Tag: Shia

  • ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ಶಿಯಾ (Shia) ಮತ್ತು ಸುನ್ನಿ (Sunni) ಮುಸ್ಲಿಮರ ಮಧ್ಯೆ ಘರ್ಷಣೆ ನಡೆಯುತ್ತಿದ್ದು ಇಲ್ಲಿಯವರೆಗೆ 46 ಮಂದಿ ಸಾವನ್ನಪ್ಪಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್‌ನ ʼಡಾನ್‌ʼ ವರದಿ ಮಾಡಿದೆ.

    ಕೃಷಿ ಬಿತ್ತನೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಆರಂಭವಾದ ಸಣ್ಣ ವಿವಾದ ಈಗ ಘರ್ಷಣೆಗೆ ತಿರುಗಿ ಭಾರೀ ಹಿಂಸಾಚಾರ ನಡೆಯುತ್ತಿದೆ. ಇದನ್ನೂ ಓದಿ: ಲೋಕಾಯುಕ್ತ FIR ಬೆನ್ನಲ್ಲೇ ಸಿಎಂಗೆ ಇಡಿ ಭಯ; ಇ-ಮೇಲ್ ಮೂಲಕ ಸ್ನೇಹಮಯಿ ಕೃಷ್ಣ ದೂರು

    ಸೆ.21 ರಂದು ಆರಂಭಗೊಂಡ ಹಿಂಸಾಚಾರವನ್ನು ನಿಲ್ಲಿಸಲು ಜಿಲ್ಲಾಡಳಿತ, ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಬುಡಕಟ್ಟು ಹಿರಿಯರು ಸತತ ಮಾತುಕತೆ ನಡೆಸುತ್ತಿದ್ದರೂ ಘರ್ಷಣೆ ಮುಂದುವರಿದಿದೆ.  ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಎರಡೂ ಬಣಗಳು ಜಾಗದ ಹಕ್ಕುಗಳಿಗೆ ಮಾತ್ರವಲ್ಲದೇ ಪಂಥೀಯ ಭಾವನೆಯ ಅಡಿ ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಎರಡು ಬಣಗಳ ಸದಸ್ಯರು ಮಿಲಿಟರಿಯವರು ಬಳಸುವ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರಿಂದ ಸಾವು ನೋವು ಹೆಚ್ಚಾಗುತ್ತಿದೆ.

    ಈ ಭೂ ವಿವಾದದ ಕಿಚ್ಚು ಈಗ ಕುರ್ರಂ ಜಿಲ್ಲೆಯ 10 ಪ್ರದೇಶಗಳಿಗೆ ಹಬ್ಬಿದೆ. ಈ ಸಂಘರ್ಷದಿಂದ ಪರಚಿನಾರ್-ಪೇಶಾವರ್ ಮುಖ್ಯ ರಸ್ತೆ ಮತ್ತು ಪಾಕಿಸ್ತಾನ-ಅಫ್ಘಾನ್ ಖರ್ಲಾಚಿ ಗಡಿಯನ್ನು ಮುಚ್ಚಲಾಗಿದೆ. ಈ ಪ್ರದೇಶದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಬಂದ್‌ ಮಾಡಲಾಗಿದೆ.

     

  • ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

    ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ

    ಬಾಗ್ದಾದ್: ಪ್ರಭಾವಿ ಶಿಯಾ ಧರ್ಮಗುರು ಮೊಕ್ತಾದ ಅಲ್ ಸದರ್ ತಮ್ಮ ರಾಜಕೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬಳಿಕ ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

    ಸದರ್ ಅವರ ಬೆಂಬಲಿಗರು ಹಾಗೂ ಇರಾಕಿನ ಪಡೆಗಳ ನಡುವಿನ ಘರ್ಷಣೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. 380ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್

    ಪ್ರತಿಭಟನಾಕಾರರು ಸರ್ಕಾರಿ ಅರಮನೆ ಹೊರಗಿನ ಸಿಮೆಂಟ್ ತಡೆಗೋಡೆಯನ್ನು ಒಡೆದು, ಅರಮನೆಯ ದ್ವಾರಗಳನ್ನು ಹಗ್ಗಗಳಿಂದ ಎಳೆದು ಮುರಿದಿದ್ದಾರೆ. ಇರಾಕಿನ ನಾಯಕರು ಹಾಗೂ ವಿದೇಶಿ ಗಣ್ಯರನ್ನು ಸದ್ಯ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್

