Tag: Shidlaghatta

  • ಶಾಪ್ ಮಾಲೀಕನ ಯಡವಟ್ಟಿಗೆ ಹೂದೋಟವೇ ಸುಟ್ಟು ಕರಕಲು – ಕ್ರಿಮಿನಾಶಕ ಬಳಸಿದ ರೈತನಿಗೆ ಭಾರೀ ನಷ್ಟ

    ಶಾಪ್ ಮಾಲೀಕನ ಯಡವಟ್ಟಿಗೆ ಹೂದೋಟವೇ ಸುಟ್ಟು ಕರಕಲು – ಕ್ರಿಮಿನಾಶಕ ಬಳಸಿದ ರೈತನಿಗೆ ಭಾರೀ ನಷ್ಟ

    ಚಿಕ್ಕಬಳ್ಳಾಪುರ: ಮೊದಲೇ ಬಿಸಿಲು ನೆತ್ತಿ ಸುಡುತ್ತಿದೆ. ಜನ ಮಟಮಟ ಮಧ್ಯಾಹ್ನ ಆಚೆ ಕಾಲಿಡಂಗೇ ಇಲ್ಲ.. ಅದರ ನಡುವೆ ಸುಡುಬಿಸಿಲಿನಿಂದ ರೈತರು ಬೆಳೆದ ಬೆಳೆಗಳನ್ನ ಕಾಪಾಡುವುದು ಸವಾಲಿನ ಕೆಲಸ. ರೈತರೊಬ್ಬರು ಸಹ ಬಿಸಿಲಿನ ಮಧ್ಯೆ ಮಕ್ಕಳಂತೆ ಸಾಕಿ ಸಲುಹಿ ಶುಭ್ರ ಬಿಳಿ ಬಣ್ಣದ ಕ್ರಿಸ್ಯಾಂಥಮಮ್ ಎನ್ನುವ ವೆರೈಟಿ ಹೂ ಬೆಳೆದಿದ್ದರು. ಆದರೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಯಡವಟ್ಟಿಗೆ ಇಡೀ ಹೂದೋಟವೇ ಸುಟ್ಟು ಹೋಗಿದೆ. ಇದರಿಂದ ರೈತನ ಬದುಕು ಬೀದಿಗೆ ಬರುವಂತಾಗಿದೆ.

    ಚಿಕ್ಕಬಳ್ಳಾಪುರ (Chikkaballapura)  ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವವರು 30 ಗುಂಟೆ ಜಮೀನಿನಲ್ಲಿ ಕ್ರಿಸ್ಯಾಂಥಮಮ್ ಹೂ ಬೆಳೆದಿದ್ದರು. 3 ತಿಂಗಳ ನಂತರ ಹೂ ಸಹ ಶುಭ್ರ ಬಿಳಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಹೂದೋಟ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಬಿಳಿ ಬಣ್ಣದ ಹೂಗಳೇ ತುಂಬಿ ತುಳುಕಿದ್ದವು. ಆದರೆ ಬಿಳಿ ಬಣ್ಣದ ಹೂಗಳು ಮತ್ತಷ್ಟು ಶೈನಿಂಗ್ ಬರಲಿ ಎಂದು ಮಂಜುನಾಥ್ ಫೆಸ್ಟೆಸೈಡ್ ಶಾಪ್‌ನ ಮಾಲೀಕ ನೀಡಿದ್ದ ಮದ್ದು ಸಿಂಪಡಣೆ ಮಾಡಿದ್ದರು. ಇದನ್ನೂ ಓದಿ: ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

    ಮದ್ದು ಸಿಂಪಡನೆ ಮಾಡಿದ ಮಾರನೇ ದಿವೇ ಹೂಗಳೆಲ್ಲವೂ ಬಾಡಿ ಹೋಗಿವೆ. ಅದೇ ಗ್ರಾಮದ ಸಮೀಪದ ಅಬ್ಲೂಡು ಗ್ರಾಮದ ಬಳಿ ಇರುವ ಫೆಸ್ಟೆಸೈಡ್ ಶಾಪ್‌ನಲ್ಲಿ ಮಂಜುನಾಥ್ ತಾವು ಯಾವಾಗಲೂ ಬಳಸುತ್ತಿದ್ದ ಮದ್ದನ್ನೇ ಕೊಡುವಂತೆ ಕೇಳಿದ್ದರು. ಆದರೆ ಮಾಲೀಕ ಅದು ಬೇಡ ಇದು ತಗೊಂಡು ಹೋಗಿ ಹೂ ಮತ್ತಷ್ಟು ಶೈನಿಂಗ್ ಬರುತ್ತದೆ ಎಂದು ಮತ್ತೊಂದು ಕಂಪನಿಯ ಮದ್ದು ಕೊಟ್ಟಿದ್ದರು. ಅದರಿಂದಲೇ ಹೂವು ಬಾಡಿ ಹೋಗಿ ಸುಟ್ಟು ಹೋದಂತಾಗಿದೆ ಎಂದು ಮಂಜುನಾಥ್ ದೂರಿದ್ದಾರೆ. ಇದನ್ನೂ ಓದಿ: ರನ್ಯಾಗೇ ಜೈಲೇ ಗತಿ -ಜಾಮೀನು ಅರ್ಜಿ ವಜಾ

