ಶಿವಮೊಗ್ಗ: ಬೈಕ್ (Bike) ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ (Accident) ಮದುವೆ ನಿಶ್ಚಯವಾಗಿದ್ದ ಜೋಡಿ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಬಳಿ ನಡೆದಿದೆ.
ಮೃತರನ್ನು ತಾಲೂಕಿನ ಮಟ್ಟಿಕೋಟೆ ಗ್ರಾಮದ ರೇಖಾ (20) ಮತ್ತು ತೊಗರ್ಸಿ ಸಮೀಪದ ಗಂಗೊಳ್ಳಿ ಗ್ರಾಮದ ನಿವಾಸಿ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ನಗರದ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳುವವರನ್ನು ಶಿರಾಳಕೊಪ್ಪ ಕಡೆಯಿಂದ ಕರೆದೊಯ್ಯುತ್ತಿದ್ದ ಕಾರು ಮತ್ತು ಬಸವನಗೌಡ ಮತ್ತು ರೇಖಾ ಸಂಚರಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಕಾರಿನ ಮುಂಭಾಗ ತೀವ್ರ ಹಾನಿಗೊಳಗಾಗಿದೆ. ಇದನ್ನೂ ಓದಿ: ಇನ್‌ಸ್ಟಾ ಪ್ರೇಮಿಯನ್ನ ಮದ್ವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು
ಶಿವಮೊಗ್ಗ: ವ್ಯಕ್ತಿಯೊಬ್ಬ ತನ್ನ ಪತ್ನಿಯ (Wife) ಕತ್ತಿಗೆ ಟವೆಲ್ ಬಿಗಿದು ಹತ್ಯೆಗೈದ ಘಟನೆ ಶಿಕಾರಿಪುರ (Shikaripura) ತಾಲೂಕಿನ ಅಂಬ್ಲಿಗೊಳ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಗೌರಮ್ಮ (28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಮಹಿಳೆಯ ಪತಿ ಮನೋಜ್ ಎಂದು ಗುರುತಿಸಲಾಗಿದೆ. ಆರೋಪಿ ಶನಿವಾರ ಮಧ್ಯಾಹ್ನ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಜೊತೆ ಜಗಳವಾಡಿದ್ದ. ಅಲ್ಲದೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿ ಟವೆಲ್‍ನಿಂದ ಪತ್ನಿ ಗೌರಮ್ಮಳ ಕತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಮನೋಜ್‍ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಸರ್ಕಾರಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಕ್ಷೇತ್ರದ ಹಲವು ಮುಖಂಡರೊಂದಿಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ನಮ್ಮ ಕ್ಷೇತ್ರದ ಮುಖಂಡರೊಂದಿಗೆ ಸಚಿವರನ್ನು ಭೇಟಿ ಮಾಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಎರಡು ಹೈವೇ ಟೋಲ್‌ಗಳು ಬಂದಿವೆ. ಇದರಿಂದ ಮೂರು ಜಿಲ್ಲೆಗಳ ಜನರಿಗೆ ಸಮಸ್ಯೆ, ಬಡವರಿಗೆ ತೊಂದರೆ ಆಗುತ್ತಿದೆ. ಟೋಲ್ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದೇವೆ. ಸಚಿವರು ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದಿದ್ದಾರೆ ಎಂದು ತಿಳಿಸಿದರು.
