ಮಸ್ಕತ್: ಒಮಾನ್‌ನ (Oman) ಕರಾವಳಿಯಲ್ಲಿ ತೈಲ ಟ್ಯಾಂಕರ್ (Oil Tanker) ಮುಳುಗಿದ್ದು, ಟ್ಯಾಂಕರ್‌ನಲ್ಲಿದ್ದ 13 ಭಾರತೀಯ ಸಿಬ್ಬಂದಿ ಸೇರಿದಂತೆ 16 ಮಂದಿ ನಾಪತ್ತೆಯಾಗಿದ್ದಾರೆ.
ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ಬಂದರು ನಗರವಾದ ಏಡೆನ್‌ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ 13 ಭಾರತೀಯ (India) ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು. ಇದನ್ನೂ ಓದಿ: ಚಲಿಸುವಾಗಲೇ ಕಳಚಿತು ಬೆಂಗಳೂರು ಟು ಶೃಂಗೇರಿ ಬಸ್ಸಿನ ಚಕ್ರ
Updates regarding the recent capsizing incident of the Comoros flagged oil tanker southeast of Ras Madrakah pic.twitter.com/PxVLxlTQGD
— مركز الأمن البحري| MARITIME SECURITY CENTRE (@OMAN_MSC) July 16, 2024
ಒಮನ್‌ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ತಿರುವನಂತಪುರಂ: ಇಷ್ಟು ಬೇಗ ನಾನು ಬಿಡುಗಡೆಯಾಗುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಬಿಡುಗಡೆಗ ಸಹಕರಿಸಿದ ಭಾರತ ಸರ್ಕಾರಕ್ಕೆ (Indian Government) ಧನ್ಯವಾದಗಳು ಎಂದು ಇರಾನ್ (Iran) ವಶಪಡಿಸಿಕೊಂಡಿದ್ದ ಹಡಗಿನಿಂದ ಬಿಡುಗಡೆಯಾಗಿ ಸ್ವದೇಶಕ್ಕೆ ಮರಳಿದ ಟೆಸ್ಸಾ ಜೋಸೆಫ್ (Ann Tessa Joseph) ಹೇಳಿದ್ದಾರೆ.
ಕೊಟ್ಟಾಯಂನಲ್ಲಿರುವ ಮನಗೆ ಆಗಮಿಸಿದ ಟೆಸ್ಸಾ ಜೋಸೆಫ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಹಡಗಿನಲ್ಲಿದ್ದ 25 ಸಿಬ್ಬಂದಿಗಳ ಜೊತೆ ಇರಾನಿನ ಯಾರೂ ಕೆಟ್ಟದಾಗಿ ನಡೆಸಿಕೊಳ್ಳಲಿಲ್ಲ. ತಮ್ಮ ಕುಟುಂಬದ ಜೊತೆ ಸಂವಹನ ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ತಿಳಿಸಿದರು.
ಹಡಗಿನಲ್ಲಿ ನಾನೊಬ್ಬಳೇ ಮಹಿಳೆ ಸಿಬ್ಬಂದಿಯಾಗಿದ್ದರಿಂದ ನನ್ನನ್ನು ಬೇಗ ಬಿಡುಗಡೆ ಮಾಡಿರಬಹುದು. ಉಳಿದ ಭಾರತದ 17 ಸಿಬ್ಬಂದಿ ಶೀಘ್ರವೇ ಬಿಡುಗಡೆಯಾಗಬಹುದು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ನೇರ ಮಧ್ಯಸ್ಥಿಕೆಯಿಂದಾಗಿ ನಾನು ಬೇಗ ಬಿಡುಗಡೆಯಾಗಿದ್ದೇನೆ. ಅವರಷ್ಟೇ ಅಲ್ಲದೇ ನನ್ನ ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಗುದ್ದಿ ಹತ್ಯೆ ಮಾಡಿದ್ದಾರೆ – ಕೊಡಗಿನಲ್ಲಿ ಕಾರ್ಯಕರ್ತನ ಹತ್ಯೆಗೆ ಬಿಜೆಪಿ ಆಕ್ರೋಶ
ನಾವು ಜೈಲುಪಾಲಾಗಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮನ್ನು ಕ್ರೂರವಾಗಿ ನಡೆಸಿಕೊಳ್ಳಲಿಲ್ಲ ಮತ್ತು ನಮಗೆ ಯಾವುದೇ ಆಹಾರದ ಸಮಸ್ಯೆ ಆಗಲಿಲ್ಲ ಎಂದು ಅವರು ವಿವರಿಸಿದರು.
ಕೇರಳದ ಮೂವರು ಸೇರಿದಂತೆ ಉಳಿದ 16 ಭಾರತೀಯರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಒಂಬತ್ತು ತಿಂಗಳ ಹಿಂದೆಯಷ್ಟೇ ಹಡಗಿನಲ್ಲಿ ಸಿಬ್ಬಂದಿಯಾಗಿ ನಾನು ಸೇರಿದ್ದೆ. ನಾನು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯಿಂದ ಈ ಉದ್ಯೋಗಕ್ಕೆ ಸೇರಿದೆ. ಇದು ನನ್ನ ಮೊದಲ ಹಡಗು. ಈ ಘಟನೆಯಿಂದ ವಿಚಲಿತಳಾಗಿ ನಾನು ಉದ್ಯೋಗ ತೊರೆಯುವುದಿಲ್ಲ ಎಂದು ಅವರು ತಿಳಿಸಿದರು.
ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗಳನ್ನು ಬರಮಾಡಿಕೊಂಡ ತಂದೆ ಬಿಜು ಅಬ್ರಹಾಂ ಮಾತನಾಡಿ, ಭಾರತ ಸರ್ಕಾರ ಮತ್ತು ಇತರ ಏಜೆನ್ಸಿಗಳ ಕಠಿಣ ಪರಿಶ್ರಮದಿಂದಾಗಿ ತಾನು ಇಷ್ಟು ಬೇಗ ಮನೆಗೆ ಮರಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಜೋಸೆಫ್ ಭಾರತಕ್ಕೆ ಬಂದಿಳಿದ ನಂತರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು, ಇರಾನ್‌ನಲ್ಲಿರುವ ಭಾರತೀಯ ಮಿಷನ್‌ನ ಅದ್ಭುತ ಕೆಲಸ. ಟೆಸ್ಸಾ ಜೋಸೆಫ್ ಮನೆಗೆ ತಲುಪಿದ್ದಕ್ಕೆ ಸಂತೋಷವಾಗಿದೆ. ದೇಶ ಅಥವಾ ವಿದೇಶದಲ್ಲಿ ಇರಲಿ ಮೋದಿ ಕೀ ಗ್ಯಾರಂಟಿ ಯಾವಾಗಲೂ ಕೆಲಸ ಮಾಡುತ್ತದೆ ಎಂದು ಪೋಸ್ಟ್ ಮಾಡಿದ್ದರು.
