Tag: shershaah

  • ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ

    ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra), ಕಿಯಾರಾ ಅಡ್ವಾಣಿ (Kiara Advani) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಬ್ಬರೂ ಹೊಸ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ತಮ್ಮ ಹೊಸ ಚಿತ್ರದ ಬಗ್ಗೆ ಸಿದ್ಧಾರ್ಥ್ ಮಾಹಿತಿ ನೀಡಿದ್ದಾರೆ.

    ‘ಶೇರ್ಷಾ’ ಸಿನಿಮಾ ನಂತರ ಮತ್ತೆ ಸಿದ್ಧಾರ್ಥ್, ಕಿಯಾರಾ ಒಂದಾಗಿದ್ದಾರೆ. ಒಂದೊಳ್ಳೆಯ ಕಥೆಯ ಮೂಲಕ ಹೊಸ ಪ್ರೇಮಕಥೆಯನ್ನು ಹೇಳಲು ಹೊರಟಿದ್ದಾರೆ. ಆ್ಯಕ್ಷನ್ ಕಮ್ ರೊಮ್ಯಾನ್ಸ್ ಜೊತೆಯಾಗಿ ನಟಿಸುವ ವಿಚಾರ ನಿಜ ಎಂದು ಸಿದ್ಧಾರ್ಥ್ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ಈ ಹಿಂದೆ ಈ ಜೋಡಿಯ ಹೊಸ ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡೋದಾಗಿ ತಿಳಿಸಿತ್ತು. ಅದೇ ಸಿನಿಮಾ ಬಗ್ಗೆ ನಟ ಮಾತನಾಡುತ್ತಿದ್ದಾರಾ ಎಂಬ ಮಾಹಿತಿ ಬಿಟ್ಟು ಕೊಟ್ಟಿಲ್ಲ.

    ‘ಶೇರ್ಷಾ’ ಸಿನಿಮಾ ಸಿದ್ಧಾರ್ಥ್ ದಂಪತಿ ಪಾಲಿಗೆ ತುಂಬಾನೇ ಸ್ಪೆಷಲ್. ಕೆರಿಯರ್ ಮತ್ತು ವೈವಾಹಿಕ ಜೀವನದಲ್ಲಿ ಖುಷಿಯಾಗಿ ಜೀವಿಸೋದಕ್ಕೆ ‘ಶೇರ್ಷಾ’ (Shershaah) ಚಿತ್ರ ಕಾರಣವಾಗಿದೆ. ಈಗ ಮೂರು ವರ್ಷಗಳ ನಂತರ ಹೊಸ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗುತ್ತಿದ್ದಾರೆ.

  • ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಸಿದ್ಧಾರ್ಥ್ – ಕಿಯಾರಾ ಜೋಡಿ: ವಿಡಿಯೋ ವೈರಲ್

    ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಸಿದ್ಧಾರ್ಥ್ – ಕಿಯಾರಾ ಜೋಡಿ: ವಿಡಿಯೋ ವೈರಲ್

    ಬಾಲಿವುಡ್‌ನ ಬೆಸ್ಟ್ ಆನ್‌ಸ್ಕ್ರೀನ್‌ ಕಪಲ್ ಎಂದೇ ಗುರುತಿಸಿಕೊಂಡಿದ್ದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ರಿಯಲ್ ಲೈಫ್‌ನಲ್ಲೂ ಒಂದಾಗಿದ್ದ `ಶೇರ್‌ಷಾ’ ಜೋಡಿಯ ಪ್ರೀತಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಇದೀಗ ಬ್ರೇಕ್ ಆಪ್ ವದಂತಿಯ ನಂತರ ಮತ್ತೆ ಒಟ್ಟಿಗೆ ಸಿದ್ಧಾರ್ಥ್ ಮತ್ತು ಕಿಯಾರಾ ಕಾಣಿಸಿಕೊಂಡಿರೋ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ತೆರೆಯ ಮೇಲೆ ಅಷ್ಟೇ ಅಲ್ಲ, ತೆರೆಯ ಹಿಂದೆ ಕೂಡ ಸಿದ್ಧಾರ್ಥ್ ಮತ್ತು ಕಿಯಾರಾ ಪ್ರೀತಿಯಿದ್ದು, ಕಳೆದ ಒಂದು ತಿಂಗಳಿAದ ಈ ಜೋಡಿಯ ಬ್ರೇಕ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಇದೀಗ ಬ್ರೇಕ್ ವದಂತಿಯ ನಂತರ `ಶೇರ್‌ಷಾ’ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಈದ್ ಹಬ್ಬದ ಪ್ರಯುಕ್ತ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಈದ್ ಔತಣ ಕೂಟವನ್ನ ಆಯೋಜಿಸಲಾಗಿತ್ತು. ಈ ವೇಳೆ ಇಡೀ ಬಾಲಿವುಡ್ ದಂಡೇ ಈದ್ ಔತಣ ಕೂಟದಲ್ಲಿ ಭಾಗಿಯಾಗಿತ್ತು. ಜತೆಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಕೂಡ ಭಾಗಿಯಾಗಿದ್ದಾರೆ. ನಟಿ ಕರಿಷ್ಮಾ ಕಪೂರ್ ಮತ್ತು ಫ್ಯಾಷನ್ ಡಿಸೈನರ್ ಮನೀಷ್ ಜತೆಗಿನ ಫೋಟೋದಲ್ಲಿ `ಶೇರ್‌ಷಾ’ ಜೋಡಿನೂ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಸಿದ್ದಾರ್ಥ್ ಮತ್ತು ಕಿಯಾರಾ ಒಟ್ಟಿಗೆ ಜತೆಯಾಗಿ ಖುಷಿಯಿಂದ ಔತಣ ಕೂಟಕ್ಕೆ ಹೋಗ್ತಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ: ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