    ಮಕ್ಕಳಿಗಿಂತ ಹೆಚ್ಚಾಗಿ ಸಾಲಸೋಲ ಮಾಡಿ 5-6 ಲಕ್ಷ ರೂ. ಖರ್ಚು ಮಾಡಿ ಬೆಳೆದ ಹೂದೋಟ ಒಂದೇ ದಿನಕ್ಕೆ ಬಾಡಿ ಹೋಗಿದೆ. ಇದರಿಂದ ಇರೋ ಬರೋ ಹೂವನ್ನ ಕಿತ್ತು ಈಗ ತಿಪ್ಪೆಗೆ ಎಸೆಯುವಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

    ಕುಂಬಾರನಿಗೆ ವರುಷ ದೊಣ್ಣಗೆ ನಿಮಿಷ ಎಂಬಂತೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಅದೊಂದು ಯಡವಟ್ಟಿಗೆ ಇಡೀ ಹೂದೋಟವೋ ನಾಶವಾಗಿದೆ. ಹೀಗಾಗಿ ಸಾಲಸೋಲ ಮಾಡಿ ಬೆಳೆದಿದ್ದ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಸಾಲಕ್ಕೆ ಸಿಲುಕಿ ಬೀದಿಗೆ ಬರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಹಾರ ಕೊಡಿಸುವಂತೆ ರೈತ ಮುಖಂಡ ರವಿ ಪ್ರಕಾಶ್ ಆಗ್ರಹಿಸಿದ್ದಾರೆ.

  • ಎಂಜಿನಿಯರಿಂಗ್ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವು ನೀಡಿದ `ಪಬ್ಲಿಕ್ ಟಿವಿ ಬೆಳಕು’

    ಎಂಜಿನಿಯರಿಂಗ್ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವು ನೀಡಿದ `ಪಬ್ಲಿಕ್ ಟಿವಿ ಬೆಳಕು’

    ಚಿಕ್ಕಬಳ್ಳಾಪುರ: ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದ್ದಕ್ಕೆ ಸಹಾಯ ಕೋರಿ ಪಬ್ಲಿಕ್ ಟಿವಿಗೆ (PUBLiC TV) ಪತ್ರ ಬರೆದಿದ್ದ ವಿದ್ಯಾರ್ಥಿನಿಗೆ ಇದೀಗ `ಪಬ್ಲಿಕ್ ಟಿವಿ ಬೆಳಕು’ ಕಾರ್ಯಕ್ರಮದಿಂದ ಸಹಾಯ ಹಸ್ತ ಒದಗಿ ಬಂದಿದೆ.

    ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ (Shidlaghatta) ತಾಲೂಕಿನ ವರಸಂದ್ರ ಗ್ರಾಮದ ವಿದ್ಯಾರ್ಥಿನಿ ಭವ್ಯ ಬೆಂಗಳೂರಿನ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಬಿಇ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಮನೆಯಲ್ಲಿ ಕಾಲೇಜು ಶುಲ್ಕ ಪಾವತಿಸಲು ಪೋಷಕರು ಅಸಹಾಯಕರಾಗಿದ್ದರು. ಹೀಗಾಗಿ ಮಗಳಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಇಂಗಿತದಲ್ಲಿದ್ದರು.ಇದನ್ನೂ ಓದಿ: ಬೆದರಿಕೆಯ ನಡುವೆಯೂ ರಶ್ಮಿಕಾ ಜೊತೆ ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ಬ್ಯುಸಿ

    ಈ ವೇಳೆ ಬಿಇ ಪದವಿ ಪೂರೈಸಬೇಕೆಂಬ ಮಹದಾಸೆಯಿಂದ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಸಹಾಯ ಕೋರಿ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಪತ್ರ ಬರೆದಿದ್ದಳು. ಬೆಳಕು ಕಾರ್ಯಕ್ರಮದ ಫಲವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಪುಟ್ಟು ಅಂಜನಪ್ಪ ಸಹಾಯ ಹಸ್ತ ಚಾಚಿದ್ದಾರೆ.

