Tag: Shell Attack

  • ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ

    ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ

    ಶ್ರೀನಗರ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ ಎಂದು ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ (Omar Abdullah) ತಿಳಿಸಿದ್ದಾರೆ.

    ಭಾರತದ ವಿರುದ್ಧ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ಮುಂದುವರಿಸಿದೆ. ಶುಕ್ರವಾರ ರಾತ್ರಿ ಜಮ್ಮು ಕಾಶ್ಮೀರ, ಪಂಜಾಬ್, ಗುಜರಾತ್, ಪೂಂಚ್, ಉರಿ, ಸಾಂಬಾ, ಫಿರೋಜ್‌ಪುರ ಸೇರಿದಂತೆ ಹಲವೆಡೆ ಪಾಕ್ ಮತ್ತೆ ಡ್ರೋನ್ ದಾಳಿ ಹಾಗೂ ಶೆಲ್ ದಾಳಿ ನಡೆಸಿದೆ. ಜಮ್ಮು ಕಾಶ್ಮೀರದಲ್ಲಿ (Jammu Kashmir) ಭಾರೀ ಸ್ಫೋಟದ ಸದ್ದು ಕೇಳಿದ ಹಿನ್ನೆಲೆ ಬ್ಲ್ಯಾಕ್‌ಔಟ್ ಘೋಷಿಸಲಾಗಿದೆ. ಸೈರನ್‌ಗಳನ್ನು ಮೊಳಗಿಸಿದ ಬಳಿಕ ಜಮ್ಮು ಸಿಎಂ ಓಮರ್ ಅಬ್ದುಲ್ಲಾ ಹೈ ಅಲರ್ಟ್ ಘೋಷಿಸಿ, ಜನರು ಮನೆಯೊಳಗೇ ಸುರಕ್ಷಿತವಾಗಿ ಇರುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಫಿರೋಜ್‌ಪುರದ ಮನೆ ಮೇಲೆ ಬಿದ್ದ ಪಾಕ್‌ ಡ್ರೋನ್‌ – ಮೂವರಿಗೆ ಗಾಯ, ಓರ್ವ ಗಂಭೀರ

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಜಮ್ಮು ನಗರದಾದ್ಯಂತ ಸೈರನ್ ಸದ್ದು ಕೇಳಿ ಬರುತ್ತಿದೆ. ಪ್ರತಿಯೊಬ್ಬರಲ್ಲೂ ನಾನು ಒಂದು ಮನವಿ ಮಾಡುತ್ತೇನೆ. ಜಮ್ಮುವಿನ ಪ್ರತಿಯೊಂದು ನಗರದ ನಿವಾಸಿಗಳು ಮನೆಯಲ್ಲೇ ಇರಿ. ಮುಂದಿನ ಕೆಲವು ಗಂಟೆಗಳ ಕಾಲ ಮನೆಯಿಂದ ಹೊರಗೆ ಬರಬೇಡಿ. ಯಾವುದೇ ವದಂತಿ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಅನಧಿಕೃತವಾದ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಒಮರ್ ಅಬ್ದುಲ್ಲಾ ಜನರ ಬಳಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ:‌ `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿ ಮಿತ್ರರಾಷ್ಟ್ರಗಳ ಬಳಿ ಸಾಲಕ್ಕಾಗಿ ಅಂಗಲಾಚಿದ ಪಾಕ್ – ಟ್ರೋಲ್

  • ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ

    ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ

    ಶ್ರೀನಗರ: ಗುರುವಾರ ನಡೆದ ಕ್ಷಿಪಣಿ ದಾಳಿ ಬಳಿಕ ಇದೀಗ ಪಾಕ್ ಕದನ ವಿರಾಮ ಉಲ್ಲಂಘಿಸಿ ಮತ್ತೆ ದಾಳಿ ಆರಂಭಿಸಿದ್ದು, ಜಮ್ಮು & ಕಾಶ್ಮೀರ, ಪೂಂಚ್, ಉರಿ ಸೇರಿ ಹಲವು ಕಡೆಗಳಲ್ಲಿ ಶೆಲ್ ದಾಳಿ ನಡೆಸಿದೆ.

    ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಗುರುವಾರ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸಿದ್ದ ಭಾರತ ತಕ್ಕ ಉತ್ತರ ನೀಡಿತ್ತು. ಆದರೆ ಇದೀಗ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಜಮ್ಮುವಿನ ಉರಿ ಪ್ರದೇಶದ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಶೆಲ್ ದಾಳಿ ಆರಂಭಿಸಿದೆ.ಇದನ್ನೂ ಓದಿ: ಭಾರತದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಪಾಕ್‌ ದಾಳಿ: ಕೇಂದ್ರ ಸರ್ಕಾರ ವಾಗ್ದಾಳಿ

    ಜಮ್ಮು-ಕಾಶ್ಮೀರದ ಹಂದ್ವಾರ ಜಿಲ್ಲೆಯ ನೌಗಮ್ ಸೆಕ್ಟರ್, ಉರಿ, ಪೂಂಚ್ ಬಳಿಕ ಕುಪ್ವಾರಾ ಜಿಲ್ಲೆಯ ಜಿಲ್ಲೆಯ ಕರ್ನಾ ಮತ್ತು ತಂಗ್ಧರ್ ವಲಯಗಳಲ್ಲಿ ದಾಳಿ ನಡೆಸಿಸುತ್ತಿದೆ. ಇದರ ಬೆನ್ನಲ್ಲೇ ಭಾರತದ ವಾಯು ಪಡೆ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.

    ದಾಳಿ ಆರಂಭವಾಗುತ್ತಿದ್ದಂತೆ ಜಮ್ಮು ವಿಮಾನ ನಿಲ್ದಾಣ ಹಾಗೂ ಪಠಾಣ್‌ಕೋಟ್ ವಾಯುನೆಲೆಯ ಸೈರನ್‌ಗಳು ಮೊಳಗಿದವು. ನಿಯಂತ್ರಣ ರೇಖೆಯ ಉರಿ ವಲಯದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?