     

    View this post on Instagram

     

    A post shared by ✨~SIDKIARA ~✨ (@peachysiara)

    ಇನ್ನು ಈ ವಿಡಿಯೋ ಮೂಲಕ ಸಿದ್ಧಾರ್ಥ್ ಮತ್ತು ಕಿಯಾರಾ ಬ್ರೇಕ್ ಆಪ್ ವದಂತಿಗೆ ತೆರೆ ಬಿದ್ದಿದೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ ಭರದಿಂದ ಒಬ್ಬರನೊಬ್ಬರು ಈ ಜೋಡಿ ಭೇಟಿಯಾಗಿರಲಿಲ್ಲ. ಒಟ್ನಲ್ಲಿ ಬ್ರೇಕ್ ಆಪ್ ಆಗಿದೆ ಅಂತಾ ಬೇಸರ ಮಾಡಿಕೊಂಡಿದ್ದ ಶೇರ್‌ಷಾ ಜೋಡಿಯ ಫ್ಯಾನ್ಸ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಹೀಗೆ ಈ ಜೋಡಿ ಜತೆಯಾಗಿರಲಿ ಅಂತಾ ಫ್ಯಾನ್ಸ್ ಹಾರೈಸುತ್ತಿದ್ದಾರೆ.

  • ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; ಸಿದ್ಧಾರ್ಥ್-ಕಿಯಾರಾ ದೂರಾ ದೂರ..!

    ಬಿಟೌನ್ ಅಡ್ಡಾದಲ್ಲಿ ಬ್ರೇಕಪ್ ಸ್ಟೋರಿಗಳಿಗೇನು ಬರವಿಲ್ಲ. ಅದೆಷ್ಟೋ ಬ್ರೇಕಪ್ ಕಹಾನಿಯನ್ನ ಚಿತ್ರರಂಗ ನೋಡಿದೆ. ಈಗ ಬಾಲಿವುಡ್ ಗಲ್ಲಿಯಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಭಾರೀ ಸುದ್ದಿ ಮಾಡ್ತಿದೆ. ಬಾಲಿವುಡ್‌ ಕ್ಯೂಟ್‌ ಕಪಲ್‌ ಕಿಯಾರಾ ಮತ್ತು ಸಿದ್ಧಾರ್ಥ್‌ ಲವ್‌ಸ್ಟೋರಿಗೆ ಮತ್ತು ಇದೀಗ ಬ್ರೇಕ್ ಬಿದ್ದಿದೆ.

    ಒಂದೊಳ್ಳೆ ಸ್ನೇಹ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ ನಂತರ ವಿದೇಶದವರೆಗೂ ಕೈ ಕೈ ಹಿಡಿದು ಹೋಗುವ ಮಟ್ಟಿಗೆ ಪ್ರೇಂಡ್‌ಶಿಪ್ ಇತ್ತು. ಈಗ ಇದೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್‌ ಲವ್‌ ಕಹಾನಿ ಅಂತ್ಯವಾಗಿದೆ. ಈಗ ʻಶೇರ್ಷಾʼ ಪ್ರೇಮಿಗಳು ನಾನು ಒಂದು ನೀನು ಒಂದು ತೀರಾ ಅಂತಿದ್ದಾರಂತೆ.