ಪ್ರತ್ಯೇಕ ಮಾತುಕತೆ:
ಈ ಭೇಟಿಯ ಸಮಯದಲ್ಲೇ ಜಾರಕಿಹೊಳಿ ಜೊತೆ ವಿಜಯೇಂದ್ರ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಮನವಿ ಸ್ವೀಕಾರದ ಬಳಿಕ ನಿಮ್ಮ ಜೊತೆಗೆ ಮಾತುಕತೆ ನಡೆಸಬೇಕು ಬನ್ನಿ ಸರ್ ಎಂದು ವಿಜಯೇಂದ್ರ ಜಾರಕಿಹೊಳಿ ಅವರನ್ನು ಕರೆದಿದ್ದಾರೆ. ಬಿವೈವಿ ಕರೆದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಶಿವಮೊಗ್ಗ: ರಸ್ತೆ ಅಪಘಾತದಲ್ಲಿ (Accident) ಯುವಕನೋರ್ವ ಮೃತಪಟ್ಟಿದ್ದು, ಅಪಘಾತದ ಸುದ್ದಿ ತಿಳಿದ ಇನ್ನೋರ್ವ ಸ್ನೇಹಿತ (Friend) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ಮೃತರನ್ನು ಆನಂದ್ (30) ಹಾಗೂ ಸಾಗರ್ (35) ಎಂದು ಗುರುತಿಸಲಾಗಿದೆ. ಶಿಕಾರಿಪುರ (Shikaripura) ತಾಲೂಕಿನ ಪುಣೇದಹಳ್ಳಿಯ ಆನಂದ್ ಹಾಗೂ ನವರಾಜ್, ಸ್ನೇಹಿತನ ಹುಟ್ಟುಹಬ್ಬಕ್ಕೆ (Birthday) ಕೇಕ್ ತರುವ ಸಲುವಾಗಿ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಶಿಕಾರಿಪುರ ಮತ್ತು ಶಿರಾಳಕೊಪ್ಪದ ನಡುವೆ ಇರುವ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಪೋ ಬಳಿ ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಆನಂದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೋರ್ವ ಯುವಕ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ವಾಣಿಜ್ಯ ತೆರಿಗೆಯ ಇಲಾಖೆಯ ಚಾಲಕ ಸಾವು
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಕ್ಷೇತ್ರ (Shikaripura Constituency) ದಿಂದ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಗೆಲ್ಲದಂತೆ ವಾಮಾಚಾರ ನಡೆಸಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ಸರ್ವೆನಂಬರ್ 36 ರಲ್ಲಿರುವ ಯಡಿಯೂರಪ್ಪ ಅವರ ಅಡಿಕೆ ತೋಟದಲ್ಲಿ ಕಾಡುಪ್ರಾಣಿಯನ್ನು ಕೊಂದು ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್.ಕೆ ರಮೇಶ್ (S k ramesh) ದೂರು ದಾಖಲಿಸಿದ್ದಾರೆ.
ತೋಟದ ಕಾಂಪೌಂಡ್ ಬಳಿ ವಾಮಾಚಾರ ನಡೆಸಿರುವ ಕಿಡಿಗೇಡಿಗಳು ಕಾಡುಪ್ರಾಣಿ ಹತ್ಯೆಗೈದು ತೋಟದಲ್ಲಿ ಹೂತು ಹಾಕಿದ್ದಾರೆ. ಸ್ಥಳದಲ್ಲಿ ಅರಿಶಿಣ, ಕುಂಕುಮ ಹೂವು ಪತ್ತೆಯಾಗಿದೆ. ವಿಜಯೇಂದ್ರ ಅವರಿಗೆ ಕೇಡು ಬಯಸಿ ವಾಮಾಚಾರ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಡಿಕೆಶಿಯೇ ಸಿಎಂ ಆಗಬೇಕು- ಓಲಾ, ಊಬರ್ ಚಾಲಕರ ಸಂಘಟನೆ ಆಗ್ರಹ
ಮೇ.11 ರಂದು ಈ ವಾಮಾಚಾರ ನಡೆದಿರುವ ಬಗ್ಗೆ ರಮೇಶ್ ಗಮನಕ್ಕೆ ಬಂದಿದೆ. ಮೇ.12 ರಂದು ದೂರು ದಾಖಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು ಸಹ ಸ್ಪಷ್ಟನೆ ನೀಡಿದ್ದು, ಪುನುಗು ಬೆಕ್ಕನ್ನ ಹೂತು ಹಾಕಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊಳ್ಳೇಗಾಲದ ಭಾಗಗಳಲ್ಲಿ ಈ ಬೆಕ್ಕುಗಳು ಪತ್ತೆಯಾಗಿದೆ ಎಂದರು.
