Tag: shigganvi

  • ಬೈಕ್‍ಗಳ ಮುಖಾಮುಖಿ ಡಿಕ್ಕಿ: ಸ್ಥಳೀಯರು ಮಾನವೀಯತೆ ಮೆರೆದ್ರೂ ಉಳಿಯಲಿಲ್ಲ ಬೈಕ್ ಸವಾರ

    ಬೈಕ್‍ಗಳ ಮುಖಾಮುಖಿ ಡಿಕ್ಕಿ: ಸ್ಥಳೀಯರು ಮಾನವೀಯತೆ ಮೆರೆದ್ರೂ ಉಳಿಯಲಿಲ್ಲ ಬೈಕ್ ಸವಾರ

    ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೆಂಗಾಪುರ ಗ್ರಾಮದ ಬಳಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳೀಯರು ಮಾನವೀಯತೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ ಸವಾರ ಮೃತಪಟ್ಟಿದ್ದಾರೆ.

    ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ನಿವಾಸಿ ಮಹಮದ್ ಶರೀಫ್ (35) ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ. ಶರೀಫ್ ಅವರು ತಮ್ಮ ಮಕ್ಕಳ ಜೊತೆ ಹಲಗೂರ ಗ್ರಾಮದ ದರ್ಗಾಗೆ ಹೋಗುವಾಗ ಅಪಘಾತ ಸಂಭವಿಸಿದೆ.

    ಶರೀಫ್ ಅವರ ಮಕ್ಕಳಾದ ರೋಶನ್(8), ಖಾದರ್ ಅಲಿ(7), ಮತ್ತೊಬ್ಬ ಬೈಕ್ ಸವಾರ ಸೇರಿದಂತೆ ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರು ಪೊಲೀಸರ ಸಹಾಯದಿಂದ ಅಂಬುಲೆನ್ಸ್ ಮುಖಾಂತರ ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಬಗ್ಗೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.