Tag: Sherlyn Chopra

  • ಆದಿಲ್ ಬೆಂಬಲಕ್ಕೆ ನಿಂತು, ರಾಖಿಗೆ ಕೈಕೊಟ್ಟ ಜೀವದ ಗೆಳತಿಯರು

    ಆದಿಲ್ ಬೆಂಬಲಕ್ಕೆ ನಿಂತು, ರಾಖಿಗೆ ಕೈಕೊಟ್ಟ ಜೀವದ ಗೆಳತಿಯರು

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಆಕೆ ಪತಿ ಆದಿಲ್ ಜಗಳ ಕೋರ್ಟ್ ಮೆಟ್ಟಿಲು ಏರಿತ್ತು. ಆದಿಲ್ (Adil) ಜಾಮೀನು ಮೇಲೆ ಬಿಡುಗಡೆಯಾಗಿ ಬರುತ್ತಿದ್ದಂತೆಯೇ ಇಬ್ಬರೂ ಮತ್ತೆ ಮಾಧ್ಯಮಗಳ ಮುಂದೆ ಕಿತ್ತಾಡುತ್ತಿದ್ದಾರೆ. ದಿನಕ್ಕೊಂದು ಮಾಧ್ಯಮ ಗೋಷ್ಠಿ ಮಾಡಿ, ಆರೋಪಗಳ ಸುರಿಮಳೆ ಹರಿಸುತ್ತಿದ್ದಾರೆ.

    ಈವರೆಗೂ ರಾಖಿ ಸುತ್ತಲೇ ಸುತ್ತಿದ್ದ ಮತ್ತು ರಾಖಿಯ ಜೀವದ ಗೆಳತಿಯರು ಎಂದೇ ಗುರುತಿಸಿಕೊಂಡಿದ್ದ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಮತ್ತು ಜಯಶ್ರೀ (Jayashree)ಇದೀಗ ರಾಖಿಗೆ ಭಾರೀ ಶಾಕ್ ನೀಡಿದ್ದು, ಆದಿಲ್ ಪರವಾಗಿ ಇಬ್ಬರೂ ಬ್ಯಾಟ್ ಮಾಡುತ್ತಿದ್ದಾರೆ. ಸಹಜವಾಗಿಯೇ ಈ ನಡೆ ರಾಖಿಗೆ ನುಂಗಲಾರದ ತುಪ್ಪವಾಗಿದೆ.  ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ರಾಖಿಯ ಕೆಟ್ಟ ದಿನಗಳಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದವರು ಶೆರ್ಲಿನ್ ಮತ್ತು ಜಯಶ್ರೀ. ಆದರೆ, ಇದೀಗ ಆದಿಲ್ ಪರವಾಗಿ ಮಾತನಾಡುತ್ತಿದ್ದಾರೆ. ಆದಿಲ್ ಕರೆದ ಪತ್ರಿಕಾಗೋಷ್ಠಿಗೆ ಇಬ್ಬರೂ ಬಂದು, ರಾಖಿ ವಿರುದ್ಧ ಕಿಡಿಕಾರಿದ್ದಾರೆ. ಆದಿಲ್ ತುಂಬಾ ಒಳ್ಳೆಯ ವ್ಯಕ್ತಿ. ಅವನಿಗೆ ಮೋಸ ಮಾಡಬಾರದಿತ್ತು ಎಂದಿದ್ದಾರೆ.

     

    ರಾಖಿ ಒಳ್ಳೆಯವಳು ಅಲ್ಲ ಎಂದು ಮೊನ್ನೆಯಷ್ಟೇ ಜಯಶ್ರೀ ಹೇಳಿದ್ದಳು. ಈ ಮಾತಿಗೆ ರಾಖಿ ಪ್ರತಿಕ್ರಿಯೆ ನೀಡಿ, ಜಯಶ್ರೀ ಹೀಗೆ ಮೋಸ ಮಾಡುತ್ತಾಳೆ ಎಂದು ಗೊತ್ತಿರಲಿಲ್ಲ ಎಂದಿದ್ದಳು. ಈಗ ಜಯಶ್ರೀ ಜೊತೆ ಶೆರ್ಲಿನ್ ಕೂಡ ಸೇರಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್ ಮದ್ವೆಯಾಗ್ತೀನಿ – ಒಂದು ಷರತ್ತು ಪಾಲಿಸಬೇಕು ಎಂದ ಶೆರ್ಲಿನ್ ಚೋಪ್ರಾ

