Tag: Shehbaz Sharif

  • ನಿಮ್ಮ ಆದೇಶ ಕೆಲಸ ಮಾಡಲ್ಲ- ಇಮ್ರಾನ್ ಖಾನ್‌ಗೆ ಷರೀಫ್ ತಿರುಗೇಟು

    ನಿಮ್ಮ ಆದೇಶ ಕೆಲಸ ಮಾಡಲ್ಲ- ಇಮ್ರಾನ್ ಖಾನ್‌ಗೆ ಷರೀಫ್ ತಿರುಗೇಟು

    ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರು ಸರ್ಕಾರಕ್ಕೆ 6 ದಿನಗಳ ಒಳಗಾಗಿ ಚುನಾವಣೆ ಘೋಷಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯೆ ನೀಡಿದ್ದಾರೆ.

    ಇಮ್ರಾನ್ ಖಾನ್‌ಗೆ ತಿರುಗೇಟು ನೀಡಿದ ಷರೀಫ್, ಮುಂದಿನ ಸಾರ್ವತ್ರಿಕ ಚುನಾವಣೆಗಳ ದಿನಾಂಕವನ್ನು ರಾಷ್ಟ್ರೀಯ ಅಸೆಂಬ್ಲಿ ನಿರ್ಧರಿಸುತ್ತದೆ. ನಿಮ್ಮ ಆದೇಶ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.

    ಬುಧವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರವನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದ ಷರೀಫ್, ನಾನು ಪಿಟಿಐ ನಾಯಕನಿಗೆ ಒಂದು ವಿಚಾರ ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮ್ಮ ಆದೇಶ ಕೆಲಸ ಮಾಡುವುದಿಲ್ಲ. ಚುನಾವಣೆ ಯಾವಾಗ ನಡೆಸಬೇಕು ಎಂಬುದನ್ನು ರಾಷ್ಟರೀಯ ಅಸೆಂಬ್ಲಿ ನಿರ್ಧರಿಸುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: 6 ದಿನಗಳೊಳಗೆ ಚುನಾವಣೆ ಘೋಷಿಸಿ, ಇಲ್ಲವೇ…: ಇಮ್ರಾನ್ ಖಾನ್ ಎಚ್ಚರಿಕೆ

    ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೊಸ ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಗುರುವಾರ ಇಸ್ಲಾಮಾಬಾದ್‌ನ ಡಿ-ಚೌಕ್ ಪ್ರದೇಶದಲ್ಲಿ ತೀವ್ರವಾದ ಪ್ರತಿಭಟನೆ ನಡೆದಿದೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, 6 ದಿನಗಳ ಒಳಗಾಗಿ ಹೊಸ ಚುನಾವಣೆ ಘೋಷಿಸಬೇಕಾಗಿ ಖಾನ್ ಗಡುವು ನೀಡಿದ್ದಾರೆ. ಒಂದು ವೇಳೆ ಹೊಸ ಚುನಾವಣೆ ಘೋಷಿಸದೇ ಹೋದಲ್ಲಿ ಪ್ರತಿಭಟನೆ ನಡೆಸಲು ಇಡೀ ರಾಷ್ಟ್ರದೊಂದಿಗೆ ಇಸ್ಲಾಮಾಬಾದ್‌ಗೆ ಮರಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

  • ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಮ್‍ನಲ್ಲಿ ಹಣವಿಲ್ಲ – ಪಾಕ್ ದುಸ್ಥಿತಿ ಬಿಚ್ಚಿಟ್ಟ ಹಫೀಜ್

    ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಮ್‍ನಲ್ಲಿ ಹಣವಿಲ್ಲ – ಪಾಕ್ ದುಸ್ಥಿತಿ ಬಿಚ್ಚಿಟ್ಟ ಹಫೀಜ್

    ಇಸ್ಲಾಮಾಬಾದ್: ಲಾಹೋರ್‌ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಮ್‍ನಲ್ಲಿ ಹಣವಿಲ್ಲ ಎಂದು ಪಾಕಿಸ್ತಾನದಲ್ಲಿರುವ ಸ್ಥಿತಿಗತಿಗಳ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವಿಟ್ಟರ್ ಮೂಲಕ ಕಿಡಿಕಾರಿದ್ದಾರೆ.