ಏಪ್ರಿಲ್ 14 ರಂದು ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಅಮೀರ್-ಅಬ್ದುಲ್ಲಾಹಿಯಾನ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ನಂತರ ಇರಾನ್ ಭಾರತೀಯ ಅಧಿಕಾರಿಗಳಿಗೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಅನುಮತಿ ನೀಡಿತ್ತು.
ಯುಎಇಯಿಂದ (UAE) ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್ ಶಿಪ್ ಅನ್ನು Strait of Hormuz ಬಳಿ ಇರಾನ್ ಏ.14 ರಂದು ವಶಪಡಿಸಿಕೊಂಡಿತ್ತು. ಪೋರ್ಚುಗೀಸ್ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್ ನೌಕಾ ದಳದ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿಕೊಂಡಿದ್ದಾರೆ. ಈ ಹಡಗು ಇಸ್ರೇಲಿ (Israel) ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು.
ವಾಷಿಂಗ್ಟನ್: ಕಾರ್ಗೋ ಹಡಗೊಂದು (Cargo Ship) ಡಿಕ್ಕಿ ಹೊಡೆದ ಪರಿಣಾಮ ಸೇತುವೆ ಮುರಿದು ಬಿದ್ದ ಘಟನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿ (USA Baltimore) ನಡೆದಿದೆ.
ಸೇತುವೆಗೆ ಕಾರ್ಗೋ ಹಡಗು ಬಂದು ಗುದ್ದುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಅಗ್ನಿಶಾಮಕ ದಳ, ಪೊಲೀಸರು ಈಗ ರಕ್ಷಣೆಯಲ್ಲಿ ತೊಡಗಿದ್ದಾರೆ. ನೀರಿಗೆ ಬಿದ್ದ ಕಾರಿನಲ್ಲಿದ್ದ ಹಲವು ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ
ಸಿಂಗಾಪುರ ಮೂಲದ ಸರಕು ಸಾಗಾಣೆ ಹಡಗು ಗುದ್ದಿದ್ದು, 20ಕ್ಕೂ ಹೆಚ್ಚು ಕಾರುಗಳು ನೀರಿಗೆ ಬಿದ್ದಿವೆ ಎಂದು ವರದಿಯಾಗಿದೆ. ತಾಂತ್ರಿಕ ವೈಫಲ್ಯದಿಂದ ಘಟನೆ ನಡೆದಿದ್ಯಾ ಅಥವಾ ಉಗ್ರರ ಕೃತ್ಯ ಇರಬಹುದೇ ಈ ಕೋನದಲ್ಲಿ ಈಗ ಅಮೆರಿಕ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಗೋಡೆ ಮೇಲೆ ಡೆತ್‍ನೋಟ್ ಬರೆದು ಟೆಕ್ಕಿ ಆತ್ಮಹತ್ಯೆ
ಟಾಪ್ಸ್ಕೋ ನದಿಗೆ ಒಟ್ಟು 2.6 ಕಿ.ಮೀ ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977 ರಲ್ಲಿ ಸೇತುವೆ ಉದ್ಘಾಟನೆಯಾಗಿದ್ದು ವಾರ್ಷಿಕ 1.1 ಕೋಟಿಗೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಬಾಲ್ಟಿಮೋರ್ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು ಈ ಸೇತುವೆಯನ್ನು ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಸಂಪರ್ಕಿಸುತ್ತದೆ.
– ಯೆಮೆನ್ ಬಂಡುಕೋರರಿಂದ ಸರಕು ಸಾಗಾಣೆ ಹಡಗು ಅಪಹರಣ – ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಹೈಜಾಕ್
ಸನಾ: ಹಡಗಿನ ಮೇಲೆ ಇಳಿದ ಹೆಲಿಕಾಪ್ಟರ್. ರೈಫಲ್ ಹಿಡಿದು ಘೋಷಣೆ ಕೂಗುತ್ತಾ ಇಳಿದ ಬಂಡುಕೋರರು. ಹಡಗಿನ ಕ್ಯಾಬಿನ್ ನುಗ್ಗಿ ಬೆದರಿಕೆ. ಶರಣಾದ ಹಡಗಿನ ಸಿಬ್ಬಂದಿ. ಇದು ಯಾವುದೋ ಸಿನಿಮಾದ ಕಥೆಯಲ್ಲ. ಯೆಮೆನ್ (Yemen) ಬಂಡುಕೋರರು ಹಡಗನ್ನುಅಪಹರಿಸಿ ಪರಿ ಇದು.
ಭಾರತಕ್ಕೆ (India) ಬರುತ್ತಿದ್ದ ಸರಕು ಹಡಗು ಗ್ಯಾಲಕ್ಸಿ ಲೀಡರ್ (Galaxy Leader) ಅಪಹರಣ ಕೊನೆಯ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಬಿಡುಗಡೆ ಮಾಡಿದ್ದಾರೆ. ಟರ್ಕಿಯಿಂದ (Turkey) ಭಾರತಕ್ಕೆ ಬರುತ್ತಿದ್ದ ಹಡಗನ್ನು ಭಾನುವಾರ ಅಪಹರಣ ಮಾಡಲಾಗಿತ್ತು. ಈಗ ಹೌತಿ ಬಂಡುಕೋರರು ಎರಡು ನಿಮಿಷಗಳ ಹಡಗನ್ನು ಹೈಜಾಕ್ (Hijack) ಮಾಡುವ ಭಯಾನಕ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಬಂದ ಬಂಡುಕೋರರು ಹಡಗಿನ ಮೇಲೆ ದಾಳಿ ಮಾಡಿ ಹೈಜಾಕ್ ಮಾಡಿದ್ದಾರೆ. ಹಡಗಿನ ಡೆಕ್‌ನಲ್ಲಿ ಲ್ಯಾಂಡ್ ಆದ ಹೆಲಿಕಾಪ್ಟರ್‌ನಿಂದ 10ಕ್ಕೂ ಹೆಚ್ಚು ಬಂಡುಕೋರರು ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸುತ್ತಾ ನಿಯಂತ್ರಣ ಕೇಂದ್ರಕ್ಕೆ ಬಂದಿದ್ದಾರೆ. ಬಂಡುಕೋರರನ್ನು ನೋಡಿದ ಸಿಬ್ಬಂದಿ ಶಾಕ್ ಆಗಿ ಕೈಯನ್ನು ಮೇಲಕ್ಕೆ ಎತ್ತಿ ಶರಣಾಗಿದ್ದಾರೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ
ಹಮಾಸ್ ವಿರುದ್ಧದ ಯುದ್ಧದ ಪ್ರತೀಕಾರವಾಗಿ ಇಸ್ರೇಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ನಾವು ದಾಳಿ ಮಾಡುತ್ತೇವೆ ಎಂದು ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದಾರೆ.
