Tag: Shiggoan

  • ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಹಾವೇರಿ: ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು ಎಂದು ಶಿಗ್ಗಾಂವಿಯಲ್ಲಿ (Shiggaon) ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಈ ಬಗ್ಗೆ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಮಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಎಷ್ಟು ಧೈರ್ಯ ಮಾಡಬಹುದು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು. 10 ಗಂಟೆಗೆ ಸಿದ್ದರಾಮಯ್ಯ ತನಿಖೆಗೆ ಹೋಗಿದ್ದಾರೆ. ಎರಡು ತಾಸಿಗೆ ವಿಚಾರಣೆ ಮುಗಿದು ಹೋಗುತ್ತದೆ. ಇದು ಪೂರ್ವನಿರ್ಧಾರಿತವಾಗಿದೆ. ಈ ವಿಚಾರಣೆಯಿಂದ ಸತ್ಯ ಹೊರಗೆ ಬರುವುದು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

    ಇವರೇ ಸ್ಕ್ರಿಪ್ಟ್ ಬರೆದುಕೊಟ್ಟು ಇವರೇ ಉತ್ತರ ಕೊಟ್ಟು ಹೀಗೇ ಕೇಳಬೇಕು ಎಂದು ಇವರೇ ಹೇಳಿಕೊಟ್ಟಿದ್ದಾರೆ. ಇಷ್ಟೇ ಪ್ರಶ್ನೆ ಕೇಳ್ತಾರೆ, ಇಷ್ಟೇ ಸಮಯಕ್ಕೆ ಮುಗಿಯುತ್ತದೆ ಎಂಬುದು ಮೊದಲೇ ಸಿದ್ದರಾಮಯ್ಯಗೆ ಗೊತ್ತಾ? ಇದೆಲ್ಲ ಸ್ಟೆಜ್ ಮ್ಯಾನೇಜ್ಡ್ ವಿಚಾರಣೆ. ನಿಮ್ಮನ್ನು ಕಂಡು ಲೋಕಾ ಅಧಿಕಾರಿಗಳಿಗೆ ಭಯ ಬಂದಿರಬೇಕು. ಎಲ್ಲರ ಬಗ್ಗೆಯೂ ಮಾತನಾಡುವ ಸಿಎಂ ನೀವು ಮಾತ್ರ ಹೇಗೆ ಅಧಿಕಾರದಲ್ಲಿ ಇರ್ತೀರಿ? ನಾಗೇಂದ್ರನನ್ನು ಜೈಲಿಗೂ ಕಳಿಸಿದ್ರಿ, ರಾಜೀನಾಮೆ ಪಡೆದು ಕೆಳಗೆ ಇಳಿಸಿದ್ದೀರಿ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

    ಲೋಕಾ ಅಧಿಕಾರಿಗಳು ನಿಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯ ಇಲ್ಲ. ವಿಚಾರಣೆಗೆ ಬರಲಿಲ್ಲ ಅಂತ ಅನಿಸಿಕೊಳ್ಳಬಾರದು ಎಂದು ಹೋಗಿದ್ದಾರೆ. ಇದು ಪೂರ್ವನಿರ್ಧಾರಿತ ಎಂದು ನಿಮ್ಮ ಟಿಪಿ ನೋಡಿದರೆ ಗೊತ್ತಾಗುತ್ತದೆ. ಕೋರ್ಟ್‌ಗೂ ನಾವು ಹೋಗುತ್ತೇವೆ. ಸಿಎಂ ದೋಖಾ ಮಾಡುತ್ತಿದ್ದಾರೆ, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Mysuru| ಬಿಜೆಪಿಯಿಂದ ಸಿಎಂ ವಿರುದ್ಧ ‘ಗೋ ಬ್ಯಾಕ್’ ಚಳುವಳಿ- ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

