಬಹ್ರೈನ್ ರಾಷ್ಟ್ರ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದೆ.

  • ನೌಕಾಪಡೆಯ ಕಾರ್ಯಾಚರಣೆ ಮೀನುಗಾರಿಕಾ ಹಡಗಿನಲ್ಲಿದ್ದ 320 ಕೆ.ಜಿ ಮಾದಕ ದ್ರವ್ಯ ವಶ

    ನೌಕಾಪಡೆಯ ಕಾರ್ಯಾಚರಣೆ ಮೀನುಗಾರಿಕಾ ಹಡಗಿನಲ್ಲಿದ್ದ 320 ಕೆ.ಜಿ ಮಾದಕ ದ್ರವ್ಯ ವಶ

    ನವದೆಹಲಿ: ಭಾರತೀಯ ನೌಕಪಡೆ ಅರಬ್ಬಿ ಸಮುದ್ರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೀನುಗಾರಿಕ ಹಡಗಿನ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ 320 ಕೆಜಿ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

    ನೌಕಾಪಡೆಯ ಐಎನ್‍ಎಸ್ ಸುವರ್ಣ ತಂಡವು ಬೋರ್ಡಿಂಗ್ ಮತ್ತು ಶೋಧಕಾರ್ಯಚರಣೆಯಲ್ಲಿ ತೊಡಗಿತ್ತು. ಈ ವೇಳೆ ಪಾಕಿಸ್ತಾನ ಮೂಲದ ಹಡಗಿನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ಇದು ಭಾರತ, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

    ವಶಪಡಿಸಿಕೊಂಡಿರುವ ಮಾದಕದ್ರವ್ಯದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ 3,000 ಕೋಟಿ ರೂಪಾಯಿ ಎಂದು ವರದಿಯಾಗಿದ್ದು. ಹಲವು ದಿನಗಳಿಂದ ಹಡಗಿನಲ್ಲಿ ಮಾದಕ ದ್ರವ್ಯ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನೌಕಪಡೆಗೆ ದೊಡ್ಡ ಬೇಟೆ ಸಿಕ್ಕಂತಾಗಿದೆ.

    ಹಡಗಿನಲ್ಲಿದ್ದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು ಹಡಗನ್ನು ಕೊಚ್ಚಿ ಬಂದರಿಗೆ ತಂದು ನಿಲ್ಲಿಸಲಾಗಿದ್ದು, ಹಡಗಿನಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

  • ತಾಯಿ, ಮಗಳಿಂದ ಬ್ಯುಸಿನೆಸ್ ಮ್ಯಾನ್‍ಗೆ 1.3 ಕೋಟಿ ಪಂಗನಾಮ

    ತಾಯಿ, ಮಗಳಿಂದ ಬ್ಯುಸಿನೆಸ್ ಮ್ಯಾನ್‍ಗೆ 1.3 ಕೋಟಿ ಪಂಗನಾಮ

    – ರಾಜಕಾರಣಿಗಳು ಸೇರಿ ಹಲವರಿಗೆ ಕೋಟ್ಯಂತರ ರೂ. ಮೋಸ

    ಮುಂಬೈ: ತಾಯಿ, ಮಗಳು ಸೇರಿ ಬ್ಯುಸಿನೆಸ್ ಮ್ಯಾನ್ ಗೆ ಬರೋಬ್ಬರು 1.3 ಕೋಟಿ ರೂ. ಪಂಗನಾಮ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.

