Tag: Sheopur

  • ಮಧ್ಯಪ್ರದೇಶದ ಕುನೋ ಪಾರ್ಕ್‌ನ ಚಿರತೆ ಶಿಯೋಪುರ್ ರಸ್ತೆಯಲ್ಲಿ ಪತ್ತೆ – ನಿವಾಸಿಗಳಲ್ಲಿ ಆತಂಕ

    ಮಧ್ಯಪ್ರದೇಶದ ಕುನೋ ಪಾರ್ಕ್‌ನ ಚಿರತೆ ಶಿಯೋಪುರ್ ರಸ್ತೆಯಲ್ಲಿ ಪತ್ತೆ – ನಿವಾಸಿಗಳಲ್ಲಿ ಆತಂಕ

    ಭೋಪಾಲ್: ಕುನೋ ಪಾರ್ಕ್‌ನ (Kuno Park) ಚಿರತೆಯೊಂದು (Cheetah)ಶಿಯೋಪುರ್ ರಸ್ತೆಯಲ್ಲಿ ಓಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದ (Kuno National Park) ಚಿರತೆ ಶಿಯೋಪುರ್ (Sheopur) ರಸ್ತೆಯಲ್ಲಿ ಓಡಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದಾಗಿ ಶಿಯೋಪುರ್ ನಿವಾಸಿಗಳು ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಲ್ಲಿ ಖಾಲಿ ರಸ್ತೆಯಲ್ಲಿ ನಿಧಾನಗತಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ವೈರಲ್ ಆದ ವೀಡಿಯೋದಲ್ಲಿ ಚಿರತೆ ಬೀದಿ ನಾಯಿಯ ಮೇಲೆ ದಾಳಿ ಮಾಡಿದೆ.ಇದನ್ನೂ ಓದಿ: ಕಿಲಾಡಿ ಲೇಡಿಯಿಂದ ಕಂಟ್ರಾಕ್ಟರ್‌ ಸುಲಿಗೆ – ಟೀ ಕುಡಿಯಲು ಕರೆದು ದರೋಡೆ ಮಾಡಿಸಿದ ಸುಂದರಿ..!

    2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಎರಡು ಗಂಡು ಚಿರತೆಗಳನ್ನು ತರಲಾಗಿತ್ತು. ಆ ಪೈಕಿ ಒಂದು ಚಿರತೆ ವಾಯು (ಚಿರತೆಯ ಹೆಸರು) ಡಿ.4 ರಂದು ಕುನೋಸ್ ಪಾಲ್ಪುರ್ ಅರಣ್ಯಕ್ಕೆ ಬಿಡಲಾಯಿತು. ಕಳೆದ ಕೆಲವು ದಿನಗಳಿಂದ, ಶಿಯೋಪುರ್‌ದ ಸ್ಥಳೀಯರು ಶಾಲೆಗಳು ಹಾಗೂ ವಿವಿಧ ಜಾಗಗಳಲ್ಲಿ ಚಿರತೆ ಓಡಾಡಿರುವ ಕುರಿತು ವರದಿ ಮಾಡಿದ್ದಾರೆ.

    ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉತ್ತಮ್ ಶರ್ಮಾ ಮಾತನಾಡಿ, ವಾಯು ಈಗ ಶಿಯೋಪುರ್ ನಗರದಿಂದ ಬೇರೆ ಕಡೆ ಸ್ಥಳಾಂತರಗೊಂಡಿದೆ ಎಂದು ಖಚಿತಪಡಿಸಿದ್ದಾರೆ. ನಾವು ಚಿರತೆಯ ಸ್ಥಳವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ ಇನ್ನೂ ಮುಂದೆ ಶಿಯೋಪುರ ನಗರದಲ್ಲಿ ಚಿರತೆಯ ಭಯ ಬೇಡ. ಸಾರ್ವಜನಿಕರ ಸುರಕ್ಷತೆಗಾಗಿ ಅರಣ್ಯ ಅಧಿಕಾರಿಗಳು ಚಿರತೆಯ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಜಪ್ತಿ – ಐವರು ಅರೆಸ್ಟ್