ಶಿವಮೊಗ್ಗ: ರಾಜ್ಯದಲ್ಲಿ ಈ ಬಾರಿ ಬಿಜೆಪಿ (BJP) 125ರಿಂದ 130 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರದಲ್ಲಿ (Shikaripura) ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಸ್ವತಂತ್ರ ಸರ್ಕಾರ ನಡೆಸುತ್ತೇವೆ. ಪ್ರಧಾನಿ ಮೋದಿ (Narendra Modi) ಹಾಗೂ ಗೃಹಸಚಿವ ಅಮಿತ್ ಶಾ (Amit Shah) ಅವರಿಗೆ ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ಇದೆ. ನಾವು ಹೆಚ್ಚಿನ ಸ್ಥಾನವನ್ನು ಗೆಲ್ಲಲಿದ್ದೇವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ : ಬೊಮ್ಮಾಯಿ
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳಿಂದ ನಾವು ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡುವುದು ಸೂರ್ಯ ಚಂದ್ರರಷ್ಟೇ ಸತ್ಯ. ಎಲ್ಲರ ಆಶೀರ್ವಾದದಿಂದ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ (B.Y.Vijayendra) 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: Exit Polls : ಕಾಂಗ್ರೆಸ್‌ಗೆ ಮುನ್ನಡೆ, ಈ ಬಾರಿಯೂ ಅತಂತ್ರ?
ಶಿವಮೊಗ್ಗ: ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುವ ದಾರುಣ ಪರಿಸ್ಥಿತಿ ನನಗಾಗಲಿ, ನಮ್ಮ ತಂದೆ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗಾಗಲಿ ಹಾಗೂ ಅವರ ಕುಟುಂಬದವರಿಗಾಗಲಿ ಬಂದಿಲ್ಲ ಎಂದು ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಶಿವಮೊಗ್ಗದ (Shivamogga) ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, 2004ರ ಚುನಾವಣೆ ಸಂದರ್ಭದಲ್ಲಿ ಯಾರು ಅಭ್ಯರ್ಥಿಯೆಂಬುದೇ ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ (Shikaripura) ಸ್ವಾಭಿಮಾನಿ ಮತದಾರರು ಸುಮಾರು 46,000ಕ್ಕೂ ಅಧಿಕ ಮತಗಳ ಅಂತರದಿಂದ ಬಿಎಸ್ ಯಡಿಯೂರಪ್ಪ ಅವರನ್ನು ವಿಜಯಿಶಾಲಿಯನ್ನಾಗಿ ಮಾಡಿದ್ದರು. ನಾನು ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
ಉಪಚುನಾವಣೆ ನಡೆದ ಸಂದರ್ಭದಲ್ಲಿ ಬಿವೈ ರಾಘವೇಂದ್ರ ಸ್ಪರ್ಧೆ ಮಾಡಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿಕಾರಿಪುರಕ್ಕೆ ಬಂದು ತಾಲೂಕಿನಾದ್ಯಂತ ಪ್ರಚಾರ ಮಾಡಿತ್ತು. ಶಿಕಾರಿಪುರದಲ್ಲಿ ಹಣ, ಹೆಂಡದ ಹೊಳೆ ಹರಿಸಿದ್ದರೂ ಅದ್ಯಾವುದಕ್ಕೂ ಬೆಲೆ ಕೊಡದೆ ಕ್ಷೇತ್ರದ ಮತದಾರರು ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದರು. ಹೀಗಾಗಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ, ಅಭಿವೃದ್ಧಿ ಕೆಲಸವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿ ರಣಕಣದಲ್ಲಿ ಮಹಾರಾಷ್ಟ್ರ ನಾಯಕರಿಂದ ಮತಯಾಚನೆ!