    ಈ ಹಿಂದೆ ಸಿಎಂ ಆಗಿದ್ದ ಬೊಮ್ಮಾಯಿ (Basavaraj Bommai) ಮೇಲೆ ಹಿಂದೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಪೇ ಸಿಎಂ ಇವತ್ತಿಗೂ ಸಾಬೀತು ಮಾಡುವುದಕ್ಕೆ ಆಗಲಿಲ್ಲ. ಅಬಕಾರಿ ಇಲಾಖೆಯಲ್ಲಿ ಲಂಚದ ಆರೋಪ ಕೇಳಿ ಬಂದಿದೆ. ನಮ್ಮ ಮೇಲಿನ ಆರೋಪ ಸತ್ಯವಾದರೆ ಈಗಿನ ಆರೋಪ ಕೂಡ ಸತ್ಯವೇ. ಅಬಕಾರಿ ಇಲಾಖೆ ಸಚಿವರ ಕೆಲಸ ಏನು? ಅವರೇನಾದರೂ ಬಾಟಲ್ ಲೆಕ್ಕ ಹಾಕ್ತಾರಾ? ಸಚಿವರಿಗೆ ಕೆಲಸ ಇಲ್ಲ ಅಂದಮೇಲೆ ಸಚಿವರು ಯಾಕೆ? ವಸೂಲಿ ಮಾಡುವುದೇ ಸಚಿವರ ದಂಧೆಯಾ? ಕಾಂಗ್ರೆಸ್‌ನವರು (Congress) ಇದನ್ನು ಒಪ್ಪಿಕೊಳ್ಳಬೇಕು. ವಾಲ್ಮೀಕಿ ನಿಗಮದಲ್ಲೂ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಎಸ್.ಡಿ.ಎ ಆತ್ಮಹತ್ಯೆ ತೀವ್ರ ತನಿಖೆ ಆಗಬೇಕು. ಸಚಿವರು ತಪ್ಪಿತಸ್ಥರಾದರೆ ಅವರನ್ನೂ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: MUDA Case; ಸತತ 2 ಗಂಟೆ ವಿಚಾರಣೆ; ಸಿಎಂ ಸಿದ್ದರಾಮಯ್ಯಗೆ 40 ಕ್ಕೂ ಹೆಚ್ಚು ಪ್ರಶ್ನೆಗಳು

  • ಉಪಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ: ಸಚಿವ ಲಾಡ್

    ಉಪಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ: ಸಚಿವ ಲಾಡ್

    ಧಾರವಾಡ: ಶಿಗ್ಗಾಂವಿ, ಸಂಡೂರು (Sandur) ಹಾಗೂ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

    ಧಾರವಾಡದಲ್ಲಿ 9Dharawada) ಮಾತನಾಡಿದ ಅವರು, ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಭಾನುವಾರ ಸಿಎಂ ಅವರು ಸಭೆ ಕರೆದು ಸಚಿವರು ಹಾಗೂ ಡಿಸಿಎಂ ಜೊತೆ ಚರ್ಚೆ ಮಾಡಿದ್ದಾರೆ. ನಾವೆಲ್ಲ ನಮ್ಮ ಅಭಿಪ್ರಾಯ ಮಂಡನೆ ಮಾಡಿದ್ದೇವೆ. ಇವತ್ತು ಅಥವಾ ನಾಳೆ ಹೈಕಮಾಂಡ್‌ನಿಂದ ಅಂತಿಮ ತೀರ್ಮಾನ ಬರಲಿದೆ. ಶಿಗ್ಗಾಂವಿ ಟಿಕೆಟ್ ಹಂಚಿಕೆಯಲ್ಲೂ ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೊನೆಯದಾಗಿ ಹೈಕಮಾಂಡ್‌ನಿಂದ ಏನು ತೀರ್ಮಾನ ಬರುತ್ತದೋ ಅದುವೇ ಅಂತಿಮ ಎಂದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಯೋಗೇಶ್ವರ್‌ ಕಣಕ್ಕ