    PAK

    ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಲಭ್ಯವಿಲ್ಲವೇ? ಎಟಿಎಂ ಯಂತ್ರಗಳಲ್ಲಿ ನಗದು ಲಭ್ಯವಿಲ್ಲವೇ? ರಾಜಕೀಯ ಬಿಕ್ಕಟ್ಟಿನಿಂದಾಗಿ ಜನಸಾಮಾನ್ಯರೇಕೆ ನರಳಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪ್ರಸ್ತುತ ಪ್ರಧಾನಿ ಶಹಾಬಾಜ್‌ ಷರೀಫ್ ಸೇರಿದಂತೆ ಕೆಲ ರಾಜಕೀಯ ನಾಯಕರಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್

    ಹಫೀಜ್ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರಗಳ ಬಗ್ಗೆ ಕೂಡ ಚಕಾರ ಎತ್ತಿದ್ದರು. ಇದೀಗ ಸರ್ಕಾರದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಏಕೆ ಕಪ್ ಗೆದ್ದಿಲ್ಲ? – ಕೊಹ್ಲಿ ವಿರುದ್ಧ ಸೆಹ್ವಾಗ್ ಮಹತ್ವದ ಹೇಳಿಕೆ

    ಹಫೀಜ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಮೂರು ಮಾದರಿ ಕ್ರಿಕೆಟ್‍ನಲ್ಲಿ ಹಫೀಜ್, ಪಾಕ್ ಪರ 12,000ಕ್ಕೂ ಅಧಿಕ ರನ್ ಮತ್ತು 250ಕ್ಕೂ ಹೆಚ್ಚು ವಿಕೆಟ್ ಪಡೆದು ಯಶಸ್ವಿ ಆಲ್‍ರೌಂಡರ್ ಎನಿಸಿಕೊಂಡಿದ್ದರು.

  • ಇಮ್ರಾನ್ ಖಾನ್‌ನನ್ನು ಬಂಧಿಸಿದ್ರೆ ಪಾಕಿಸ್ತಾನ ಶ್ರೀಲಂಕಾವಾಗುತ್ತದೆ: ಪಾಕ್ ಮಾಜಿ ಸಚಿವ

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ, ಪಾಕಿಸ್ತಾನ ಶ್ರೀಲಂಕಾವಾಗಿ ಬದಲಾಗುತ್ತದೆ. ಇದಕ್ಕೆ ಹೊಸ ಸರ್ಕಾರವೇ ಹೊಣೆಯಾಗಲಿದೆ ಎಂದು ಪಾಕ್ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ ಎಚ್ಚರಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಶೀದ್, ಪ್ರಸ್ತುತ ಪಾಕಿಸ್ತಾನದ ಸಮ್ಮಿಶ್ರ ಸರ್ಕಾರ ದಿಕ್ಕಿಲ್ಲದ ಸ್ಥಿತಿಯಲ್ಲಿದೆ. ಅವರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರು. ಇದನ್ನೂ ಓದಿ: ಮೇ 18ಕ್ಕೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಘೋಷಣೆ

    ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ, ಅದರ ಪರಿಸ್ಥಿತಿಯನ್ನು ಎದುರಿಸಲು ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದೆ. ಒಂದು ವೇಳೆ ಅವರನ್ನು ಬಂಧಿಸಿದ್ದೇ ಆದಲ್ಲಿ, ಪಾಕಿಸ್ತಾನ ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಯನ್ನೇ ಎದುರಿಸಲಿದೆ. ಇದಕ್ಕೆ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರವೇ ಹೊಣೆಯಾಗಲಿದೆ ಎಂದು ರಶೀದ್ ಹೇಳಿಕೆ ನೀಡಿದ್ದಾರೆ.

