Tag: Shikhar blessed

  • ಕ್ರಿಕೆಟ್ ಮೇಲಿನ ನಿನ್ನ ಪ್ರೀತಿ ರಕ್ತಗತವಾಗಿ ಬಂದಿದೆ: ಮಗನಿಗೆ ಧವನ್ ವಿಶ್

    ಕ್ರಿಕೆಟ್ ಮೇಲಿನ ನಿನ್ನ ಪ್ರೀತಿ ರಕ್ತಗತವಾಗಿ ಬಂದಿದೆ: ಮಗನಿಗೆ ಧವನ್ ವಿಶ್

    ನವದೆಹಲಿ: ತಮ್ಮ ಮಗ ಜೊರಾವರ್ ಧವನ್ ಕೂಡ ಕ್ರಿಕೆಟಿಗನಾಗಲು ಸಿದ್ಧನಾಗಿದ್ದಾನೆ ಎಂದು ಭಾರತೀಯ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ.

    ಜೊರಾವರ್ ತಮ್ಮ ಹಾದಿಯನ್ನು ಅನುಸರಿಸಲು ಬಯಸಿದ್ದು ತುಂಬಾ ಖುಷಿ ತಂದಿದೆ ಎಂದು ಶಿಖರ್ ಧವನ್ ಹೇಳಿಕೊಂಡಿದ್ದಾರೆ. ಆದಾಗ್ಯೂ ಕ್ರಿಕೆಟ್ ಜಗತ್ತಿನಲ್ಲಿ ಮಾಜಿ ಕ್ರಿಕೆಟ್ ಆಟಗಾರರ ಮಕ್ಕಳು ತಂದೆಗಿಂತಲೂ ದೊಡ್ಡ ಹೆಸರು ಮಾಡಿದ್ದು ವಿರಳ. ಆದರೆ ಜೊರಾವರ್ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಕಲಿಯಲು ಮನಸ್ಸು ಮಾಡಿದ್ದಾರೆ.

    ಶಿಖರ್ ಧವನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಜೊರಾವರ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಜೋರಾವರ್ ತನ್ನ ಬೆನ್ನಿಗೆ ಕ್ರಿಕೆಟ್ ಕಿಟ್ ಬ್ಯಾಗ್ ಹಾಕಿಕೊಂಡು, ಮೈದಾನಕ್ಕೆ ಇಳಿಯಲು ಖುಷಿ ವ್ಯಕ್ತಪಡಿಸಿದ್ದಾರೆ.

    ‘ನಾನು ತುಂಬಾ ಇಷ್ಟಪಡುವ ವಿಷಯ ಕ್ರಿಕೆಟ್ ಅನ್ನು ಮಗನೂ ಪ್ರೀತಿಸುತ್ತಾನೆ ಎಂಬುದು ಬಹಳ ವಿಶೇಷ ತರುವ ಭಾವನೆಯಾಗಿದೆ. ಕ್ರಿಕೆಟ್ ಮೇಲಿನ ನಿನ್ನ ಪ್ರೀತಿ ರಕ್ತಗತವಾಗಿ ಬಂದಿದೆ. ಲಿಟಲ್ ಚಾಂಪಿಯನ್ ಬೆಳೆದು ತನ್ನ ಕನಸುಗಳನ್ನು ಮತ್ತು ಗುರಿಗಳನ್ನು ಸಾಧಿಸುವುದನ್ನು ನೋಡಲು ನಾನು ಕಾಯುತ್ತಿದ್ದೇನೆ. ನಿಮಗೆ ಮಾರ್ಗದರ್ಶನ ನೀಡಲು ಅಪ್ಪ ಯಾವಾಗಲೂ ಇರುತ್ತಾನೆ. ನಿನ್ನನ್ನು ಸ್ವಲ್ಪ ಪ್ರೀತಿಸುತ್ತೇನೆ’ ಎಂದು ಶಿಖರ್ ಧವನ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/B9EEMC5HNQ3/

    ಕ್ರಿಕೆಟ್‍ನಲ್ಲಿ ಮಾಜಿ ಕ್ರಿಕೆಟರ್ ಪುತ್ರರು:
    ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಇಫ್ತಿಕರ್ ಅಲಿ ಖಾನ್ ಪಟೌಡಿ ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ, ಲಾಲಾ ಅಮರನಾಥ್ ಅವರ ಪುತ್ರ ಮೊಹಿಂದರ್ ಅಮರನಾಥ್, ವಿಜಯ್ ಮಂಜ್ರೇಕರ್ ಅವರ ಪುತ್ರ ಸಂಜಯ್ ಮಂಜ್ರೇಕರ್, ಸುನೀಲ್ ಗವಾಸ್ಕರ್ ಅವರ ಪುತ್ರ ರೋಹನ್ ಗವಾಸ್ಕರ್, ಯೋಗರಾಜ್ ಸಿಂಗ್ ಅವರ ಪುತ್ರ ಯುವರಾಜ್ ಸಿಂಗ್ ಮತ್ತು ರೋಜರ್ ಬಿನ್ನಿ ಅವರ ಮಗ ಸ್ಟುವರ್ಟ್ ಬಿನ್ನಿ.

    ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸಚಿನ್ ಟೀಂ ಇಂಡಯಾ ಅಂಡರ್ 19 ತಂಡದಲ್ಲಿ ಆಡಿದ್ದಾರೆ. ರಾಹುಲ್ ದ್ರಾವಿಡ್ ಹಿರಿಯ ಪುತ್ರರಾದ ಸಮೀತ್ ದ್ವಾವಿಡ್ ಡಬಲ್ ಶತಕಗಳ ಸಾಧನೆಯನ್ನು ತೋರಿ ಮಿಂಚಿತ್ತಿದ್ದಾರೆ. ಕಿರಿಯ ಪುತ್ರ ಅನ್ವಯ್ ದ್ವಾವಿಡ್ ಕೂಡ ಕ್ರಿಕೆಟ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಶಿಖರ್ ಧವನ್ ಪುತ್ರ ಜೊರಾವರ್ ಕ್ರಿಕೆಟ್‍ನಲ್ಲಿ ಅಪ್ಪನಂತೆ ಸಾಧನೆ ಮಾಡಲು ಮುಂದಾಗಿದ್ದಾನೆ.