Tag: Shehbaz Sharif

  • ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    ಇಸ್ಲಾಮಾಬಾದ್: ದಿವಾಳಿ ಪಾಕಿಸ್ತಾನದ (Pakistan) ರೂಪಾಯಿ ಮೌಲ್ಯ ಈಗ ಡಾಲರ್ (US Dollar) ಎದುರು ಸಾರ್ವಕಾಲಿಕ 255 ರೂ.ಗೆ ಕುಸಿತ ಕಂಡಿದೆ.

    ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಒಂದೇ ದಿನ ಡಾಲರ್ ಎದುರು 24 ರೂ. ಕುಸಿತ ಕಂಡಿದ್ದು 255 ರೂ.ಗೆ ತಲುಪಿದೆ. ಕಳೆದ ಜನವರಿಯಲ್ಲಿ ಡಾಲರ್ ಎದುರು 175 ರೂ.ನಷ್ಟಿತ್ತು. ಇದೀಗ 255 ರೂ.ಗೆ ತಲುಪಿದೆ. ಈ ನಡುವೆ ಮಾರುಕಟ್ಟೆ ಶಕ್ತಿಗಳಿಗೆ ತಮ್ಮ ಕರೆನ್ಸಿ ದರವನ್ನು ನಿರ್ಧರಿಸಲು ಅವಕಾಶ ನೀಡುವಂತೆ ಪಾಕ್ ಸರ್ಕಾರಕ್ಕೆ ಷರತ್ತು ವಿಧಿಸಿದೆ. ಈ ಷರತ್ತನ್ನು ಪಾಕ್ ಸರ್ಕಾರ ಸಹ ಒಪ್ಪಿಕೊಂಡಿದೆ.

    PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಏಕೆಂದರೆ ಪಾಕಿಸ್ತಾನ (Pakistan) ತನ್ನ ಸ್ಥಿರತೆ ಕಾಯ್ದುಕೊಳ್ಳಲು 6.5 ಬಿಲಿಯನ್ ಡಾಲರ್ ನೆರವು ಪಡೆಯಲು ಹವಣಿಸುತ್ತಿದೆ. ಅದಕ್ಕಾಗಿ ಜಾಗತಿಕ ಸಂಸ್ಥೆಯ ಅನುಮೋದನೆ ಪಡೆಯಲು ಎದುರು ನೋಡುತ್ತಿದೆ. ಇದನ್ನೂ ಓದಿ: PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಈಗಾಗಲೇ ಪಾಕಿಸ್ತಾನದಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಒಂದು ಪ್ಯಾಕೆಟ್ ಗೋಧಿ ಹಿಟ್ಟಿನ ಬೆಲೆ 3 ಸಾವಿರಕ್ಕೆ ಮಾರಾಟವಾಗುತ್ತಿದೆ. ವಿದ್ಯುತ್ ನಿರಂತರವಾಗಿ ಕೈಕೊಡುತ್ತಿರುವುದರಿಂದ ಇಡೀ ಪಾಕ್ ಕಗ್ಗತ್ತಲಲ್ಲಿ ಮುಳುಗಿದೆ. ಇದನ್ನೂ ಓದಿ: ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ

    PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್‌ ಹಿಂದೆ ಓಟ - ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ

    ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು (Pakistan Economic Crisis), ಹಣದುಬ್ಬರ ಉಂಟಾಗಿದೆ. ಪರಿಣಾಮವಾಗಿ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಶ್ರೀಲಂಕಾ ಅನುಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಪಾಕಿಸ್ತಾನಕ್ಕೂ ಎದುರಾಗಿದೆ. ವಿದೇಶಗಳಿಂದ ವಸ್ತು, ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ಕೊರತೆಯೂ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿದೆ. ಆಹಾರ ಬಿಕ್ಕಟ್ಟು ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ವಿರುದ್ಧ ಜನ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ

    ಕಗ್ಗತ್ತಲಲ್ಲಿ ಪಾಕಿಸ್ತಾನ, ರಾಷ್ಟ್ರವ್ಯಾಪಿ ವಿದ್ಯುತ್ ಕಡಿತ- ಲಕ್ಷಾಂತರ ಜನರಿಗೆ ತೊಂದರೆ

    ಇಸ್ಲಾಮಾಬಾದ್: ರಾಷ್ಟ್ರೀಯ ಗ್ರಿಡ್‌ನಲ್ಲಿ `ಕಡಿಮೆ ಆವರ್ತನ’ದಿಂದಾಗಿ ಪಾಕಿಸ್ತಾನವು ಸೋಮವಾರ ರಾಷ್ಟ್ರೀಯ ವಿದ್ಯುತ್ ಕಡಿತ (Pakistan Power Crisis) ಅನುಭವಿಸಿದೆ. ಇದರಿಂದ ಲಕ್ಷಾಂತರ ಜನರು ವಿದ್ಯುತ್ ಇಲ್ಲದೇ ಪರದಾಡಿದ್ದಾರೆ ಎಂದು ಪಾಕಿಸ್ತಾನ ಇಂಧನ ಸಚಿವಾಲಯ ತಿಳಿಸಿದೆ.

    ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ (Islamabad) ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ವಿದ್ಯುತ್ ಕಡಿತವು ಭಾರೀ ಪರಿಣಾಮ ಬೀರಿದೆ. ವಿದ್ಯುತ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು 12 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಎಂದು ಪಾಕಿಸ್ತಾನದ ವಿದ್ಯುತ್ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: `ಖಲಿಸ್ತಾನ್ ಜಿಂದಾಬಾದ್’ ಘೋಷಣೆ ಬರೆದು ಇಸ್ಕಾನ್ ದೇವಾಲಯದ ಗೋಡೆ ವಿರೂಪ

    ಪಾಕಿಸ್ತಾನದ ವಿದ್ಯುಚ್ಛಕ್ತಿ ವಿತರಣಾ ವ್ಯವಸ್ಥೆಯು ಸಂಕೀರ್ಣ ಮತ್ತು ಸೂಕ್ಷ್ಮ ಜಾಲವಾಗಿದೆ. ಗ್ರಿಡ್‌ನ ಒಂದು ವಿಭಾಗದಲ್ಲಿನ ಸಮಸ್ಯೆಯು ದೇಶದಾದ್ಯಂತ ಕ್ಯಾಸ್ಕೇಡಿಂಗ್ ಸ್ಥಗಿತಗಳಿಗೆ ಕಾರಣವಾಗಬಹುದು. ದೇಶದ ದಕ್ಷಿಣ ಭಾಗದಲ್ಲಿ ಜಮ್‌ಶೊರೊ ಮತ್ತು ದಾದು ನಗರಗಳ ನಡುವೆ ಆವರ್ತನ ಬದಲಾವಣೆ ವರದಿಯಾಗಿದೆ. ಎಲ್ಲ ವ್ಯವಸ್ಥೆಗಳನ್ನು ಒಂದೊಂದಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಇದು ದೊಡ್ಡ ಬಿಕ್ಕಟ್ಟಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾ ಶೂಟೌಟ್ ಪ್ರಕರಣ- ದಾಳಿ ನಡೆಸಿದ ವ್ಯಕ್ತಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ಚಳಿಗಾಲದಲ್ಲಿ, ವಿದ್ಯುತ್ ಬೇಡಿಕೆಯು ರಾಷ್ಟ್ರೀಯ ಕಡಿಮೆಯಾಗುವುದರಿಂದ ಮತ್ತು ಆರ್ಥಿಕ ಕ್ರಮವಾಗಿ, ನಾವು ರಾತ್ರಿಯಲ್ಲಿ ನಮ್ಮ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮುಚ್ಚುತ್ತೇವೆ. ಸೋಮವಾರ ಬೆಳಗ್ಗೆ ಸಿಸ್ಟಮ್‌ಗಳನ್ನು ಆನ್ ಮಾಡಿದಾಗ, ದೇಶದ ದಕ್ಷಿಣದಲ್ಲಿ ದಾದು ಮತ್ತು ಜಮ್‌ಶೋರೊ ನಡುವೆ ಆವರ್ತನ ವ್ಯತ್ಯಾಸ ಮತ್ತು ವೋಲ್ಟೇಜ್ ಏರಿಳಿತ ಗಮನಿಸಲಾಗಿದೆ ಎಂದು ವಿದ್ಯುತ್ ಸಚಿವ ಖುರ್ರುಮ್ ದಸ್ತಗಿರ್ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

    ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್

    ಇಸ್ಲಾಮಾಬಾದ್: ಭಾರತದೊಂದಿಗೆ (India) 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನವು (Pakistan) ತನ್ನ ಪಾಠ ಕಲಿತಿದೆ. ಇನ್ಮುಂದೆ ಪಾಕಿಸ್ತಾನವು ಶಾಂತಿಯಿಂದಿರಲು ಬಯಸುತ್ತದೆ. ಬಾಂಬ್ ಮತ್ತು ಮದ್ದು ಗುಂಡುಗಳಿಗಾಗಿ ಸಂಪನ್ಮೂಲಗಳನ್ನ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.

    ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್, ಪಾಕಿಸ್ತಾನ ಇನ್ನುಮುಂದೆ ಶಾಂತಿಯಿಂದಿರಲು ಬಯಸುತ್ತದೆ. ಆದ್ರೆ ಕಾಶ್ಮೀರದಲ್ಲಿ ಏನಾಗುತ್ತಿದೆ ಸಮಸ್ಯೆ, ಅದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಇದೇ ವೇಳೆ `ಮಾನವ ಹಕ್ಕುಗಳ ಉಲ್ಲಂಘನೆ’ ಆರೋಪದ ಕುರಿತು ಪ್ರತಿಕ್ರಿಯಿಸಿ, ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿ ರುವಾರಿ ಅಬ್ದುಲ್ ರೆಹಮಾನ್ ಮಕ್ಕಿ ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ

    `ನಮ್ಮಲ್ಲಿ ಇಂಜಿನಿಯರ್‌ಗಳು (Engineers), ವೈದ್ಯರು (Doctors) ಹಾಗೂ ನುರಿತ ಕಾರ್ಮಿಕರಿದ್ದಾರೆ. ಈ ಸಂಪನ್ಮೂಲವನ್ನ ಸದ್ಬಳಕೆ ಮಾಡಿಕೊಂಡು ಎರಡೂ ರಾಷ್ಟ್ರಗಳು ಬೆಳೆಯಲು ಸಹಕರಿಸುತ್ತೇವೆ. ಜೊತೆಗೆ ಈ ಪ್ರದೇಶದಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ಬಯಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: `ಅಭಿವೃದ್ಧಿ ಮಂತ್ರ, ಹಿಂದುತ್ವದ ಅಜೆಂಡಾ’ ಬಿಜೆಪಿಯ ಅಸ್ತ್ರ – ಇನ್ನೆರಡು ತಿಂಗಳು ರಾಜ್ಯದಲ್ಲಿ ಮೋದಿ ಹವಾ

    ಶಾಂತಿಯುತವಾಗಿ ಬದುಕುವುದು, ಪ್ರಗತಿ ಸಾಧಿಸುವುದು ಅಥವಾ ಪರಸ್ಪರ ಜಗಳವಾಡುವುದು, ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ನಮಗೆ ಬಿಟ್ಟದ್ದು. ಆದ್ರೆ ನಾವು ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ನಮ್ಮ ದೇಶದ ಹೆಚ್ಚಿನ ಜನ ನೋವನ್ನು ಅನುಭವಿಸಿದ್ದಾರೆ. ಬಡತನ, ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಅದರಿಂದ ನಾವು ಪಾಠ ಕಲಿತಿದ್ದೇವೆ. ಹಾಗಾಗಿ ಇನ್ಮುಂದೆ ಶಾಂತಿಯಿಂದ ನೆಲೆಸಿ, ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ (Economic Crisis) ಪಾಕಿಸ್ತಾನ ಈಗಾಗಲೇ ಶ್ರೀಲಂಕಾ (SriLanka) ಪರಿಸ್ಥಿತಿಯನ್ನು ಎದುರಿಸುತ್ತಿದೆ.