    ರಾಹುಲ್ ಮದ್ವೆಯಾಗ್ತೀನಿ – ಒಂದು ಷರತ್ತು ಪಾಲಿಸಬೇಕು ಎಂದ ಶೆರ್ಲಿನ್ ಚೋಪ್ರಾ

    ಬಾಲಿವುಡ್ (Bollywood) ಬ್ಯೂಟಿ ಶೆರ್ಲಿನ್ ಚೋಪ್ರಾ (Sherlyn Chopra) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ರಾಜ್ ಕುಂದ್ರಾ ನೀಲಿ ಸಿನಿಮಾ ಬಗ್ಗೆ ಶೆರ್ಲಿನ್ ಚೋಪ್ರಾ ಗುಡುಗಿದ್ದರು. ಬಳಿಕ ರಾಕಿ ಸಾವಂತ್ ಜೊತೆ ಶೆರ್ಲಿನ್ ಕಿತ್ತಾಡಿಕೊಂಡಿದ್ದರು ಆಮೇಲೆ ಒಂದಾದರು. ಈಗ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi)  ಅವರ ಜೊತೆಗಿನ ಮದುವೆ ಬಗ್ಗೆ ನಟಿ ಮಾತನಾಡಿದ್ದಾರೆ. ಒಂದು ಷರತ್ತು ಕೂಡ ಮುಂದಿಟ್ಟಿದ್ದಾರೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ವಯಸ್ಸು 53 ಆದರೂ ಮದುವೆಯಾಗದೇ ಒಂಟಿಯಾಗಿಯೇ ಇದ್ದಾರೆ. ಇದೀಗ ರಾಹುಲ್ ಗಾಂಧಿ ಮದುವೆ ಬಗ್ಗೆ ಶೆರ್ಲಿನ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಪಾಪರಾಜಿಗಳ ಪ್ರಶ್ನೆಗೆ ನಟಿ ತಮಾಷೆಯಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:ನಿರ್ಮಾಪಕ ಕರಣ್ ಜೋಹರ್ ಜೊತೆ ಕೈಜೋಡಿಸಿದ ಸಲ್ಮಾನ್ ಖಾನ್

    ಆಗಾಗ್ಗೆ ಪಾಪರಾಜಿಗಳ ಕಣ್ಣಿಗೆ ಬೀಳುವ ಶೆರ್ಲಿನ್ ಚೋಪ್ರಾ ಈ ಬಾರಿ ಬಾಂದ್ರಾ ಮುಂಬೈ ಬಾಂದ್ರಾದಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದಾಗ, ಪಾಪರಾಜಿ ಒಬ್ಬರು ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೀರಾ ಎಂದು ಫನ್ನಿಯಾಗಿ ಇದಕ್ಕೆ ಶೆರ್ಲಿನ್ ಪ್ರತಿಕ್ರಿಯೆ ನೀಡಿದ್ದು, ಹೌದು, ವೈ ನಾಟ್. ಆದರೆ ಮದುವೆಯ ನಂತರ ನನ್ನ ಸರ್‌ನೇಮ್ ಅನ್ನು ನಾನು ಬದಲಿಸಲ್ಲ ಎಂದು ಹೇಳಿದ್ದಾರೆ.

    ಶೆರ್ಲಿನ್ ಚೋಪ್ರಾ ಅವರ ಆಡಿರುವ ಮಾತು ಸಖತ್ ವೈರಲ್ ಆಗಿದ್ರೂ ಕೂಡ ರಾಹುಲ್ ಗಾಂಧಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶೆರ್ಲಿನ್ ಮಾತು ಕೇಳಿ ಫ್ಯಾನ್ಸ್ ಈ ಬಗ್ಗೆ ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉರ್ಫಿ ಜಾವೇದ್ ಬೆನ್ನಿಗೆ ನಿಂತು ‘ಕಾಮಸೂತ್ರ’ ನೆನಪಿಸಿಕೊಂಡ ಶೆರ್ಲಿನ್ ಚೋಪ್ರಾ

    ಉರ್ಫಿ ಜಾವೇದ್ ಬೆನ್ನಿಗೆ ನಿಂತು ‘ಕಾಮಸೂತ್ರ’ ನೆನಪಿಸಿಕೊಂಡ ಶೆರ್ಲಿನ್ ಚೋಪ್ರಾ

    ಬಾಲಿವುಡ್ (Bollywood)ನ ವಿವಾದಿತ ತಾರೆ ಶೆರ್ಲಿನ್ ಚೋಪ್ರಾ (Sherlyn Chopra) ಮತ್ತೆ ಸುದ್ದಿಗೆ ಸಿಕ್ಕಿದ್ದಾರೆ. ತಮ್ಮ ಬದುಕಿನಲ್ಲಿ ನಡೆದ ಹಲವಾರು ಘಟನೆಗಳನ್ನು ಅವರು ಕ್ಯಾಮೆರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಮತ್ತೋರ್ವ ನಟಿ ಉರ್ಫಿ ಜಾವೇದ್ (Urfi Javed) ಪರವಾಗಿ ಸಾಕಷ್ಟು ಮಾತುಗಳನ್ನು ಆಡಿದ್ದಾರೆ. ಉರ್ಫಿಯನ್ನು ಅವರು ಮೆಚ್ಚಿಕೊಂಡಿದ್ದಾರೆ.

    ಅರೆಬರೆ ಬಟ್ಟೆ ಧರಿಸುವ ಕಾರಣದಿಂದಾಗಿ ಉರ್ಫಿ ಜಾವೇದ್ ಈಗಾಗಲೇ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೀದಿಯಲ್ಲೇ ಅನೇಕರು ಜಗಳ ಮಾಡಿದ್ದಾರೆ. ಆದರೆ, ಅಂತಹ ಬಟ್ಟೆಯನ್ನು ಹಾಕಿದರೆ ತಪ್ಪೇನು ಎನ್ನುತ್ತಾರೆ ಶೆರ್ಲಿನ್ ಚೋಪ್ರಾ, ‘ನಮ್ಮದು ಕಾಮಸೂತ್ರದ (Kamasutra) ದೇಶ. ಇಂಥದ್ದೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳೋಕೆ ಯಾರಿಗೂ ಹಕ್ಕಿಲ್ಲ’ ಎಂದಿದ್ದಾರೆ ಶೆರ್ಲಿನ್.