    ಸಿ.ಪಿ.ಯೋಗೇಶ್ವರ್ ( C P Yogeshwar) ಅವರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಭಾಗದಲ್ಲಿ ನನಗೆ ಜಾಸ್ತಿ ಮಾಹಿತಿ ಇಲ್ಲ. ನಮ್ಮ ಅಧ್ಯಕ್ಷರಿಗೆ ಹಾಗೂ ಸಿಎಂಗೆ ಅಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಹೈಕಮಾಂಡ್ ಜೊತೆ ಮಾತನಾಡಿ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನನಗೆ ಹೆಚ್ಚಿಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

    ಈ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲಿ( Channapatna) ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾವೇ ಲೀಡ್ ಆಗಿದ್ದೇವೆ. ಶಿಗ್ಗಾಂವಿಯಲ್ಲೂ ಲೀಡ್ ಆಗಿದ್ದೇವೆ. ಸಂಡೂರಿನಲ್ಲೂ ಸಹ ಎರಡು ಬಾರಿ ಲೀಡ್ ಆಗಿದ್ದೇವೆ. ಹೀಗಾಗಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಉಗ್ರದಾಳಿಯ ಹೊಣೆ ಹೊತ್ತ ಪಾಕ್ ಟಿಆರ್‌ಎಫ್ ಸಂಘಟನೆ

  • ಸಂಡೂರು ಬಿಜೆಪಿಯಲ್ಲಿ ಬಂಡಾಯದ ಹೊಗೆ – ಸಂಧಾನಕ್ಕೂ ಬಗ್ಗದ ಟಿಕೆಟ್ ವಂಚಿತ ದಿವಾಕರ್

    ಸಂಡೂರು ಬಿಜೆಪಿಯಲ್ಲಿ ಬಂಡಾಯದ ಹೊಗೆ – ಸಂಧಾನಕ್ಕೂ ಬಗ್ಗದ ಟಿಕೆಟ್ ವಂಚಿತ ದಿವಾಕರ್

    – ಶಿಗ್ಗಾಂವಿಯಲ್ಲಿ ಯಾರಿಗೆ ಕಾಂಗ್ರೆಸ್ ಟಿಕೆಟ್?

    ಬಳ್ಳಾರಿ/ಹಾವೇರಿ: ಗಣಿನಾಡು ಬಳ್ಳಾರಿಯ (Ballari) ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ. ಈಗಾಗಲೇ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿರುವ ಬಿಜೆಪಿ (BJP) ಅಧಿಕೃತವಾಗಿ ಪ್ರಚಾರ ಮಾಡಲು ಶುರುಮಾಡಿದೆ. ಅಭ್ಯರ್ಥಿ ಬಂಗಾರು ಹನುಮಂತು ಜೊತೆ ಜನಾರ್ದನ ರೆಡ್ಡಿ ಪ್ರಚಾರದ ಕಣಕ್ಕಿಳಿದ್ದಿದ್ದಾರೆ. ಈ ಮಧ್ಯೆ ಬಿಜೆಪಿ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುವಂತೆ ಕಾಣುತ್ತಿದೆ.

    ಸಂಡೂರಿನಲ್ಲಿ (Sandur) ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದ ಕೆಎಸ್ ದಿವಾಕರ್‌ಗೆ (K S Divakar) ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಕೆಆರ್‌ಪಿಪಿ ಪಕ್ಷ ಸೇರಿ ಚುನಾವಣೆಗೆ ನಿಂತು 31,000 ಮತಗಳನ್ನ ಪಡೆದು ಪರಭಾವಗೊಂಡಿದ್ದರು. ಚುನಾವಣೆಯಲ್ಲಿ ಸೋತರೂ ಸಂಡೂರು ಕ್ಷೇತ್ರದಲ್ಲಿ ದಿವಾಕರ್ ಸಕ್ರಿಯವಾಗಿದ್ದರು. ಇದನ್ನೂ ಓದಿ: ಭಾರೀ ಮಳೆ; ಬೆಂಗಳೂರಿನ ಶಾಲೆಗಳಿಗೆ ಇಂದು ರಜೆ ಘೋಷಣೆ

    ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಸೇರಿದ ಬಳಿಕ ಕೆಎಸ್ ದಿವಾಕರ್ ಕೂಡ ಬಿಜೆಪಿಗೆ ಸೇರಿದರು. ಬಳಿಕ ಸಂಡೂರಲ್ಲಿ ತಾನೆ ಮುಂದಿನ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಕೂಡ ಮಾಡಿಕೊಂಡಿದ್ದರು. ಈ ಬಾರಿಯು ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿ ದಿವಾಕರ್ ಅಸಮಾಧಾನಗೊಂಡಿದ್ದಾರೆ. ಜನಾರ್ದನ ರೆಡ್ಡಿ ಮನೆಯಲ್ಲಿ ಸಂಧಾನ ಸಭೆ ಮಾಡಿದರೂ ದಿವಾಕರ್ ಅಸಮಾಧಾನಗೊಂಡಿದ್ದಾರೆ. ನನ್ನ ವಿಚಾರದಲ್ಲಿ ಡಬಲ್ ಗೇಮ್ ಮಾಡಿದರು ಎಂದು ಆಕ್ರೋಶ ಹೊರಹಾಕಿದ್ದಾರೆ.

    ಶಿಗ್ಗಾಂವಿ (Shiggoan) ಕ್ಷೇತ್ರದಲ್ಲಿ ತಮ್ಮ ಪುತ್ರ ಭರತ್‌ರನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಸಂಸದ ಬೊಮ್ಮಾಯಿ ತೊಡೆ ತಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಸ್ವಲ್ಪ ವಿಚಲಿತವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಪೇಚಾಡುವಂತಾಗಿದೆ. ಸಮರ್ಥ ಹಾಗೂ ಒಮ್ಮತದ ಅಭ್ಯರ್ಥಿ ಆಯ್ಕೆ ಆಡಳಿತಾರೂಢ ಕಾಂಗ್ರೆಸ್‌ಗೆ ಸವಾಲಾಗಿದೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಲಿಂಗಾಯತ ಹಾಗೂ ಮುಸ್ಲಿಂ ಸಮಾಜದ ಟಿಕೆಟ್ ಆಕಾಂಕ್ಷಿಗಳ ನಡುವೆ ಬಹುದೊಡ್ಡ ಪೈಪೋಟಿ ನಡೆದಿದೆ. ಸಿಎಂ ಸಿದ್ದರಾಮಯ್ಯ ( CM Siddaramaiah) ಹಾಗೂ ಡಿಕೆಶಿ ಭೇಟಿಯಾಗಿ ಟಿಕೆಟ್‌ಗಾಗಿ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆ ಮಾತ್ರ ಇನ್ನೂ ಫೈನಲ್ ಆಗಿಲ್ಲ. ಇದನ್ನೂ ಓದಿ: ಚನ್ನಪಟ್ಟಣಕ್ಕೆ ಡಿಕೆ ಸುರೇಶ್, ಸಂಡೂರಿಗೆ ಅನ್ನಪೂರ್ಣ – ಶೀಘ್ರವೇ ಅಧಿಕೃತ ಪ್ರಕಟಣೆ ಸಾಧ್ಯತೆ

    ಬಿಜೆಪಿ ಲಿಂಗಾಯತರಿಗೆ ಮತ್ತೆ ಮಣೆ ಹಾಕಿ ಭರತ್ ಬೊಮ್ಮಾಯಿಯನ್ನು (Bharath Bommai) ಕಣಕ್ಕಿಳಿಸಿದೆ. ಹೀಗಾಗಿ ಲಿಂಗಾಯತರಿಗೇ ಆದ್ಯತೆ ನೀಡಿ ಎಂಬ ಆಗ್ರಹ ಕಾಂಗ್ರೆಸ್‌ನಲ್ಲಿ ಕೇಳಿ ಬಂದಿದೆ. ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ್ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ವಿನೋದ್ ಅಸೂಟಿ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಇಂದು ಸಂಜೆ ಅಥವಾ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ – 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್