    ಬಾಲಿವುಡ್‌ನ ಕ್ಯೂಟ್ ಕಪಲ್ ಆಗಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ ಬಿಟೌನ್ ಹಲವು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದರು. ಕ್ಯಾಮೆರಾ ಕಣ್ಣಿಗೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಬಳಿಕ ಎಲ್ಲಿಯೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಈಗ ಈ ಜೋಡಿ ಭೇಟಿಯಾಗೋದಕ್ಕೂ ಫುಲ್ ಸ್ಟಾಪ್ ಇಟ್ಟಿದೆ. ಯಾವುದರ ಸಹವಾಸವೇ ಬೇಡ ಅಂತಾ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಬ್ರೇಕಪ್‌ಗೆ ಅಸಲಿ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

     

    View this post on Instagram

     

    A post shared by KIARA (@kiaraaliaadvani)

    `ಶೇರ್ಷಾ’ ಚಿತ್ರದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಇವರಿಬ್ಬರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಇವರಿಬ್ಬರು ರಿಯಲ್ ಲೈಫ್‌ನಲ್ಲೂ ಜತೆಯಾದ್ರೆ ಅದೆಷ್ಟು ಚೆನ್ನಾಗಿರುತ್ತೆ ಅಂತಾ ಲೆಕ್ಕಚಾರ ಹಾಕಿದ್ರು. ಇದೀಗ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. ಒಟ್ಟಾರೆ ನೆಚ್ಚಿನ ಜೋಡಿಯ ಬ್ರೇಕಪ್ ಕಥೆ ಕೇಳಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.

  • ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

    ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್‍ನ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ಶೇರ್ ಷಾ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಆಗಸ್ಟ್ 12ರಂದು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಗೊಂಡ ಈ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಎಲ್ಲರಿಗೂ ಖಂಡಿತವಾಗಿ ಕಣ್ಣೀರು ತರಿಸುತ್ತದೆ. ನೈಜ ಘಟನೆಯಾಧಾರಿತ ಈ ಸಿನಿಮಾ ಇದೀಗ ಬಾಲಿವುಡ್‍ನಲ್ಲಿ ಬಾರೀ ಸದ್ದು ಮಾಡುತ್ತಿದೆ.

    ಸದ್ಯ ವಿಮಾನದಲ್ಲಿ ಪ್ರಯಾಣಿಸುತ್ತಿರುವ ವೇಳೆ ಕಿಯಾರಾ ಅಡ್ವಾಣಿ ಶೇರ್ ಷಾ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ನೋಡಿ ಗಳಗಳನೇ ಅತ್ತಿದ್ದಾರೆ. ಇನ್ನೂ ಈ ವೀಡಿಯೋವನ್ನು ಕಿಯಾರಾ ಅಭಿಮಾನಿಗಳು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ನೀರಿನ ಒಳಗಡೆ ಹಾಟ್ ಅವತಾರ – ಕಿಯಾರಾ ಫೋಟೋ ವೈರಲ್

    ಶೇರ್ ಷಾ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದು, ವಿಕ್ರಮ್‍ಗೆ ಜೋಡಿಯಾಗಿ ಡಿಂಪಲ್ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದಾರೆ. ಕ್ಯಾಪ್ಟನ್ ವಿಕ್ರಮ್‍ರನ್ನು ಮದುವೆಯಾಗಬೇಕಿದ್ದು ಕಾಯುತ್ತಿದ್ದ ಡಿಂಪಲ್ ಕನಸು ಕೊನೆಗೆ ನನಸಾಗುವುದಿಲ್ಲ. ಆದರೆ ಡಿಂಪಲ್ ಇಂದಿಗೂ ಮದುವೆಯಾಗದೇ ವಿಕ್ರಮ್ ನೆನಪಿನಲ್ಲಿಯೇ ಉಳಿದಿದ್ದು, ಚಂಡೀಗಢದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸದ್ಯ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಇಬ್ಬರು ಲವ್ವಿ-ಡವ್ವಿಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಇತ್ತೀಚೆಗಷ್ಟೇ ನಾವಿಬ್ಬರೂ ಉತ್ತಮ ಫ್ರೆಂಡ್ಸ್ ಎಂದು ಹೇಳುವ ಮೂಲಕ ಗಾಸಿಪ್‍ಗಳಿಗೆ ಕಿಯಾರಾ ಫುಲ್ ಸ್ಟಾಪ್ ಇಟ್ಟಿದ್ದಾರೆ.  ಇದನ್ನೂ ಓದಿ:ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್