    ಭಾರೀ ಪ್ರತಿಭಟನೆಯ ಹಿನ್ನೆಲೆ ಇರಾಕ್‌ನಾದ್ಯಂತ ಕರ್ಫ್ಯೂ ಘೋಷಿಸಲಾಗಿದೆ. ಉಸ್ತುವಾರಿ ಪ್ರಧಾನ ಮಂತ್ರಿ ಕ್ಯಾಬಿನೆಟ್ ಅಧಿವೇಶನವನ್ನು ಅಮಾನತುಗೊಳಿಸಲಾಗಿದೆ. ಬಾಗ್ದಾದ್‌ನಾದ್ಯಂತ ಮೆಷಿನ್ ಗನ್‌ಗಳಿಂದ ಗುಂಡಿನ ಸದ್ದುಗಳು ಕೇಳಿಬರುತ್ತಿದೆ ಎಂದು ವರದಿಯಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕಾಬೂಲ್: ಅಫ್ಘಾನಿಸ್ತಾನದ ಮಝಾರ್ ಇ-ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

    BOMB BLAST (1)

    ಪ್ರಾರ್ಥನಾ ಸಮಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಉತ್ತರ ಅಫ್ಘಾನ್ ನಗರದ ಶಿಯಾ ಪಂಗಡದ ಮಝಾರ್ ಇ ಷರೀಫ್ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿರುವುದು ತಾನೇ ಎಂದು ತಾಲಿಬಾನ್‌ನ ಸ್ಥಳೀಯ ಮುಖಂಡನೊಬ್ಬ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಪೊಲೀಸ್ ವಕ್ತಾರ ಒಬೈದುಲ್ಲಾ ಅಬೇದಿ ಎಎಫ್‌ಪಿಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿಮಾಡಿದೆ. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    BOMB BLAST

    ಶಿಯಾ ಮಸೀದಿಯೊಳಗೆ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 30-40 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಕಮಾಂಡರ್‌ನ ವಕ್ತಾರ ಮೊಹಮ್ಮದ್ ಅಸೀಫ್ ವಾಝೇರಿ ತಿಳಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಾಂತೀಯ ಆರೋಗ್ಯ ಮಂಡಳಿಯ ವಕ್ತಾರ ಝಿಯಾ ಝೆಂಡಾನಿ ಅವರು, ಸ್ಫೋಟದಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್‌ ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ ಅಡಗಿತ್ತು ಕೋವಿಡ್‌ – ಅಧ್ಯಯನದಿಂದ ದೃಢ

    TALIBAN
    ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ತಾಲಿಬಾನಿ ಉಗ್ರರು ನಿಂತಿದ್ದ ದೃಶ್ಯ

    ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ದಾಳಿ ಬಗೆಗಿನ ಚಿತ್ರಗಳನ್ನು ಪರಿಶೀಲಿಸಲಾಗಿ ಬಾಂಬ್ ದಾಳಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರತ್ಯಕ್ಷದರ್ಶಿಯೊಬ್ಬರು ಎಎಫ್‌ಪಿಗೆ ದೂರವಾಣಿ ಕರೆಯ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧೀಕೃತ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

    ತಾಲಿಬಾನ್ ಅಫ್ಘಾನಿಸ್ಥಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಬಾಂಬ್ ದಾಳಿಗಳು ಕಡಿಮೆಯಾಗಿದೆ. ಆದರೂ ಆಗಾಗ್ಗೆ ಶಿಯಾ ಉಪಸಮುದಾಯದವರ ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.

  • ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

    ನವದೆಹಲಿ: ಅಯೋಧ್ಯೆ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಗೊಂಡಿದ್ದು ಸುಪ್ರೀಂ ಕೋರ್ಟ್ ಕೇಂದ್ರ ಶಿಯಾ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

    1946 ರಲ್ಲಿ ಫೈಜಾಬಾದ್ ನ್ಯಾಯಾಲಯ 1992ರ ಡಿ.6ರಂದು ಧ್ವಂಸಗೊಂಡ ಮಸೀದಿಯು ಸುನ್ನಿ ಪಂಗಡಕ್ಕೆ ಸೇರಿದ್ದ ಜಾಗ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಬೋರ್ಡ್ ಈ ಮಸೀದಿಯನ್ನು ಮೊಘಲ್ ದೊರೆ ಬಾಬರ್ ಕಟ್ಟಿಲ್ಲ. ಬಾಬರ್ ಕಮಾಂಡರ್ ಮಿರ್ ಬಾಖ್ವಿ ಕಟ್ಟಿದ್ದಾನೆ. ಈತ ಶಿಯಾ ಪಂಗಡಕ್ಕೆ ಸೇರಿದ ವ್ಯಕ್ತಿ. ಹೀಗಾಗಿ ಈ ವಿವಾದಿತ ಜಾಗ ನಮ್ಮದು ಎಂದು ಹೇಳಿ 2017ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ

    ಸುಪ್ರೀಂ ಆದೇಶದಲ್ಲಿ ಏನಿದೆ?
    ಶಿಯಾ ವಕ್ಫ್ ಬೋರ್ಡ್ 1946 ರಲ್ಲಿ ಫೈಜಾಬಾದ್ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. 24,964 ದಿನಗಳ ಬಳಿಕ ಸಲ್ಲಿಕೆಯಾದ ಬಳಿಕ ಅರ್ಜಿ ಸಲ್ಲಿಕೆಯಾಗಿದೆ. ಇಷ್ಟೊಂದು ದಿನ ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಶಿಯಾ ವಕ್ಫ್ ಬೋರ್ಡ್ ಕಾರಣ ನೀಡಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