    ದಿನದಿಂದ ದಿನಕ್ಕೆ ಪಾಕಿಸ್ತಾನದ (Pakistan) ಸ್ಥಿತಿ ದಾರುಣವಾಗ್ತಿದೆ. ಈಗಾಗಲೇ ಚಿಕನ್ (Chicken), ಗೋಧಿ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಇದೀಗ ಮತ್ತಷ್ಟು ಅಗತ್ಯ ವಸ್ತುಗಳ ಕೊರತೆ ಭೀತಿಯೂ ಎದುರಾಗಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಆಮದು ನಿಂತುಹೋಗಿರುವ ಕಾರಣ ಅಡುಗೆ ಎಣ್ಣೆ (Cooking Oil), ತುಪ್ಪದ ಬೆಲೆಗಳು ಹೆಚ್ಚಾಗಿವೆ. ಕಸ್ಟಮ್ಸ್ ಗೋದಾಮಿನಲ್ಲಿ ಮೂರೂವರೆ ಲಕ್ಷ ಟನ್ ಅಡುಗೆ ಎಣ್ಣೆ ಸ್ಟಾಕ್ ಇದ್ದರೂ, ಅದನ್ನು ಮಾರುಕಟ್ಟೆಗೆ ತರಲು ಬ್ಯಾಂಕ್‌ಗಳು ಲೆಟರ್ ಆಫ್ ಕ್ರೆಡಿಟ್ಸ್, ರಿಟೈನಿಂಗ್ ಪತ್ರಗಳನ್ನು ಕ್ಲಿಯರ್ ಮಾಡ್ತಿಲ್ಲ. ಹೀಗಾಗಿ ಆಮದು ಉತ್ಪನ್ನಗಳ ಮೇಲೆ ಸರ್‌ಚಾರ್ಜ್ (ತೆರಿಗೆ ರೂಪದ ಸುಂಕ) ಮತ್ತು ಇತರೆ ವೆಚ್ಚಗಳು ಹೆಚ್ಚುತ್ತಿವೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಮತ್ತೊಂದೆಡೆ ಡಾಲರ್ (US Dollar) ಎದುರು ಪಾಕ್ ರೂಪಾಯಿ ಅಪಮೌಲ್ಯ ಮುಂದುವರಿದಿದೆ. ಸದ್ಯ ವಿನಿಮಯ ಮೌಲ್ಯ ಒಂದು ಡಾಲರ್‌ಗೆ ಪಾಕಿಸ್ತಾನದ 228 ರೂಪಾಯಿ ಇದೆ. ಖರ್ಚು ಸರಿದೂಗಿಸಲು ಅಮೆರಿಕದಲ್ಲಿರುವ ಹಳೆಯ ರಾಯಭಾರ ಕಚೇರಿಯನ್ನೇ ಪಾಕ್ ಸರ್ಕಾರ ಮಾರಾಟ ಮಾಡಿದೆ. ಚೀನಾ (China) ಮೇಲೆ ಅಧಿಕ ಅವಲಂಬನೆ ಮತ್ತು ದುರಾಡಳಿತವೇ ಪಾಕಿಸ್ತಾನದ ಇಂದಿನ ಸ್ಥಿತಿಗೆ ಕಾರಣ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.

    ಇತ್ತೀಚೆಗಷ್ಟೇ ಪಾಕಿಸ್ತಾನ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಲವು ಕ್ರಮ ಕೈಗೊಂಡಿತು. ಪಾಕಿಸ್ತಾನದ ಸರ್ಕಾರ ಇಂಧನ ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿತು. ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರ ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಸರ್ಕಾರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖಾನ್ ಹತ್ಯೆಗೆ ಸಂಚು ಮಾಡಿರುವುದು ಸಾಬೀತಾದರೆ ಒಂದು ನಿಮಿಷವೂ ಪ್ರಧಾನಿಯಾಗಿರಲ್ಲ: ಶೆಹಬಾಜ್ ಷರೀಫ್

    ಖಾನ್ ಹತ್ಯೆಗೆ ಸಂಚು ಮಾಡಿರುವುದು ಸಾಬೀತಾದರೆ ಒಂದು ನಿಮಿಷವೂ ಪ್ರಧಾನಿಯಾಗಿರಲ್ಲ: ಶೆಹಬಾಜ್ ಷರೀಫ್

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಹತ್ಯೆ ನಡೆಸಲು ವಿಫಲ ಯತ್ನ ಮಾಡಿರುವ ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಒಂದು ನಿಮಿಷವೂ ಪ್ರಧಾನಿಯಾಗಿರದೇ ರಾಜೀನಾಮೆ ನೀಡುತ್ತೇನೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.

