Tag: Shidlaghatta

  • ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ: ಮಾಜಿ ಜೆಡಿಎಸ್ ಶಾಸಕನಿಗೆ ಜೀವಬೆದರಿಕೆ

    ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ: ಮಾಜಿ ಜೆಡಿಎಸ್ ಶಾಸಕನಿಗೆ ಜೀವಬೆದರಿಕೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ರಾಜಣ್ಣ ಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾನೆ.

    ಮಾಜಿ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ನಿಂದನೆ ಮಾಡಿದ್ದಾನೆ. ಕಾಂಗ್ರೆಸ್ ಪಕ್ಷದವರಿಂದ ಹಣ ತಿಂದು ಜೆಡಿಎಸ್ ಪಕ್ಷವನ್ನ ಹಾಳು ಮಾಡಿಬಿಟ್ಟೆ ಎಂದು ಏಕ ವಚನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ತನ್ನ ಹೆಸರಾಗಲಿ, ಊರಾಗಲಿ ಹೇಳದ ಆ ವ್ಯಕ್ತಿ ಒಂದೇ ನಂಬರಿನಿಂದ ನಾಲ್ಕೈದು ಬಾರಿ ಕರೆ ಮಾಡಿದ್ದು ನಾನು ನಿನಗೆ ಮತ ನೀಡಿದ ಮತದಾರ ಎಂದು ಹೇಳಿಕೊಂಡಿದ್ದಾನೆ.

    ನವೆಂಬರ್ 2 ರಂದು ಮೊದಲ ಬಾರಿಗೆ ಕರೆ ಮಾಡಿ ನಿಂದಿಸಿದ್ದ ವ್ಯಕ್ತಿ ಮತ್ತೆ ನವಂಬರ್ 3 ರಂದು ಮತ್ತೆ ಕರೆ ಮಾಡಿದ್ದಾನೆ. ಅಲ್ಲದೇ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಹಾಡಹಗಲೇ ನಿನ್ನ ಮನೆಗೆ ಬಂದು ತಲೆ ಕಡಿಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೆಚ್ಚೆಂದರೆ ನೀನು ನನ್ನನ್ನು ಜೈಲಿಗೆ ಕಳುಹಿಸುತ್ತೀಯಾ ಅಷ್ಟೆ ತಾನೇ ಎಂದು ಹೇಳಿದ್ದಾನೆ.

    ಮಾಜಿ ಶಾಸಕ ಎಂ.ರಾಜಣ್ಣ ಎಸ್ಪಿ ಕಾರ್ತಿಕ್‍ರೆಡ್ಡಿ ಅವರನ್ನು ಭೇಟಿ ಮಾಡಿ ಅನಾಮಧೇಯ ಮೊಬೈಲ್ ಕರೆಯ ಆಡಿಯೋ ರೆಕಾರ್ಡ್ ನೀಡಿದ್ದು, ಎಸ್ಪಿ ಕಾರ್ತಿಕ್‍ರೆಡ್ಡಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎಂ ರಾಜಣ್ಣ ಮೂರು ತಿಂಗಳ ಹಿಂದೆ ಶ್ರೀಕೃಷ್ಣ ಜಯಂತಿಯಂದು ನಡೆದ ಶ್ರೀಕೃಷ್ಣನ ಉತ್ಸವದಲ್ಲಿ ತಮಟೆ ಏಟಿಗೆ ಕುಣಿದಾಗಲೂ ಸಹ ನನಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಬೈದಿದ್ದ. ಆಗ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಅದೇ ರೀತಿ ಬೆದರಿಕೆ ಕರೆ ಮಾಡುತ್ತಿದ್ದು, ಈಗಾಲಾದರೂ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Q5Zga39IWNI

  • ಶಿಡ್ಲಘಟ್ಟ ಶಾಸಕ ರಾಜಣ್ಣಗೆ ಲೋ ಬಿಪಿ ಆಸ್ಪತ್ರೆಗೆ ದಾಖಲು

    ಶಿಡ್ಲಘಟ್ಟ ಶಾಸಕ ರಾಜಣ್ಣಗೆ ಲೋ ಬಿಪಿ ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಅಭ್ಯರ್ಥಿ ಎಂ.ರಾಜಣ್ಣ ಅವರು ಲೋ ಬಿಪಿ (ರಕ್ತದ ಒತ್ತಡ ಕಡಿಮೆ)ಆಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾಜ್ಯದಾದ್ಯಂತ ಮತದಾನ ಚುರುಕುಗೊಂಡಿದೆ. ಆದರೆ, ಶಿಡ್ಲಗಟ್ಟ ಮತಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಂ.ರಾಜಣ್ಣ ಅವರು ಲೋ ಬಿಪಿ ಯಿಂದಾಗಿ ಅಸ್ವಸ್ಥಗೊಂಡಿದ್ದಾರೆ.

    ಅವರನ್ನು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ.

  • ದೇವರ ಪ್ರಸಾದ ತಿಂದು ಕೈ ತೊಳೆಯಲು ಹೋಗಿ ಸಾವನ್ನಪ್ಪಿದ ಬಾಲಕರು

    ದೇವರ ಪ್ರಸಾದ ತಿಂದು ಕೈ ತೊಳೆಯಲು ಹೋಗಿ ಸಾವನ್ನಪ್ಪಿದ ಬಾಲಕರು

    ಚಿಕ್ಕಬಳ್ಳಾಪುರ: ಆಂಜನೇಯ ದೇವರ ದರ್ಶನ ಪಡೆದು, ಪ್ರಸಾದ ತಿಂದು ಬಾಲಕರಿಬ್ಬರು ಕೈ ತೊಳೆಯಲು ಕುಂಟೆಗೆ ಹೋದವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭೈರನಾಯಕನಹಳ್ಳಿ ಗೇಟ್ ಬಳಿ ನಡೆದಿದೆ.

    ಅನೂರು ಗ್ರಾಮದ ಗಾಯಿತ್ರಿ ನಟರಾಜು ದಂಪತಿಯ ಮಗನಾದ ಯಶವಂತ್(12) ಹಾಗೂ ಅನಿತಾ ಮನೋಹರ್ ದಂಪತಿ ಪುತ್ರ ಪ್ರೀತಮ್ ಗೌಡ(08) ಮೃತ ದುರ್ದೈವಿಗಳು. ದೇವಸ್ಥಾನಕ್ಕೆ ಆಗಮಿಸಿದ ಬಾಲಕರಿಬ್ಬರು ಅಲ್ಲಿ ನೀಡಿದ್ದ ಪ್ರಸಾದ ತಿಂದಿದ್ದಾರೆ. ನಂತರ ಕೈ ತೊಳೆಯಲೆಂದು ಹತ್ತಿರದ ಕುಂಟೆಗೆ ತೆರಳಿದ್ದಾರೆ. ಈ ವೇಳೆ ಬಾಲಕರಿಬ್ಬರು ಕುಂಟೆಯಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಅಲ್ಲೇ ಇದ್ದ ಇನ್ನೊಬ್ಬ ಬಾಲಕ ತಕ್ಷಣ ಗ್ರಾಮದಲ್ಲಿ ವಿಷಯ ತಿಳಿಸಿದ್ದಾನೆ.

    ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೀರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರದೀಪ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.