    ಆರೋಪಿಗಳನ್ನು 52 ವರ್ಷದ ರಾಗಿಣಿ ಖಂಡೇಲ್ವಾಲ್ ಹಾಗೂ ಆಕೆಯ 22 ವರ್ಷದ ಮಗಳು ಮಾನಸಿ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದು, ತಾಯಿ ಮಗಳು ಸೇರಿ ಅಂಧೇರಿಯ ಬ್ಯುಸಿನೆಸ್ ಮ್ಯಾನ್‍ಗೆ ಬರೋಬ್ಬರಿ 1.3 ಕೋಟಿ ರೂ. ವಂಚಿಸಿದ್ದಾರೆ. ಬ್ಯುಸಿನೆಸ್ ಮ್ಯಾನ್ ಸುಶಾಂತ್ ಶೆಲತ್ಕರ್ ಅವರು ಟಗ್ ಬೋಟ್ ಹಾಗೂ ಬಾರ್ಜ್ ಹಡಗು ಕೊಳ್ಳಲು ಹಣ ನೀಡಿದ್ದರು. ಕೊರೊನಾ ಸಮಯದಲ್ಲಿ ಜೂನ್ 2020ರಲ್ಲಿ ಈ ಡೀಲ್ ನಡೆದಿತ್ತು.

    ಹಣ ಪಡೆದು ವಂಚನೆ ಮಾಡಿರುವ ಕುರಿತು ಸುಶಾಂತ್ ಅವರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ರಾಜಕಾರಣಿಗಳು ಸೇರಿದಂತೆ ಹಲವರಿಗೆ ಇದೇ ರೀತಿ ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬ್ಯುಸಿನೆಸ್ ಮ್ಯಾನ್ ಪತ್ನಿ ಪದ್ಮಾ ಶೆಲಾತ್ಕರ್ ಒಂದೇ ಹಡಗನ್ನು ಹಲವರಿಗೆ ತೋರಿಸಿ ಇದೇ ರೀತಿ 14 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ತಗ್ ಬೋಟ್ ಹಾಗೂ ಬಾರ್ಜ್ ಉತ್ಪಾದಕರ ಕುರಿತು ವಿವರ ಪಡೆಯಲು ಜೂನ್ 2018ರಲ್ಲಿ ವೆಬ್ಸೈಟ್ ಒಂದರಲ್ಲಿ ಮಾಹಿತಿ ಪಡೆದಿದ್ದೆ. ವೆಬ್‍ಸೈಟ್‍ಗೆ ಭೇಟಿ ನೀಡಿದ 2 ದಿನದ ಬಳಿಕ ಅಮಿರ್ ಖಾನ್ ಎಂಬುವರಿಂದ ಕರೆ ಬಂತು. ರಾಗಿಣಿ ಖಂಡೇಲ್ವಾಲ್ ಹಡಗು ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಪರಿಚಿತ ವ್ಯಕ್ತಿ ಹೇಳಿದ ಎಂದು ಸುಶಾಂತ್ ವಿವರಿಸಿದ್ದಾರೆ.

    ಅಕ್ಟೋಬರ್ 2020ರಂದು ಆರೋಪಿಗಳು ಸುಶಾಂತ್ ಅವರನ್ನು ಸಭೆಗೆ ಕರೆದಿದ್ದು, ನಾವು ಶ್ರೀ ತಿರುಪತಿ ಬಾಲಾಜಿ ಕಂಪನಿಯ ನಿರ್ದೇಶಕರು ಎಂದು ಪರಿಚಯ ಮಾಡಿಕೊಂಡಿದ್ದಾರೆ. ಕಲ್ಯಾಣದ ಘಣೇಶ್ ಘಾಟ್‍ನಲ್ಲಿ ಶಿಪ್‍ಯಾರ್ಡ್ ಹೊಂದಿದ್ದೇವೆ ಎಂದು ಹೇಳಿದ್ದಾರೆ.