ಇಲ್ಲಿಯವರೆಗೆ ಶಿಕಾರಿಪುರ ಬಿಎಸ್ ಯಡಿಯೂರಪ್ಪ ಅವರ ಕರ್ಮಭೂಮಿಯಾಗಿತ್ತು. ಇದು ನನ್ನ ಜನ್ಮಭೂಮಿ ಕೂಡ. ಇನ್ನು ನಾನು ಸಹ ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ. ಶಿಕಾರಿಪುರದಲ್ಲಿ ಎಲ್ಲಾ ಬೂತ್‌ಗಳಿಗೆ ಈಗಾಗಲೇ 3 ಬಾರಿ ಭೇಟಿ ಕೊಟ್ಟು ಮತಯಾಚಿಸಲಾಗಿದೆ. ಕಾರ್ಯಕರ್ತರು ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಘಟನೆ ಇದೆ. ನಿರಂತರ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ತನ್ನ ಗೆಲುವು ಸುಲಭವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಜಾರರ ಮೀಸಲಾತಿ ವಿಷಯವನ್ನು ಇಟ್ಟುಕೊಂಡು ಕೆಲವರು ಅವರಲ್ಲೇ ಒಡಕು ಸೃಷ್ಟಿಸಲು ಯತ್ನಿಸಿದರು. ಯಡಿಯೂರಪ್ಪ ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅವರ ಮನೆಗೆ ಕಲ್ಲು ಹೊಡೆಸಿದರು. ಆದರೆ ಇದರಿಂದ ಅವರ ಉದ್ದೇಶ ಈಡೇರಲಿಲ್ಲ. ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ನಡೆಯಲ್ಲಿಲ್ಲ. ಬಂಜಾರರು ಬಿಜೆಪಿ ಪರವಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ಬೆಂಗಳೂರು ರೋಡ್ ಶೋನಲ್ಲಿ ಬದಲಾವಣೆ – ಶನಿವಾರ, ಭಾನುವಾರ ಎರಡು ದಿನ ಮತ ಬೇಟೆ
ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಂತೆಯೇ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುತ್ತಿರುವ ವರುಣಾ ಯುದ್ಧ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹೌದು, ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಗಿ ವಿಜಯೇಂದ್ರ (B Y Vijayendra) ಸ್ಪರ್ಧೆ ಫಿಕ್ಸಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದರೆ ವರುಣಾ ಕ್ಷೇತ್ರ (Varuna Constituency) ದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಕಟ್ಟಿ ಹಾಕಲು ವಿಜಯೇಂದ್ರ ಸ್ಪರ್ಧೆಯ ಅಸ್ತ್ರ ಬಿಡಲು ಬಿಜೆಪಿ ಪ್ಲಾನ್ ಮಾಡಲಾಗುತ್ತಿದೆ.
2018ರಲ್ಲಿ ವರುಣಾದಲ್ಲಿ ಹೈಕಮಾಂಡ್ ಟಿಕೆಟ್ ಮಿಸ್ ಮಾಡಿತ್ತು. ಆದರೆ 2023ರಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿಸಲು ಬಿಜೆಪಿಯೇ ಆಸಕ್ತಿ ವಹಿಸಿದಂತಿದೆ. ಈಗಾಗಲೇ ಶಿಕಾರಿಪುರ (Shikaripura Constituency) ಸ್ಪರ್ಧೆಗೆ ತಯಾರಾಗ್ತಿರೋ ವಿಜಯೇಂದ್ರಗೆ ಪಕ್ಷದಿಂದ ವರುಣಾ ಆಫರ್ ಕೊಡಲಾಗುತ್ತಿದೆ. ಗುರುವಾರ ಆರ್ ಎಸ್‍ಎಸ್ ಮುಖಂಡರ ಜೊತೆಗೂ ವಿಜಯೇಂದ್ರ ಸೀಕ್ರೆಟ್ ಸಮಾಲೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು
ಮೊದಲು ಶಿಕಾರಿಪುರ ಫಿಕ್ಸ್ ಮಾಡುವಂತೆ ಹೈಕಮಾಂಡ್ ಬಳಿ ಯಡಿಯೂರಪ್ಪ (B S Yediyurappa) ಮನವಿ ಮಾಡಿದ್ದಾರೆ. ಈ ನಡುವೆ ವರುಣಾದಲ್ಲೂ ಸ್ಪರ್ಧೆಗೆ ವಿಜಯೇಂದ್ರ ರೆಡಿ ಎಂದು ಸಂದೇಶ ರವಾನಿಸಲಾಗಿದೆ. ಮುಂದಿನ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಶಿಕಾರಿಪುರದಲ್ಲಿ ಸ್ಪರ್ಧಿಸಲಿ. ಸಿದ್ದರಾಮಯ್ಯ ಕಟ್ಟಿಹಾಕಲು ವರುಣಾದಲ್ಲೂ ಕಣಕ್ಕಿಳಿಯಲಿ ಎಂದು ಬಿಎಸ್‍ವೈ ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ವರುಣಾ ಜೊತೆಗೆ ಶಿಕಾರಿಪುರಕ್ಕೂ ಟಿಕೆಟ್ ಸಿಗುತ್ತಾ ಅಂತ ವರಿಷ್ಠರು ಸ್ಪಷ್ಟ ಪಡಿಸಬೇಕಿದೆ. ವರಿಷ್ಠರ ತೀರ್ಮಾನಕ್ಕಗಿ ಬಿಎಸ್‍ವೈ ಹಾಗೂ ವಿಜಯೇಂದ್ರ ಕಾದಿದ್ದಾರೆ. ಹಾಗಿದ್ರೆ ವಿಜಯೇಂದ್ರ ಸ್ಪರ್ಧೆ ಶಿಕಾರಿಪುರನಾ..? ವರುಣಾನಾ..? ಅಥವಾ ಎರಡೂ ಕ್ಷೇತ್ರದಿಂದನಾ..? ಎಂದು ಕುತೂಹಲ ಮೂಡಿದೆ.