    ಪ್ರತಿಭಟನಾ ರ‍್ಯಾಲಿಯ ವೇಳೆ ಇಮ್ರಾನ್ ಖಾನ್ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್ ಖಾನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವಿಫಲ ಕೊಲೆ ಸಂಚನ್ನು ಪ್ರಧಾನಿ ಶೆಹಬಾಜ್ ಷರೀಫ್, ಹಿರಿಯ ಸೇನಾಧಿಕಾರಿ ಹಾಗೂ ಆಂತರಿಕ ಸಚಿವರು ನಡೆಸಿರುವುದಾಗಿ ಇಮ್ರಾನ್ ಖಾನ್ ಅನುಮಾನ ಹೊಂದಿದ್ದಾರೆ ಎಂದು ಪಿಟಿಐ ನಾಯಕರು ತಿಳಿಸಿದ್ದರು.

    ಇದೀಗ ಈ ಆರೋಪಕ್ಕೆ ತಿರುಗೇಟು ನೀಡಿರುವ ಷರೀಫ್, ಖಾನ್ ಮೇಲಿನ ದಾಳಿಗೆ ಸಂಬಧಿಸಿದಂತೆ ಯಾವುದೇ ಪಿತೂರಿಯಲ್ಲಿ ನಾನು ಭಾಗಿಯಾಗಿರುವುದು ಕಂಡುಬಂದರೆ, ಒಂದು ನಿಮಿಷವೂ ಪ್ರಧಾನಿಯಾಗಿ ಉಳಿಯುವುದಿಲ್ಲ. ತಕ್ಷಣವೇ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಗುರುವಾರ ಪಾಕಿಸ್ತಾನದ ಪಂಜಾಬ್‌ನಲ್ಲಿ ನಡೆದಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಬಂದೂಕುಧಾರಿಯೊಬ್ಬ ಇಮ್ರಾನ್ ಖಾನ್ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದ. ತೆರೆದ ಟ್ರಕ್ ಮೇಲೆ ನಿಂತುಕೊಂಡು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಖಾನ್‌ನ ಕಾಲಿಗೆ ಗುಂಡು ತಗುಲಿ ಗಾಯಗಳಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯಲ್ಲಿ ಪಿಟಿಐ ನಾಯಕರು ಸೇರಿದಂತೆ 15 ಜನರಿಗೆ ಗಾಯಗಳಾಗಿತ್ತು. ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿಯೂ ವರದಿಯಾಗಿದೆ.

    ಘಟನೆಯ ಬಳಿಕ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಹಾಗೂ ಮೇಜರ್ ಜನರಲ್ ಫೈಸಲ್ ನಸೀರ್ ಅವರು ಈ ಹತ್ಯೆಯ ಸಂಚಿನ ಹಿಂದೆ ಇರುವುದಾಗಿ ಇಮ್ರಾನ್ ಖಾನ್ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಷರೀಫ್ ಈ ಆರೋಪವನ್ನು ತಳ್ಳಿಹಾಕಿ, ಇದು ದೇಶದ ಅಡಿಪಾಯವನ್ನು ಒಡೆದು, ಅಸ್ತಿರತೆ ಉಂಟುಮಾಡಲು ನೀಡಿರುವ ಹೇಳಿಕೆ ಎಂದಿದ್ದಾರೆ. ಇದನ್ನೂ ಓದಿ: ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿರುವ ನಾಗನಿಗೆ ಗ್ಯಾಂಗ್ರಿನ್

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ

    ಪಾಕಿಸ್ತಾನದಲ್ಲಿ ಗುಂಡಿನ ದಾಳಿ – ಪಿಎಂ ಸೇರಿ ಮೂವರ ಮೇಲೆ ಇಮ್ರಾನ್ ಖಾನ್‌ಗೆ ಅನುಮಾನ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದ್ದು (Shooting), ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸೇರಿದಂತೆ ಮೂವರು ತನ್ನ ಮೇಲೆ ದಾಳಿಯ ಸಂಚು ಮಾಡಿರುವುದಾಗಿ ಅನುಮಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

    ಪಾಕ್ ಪ್ರಧಾನಿ ಶೆಹೆಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಹಾಗೂ ಮೇಜರ್ ಜನರಲ್ ಫೈಸಲ್ ಅವರು ಮಾಜಿ ಪ್ರಧಾನಿ ಮೇಲೆ ಗುಂಡು ಹಾರಿಸುವಂತೆ ದಾಳಿಕೋರನಿಗೆ ಆದೇಶ ನೀಡಿರುವುದಾಗಿ ಇಮ್ರಾನ್ ಖಾನ್ ಅವರು ಅನುಮಾನಗೊಂಡಿದ್ದಾರೆ ಎಂದು ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ನಾಯಕ ಅಸದ್ ಉಮರ್ ಹಾಗೂ ಮಿಯಾನ್ ಅಸ್ಲಾಮ್ ಇಕ್ಬಾಲ್ ತಿಳಿಸಿದ್ದಾರೆ.

