Tag: Shernaz Cama

  • ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ

    ಜನಸಂಖ್ಯೆ ಹೆಚ್ಚಿಸಲು ಕ್ರಮ – ಸರ್ಕಾರದಿಂದಲೇ ಯುವಕ, ಯುವತಿಯರಿಗೆ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ

    ನವದೆಹಲಿ: ಪಾರ್ಸಿ ಸಮುದಾಯವನ್ನು ಕಾಪಾಡುವ ರಕ್ಷಿಸುವ ಹಾಗೂ ಸಮುದಾಯದ ಜನಸಂಖ್ಯೆಯನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಪಾರ್ಸಿ ಸಮುದಾಯದ ಯುವಕ, ಯುವತಿಯರಿಗಾಗಿಯೇ ಸ್ವತಃ ಕೇಂದ್ರ ಸರ್ಕಾರವೇ ಆನ್‌ಲೈನ್ ಡೇಟಿಂಗ್ ವ್ಯವಸ್ಥೆ ಆರಂಭಿಸಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

    ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ನೆರವಿನಡಿ ಪರ್ಜೋರ್ ಫೌಂಡೇಷನ್ ಇಂತಹದ್ದೊಂದು ಯೋಜನೆ ಜಾರಿಗೆ ತಂದಿದೆ ಎಂದು ಸಂಸ್ಥೆಯ ನಿರ್ದೇಶಕ ಶೆರ್ನಾಜ್ ಕಾಮಾ ಹೇಳಿದ್ದಾರೆ. ಇದನ್ನೂ ಓದಿ: ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಫೇಕ್ ಕಾಲ್ ಮಾಡಿದವ ಅರೆಸ್ಟ್ – ಅಸಲಿ ಕಾರಣವೇನು?

    ಈ ಯೋಜನೆಯಡಿ ನಾವು ಸಮುದಾಯದ ಕಾರ್ಯಕ್ರಮಗಳಿಗೆ ಹಾಜರಾಗುವ ಯುವಕ-ಯುವತಿಯರನ್ನು ಸಂದರ್ಶಿಸಿ ಅವರ ಬೇಕು-ಬೇಡ ಮೊದಲಾದ ವಿಷಯಗಳನ್ನು ಸಂಗ್ರಹಿಸುತ್ತೇವೆ. ಬಳಿಕ ಸಮಾನ ಆಸಕ್ತಿ ಹೊಂದಿರುವ ಜೋಡಿಗಳನ್ನು ಆನ್‌ಲೈನ್ ಮೂಲಕ ಪರಸ್ಪರ ಭೇಟಿಗೆ ಅವಕಾಶ ಕಲ್ಪಿಸುತ್ತೇವೆ. ಮದುವೆಯಾಗಲು ನಿರಾಸಕ್ತಿ ಹೊಂದಿದದವರಿಗೆ ಕೌನ್ಸಿಲಿಂಗ್ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಉಗ್ರರಿಗೆ ಸಿಲಿಕಾನ್ ಸಿಟಿ ಸ್ಲೀಪರ್ ಸೇಲ್?

    2011 ಜನಗಣತಿ ಪ್ರಕಾರ ಭಾರತದಲ್ಲಿ ಪಾರ್ಸಿಗಳ ಸಂಖ್ಯೆ ಕೇವಲ 57,000 ಇದೆ. ಜನಸಂಖ್ಯೆ ಕುಸಿಯುತ್ತಿರುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]