    ನಿರ್ಮೋಹಿ ಅಖಾಡದ ಅರ್ಜಿ ವಜಾಗೊಂಡಿದ್ದು ಯಾಕೆ?
    ಸುಪ್ರೀಂ ಕೋರ್ಟ್ ಈ ವೇಳೆ ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿದೆ. ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದ ಮಾತ್ರಕ್ಕೆ ಆಸ್ತಿಯಲ್ಲಿ ಹಕ್ಕು ನೀಡಲು ಸಾಧ್ಯವಿಲ್ಲ. ಆಸ್ತಿಯ ಹಕ್ಕು ಪೂರ್ಣವಾಗಿ ರಾಮ್ ಲಲ್ಲಾಗೆ ಸೇರುತ್ತದೆ. ಆದರೆ ಅವರ ವಾದವನ್ನು ಪರಿಗಣಿಸಿ ನಿರ್ಮೋಹಿ ಅಖಾಡಕ್ಕೆ ದೇವಾಲಯದ ಟ್ರಸ್ಟ್‍ನಲ್ಲಿ ಸ್ಥಾನ ಸಿಗಬೇಕು ಎಂದು ಆದೇಶದಲ್ಲಿ ತಿಳಿಸಿದೆ.

    ನಿರ್ಮೋಹಿ ಅಖಾಡ ವಾದ ಏನಿತ್ತು?
    ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ 1934ರಿಂದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ. ಅರ್ಚಕರಿಗೆ ದೇವರ ಭೂಮಿಯ ಮೇಲೆ ಹಕ್ಕಿರುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವಸ್ಥಾನದ ಆಸ್ತಿ ದೇವರ ಹೆಸರಲ್ಲಿದ್ದರೂ ಅದರ ನಿರ್ವಹಣೆ ಅರ್ಚಕರದ್ದು. ವಂಶಪಾರಂಪರ್ಯ ಆಸ್ತಿಗಳ ಮೇಲೆ ಹಕ್ಕಿರುವಂತೆ ದೇವಸ್ಥಾನದ ಭೂಮಿ ಮೇಲೂ ಅವರಿಗೆ ಹಕ್ಕಿರುತ್ತದೆ ಎಂದು ಹೇಳಿತ್ತು. ನಮ್ಮ ಮೂಲ ವಾದ ಭೂಮಿ ಒಡೆತನ, ನಿರ್ವಹಣೆಯ ಹಕ್ಕಿಗೆ ಸಂಬಂಧಿಸಿದ್ದು. 1850ರಿಂದಲೇ ನಾವು ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದೇವೆ. ಸೀತಾ ರಸೋಯಿ(ಮೊದಲ ಬಾರಿಗೆ ಸೀತೆ ಅಡುಗೆ ಮಾಡಿದ್ದ ಸ್ಥಳ,ಕುಟುಂಬ ಸದಸ್ಯರಿಗಾಗಿ ಸಿಹಿ ಅಡುಗೆ ತಯಾರಿಸಿದ್ದ ಸೀತೆ), ರಾಮ್ ಭಂಡಾರ್(ಭಗವಾನ್ ಶ್ರೀರಾಮನ ಭೋಜನ ಗೃಹ, ಸೀತಾ ರಸೋಯಿಯಲ್ಲಿ ಅಡುಗೆ ಮಾಡಿ ಇಲ್ಲಿ ಭೋಜನ), ರಾಮ್ ಚಬೂತರ್(ಶ್ರೀರಾಮ ಹುಟ್ಟಿದ ಸ್ಥಳ, ಇದೇ ಜಾಗದಲ್ಲಿ ಶ್ರೀರಾಮ ಬೆಳೆದ ಜಾಗ) ನಮ್ಮ ಹಿಡಿತದಲ್ಲೇ ಇತ್ತು. ಅಲ್ಲದೇ ಈ ಮೂರು ಜಾಗಗಳ ಮೇಲೆ ಯಾವುದೇ ವ್ಯಾಜ್ಯಗಳು ಇರಲಿಲ್ಲ ಎಂದು ವಾದಿಸಿತ್ತು.

    2010ರಲ್ಲಿ ಅಲಹಾಬಾದ್ ಕೋರ್ಟ್ 2.77 ಎಕರೆಗಳ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಾಗವನ್ನು ಮೂರು ಭಾಗಗಳಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ, ರಾಮ್‍ಲಲ್ಲಾಗೆ ಸಮಾನ ಹಂಚಿಕೆ ಮಾಡಿ ಆದೇಶಿಸಿತ್ತು.