    ಈಗ ಮೂರನೇ ವರ್ಷದಲ್ಲಿ ಓದುತ್ತಿದ್ದು, ಕಾಲೇಜು ಶುಲ್ಕ 1 ಲಕ್ಷ 36 ಸಾವಿರದ 696 ರೂ. ಆಗಿದೆ. ಈ ಹಣವನ್ನು ಪುಟ್ಟ ಅಂಜನಪ್ಪನವರು ಪಾವತಿಸಿದ್ದಾರೆ. ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಾಯ ನೀಡಿದ ಪುಟ್ಟ ಅಂಜನಪ್ಪ ಹಾಗೂ ಪಬ್ಲಿಕ್ ಟಿವಿಗೆ ವಿದ್ಯಾರ್ಥಿನಿ ಭವ್ಯ ಧನ್ಯವಾದಗಳನ್ನು ತಿಳಿಸಿದ್ದಾಳೆ.ಇದನ್ನೂ ಓದಿ: ದೀಪಾವಳಿಯಂದು ಕೆಎಸ್‌ಆರ್‌ಟಿಸಿಗೆ ಬಂಪರ್ – ಒಂದೇ ದಿನ ಬರೋಬ್ಬರಿ 5.59 ಕೋಟಿ ಆದಾಯ 

  • ಗಂಡ ಹೆಂಡತಿ ಮಧ್ಯೆ ಮಗುವಿಗಾಗಿ ಜಗಳ – ಸಮಸ್ಯೆ ಬಗೆಹರಿಸಲು ಬಂದ ಪೊಲೀಸರನ್ನೇ ಕೂಡಿ ಹಾಕಿದ ಗ್ರಾಮಸ್ಥರು

    ಗಂಡ ಹೆಂಡತಿ ಮಧ್ಯೆ ಮಗುವಿಗಾಗಿ ಜಗಳ – ಸಮಸ್ಯೆ ಬಗೆಹರಿಸಲು ಬಂದ ಪೊಲೀಸರನ್ನೇ ಕೂಡಿ ಹಾಕಿದ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ಗಂಡ-ಹೆಂಡತಿಯ ಜಗಳ ಬಿಡಿಸಲು ಬಂದಿದ್ದ ಪೊಲೀಸರನ್ನೇ (Police) ಕೂಡಿಹಾಕಿದ ಪ್ರಸಂಗ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ (Shidlaghatta) ತಾಲೂಕಿನ ಅಮ್ಮಗಾರಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಅಮ್ಮಗಾರಹಳ್ಳಿ ಗ್ರಾಮದಲ್ಲಿ ಶಿವಾನಂದ ಹಾಗೂ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ಶಿವಾನಂದನ ಪತ್ನಿ ಐಶ್ವರ್ಯ ನಡುವೆ ಕೌಟುಂಬಿಕ ಕಲಹದಿಂದ ದೂರ ಇದ್ದರು. ಇವರಿಗೆ ಒಂದು ಗಂಡು ಮಗು ಸಹ ಇದೆ. ಗುರುವಾರ ಐಶ್ವರ್ಯ ಮಗುವನ್ನು ತನ್ನ ಜೊತೆ ಕಳುಹಿಸಿ ಕೊಡಿ ಅಂತ ಗಂಡನ ಮನೆ ಬಳಿ ಬಂದು ಗಲಾಟೆ ಮಾಡಿದ್ದಾಳೆ. ಪತಿ ಒಪ್ಪದೇ ಹೋದಾಗ 112 ಹೋಯ್ಸಳ ಪೊಲೀಸರಿಗೆ ಕರೆ ಮಾಡಿ ತನ್ನ ಹಾಗೂ ಪತಿ ನಡುವೆ ಗಲಾಟೆಯಾಗಿದೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.

    ಬಳಿಕ ತಡರಾತ್ರಿ ಅಮ್ಮಗಾರಹಳ್ಳಿಗೆ ಬಂದ ಹೊಯ್ಸಳ ಪೊಲೀಸರು ಮಗುವನ್ನು ಕೊಡಿ, ಠಾಣೆಗೆ ಬಂದು ತಂದೆ ತಾಯಿ ಇಬ್ಬರು ನ್ಯಾಯ ಪಂಚಾಯತಿ ಮಾಡಿಕೊಂಡು ಮಗುವನ್ನು ಕರೆದುಕೊಂಡು ಹೋಗಿ. ಅಲ್ಲಿಯವರೆಗೆ ಸಾಂತ್ವನ ಕೇಂದ್ರದಲ್ಲಿ ಇರಿಸುತ್ತೇವೆ ಎಂದು ಮಗುವನ್ನು ಕರದುಕೊಂಡು ಹೋಗಿದ್ದಾರೆ. ಆದರೆ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಬಿಡದೇ ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ಬಂದು ಐಶ್ವರ್ಯ ತಾಯಿ ಯಶೋದಮ್ಮ ಅವರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಬೇಕು: ಯತ್ನಾಳ್‌

    ಇದನ್ನು ತಿಳಿದು ಮಗುವಿನ ತಂದೆಯ ಕಡೆಯವರು ಕೆರಳಿದ್ದಾರೆ. ಮಗುವನ್ನು ತಂದು ನಮಗೆ ವಾಪಸ್ ಒಪ್ಪಿಸುವವರೆಗೂ ಹೊಯ್ಸಳ ವಾಹನವನ್ನು ಬಿಡುವುದಿಲ್ಲ ಎಂದು ಇಡೀ ಗ್ರಾಮಸ್ಥರು ಪೊಲೀಸ್ ವಾಹನ ಹಾಗೂ ಪೊಲೀಸರನ್ನು ಲಾಕ್ ಮಾಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್- ಕುಕ್ಕೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ

  • ಕಲರ್ ಫುಲ್ ವೇದಿಕೆಯಲ್ಲಿ ಕಬ್ಜ : ಶಿಡ್ಲಘಟ್ಟ ಕಾರ್ಯಕ್ರಮ ಹೇಗಿತ್ತು?