ಶಿವಮೊಗ್ಗ: ಬಂಜಾರ ಜನಾಂಗದ ಬಗ್ಗೆ ಯಡಿಯೂರಪ್ಪನವರಿಗೆ (B.S.Yediyurappa) ವಿಶೇಷವಾದ ಕಾಳಜಿಯಿದೆ. ಯಡಿಯೂರಪ್ಪನವರು ಬಂಜಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.
ಶಿಕಾರಿಪುರದಲ್ಲಿರುವ (Shikaripura) ಬಿಎಸ್‌ವೈ ನಿವಾಸದ ಮೇಲೆ ಕಲ್ಲುತೂರಾಟ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಹೀಗಿದ್ದರೂ ಯಡಿಯೂರಪ್ಪನವರು ಕಲ್ಲು ತೂರಾಟ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದಿದ್ದಾರೆ. ಅಲ್ಲದೇ ಬಂಜಾರ ಸಮುದಾಯದವರ ಜೊತೆಗೂ ಮಾತನಾಡುತ್ತೇನೆ ಎಂದಿದ್ದಾರೆ. ಯಾರೋ ಕೆಲವರ ತಪ್ಪು ತಿಳುವಳಿಕೆ ಹಾಗೂ ಪ್ರಚೋದನೆಯಿಂದ ಈ ಘಟನೆ ನಡೆದಿದೆ. ರೌಡಿಲಿಸ್ಟ್‌ನಲ್ಲಿರುವ ಕೆಲವು ಜನರು ಸೇರಿ ಪ್ರಕರಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಬಂಜಾರಾ, ಕೊರಚ, ಕೊರಮ, ಬೋವಿ ಶಾಶ್ವತವಾಗಿ ಎಸ್‌ಸಿ ಪಟ್ಟಿಯಲ್ಲಿರುತ್ತದೆ- ಪಿ.ರಾಜೀವ್
ಬಂಜಾರ ಸಮುದಾಯದ (Banjara Community) ಕಾರ್ಯಕರ್ತರು ಬಹಳ ದೊಡ್ಡ ರೀತಿಯಲ್ಲಿ ದೊಂಬಿ ಎಬ್ಬಿಸಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಪೊಲೀಸರ ಮೇಲೂ ಹಲ್ಲೆ ನಡೆದಿರುವುದು ನನಗೆ ನೋವಾಗಿದೆ. ಪೊಲೀಸರು ತಕ್ಷಣ ಇದನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಯಾರೂ ಕೂಡಾ ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಜೈ ಶ್ರೀರಾಮ್ ಎನ್ನದ್ದಕ್ಕೆ ಥಳಿಸಿ, ಗಡ್ಡ ಕತ್ತರಿಸಿದ್ರು
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆ ಎಲ್ಲಾ ಸಮುದಾಯಕ್ಕೆ ಅನುಕೂಲವಾಗಲಿದೆ. ಆದರೆ ಅದನ್ನು ಅಧ್ಯಯನ ಮಾಡಿ ನೋಡಬೇಕು. ಚರ್ಚೆ ಮಾಡಬೇಕು. ಕಾನೂನು ಕೈಗೆತ್ತಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುತ್ತದೆ, ಶಿಕ್ಷೆಯಾಗುತ್ತದೆ. ಇದು ಇಲ್ಲಿಗೆ ನಿಲ್ಲಲಿ ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ : ಸಿ.ಟಿ. ರವಿ