Tag: shilpa shetty

  • Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ

    Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ

    – 60 ಕೋಟಿ ವಂಚನೆ ಪ್ರಕರಣ ಎದುರಿಸುತ್ತಿರುವ ಶಿಲ್ಪಾ ಶೆಟ್ಟಿ ದಂಪತಿ

    ನೋಟು ಅಮಾನ್ಯೀಕರಣದಿಂದಾಗಿ (Demonetisation) ತಮ್ಮ ವ್ಯವಹಾರವು ಭಾರೀ ನಷ್ಟ ಅನುಭವಿಸಿದೆ. ಅಮಾನ್ಯೀಕರಣದಿಂದಾಗಿಯೇ ಸಾಲ ಪಾವತಿಸಲು ಆಗಿರಲಿಲ್ಲ ಎಂದು ಅಂತ 60 ಕೋಟಿ ವಂಚನೆ ಪ್ರಕರಣದಲ್ಲಿ ತನಿಖೆ ಎದುರಿಸ್ತಿರುವ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್‌ಕುಂದ್ರಾ (Raj Kundra) ಹೇಳಿದ್ದಾರೆ.

    ತಮ್ಮ ಕಂಪನಿಯು ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ವ್ಯಾಪಾರ ಮಾಡುತ್ತಿತ್ತು. 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ರದ್ದತಿಯ ನಂತರ ಕಂಪನಿಯು ಬಹಳಷ್ಟು ನಷ್ಟ ಎದುರಿಸಿದೆ. ಕಂಪನಿ ಪಡೆದ ಸಾಲವನ್ನ ಮರುಪಾವತಿಸಲು ಸಾಧ್ಯವಾಗಿಲ್ಲ ಅಂದಿದ್ದಾರೆ. ಇದನ್ನೂ ಓದಿ: ಮೊದಲು 60 ಕೋಟಿ ಠೇವಣಿ ಇಡಿ – ಶಿಲ್ಪಾ ಶೆಟ್ಟಿ ದಂಪತಿ ವಿದೇಶಿ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ತಡೆ

    Shilpa Shetty and Raj Kundra

    ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿ ದೀಪಕ್ ಕೊಠಾರಿ ಅನ್ನೋವ್ರಿಗೆ 60 ಕೋಟಿ ರೂ. ವಂಚಿಸಿರುವ ಕೇಸಲ್ಲಿ ಈಗಾಗಲೇ 2 ಬಾರಿ ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಅಂದಹಾಗೆ, ಪತಿ ಕಂಪನಿಯ ಯಾವ ವ್ಯವಹಾರವನ್ನೂ ನಾನು ನೋಡಿಕೊಳ್ಳುತ್ತಿರಲಿಲ್ಲ ಎಂದು ಶಿಲ್ಪಾ ಶೆಟ್ಟಿ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಸಕ್ಸಸ್‌ ಬೆನ್ನಲ್ಲೇ ಕಟೀಲು ಅಮ್ಮನ ದರ್ಶನ ಪಡೆದ ವಿಜಯ್‌ ಕಿರಗಂದೂರು

    ಮೊದಲು 60 ಕೋಟಿ ಠೇವಣಿ ಇಡಿ ಅಂದಿದ್ದ ಕೋರ್ಟ್‌
    60 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ ಭಾರಿ ಹಿನ್ನಡೆಯಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್‌ ಸೇರಿದಂತೆ ಇತರ ದೇಶಗಳ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಶಿಲ್ಪಾ ಶೆಟ್ಟಿ ದಂಪತಿಗೆ ಬಾಂಬೆ ಹೈಕೋರ್ಟ್‌ (Bombay High Court) ಇತ್ತೀಚೆಗೆ ತಡೆ ನೀಡಿದೆ.

    Shilpa Shetty 1

    ಕಾರ್ಯಕ್ರಮ ನಿಮಿತ್ತ ಲಾಸ್ ಎಂಜಲೀಸ್ (Los Angeles) ಮತ್ತು ಇತರ ದೇಶಗಳಿಗೆ ತೆರಳಬೇಕಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್, ಲಾಸ್ ಏಂಜಲೀಸ್ ಮತ್ತು ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ ಮೊದಲು 60 ಕೋಟಿ ರೂಪಾಯಿ ಡೆಪಾಸಿಟ್ ಇಡಿ ಎಂದು ಹೇಳಿತ್ತು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

    ಏನಿದು ವಂಚನೆ ಪ್ರಕರಣ?
    2015 ರಿಂದ 2023ರ ನಡುವೆ, ದಂಪತಿ ತಮ್ಮ ವ್ಯವಹಾರ ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು. ದಂಪತಿ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