    ಶ್ರೀಲಂಕಾ 1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕದ ಇತಿಹಾಸದಲ್ಲಿ ಎಂದೂ ಕಂಡಿರದ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದೀಗ ಪಾಕಿಸ್ತಾನ ಶ್ರೀಲಂಕಾವಾಗಿ ಬದಲಾಗುವುದನ್ನು ನಾನು ಬಯಸುವುದಿಲ್ಲ ಎಂದು ರಶೀದ್ ತಿಳಿಸಿದ್ದಾರೆ. ಇದನ್ನೂ ಓದಿ: ಎರಡಂಕಿಗೆ ಇಳಿಕೆ ಕಂಡ ಕೊರೊನಾ – ನಿನ್ನೆಗಿಂತ ಇಂದು 28 ಕೇಸ್ ಇಳಿಮುಖ

    Shehbaz Sharif

    ಇತ್ತೀಚೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಕಳೆದ ತಿಂಗಳ ಅಂತ್ಯದಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸೌದಿ ಅರೇಬಿಯಾದ ಮದೀನಾಗೆ ಭೇಟಿ ನೀಡಿದ್ದಾಗ, ಅವರ ವಿರುದ್ಧ ಯಾತ್ರಾರ್ಥಿಗಳು ಘೋಷಣೆ ಕೂಗಿದ್ದರು. ಇದರ ಹಿಂದೆ ಇಮ್ರಾನ್ ಖಾನ್ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.

  • ಪಾಕಿಸ್ತಾನದಲ್ಲಿ ಗುಂಡಿಕ್ಕಿ ಸಿಖ್ಖರ ಹತ್ಯೆ – ಭಾರತ ತೀವ್ರ ಖಂಡನೆ

    ಪಾಕಿಸ್ತಾನದಲ್ಲಿ ಗುಂಡಿಕ್ಕಿ ಸಿಖ್ಖರ ಹತ್ಯೆ – ಭಾರತ ತೀವ್ರ ಖಂಡನೆ

    ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದ ಉಪನಗರವಾದ ಪೇಶಾವರದ ಸರ್ಬಂದ್ ಪ್ರದೇಶದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

    ಗುಂಡಿನ ದಾಳಿಗೆ ಬಲಿಯಾದವರನ್ನು ಸಲ್ಜೀತ್ ಸಿಂಗ್ (42) ಹಾಗೂ ರಂಜೀತ್‌ಸಿಂಗ್ (38) ಎಂದು ಗುರುತಿಸಲಾಗಿದೆ. ಈ ಇಬ್ಬರೂ ತಮ್ಮ ಅಂಗಡಿಯಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳನ್ನು ಬಂಧಿಸಲು ಪ್ರದೇಶವನ್ನು ಸುತ್ತುವರಿದಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

    ಭಾರತ ತೀವ್ರ ಖಂಡನೆ: ಸಿಖ್ ಸಮುದಾಯದ ವ್ಯಾಪಾರಿಗಳ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನೆಯನ್ನೂ ದಾಖಲಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್‌ಮಾನ್, ಮಾಜಿ ಸಿಎಂ ಅಮರಿಂದರ್ ಸಿಂಗ್ ಹಾಗೂ ಭಾರತದ ವಿದೇಶಾಂಗ ಸಚಿವಾಲಯವೂ ತೀವ್ರವಾಗಿ ಖಂಡಿಸಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    ಘಟನೆ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರರು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಸರಣಿ ಹತ್ಯೆ ಮುಂದುವರಿದಿದೆ. ಈ ಹತ್ಯೆ ಬಗ್ಗೆ ಪಾಕಿಸ್ತಾನ ಸರ್ಕಾರದ ವಿರುದ್ಧ ಬಲವಾದ ಪ್ರತಿಭಟನೆ ದಾಖಲಿಸಿದ್ದೇವೆ. ಈ ವಿಷಯವನ್ನು ಪ್ರಾಮಾಣಿಕವಾಗಿ ತನಿಖೆ ಮಾಡಲು ಹಾಗೂ ಕೃತ್ಯ ಎಸಗಿದ ನೀಚರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಾವು ಕರೆ ನೀಡುತ್ತೇವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ಸರ್ಕಾರವು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