ಹಡಗಿನ ಹೈಜಾಕ್ ಬಳಿಕ ಇದು ಆರಂಭ ಮಾತ್ರ ಎಂದು ಎಂದು ಹೌತಿ ತಿಳಿಸಿದ್ದು, ಕೆಂಪು ಸಮುದ್ರ ಮಾರ್ಗದಲ್ಲಿ ಬರುವ ಎಲ್ಲಾ ಇಸ್ರೇಲಿ ಹಡಗುಗಳನ್ನೂ ಅಪಹರಿಸುವುದಾಗಿ ಬೆದರಿಕೆ ಹಾಕಿದೆ. ಗಾಜಾ ಮೇಲಿನ ದಾಳಿ ನಿಲ್ಲಿಸುವವರೆಗೂ ಮತ್ತಷ್ಟು ಕಡಲ ದಾಳಿಗಳನ್ನು ನಡೆಸುವುದಾಗಿ ಹೌತಿ ಬಂಡುಕೋರರು ಘೋಷಣೆ ಮಾಡಿದ್ದಾರೆ.
NEW – Yemen's Houthis have released footage of yesterday's hijacking of a civilian ship in the southern Red Sea. pic.twitter.com/4cuSorwDrq
ಹಡಗು ಇಸ್ರೇಲಿಗೆ ಸೇರಿದ್ದು ಎಂದು ಹೌತಿ ಹೇಳಿದೆ. ಆದರೆ ಈ ಹೇಳಿಕೆಯನ್ನು ಇಸ್ರೇಲ್ ನಿರಾಕರಿಸಿದೆ. ಇದರಲ್ಲಿ ಇಸ್ರೇಲ್ ಪ್ರಜೆಗಳು ಯಾರು ಇರಲಿಲ್ಲ. ಅಪಹರಣಕ್ಕೊಳಗಾದ ಹಡಗು ತನ್ನದ್ದಲ್ಲ ಎಂದು ಇಸ್ರೇಲ್ ತಿಳಿಸಿದೆ.
ಸದ್ಯ ಹಡಗು ಎಲ್ಲಿದೆ?
ಹಡಗಿನ ಜೊತೆ ಸಂವಹನ ಸಂಪೂರ್ಣ ಕಡಿತಗೊಂಡಿದೆ. ಸದ್ಯ ಇದು ಯೆಮೆನ್‌ನಲ್ಲಿರುವ ಹುದೈದಾ ಬಂದರಿನಲ್ಲಿದೆ ಎಂದು ಗ್ಯಾಲಕ್ಸಿ ಲೀಡರ್ ನಿರ್ವಹಣೆ ಮಾಡುತ್ತಿರುವ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಸಮುದ್ರ ವಿಪತ್ತುಗಳು ಇತಿಹಾಸದುದ್ದಕ್ಕೂ ಸಂಭವಿಸಿವೆ. ಇವುಗಳಿಂದಾಗಿ ಅಪಾರ ಸಂಖ್ಯೆಯಲ್ಲಿ ಜೀವಗಳು ಬಲಿಯಾಗಿದ್ದು, ವಿಶ್ವದ ಹಡಗು ಉದ್ಯಮಕ್ಕೂ ಅಪಾರ ಹಾನಿಯುಂಟಾಗಿದೆ. ಘರ್ಷಣೆ, ಬೆಂಕಿ, ಸ್ಫೋಟ, ಮುಳುಗುವಿಕೆ ಸೇರಿದಂತೆ ಇನ್ನಿತರ ರೀತಿಯ ವಿಪತ್ತುಗಳು ಇದರಲ್ಲಿ ಸೇರಿವೆ.
ಇತ್ತೀಚೆಗೆ ಇತಿಹಾಸ ಯಾವಾಗಲೂ ನೆನಪಿಸಿಕೊಳ್ಳುವ ಟೈಟಾನಿಕ್ ಹಡಗು ದುರಂತದ ಅವಶೇಷ ನೋಡಲು ಸಬ್‍ಮರ್ಸಿಬಲ್ ಮೂಲಕ ತೆರಳಿದ್ದ ಐವರು ಶ್ರೀಮಂತ ವ್ಯಕ್ತಿಗಳ ದಾರುಣ ಸಾವಾಗಿತ್ತು. ಈ ಘಟನೆ ಟೈಟಾನಿಕ್ ದುರಂತವನ್ನು ಮತ್ತೆ ಮೆಲುಕುಹಾಕುವಂತೆ ಮಾಡಿತು. ಆದರೆ ಈ ಘಟನೆಗೂ ಅತ್ಯಂತ ಮಾರಣಾಂತಿಕ ಹಡಗು ದುರಂತಗಳು (Shipwrecks) ಇತಿಹಾಸದಲ್ಲಿ ಸಂಭವಿಸಿದೆ. ಇತಿಹಾಸದಲ್ಲಿ ದಾಖಲಾದ ಅತ್ಯಂತ ಮಾರಣಾಂತಿಕ ಹಡಗು ದುರಂತಗಳು ಯಾವುವು ಎಂಬುದನ್ನು ನೋಡೋಣ.
1. ವಿಲ್ಹೆಲ್ಮ್ ಗಸ್ಟ್ಲೋಫ್:
ಇತಿಹಾಸದಲ್ಲಿ ದಾಖಲಾಗಿರುವ ಅತ್ಯಂತ ಹೆಚ್ಚು ಜನರ ಬಲಿ ತೆಗೆದುಕೊಂಡ ಹಡಗು ದುರಂತ ಎಂದರೆ ವಿಲ್ಹೆಲ್ಮ್ ಗಸ್ಟ್ಲೋಫ್. ಜರ್ಮನ್ ಮಿಲಿಟರಿ ಸಾರಿಗೆ ಹಡಗಾಗಿದ್ದ ಇದು 1945ರ ಜನವರಿ 30ರಂದು ಸೋವಿಯತ್ ಜಲಾಂತರ್ಗಾಮಿ ಎಸ್-13 ದಾಳಿಗೆ ಬಾಲ್ಟಿಕ್ ಸಮುದ್ರದಲ್ಲಿ ಮುಳುಗಿತು.