    ಕಲರ್ ಫುಲ್ ವೇದಿಕೆಯಲ್ಲಿ ಕಬ್ಜ : ಶಿಡ್ಲಘಟ್ಟ ಕಾರ್ಯಕ್ರಮ ಹೇಗಿತ್ತು?

    ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ ‘ಕಬ್ಜ’ (Kabzaa). ಈಗಾಗಲೇ ತನ್ನ ಟೀಸರ್, ಎರಡು ಹಾಡುಗಳಿಂದ ಜನರ ಮನ ಗೆದ್ದಿರುವ ‘ಕಬ್ಜ’ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ.  ಹೌದು ಇತ್ತೀಚೆಗೆ ಆರ್.ಚಂದ್ರು (R. Chandru) ಅವರ ತವರು ಶಿಡ್ಲಘಟ್ಟದಲ್ಲಿ “ಕಬ್ಜ” ಚಿತ್ರದ ‘ಚುಮ್ ಚುಮ್ ಚಳಿ ಚಳಿ . ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಅಪಾರ ಜನಸಾಗರದ ನಡುವೆ ಬಿಡುಗಡೆಯಾಯಿತು. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು  ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಹಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

    ಶಿಡ್ಲಘಟ್ಟದ (Shidlaghatta) ಜೂನಿಯರ್ ಕಾಲೇಜ್ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಡಾಕ್ಟರ್ ಕೆ. ಸುಧಾಕರ್, ಶಿಡ್ಲಘಟ್ಟದ ಶಾಸಕರಾದ. ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರ ಗೌಡರು, ಹೆಚ್.ಎಂ. ರೇವಣ್ಣ, ವಿತರಕ ಆನಂದ್ ಪಂಡಿತ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.  ದೊಡ್ಡ ಪರದೆಯಲ್ಲಿ ಚಿತ್ರದ ಟೀಸರ್ ಗೀತೆಗಳನ್ನು ನೋಡಿದ ಜನಸಾಗರ ಮತ್ತೊಮ್ಮೆ ಮಗದೊಮ್ಮೆ ಕೇಳಿ, ನೋಡಿ ಸಂಭ್ರಮಿಸಿದರು. ಜೊತೆಗೆ ಗುರುಕಿರಣ್ ಗಾಯನ, ರೋಬೋ ಗಣೇಶ್ ಡ್ಯಾನ್ಸ್ ಮುಂತಾದ ಮನೋರಂಜನಾ ಕಾರ್ಯಕ್ರಮಗಳಿಗೆ ಜನ‌ ಚಪ್ಪಾಳೆಯ ಮಳೆ ಕರೆದರು.

    ಹಾಡು ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು,  ನಾನು ಉಪೇಂದ್ರ ಅಭಿಮಾನಿ.  ಅವರು ‘ಓಂ’ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೆ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿ ಓಂ ಸಿನಿಮಾ ಡೈಲಾಗ್ ಹೇಳಿ,  “ಕಬ್ಜ”ದ “ಚುಮ್ ಚುಮ್” ಗೀತೆಗೆ ಹೆಜ್ಜೆ ಹಾಕಿದರು.  ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ,  ‘ಇದು ‘ಕಬ್ಜ’ ಸಿನಿಮಾದ ಹಬ್ಬ. ಈ ಹಾಡು ಬಿಡುಗಡೆ ಸಮಾರಂಭವನ್ನು ಚಂದ್ರು ಅವರಿಗೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡೋಣ ಎಂದಿದ್ದೆ. ಆದರೆ, ಅವರು ತಮ್ಮ ತವರಲ್ಲಿ ಮಾಡಿದ್ದಾರೆ. ಈ ಮೊದಲು ನಾನು “ಆರ್ ಆರ್ ಆರ್” ಚಿತ್ರದ ಆಡಿಯೋ ಲಾಂಚ್ ಮಾಡಿದ್ದೆ. ಅದು ಹಿಟ್ ಆಯ್ತು. ಅದಕ್ಕಿಂತ ದೊಡ್ಡ ಮಟ್ಟದಲ್ಲಿ ‘ಕಬ್ಜ’ ಗೆಲ್ಲಬೇಕು. ಇದೊಂದು ಸದಭಿರುಚಿಯ ಯುವಕರ ಸಿನಿಮಾ ಎನ್ನಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ. ಇಂದು ಎಲ್ಲಾ ಕಡೆ ಕನ್ನಡ ಸಿನಿಮಾಗಳನ್ನು ಜನ ನೋಡಿ,‌ ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.