  • ಮೊದಲು 60 ಕೋಟಿ ಠೇವಣಿ ಇಡಿ – ಶಿಲ್ಪಾ ಶೆಟ್ಟಿ ದಂಪತಿ ವಿದೇಶಿ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ತಡೆ

    ಮೊದಲು 60 ಕೋಟಿ ಠೇವಣಿ ಇಡಿ – ಶಿಲ್ಪಾ ಶೆಟ್ಟಿ ದಂಪತಿ ವಿದೇಶಿ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ತಡೆ

    – ಲಾಸ್ ಏಂಜಲೀಸ್‌ ಸೇರಿ ವಿವಿಧ ದೇಶಗಳ ಪ್ರವಾಸಕ್ಕೆ ಅನುಮತಿ ಕೋರಿದ್ದ ಶಿಲ್ಪಾ ಶೆಟ್ಟಿ ದಂಪತಿ

    ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಸಂಕಷ್ಟಗಳು ಹೆಗಲೇರಿಕೊಂಡಿವೆ. 60 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾಗೆ (Raj Kundra) ಭಾರಿ ಹಿನ್ನಡೆಯಾಗಿದೆ. ಅಮೆರಿಕದ ಲಾಸ್ ಏಂಜಲೀಸ್‌ ಸೇರಿದಂತೆ ಇತರ ದೇಶಗಳ ಪ್ರವಾಸಕ್ಕೆ ತೆರಳಲು ಮುಂದಾಗಿದ್ದ ಶಿಲ್ಪಾ ಶೆಟ್ಟಿ (Shilpa Shetty) ದಂಪತಿಗೆ ಬಾಂಬೆ ಹೈಕೋರ್ಟ್‌ ತಡೆ ನೀಡಿದೆ.

    ವಿದೇಶಕ್ಕೆ ಹೋಗೋದಾದ್ರೆ 60 ಕೋಟಿ ರೂಪಾಯಿ ಠೇವಣಿ ಇಟ್ಟು ಹೋಗಿ ಎಂದು ಖಡಕ್ ಆಗಿ ಹೇಳಿದೆ. 60 ಕೋಟಿ ರೂಪಾಯಿ ವಂಚನೆ ಆರೋಪದಡಿ ತಮ್ಮ ವಿರುದ್ಧ ಹೊರಡಿಸಲಾದ ಲುಕ್‌ಔಟ್‌ ನೋಟಿಸ್ ರದ್ದುಗೊಳಿಸುವಂತೆ ಕೋರಿ ಶಿಲ್ಪಾ ಶೆಟ್ಟಿ, ರಾಜ್‌ಕುಂದ್ರಾ ಬಾಂಬೆ ಕೋರ್ಟ್‌ಗೆ (Bombay High Court) ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: 60 ಕೋಟಿ ವಂಚನೆ ಕೇಸ್; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

    ಕಾರ್ಯಕ್ರಮ ನಿಮಿತ್ತ ಲಾಸ್ ಎಂಜಲೀಸ್ (Los Angeles) ಮತ್ತು ಇತರ ದೇಶಗಳಿಗೆ ತೆರಳಬೇಕಿತ್ತು. ಹೀಗಾಗಿ ಬಾಂಬೆ ಹೈಕೋರ್ಟ್, ಲಾಸ್ ಏಂಜಲೀಸ್ ಮತ್ತು ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ ಮೊದಲು 60 ಕೋಟಿ ರೂಪಾಯಿ ಡೆಪಾಸಿಟ್ ಇಡಿ ಎಂದು ಹೇಳಿದೆ. ಇದನ್ನೂ ಓದಿ: ರಸ್ತೆ ಬದಿ `ಬಡವರ ಬರ್ಗರ್’ ತಿಂದು ಓವರ್‌ ಆ್ಯಕ್ಟಿಂಗ್ ಮಾಡಿದ್ರಾ ಶಿಲ್ಪಾ ಶೆಟ್ಟಿ?

    ಏನಿದು ಕೇಸ್‌?
    2015 ರಿಂದ 2023ರ ನಡುವೆ, ದಂಪತಿ ತಮ್ಮ ವ್ಯವಹಾರ ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು. ದಂಪತಿ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    12% ವಾರ್ಷಿಕ ಬಡ್ಡಿಯೊಂದಿಗೆ ನಿರ್ದಿಷ್ಟ ಸಮಯದೊಳಗೆ ಹಣ ಹಿಂತಿರುಗಿಸುವುದಾಗಿ ಶಿಲ್ಪಾ ಶೆಟ್ಟಿ ಭರವಸೆ ನೀಡಿದ್ದರು. 2016ರಲ್ಲಿ ಲಿಖಿತವಾಗಿ ವೈಯಕ್ತಿಕ ಖಾತರಿ ಕೂಡ ನೀಡಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಶಿಲ್ಪಾ ಶೆಟ್ಟಿ ಅವರು ಸಂಸ್ಥೆ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೋರ್ಟ್‌ನಲ್ಲಿ ಕೇಸ್‌ ವಿಚಾರಣೆ ನಡೆಯುತ್ತಿದೆ.