ಕೇವಲ 1,900 ಜನರನ್ನು ಮಾತ್ರವೇ ಹೊತ್ತು ಸಾಗಲು ಸಾಧ್ಯವಿದ್ದ ಈ ಹಡಗಿನಲ್ಲಿ ಅಂದಾಜು 10,000 ಜನರನ್ನು ಸ್ಥಳಾಂತರಿಸಲಾಗುತ್ತಿತ್ತು. ನಾಗರಿಕರು, ಮಿಲಿಟರಿ ಸಿಬ್ಬಂದಿಯನ್ನು ಪೂರ್ವ ಪ್ರಶ್ಯ ಹಾಗೂ ಜರ್ಮನ್ ಆಕ್ರಮಿತ ಬಾಲ್ಟಿಕ್ ರಾಜ್ಯಗಳಿಂದ ಸ್ಥಳಾಂತರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತು. ಘಟನೆಯಲ್ಲಿ ಅಂದಾಜು 9,400 ಜನರ ಮಾರಣಹೋಮವಾಗಿತ್ತು. ಇದು ಇತಿಹಾಸದಲ್ಲಿ ಮುಳುಗಿದ ಒಂದೇ ಹಡಗಿನ ಅತಿ ದೊಡ್ಡ ಜೀವಹಾನಿ ಎನಿಸಿಕೊಂಡಿದೆ.
2. ಡೋನಾ ಪಾಜ್:
ಇತಿಹಾಸದ 2ನೇ ಅತಿ ಕೆಟ್ಟ ಹಡಗು ದುರಂತ ಡೋನಾ ಪಾಜ್ ಎನಿಸಿಕೊಂಡಿದೆ. ಜಪಾನ್ ನಿರ್ಮಿತ ಮತ್ತು ಫಿಲಿಪೈನ್ಸ್ ನೋಂದಾಯಿತ ಪ್ರಯಾಣಿಕ ದೋಣಿಯಾಗಿದ್ದ ಡೊನಾ ಪಾಜ್ 1987ರಲ್ಲಿ ತೈಲ ಟ್ಯಾಂಕರ್ ವೆಕ್ಟರ್‌ಗೆ ಡಿಕ್ಕಿ ಹೊಡೆದ ಬಳಿಕ ಮುಳುಗಿತು.
ಹಡಗು ಲೇಯ್ಟ್ ದ್ವೀಪದಿಂದ ಫಿಲಿಪೈನ್ ರಾಜಧಾನಿ ಮನಿಲಾಗೆ ಪ್ರಯಾಣಿಸುವಾಗ ದುರ್ಘಟನೆ ಸಂಭವಿಸಿದೆ. ಪರಿಣಾಮ ಅಂದಾಜು 4,380 ಪ್ರಯಾಣಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಕೇವಲ 26 ಜನರು ಬದುಕುಳಿದಿದ್ದರು. ಈ ದುರಂತವನ್ನು ಇತಿಹಾಸದಲ್ಲಿ ಯುದ್ಧ ಕಾಲದ ಬಳಿಕ ನಡೆದ ಅತಿ ದೊಡ್ಡ ಕಡಲ ದುರಂತ ಎಂದು ಪರಿಗಣಿಸಲಾಗಿದೆ.
3. ಆರ್‌ಎಮ್‍ಎಸ್ ಲಂಕಾಸ್ಟ್ರಿಯಾ:
ಆಪರೇಷನ್ ಏರಿಯಲ್‍ನ ಭಾಗವಾಗಿ 2ನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್ ಸರ್ಕಾರದಿಂದ ಪಡೆಯಲಾಗಿದ್ದ ಹಡಗು ಆರ್‌ಎಮ್‍ಎಸ್ ಲಂಕಾಸ್ಟ್ರಿಯಾ ಆಗಿತ್ತು. ಇದನ್ನು ಫ್ರಾನ್ಸ್‌ನಿಂದ ಬ್ರಿಟಿಷ್ ಪ್ರಜೆಗಳು ಹಾಗೂ ಪಡೆಗಳನ್ನು ಸ್ಥಳಾಂತರಿಸಲು ನಿರಂತರವಾಗಿ ಬಳಸಲಾಗಿತ್ತು.
1940ರ ಜೂನ್ 17ರಂದು ಫ್ರಾನ್ಸ್‌ನಿಂದ ಬ್ರಿಟಿಷ್ ಪ್ರಜೆಗಳು ಹಾಗೂ ಸೈನ್ಯವನ್ನು ತುರ್ತಾಗಿ ಸ್ಥಳಾಂತರಿಸಲು ಬಳಸಿದ್ದಾಗ ಹಡಗು ಮುಳುಗಡೆಯಾಗಿತ್ತು. ಹಡಗು ಸುಮಾರು 1,300 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಅಂದು ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಮುಳುಗಡೆ ವೇಳೆ ಹಡಗಿನಲ್ಲಿ 4,000 ದಿಂದ 7,000 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಆದರೆ ದುರ್ಘಟನೆ ಸಂಭವಿಸಿದಾಗ ಕೇವಲ ಬೆರಳೆಣಿಕೆಯಷ್ಟು ಜನನ್ನು ಮಾತ್ರವೇ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿತ್ತು.
4. ಎಸ್‍ಎಸ್ ಕಿಯಾಂಗ್ಯಾ:
1948ರಲ್ಲಿ ಚೀನಾದ ಅಂತರ್ಯುದ್ಧದ ಕಾಲದಲ್ಲಿ ಎಸ್‍ಎಸ್ ಕಿಯಾಂಗ್ಯಾ ದುರಂತ ಸಂಭವಿಸಿತು. ನಿರಾಶ್ರಿತರನ್ನು ಸಾಗಿಸುವ ಕಾರ್ಯ ನಿರ್ವಹಿಸುತ್ತಿದ್ದ ಚೀನಾದ ಪ್ರಯಾಣಿಕ ಹಡಗು ಇದಾಗಿತ್ತು. 1948ರ ಡಿಸೆಂಬರ್ 4 ರಂದು ಹಡಗು ಸಾಮರ್ಥ್ಯಕ್ಕಿಂತಲು ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?
ಅಧಿಕೃತವಾಗಿ 2,150 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದ ಹಡಗು ಓವರ್‌ಲೋಡ್‍ನಿಂದಾಗಿ ದುರ್ಬಲಗೊಂಡಿತ್ತು. ಶಾಂಘೈನ ದಕ್ಷಿಣಕ್ಕೆ ಸುಮಾರು 50 ಮೈಲುಗಳಷ್ಟು ದೂರದಲ್ಲಿ ಹುವಾಂಗ್ಬು ನದಿಯ ಮುಂಭಾಗ ಹಡಗು ಬಿರುಕು ಬಿಟ್ಟು ಮುಳುಗಡೆಯಾಯಿತು. ಘಟನೆಯಲ್ಲಿ ಸುಮಾರು 4,000 ಜನರು ಸಾವನ್ನಪ್ಪಿದರೆ, 1,000 ಜನರನ್ನು ಮಾತ್ರವೇ ರಕ್ಷಣೆ ಮಾಡಲಾಗಿತ್ತು.