    ‘ಈಗಾಗಲೇ ನಾವು ಎರಡು ಗೀತೆಗಳನ್ನು ಹೈದರಾಬಾದ್, ಚೆನೈನಲ್ಲಿ ಬಿಡುಗಡೆ ಮಾಡಿದ್ದು. ಈ  ಹಾಡನ್ನು ನಮ್ಮೂರು ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಅಥಿತಿಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಅದರಲ್ಲೂ ಗೀತಕ್ಕ ಅವರು ನಮ್ಮ ‘ಶ್ರೀ ಸಿದ್ದೇಶ್ವರ ಎಂಟರ್‌ ಪ್ರೈಸಸ್’ ಬ್ಯಾನರ್‌ ಅನ್ನು ಬಿಡುಗಡೆ ಮಾಡಿದ್ದರು. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ವಿಶೇಷ. ದೊಡ್ಡ ಮಟ್ಟದಲ್ಲಿ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ಸದ್ದು ಮಾಡುತ್ತಿದೆ. ಬಾಲಿವುಡ್‌ನಲ್ಲಿ ಸುಮಾರು 1800 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ನಮ್ಮ ‘ಕಬ್ಜ’ ಬಿಡುಗಡೆ ಆಗಲಿದೆ’ ಎಂದು ನಿರ್ದೇಶಕ – ನಿರ್ಮಾಪಕ ಆರ್ ಚಂದ್ರು ಹೇಳಿದರು.

    ನಂತರ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ ‘ಆದಷ್ಟು ಬೇಗ ಶಿವಣ್ಣನ ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಇಡೇರಲಿಲ್ಲ. “ಕಬ್ಜ” ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ “ಕಬ್ಜ” ಮಾಡಲಿದ್ದಾರೆ. ಚಿತ್ರದಲ್ಲಿ ತುಂಬಾ ಅದ್ಭುತಗಳಿದ್ದು, ಪ್ರೇಕ್ಷಕರಿಗೆ ನಿಜಕ್ಕೂ ಹಬ್ಬ .  ಚಂದ್ರು ಕಥೆಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಕಥೆಯೇ ಚಿತ್ರದ ಹೈಲೈಟ್ ಎನ್ನಬಹುದು’ ಎಂದರು.

    ‘ಇಡೀ ತಂಡ ಶ್ರಮದಿಂದ ಸಿನಿಮಾ ಮಾಡಿದ್ದು, “ಕಬ್ಜ”ದಲ್ಲಿ ನನಗೊಂದು ಒಳ್ಳೆ ಪಾತ್ರವಿದೆ’ ಎಂದು ಎನ್ನುತ್ತಾರೆ ನಾಯಕಿ ಶ್ರೇಯಾ ಶರಣ್. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅನೂಪ್ ರೇವಣ್ಣ ಸಹ “ಕಬ್ಜ” ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಅಂದ ಹಾಗೆ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಇದೇ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.  ಈ ಚಿತ್ರದ ಮುಖ್ಯವಾದ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡಿದ್ದಾರೆ.  ಕಾರ್ಯಕಾರಿ ನಿರ್ಮಾಪಕರಾಗಿ ಅಲಂಕಾರ್ ಪಾಂಡ್ಯನ್ ಸಾಥ್ ನೀಡಿದ್ದಾರೆ.

  • ಫೆ.26ಕ್ಕೆ ಲಕ್ಷಾಂತರ ಜನರ ಮಧ್ಯೆ ಶಿಡ್ಲಘಟ್ಟದಲ್ಲಿ ‘ಕಬ್ಜ’ ಸಿನಿಮಾದ ಸಾಂಗ್ ರಿಲೀಸ್

    ಫೆ.26ಕ್ಕೆ ಲಕ್ಷಾಂತರ ಜನರ ಮಧ್ಯೆ ಶಿಡ್ಲಘಟ್ಟದಲ್ಲಿ ‘ಕಬ್ಜ’ ಸಿನಿಮಾದ ಸಾಂಗ್ ರಿಲೀಸ್

    ರಿಯಲ್ ಸ್ಟಾರ್ ಉಪೇಂದ್ರ (Upendra) ನಾಯಕರಾಗಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ (Sudeep) ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜ (Kabzaa) ಸಿನಿಮಾದ ಕಮರ್ಷಿಯಲ್  ಹಾಡೊಂದನ್ನು ಬಿಡುಗಡೆ ಮಾಡಲು ಅದ್ಧೂರಿಯಾಗಿ ತಯಾರಿ ಮಾಡಿಕೊಂಡಿದ್ದಾರೆ ನಿರ್ದೇಶಕ ಆರ್. ಚಂದ್ರು (R. Chandru). ಇದೇ ಫೆಬ್ರವರಿ 26 ರಂದು  ಶಿಡ್ಲಘಟ್ಟದಲ್ಲಿ (Shidlaghatta) ಹಾಡು ಬಿಡುಗಡೆಯಾಗಲಿದೆ.