  • ರಸ್ತೆ ಬದಿ `ಬಡವರ ಬರ್ಗರ್’ ತಿಂದು ಓವರ್‌ ಆ್ಯಕ್ಟಿಂಗ್ ಮಾಡಿದ್ರಾ ಶಿಲ್ಪಾ ಶೆಟ್ಟಿ?

    ರಸ್ತೆ ಬದಿ `ಬಡವರ ಬರ್ಗರ್’ ತಿಂದು ಓವರ್‌ ಆ್ಯಕ್ಟಿಂಗ್ ಮಾಡಿದ್ರಾ ಶಿಲ್ಪಾ ಶೆಟ್ಟಿ?

    ದಾ ಗ್ಲ್ಯಾಮರ್ ಫೋಟೋಶೂಟ್ ಮಾಡಿಸಿ ಆಕರ್ಷಕ ಫೋಟೋ ಪೋಸ್ಟ್ ಮಾಡುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  (Shilpa Shetty) ಇದೀಗ ಇನ್ಸ್ಟಾಗ್ರಾಂನಲ್ಲಿ ವಡಾಪಾವ್ (Vada Pav) ತಿನ್ನುವ ಫೋಟೋ ಹಾಕಿ ಡಿಫರೆಂಟ್ ಪೋಸ್ ಕೊಟ್ಟಿದ್ದಾರೆ.

    ಮುಂಬೈನ ಸ್ಪೆಷಲ್ ವಡಾಪಾವ್ ಜೊತೆಗೆ ಹುರಿದ ಹಸಿಮೆಣಸಿಕಾಯಿ ಜೊತೆ ತಿನ್ನುವ ಮಜವೇ ಬೇರೆ. ಬಾಯಲ್ಲಿ ನಿರೂರುವ ಈ ಖಾದ್ಯವನ್ನ `ಬಡವರ ಬರ್ಗರ್’ ಎಂದೇ ಕರೆಯಲಾಗುತ್ತೆ. ಫಿಟ್ನೆಸ್ ಮಂತ್ರ ಪಾಲಿಸೋ ಶಿಲ್ಪಾ ಶೆಟ್ಟೆ ಅಪ್ಪಿ ತಪ್ಪಿಯೂ ವಡಾಪಾವ್ ತಿನ್ನೋದನ್ನ ಜನರು ಊಹಿಸಲ್ಲ. ಆದರೆ ಇದೀಗ ಶಿಲ್ಪಾಶೆಟ್ಟಿ ಮುಂಬೈನ ಗಲ್ಲಿಯಲ್ಲಿ ಕಾರು ನಿಲ್ಲಿಸಿ ಎರಡು ಪ್ಲೇಟ್ ವಡಾಪಾವ್ ತಿನ್ನುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂತಾರದ ಸಕ್ಸಸ್ ಜರ್ನಿ.. ದುನಿಯಾ ವಿಜಯ್ ವಿಭಿನ್ನವಾಗಿ ಅಭಿನಂದನೆ

    ಮೆಣಸಿಕಾಯಿ ಕಡಿಯುತ್ತಾ ವಡಾಪಾವ್ ತಿನ್ನುವ ರುಚಿ ಸವಿದವರಿಗೇ ಗೊತ್ತು. ಹೀಗೆ ಫೀಲ್ ಮಾಡ್ತಿರುವ ಫೋಟೋವನ್ನೇ ಅವರು ಶೇರ್ ಮಾಡಿದ್ದಾರೆ. “ಫಾರೆವರ್ ಬಟಾಟವಡಾ ಗರ್ಲ್” ಎಂದು ಹೇಳಿಕೊಂಡಿದ್ದಾರೆ. 50 ವರ್ಷ ದಾಟಿದ್ರೂ ಶಿಲ್ಪಾ ಸಣ್ಣಗಿನ ದೇಹಸೌಂದರ್ಯ ಕಾಪಾಡಿಕೊಂಡ ಎವರ್‍ಗ್ರೀನ್ ಚೆಲುವೆ ಜೊತೆಗೆ ಫಿಟ್ನೆಸ್ ಫ್ರೀಕ್.