5. ಲೆ ಜೂಲಾ:
ಲೆ ಜುಲಾ ಸೆನೆಗಲೀಸ್ ಸರ್ಕಾರದ ಒಡೆತನದ ದೋಣಿಯಾಗಿದ್ದು, 2002 ಸೆಪ್ಟೆಂಬರ್ 26 ರಂದು ಗ್ಯಾಂಬಿಯಾದ ಕರಾವಳಿ ಪ್ರದೇಶದಲ್ಲಿ ಮುಳುಗಿತು. ಇದರ ಪರಿಣಾಮ 1,863 ಜನರು ಸಾವನ್ನಪ್ಪಿದರು. ಕೇವಲ 64 ಜನರನ್ನು ರಕ್ಷಣೆ ಮಾಡಲಾಗಿತ್ತು.
ದೋಣಿಯು ಕ್ಯಾಸಮಾನ್ಸ್ ಪ್ರದೇಶದ ಜಿಗುಯಿಂಚೋರ್‌ನಿಂದ ಸೆನೆಗಲ್‍ನ ರಾಜಧಾನಿ ಡಾಕರ್‌ಗೆ ಪ್ರಯಾಣಿಸುತ್ತಿದ್ದಾಗ ತೀವ್ರ ಚಂಡಮಾರುತದಿಂದಾಗಿ ದುರಂತ ಸಂಭವಿಸಿತು. ಇದು ಆಳವಿಲ್ಲದ ನೀರಿನಲ್ಲಿ ಮಾತ್ರವೇ ನೌಕಾಯಾನ ಮಾಡಲು ಪರವಾನಗಿ ಪಡೆದಿತ್ತು. ಈ ದುರಂತವನ್ನು ಆಫ್ರಿಕಾದ ಟೈಟಾನಿಕ್ ಎಂತಲೂ ಕರೆಯಲಾಗುತ್ತದೆ.
6. ಎಸ್‍ಎಸ್ ಸುಲ್ತಾನಾ:
ಎಸ್‍ಎಸ್ ಸುಲಾನಾ ಅಮೆರಿಕದ ಅತ್ಯಂತ ಭೀಕರ ಸಮುದ್ರ ದುರಂತ ಎನಿಸಿಕೊಂಡಿದೆ. 1865ರ ಏಪ್ರಿಲ್ 27 ಅಮೆರಿಕದ ಅಂತರ್ಯುದ್ಧ ಕೊನೆಗೊಂಡು ಕೇವಲ 1 ವಾರ ಕಳೆದಿತ್ತು. ಒಕ್ಕೂಟದ ಮಿಲಿಟರಿ ಕಾರಾಗೃಹಗಳಿಂದ ಬಿಡುಗಡೆಯಾದ ಹಾಗೂ ಮನೆಗೆ ವಾಪಸಾಗಲು ಉತ್ಸುಕರಾಗಿದ್ದ ಹೆಚ್ಚಿನ ಸಂಖ್ಯೆ ಯೂನಿಯನ್ ಯುದ್ಧ ಕೈದಿಗಳನ್ನು ಈ ಹಡಗು ಒಯ್ಯುತ್ತಿತ್ತು. ಇದನ್ನೂ ಓದಿ: ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು?
ವರದಿಗಳ ಪ್ರಕಾರ ಹಡಗಿನ ಬಾಯ್ಲರ್ ಅನ್ನು ಸರಿಯಾಗಿ ನಿರ್ವಹಿಸಿರಲಿಲ್ಲ ಹಾಗೂ ಹಡಗಿನಲ್ಲಿ 2,300 ಜನರು ತುಂಬಿದ್ದರು ಎನ್ನಲಾಗಿದೆ. ಇದು ಹಡಗಿನ ಸಾಮರ್ಥ್ಯಕ್ಕಿಂತಲೂ 6 ಪಟ್ಟು ಹೆಚ್ಚಾಗಿತ್ತು. ಒತ್ತಡದಿಂದಾಗಿ ಬಾಯ್ಲರ್ ಸ್ಫೋಟಗೊಂಡಾಗ ಆರಂಭದಲ್ಲಿ ನೂರಾರು ಜನರು ಸಾವನ್ನಪ್ಪಿದರು. ಓವರ್‌ಲೋಡ್‍ನಿಂದಾಗಿ ಡೆಕ್‍ಗಳು ಕುಸಿದಾಗ ಇನ್ನೂ ಅನೇಕರು ಸಿಕ್ಕಿಬಿದ್ದರು. ಘಟನೆಯಲ್ಲಿ ಸುಮಾರು 1,800 ಜನರ ಬಲಿಯಾಗಿತ್ತು. ಆದರೆ ಮಾಧ್ಯಮಗಳಲ್ಲಿ ಅಬ್ರಹಂ ಲಿಂಕನ್ ಹತ್ಯೆಯ ಬಗ್ಗೆ ನಿರಂತರವಾಗಿ ಪ್ರಸಾರ ಮಾಡಲಾಗಿದ್ದರಿಂದ ಈ ಘಟನೆ ಹೆಚ್ಚು ಸುದ್ದಿಯಾಗಿರಲಿಲ್ಲ.