    ಈ ಕುರಿತು ಮಾತನಾಡಿರುವ ನಿರ್ದೇಶಕ ಚಂದ್ರು, ‘ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಶಿಡ್ಲಘಟ್ಟ ನನ್ನ ತವರೂರು. ನಮ್ಮೂರಿನಲ್ಲಿ ಕಬ್ಜ ಚಿತ್ರದ ಅದ್ದೂರಿ ಸಮಾರಂಭ ಆಯೋಜಿಸಿರುವೆ. ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದೇನೆ’ ಎಂದಿದ್ದಾರೆ. ಇದನ್ನೂ ಓದಿ:ನಿರ್ದೇಶಕ ಭಗವಾನ್ ನಿಧನಕ್ಕೆ ಸಿಎಂ, ಮಾಜಿ ಸಿಎಂ ಸಂತಾಪ

    ಈ ಸಮಾರಂಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೀಯಾ ಶರಣ್ ಹಾಗೂ ಆಂಧ್ರ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಆಗಮಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಸಮಾರಂಭವನ್ನಾಗಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ ಚಿತ್ರತಂಡ.

    ಕಬ್ಜ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಚೆನ್ನೈ, ಹೈದರಾಬಾದ್, ಮುಂಬೈ, ಕೇರಳ ಹೀಗೆ ಹಲವು ಕಡೆಗಳಲ್ಲಿ ಸಮಾರಂಭಗಳನ್ನು ಮಾಡುವ ಕುರಿತು ಚಿತ್ರತಂಡ ಯೋಜನೆ ಹಾಕಿದೆ. ಈಗಾಗಲೇ ಚೆನ್ನೈ, ಹೈದರಾಬಾದ್ ನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ ಧ್ರುವ ಸರ್ಜಾ ನೆರವು

    ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ ಧ್ರುವ ಸರ್ಜಾ ನೆರವು

    ಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡ ಕಾರಣದಿಂದಾಗಿ ಮಗನ ಅಂಗಾಂಗ ದಾನಕ್ಕೆ ಮುಂದಾಗಿರುವ ಕುಟುಂಬಕ್ಕೆ ನಟ ಧ್ರುವ ಸರ್ಜಾ (Dhruva Sarja) ನೆರವಾಗಿದ್ದಾರೆ. ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿಯಾಗಿದ್ದ ಶಿಡ್ಲಘಟ್ಟದ (Shidlaghatta) ಪೃಥ್ವಿರಾಜ್ (Prithviraj) ನಾಲ್ಕು ದಿನಗಳ ಹಿಂದೆಯಷ್ಟೇ ಬೈಕ್ ಮೇಲಿಂದ ಬಿದ್ದು ತಲೆಗೆ ತೀವ್ರಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನ ಆಸ್ಪತ್ರೆ ಖರ್ಚಿಗೆ ಸಾಲ ಮಾಡಿದ ಪೃಥ್ವಿ ತಂದೆ ಜಗದೀಶ್ ಅವರಿಗೆ ಧ್ರುವ 5 ಲಕ್ಷ ರೂಪಾಯಿ ನೀಡಿದ್ದಾರೆ.

    ನಟ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್ ಫೆಬ್ರವರಿ 14 ರಂದು ಬೈಕ್ ನಿಂದ ಬಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ. ಹೆ‍ಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪರಿಣಾಮ, ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈವರೆಗೂ ಅವರು ಕೋಮಾದಿಂದ ಆಚೆ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಆಗ ಭಾಯ್, ಈಗ ಪತಿ: ಟ್ರೋಲ್ ಆಯ್ತು ನಟಿ ಸ್ವರಾ ಭಾಸ್ಕರ್ ಪೋಸ್ಟ್

    ಚಿಕ್ಕಬಳ್ಳಾಪೂರದ ಶಿಡ್ಲಘಟ್ಟ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪೃಥ್ವಿರಾಜ್ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತೆ ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದರಿಂದ ಆತನ ಅಂಗಾಂಗ ದಾನಕ್ಕೆ ಕುಟುಂಬ ಮುಂದಾಗಿದೆ.