    ಹೀಗಿರಿವಾಗ ನೀವು `ಯಾವಾಗಲೂ ಓವರ್ ಆ್ಯಕ್ಟಿಂಗ್’, ನೆಟ್ಟಿಗರನ್ನ ಯಾಮಾರಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು. ಬರೀ ಪೋಸ್ ಕೊಟ್ರಾ ಅಥವಾ ನಿಜವಾಗಲೂ ತಿಂದ್ರಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ ಫಾಲೋವರ್ಸ್. ಒಟ್ನಲ್ಲಿ ಶಿಲ್ಪಾ ಶೆಟ್ಟಿ ವಡಾಪಾವ್ ತಿಂದ್ರೋ ಬಿಟ್ರೋ ಆದರೆ ಹಾಕಿರುವ ಪೋಸ್ಟ್ ನೋಡುತ್ತಿದ್ದರೆ ವಡಾಪಾವ್ ತಿನ್ನುವ ಆಸೆಯಾಗೋದು ಗ್ಯಾರಂಟಿ. ಇದನ್ನೂ ಓದಿ: 700 ವರ್ಷಗಳ ಹಿಂದಿನ ಕಥೆಗೆ ಶ್ರೀಮುರಳಿ ನಾಯಕ: ಹೊಸ ಚಿತ್ರಕ್ಕೆ ಮುಹೂರ್ತ

  • 60 ಕೋಟಿ ವಂಚನೆ ಕೇಸ್; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

    60 ಕೋಟಿ ವಂಚನೆ ಕೇಸ್; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

    ಮುಂಬೈ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್‌ ಹೊರಡಿಸಿದ್ದಾರೆ.

    ತಮ್ಮ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ (ಈಗ ಕಾರ್ಯನಿರ್ವಹಿಸುತ್ತಿಲ್ಲ) ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸೆಲೆಬ್ರಿಟಿ ದಂಪತಿ, ಉದ್ಯಮಿಯೊಬ್ಬರಿಗೆ ಸುಮಾರು 60 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಆರ್ಥಿಕ ಅಪರಾಧಗಳ ವಿಭಾಗ (EOW) ಮೂಲಗಳು ಸೂಚಿಸುವಂತೆ ಪೊಲೀಸರು ಈಗ ಶೆಟ್ಟಿ ಮತ್ತು ಕುಂದ್ರಾ ಅವರ ಪ್ರಯಾಣ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಂಪನಿಯ ಲೆಕ್ಕಪರಿಶೋಧಕರನ್ನು ಸಹ ವಿಚಾರಣೆಗೆ ಕರೆಯಲಾಗಿದೆ.

    2015 ರಿಂದ 2023 ರ ನಡುವೆ, ದಂಪತಿ ತಮ್ಮ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ನನ್ನಿಂದ 60 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ದೀಪಕ್ ಕೊಠಾರಿ ಆರೋಪಿಸಿದ್ದರು. ದಂಪತಿ ಹಣವನ್ನು ಸಾಲವಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

    12% ವಾರ್ಷಿಕ ಬಡ್ಡಿಯೊಂದಿಗೆ ನಿರ್ದಿಷ್ಟ ಸಮಯದೊಳಗೆ ಹಣ ಹಿಂತಿರುಗಿಸುವುದಾಗಿ ಶಿಲ್ಪಾ ಶೆಟ್ಟಿ ಭರವಸೆ ನೀಡಿದ್ದರು. 2016ರಲ್ಲಿ ಲಿಖಿತವಾಗಿ ವೈಯಕ್ತಿಕ ಖಾತರಿ ಕೂಡ ನೀಡಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಶಿಲ್ಪಾ ಶೆಟ್ಟಿ ಅವರು ಸಂಸ್ಥೆ ನಿರ್ದೇಶಕಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