    ಪಾಕ್ ಪ್ರಧಾನಿ ಶೆಹಬಾಜ್ ಸಹ ಇದಕ್ಕೆ ಪ್ರತಿಕ್ರಿಯಿಸಿದ್ದು, ಹತ್ಯೆಯ ಹಿಂದಿನ ಸತ್ಯಾಂಶಗಳನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಹಂತಕರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಸಿಖ್ಖರ ಸುರಕ್ಷತೆ ಖಚಿತಪಡಿಸಿಕೊಳ್ಳಿ: ಪಂಜಾಬ್ ಸಿಎಂ ಭಗವಂತ್ ಮಾನ್, ಪಾಕಿಸ್ತಾನದ ಪೇಶಾವರದಲ್ಲಿ ಇಬ್ಬರು ಸಿಖ್ಖರ ಭೀಕರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ವಿದೇಶಾಂಗ ಸಚಿವರಿಗೂ ನಾನು ವಿನಂತಿಸುತ್ತೇನೆ. ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

    ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನದಲ್ಲಿ ಮತ್ತೆ ಸಿಖ್ಖರ ಹತ್ಯೆಯಾಗಿದೆ. ಇದು ಅತ್ಯಂತ ಖಂಡನೀಯ. ನಾನು ಯಾವಾಗಲೂ ಹೇಳುತ್ತಿದ್ದೆ, ಪಾಕಿಸ್ತಾನ ಸರ್ಕಾರ ಸಿಖ್ಖರ ಭದ್ರತೆಯನ್ನು ಖಾತ್ರಿಪಡಿಸದೇ ಅವರಿಗೆ ಕೇವಲ ಆಶ್ವಾಸನೆ ನೀಡುತ್ತಿದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

  • ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    ಇಸ್ಲಾಂಬಾದ್: ಕಳ್ಳರಿಗೆ ಅಧಿಕಾರರ ಚುಕ್ಕಾಣಿಯನ್ನು ನೀಡುವುದಕ್ಕಿಂತ ಪರಮಾಣು ಬಾಂಬ್ ಹಾಕುವುದು ಉತ್ತಮ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಹಾಗೂ ನೂತನ ಸರ್ಕಾರದ ಬಗ್ಗೆ ವಿಚಿತ್ರವಾದ ಹೇಳಿಕೆಯನ್ನು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಅಧ್ಯಕ್ಷರು ಕೂಡ ದೇಶವನ್ನು ಲೂಟಿ ಮಾಡುತ್ತಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹವರಿಗೆ ಅಧಿಕಾರ ಹಸ್ತಾಂತರಿಸುವುದಕ್ಕಿಂತ ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕುವುದು ಉತ್ತಮ ಎಂದು ಹೇಳಿದರು.

    ಹಿಂದಿನ ಆಡಳಿತಗಾರರ ಭ್ರಷ್ಟಾಚಾರದ ಕಥೆಗಳನ್ನು ಹೇಳುವ ಪ್ರಬಲ ವ್ಯಕ್ತಿಗಳು ಇತರರ ವಿರುದ್ಧ ಆರೋಪಗಳನ್ನು ಮಾಡುವ ಬದಲಿಗೆ ತಮ್ಮ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಚಿಂತಿಸಬೇಕು ಎಂದ ಅವರು, ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಳ್ಳರು ಪ್ರತಿಯೊಂದು ಸಂಸ್ಥೆ ನ್ಯಾಯಾಂಗ ವ್ಯವಸ್ಥೆಯನ್ನು ನಾಶ ಪಡಿಸುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯೂ ಪ್ರಕರಣದ ತನಿಖೆ ಮಾಡಲಾಗುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದಿ ಅಥವಾ ಯಾವುದೋ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ: TN ರಾಜ್ಯಪಾಲ ಆರ್.ಎನ್.ರವಿ

    Shehbaz Sharif

    ಈ ಹಿಂದೆ ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿ, ಇಮ್ರಾನ್ ಖಾನ್ ಅವರು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವ ಮೂಲಕ ಪಾಕಿಸ್ತಾನದ ಜನರ ಮನಸ್ಸಿನಲ್ಲಿ ವಿಷವನ್ನು ಬಿತ್ತುತ್ತಿದ್ದಾರೆ. ಕಳ್ಳರು, ಡಕಾಯಿತರು ಎಂದು ಪದೇ ಪದೇ ಕರೆಯುವ ಮೂಲಕ ರಾಷ್ಟ್ರವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಕೃಷ್ಣಮೃಗ ಬೇಟೆಗಾರರಿಂದ 3 ಪೊಲೀಸರ ಹತ್ಯೆ – 1 ಕೋಟಿ ರೂ. ಪರಿಹಾರ ಫೋಷಿಸಿದ ಸಿಎಂ