    ಮಗನ ಕೊನೆಯಾಸೆ ಧ್ರುವ ಸರ್ಜಾರನ್ನು ನೋಡುವುದಾಗಿತ್ತಂತೆ. ಹಾಗಾಗಿ ಧ್ರುವ ಸರ್ಜಾ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಭಿಮಾನಿಯನ್ನು ಭೇಟಿ ಮಾಡಲು ಧ್ರುವ ಆಸ್ಪತ್ರೆಗೆ ಆಗಮಿಸಿದ್ದರು. ಆ ಹುಡುಗನ ತಂದೆ ತಾಯಿಯ ನೋವಿಗೆ ಸ್ಪಂದಿಸಿದರು. ಅವರ ಕಣ್ಣುಗಳು ಕೂಡ ತುಂಬಿಕೊಂಡಿದ್ದವು. ಅಲ್ಲದೇ, ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುವಂತೆ ಅಭಿಮಾನಿಗಳಿಗೆ ಧ್ರುವ ಕರೆಕೊಟ್ಟಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಮಾದಲ್ಲಿರುವ ಅಭಿಮಾನಿ : ಆಸ್ಪತ್ರೆಯಲ್ಲಿ ಕಣ್ಣೀರಿಟ್ಟ ಧ್ರುವ ಸರ್ಜಾ

    ಕೋಮಾದಲ್ಲಿರುವ ಅಭಿಮಾನಿ : ಆಸ್ಪತ್ರೆಯಲ್ಲಿ ಕಣ್ಣೀರಿಟ್ಟ ಧ್ರುವ ಸರ್ಜಾ

    ಟ ಧ್ರುವ ಸರ್ಜಾ (Dhruva Sarja) ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್ (Prithviraj) ಫೆಬ್ರವರಿ 14 ರಂದು ಬೈಕ್ (Bike) ನಿಂದ ಬಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ. ಹೆ‍ಲ್ಮೆಟ್ (Helmet) ಇಲ್ಲದೇ ಬೈಕ್ ಓಡಿಸಿದ ಪರಿಣಾಮ, ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈವರೆಗೂ ಅವರು ಕೋಮಾದಿಂದ ಆಚೆ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಚಿಕ್ಕಬಳ್ಳಾಪೂರದ ಶಿಡ್ಲಘಟ್ಟ (Shidlaghatta) ಬಳಿ ನಡೆದ ರಸ್ತೆ ಅಪಘಾತದಲ್ಲಿ ಪೃಥ್ವಿರಾಜ್ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರಂತೆ. ಹಾಗಾಗಿ ತಂದೆ ತಾಯಿ ಮಗನ ದೇಹ ದಾನಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಮಗನ ಕೊನೆಯಾಸೆ ಧ್ರುವ ಸರ್ಜಾರನ್ನು ನೋಡುವುದಾಗಿತ್ತಂತೆ. ಹಾಗಾಗಿ ಧ್ರುವ ಸರ್ಜಾ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಭಿಮಾನಿಯನ್ನು ಭೇಟಿ ಮಾಡಲು ಧ್ರುವ ಆಸ್ಪತ್ರೆಗೆ ಆಗಮಿಸಿದ್ದರು. ಆ ಹುಡುಗನ ತಂದೆ ತಾಯಿಯ ನೋವಿಗೆ ಸ್ಪಂದಿಸಿದರು. ಅವರ ಕಣ್ಣುಗಳು ಕೂಡ ತುಂಬಿಕೊಂಡಿದ್ದವು. ಅಲ್ಲದೇ, ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುವಂತೆ ಅಭಿಮಾನಿಗಳಿಗೆ ಧ್ರುವ ಕರೆಕೊಟ್ಟಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ – ಕೊಲೆಯ ಶಂಕೆ

    ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ – ಕೊಲೆಯ ಶಂಕೆ

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ವೈ ಹುಣಸೇನಹಳ್ಳಿ ಬಳಿಯ ರೈಲ್ವೆ ಹಳಿ ಪಕ್ಕದಲ್ಲೇ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗುತ್ತಿದೆ.

    ವೈ ಹುಣಸೇನಹಳ್ಳಿಯ ರೈಲ್ವೆ ನಿಲ್ದಾಣದ ಬಳಿಯ ತುಸು ದೂರದಲ್ಲೇ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನ ನಾರಾಯಣದಾಸರಹಳ್ಳಿ ನಿವಾಸಿ ನರಸಿಂಹಮೂರ್ತಿ(40) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಖಾಸಗಿ ಶಾಲೆಯ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತದೇಹದ ಬಳಿ ಮೊಬೈಲ್ ಫೋನ್ ಹಾಗೂ ಬೈಕ್ ಸಹ ಪತ್ತೆಯಾಗಿದೆ. ಇದನ್ನೂ ಓದಿ: ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ 

    ಮೃತದೇಹದ ತಲೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರತರನಾದ ಗಾಯಗಳಾಗಿದ್ದು, ಸಾಕಷ್ಟು ಅನುಮಾನಗಳನ್ನ ಮೂಡಿಸುತ್ತಿವೆ. ಯಾರೋ ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ರೈಲಿನ ಹಳಿ ಮೇಲೆ ಎಸೆದಿರುವ ರೀತಿಯಲ್ಲಿ ಕುರುಹುಗಳು ಕಾಣುತ್ತಿದೆ.

    ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಸಿಪಿಐ ಧರ್ಮೇಗೌಡ ಹಾಗೂ ಗ್ರಾಮಾಂತರ ಠಾಣಾ ಪಿಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಸ್‍ಪಿ ಡಿ.ಎಲ್.ನಾಗೇಶ್ ಸಹ ಭೇಟಿ ನೀಡಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ 

    Live Tv
    [brid partner=56869869 player=32851 video=960834 autoplay=true]

  • ಜೀವ ಹೋದ ಮೇಲೆ ಬಂದು ಏನ್ ಮಾಡ್ತೀರಿ?: ಬೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

    ಜೀವ ಹೋದ ಮೇಲೆ ಬಂದು ಏನ್ ಮಾಡ್ತೀರಿ?: ಬೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

    ಚಿಕ್ಕಬಳ್ಳಾಪುರ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಮಾರುತಿ ನಗರದಲ್ಲಿ ನಡೆದಿದೆ.

    ಮಾರುತಿ ನಗರದ ನಿವಾಸಿ ದೇವಿರಮ್ಮ (48) ಮೃತ ರೈತ ಮಹಿಳೆ. ಕೃಷ್ಣಪ್ಪ ಎಂಬುವವರ ಜಮೀನು ಪಕ್ಕದಲ್ಲಿ ಹುಲ್ಲು ಕಟಾವು ಮಾಡುವಾಗ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಜೀವನಾಂಶ ಹಣ ಹೊಂದಿಸಲಾಗಿಲ್ಲ ಅಂತ ಪತಿ ಆತ್ಮಹತ್ಯೆ

    ಇನ್ನೂ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಮಾಹಿತಿಯನ್ನ ಜಮೀನು ಮಾಲೀಕ ನಿನ್ನೆ ಸಂಜೆಯೇ ಲೈನ್ ಮ್ಯಾನ್‍ಗೆ ತಿಳಿಸಿದ್ದರು ಎನ್ನಲಾಗಿದೆ. ಆದರೂ ಕೂಡ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಲೀ ಅಥವಾ ವಿದ್ಯುತ್ ತಂತಿ ದುರಸ್ಥಿ ಮಾಡುವಾದಗಲೀ ಮಾಡಿಲ್ಲ.

    ರೈತ ಮಹಿಳೆಯ ಜೀವ ಬಲಿಯಾಗಲು ಬೆಸ್ಕಾಂ ಅಧಿಕಾರಿಗಳೇ ಕಾರಣ ಅಂತ ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳನ್ನ ಮೃತಳ ಕುಟುಂಬಸ್ಥರು ಹಾಗೂ ರೈತ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಂತಿ ತುಂಡಾಗಿ ಬಿದ್ದಿರೋ ಮಾಹಿತಿ ನೀಡಿದರು ಯಾಕೆ ಕ್ರಮ ಕೈಗೊಂಡಿಲ್ಲ, ನಿಮಗೆ ಜವಾಬ್ದಾರಿ ಇಲ್ಲವೇ? ಈಗ ಜೀವ ಹೋದ ಮೇಲೆ ಬಂದು ಏನ್ ಮಾಡ್ತೀರಿ ಅಂತ ಖಾರವಾಗಿ ಬೆಸ್ಕಾಂ ಎಇಇ ಹಾಗೂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ಸ್ಫೋಟದಿಂದ ಇಬ್ಬರು ಸಾವು- ತಲಾ 2 ಲಕ್ಷ ಪರಿಹಾರ ಘೋಷಿಸಿದ ಜಮೀರ್

     

  • ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ

    ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ

    – ಬೆಚ್ಚಿಬಿದ್ದ ಶಿಡ್ಲಘಟ್ಟ

    ಚಿಕ್ಕಬಳ್ಳಾಪುರ: ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನನ್ನ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.

    43 ವರ್ಷದ ಅಮಜದ್ ಕೊಲೆಯಾದ ಕಾಂಗ್ರೆಸ್ ಮುಖಂಡ. ಬೈಕ್ ನಲ್ಲಿ ತೆರಳುತ್ತಿದ್ದ ಅಮಜದ್ ನನ್ನು ಒಮ್ನಿ ಕಾರಿನ ಮೂಲಕ ಹಿಂಬಾಲಿಸಿ ಬಂದ ಅಪರಿಚಿತರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಅಮಜದ್ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದನು.

    ಶಿಡ್ಲಘಟ್ಟ ನಗರ ಪೊಲೀಸರು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆಯ ಉದ್ದೇಶ ತಿಳಿದುಬಂದಿಲ್ಲ. ಹಾಡಹಗಲೇ ಕೊಲೆ ನಡೆದ ವಿಷಯ ತಿಳಿದ ಶಿಡ್ಲಘಟ್ಟ ಪಟ್ಟಣದ ಜನ ಆತಂಕದಲ್ಲಿದ್ದಾರೆ.