    ಕಳೆದ ವರ್ಷ ನೀಲಿ ಸಿನಿಮಾ ನಿರ್ಮಾಣದ ಕುರಿತಾಗಿ ರಾಜ್ ಕುಂದ್ರಾ (Raj Kundra) ಅರೆಸ್ಟ್ ಆಗಿದ್ದರು. ಈ ವೇಳೆ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಮಾತನಾಡಿದ್ದರು. ತಮ್ಮ ಹಳೆಯ ರಿಲೇಷನ್‌ಶಿಪ್ ಬಗ್ಗೆ ಅವರು ಮುಚ್ಚುಮರೆ ಇಲ್ಲದೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಹಣಕ್ಕಾಗಿ ಹಲವರ ಜೊತೆ ಲೈಂಗಿಕ ಕ್ರಿಯೆ(Sex)  ನಡೆಸಿದ್ದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಇದರ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ನೇರವಾಗಿ ಮಾತನಾಡುವ ಮೂಲಕ ಅನೇಕರ ಹುಬ್ಬೇರಿಸಿದ್ದಾರೆ. ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಆ ಹೇಳಿಕೆಯ ಬಗ್ಗೆ ಈಗ ನಟಿ ಮಾತನಾಡಿದ್ದಾರೆ.

    ಈ ಹಿಂದೆ ಅವರು ರಾಜಕಾರಣಿಯ ಮಗನೊಬ್ಬನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಆತನ ಜೊತೆ ತಮಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೆ ನೀಡುವಾಗ ಶೆರ್ಲಿನ್ ಚೋಪ್ರಾ ಅವರು ಮುಚ್ಚುಮರೆ ಇಲ್ಲದೇ ಮಾತನಾಡಿದ್ದರು. ಆದರೆ ತಮ್ಮ ಹೇಳಿಕೆ ಬೇರೆ ರೀತಿಯಲ್ಲಿ ಬಿಂಬಿತವಾಗಿದೆ ಎಂಬುದು ಶೆರ್ಲಿನ್ ಚೋಪ್ರಾ ಅವರು ಹೇಳಿದ್ದಾರೆ.

     

    ತನ್ನ ಬಾಯ್ ಫ್ರೆಂಡ್ ತನಗೆ ಲೈಂಗಿಕತೆಗಾಗಿ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದನು. ರಾಜಕಾರಣಿಯ ಪುತ್ರನ ನಡವಳಿಕೆ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ಇನ್ನೂ ಸಿನಿಮಾ ಆಡಿಷನ್ ನೀಡುವಾಗ ಅನೇಕ ನಿರ್ದೇಶಕ-ನಿರ್ಮಾಪಕರು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ- ಗುಟ್ಟು ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ

    ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ- ಗುಟ್ಟು ಬಿಚ್ಚಿಟ್ಟ ಶೆರ್ಲಿನ್ ಚೋಪ್ರಾ

    ಬಾಲಿವುಡ್ (Bollywood) ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಅವರು ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಕಳೆದ ವರ್ಷ ನೀಲಿ ಸಿನಿಮಾ ನಿರ್ಮಾಣದ ಕುರಿತಾಗಿ ರಾಜ್ ಕುಂದ್ರಾ (Raj Kundra) ಅರೆಸ್ಟ್ ಆಗಿದ್ದರು. ಈ ವೇಳೆ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಮಾತನಾಡಿದ್ದರು. ತಮ್ಮ ಹಳೆಯ ರಿಲೇಷನ್‌ಶಿಪ್ ಬಗ್ಗೆ ಅವರು ಮುಚ್ಚುಮರೆ ಇಲ್ಲದೇ ಸಂದರ್ಶನಗಳಲ್ಲಿ ಮಾತನಾಡಿದ್ದುಯಿದೆ. ಹಣಕ್ಕಾಗಿ ಹಲವರ ಜೊತೆ ಲೈಂಗಿಕ ಕ್ರಿಯೆ(Sex)  ನಡೆಸಿದ್ದೆ ಎಂದು ಈ ಹಿಂದೆ ನಟಿ ಹೇಳಿದ್ದರು. ಇದರ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ನೇರವಾಗಿ ಮಾತನಾಡುವ ಮೂಲಕ ಅನೇಕರ ಹುಬ್ಬೇರಿಸಿದ್ದಾರೆ. ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದರು. ಆ ಹೇಳಿಕೆಯ ಬಗ್ಗೆ ಈಗ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ

    ಈ ಹಿಂದೆ ಅವರು ರಾಜಕಾರಣಿಯ ಮಗನೊಬ್ಬನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಆತನ ಜೊತೆ ತಮಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೆ ನೀಡುವಾಗ ಶೆರ್ಲಿನ್ ಚೋಪ್ರಾ ಅವರು ಮುಚ್ಚುಮರೆ ಇಲ್ಲದೇ ಮಾತನಾಡಿದ್ದರು. ಆದರೆ ತಮ್ಮ ಹೇಳಿಕೆ ಬೇರೆ ರೀತಿಯಲ್ಲಿ ಬಿಂಬಿತವಾಗಿದೆ ಎಂಬುದು ಶೆರ್ಲಿನ್ ಚೋಪ್ರಾ ಅವರು ಹೇಳಿದ್ದಾರೆ.

