Tag: Shikar Dhawan

  • ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್

    ಕ್ರಿಕೆಟಿಗ ಶಿಖರ್ ಧವನ್ ಭೇಟಿಯಾದ ಕಿಚ್ಚ ಸುದೀಪ್

    ಸ್ಯಾಂಡಲ್‌ವುಡ್‌ನ (Sandalwood) ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep), ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ಕ್ಷಣಗಳ ಫೋಟೋ ಹಂಚಿಕೊಂಡು, ಶಿಖರ್‌ಗೆ ನಟ ಶುಭಹಾರೈಸಿದ್ದಾರೆ.

    ಅಭಿನಯ ಚಕ್ರವರ್ತಿ ಸುದೀಪ್ ಇತ್ತೀಚಿಗೆ ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Kcc) ವಿಚಾರವಾಗಿ ಸುದ್ದಿಯಲ್ಲಿದ್ದರು. ಈ ಬೆನ್ನಲ್ಲೇ ಕ್ರಿಕೆಟಿಗ ಶಿಖರ್ ಧವನ್ ಅವರನ್ನ ಸುದೀಪ್ ಭೇಟಿ ಮಾಡಿದ್ದಾರೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

     

    View this post on Instagram

     

    A post shared by KicchaSudeepa (@kichchasudeepa)

    ಎಡಗೈ ಬ್ಯಾಟ್ಸ್‌ಮೆನ್ ಶಿಖರ್ ಜೊತೆಗಿನ ಫೋಟೋ ಹಂಚಿಕೊಂಡು ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಐಪಿಎಲ್‌ಗೆ ನನ್ನ ಸಹೋದರನಿಗೆ ಶುಭಾಶಯಗಳು ಎಂದು ಕಿಚ್ಚ ಸುದೀಪ್ (Kiccha Sudeep) ವಿಶ್ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಇನ್ನೂ 2023ರ IPLಗಾಗಿ ಆಡಲು ಶಿಖರ್ ಧವನ್ ಸಿದ್ಧತೆಯಲ್ಲಿದ್ದಾರೆ. IPL ನಲ್ಲಿ ಅಬ್ಬರಿಸಲು ಶಿಖರ್ ರೆಡಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕಗೊಳ್ಳಲಿರುವ ಗಬ್ಬರ್

    ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ನೇಮಕಗೊಳ್ಳಲಿರುವ ಗಬ್ಬರ್

    ಬೆಂಗಳೂರು: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಹರಾಜಿನಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡದ ಹೊಸ ನಾಯಕನಾಗಲು ಸಿದ್ಧರಾಗಿದ್ದಾರೆ.

    ಈ ಹಿಂದೆ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ತಂಡದ ಮಾಜಿ ನಾಯಕನಾಗಿದ್ದರು. ಆದರೆ ರಾಹುಲ್ ಅವರೀಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಬಿಡ್ ಆಗಿದ್ದಾರೆ. ಈ ಹಿನ್ನೆಲೆ ಪಂಜಾಬ್ ತಂಡವು ನಾಯಕನನ್ನು ಬದಲಾಯಿಸಲು ನಿರ್ಧರಿಸಿದೆ. ಇದನ್ನೂ ಓದಿ: Ranji Trophy: ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಯಶ್ ಧುಲ್

    ಐಪಿಎಲ್ 2021 ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಕೆಎಲ್ ರಾಹುಲ್ ಬದಲಿಗೆ ಭಾರತೀಯ ಆಟಗಾರನನ್ನು ಚುಕ್ಕಾಣಿ ಹಿಡಿಯಲು ಪಂಜಾಬ್ ತಂಡವು ಉತ್ಸುಕವಾಗಿದೆ. ಅವರು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು 12 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ.