  • ಲೇಡಿ ಪೊಲೀಸ್ ಮೇಲೆ ಶಿಲ್ಪಾಶೆಟ್ಟಿ ಗರಂ

    ಲೇಡಿ ಪೊಲೀಸ್ ಮೇಲೆ ಶಿಲ್ಪಾಶೆಟ್ಟಿ ಗರಂ

    ಪ್ರತಿ ಗಣೇಶ ಹಬ್ಬಕ್ಕೂ ಮುಂಬೈನ ಲಾಲ್‌ಬಗೂಚ ರಾಜ ಗಣಪತಿ ಪೆಂಡಾಲ್‌ಗೆ (Lalbaugcha Raja Pandal) ಬಾಲಿವುಡ್ ತಾರೆಯರು ಭೇಟಿ ಕೊಡುವ ಪದ್ಧತಿ ಇದೆ. ಹೇಳಿ ಕೇಳಿ ಇದು ಸಾರ್ವಜನಿಕ ಗಣಪತಿ ಜನಸಂದಣಿ ಹೆಚ್ಚಾಗಿರುತ್ತೆ. ಭೇಟಿಕೊಡುವ ತಾರೆಯರಿಗೆ ಪೊಲೀಸ್ ಭದ್ರತೆಯೂ ಇರುತ್ತೆ. ಹೀಗಾಗಿ ಪ್ರತಿ ವರ್ಷದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಈ ಬಾರಿಯೂ ಸಾರ್ವಜನಿಕ ಗಣೇಶ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ತಮಗೆ ಭದ್ರತೆ ಕೊಡುತ್ತಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ ಮೇಲೆಯೇ ಬೇಸರಗೊಂಡಿದ್ದಾರೆ. ಅವರನ್ನು ಕೈಯಿಂದ ತಳ್ಳಿ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ. ಶಿಲ್ಪಾ ವರ್ತನೆಗೆ ಪರ ವಿರೋಧದ ಟೀಕೆ ಟಿಪ್ಪಣಿ ಜೋರಾಗಿದೆ.

    ಗಣಪತಿ ಪೆಂಡಾಲ್‌ಗೆ ಶಿಲ್ಪಾ ಶೆಟ್ಟಿ ಆಗಮಿಸಿದ್ದ ವೇಳೆ ಸುತ್ತ ಮುತ್ತ ಜನಸಂದಣಿ ಕಂಟ್ರೋಲ್ ಮಾಡಲು ಪೊಲೀಸರ ಭದ್ರತೆ ಇತ್ತು. ಅಲ್ಲೇ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಪಕ್ಕದಿಂದ ಓಡಿಬಂದು ಶಿಲ್ಪಾ ಶೆಟ್ಟಿಯ ಭುಜ ಹಿಡಿದು `ಮೇಡಮ್ ಒಂದು ಸೆಲ್ಫಿ’ ಎಂದು ಹೇಳುತ್ತಾ ಫೋಟೋ ಕ್ಲಿಕ್ ಮಾಡಲು ಮುಂದಾಗ್ತಾರೆ. ಈ ವೇಳೆ ಸೆಲ್ಫಿಯನ್ನು ನಿರಾಕರಿಸುವ ಶಿಲ್ಪಾ ಸಮವಸ್ತç ಧರಸಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್‌ನ್ನು ತಳ್ಳುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕಟುವಾಗೇ ಹೇಳ್ತಾರೆ. ಇಷ್ಟು ಸಾಲದು ಎಂಬAತೆ ಶಿಲ್ಪಾ ಶೆಟ್ಟಿ ಬಾಡಿಗಾರ್ಡ್ ಕೂಡ ಕಾನ್ಸ್ಟೇಬಲ್‌ಗೆ `ಹಾಗೆಲ್ಲಾ ಮಾಡಬೇಡಿ’ ಎಂದಿದ್ದಾರೆ. ಈ ದೃಶ್ಯ ಬಹಳ ವೈರಲ್ ಆಗಿದೆ.  ಇದನ್ನೂ ಓದಿ: ರಸ್ತೆಯಲ್ಲಿ ಅಡುಗೆ ಮಾಡಿ ಖುಷಿಪಟ್ಟ ನಾಗಾರ್ಜುನ ಸೊಸೆ

     

    View this post on Instagram

     

    A post shared by Bollywood News (@bolly_newssss)

    ಶಿಲ್ಪಾ ಶೆಟ್ಟಿ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಶಿಲ್ಪಾರನ್ನು ಮುಟ್ಟಿ ಸೆಲ್ಫಿ ಕೊಡಿ ಎಂದು ಕೇಳಿದ್ದು ತಪ್ಪಿರಬಹುದು. ಆದರೆ ಅವರು ಹೆಣ್ಣು ಎಂಬ ಸಲುಗೆಯಿಂದ ಈ ರೀತಿ ಕೇಳಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸೆಲ್ಫಿ ಕೊಡಲು ನಿರಾಕರಣ ಮಾಡಿದ್ದರೂ ನಡೆಯುತ್ತಿತ್ತು, ಬದಲಿಗೆ ಶಿಲ್ಪಾ ತಳ್ಳಿದ್ದು ಸರಿಯಲ್ಲ ಎಂದು ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಿಚ್ಚನ ಮಾರ್ಕ್ ಟೈಟಲ್ ಟೀಸರ್‌ಗೆ ಫುಲ್ ಮಾರ್ಕ್ಸ್

  • ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ಧ ಉದ್ಯಮಿಗೆ 60 ಕೋಟಿ ರೂ. ವಂಚನೆ ಆರೋಪ

    ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ಧ ಉದ್ಯಮಿಗೆ 60 ಕೋಟಿ ರೂ. ವಂಚನೆ ಆರೋಪ

    ಮುಂಬೈ: ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಆರೋಪದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್‌ ಕುಂದ್ರಾ ವಿರುದ್ಧ ಆರೋಪ ಕೇಳಿಬಂದಿದೆ.

    ಸೆಲೆಬ್ರಿಟಿ ದಂಪತಿಯ ಈಗ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಉದ್ಯಮಿ ದೀಪಕ್ ಕೊಠಾರಿ ಅವರು 2015-2023 ರ ಸುಮಾರಿಗೆ ವ್ಯವಹಾರ ವಿಸ್ತರಣೆಗಾಗಿ ತಮಗೆ 60.48 ಕೋಟಿ ರೂ.ಗಳನ್ನು ನೀಡಿದ್ದೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿಕೊಂಡಿದ್ದಾರೆ ಎಂದು ನಟಿ ಹಾಗೂ ಪತಿ ವಿರುದ್ಧ ಆರೋಪ ಮಾಡಿದ್ದಾರೆ.

    ಆರ್ಯ ಕಂಪನಿಗೆ ವಾರ್ಷಿಕ ಶೇ.12 ರಷ್ಟು ಬಡ್ಡಿದರದಲ್ಲಿ 75 ಕೋಟಿ ರೂ. ಸಾಲ ಕೇಳಿದ್ದರು. ಆದರೆ, ಹೆಚ್ಚಿನ ತೆರಿಗೆಗಳನ್ನು ತಪ್ಪಿಸಲು ಆ ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಿದ್ದರು ಎಂದು ಉದ್ಯಮಿ ಆರೋಪಿಸಿದ್ದಾರೆ. ಸಭೆ ನಡೆಸಿ, ಹಣವನ್ನು ಸಮಯಕ್ಕೆ ಹಿಂದಿರುಗಿಸುವ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

    ಕೊಠಾರಿ, 2015 ರ ಏಪ್ರಿಲ್‌ನಲ್ಲಿ ಮೊದಲ ಕಂತಿನ ಸುಮಾರು 31.95 ಕೋಟಿ ರೂ. ಕಳುಹಿಸಿದ್ದೆ. ಆದರೆ ತೆರಿಗೆ ಸಮಸ್ಯೆ ಹಾಗೆಯೇ ಉಳಿದು ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2015 ಮಾರ್ಚ್‌ ಮತ್ತು 2016 ರ ಮಾರ್ಚ್‌ ನಡುವೆ ಅವರು 28.54 ಕೋಟಿ ರೂ. ವರ್ಗಾಯಿಸಿಕೊಂಡಿದ್ದರೆಂದು ಉದ್ಯಮಿ ತಿಳಿಸಿದ್ದಾರೆ.

    60.48 ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ. ಜೊತೆಗೆ 3.19 ಲಕ್ಷ ರೂ. ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. 2016ರ ಏಪ್ರಿಲ್‌ನಲ್ಲಿ ಶೆಟ್ಟಿ ಅವರು ವೈಯಕ್ತಿಕ ಗ್ಯಾರಂಟಿ ಕೂಡ ನೀಡಿದ್ದರು ಎಂದು ಕೊಠಾರಿ ಹೇಳಿದ್ದಾರೆ.

  • ಕಾಪು ಶ್ರೀಹೊಸ ಮಾರಿಗುಡಿ ಕಂಡು ನಿಬ್ಬೆರಗಾದ ನಟಿ ಶಿಲ್ಪಾ ಶೆಟ್ಟಿ

    ಕಾಪು ಶ್ರೀಹೊಸ ಮಾರಿಗುಡಿ ಕಂಡು ನಿಬ್ಬೆರಗಾದ ನಟಿ ಶಿಲ್ಪಾ ಶೆಟ್ಟಿ

    ಉಡುಪಿ: ಬಾಲಿವುಡ್ ಚೆಲುವೆ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಕರಾವಳಿ ಪ್ರವಾಸದಲ್ಲಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟು ಮಾರಿಯಮ್ಮನ (Sri Hosa Marigudi Temple) ದರ್ಶನ ಮಾಡಿದ್ದಾರೆ. ಹೊಸ ಮಾರಿಗುಡಿ ಕಂಡು ನಿಬ್ಬೆರಗಾಗಿದ್ದಾರೆ.

