Tag: Shilpa

  • ಆತ್ಮಹತ್ಯೆಗೆ ಶರಣಾದ ನಟ ಚಂದ್ರು ಮೇಲೆ ಪತ್ನಿಯ ಆರೋಪಗಳೇನು?

    ಆತ್ಮಹತ್ಯೆಗೆ ಶರಣಾದ ನಟ ಚಂದ್ರು ಮೇಲೆ ಪತ್ನಿಯ ಆರೋಪಗಳೇನು?

    ಧಾರಾವಾಹಿ ನಟಿ ಪವಿತ್ರಾ ಜಯರಾಮ್ (Pavitra Jayaram) ಅಪಘಾತ ಪ್ರಕರಣದಲ್ಲಿ ತಿರುವು ಸಿಕ್ಕಿದೆ. ಪವಿತ್ರಾ ಗೆಳೆಯ, ಸೀರಿಯಲ್‌ ನಟ ಚಂದು (Chandu) ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತಂತೆ ಚಂದ್ರು ಪತ್ನಿ ಶಿಲ್ಪಾ (Shilpa) ಆರೋಪಗಳನ್ನು ಮಾಡಿದ್ದಾರೆ. ಪವಿತ್ರಾ ಜೊತೆಗಿನ ಸಂಬಂಧವೇ ಪತಿಯನ್ನು ಬಲಿ ತಗೆದುಕೊಂಡಿದೆ ಎಂದಿದ್ದಾರೆ. ಮದುವೆಯಾಗಿದ್ದರೂ ಪವಿತ್ರಾ ಜೊತೆ ಪತಿ ಸಂಬಂಧ ಹೊಂದಿದ್ದರು ಎಂದಿದ್ದಾರೆ.

    ಚಂದ್ರು ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವತ್ತು ಪವಿತ್ರಾ ಹುಟ್ಟುಹಬ್ಬ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪವಿತ್ರಾ ಸಾವಿನ ನಂತರ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದು, ಮಿದುಳಿನ ಕಾಯಿಲೆ ಇದ್ದು ಸಾಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು.

    ಐದು ದಿನಗಳ ಹಿಂದಷ್ಟೇ ಮೆಹಬೂಬ್‌ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದರು. ಬೆಂಗಳೂರಿನಿಂದ ಹೈದರಾಬಾದ್‌ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವಿಗೀಡಾಗಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

     

    ಚಂದು ತ್ರಿನಯನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಂದುಗೆ ಶಿಲ್ಪಾ ಎಂಬವರ ಜೊತೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಿರುತೆರೆ ನಟಿ ಪವಿತ್ರಾ ಜಯರಾಮ್ ಹಾಗೂ ಜಂದು ಸ್ನೇಹಿತರಾಗಿದ್ದರು ಎನ್ನಲಾಗಿದೆ. ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ‘ವಿಕ್ರಮಚಿತ್ರ’ಕ್ಕೆ ಮುಹೂರ್ತ

    ‘ವಿಕ್ರಮಚಿತ್ರ’ಕ್ಕೆ ಮುಹೂರ್ತ

    ಬೆಂಗಳೂರು: ಜನರು ಅನಿರೀಕ್ಷಿತ ಕಥೆಗಳನ್ನು ಇಷ್ಟಪಡುತ್ತಾರೆಂದು ತಿಳಿದಿರುವ ಮಂಡ್ಯದ ಶ್ರೀಯುತ್ ‘ವಿಕ್ರಮಚಿತ್ರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಇದರೊಂದಿಗೆ ಕಾಲೇಜು ಹುಡುಗನ ಪಾತ್ರದಲ್ಲಿ ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಕುರಿತು ಹೇಳುವುದಾದರೆ ಎಂಬಿಎ ಮುಗಿಸಿ ಉತ್ತಮ ಹುದ್ದೆಯಲ್ಲಿದ್ದರೂ ಬಣ್ಣದ ವ್ಯಾಮೋಹದಿಂದ ಕೆಲಸಕ್ಕೆ ಬೆನ್ನು ತೋರಿಸಿ ಪೂರ್ಣಪ್ರಮಾಣವಾಗಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಕರ್ವ ಚಿತ್ರದಲ್ಲಿ ಕಾರ್ಯನಿರ್ವಹಿಸಿರುವ ಶ್ರೀಯುತ್ ಹಲವರ ಬಳಿ ಅನುಭವ ಪಡೆದುಕೊಂಡಿದ್ದಾರೆ. ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ವಿಕ್ರಮ-ಬೇತಾಳದಲ್ಲಿ ಪರಿಸ್ಥಿತಿಗಳು ಒದಗಿಬಂದು ಪ್ರಶ್ನೆ ಮಾಡುತ್ತಿತ್ತು. ಅದರಂತೆ ಸಿನಿಮಾದ ಕತೆಯಲ್ಲಿ ಮನುಷ್ಯನಾದವನಿಗೆ ನಾನಾ ರೀತಿಯ ಪರಿಸ್ಥಿತಿಗಳು ಆವರಿಸಿಕೊಳ್ಳುತ್ತದೆ. ಇದನ್ನೆಲ್ಲಾ ಭೇದಿಸಿಕೊಂಡು ಸಫಲನಾಗುವನೇ ವಿಕ್ರಮನಾಗುತ್ತಾನೆ. ಅಂದರೆ ಕಾಲೇಜಿನಲ್ಲಿ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ. ಇದನ್ನು ತನಿಖೆ ಮಾಡಲು ಹೋಗುವಾಗ ಒಂದಷ್ಟು ಸತ್ಯಾಂಶಗಳು ಹೊರಬರುತ್ತದೆ. ಕ್ಲೈಮಾಕ್ಸ್ ನಲ್ಲಿ ಈತ ಅಂದುಕೊಂಡಿದ್ದ ಸತ್ಯಗಳು ಸುಳ್ಳಾಗಿ ಕಂಡುಬರುತ್ತದೆ ಎನ್ನುವುದು ಕಥಾ ಸಾರಾಂಶ.