    ಮಯಾಂಕ್ ಅವರಿಗೆ ಅಷ್ಟೇನು ಹೆಚ್ಚಿನ ನಾಯಕತ್ವದ ಅನುಭವವಿಲ್ಲ. ಐಪಿಎಲ್ 2022ರ ಮೆಗಾ ಹರಾಜಿನ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪೈಪೋಟಿ ನೀಡಿ, ಧವನ್ ಅವರನ್ನು 8.25 ಕೋಟಿ ರೂ. ನೀಡಿ ಖರೀದಿಸಲು ಪಿಬಿಕೆಎಸ್ ಯಶಸ್ವಿಯಾಗಿದೆ.

    ಶಿಖರ್ ಧವನ್ ತಂಡದಲ್ಲಿರುವುದಕ್ಕೆ ಪಂಜಾಬ್ ತಂಡವು ತುಂಬಾ ಉತ್ಸುಕವಾಗಿದೆ. ಧವನ್ ಹೆಗಲ ಮೇಲೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲು ತಂಡದ ನಿರ್ವಾಹಕರು ಈಗಾಗಲೇ ಕಾದು ಕುಳಿತಿದ್ದಾರೆ. ತಂಡದ ಮುಖ್ಯ ಕೋಚ್, ಪ್ರವರ್ತಕರು ಎಲ್ಲರೂ ಪಂಜಾಬ್ ಕಿಂಗ್ಸ್ ನಾಯಕನ ಆಯ್ಕೆ ವಿಚಾರವಾಗಿ ಧವನ್ ಪರವಾಗಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ವೆಬ್‍ಸೈಟ್ ವೊಂದು ತಿಳಿಸಿದೆ. ಇದನ್ನೂ ಓದಿ: ಫುಟ್ಬಾಲ್ ಆಟಗಾರ ಸೂರಜಿತ್ ಸೇನ್‍ಗುಪ್ತಾ ಇನ್ನಿಲ್ಲ

    ಭಾನುವಾರ ಹರಾಜು ಮುಗಿದ ನಂತರ ಪಿಬಿಕೆಎಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರನ್ನು ಹೊಸ ನಾಯಕನ ನೇಮಕದ ಬಗ್ಗೆ ಕೇಳಲಾಗಿತ್ತು. ಈ ವೇಳೆ ಕುಂಬ್ಳೆ ಅವರು, ಧವನ್ ಹೆಸರನ್ನು ಬಹಿರಂಗಪಡಿಸಿದ್ದರು. ಧವನ್ ಅವರು ತಂಡಕ್ಕೆ ಉತ್ತಮ ಆಟಗಾರರಾಗಿದ್ದಾರೆ. ಅವರ ಪ್ರಬುದ್ಧತೆಯು ತಂಡದ ಇತರ ಸದಸ್ಯರ ಮೇಲೆ ಪರಿಣಾಮ ಬೀರಲಿದೆ. ತಂಡದ ಪ್ರತಿಯೊಬ್ಬ ಆಟಗಾರರು ಈ ಅನುಭವಿ ಆಟಗಾರನಿಂದ ಕಲಿಯಬಹುದು. ಅವರು ತಂಡಕ್ಕೆ ಎಲ್ಲ ರೀತಿಯಲ್ಲೂ ಪರಿಪೂರ್ಣ ನಾಯಕರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಪುಣೆ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಶಿಖರ್‌ ಧವನ್‌ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಸಂತೋಷಗೊಂಡು ಸಂಭ್ರಮಿಸಿ ನಮಸ್ಕರಿಸಲು ಕಾರಣ ಶಿಖರ್‌ ಧವನ್‌ ಹಿಡಿದ ಕ್ಯಾಚ್‌. ಅಪಾಯಕಾರಿ ಆಟಗಾರ ಬೆನ್‌ಸ್ಟೋಕ್ಸ್‌ ಅವರ ಕ್ಯಾಚ್‌ ಹಿಡಿದಿದ್ದಕ್ಕೆ ಸಂಭ್ರಮಿಸಿ ಪಾಂಡ್ಯ ನಮಸ್ಕರಿಸಿದ್ದಾರೆ.