  • ಪಾಕ್ ಮಾಜಿ ಪಿಎಂ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲು

    ಪಾಕ್ ಮಾಜಿ ಪಿಎಂ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲು

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಾಗಿದ್ದು, ಅವರನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

    ಕಳೆದ ಗುರುವಾರ ಸೌದಿ ಅರೇಬಿಯಾದ ಮದೀನಾಗೆ ಭೇಟಿ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ಯಾತ್ರಾರ್ಥಿಗಳು ಘೋಷಣೆ ಕೂಗಿದ್ದರು. ಇದಾದ ಬಳಿಕ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಅವರ ಬೆಂಬಲಿಗರ ವಿರುದ್ಧ ಧರ್ಮನಿಂದನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ರಷ್ಯಾ ಮುತ್ತಿಗೆ – ಮರಿಯುಪೋಲ್‌ನಿಂದ ನೂರಾರು ಜನರ ಸ್ಥಳಾಂತರ

    Shehbaz Sharif

    ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಅವರ ನಿಯೋಗದ ವಿರುದ್ಧ ಗೂಂಡಾಗಿರಿ ಹಾಗೂ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗುವುದು ಎಂದು ಸಚಿವ ರಾಣಾ ಸನಾವುಲ್ಲಾ ತಿಳಿಸಿರುವುದಾಗಿ ವರದಿಯಾಗಿದೆ.

    ಪ್ರಕರಣ ಏನು?
    ಶೆಹಬಾಜ್ ಷರೀಫ್ ಹಾಗೂ ಅವರ ನಿಯೋಗದ ಇತರ ಸದಸ್ಯರು ಮದೀನಾದ ಪ್ರವಾದಿ ಮಸೀದಿಗೆ ಭೇಟಿ ನೀಡಿದ ಸಂದರ್ಭ ಇಮ್ರಾನ್ ಖಾನ್ ಬೆಂಬಲಿಗರು ಷರೀಫ್ ವಿರುದ್ಧ ಚೋರ್(ಕಳ್ಳ) ಹಾಗೂ ಗದ್ದರ್(ದೇಶದ್ರೋಹಿ) ಎಂದು ಘೋಷಣೆ ಕೂಗಿದ್ದರು. ಇದನ್ನೂ ಓದಿ: ಭಾರತೀಯನಿಗೆ ಒಲಿಯಿತು ಸಿಐಎಯ ಮೊದಲ ಮುಖ್ಯ ತಂತ್ರಜ್ಞಾನ ಅಧಿಕಾರಿ ಪಟ್ಟ

    ಪಾಕಿಸ್ತಾನಿ ಯಾತ್ರಾರ್ಥಿಗಳು ನಿಯೋಗದ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದ್ದು, ಘೋಷಣೆ ಕೂಗಿದ ಐವರು ಪಾಕಿಸ್ತಾನಿಗಳನ್ನು ಬಂಧಿಸಲಾಗಿದೆ ಎಂದು ಮದೀನಾ ಪೊಲೀಸರು ತಿಳಿಸಿದ್ದಾರೆ. ಆದರೆ ಇಮ್ರಾನ್ ಖಾನ್ ಈ ರೀತಿ ಪವಿತ್ರ ಸ್ಥಳದಲ್ಲಿ ಘೋಷಣೆ ಕೂಗುವಂತೆ ಯಾರಿಗೂ ಪ್ರಚೋದನೆ ನೀಡಿಲ್ಲ ಹಾಗೂ ಆ ರೀತಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.

  • 24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    ದುಬೈ: ಇತ್ತೀಚೆಗಷ್ಟೇ ಪೀಠ ಅಲಂಕರಿಸಿದ ಪಾಕಿಸ್ತಾನದ ನೂತನ ಪ್ರಧಾನಿ ಶಹಾಬಾಜ್ ಷರೀಫ್‌ಗೆ ಸೌದಿ ಅರೇಬಿಯಾದಲ್ಲಿ ಅಪಮಾನವಾಗಿದ್ದು, ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಈ ಘಟನೆ ನಡೆದಿದೆ. ಘಟನೆ ವೇಳೆ ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಹಿನ್ನೆಲೆಯಲ್ಲಿ 17 ರಕ್ಷಣಾ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.