    ಬಳಿಕ ತಾಯಿ ಮಗಳು ಇಬ್ಬರೂ ಸೇರಿ ಸುಶಾಂತ್ ಅವರಿಗೆ ಒಂದು ಹಡಗು ತೋರಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಡಗು ತಯಾರಿಸುವಲ್ಲಿ ನಾವು ಎಕ್ಸ್‍ಪರ್ಟ್ ಎಂದು ಹೇಳಿದ್ದಾರೆ. ಇದಾದ ಬಳಿಕ ಬ್ಯುಸಿನೆಸ್ ಮ್ಯಾನ್ ಹಣವನ್ನು ವಗಾಯಿಸಿದ್ದು, ಬಳಿಕ ಸುಶಾಂತ್ ಅವರಿಗೆ ತಾವು ಮೋಸ ಹೋಗಿರುವ ಬಗ್ಗೆ ಅರಿವಾಗಿದೆ. ಈ ತಾಯಿ, ಮಗಳು ರವಿ ಜೈಸಿಂಗ್ ಎಂಬುವರಿಗೂ 2018ರಲ್ಲಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಗಳ ಬಳಿಕ ಇಬ್ಬರೂ ಸಂತ್ರಸ್ತರು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಭೇಟಿ ಮಾಡಿದ್ದು, ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಲಕ್ಷ ದ್ವೀಪದಿಂದ ಹಡಗಿನಲ್ಲಿ ಬಂದ ಮಂಗ್ಳೂರು ಕಾರ್ಮಿಕರು

    ಲಕ್ಷ ದ್ವೀಪದಿಂದ ಹಡಗಿನಲ್ಲಿ ಬಂದ ಮಂಗ್ಳೂರು ಕಾರ್ಮಿಕರು

    – 19 ಮಂದಿಯನ್ನ ಸ್ವಾಗತಿಸಲು ಬಂದ ನೂರಾರು ರಾಜಕಾರಣಿಗಳು

    ಮಂಗಳೂರು: ಕಡಲಾಚೆಯಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನ ರಕ್ಷಿಸುವಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಲಕ್ಷ ದ್ವೀಪದಲ್ಲಿ ಸಿಲುಕಿದ್ದ ಮೂರು ಮಹಿಳೆಯರು ಸೇರಿದಂತೆ 19 ಮಂದಿಯನ್ನ ಗುರುವಾರ ಅಮಿನ್ ದೀವಿ ಹೆಸರಿನ ನೌಕೆ ಮುಖಾಂತರ ಮಂಗಳೂರಿಗೆ ಕರೆ ತರಲಾಯಿತು. ಬಳಿಕ ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.

    ನೌಕರರು ಬಂದಿಳಿಯುತ್ತಿದ್ದಂತೆ ಜನಪ್ರತಿನಿಧಿಗಳು ಕಾರ್ಮಿಕರ ರಕ್ಷಣೆಗೆ ಮುಗಿಬಿದ್ದಿದ್ದರು. ಸಾಮಾಜಿಕ ಅಂತರ ಮರೆತ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಕಾಂಗ್ರೆಸ್ ಎಂ.ಎಲ್.ಸಿ ಐವಾನ್ ಡಿಸೋಜಾ ಸ್ವಾಗತ ಕೋರಲು ನುಗ್ಗಾಟ ನಡೆಸಿದ್ದಾರೆ.

    ಕೇವಲ 19 ಮಂದಿ ಕಾರ್ಮಿಕರ ಸ್ವಾಗತಕ್ಕೆ 300 ಮಂದಿ ಜಮಾಯಿಸಿದ್ದು, ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂದಹಾಗೆ ವ್ಯಾಪಾರ, ಗುಜರಿ ಸಂಗ್ರಹ ಸೇರಿದಂತೆ ವಿವಿಧ ಕೆಲಸಕ್ಕಾಗಿ ತೆರಳಿದ್ದ ಈ ಕಾರ್ಮಿಕರೆಲ್ಲ ಲಕ್ಷ ದ್ವೀಪದ ಕಿಲ್ತಾನ್, ಕವರತ್ತಿ, ಅಗಟ್ಟಿ ದ್ವೀಪದಲ್ಲಿ ಸಿಲುಕಿದ್ದರು ಎನ್ನಲಾಗಿದೆ.