  • 6 ಮಕ್ಕಳಿಗೆ ಜನ್ಮ ನೀಡಿದ ತಾಯಿ-4 ಗಂಡು, 2 ಹೆಣ್ಣು

    6 ಮಕ್ಕಳಿಗೆ ಜನ್ಮ ನೀಡಿದ ತಾಯಿ-4 ಗಂಡು, 2 ಹೆಣ್ಣು

    -ನಿಗಾ ಘಟಕದಲ್ಲಿರಿಸಿ ನವಜಾತ ಶಿಶುಗಳಿಗೆ ಚಿಕಿತ್ಸೆ
    -ಕೇವಲ 390 ರಿಂದ 450 ಗ್ರಾಂ

    ಭೋಪಾಲ್: 23 ವರ್ಷದ ಮಹಿಳೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಧ್ಯಪ್ರದೇಶದ ಶಿಯೋಪುರದ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದು, ಕಡಿಮೆ ತೂಕವಿದ್ದ ಕಾರಣ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಸಿವಿಲ್ ಸರ್ಜನ್ ಡಾ.ಆರ್.ಬಿ.ಗೋಯಲ್, ಬಡೋದ್ ನಿವಾಸಿ ಮೂರ್ತಿ ಮಾಲಿ ಎಂಬವರು ಶನಿವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಇದು ಮೊದಲ ಹೆರಿಗೆಯಾಗಿದ್ದು, ಗರ್ಭ ಧರಿಸಿದ ಏಳನೇ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳ ತೂಕ ಕಡಿಮೆ ತೂಕ ಹೊಂದಿದ್ದವು ಎಂದು ತಿಳಿಸಿದ್ದಾರೆ.

    ಆರರಲ್ಲಿ ಎರಡು ಹೆಣ್ಣು ಮಕ್ಕಳು ಸಾವನ್ನಪ್ಪಿವೆ. ಇನ್ನುಳಿದ ನಾಲ್ಕು ಮಕ್ಕಳು 390 ರಿಂದ 450 ಗ್ರಾಂ ತೂಕ ಹೊಂದಿವೆ ನವಜಾತ ಶಿಶುಗಳನ್ನು ತೀವ್ರನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮಹಿಳೆಗೆ ಸಹಜ ಹೆರಿಗೆಯಾಗಿದ್ದರಿಂದ ಆರೋಗ್ಯವಾಗಿದ್ದಾರೆ.

    ಅವಳಿ ಮಕ್ಕಳು ಜನಿಸೋದು ಸಾಮಾನ್ಯವಾಗಿ ನೋಡಿರುತ್ತೇವೆ. ಕೆಲವೊಮ್ಮೆ ಮೂರು ಮತ್ತು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಕೇಳಿರುತ್ತೇವೆ. ಆದ್ರೆ ಒಂದೇ ಬಾರಿಗೆ ಆರು ಮಕ್ಕಳಿಗೆ ಜನ್ಮ ನೀಡಿರುವ ಪ್ರಕರಣಗಳು ವಿರಳ. ಇನ್‍ಫಿರ್ಟಿಲಿಟಿ ಚಿಕಿತ್ಸೆಯಲ್ಲಿ ಈ ರೀತಿ ಮಹಿಳೆ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆಗಳಿರುತ್ತವೆ. ಆದ್ರೆ ಈ ಮಹಿಳೆ ಮೊದಲ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿರೋದು ಆಶ್ಚರ್ಯ ಉಂಟು ಮಾಡಿದೆ ಎಂದು ಸ್ತ್ರೀ ರೋಗ ತಜ್ಞೆ ಡಾ.ಮಿತಾ ಅಗರವಾಲ್ ಹೇಳುತ್ತಾರೆ.