7. ನೆಫ್ಚೂನ್:
1993ರ ಫೆಬ್ರವರಿ 17ರಂದು ಪೋರ್ಟ್-ಔ-ಪ್ರಿನ್ಸ್‍ನಿಂದ ಹೈಟಿಯ ಜೆರೆಮಿಗೆ ಪ್ರಯಾಣಿಸುತ್ತಿದ್ದ ನೆಫ್ಚೂನ್ ಪ್ರಯಾಣಿಕ ಹಡಗು ಭಾರೀ ಅಲೆಗಳ ಹೊಡೆತಕ್ಕೆ ಮುಳುಗಿತು. ಕೇವಲ 400 ಪ್ರಯಾಣಿಕರನ್ನು ತುಂಬುವ ಸಾಮಥ್ರ್ಯವಿದ್ದ ಹಡಗಿನಲ್ಲಿ ಸುಮಾರು 2,000 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹಡಗು ಮುಳುಗಡೆ ಸಂದರ್ಭ ರಕ್ಷಣಾ ಪ್ರಯತ್ನಗಳನ್ನು ಮಾಡಲಾಗಿದ್ದರೂ ಎಲ್ಲವೂ ಅಸ್ತವ್ಯಸ್ತಗೊಂಡಿತ್ತು. ಘಟನೆಯಲ್ಲಿ 1,500 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
8. ತೈಪಿಂಗ್:
1949ರ ಜನವರಿ 27ರಂದು ಚೀನಾದಿಂದ ತೈವಾನ್‍ಗೆ ತೆರಳುತ್ತಿದ್ದ ತೈಪಿಂಗ್ ಹೆಸರಿನ ಹಡಗು ಅಪಘಾತಕ್ಕೀಡಾಗಿ ಮುಳುಗಡೆಯಾಗಿತ್ತು. ಅಂದಾಜಿನ ಪ್ರಕಾರ ಹಡಗಿನಲ್ಲಿ 1,500ಕ್ಕೂ ಹೆಚ್ಚು ಜನರಿದ್ದರು. ಅದರಲ್ಲಿ ಹೆಚ್ಚಿನವರು ಚೀನಾದ ಅಂತರ್ಯುದ್ಧದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನಿರಾಶ್ರಿತರಾಗಿದ್ದರು. ಕೇವಲ 580 ಪ್ರಯಾಣಿಕರ ಸಾಮರ್ಥ್ಯವಿದ್ದ ಹಡಗು ಇದಾಗಿತ್ತು. ಕರ್ಫ್ಯೂ ಕಾರಣದಿಂದಾಗಿ ತೈಪಿಂಗ್ ಹಡಗಿನಲ್ಲಿ ರಾತ್ರಿ ದೀಪಗಳಿಲ್ಲದೇ ಪ್ರಯಾಣ ಬೆಳೆಸಿತ್ತು. ಆದರೆ ಅದು ಝೌಶನ್ ದ್ವೀಪಸಮೂಹದ ಬಳಿ ಬಂದಾಗ ಚಿಕ್ಕ ಸರಕು ಹಡಗು ಚೀನುವಾನ್‍ಗೆ ಡಿಕ್ಕಿ ಹೊಡೆದು ಮುಳುಗಡೆಯಾಯಿತು. ಘಟನೆಯಲ್ಲಿ ಕೇವಲ 37 ಜನರನ್ನು ರಕ್ಷಿಸಲಾಗಿತ್ತು. ಇದನ್ನೂ ಓದಿ: ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!
9. ಟೈಟಾನಿಕ್:
ವಿಶ್ವದಾದ್ಯಂತ ಹೆಚ್ಚು ಸದ್ದು ಮಾಡಿದ ಹಡಗು ದುರಂತದಲ್ಲಿ ಟೈಟಾನಿಕ್ ಮೊದಲನೆಯದಾಗಿದೆ. ಟೈಟಾನಿಕ್ ಬ್ರಿಟಿಷ್ ಪ್ರಯಾಣಿಕ ಹಡಗಾಗಿದ್ದು, ಮುಳುಗದ ಹಡಗು ಎಂದೇ ಹೆಸರು ಪಡೆದಿತ್ತು. ಆದರೆ 1912ರ ಏಪ್ರಿಲ್ 15 ರಂದು ತನ್ನ ಮೊಟ್ಟ ಮೊದಲ ಪ್ರಯಾಣದಲ್ಲೇ ದೈತ್ಯ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಟೈಟಾನಿಕ್ ಮುಳುಗಡೆಯಾಯಿತು. ಹಡಗು ಸೌತಾಂಪ್ಟನ್‍ನಿಂದ ನ್ಯೂಯಾರ್ಕ್ ನಗರಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಘಟನೆ ವೇಳೆ ಹಡಗಿನಲ್ಲಿ 2,200ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿದ್ದರು. ಲೈಫ್‍ಬೋಟ್ ಸಹಾಯದಿಂದ ನೂರಾರು ಜನರನ್ನು ರಕ್ಷಣೆ ಮಾಡಲಾಯಿತಾದರೂ ದುರಂತದಲ್ಲಿ ಅಂದಾಜು 1,500ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಕಾರವಾರ: ಗೋವಾದಿಂದ (Goa) ಸಮುದ್ರ ಅಧ್ಯಯನಕ್ಕೆಂದು ತೆರಳಿದ್ದ ನೌಕೆಯಲ್ಲಿ ಎಂಜಿನ್ ವೈಫಲ್ಯ ಉಂಟಾಗಿ ಮುಳುಗುವ ಹಂತ ತಲುಪಿದ್ದ ನೌಕೆಯಲ್ಲಿದ್ದ 36 ಜನರನ್ನು ಭಾರತೀಯ ಕೋಸ್ಟ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಗೋವಾ – ಕಾರವಾರ (Karwar) ಗಡಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಗೋವಾದಿಂದ ಅರಬ್ಬಿ ಸಮುದ್ರದಲ್ಲಿ ಸಂಶೋಧನೆಗೆಂದು ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸ್ಟಿಟ್ಯೂಟ್ (NIO) ಹಡಗು ಸಂಶೋಧನೆ ಕೇಂದ್ರದ ‘ಸಿಂಧು ಸಾಧನ’ ಹಡಗಿನಲ್ಲಿ 36 ಜನರು ಪಣಜಿಯಿಂದ ಹೊರಟು ಅರಬ್ಬಿ ಸಮುದ್ರದ ಮೂಲಕ ಕಾರವಾರ ಬಂದರಿಗೆ ಆಗಮಿಸುವ ಮಾರ್ಗದಲ್ಲಿ ಎಂಜಿನ್ ವೈಫಲ್ಯ (Engine Failure) ಉಂಟಾಗಿದೆ. ಇದನ್ನೂ ಓದಿ: ಬೆಂಗಳೂರು ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ
ಘಟನೆಯ ಪರಿಣಾಮ ಹಡಗು (Ship) ಮುಳುಗುವ ಹಂತ ತಲುಪಿತ್ತು. ಭಾರತೀಯ ಕೋಸ್ಟ್‌ಗಾರ್ಡ್‌ನ ಸಿಐಆರ್, ಎನ್‌ಐಒ ಹಡಗಿನಿಂದ ರಕ್ಷಣಾ ಕಾರ್ಯಾಚರಣೆ ಮಾಡಿ ಮುಳುಗುತಿದ್ದ ಹಡಗಿನ ಸಮೇತ ಗೋವಾದಲ್ಲಿರುವ ವಾಸ್ಕೊದ ಬಂದರಿಗೆ ಕರೆತರಲಾಗುತ್ತಿದೆ. ಅಲ್ಲದೇ ಸಂಶೋಧಕರ ತಂಡದ 36 ಸದಸ್ಯರು ಜುಲೈ 28ರಂದು ವಾಸ್ಕೋಗೆ ಮರಳಲಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಎಎಸ್‌ಐ ಸಮೀಕ್ಷೆ – ತೀರ್ಪು ಕಾಯ್ದಿರಿಸಿದ ಅಲಹಾಬಾದ್ ಹೈಕೋರ್ಟ್
ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ (Submersible) ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ (Submersible) ಸಾಗರದ ಒಳಗಡೆ ಸುಮಾರು 1,600 ಅಡಿ (488 ಮೀಟರ್) ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಎಂದು ಹೇಳಿದೆ.
ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಜಲಾಂತರ್ಗಾಮಿಯಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿಯೂ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಭಾನುವಾರವಷ್ಟೇ ಕಣ್ಮರೆಯಾಗಿದ್ದರು.
ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
ಟೈಟಾನಿಕ್ ದುರಂತ:
ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ.
ವಾಷಿಂಗ್ಟನ್: ಉತ್ತರ ಅಟ್ಲಾಂಟಿಕ್‌ನಲ್ಲಿ ಟೈಟಾನಿಕ್ (Titanic) ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಜಲಾಂತರ್ಗಾಮಿಯೊಂದು (Submarine) ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ (Pakistani businessman) ಹಾಗೂ ಅವರ ಪುತ್ರ ಸೇರಿದ್ದರು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.
ಓಷನ್‌ಗೇಟ್ ಎಕ್ಸ್‌ಪೆಂಡಿಷನ್ಸ್ ಕಂಪನಿ ನಿರ್ವಹಿಸುತ್ತಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕಿಳಿದ 2 ಗಂಟೆಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿದೆ. ಅದು 96 ಗಂಟೆಗಳ ಆಮ್ಲಜನಕ ಪೂರೈಕೆ ಹೊಂದಿದೆ. ಜಲಾಂತರ್ಗಾಮಿಯೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಸುರಕ್ಷಿತವಾಗಿ ಕರೆತರಲು ಅನೇಕ ಸರ್ಕಾರಿ ಸಂಸ್ಥೆಗಳು ಹಾಗೂ ಕಂಪನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಶಹಜಾದಾ ದಾವೂದ್ (Shahzada Dawood) ಹಾಗೂ ಅವರ ಮಗ ಹುಸೇನೆ ದಾವೂದ್ ಇದ್ದರು ಎಂಬುದು ತಿಳಿದುಬಂದಿದೆ. ಶಹಜಾದಾ ದಾವೂದ್ ಖ್ಯಾತ ಎಂಗ್ರೋ ಕಂಪನಿಯ ಉಪಾಧ್ಯಕ್ಷ. ಎಂಗ್ರೋ ಇಂಧನ, ಕೃಷಿ, ಪೆಟ್ರೋಕೆಮಿಕಲ್ಸ್ ಹಾಗೂ ದೂರಸಂಪರ್ಕದಲ್ಲಿ ಹೂಡಿಕೆ ಮಾಡುವ ಸಂಸ್ಥೆಯಾಗಿದೆ. ಇದು 2022ರ ಕೊನೆಯಲ್ಲಿ 350 ಶತಕೋಟಿ ರೂ. ಆದಾಯವನ್ನು ಘೋಷಿಸಿದೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್ ಎಂದು ಗುರುತಿಸಲಾಗಿದೆ. ಇದೀಗ ಅಮೆರಿಕ ಹಾಗೂ ಕೆನಡಾದ ಹಡಗುಗಳು ಮಾತ್ರವಲ್ಲದೇ ವಿಮಾನಗಳು ಕೂಡಾ ಜಲಾಂತರ್ಗಾಮಿ ಹುಡುಕಾಟಕ್ಕೆ ಇಳಿದಿವೆ. ಇದನ್ನೂ ಓದಿ: ಅಮೆರಿಕದಲ್ಲಿ ಎಲೋನ್ ಮಸ್ಕ್ ಭೇಟಿಯಾಗ್ತಾರೆ ಪ್ರಧಾನಿ ಮೋದಿ
ಕಾರವಾರ: ಭಾರತೀಯ ನೌಕಾ ಪಡೆಗೆ (Indian Navy) ಸೇರ್ಪಡೆಯಾಗಿರುವ ಜಲಾಂತರ್ಗಾಮಿ ನಿರೋಧಕ ಶೆಲ್ಲೋ ವಾಟರ್ ಕ್ರಾಫ್ಟ್ (SWC) ನೌಕೆಗೆ ಕಾರವಾರದ ಅಂಜುದೀವ್ (Anjediva) ಎಂಬ ಐತಿಹಾಸಿಕ ದ್ವೀಪದ ಹೆಸರಿಡಲಾಗಿದೆ.
ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಆ್ಯಂಡ್ ಎಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಿನ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನೌಕೆಯನ್ನು ನಿರ್ಮಾಣ ಮಾಡಲಾದ ಹಡಗಿಗೆ, ಬುಧವಾರ ಚೆನ್ನೈನ ಕಟ್ಟುಪಲ್ಲಿಯಲ್ಲಿ ನೌಕೆಯನ್ನು ನೀರಿಗಿಳಿಸಿ ಲೋಕಾರ್ಪಣೆ ಮಾಡಲಾಗಿದೆ. 2019 ರಲ್ಲಿ ಈ ಸಂಬಂಧ ರಕ್ಷಣಾ ಇಲಾಖೆ ಹಾಗೂ ಕಂಪನಿಯ ಜತೆ ಒಪ್ಪಂದವಾಗಿತ್ತು. ಇದುವರೆಗೆ ಇದೇ ಮಾದರಿಯ 2 ಹಡಗುಗಳನ್ನು ನೌಕಾಪಡೆಗೆ ಸೇರಿಸಲಾಗಿದ್ದು, ಇದು 3ನೇ ಹಡಗಾಗಿದೆ. 77ಮೀಟರ್ ಉದ್ದವಿರುವ ಈ ಹಡಗು ಅತ್ಯಾಧುನಿಕ ಯುದ್ಧ ತಂತ್ರಜ್ಞಾನ, ಶಸ್ತ್ರಗಳನ್ನು ಹೊಂದಿದೆ. ಇದು ಗಂಟೆಗೆ 25 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲದು.
ಕರ್ನಾಟಕದ ಊರುಗಳ ಹೆಸರುಗಳಲ್ಲಿವೆ ನೌಕೆಗಳು: ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಐಎನ್‌ಎಸ್ ಕಾರವಾರ, ಐಎನ್‌ಎಸ್ ಮೈಸೂರು ಹೀಗೆ ಕರ್ನಾಟಕದ ಊರುಗಳ ಹೆಸರಿನ ಹಲವು ನೌಕೆಗಳು ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿವೆ.