    Shehbaz Sharif

    ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ತಂಡದೊಂದಿಗೆ ಸೌದಿ ಅರೇಬಿಯಾದ ಮೆದಿಯಾನಾದಲ್ಲಿರುವ ಮಸ್ಜಿದ್-ಇ-ನಬಾವಿಗೆ ತೆರಳಿದಾಗ ಅಲ್ಲಿನ ಪಾಕ್ ಮೂಲದ ಜನರು ಅವರಿಗೆ ಅವಮಾನ ಮಾಡಿದ್ದು, ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಪಾಕ್ ಪ್ರಧಾನಿಗೆ ಅಪಮಾನ ಆಗಿದೆ. ಇದನ್ನೂ ಓದಿ; ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ

    ಶಹಾಬಾಜ್ ನಡೆದು ಬರುತ್ತಿದ್ದ ವೇಳೆ, ಜನರು ಅವರಿಗೆ `ಕಳ್ಳ- ಕಳ್ಳ’, ಪಾಕಿಸ್ತಾನಿ ವಿರೋಧಿ, ಶೆಹಾಬಾಜ್ ವಿದೇಶಿಗರ ಮಾತಿನಂತೆ ಸರ್ಕಾರ ನಡೆಸುತ್ತಿರುವ ದೇಶ ದ್ರೋಹಿ ಎಂದು ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಪಾಕ್‌ನ ಈಗಿನ ಮಾಹಿತಿ ಸಚಿವಾಲಯದ ಸಚಿವರಾಗಿರುವ ಮರಿಯುಮ್ ಔರಂಗಜೇಬ್ ಮಾತನಾಡಿದ್ದು, ಹಳೆದ ಸರ್ಕಾರ ಪೂರ್ತಿ ಪಾಕಿಸ್ತಾನವನ್ನು ಹಾಳು ಮಾಡಿದೆ. ಆದರೆ ನಾವು ನಮ್ಮ ದೇಶವನ್ನು ಸರಿ ದಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ – ಬ್ರಿಟನ್ ಶಾಸಕ ರಾಜೀನಾಮೆ

    2ನೇ ಬಾರಿಗೆ ಶಹಾಬಾಜ್ ಷರೀಫ್ ಭಾರೀ ಭದ್ರತೆಯಲ್ಲಿ ಪ್ರವೇಶಿದ್ದು, ಈ ವೇಳೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. ಆದರೂ ಜನರು ತಾವಿದ್ದಲ್ಲಿಂದಲೇ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ನನ್ನು ಕೆಳಗಿಳಿಸಿ ಶಹಾಬಾಜ್ ಹೇಗೆ ಪ್ರಧಾನಿಯಾದರು ಎಂಬುದರ ಬಗ್ಗೆ ಬ್ಲಾಗ್‌ವೊಂದರಲ್ಲಿ ಬರೆದು ಅಪಮಾನ ಮಾಡಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್

    IMRANKHAN

    ಇದಕ್ಕೂ ಮುನ್ನ, ಷರೀಫ್ ನೇತೃತ್ವದ ನಿಯೋಗವು ಮದೀನಾದ ಮಸೀದಿ-ಎ-ನಬವಿಯನ್ನು ಪ್ರವೇಶಿಸಿದಾಗಲೂ `ಚೋರ್ ಚೋರ್’ ಎಂಬ ಘೋಷಣೆ ಕೇಳಿಬಂದಿತ್ತು. ಅದೇ ರೀತಿ ಸೌದಿ ಅರೇಬಿಯಾದಲ್ಲಿ ಅಧಿಕಾರಿಗಳು ನಿಯೋಗದ ವಿರುದ್ಧ ಘೋಷಣೆ ಕೂಗುತ್ತಿದ್ದ ಕೆಲವು ಪಾಕಿಸ್ತಾನಿ ಯಾತ್ರಿಕರನ್ನು ಮಸೀದಿಯ ಪಾವಿತ್ರ‍್ಯಕ್ಕೆ ಅಗೌರವ ತೋರಿದ ಕಾರಣ ನೀಡಿ ಬಂಧಿಸಲಾಗಿದೆ ಎಂದು ಸೌದಿ ರಾಯಭಾರಿ ಕಚೇರಿಯ ಮಾಧ್ಯಮ ನಿರ್ದೇಶಕರು ತಿಳಿಸಿದ್ದಾರೆ.

