Tag: Shikhar Paharia

  • ಬಾಯ್ ಫ್ರೆಂಡ್ ಜೊತೆ ತಿರುಪತಿ ದರ್ಶನಕ್ಕೆ ಬಂದ ನಟಿ ಜಾನ್ವಿ

    ಬಾಯ್ ಫ್ರೆಂಡ್ ಜೊತೆ ತಿರುಪತಿ ದರ್ಶನಕ್ಕೆ ಬಂದ ನಟಿ ಜಾನ್ವಿ

    ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಯ್ ಫ್ರೆಂಡ್  ಶಿಖರ್ ಪಹರಿಯಾ (Shikhar Paharia) ಜೊತೆ ಹೋಗಿದ್ದಾರೆ ಬಾಲಿವುಡ್ ನಟಿ ಜಾನ್ವಿ ಕಪೂರ್. ನಿನ್ನೆಯಷ್ಟೇ ಅವರು ಶಿಖರ್ ಜೊತೆ ತಿರುಪತಿಗೆ (Tirupati) ಬಂದು, ಒಟ್ಟಿಗೆ ದೇವರ ದರ್ಶನ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮದುವೆಗೂ ಮುಂಚೆ ಏನಿದು? ಎಂದು ಹಲವರು ಪ್ರಶ್ನೆಯನ್ನೂ ಮಾಡಿದ್ದಾರೆ.

    ಒಂದು ಕಡೆ ಜಾನ್ವಿ ಟೆಂಪಲ್ ರನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅವರು ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ (Shivarajkumar) ಹೀರೋಯಿನ್ ಆಗಿ ನಟಿಸಿದ ಬೆನ್ನಲ್ಲೇ ರಾಮ್ ಚರಣ್- ಶಿವಣ್ಣ ಕಾಂಬಿನೇಷನ್ ಸಿನಿಮಾಗೆ ಜಾನ್ವಿ ಕಪೂರ್ (Jhanvi Kapoor) ನಾಯಕಿಯಾಗಿದ್ದಾರೆ.

    ಬುಚ್ಚಿಬಾಬು ಸನಾ ನಿರ್ದೇಶನದ ಹೊಸ ಸಿನಿಮಾದಲ್ಲಿ ರಾಮ್ ಚರಣ್ (Ram Charan) ಜೊತೆ ಬಹುಮುಖ್ಯ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ರಾಮ್ ಚರಣ್ ಜೋಡಿಯಾಗಿ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಕಾಣಿಸಿಕೊಳ್ತಾರೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

    ಕೆಲ ತಿಂಗಳುಗಳ ಹಿಂದೆ ಬುಚ್ಚಿಬಾಬು ಸನಾ ಅವರು ಬೆಂಗಳೂರಿಗೆ ಆಗಮಿಸಿ ಶಿವಣ್ಣಗೆ ಭೇಟಿಯಾಗಿ ಕಥೆ ಹೇಳಿದ್ದರು. ಶಿವಣ್ಣಗೂ ಕಥೆ ಕೇಳಿ ಥ್ರಿಲ್ ಆಗಿ ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

     

    ರಾಮ್ ಚರಣ್ ಮತ್ತು ಶಿವಣ್ಣ ಸಾಕಷ್ಟು ವರ್ಷಗಳಿಂದ ಪರಿಚಿತರು. ಇಬ್ಬರಿಗೂ ಉತ್ತಮ ಒಡನಾಟವಿದೆ. ಸಿನಿಮಾಗಾಗಿ ಮೊದಲ ಬಾರಿಗೆ ಜೊತೆಯಾಗ್ತಿರೋದ್ರಿಂದ ಶಿವಣ್ಣ- ಚರಣ್ ಕಾಂಬೋ ನೋಡಲು ಫ್ಯಾನ್ಸ್ಗೆ ಕಾಯ್ತಿದ್ದಾರೆ.

  • ಗೆಳೆಯನ ಜೊತೆ ತಿಮ್ಮಪ್ಪನ ದರ್ಶನ ಮಾಡಿದ ಜಾಹ್ನವಿ ಕಪೂರ್

    ಗೆಳೆಯನ ಜೊತೆ ತಿಮ್ಮಪ್ಪನ ದರ್ಶನ ಮಾಡಿದ ಜಾಹ್ನವಿ ಕಪೂರ್

    ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟಿರುವ ಬಾಲಿವುಡ್ ನ ಖ್ಯಾತ ನಟಿ ಜಾಹ್ನವಿ ಕಪೂರ್ (Jahnavi Kapoor) , ಪದೇ ಪದೇ ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಒಬ್ಬರೇ ದರ್ಶನ ಮಾಡುತ್ತಿದ್ದವರು, ಈ ಬಾರಿ ಗೆಳೆಯ ಶಿಖರ್ ಪಹರಿಯಾ (Shikhar Paharia) ಜೊತೆ ತಿರುಪತಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಗೆಳೆಯನ ಜೊತೆ ಆಗಮಿಸಿದ್ದ ಅವರು, ಜೊತೆಯಾಗಿ ದರ್ಶನ ಮಾಡಿದ್ದಾರೆ.