    ತನ್ನ ಬಾಯ್ ಫ್ರೆಂಡ್ ತನಗೆ ಲೈಂಗಿಕತೆಗಾಗಿ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದನು. ರಾಜಕಾರಣಿಯ ಪುತ್ರನ ನಡವಳಿಕೆ ಬಗ್ಗೆ ನಟಿ ಬಾಯ್ಬಿಟ್ಟಿದ್ದಾರೆ. ಇನ್ನೂ ಸಿನಿಮಾ ಆಡಿಷನ್ ನೀಡುವಾಗ ಅನೇಕ ನಿರ್ದೇಶಕ-ನಿರ್ಮಾಪಕರು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಹೇಳಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಟಿ ಶೆರ್ಲಿನ್

    ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಟಿ ಶೆರ್ಲಿನ್

    ಬಾಲಿವುಡ್ ನಟಿ, ವಿವಾದಿತ ತಾರೆ ಶೆರ್ಲಿನ್ ಚೋಪ್ರಾ (Sherlyn Chopra) ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋ ಆಲ್ಬಂ ಮಾಡೋಣ ಎಂದು ಹೇಳಿಕೊಂಡ ಬಂದ ವ್ಯಕ್ತಿ ಅಸಭ್ಯವಾಗಿ ತಮ್ಮೊಂದಿಗೆ ನಡೆದುಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.

    ಮುಂಬೈ (Mumbai) ಮೂಲದ ಉದ್ಯಮಿ (Businessman) ಸುನಿಲ್ ಪರಸ್ಮಾನಿ ಲೋಧಾ (Sunil Parasmani Lodha) ಎನ್ನುವವರು ಸದ್ಯ ದುಬೈನಲ್ಲಿದ್ದಾರೆ. ಶೆರ್ಲಿನ್ ಜೊತೆ ಆಲ್ಬಂ ಸಾಂಗ್ ಮಾಡುವುದಕ್ಕಾಗಿಯೇ ದುಬೈನಿಂದ ಬಂದಿದ್ದೇನೆ ಎಂದು ಹೇಳಿಕೊಂಡು ಹೋಟೆಲ್ ಗೆ ಕರೆಯಿಸಿಕೊಂಡಿದ್ದಾರೆ. ಮಾತುಕತೆಯ ನಂತರ ತನ್ನದು ಕಾರು ಇಲ್ಲ, ಹಾಗಾಗಿ ಶೆರ್ಲಿನ್ ಗೆ ಡ್ರಾಪ್ ಕೇಳಿದ್ದಾರೆ. ಶೆರ್ಲಿನ್ ತಮ್ಮ ಮನೆಗೆ ಮೊದಲು ಡ್ರಾಪ್ ಮಾಡಿಸಿಕೊಂಡು, ಆಮೇಲೆ ಉದ್ಯಮಿಯನ್ನು ಬಿಟ್ಟು ಬರಲು ಡ್ರೈವರ್ ಗೆ ಸೂಚಿಸಿದ್ದಾರೆ.

    ಶೆರ್ಲಿನ್ ಮನೆ ಬರುತ್ತಿದ್ದಂತೆಯೇ ‘ನಿಮ್ಮ ಮನೆಯನ್ನು ನೋಡಬಹುದಾ?’ ಎಂದು ಕೇಳಿದನಂತೆ ಆ ಉದ್ಯಮಿ. ಮನೆ ನೋಡಲು ಕರೆದುಕೊಂಡು ಹೋಗಿದ್ದಾರೆ ಶೆರ್ಲಿನ್. ಆನಂತರ ಮಾತುಕತೆ ಆಡುತ್ತಾ ಉದ್ಯಮಿ ಅಲ್ಲಿಯೇ ಊಟ ಮಾಡಿದ್ದಾನೆ. ನಂತರ ನೀನು ಸಖತ್ ಹಾಟ್ ಆಗಿ ಕಾಣ್ತಿದ್ದೀಯಾ, ನನ್ನಿಂದ ಕಂಟ್ರೋಲ್ ಮಾಡ್ಕೊಳ್ಳೋಕೆ ಆಗ್ತಿಲ್ಲ ಎಂದು ಕಿರುಕುಳ ಶುರು ಮಾಡಿದ್ದಾನೆ. ಅಲ್ಲಿಂದ ಆತನನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ ಶೆರ್ಲಿನ್. ಜಾರ್ಜರ್ ಕೇಳುವ ನೆಪದಲ್ಲಿ ಮತ್ತೆ ಬಂದು ಕಿರುಕುಳ ನೀಡಿದನಂತೆ. ಇವಿಷ್ಟನ್ನೂ ಪೊಲೀಸ್ ದೂರಿನಲ್ಲಿ ಬರೆದಿದ್ದಾರೆ ಶೆರ್ಲಿನ್.

    ನಟಿ ಕೊಟ್ಟ ದೂರಿನನ್ವಯ ಆ ಉದ್ಯಮಿಯ ವಿರುದ್ಧ ಜುಹಾ (Juha) ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸ್, ಕೋರ್ಟ್ ವಿಚಾರದಲ್ಲಿ ಶೆರ್ಲಿನ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಈಕೆ ಮತ್ತು ಈಕೆಯ ಗೆಳತಿ ರಾಖಿ ಸಾವಂತ್ ಇಂಥದ್ದೇ ಮತ್ತೊಂದು ವಿಚಾರಕ್ಕೆ ಕೋರ್ಟ್ ಮೆಟ್ಟಿಲು ಏರಿದ್ದರು. ನಂತರ ಕೇಸ್ ವಾಪಸ್ಸು ಪಡೆದು ಸ್ನೇಹಿತೆಯರಾಗಿದ್ದಾರೆ.