  • ಶಾಂತಿಯುತ ಸಹಕಾರ ಸಂಬಂಧಗಳನ್ನು ಬೆಳೆಸೋಣ: ಮೋದಿಗೆ ಷರೀಫ್ ಪತ್ರ

    ಶಾಂತಿಯುತ ಸಹಕಾರ ಸಂಬಂಧಗಳನ್ನು ಬೆಳೆಸೋಣ: ಮೋದಿಗೆ ಷರೀಫ್ ಪತ್ರ

    ಇಸ್ಲಾಮಾಬಾದ್: ಹೊಸದಾಗಿ ಚುನಾಯಿತರಾಗಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ಷರೀಫ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಶಾಂತಿಯುತ ಹಾಗೂ ಸಹಕಾರಿ ಸಂಬಂಧವನ್ನು ಬೆಳೆಸುವಂತೆ ಕೋರಿದ್ದಾರೆ.

    ಶೆಹಬಾಜ್ ಷರೀಫ್ ಕೆಲವು ದಿನಗಳ ಹಿಂದೆ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವಿನ ಶಾಂತಿಯುತ ಬಾಂಧವ್ಯ ಹಾಗೂ ಜಮ್ಮು-ಕಾಶ್ಮೀರದ ಸಂಘರ್ಷ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕೋರಿದ್ದಾರೆ ಎಂದು ಭಾನುವಾರ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸ್ವೀಡನ್‌ನಲ್ಲಿ ಕುರಾನ್ ದಹನದ ಬೆದರಿಕೆ – ವಾಹನಗಳಿಗೆ ಬೆಂಕಿ, ಪೊಲೀಸ್ ವಾಹನಗಳು ಧ್ವಂಸ

    ಶೆಹಬಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿ ಸ್ಥಾನವನ್ನು ಅಲಂಕರಿಸಿದ ಬಳಿಕ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಷರೀಫ್ ಪತ್ರವನ್ನು ಕಳುಹಿಸಿದ್ದಾರೆ. ಪಾಕಿಸ್ತಾನದ ರಾಜಕೀಯ ಪಕ್ಷ ಪಿಎಂಎಲ್ ಜಮ್ಮು-ಕಾಶ್ಮೀರ ಹಾಗೂ ಬಾಕಿ ಉಳಿದಿರುವ ಎಲ್ಲಾ ಸಮಸ್ಯೆಗಳನ್ನೂ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಮೂಲಕ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಸಾಧಿಸಬಹುದು ಎಂದು ಹೇಳಿತ್ತು. ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ದಕ್ಷಿಣ ಆಫ್ರಿಕಾ ತತ್ತರ – 443ಕ್ಕೆ ಏರಿದ ಸಾವಿನ ಸಂಖ್ಯೆ

    ಏಪ್ರಿಲ್ 11 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೋದಿ ಟ್ವೀಟ್ ಮೂಲಕ ಅವರನ್ನು ಅಭಿನಂದಿಸಿದ್ದರು ಹಾಗೂ ಉಭಯ ರಾಷ್ಟ್ರಗಳು ಒಟ್ಟಾಗಿ ಜನರ ಯೋಗಕ್ಷೇಮ ಹಾಗೂ ಸಮೃದ್ಧಿಗಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದಿದ್ದರು.

  • ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ

    ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಅವರಿಗೆ ನರೇಂದ್ರ ಮೋದಿ ಹಾರೈಕೆಯ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ಷರೀಫ್ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಇದರೊಂದಿಗೆ ಷರೀಫ್ ಪಾಕಿಸ್ತಾನ ಭಾರತದೊಂದಿಗೆ ಶಾಂತಿಯುತ ಹಾಗೂ ಸಹಕಾರಿ ಬಾಂಧವ್ಯ ಬಯಸುತ್ತದೆ ಎಂದು ರೀಟ್ವೀಟ್ ಮಾಡಿದ್ದಾರೆ.

