Tag: Shiggaon By Elections

  • ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ

    ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ

    ಹಾವೇರಿ: ಶಿಗ್ಗಾಂವಿ (Shiggaon) ಕ್ಷೇತ್ರದ ಉಪಚುನಾವಣೆ (By Election) ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಬಿಜೆಪಿ (BJP) ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ. ಭಾನುವಾರ ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಮನೆಮನೆಗೆ ತೆರಳಿ ಭರತ್ ಬೊಮ್ಮಾಯಿ ಮತಯಾಚನೆ ಮಾಡಿದರು. ಅಲ್ಲದೆ ತೆಗ್ಗಿಹಳ್ಳಿ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

    ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕೊಟ್ಟಿರೋದು ಟೆಂಪರರಿ ಗ್ಯಾರಂಟಿ. ನಾವು ಪರ್ಮನೆಂಟ್ ಗ್ಯಾರಂಟಿ ನೀಡಿದ್ದೇವೆ. ನಮ್ಮ ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ. ಇದು ಪರ್ಮನೆಂಟ್ ಗ್ಯಾರಂಟಿ. ಅದನ್ನ ಯಾರೂ ಕಿತ್ತುಕೊಳ್ಳೋಕೆ ಆಗಲ್ಲ. ಸರ್ಕಾರ ಅಧಿಕಾರಕ್ಕೆ ಬರಲು ಟೆಂಪರರಿ ಗ್ಯಾರಂಟಿ ನೀಡಿದೆ. ರೈತರಿಗೆ ನೀರಾವರಿ, ಕುಡಿಯಲು ನೀರು ಕೊಟ್ಟಿದ್ದೇವೆ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡೋದು ಎಂದರು. ಇದನ್ನೂ ಓದಿ: ಶಕ್ತಿ ಯೋಜನೆಯಲ್ಲೂ ದೋಖಾ? – ಮಹಿಳೆಯರ ಫ್ರೀ ಬಸ್ ಪ್ರಯಾಣ ಟಿಕೆಟ್ ಪುರುಷರಿಗೆ ವಿತರಣೆ

    ಹಿಂದೆ 2018, 2023ರಲ್ಲಿ ತಂದೆಯವರ ಪರ ಪ್ರಚಾರ ಮಾಡಿದ್ದೆ. ಎಲ್ಲಾ ಊರು, ಪಟ್ಟಣ ಓಡಾಡಿದ್ದೆ. ಈಗ ನನಗೆ ಆಶೀರ್ವಾದ ಮಾಡಿ ಎಂದು ಜನರನ್ನು ಕೇಳುತ್ತಿದ್ದೇನೆ. ತಂದೆಯವರ ಮೂರ್ನಾಲ್ಕು ಕನಸಿದೆ, ಅದನ್ನು ನನಸು ಮಾಡುವೆ. ಯುವಕನಾಗಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡುವೆ. ಇಲ್ಲಿ ಇನ್ನಷ್ಟು ಕೈಗಾರಿಕೆ ತರುವ ಉದ್ದೇಶ ಇದೆ. ಕಾರ್ಯಕರ್ತರು, ಎಲ್ಲಾ ಸಮುದಾಯದ ಜನರು ಉತ್ತಮವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ತಂದೆಯ ಕೆಲಸಗಳ ಬಗ್ಗೆ ಜನ ಹೇಳೋದು ಕೇಳಿ ಹೆಮ್ಮೆ ಆಗಿದೆ. ತಂದೆಯ ಮಾರ್ಗದರ್ಶನದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮದ್ಯ ಸೇವನೆಗೆ ಹಣ ನೀಡದ್ದಕ್ಕೆ ತಂದೆಯನ್ನೇ ಕೊಲೆಗೈದ ಪುತ್ರ

  • ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

    ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ 16.17 ಕೋಟಿ ಆಸ್ತಿ ಒಡೆಯ; ಆದ್ರೂ ಸ್ವಂತ ಕಾರು ಇಲ್ಲ!

    ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್‌ ಬೊಮ್ಮಾಯಿ (Bharath Bommai) ಗುರುವಾರ ನಾಮಪತ್ರ ಸಲ್ಲಿಸಿದ್ದು, 16.17 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    ಶಿಗ್ಗಾಂವಿ (Shiggaon) ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಘೋಷಿಸಿಕೊಂಡಿದ್ದರು. ಭರತ್‌ 2.03 ಲಕ್ಷ ನಗದು ಹಣ ಹೊಂದಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 9 ಕೆಜಿಗೂ ಅಧಿಕ ಚಿನ್ನ ಜಪ್ತಿ – ಇಬ್ಬರು ಪ್ರಯಾಣಿಕರು ಅರೆಸ್ಟ್‌

    ವಿವಿಧ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 1.19 ಕೋಟಿ ರೂ. ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ 1.74 ಲಕ್ಷ, ಖಾಸಗಿ ಕಂಪನಿಗಳಲ್ಲಿ 50,000, ಪಾಲುದಾರಿಕೆಯಲ್ಲಿ 1.23 ಕೋಟಿ ರೂ. ಬಂಡವಾಳ ತೊಡಗಿಸಿದ್ದಾರೆ. ಗೋಲ್ಡ್‌ ಚಿಟ್‌ ಫಂಡ್‌ನಲ್ಲಿ 70 ಸಾವಿರ, ಮ್ಯೂಚುವಲ್‌ ಫಂಡ್‌ನಲ್ಲಿ 10.20 ಲಕ್ಷ ಹೂಡಿಕೆ ಮಾಡಿದ್ದಾರೆ. 81.61 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿರುವ ಇವರ ಬಳಿ ಯಾವುದೇ ವಾಹನವಿಲ್ಲ. ಇನ್ನಿತರ ಆದಾಯ, ಬಡ್ಡಿ ಸೇರಿದಂತೆ ಒಟ್ಟು 3.79 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

    ಇನ್ನು ಬೆಂಗಳೂರಿನ ಆರ್‌.ಟಿ ನಗರದಲ್ಲಿ ಒಂದು ವಾಸದ ಮನೆ, ಬೆಂಗಳೂರಿನ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 5.50 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದನ್ನೂ ಓದಿ: ಬೃಹತ್ ರೋಡ್ ಶೋ ನಡೆಸಿ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ನಾಮಪತ್ರ ಸಲ್ಲಿಕೆ

    ಪತ್ನಿ ಇಬ್ಬನಿ ಬಳಿ 1.43 ಲಕ್ಷ ನಗದು ಹಣ, ವಿವಿಧ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಖಾತೆಗಳಲ್ಲಿ 56.32 ಲಕ್ಷ ಹೊಂದಿದ್ದಾರೆ. ವಿವಿಧ ಕಂಪನಿಗಳಲ್ಲಿ 33.75 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಪಾಲುದಾರಿಕೆ ವ್ಯವಹಾರದಲ್ಲಿ 31.12 ಲಕ್ಷ ತೊಡಗಿಸಿದ್ದಾರೆ. ಇವರ ಬಳಿ ಮಾರುತಿ ಸ್ವಿಫ್ಟ್‌ ಕಾರು ಇದ್ದು, 8.16 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 3.64 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮದಲ್ಲಿ ಒಂದು ಸೈಟ್‌, ಕೆಂಗೇರಿಯಲ್ಲಿ ಕೆಎಚ್‌ಬಿ ನಿವೇಶನ ಹಾಗೂ ಸೆಂಚುರಿ ಎಥೋಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಸೇರಿದಂತೆ 2.83 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪುತ್ರನ ಬಳಿ 40.47 ಲಕ್ಷ ಮೌಲ್ಯದ ಚರಾಸ್ತಿಯಿದೆ. ಒಟ್ಟು ಭರತ್‌ ಬೊಮ್ಮಾಯಿ ಅವರು 16.17 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.