  • ಆದಿಲ್ ಗೆ ಪಾಠ ಕಲಿಸಲು ಮೈಸೂರಿಗೆ ಬರಲಿದ್ದಾರೆ ನಟಿ ರಾಖಿ ಸಾವಂತ್

    ಆದಿಲ್ ಗೆ ಪಾಠ ಕಲಿಸಲು ಮೈಸೂರಿಗೆ ಬರಲಿದ್ದಾರೆ ನಟಿ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಅತೀ ಶೀಘ್ರದಲ್ಲೇ ಮೈಸೂರಿಗೆ ಬರಲಿದ್ದಾರಂತೆ. ಪತಿ ಆದಿಲ್ (Adil) ಗೆ ಬುದ್ಧಿ ಕಲಿಸುವುದಕ್ಕಾಗಿಯೇ ಅವರು ತಮ್ಮೊಂದಿಗೆ ಸ್ನೇಹಿತೆ ಶೆರ್ಲಿನ್ ಚೋಪ್ರಾ (Sherlyn Chopra) ಅವರನ್ನು ಕರೆತರುತ್ತಿದ್ದಾರೆ. ಮೈಸೂರಿನಲ್ಲಿ (Mysore) ಪತಿ ಆದಿಲ್ ಮೇಲೆ ಎಫ್.ಐ.ಆರ್  ದಾಖಲಾಗಿದೆ. ಇರಾನಿ ಹುಡುಗಿಗೆ ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ. ಆ ಹುಡುಗಿಗೆ ಬೆಂಬಲವಾಗಿ ಇಬ್ಬರು ನಟಿಯರು ಮೈಸೂರಿಗೆ ಬರಲಿದ್ದಾರೆ.

    ಮೈಸೂರು ಹುಡುಗ ಆದಿಲ್ ಮದುವೆ ವಿಚಾರವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಬಾಲಿವುಡ್ ನಟಿ ರಾಖಿ ಸಾವಂತ್. ಕೋರ್ಟ್ ನಲ್ಲಿ ಆದಿಲ್ ಮುಖಾಮುಖಿ ಆಗಿರುವ ವಿಚಾರವನ್ನೂ ಅವರು ಹಂಚಿಕೊಂಡಿದ್ದು, ಕೋರ್ಟ್ ಹಾಲ್ ನಲ್ಲೇ ತಮಗೆ ಆದಿಲ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಜೈಲಿನಲ್ಲಿ ರೌಡಿಗಳನ್ನು ಭೇಟಿ ಮಾಡಿದ್ದೇನೆ. ಅದು ಹೇಗೆ ಬದುಕುತ್ತೀಯಾ ನೋಡುತ್ತೇನೆ ಎಂದಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಆದಿಲ್ ನನ್ನು ಪ್ರೇಮಿಸಿದ ವಿಚಾರವನ್ನೂ ಅವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದು, ‘ನನಗೆ ಈಗ ಅನಿಸುತ್ತಿದೆ. ಆದಿಲ್ ನನ್ನು ನಾನು ಯಾಕೆ ಪ್ರೀತಿಸಿದೆ ಎಂದು. ಅವನ ಉದ್ದೇಶವು ನನ್ನನ್ನು ಫ್ರಿಡ್ಜ್ ನಲ್ಲಿ ಹೆಣವಾಗಿ ತುಂಬುವುದು ಆಗಿತ್ತಾ? ದೇವರು ದೊಡ್ಡವನು ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ.

    ಆದಿಲ್ ಮತ್ತು ತಮ್ಮ ನಡುವಿನ ಸಂಬಂಧದ ಕುರಿತು ರಾಖಿ ಮಾತನಾಡಿದ್ದಾರೆ. ‘ಮೊದ ಮೊದಲು ನಮ್ಮದು ಪವಿತ್ರ ಪ್ರೇಮ ಎಂದುಕೊಂಡಿದ್ದೆ. ಅವನನ್ನು ತುಂಬಾನೇ ನಂಬಿದ್ದೆ. ಅವನು ಕೂಡ ನನ್ನನ್ನು ಪ್ರೀತಿಸುವಂತೆ ನಾಟಕ ಮಾಡಿದೆ. ಆಮೇಲೆ ಅವನ ಮತ್ತೊಂದು ಮುಖ ಪರಿಚಯ ಆಯಿತು. ಅವನಿಗೆ ಅನೇಕ ಗರ್ಲ್ ಫ್ರೆಂಡ್ಸ್ ಇದ್ದಾರೆ. ಅವನು ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ’ ಎಂದು ಆರೋಪಿಸಿದ್ದಾರೆ.

    ಮೈಸೂರಿನಲ್ಲಿರುವ ಆದಿಲ್ ತಂದೆ ತಾಯಿಯನ್ನೂ ಮಾತನಾಡಿಸುವ ಪ್ರಯತ್ನವನ್ನು ಮಾಡಿದ್ದಾರಂತೆ ರಾಖಿ. ಆದರೆ, ಫೋನ್ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಈಗಲೂ ನಾನು ಅವರ ತಂದೆ ತಾಯಿ ಜೊತೆ ಮಾತನಾಡುವ ಉದ್ದೇಶ ಹೊಂದಿದ್ದೇನೆ. ಮಗನ ಬಗ್ಗೆ ಒಂದಷ್ಟು ವಿಷಯಗಳನ್ನು ಅವರಿಗೆ ತಿಳಿಸಬೇಕಿದೆ ಎಂದಿದ್ದಾರೆ ರಾಖಿ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಿಲ್ ಒಳ್ಳೆಯ ಹುಡುಗ: ರಾಖಿ ಪತಿ ಪರ ನಿಂತ ನಟಿ ಶೆರ್ಲಿನ್ ಚೋಪ್ರಾ