    ಷರೀಫ್ ಪಾಕಿಸ್ತಾನದ ಪ್ರಧಾನಿಯಾಗುತ್ತಿದ್ದಂತೆ ಅಭಿನಂದಿಸಿದ ಮೋದಿ, ಭಾರತ ಭಯೋತ್ಪಾದನೆ ಮುಕ್ತ ಪ್ರದೇಶ, ಶಾಂತಿ ಹಾಗೂ ಸ್ಥಿರತೆಯನ್ನು ಬಯಸುತ್ತದೆ. ಇದರಿಂದ ನಾವು ನಮ್ಮ ಅಭಿವದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು. ಜೊತೆಗೆ ನಮ್ಮ ಜನರ ಯೋಗಕ್ಷೇಮ ಹಾಗೂ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದರು. ಇದನ್ನೂ ಓದಿ: ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

    ಇದಕ್ಕೆ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ, ಮೋದಿಗೆ ಧನ್ಯವಾದ ತಿಳಿಸಿ, ಪಾಕಿಸ್ತಾನ ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರದ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಾಕಿ ಉಳಿದಿರುವ ವಿವಾದಗಳ ಶಾಂತಿಯುತ ಇತ್ಯರ್ಥ ಅನಿವಾರ್ಯವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ತ್ಯಾಗಗಳು ಎಲ್ಲರಿಗೂ ತಿಳಿದಿವೆ. ಶಾಂತಿಯನ್ನು ಕಾಪಾಡೋಣ ಹಾಗೂ ನಮ್ಮ ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಗಮನ ಕೊಡೋಣ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಪತ್ರಕರ್ತನಿಗೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ಮತ ಗಳಿಸಲು ವಿಫಲವಾದ ಬಳಿಕ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಬಳಿಕ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಸೋಮವಾರ ರಾಷ್ಟ್ರೀಯ ಅಸೆಂಬ್ಲಿಯಿಂದ 174 ಮತಗಳನ್ನು ಗಳಿಸಿ, ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾದರು.

  • ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

    ಪಾಕಿಸ್ತಾನದ ನೂತನ ಪ್ರಧಾನಿಗೆ ಮೋದಿ ಅಭಿನಂದನೆ

    ನವದೆಹಲಿ: ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶವನ್ನು ಬಯಸುತ್ತದೆ ಎಂದು ನೂತನವಾಗಿ ಆಯ್ಕೆಯಾದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

    ಟ್ವೀಟ್‍ನಲ್ಲಿ ಏನಿದೆ?: ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಮಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ನೆರಳು ಇಲ್ಲದೇ, ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ. ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು. ಜೊತೆಗೆ ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

    ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ವಿರೋಧ ಪಕ್ಷದ ಮಾಜಿ ನಾಯಕ ಶೆಹಬಾಜ್ ಷರೀಫ್ ಅವರು ರಾಷ್ಟ್ರೀಯ ಅಸೆಂಬ್ಲಿಯಿಂದ 174 ಮತಗಳನ್ನು ಗಳಿಸಿ ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಆಯ್ಕೆಯಾದರು. ಇದನ್ನೂ ಓದಿ: ತಾಕತ್ತಿದ್ರೆ ಎಲ್ಲಾ ಮುಸ್ಲಿಂ ಮಹಿಳೆಯರಿಗೂ ಹಿಜಬ್ ತೊಡಿಸಿ – RSS ಮುಖಂಡ ಡಾ.ಹಣಮಂತ ಮಳಲಿ ಸವಾಲು

    ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಾಸ ಮತ ಗಳಿಸಲು ವಿಫಲವಾದ ನಂತರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಾದ ಬಳಿಕ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕರ ಒತ್ತಾಯಕ್ಕೆ 100 ಬಸ್ಕಿ ಹೊಡೆದ 7 ಮಂದಿ ವಿದ್ಯಾರ್ಥಿನಿಯರು – ಆಸ್ಪತ್ರೆಗೆ ದಾಖಲು