ಎಲ್ಲಿದೆ ಅಂಜುದೀವ್?: ಕಾರವಾರ ನಗರದ ಬಿಣಗಾದಿಂದ ಸಮುದ್ರದಲ್ಲಿ ಸುಮಾರು 3 ಕಿ.ಮೀ ದೂರದಲ್ಲಿರುವುದು ಅಂಜುದೀವ್ ಎಂಬ ಪುಟ್ಟ ದ್ವೀಪ ಕೇವಲ 150 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಕಾರವಾರದ (Karwar) ಕಣ್ಣಳತೆಯಲ್ಲೇ ಇದ್ದರೂ ಈ ದ್ವೀಪ ತೀರ ಇತ್ತೀಚಿನವರೆಗೆ ಗೋವಾ ರಾಜ್ಯಕ್ಕೆ ಸೇರಿತ್ತು. 2005 ರಿಂದ ಈ ದ್ವೀಪ ಕದಂಬ ನೌಕಾನೆಲೆಯ ವ್ಯಾಪ್ತಿಗೆ ಸೇರಿತು. ದ್ವೀಪಕ್ಕೆ ನೌಕಾಸೇನೆಯು ದಡದಿಂದ ಅಲೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ವಾಹನ ಓಡಾಟದ ವ್ಯವಸ್ಥೆ ಮಾಡಲಾಗಿದೆ. ವಾಸ್ಕೋಡಿಗಾಮ ಸಹ ಈ ದ್ವೀಪದಲ್ಲಿ ತಂಗಿದ್ದ ಇತಿಹಾಸ ಇದೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ
ಅಂಜುದೀವ್ ರೋಚಕ ಇತಿಹಾಸ: ಇದು ತನ್ನ ಒಡಲಲ್ಲಿ ರೋಚಕವಾದ ಇತಿಹಾಸವನ್ನು ಇಟ್ಟುಕೊಂಡಿದೆ. ಕಾರವಾರವಾದ ಜೊತೆ ಅಂಜುದೀವ್ ದ್ವೀಪ ಅವಿನಾಭಾವ ಸಂಬಂಧ ಹೊಂದಿತ್ತು. ಕಾರವಾರಕ್ಕೆ 1,400 ವರ್ಷಗಳ ಇತಿಹಾಸವಿರುವ ದಾಖಲೆಗಳು ಸಿಗುತ್ತವೆ ಎನ್ನುತ್ತಾರೆ ಇತಿಹಾಸಕಾರರು.
1498 ಕ್ಕೂ ಪೂರ್ವ ಇಲ್ಲಿ ಪೋರ್ಚುಗೀಸರು ನೆಲೆ ಸ್ಥಾಪಿಸಿದರು ಎನ್ನಲಾಗುತ್ತದೆ. ಹಿಂದೂ ಹಾಗೂ ಕ್ಯಾಥೋಲಿಕ್ ಧರ್ಮೀಯರ ಆಸ್ತೆಯ ಐತಿಹಾಸಿಕ ಕೇಂದ್ರಕ್ಕೆ ಈಗ ಭಾರತೀಯ ನೌಕಾಸೇನೆ ಗೌರವ ನೀಡಿದೆ. ಇಲ್ಲಿ ಅಂಜನಾದೇವಿಯ ಮಂದಿರವಿತ್ತು ಎನ್ನಲಾಗುತ್ತದೆ. ಈ ದ್ವೀಪದಲ್ಲಿ ಲೇಡೀಸ್ ಆಫ್ ಸ್ಪಂಗ್ ಚರ್ಚ್ ಹಾಗೂ ಹಲವು ಸ್ಮಾರಕಗಳು ಈಗಲೂ ಇವೆ. ಈ ಹಿಂದೆ ವರ್ಷಕ್ಕೊಮ್ಮೆ ಪೇಸ್ತು (ಕ್ರಿಶ್ವಿಯನ್ ಧಾರ್ಮಿಕ ಹಬ್ಬ) ಆಗುತ್ತಿತ್ತು. ಅದಕ್ಕೆ ಪ್ರವೇಶ ನೀಡುವಂತೆ ಗೋವಾದ ಕೆಲವು ಕ್ಯಾಥೋಲಿಕ್ ಮುಖಂಡರು ನಿರಂತರವಾಗಿ ಒತ್ತಾಯಿಸುತ್ತ ಬಂದಿದ್ದಾರೆ. ಮಾತ್ರವಲ್ಲ ಆ ಸಂಬಂಧ ಗೋವಾದ ನಾಗರಿಕರೊಬ್ಬರು ಪೋರ್ಚುಗಲ್ ಪ್ರಧಾನಿಗೆ ಪತ್ರ ಬರೆದಿದ್ದರು. ಅದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಭದ್ರತೆಯ ದೃಷ್ಟಿಯಿಂದ ಇಲ್ಲಿ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನೂ ಓದಿ: ಬರೋಬ್ಬರಿ ಏಳೂವರೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಕಂಡು ದಂಗಾದ ಮನೆ ಮಾಲೀಕ!
ಟೋಕಿಯೊ: ಜಪಾನ್‌ನ (Japan) ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ (China) ಸಮುದ್ರದಲ್ಲಿ ಬುಧವಾರ ಹಡಗು ಮುಳುಗಿ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್‌ನ ಡಾಂಜೋ ದ್ವೀಪಗಳ ಪಶ್ಚಿಮಕ್ಕಿರುವ ಸುಮಾರು 110 ಕಿಲೋಮೀಟರ್ ದೂರದ ಭಾಗದಿಂದ ರಾತ್ರಿ 11:15 ರ ಸುಮಾರಿಗೆ ಹಡಗು ದುರಂತದ ಕರೆ ಬಂದಿತ್ತು. ಚಂಡಮಾರುತದ ಎಚ್ಚರಿಕೆ ನೀಡಿಲಾಗಿತ್ತು. ಆ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.
ಸರಕು ಹಡಗಿನಲ್ಲಿ 14 ಮಂದಿ ಚೀನೀಯರು ಮತ್ತು 8 ಮಂದಿ ಮ್ಯಾನ್ಮಾರ್ ಸಿಬ್ಬಂದಿ ಇದ್ದರು. ಮರದ ತುಂಡುಗಳನ್ನು ಹಾಕಿಕೊಂಡು ಮಲೇಷ್ಯಾದಿಂದ ದಕ್ಷಿಣ ಕೊರಿಯಾದ ಇಂಚಿಯಾನ್‌ಗೆ ಹಡಗು ತೆರಳುತ್ತಿತ್ತು. ಇದನ್ನೂ ಓದಿ: ಅಮೆರಿಕದಲ್ಲಿ ಮುಂದುವರಿದ ಗುಂಡಿನ ಮೊರೆತ – ಶೂಟೌಟ್‌ಗೆ 3 ಬಲಿ
ಎಎಸ್‌ಡಿಎಫ್‌ನಿಂದ ರಕ್ಷಿಸಲ್ಪಟ್ಟ ಇಬ್ಬರನ್ನು ನಾಗಸಾಕಿಯಿಂದ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು.
Live Tv
[brid partner=56869869 player=32851 video=960834 autoplay=true]