    ಇಮ್ರಾನ್ ಖಾನ್ ಅವರ ಸ್ಥಿತಿ ಈಗ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರೊಂದಿಗೆ ನಾವು ಮಾತನಾಡಿದ್ದು, ಈ ವಿಚಾರವನ್ನು ಅಲ್ಲನಿಗೆ ಬಿಡಬೇಕು ಎಂದಿದ್ದಾರೆ. ಕೊಲೆಗೆ ಸಂಚು ಮಾಡಿದ ಮೂವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಮ್ರಾನ್ ಖಾನ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಬರುವುದಕ್ಕೆ ನಾವು ಕಾಯುತ್ತಿದ್ದೇವೆ. ಈ ಮೂವರನ್ನು ಅವರ ಹುದ್ದೆಯಿಂದ ತೆಗೆದುಹಾಕದೇ ಹೋದಲ್ಲಿ ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

    ನಿನ್ನೆ ಇಮ್ರಾನ್ ಖಾನ್ ನೇತೃತ್ವದಲ್ಲಿ ಜಫರಾಲಿ ಖಾನ್ ಚೌಕ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ‍್ಯಾಲಿ ವೇಳೆ ದುಷ್ಕರ್ಮಿಯೊಬ್ಬ ಇಮ್ರಾನ್ ಖಾನ್ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದ. ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 15 ಜನರಿಗೆ ಗಾಯಗಳಾಗಿತ್ತು. ಘಟನೆಯಲ್ಲಿ ಒಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಕೊಚ್ಚಿ, ತುಂಡು ಮಾಡಿ ನಾಯಿಗೆ ಬಿಸಾಕ್ತೀವಿ- ಮುತಾಲಿಕ್‌ಗೆ ಜೀವ ಬೆದರಿಕೆ

    ತಕ್ಷಣ ದುಷ್ಕರ್ಮಿಯನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ, ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಂದಿದ್ದೆ. ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ನನ್ನ ಉದ್ದೇಶ ಅವರೊಬ್ಬರನ್ನು ಮಾತ್ರವೇ ಕೊಲ್ಲುವುದಾಗಿತ್ತು. ಅವರನ್ನು ಕೊಲ್ಲಲು ನಾನೊಬ್ಬನೇ ಬಂದಿದ್ದು, ನನ್ನ ಹಿಂದೆ ಯಾರೂ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಇಸ್ರೇಲ್ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು – ಪ್ರಧಾನಿ ಮೋದಿ ಅಭಿನಂದನೆ

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನ ಅಪಾಯಕಾರಿ ಅಲ್ಲ, ಜವಾಬ್ದಾರಿಯುತ ರಾಷ್ಟ್ರ: ಶೆಹಬಾಜ್ ಷರೀಫ್

    ಪಾಕಿಸ್ತಾನ ಅಪಾಯಕಾರಿ ಅಲ್ಲ, ಜವಾಬ್ದಾರಿಯುತ ರಾಷ್ಟ್ರ: ಶೆಹಬಾಜ್ ಷರೀಫ್

    ಇಸ್ಲಾಮಾಬಾದ್: ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ (Dangerous Country) ಪಾಕಿಸ್ತಾನವೂ (Pakistan) ಒಂದು ಎಂದು ಅಮೆರಿಕ (America) ಅಧ್ಯಕ್ಷ ಜೋ ಬೈಡನ್ (Joe Biden) ಅವರ ಹೇಳಿಕೆಯನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ತಿರಸ್ಕರಿಸಿದ್ದಾರೆ. ಪಾಕಿಸ್ತಾನ ಅಪಾಯಕಾರಿ ರಾಷ್ಟ್ರ ಅಲ್ಲ, ಬದಲಿಗೆ ಜವಾಬ್ದಾರಿಯುತ ರಾಷ್ಟ್ರ ಎಂದು ಷರೀಫ್ ತಿಳಿಸಿದ್ದಾರೆ.