    ಶಿಲ್ಪ ಮತ್ತು ಸ್ನೇಹಾ ನಾಯಕಿಯರು. ‘ಚೌಕಟ್ಟು’ ಚಿತ್ರ ನಿರ್ಮಿಸಿರುವ ಮಂಜುನಾಥ್ ನಿರ್ಮಾಣದ ಎರಡನೇ ಚಿತ್ರವಿದು. ನಿರ್ಮಾಣದ ಜೊತೆಗೆ ಮಂಜುನಾಥ್ ಈ ಚಿತ್ರದಲ್ಲಿ ಬರುವ ನಾಲ್ಕು ಹುಡುಗರ ಪೈಕಿ ಒಬ್ಬರಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿಶಂಕರ್ ಅವರು ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಇವರೊಂದಿಗೆ ರಂಗಭೂಮಿ, ಕಿರುತೆರೆ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

    ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡುವುದರೊಂದಿಗೆ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ಮೊಂಟಿ ಭರತ್ ಸಂಭಾಷಣೆ, ಛಾಯಾಗ್ರಹಣ ಕಿಟ್ಟಿ ಕೌಶಿಕ್, ಸಂಕಲನ ಮೋಹನ್‍ರಾಜ್, ಸಾಹಸ ಜೋನಿ ರಾಮದೇವ್ ಅವರದಾಗಿದೆ. ಮಾತೃ ಛಾಯ ಕ್ರಿಯೇಷನ್ಸ್ ಹಾಗೂ ಜಾಹಸ್ ಕ್ರಿಯೇಟಿವ್ ಇನ್ ಮೂಲಕ ಸಿದ್ಧಗೊಳ್ಳುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಕರ್ನಾಟಕ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್.ಎಂ.ಸುರೇಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

  • ರಸ್ತೆಯಲ್ಲಿ ಕಾರು ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ಮೂವರ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ

    ರಸ್ತೆಯಲ್ಲಿ ಕಾರು ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ಮೂವರ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ

    ಬೆಂಗಳೂರು: ರಸ್ತೆಯಲ್ಲಿ ಕಾರು ಅಡ್ಡವಾಗಿ ನಿಲ್ಲಿಸಿದ್ದರು ಅನ್ನೋ ಕಾರಣಕ್ಕೆ ಮನೆಗೆ ನುಗ್ಗಿ ಮೂವರಿಗೆ ಡ್ರ್ಯಾಗರ್‍ನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ.

    ಶಿಲ್ಪಾ, ಅರ್ಜುನ್, ದೀಪಕ್ ಗಾಯಗೊಂಡ ವ್ಯಕ್ತಿಗಳು. ಭಾನುವಾರ ರಾತ್ರಿ ಅರ್ಜುನ್ ಎಂಬವರು ಬಾಡಿಗೆ ಕಾರೊಂದರಲ್ಲಿ ಮನೆಯ ಬಳಿ ಬಂದು ಇಳಿದು ಕಾರ್ ಡ್ರೈವರ್‍ಗೆ ಬಾಡಿಗೆ ಹಣ ನೀಡುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರು ತೆಗೆಯುವಂತೆ ಅವಾಜ್ ಹಾಕಿದ್ದರು ಎಂದು ಹೇಳಲಾಗಿದೆ.

    ಈ ವೇಳೆ ಅರ್ಜುನ್ ಹಣ ನೀಡಿ ಹೋಗುತ್ತೀನಿ. ನಾನು ಇದೇ ಏರಿಯಾದವನೇ ಎಂದು ಹೇಳಿ ಮನೆಯ ಒಳಗೆ ಹೋಗಿದ್ದಾರೆ. ಇದಾದ ಸ್ವಲ್ಪ ಹೊತ್ತಲ್ಲೇ ಏಕಾಏಕಿ ಅರ್ಜುನ್ ಮನೆಗೆ ನುಗ್ಗಿದ ಇಬ್ಬರು, ಡ್ರ್ಯಾಗರ್‍ನಿಂದ ಮೂವರಿಗೆ ಇರಿದು ಹಲ್ಲೆ ನಡೆಸಿದ್ದಾರೆ. ಗಲಾಟೆ ಶಬ್ಧ ಕೇಳಿದ ಅಕ್ಕಪಕ್ಕದ ಮನೆಯವರು ಇಬ್ಬರನ್ನು ಸೆರೆಹಿಡಿದು ರಾಜಾಜಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರೋ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.