    https://twitter.com/viratian18183/status/1376163494203023367

    ಕ್ಯಾಚ್‌ ಡ್ರಾಪ್‌:
    ಭುವನೇಶ್ವರ್‌ ಕುಮಾರ್‌ ಎಸೆದ 5ನೇ ಓವರಿನಲ್ಲಿ 14 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ ಬಲವಾಗಿ ಬೀಸಿದ್ದರು. ಈ ವೇಳೆ ಮಿಡ್‌ ಆಫ್‌ನಲ್ಲಿದ್ದ ಪಾಂಡ್ಯ ಕ್ಯಾಚ್‌ ಹಿಡಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಾಂಡ್ಯ ಸುಲಭವಾಗಿ ಹಿಡಿಯಬೇಕಿದ್ದ ಕ್ಯಾಚ್‌ ಕೈ ಚೆಲ್ಲಿದರು. ಇದನ್ನು ನೋಡಿ ಆಟಗಾರರ ಜೊತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಟೀಂ ಇಂಡಿಯಾ ಸದಸ್ಯರು ಶಾಕ್‌ ಆದರು.

    https://twitter.com/j_dhillon7/status/1376155566045757440

    ಕಷ್ಟದ ಕ್ಯಾಚ್‌ ಕೈ ಚೆಲ್ಲಿದರೆ ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ ಬಿಟ್ಟದ್ದಕ್ಕೆ ಆಟಗಾರ ಕೈ ತಲೆ ಮೇಲೆ ಹೋಗಿತ್ತು.

    ಕ್ರೀಸಿನಲ್ಲಿ ತಳವುರಲು ಆರಂಭಿಸಿದ್ದ ಬೆನ್‌ಸ್ಟೋಕ್ಸ್‌ ನಟರಾಜ್‌ ಎಸೆದ ಇನ್ನಿಂಗ್ಸ್‌ನ 11ನೇ ಓವರಿನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಬಾಲ್‌ ನೇರವಾಗಿ ಸ್ಕ್ವಾರ್‌ ಲೆಗ್‌ನಲ್ಲಿದ್ದ ಶಿಖರ್‌ ಧವನ್‌ ಕೈ ಸೇರಿತು. ಈ ಮೂಲಕ 35 ರನ್‌(39 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ಸ್ಟೋಕ್ಸ್‌ ಔಟಾದರು. ಸ್ಟೋಕ್ಸ್‌ ಔಟಾಗುತ್ತಿದ್ದಂತೆ ಪಾಂಡ್ಯ ಕೈ ಮುಗಿದು, ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು.

  • ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಪುಣೆ: ಮೊದಲ ಏಕದಿನ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ಅಬ್ಬರಿಸಿದ್ದಾರೆ. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೊನೆಯಲ್ಲಿ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ಇಂಗ್ಲೆಂಡಿಗೆ 318 ರನ್‌ಗಳ ಗುರಿಯನ್ನು ನೀಡಿದೆ.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

     

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮಾರ್ಕ್‌ ವುಡ್‌ ಎಸೆದ 48ನೇ ಓವರಿನಲ್ಲಿ 28 ರನ್‌ ಬಂದರೆ ನಂತರದ ಎರಡು ಓವರಿನಲ್ಲಿ 12 ರನ್‌, 13 ರನ್‌ ಬಂದಿತ್ತು.

    ಭಾರತದ ಪರ ರೋಹಿತ್‌ ಶರ್ಮಾ 28 ರನ್‌, ಶಿಖರ್‌ ಧವನ್‌ 98 ರನ್(106‌ ಎಸೆತ, 11 ಬೌಂಡರಿ, 2 ಸಿಕ್ಸರ್‌) ನಾಯಕ ಕೊಹ್ಲಿ 56 ರನ್‌( 60 ಎಸೆತ, 6 ಬೌಂಡರಿ) ಹೊಡೆದು ಔಟಾದರು. ಮೊದಲ ವಿಕೆಟಿಗೆ ಧವನ್‌, ರೋಹಿತ್‌ 64 ರನ್‌, ಎರಡನೇ ವಿಕೆಟಿಗೆ ಶಿಖರ್‌ ಧವನ್‌, ಕೊಹ್ಲಿ 105 ರನ್‌ಗಳ ಜೊತೆಯಾಟವಾಡಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