    ಬೈಡನ್ ಹೇಳಿಕೆಗೆ ತಿರುಗೇಟು ನೀಡಿದ ಷರೀಫ್, ಅಮೆರಿಕ ಅಧ್ಯಕ್ಷರ ಹೇಳಿಕೆ ದೋಷಪೂರಿತವಾಗಿದ್ದು, ವಾಸ್ತವವಾಗಿ ತಪ್ಪು ದಾರಿಗೆಳೆಯುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ಅತ್ಯಂತ ಜವಾಬ್ದಾರಿಯುತ ಪರಮಾಣು ಹೊಂದಿರುವ ರಾಷ್ಟ್ರವೆಂದು ಕಳೆದ ದಶಕದಲ್ಲಿಯೇ ಸಾಬೀತಾಗಿದೆ. ತನ್ನ ಪರಮಾಣು ಕಾರ್ಯಗಳನ್ನು ನುರಿತ ಹಾಗೂ ಯಾವುದೇ ತಪ್ಪುಗಳಾಗದ ರೀತಿಯ ನಿಯಂತ್ರಣ ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು – ಜೋ ಬೈಡೆನ್‌

    Shehbaz Sharif

    ಬೈಡನ್ ಲಾಸ್ ಏಂಜಲೀಸ್‌ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಸ್ ಕಾಂಪೇನ್ ಕಮಿಟಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪಾಕಿಸ್ತಾನ ಯಾವುದೇ ಒಗ್ಗಟ್ಟಿನ ವ್ಯವಸ್ಥೆ ಇಲ್ಲದೇ ಅಣ್ವಸ್ತ್ರಗಳನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಕಿರುಕುಳ, ತಾರತಮ್ಯಕ್ಕೆ ಬೇಸತ್ತು ಭಾರತಕ್ಕೆ ಬಂದ 100 ಹಿಂದೂಗಳು

    Live Tv
    [brid partner=56869869 player=32851 video=960834 autoplay=true]

  • ಪಾಕ್ ಆರ್ಥಿಕ ಬಿಕ್ಕಟ್ಟು – 4 ವರ್ಷದಲ್ಲಿ ಐವರು ಹಣಕಾಸು ಸಚಿವರ ರಾಜೀನಾಮೆ

    ಪಾಕ್ ಆರ್ಥಿಕ ಬಿಕ್ಕಟ್ಟು – 4 ವರ್ಷದಲ್ಲಿ ಐವರು ಹಣಕಾಸು ಸಚಿವರ ರಾಜೀನಾಮೆ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು (Economic Crisis), ಪ್ರಕೃತಿ ವಿಕೋಪದಿಂದ (Flood) ತತ್ತರಿಸಿರುವ ಪಾಕಿಸ್ತಾನದಲ್ಲಿ (Pakistan) ವಿತ್ತ ಸಚಿವರು ಬದಲಾಗುತ್ತಲೇ ಇದ್ದಾರೆ. ಯಾರೊಬ್ಬರು ಕೂಡ ಹೆಚ್ಚು ಕಾಲ ಹಣಕಾಸುವ ಸಚಿವ ಸ್ಥಾನದಲ್ಲಿ ಉಳಿಯುತ್ತಿಲ್ಲ.

    ಇದೀಗ ವಿತ್ತ ಸಚಿವ ಇಸ್ಮಾಯಿಲ್ ಕೂಡ ರಾಜೀನಾಮೆ ನೀಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 5ನೇ ಹಣಕಾಸು ಸಚಿವರು (Finance Minister) ರಾಜೀನಾಮೆ ನೀಡಿದಂತಾಗಿದೆ. ಇದನ್ನೂ ಓದಿ: ಮದ್ಯ ಸೇವಿಸಲು 2 ವರ್ಷದಿಂದ ಆಫೀಸ್‍ನಲ್ಲಿದ್ದ ಪೀಠೋಪಕರಣ, ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ

    ಇದೇ ವೇಳೆ ಲಂಡನ್ ಪ್ರವಾಸದಲ್ಲಿರುವ ಪಾಕ್ ಮಾಹಿತಿ ಸಚಿವೆ ಮರಿಯಂ ಔರಂಗಜೇಬ್‌ಗೆ ಪಾಕಿಸ್ತಾನಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಫಿ ಶಾಪ್ ಒಂದಕ್ಕೆ ಮರಿಯಂ ತೆರಳಿದ್ದ ಸಂದರ್ಭದಲ್ಲಿ ಆಕೆಯನ್ನು ಸುತ್ತುವರಿದ ