Tag: shell

  • ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಬಾಂಬ್ ಸ್ಫೋಟ 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ

    ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯದಲ್ಲಿ ಬಾಂಬ್ ಸ್ಫೋಟ 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿ ಗಂಭೀರ

    ಮುಂಬೈ: ಮಹಾರಾಷ್ಟ್ರದ ವಾರ್ಧಾ ಬಳಿಯಿರುವ ಸೇನಾ ಶಸ್ತ್ರಾಸ್ತ್ರ ಸಂಗ್ರಹಾಲಯ ಪುಲ್‍ಗಾಂವ್ ನಲ್ಲಿ ನಡೆದ ಸ್ಫೋಟದಿಂದಾಗಿ 6 ಮಂದಿ ಸಾವನ್ನಪ್ಪಿ 10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಪುಲ್‍ಗಾಂವ್ ನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ, ಶಸ್ತ್ರಾಸ್ತ್ರ ಕಾರ್ಖಾನೆಯ ಸಿಬ್ಬಂದಿ ಸೇರಿದಂತೆ 5 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಇವರಲ್ಲಿ 4 ಮಂದಿ ಸ್ಥಳದಲ್ಲೇ ಮೃತಪಟ್ಟರೇ, ಇನ್ನಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಇವರಲ್ಲದೇ 11 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಧ್ಯಪ್ರದೇಶದ ಕಮಾರಿಯಾ ಶಸ್ತ್ರಾಸ್ತ್ರ ಕಾರ್ಖಾನೆಯಿಂದ 23 ಎಂಎಂ ಫಿರಂಗಿಗಳನ್ನು ವಾರ್ಧಾ ಬಳಿಯಿರುವ ಪುಲ್‍ಗಾಂವ್ ನ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಮಂಗಳವಾರ ಬೆಳಗ್ಗೆ 7.15ರ ಸುಮಾರಿಗೆ ಕಾರ್ಮಿಕನ ಕೈಯಿಂದ ಬಿದ್ದ ಫಿರಂಗಿಯೊಂದು ಏಕಾಏಕಿ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಖಿಲ್ ಪಿಂಗ್‍ಕಲ್ ಹೇಳಿದ್ದಾರೆ.

    ಈ ಬಗ್ಗೆ ಸೇನಾ ಅಧಿಕಾರಿಗಳು ಮಾತನಾಡಿ, ಕಮಾರಿಯಾ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ತಂದಿದ್ದ ಫಿರಂಗಿಗಳನ್ನು ಕಂಟ್ರಾಕ್ಟರ್ ಹಾಗೂ ಕಾರ್ಮಿಕರ ನೆರವಿನಿಂದ ಪುಲ್‍ಗಾಂವ್ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಈ ವೇಳೆ ಅವಧಿ ಮುಗಿದ ಶೆಲ್ ವೊಂದು ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.

    ಪುಲ್‍ಗಾಂವ್ ಶಸ್ತ್ರಾಸ್ತ್ರ ಸಂಗ್ರಹಾಲಯ ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಯುದ್ಧ ಸಾಮಗ್ರಿ ಸಂಗ್ರಹಾಲಯವಾಗಿದೆ. 2016ರಲ್ಲಿಯೂ ಇದೇ ಪುಲ್‍ಗಾಂವ್ ಸೇನಾ ಸಂಗ್ರಹಾಲಯದಲ್ಲಿ ಇಂತಹುದೇ ದುರ್ಘಟನೆ ಸಂಭವಿಸಿ 16 ಮಂದಿ ಸಾವಿಗೀಡಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮೈಸೂರಿನಲ್ಲಿ 2 ಬಾಕ್ಸ್ ಶೆಲ್, ವಯರ್ ಬಾಕ್ಸ್ ಪತ್ತೆ!

    ಮೈಸೂರಿನಲ್ಲಿ 2 ಬಾಕ್ಸ್ ಶೆಲ್, ವಯರ್ ಬಾಕ್ಸ್ ಪತ್ತೆ!

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಲಘು ಬಾಂಬ್ ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿ ಮಾಡಿದೆ.

    ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಇರುವ ಪೀಪಲ್ಸ್ ಪಾರ್ಕ್ ನಲ್ಲಿ ಎರಡು ಬಾಕ್ಸ್ ಗಳಲ್ಲಿ ಶೆಲ್ ಹಾಗೂ ವಯರ್ ತುಂಬಿದ ಬಾಕ್ಸ್ ಪತ್ತೆಯಾಗಿದೆ. ಇದನ್ನು ಕಂಡ ಸಾರ್ವಜನಿಕರು ಭಯಗೊಂಡು ಕಂಟ್ರೋಲ್ ರೂಂಗೆ ಕರೆಮಾಡಿದ್ದಾರೆ. ಇದನ್ನೂ ಓದಿ; ಬೆಳ್ಳಂಬೆಳಗ್ಗೆ ಮೈಸೂರಿನ ಜನರಲ್ಲಿ ಆತಂಕ ಮೂಡಿಸಿದ ಬಾಂಬ್ ಕರೆ

    ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಪರೀಶಿಲನೆ ನಡೆಸಿದ್ದಾರೆ. ಈ ವೇಳೆ ಬಾಕ್ಸ್ ನಲ್ಲಿ ಸ್ಫೋಟಕ ವಸ್ತುಗಳಾದ ಶೆಲ್ ಹಾಗೂ ವಯರ್ ಗಳು ಪತ್ತೆಯಾಗಿವೆ. ಈ ಎಲ್ಲವನ್ನೂ ತಪಾಸಣೆ ನಡೆಸಿದ ಪೊಲೀಸರು ಬಾಕ್ಸ್ ನ್ನು ತೆಗೆದುಕೊಂಡು ಸಿಆರ್ ಗ್ರೌಂಡ್‍ನಲ್ಲಿ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

    2016ರ ಆಗಸ್ಟ್ ನಲ್ಲಿ ಮೈಸೂರು ಕೋರ್ಟ್ ನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನಗರದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.