    ಕಾಪುವಿನಲ್ಲಿ ಹತ್ತು ದಿನಗಳ ಕಾಲ ಅದ್ಧೂರಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಹೊಸ ಮಾರಿಗುಡಿ ನೂತನ ದೇವಸ್ಥಾನದ ವೀಕ್ಷಣೆ ಮಾಡಿದ ಶಿಲ್ಪಾ ಶೆಟ್ಟಿ ಖುಷಿಗೊಂಡರು. ಮಾರಿಗುಡಿಯ ನಿರ್ಮಾಣ, ಮರದ ಕೆತ್ತನೆ, ಚಿನ್ನದ ಗದ್ದಿಗೆ ಕಂಡು ನಟಿ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

    ದೇಗುಲದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಮಂಡಳಿಯಿಂದ ಶಿಲ್ಪಾ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು. ತಂಗಿ ಶಮಿತಾ ಶೆಟ್ಟಿ, ತಾಯಿ ಮತ್ತು ಅವರ ಕುಟುಂಬದ ಜೊತೆ ಬಾಲಾಲಯದಲ್ಲಿರುವ ಮಾರಿಯಮ್ಮನ ದರ್ಶನ ಮಾಡಿ ಪ್ರಸಾದ ಸ್ವೀಕಾರ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ, ದೇವಸ್ಥಾನದ ರಚನೆ, ಮರದ ಕೆತ್ತನೆ ನೋಡ ಬಹಳ ಖುಷಿಯಾಯ್ತು. ಸಂಪೂರ್ಣ ಜೀರ್ಣೋದ್ಧಾರ ಕಾರ್ಯಕ್ರಮ, ಅಭಿವೃದ್ಧಿ ಆದ್ಮೇಲೆ ಮತ್ತೊಂದು ಬಾರಿ ಭೇಟಿ ಕೊಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್‌

  • ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

    ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

    ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಕುಟುಂಬದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಲ್ಪಾ ಶೆಟ್ಟಿಯವರ ಮಗ, ಮಗಳು, ತಾಯಿ, ತಂಗಿ ನಟಿ ಶಮಿತಾ ಶೆಟ್ಟಿ ಜೊತೆ ಬಂದು ಕಟೀಲು ದೇವಿಯ ದರ್ಶನ ಪಡೆದು ಮಲ್ಲಿಗೆ ಹೂವು ಹರಕೆ ರೂಪದಲ್ಲಿ ದೇವಿಗೆ ನೀಡಿದ್ದಾರೆ. ಕಟೀಲು ಪರಿಸರದ ಮೊದಲಾಡಿಗುತ್ತುನಲ್ಲಿ ಮೂಲ ಮನೆ ಹೊಂದಿರುವ ಶಿಲ್ಪಾ ಶೆಟ್ಟಿ ಆಗಾಗ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

    ಅಂದಹಾಗೆ, ನಟಿ ಶಿಲ್ಪಾ ಶೆಟ್ಟಿ ಅವರು ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಸರ್ಜಾ ನಟನೆಯ ‘ಕೆಡಿ’ (KD Film) ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ವರ್ಷಗಳ ಬಳಿಕ ಈ ಚಿತ್ರದ ಮೂಲಕ ಅವರು ಕಮ್‌ಬ್ಯಾಕ್ ಆಗುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್‌ ಆಗಲಿದೆ.

  • ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ

    ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ

    ರಾಯಚೂರು: ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ನಡೆದ ಹಲ್ಲೆ ಕೇಳಿ ಭಾರೀ ಶಾಕ್ ಆಗಿದೆ. ಅವರು ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಹೇಳಿದ್ದಾರೆ.

    ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಶಿಲ್ಪಾ ಶೆಟ್ಟಿ, ಮುಂಬೈ ಪೊಲೀಸರು (Mumbai Police) ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದವನನ್ನ ಕೂಡಲೇ ಬಂಧಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು. ಇನ್ನೂ ರಾಯಚೂರಿಗೆ ಬಂದಿರುವುದು ನಾನು ನಮ್ಮ ಊರಿಗೆ ಬಂದಂತೆ ಆಗಿದೆ. ನನ್ನ ಕನ್ನಡದ ಮುಂದಿನ ಸಿನಿಮಾ ಡೆವಿಲ್ ಹಾಗೂ ಕೆಡಿ ಬರುತ್ತಿವೆ. ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಬಗ್ಗೆ ನನಗೆ ಭಾರೀ ಕುತೂಹಲ ಇದೆ. ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಜೊತೆಗೆ ನಟಿಸಿದ್ದಾರೆ ಎಂದರು. ಇದನ್ನೂ ಓದಿ: ಖಾಸಗೀಕರಣ ಹೊಸ್ತಿಲಲ್ಲಿದ್ದ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರದಿಂದ ಜೀವದಾನ – 11,440 ಕೋಟಿ ಪುನಶ್ಚೇತನ ಪ್ಯಾಕೇಜ್

    ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನೋಡಲು ರಾಯಚೂರಿನಲ್ಲಿ ಜನ ಮುಗಿಬಿದ್ದಿದ್ದರು. ನಗರದ ಸ್ಟೇಷನ್ ರಸ್ತೆಯಲ್ಲಿ ಜನರ ನೂಕುನುಗ್ಗಲಿನಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಜನರನ್ನು ಚದುರಿಸಿ, ರಸ್ತೆ ಸಂಚಾರ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಗಮನಿಸಿ.. ಭಾನುವಾರ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಸ್ಥಗಿತ

  • ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

    ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

    ಚಿಕ್ಕಮಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty) ಅವರು ಎನ್.ಆರ್.ಪುರ ತಾಲೂಕಿನ ರಂಭಾಪುರಿ ಮಠಕ್ಕೆ (Rambhapuri Mutt) ರೋಬೋಟಿಕ್ ಆನೆಯನ್ನ (Robotic Elephant) ಕೊಡುಗೆಯಾಗಿ ನೀಡಿದ್ದಾರೆ.

    ಜೀವಂತ ಆನೆಯನ್ನೂ ನಾಚಿಸುವಂತೆ ರೋಬೋಟಿಕ್ ಆನೆ ಇದೆ. ಈ ರೋಬೋಟಿಕ್ ಆನೆಯನ್ನು ರಂಭಾಪುರಿ ಶ್ರೀಗಳಾದ ವೀರ ಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿ ಮಠಕ್ಕೆ ಸ್ವಾಗತಿಸಿಕೊಂಡಿದ್ದಾರೆ. ಈ ರೋಬೋಟಿಕ್ ಆನೆ ಸದಾ ಮಠದ ಆವರಣದಲ್ಲೇ ಇದ್ದು, ಭಕ್ತರನ್ನ ಆಶೀರ್ವದಿಸಲಿದೆ. ಮಠದ ಆವರಣದಲ್ಲಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ.

    ಸದಾ ಕಣ್ಣು ಬಿಟ್ಟು, ಕಿವಿ, ತಲೆ, ಸೊಂಡಿಲು ಹಾಗೂ ಬಾಲವನ್ನು ಅಲುಗಾಡಿಸುತ್ತಿರುತ್ತದೆ. ಇದರಿಂದಾಗಿ ಆನೆಯನ್ನು ನೋಡಿದರೆ ನಿಜವಾದ ಆನೆ ಕೂಡ ಒಂದು ಕ್ಷಣ ವಿಚಲಿತಗೊಳ್ಳವಂತೆ ಇದೆ.

    ರೋಬೋಟಿಕ್ ಆನೆಯನ್ನು ತಂದಿದ್ದ ಸಿಬ್ಬಂದಿ, ಶಿಲ್ಪಾ ಶೆಟ್ಟಿಯವರು ಮಠಕ್ಕೆ ನಿಜವಾದ ಆನೆಯನ್ನೇ ಕೊಡುಗೆಯಾಗಿ ಕೊಡುವವರಿದ್ದರು. ಆದರೆ, ಕಾನೂನಿನ ತೊಡಕಾಗಬಹುದು ಎಂದು ಕಾಡಿನ ಆನೆಯನ್ನು ಹೋಲುವ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ರಂಭಾಪುರಿ ಶ್ರೀಗಳು ಈ ರೋಬೋಟಿಕ್ ಆನೆಯನ್ನ ಉದ್ಘಾಟಿಸಿದ ಕೂಡಲೇ ಮಠಕ್ಕೆ ಬಂದಿದ್ದ ನೂರಾರು ಭಕ್ತರು ಆನೆಯ ಆಶೀರ್ವಾದ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಪಂಚಪೀಠಗಳಲ್ಲಿ ಬಾಳೆಹೊನ್ನೂರಿನ ಭದ್ರಾ ನದಿ ತಟದಲ್ಲಿರುವ ರಂಭಾಪುರಿ ಮಠ ಮೊದಲನೇಯದ್ದಾಗಿದೆ.