    ಹೊಸ ವರ್ಷವನ್ನು ಅವರು ತಿರುಪತಿಗೆ ತಿಮ್ಮಪ್ಪನ ಆಶೀರ್ವಾದ ಪಡೆಯುವ ಮೂಲಕ ಆಚರಿಸಿದ್ದಾರೆ. 2024 ಅನ್ನು ಹೊಸ ಕನಸಿನೊಂದಿಗೆ ಆರಂಭಿಸುತ್ತಿದ್ದೇನೆ ಎಂದು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಗೋಲ್ಡನ್ ಕಲರ್ ಸೀರೆಯುಟ್ಟು, ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ.

     

    ಗೆಳೆಯ ಶಿಖರ್ ಪಹರಿಯಾ ಬಗ್ಗೆ ಜಾ‍ಹ್ನವಿ ಹಲವಾರು ಬಾರಿ ಮಾತನಾಡಿದ್ದಾರೆ. ಡೇಟಿಂಗ್ ವಿಚಾರ ಬಂದಾಗ, ಶಿಖರ್ ನನ್ನ ಇಡೀ ಕುಟುಂಬಕ್ಕೆ ಪರಿಚಿತರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಬಹಿರಂಗವಾಗಿಯೇ ಗೆಳೆಯನ ಜೊತೆ ದೇವಸ್ಥಾನಕ್ಕೂ ಬಂದಿದ್ದಾರೆ.

  • ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಬಂದ ನಟಿ ಜಾನ್ವಿ ಕಪೂರ್

    ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ಬಂದ ನಟಿ ಜಾನ್ವಿ ಕಪೂರ್

    ಬಾಲಿವುಡ್ ಖ್ಯಾತ ನಟಿ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ (Janhvi Kapoor) ಮತ್ತು ಶಿಖರ್ ಪಹಾರಿಯಾ (Shikhar Paharia) ಡೇಟಿಂಗ್ ವಿಚಾರ ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಅವರು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಹಲವು ಸಾಕ್ಷಿಗಳು ಸಿಗುತ್ತವೆ. ಆದರೆ, ಈ ಮಧ್ಯ ಇಬ್ಬರೂ ದೂರ ದೂರು ಆಗಿದ್ದರು ಅನ್ನುವ ಮಾತಿತ್ತು. ಇಬ್ಬರ ನಡುವೆ ಹೊಂದಾಣಿಕೆಯ ಕಾರಣದಿಂದಾಗಿ ಬ್ರೇಕ್ ಅಪ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಮತ್ತೆ ಇದೀಗ ಜೋಡಿ ಒಂದಾಗಿದೆ.

    ಜಾನ್ವಿ ಕಪೂರ್ ಮತ್ತು ಶಿಖರ್ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಒಟ್ಟಿಗೆ ವಿದೇಶ ಪ್ರಯಾಣವನ್ನೂ ಮಾಡಿದ್ದರು. ಅಲ್ಲದೇ, ಅಂಬಾನಿ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಇದೀಗ ತಿರುಪತಿಯಲ್ಲಿ ಜಾನ್ವಿ ಜೊತೆ ಶಿಖರ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ ನಟಿ ನಯನತಾರಾ

    ಬಾಯ್ ಫ್ರೆಂಡ್ ಜೊತೆ ಇಂದು ಬೆಳ್ಳಂಬೆಳಗ್ಗೆ ತಿರುಪತಿಗೆ ಬಂದಿದ್ದ ಜಾನ್ವಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇಬ್ಬರೂ ತಿರುಪತಿಗೆ ಬಂದಿರುವ ಮತ್ತು ಪೂಜೆ ಸಲ್ಲಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಬಂದಿದ್ದಾರೆ ಎಂದರೆ, ಮುಂದೊಂದು ದಿನ ಸ್ಪೆಷಲ್ ಸುದ್ದಿ ಏನಾದರೂ ಕೊಡಬಹುದಾ ಎಂದು ಅಂದಾಜಿಸಲಾಗುತ್ತಿದೆ.

    ಜಾನ್ವಿ ಸದ್ಯ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ಗೂ ಬಂದಿಳಿದಿದ್ದರು. ಈ ಸಮಯದಲ್ಲೇ ಬಾಯ್ ಫ್ರೆಂಡ್ ಕರೆಯಿಸಿಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದೂ ಹೇಳಲಾಗುತ್ತಿದೆ.