    ಆದಿಲ್ ಒಳ್ಳೆಯ ಹುಡುಗ: ರಾಖಿ ಪತಿ ಪರ ನಿಂತ ನಟಿ ಶೆರ್ಲಿನ್ ಚೋಪ್ರಾ

    ಬಾಲಿವುಡ್ ನಲ್ಲಿ ಸಿನಿಮಾಗಳಿಗಿಂತಲೂ ರಾಖಿ ಸಾವಂತ್ ಮತ್ತು ಆದಿಲ್ ವಿಷಯವೇ ಹೆಚ್ಚು ಸುದ್ದಿ ಮಾಡುತ್ತಿದೆ. ಈಗಾಗಲೇ ರಾಖಿ ಪತಿ, ಮೈಸೂರು ಹುಡುಗ ಆದಿಲ್ ಜೈಲು ಸೇರಿದ್ದಾನೆ. ರಾಖಿ ಪತಿಯ ಬಗ್ಗೆ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಈ ನಡುವೆ ರಾಖಿಯ ಬದ್ಧವೈರಿ ಶೆರ್ಲಿನಾ ಚೋಪ್ರಾ ಈ ವಿವಾದದಲ್ಲಿ ಪ್ರವೇಶ ಮಾಡಿದ್ದಾರೆ. ನಾನು ಕಂಡಂತೆ ಆದಿಲ್ ಒಳ್ಳೆಯ ಹುಡುಗ. ರಾಖಿಯಿಂದಾಗಿ ಅವನಿಗೆ ಮೋಸ ಆಗಿದೆ ಎಂದಿದ್ದಾರೆ.

    ಪತಿ ಆದಿಲ್ ಖಾನ್ ಬಗ್ಗೆ ಮತ್ತೊಂದು ಗುರುತರ ಆರೋಪಗಳನ್ನು ಮಾಡಿದ್ದಾರೆ ನಟಿ ರಾಖಿ ಸಾವಂತ್. ತನ್ನ ಬೆತ್ತಲೆ ವಿಡಿಯೋಗಳನ್ನು ಗೊತ್ತಾಗದಂತೆ ಚಿತ್ರೀಕರಿಸಿ, ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ.  ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ. ಬೆತ್ತಲೆ ವಿಡಿಯೋ ಅವರ ಹೊಸ ಆರೋಪವಾಗಿದೆ. ಇದನ್ನೂ ಓದಿ: ಮದುವೆಯಾದ ಸಂಭ್ರಮದಲ್ಲಿ ಪತ್ನಿಗೆ ಕಿಯಾರಾ ಮುತ್ತಿಟ್ಟ ಸಿದ್ಧಾರ್ಥ್

    ರಾಖಿ ಸಾವಂತ್ ಹಿಂದೆ ಬಿದ್ದು ಸದ್ಯ ಜೈಲುಪಾಲಾಗಿರುವ ಆದಿಲ್ ಖಾನ್ ಗೆ ಬಿಗ್ ಬಾಸ್ ಮನೆ ಒಳಗೆ ಹೋಗುವ ಆಸೆ ಇತ್ತಂತೆ. ಹಾಗಾಗಿಯೇ ಅವನು ರಾಖಿ ಸಖ್ಯ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿದೆ. ಆದಿಲ್ ಆಪ್ತರು ಹೇಳುವಂತೆ ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗುವ ದಾರಿ ಸುಲಭವಾಗುತ್ತದೆ. ಹೀಗಾಗಿ ರಾಖಿ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸ್ವತಃ ರಾಖಿಯೇ ಆದಿಲ್ ಜೊತೆ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಮಾತನಾಡಿದ್ದರು.

    ಆದಿಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ರಾಖಿ ಸಾವಂತ್ ಬಹಿರಂಗ ಪಡಿಸಿದ ಸಂದರ್ಭದಲ್ಲೂ ಬಿಗ್ ಬಾಸ್ ಕುರಿತಾಗಿ ನಟಿ ಮಾತನಾಡಿದ್ದರು. ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗುವಂತಹ ಅವಕಾಶ ಬಂದರೆ, ಹೋಗುತ್ತೇವೆ ಎಂದಿದ್ದರು. ಅಲ್ಲದೇ, ಬಿಗ್ ಬಾಸ್ ಮನೆಯಲ್ಲೇ ಮದುವೆ ಆಗುವುದಾಗಿಯೂ ತಿಳಿಸಿದ್ದರು. ಆದರೆ, ಕೇವಲ ರಾಖಿಗೆ ಮಾತ್ರ ಮನೆಯ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಅವರು ಅರ್ಧಕ್ಕೆ ಬಿಗ್ ಬಾಸ್ ಮನೆಯಿಂದ ವಾಪಸ್ಸಾದರು.

    ತನಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಖಿಯಿಂದ ಆದಿಲ್ ದೂರವಾದ ಎನ್ನುವ ಮಾತು ಆಪ್ತರಿಂದ ತಿಳಿದು ಬಂದಿದೆ. ಆದರೆ, ರಾಖಿ ಸಾವಂತ್ ಹೇಳುವುದೇ ಬೇರೆ. ಆದಿಲ್ ಮೇಲೆ ಹಲವು ಗುರುತರ ಆರೋಪಗಳನ್ನು ಮಾಡಿದ್ದಾರೆ. ಅಸಹಜ ಲೈಂಗಿಕ ಕ್ರಿಯೆಯಿಂದ ಹಿಡಿದು ವರದಕ್ಷಿಣೆ ಕಿರುಕುಳದ ಆರೋಪವನ್ನೂ ಪತಿ ಆದಿಲ್ ಮೇಲೆ ಹೊರಸಿದ್ದಾರೆ. ಅವೆಲ್ಲವೂ ಗುರುತರ ಆರೋಪಗಳಾದ ಕಾರಣದಿಂದಾಗಿ ಕೋರ್ಟ್ ಆದಿಲ್ ಗೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಆದಿಲ್ ಖಾನ್ ಜೊತೆ ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ

    ಬಾಲಿವುಡ್ (Bollywood) ನಟಿ ರಾಖಿ ಸಾವಂತ್ (Rakhi Sawant) ಮೈಸೂರು ಹುಡುಗ ಆದಿಲ್ ಖಾನ್ (Adil Khan) ಜೊತೆ ವೈವಾಹಿಕ ಜೀವನ ಆರಂಭಿಸುತ್ತಿರುವ ಬೆನ್ನಲ್ಲೇ ನಟಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ರಾಖಿ ಸಾವಂತ್‌ನ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಇತ್ತೀಚೆಗೆ ತಮ್ಮ ಮದುವೆ ವಿಚಾರವಾಗಿ ರಾಖಿ ಸಖತ್ ಸುದ್ದಿಯಲ್ಲಿದ್ದರು. ಆದಿಲ್ ಜೊತೆಗಿನ ಮದುವೆ ವಿವಾದ ಸುಖಾಂತ್ಯ ಕಂಡ ಬೆನ್ನಲ್ಲೇ ʻಬಿಗ್ ಬಾಸ್ʼ ಖ್ಯಾತಿಯ ರಾಖಿ ಸಾವಂತ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿ ಶೆರ್ಲಿನ್ ಚೋಪ್ರಾ (Sherlyn Chopra) ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಾಖಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ಯುವ ನಟ ಧನುಷ್ ನಿಧನ

    ರಾಖಿ ಬಂಧನ ಬಗ್ಗೆ ಟ್ವಿಟ್ಟರ್‌ನಲ್ಲಿ ನಟಿ ಶೆರ್ಲಿನ್ ಮಾಹಿತಿ ಹಂಚಿಕೊಂಡಿದ್ದಾರೆ. ಅಂಬೋಲಿ ಪೊಲೀಸರು ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ. (ಜ.18)ರಂದು ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ಸ್‌ ಕೋರ್ಟ್ ತಿರಸ್ಕರಿಸಿತ್ತು ಎಂದು ಶೆರ್ಲಿನ್ ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಮೀ ಟೂ ಆರೋಪಿ ಸಾಜಿದ್ ಖಾನ್ (Sajid Khan) ವಿರುದ್ಧ ನೀಡಿದ ಹೇಳಿಕೆಗಾಗಿ ರಾಖಿ ಸಾವಂತ್, ಶೆರ್ಲಿನ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ಟೋಬರ್ 29ರಂದು ಸಾಜಿದ್ ಖಾನ್ ವಿರುದ್ಧ ಹೇಳಿಕೆಯನ್ನು ದಾಖಲಿಸಿದ ನಂತರ ಶೆರ್ಲಿನ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಲ್ಮಾನ್ ಖಾನ್ (Salman Khan), ಸಿನಿಮಾ ನಿರ್ಮಾಪಕನನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಬಳಿಕ ರಾಖಿ, ಶೆರ್ಲಿನ್ ಹೇಳಿಕೆಯನ್ನು ಖಂಡಿಸಿದರು. ಪಾಪರಾಜಿಗಳೊಂದಿಗೆ ಮಾತನಾಡಿದ್ದ ರಾಖಿ, ಯಾವ ದೂರಿನಲ್ಲಿ ಅರ್ಹತೆ ಇದೆ ಮತ್ತು ಯಾವುದು ಇಲ್ಲ ಎಂದು ಪೊಲೀಸರಿಗೆ ತಿಳಿದಿದೆ ಎಂದು ಹೇಳಿದರು. ನಂತರ ಶೆರ್ಲಿನ್ ಚೋಪ್ರಾ, ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದರು.

    ಇನ್ನೂ ಪತಿ ಆದಿಲ್ ಜೊತೆ ಸೇರಿ ರಾಖಿ ಡ್ಯಾನ್ಸ್ ಅಕಾಡೆಮಿಯನ್ನ ಶುರು ಮಾಡಿದ್ದರು. ಅದರ ಉದ್ಘಾಟನೆ ಮಾಡಬೇಕಿತ್ತು. ಜ.19 ಮಧ್ಯಾಹ್ನ 3 ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಕ್ಕೂ ಮುನ್ನವೇ ನಟಿಯ ಬಂಧನವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಶ್ಲೀಲ ವಿಡಿಯೋ ಹಂಚಿಕೆ: ಬಾಲಿವುಡ್ ನಟಿಯರ ವಿರುದ್ಧ ದೋಷಾರೋಪ ಪಟ್ಟಿ

    ಅಶ್ಲೀಲ ವಿಡಿಯೋ ಹಂಚಿಕೆ: ಬಾಲಿವುಡ್ ನಟಿಯರ ವಿರುದ್ಧ ದೋಷಾರೋಪ ಪಟ್ಟಿ

    ಬಾಲಿವುಡ್ ನಟಿಯರಾದ ಶೆರ್ಲಿನಾ ಚೋಪ್ರಾ, ಪೂನಂ ಪಾಂಡೆ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೇರಿದಂತೆ ಹಲವರ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸ್ ವಿಭಾಗವು 450 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಬೆನ್ನಲ್ಲೆ ಬಾಲಿವುಡ್ ಕೆಲ ನಟಿಯರಿಗೆ ನಡುಕು ಶುರುವಾಗಿದೆ. ಹಾಗಾಗಿ ಶರ್ಲಿನಾ ಸೇರಿದಂತೆ ಕೆಲವು ನಟಿಯರು ಈ ಕುರಿತು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

