Tag: Shehzad

  • ಹೆಸರಾಂತ ನಟ, ನಟಿಯರಿಗೆ ಗೇಟ್ ಪಾಸ್ ಕೊಟ್ಟ ನಿರ್ಮಾಪಕ

    ಹೆಸರಾಂತ ನಟ, ನಟಿಯರಿಗೆ ಗೇಟ್ ಪಾಸ್ ಕೊಟ್ಟ ನಿರ್ಮಾಪಕ

    ಚಿತ್ರೀಕರಣ ಸ್ಥಳದಲ್ಲಿ ಗಲಾಟೆ, ಗದ್ದಲ ಆಗೋದು ಸಾಮಾನ್ಯ. ಅಂತಹ ಸನ್ನಿವೇಶದಲ್ಲಿ ಸಂಧಾನ ಸಭೆಗಳು, ಮಾತುಕಥೆಗಳ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತದೆ. ಆದರೆ, ಇಲ್ಲಿ ಅಂತಹ ಸನ್ನಿವೇಶವೇ ಉದ್ಭವಿಸಿಲ್ಲ. ನಿರ್ಮಾಪಕರು ನೇರವಾಗಿ ತಮ್ಮ ಧಾರಾವಾಹಿಯ ನಟ, ನಟಿಯರಿಗೆ ಗೇಟ್ ಪಾಸ್ ಕೊಟ್ಟು, ಅಲ್ಲಿಂದ ಕಳುಹಿಸಿದ್ದಾರೆ.

    ಹಿಂದಿಯ ಜನಪ್ರಿಯ ಧಾರಾವಾಹಿ ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಧಾರಾವಾಹಿಯ ನಟ ನಟಿಯರಾದ ಶೆಹಜಾದಾ ಮತ್ತು ಪ್ರತೀಕ್ಷಾ ಅವರನ್ನು ಚಿತ್ರೀಕರಣದ ಸ್ಥಳದಿಂದಲೇ ಧಾರಾವಾಹಿ ನಿರ್ಮಾಪಕ ರಾಜನ್ ಶಾಹಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಈ ನಟರು ಅರ್ಮಾನ್ ಮತ್ತು ರೂಹಿ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.

     

    ಅವರನ್ನು ಶೂಟಿಂಗ್ ಸೆಟ್ ನಿಂದ ಕಳುಹಿಸೋಕೆ ಕಾರಣ, ಇಬ್ಬರೂ ವೃತ್ತಿಪರರಾಗಿ ಇರಲಿಲ್ಲವೆಂದು ಆರೋಪಿಸಲಾಗಿದೆ. ಶೆಹಜಾದ್ ಚಿತ್ರೀಕರಣದಲ್ಲಿ ಕೆಲಸ ಮಾಡುವವರ ಮೇಲೆ ಹಲ್ಲೆ ಮಾಡಿದ್ದಾರಂತೆ.  ಕೆಟ್ಟದ್ದಾಗಿ ನಡೆಸಿಕೊಂಡು, ದಬ್ಬಾಳಿಕೆ ಮಾಡುತ್ತಿದ್ದರು ಎನ್ನುವ ಆರೋಪವೂ ಇವರ ಮೇಲಿದೆ. ನಟಿಯು ನಿರ್ಮಾಪಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಹೊತ್ತಿದ್ದಾರೆ.

  • ‘ಪಠಾಣ್’ ಸಿನಿಮಾ ಏಟಿಗೆ, ಸಖತ್ ತಿರುಗೇಟು ನೀಡಿದ ‘ಶೆಹ್ಜಾದ’ ಟೀಮ್

    ‘ಪಠಾಣ್’ ಸಿನಿಮಾ ಏಟಿಗೆ, ಸಖತ್ ತಿರುಗೇಟು ನೀಡಿದ ‘ಶೆಹ್ಜಾದ’ ಟೀಮ್

    ಹೊಸ ಸಿನಿಮಾವೊಂದನ್ನು ತುಳಿಯಲು ಪಠಾಣ್ (Pathan) ಟೀಮ್ ಮಸಲತ್ತು ಮಾಡಿತಾ? ಇಂಥದ್ದೊಂದು ಆರೋಪ ಪಠಾಣ್ ತಂಡದ ಮೇಲೆ ಮಾಡಲಾಗಿತ್ತು. ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಕಾಂಬಿನೇಷನ್ ನ ಪಠಾಣ್ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ 1000 ಕೋಟಿ ಕ್ಲಬ್ ತಲುಪಿದೆ. ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕೂಡ ಕಾಣುತ್ತಿದೆ. ಆದರೂ, ಹಣದಾಹ ನಿಂತಿಲ್ಲ ಎನ್ನುವ ಆರೋಪ ಮಾಡಿದ ಶೆಹ್ಜಾದ ಟೀಮ್.

    ಈ ವಾರ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸೆನನ್ ಕಾಂಬಿನೇಷನ್ ನ ‘ಶೆಹ್ಜಾದ’ (Shehzad) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಹಣೆಯುವುದಕ್ಕಾಗಿಯೇ ಪಠಾಣ್ ಸಿನಿಮಾ ಏಕಾಏಕಿ ತನ್ನ ಟಿಕೆಟ್ ದರವನ್ನು ಕಡಿಮೆ ಮಾಡಿದೆ. ಇಂದು ಪಠಾಣ್ ಸಿನಿಮಾವನ್ನು ಕೇವಲ ರೂ.110ಕ್ಕೆ ನೋಡಬಹುದು ಎಂದು ಪೊಸ್ಟರ್ ರಿಲೀಸ್ ಮಾಡಿದೆ. ಸಡನ್ನಾಗಿ ಟಿಕೆಟ್ ಬೆಲೆ ಕಡಿಮೆ ಮಾಡುವುದಕ್ಕೆ ಕಾರಣ, ಹೊಸ ಸಿನಿಮಾ ಬಿಡುಗಡೆ. ಇದನ್ನೂ ಓದಿ: ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾದ ರಾಜ್ ಬಿ ಶೆಟ್ಟಿ

    ಪಠಾಣ್ ಇಂಥದ್ದೊಂದು ನಡೆಯನ್ನು ಘೋಷಿಸುತ್ತಿದ್ದಂತೆಯೇ ಶೆಹ್ಜಾದ್ ಟೀಮ್ ಕೂಡ ಸುಮ್ಮನೆ ಕೂತಿಲ್ಲ. ಅದು ಕೂಡ ಭರ್ಜರಿಯಾಗಿಯೇ ತಿರುಗೇಟು ನೀಡಿದೆ. ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂದು ಘೋಷಣೆ ಮಾಡಿದೆ. ಈ ಮೂಲಕ ಪಠಾಣ್‍ ಗೆ ಅದು ಮುಟ್ಟಿ ನೋಡಿಕೊಳ್ಳುವಂತಹ ಏಟನ್ನೇ ನೀಡಿದೆ.

    ಈ ಟಿಕೆಟ್ ಸಮರವನ್ನು ಬಾಲಿವುಡ್ ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದು, ಈ ರೀತಿಯ ಪೈಪೋಟಿ ಯಾರಿಗೂ ಸರಿಯಾದದ್ದು ಅಲ್ಲ ಎಂದಿದೆ. ಸಿನಿ ಪಂಡಿತರು ಇದರಿಂದ ಮುಂದೆ ಆಗುವ ಅನಾಹುತದ ಲೆಕ್ಕಾಚಾರವನ್ನೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ನೆಟ್ಟಿಗರು ಪಠಾಣ್ ನಡೆಯನ್ನು ಖಂಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k