    ಪೂನಂ ಪಾಂಡೆ, ಶೆರ್ಲಿನಾ ಚೋಪ್ರಾ ಸೇರಿದಂತೆ ಕೆಲ ನಟಿಯರು ತಮ್ಮದೇ ಹೆಸರಿನಲ್ಲಿ ಅಪ್ಲಿಕೇಶನ್ ತೆರೆದು ಅವುಗಳ ಮೂಲಕ ತಮ್ಮದೇ ಅಶ್ಲೀಲ ವಿಡಿಯೋಗಳನ್ನು ಹಣಕ್ಕಾಗಿ ಮಾರುತ್ತಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪ ಮಾಡಲಾಗಿದೆ. ಐಷಾರಾಮಿ ಹೋಟೆಲ್ ಗಳಲ್ಲೇ ಈ ವಿಡಿಯೋಗಳ ಚಿತ್ರೀಕರಣ ನಡೆಯುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಕೆಲವು ಬಾರಿ ಹಣಕ್ಕಾಗಿಯೂ ಇವರು ಬೇರೆಯವರು ವಿಡಿಯೋ ಕಳುಹಿಸಿದ್ದಾರೆ ಎಂದೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ:ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

    ಈ ಕುರಿತು ಶೆರ್ಲಿನಾ ಚೋಪ್ರಾ ಪ್ರತಿಕ್ರಿಯೆ ಕೂಡ ನೀಡಿದ್ದು, ‘ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ. ನಾನು ನಿರಾಪರಾಧಿ’ ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ಸುಖಾಸುಮ್ಮನೆ ಎಳೆತರಲಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಈಗಾಗಲೇ ಕುಂದ್ರಾ ಜೈಲು ವಾಸವನ್ನೂ ಅನುಭವಿಸಿ ಬಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    ಶೆರ್ಲಿನ್ ಚೋಪ್ರಾ ವಿರುದ್ಧ ದೂರು ದಾಖಲಿಸಿದ ರಾಖಿ ಸಾವಂತ್

    ಸಾಜಿದ್ ಖಾನ್ ವಿಷಯದಲ್ಲಿ ರಾಖಿ ಸಾವಂತ್(Rakhi Sawant) ಮತ್ತು ಶೆರ್ಲಿನ್(Sherlyn Chopra) ನಡುವೆ ಮಾತಿನ ಚಕಮಕಿ ಜೋರಾಗಿದೆ. ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದು, ಈ ವಿಚಾರ ಈಗ ಠಾಣೆ ಮೆಟ್ಟಿಲೇರಿದೆ. ಇದೀಗ ಶೆರ್ಲಿನ್ ಚೋಪ್ರಾ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ್ದಾರೆ.

    ಶೆರ್ಲಿನ್ ಮತ್ತು ರಾಖಿ ಸಾವಂತ್ ನಡುವಿನ ವಾರ್ ಇದೀಗ ಕಾನೂನು ರೂಪ ಪಡೆದಿದೆ. ಶೆರ್ಲಿನ್ ವಿರುದ್ಧ ನಟಿ ರಾಖಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಜೊತೆಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶನಿವಾರ ಮುಂಬೈನ(Mumbai) ಓಶಿವಾರ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ತನ್ನ ವಕೀಲರೊಂದಿಗೆ ಶೆರ್ಲಿನ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಈ ಕುರಿತು ಮಾಧ್ಯಮಕ್ಕೆ ರಾಖಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ಆಲಿಯಾ ಭಟ್‌

    ಶೆರ್ಲಿನ್ ಚೋಪ್ರಾ ವಿರುದ್ಧ ಹಲವು ಸಾಕ್ಷ್ಯಾಧಾರಗಳಿವೆ. ಅದನ್ನು ನ್ಯಾಯಾಲಯಕ್ಕೆ ಒದಗಿಸುತ್ತೇನೆ. ಭಾರತದಲ್ಲಿ ಮಹಿಳೆಯರಿಗೆ ಉತ್ತಮ ಕಾನೂನುಗಳಿವೆ. ಆದರೆ ಅದನ್ನು ಕೆಲವರು ದೂರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಾಜಿದ್ ಖಾನ್(Sajid Khan) ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಇನ್ನೂ ಶೆರ್ಲಿನ್, ಹಣಕ್ಕಾಗಿ ಪುರುಷರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂದು ನಟಿಯ ವಿರುದ್ಧ ರಾಖಿ ಆರೋಪ ಮಾಡಿದ್ದಾರೆ.

    ನಾನು ಸಮಾಜ ಸೇವಕಿ. ನಾನು ಜನರಿಗೆ ಒಳ್ಳೆಯದನ್ನು ಮಾಡುತ್ತೇನೆ ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದು ರಾಖಿ ಸಾವಂತ್ ಮಾತನಾಡಿದ್ದಾರೆ. ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಶೆರ್ಲಿನ್ ಇಲ್ಲಸಲ್ಲದ ಆರೋಪ ಮಾಡಿರುವುದು ನನ್ನ ಜೀವನಕ್ಕೂ ಪರಿಣಾಮ ಬೀರಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]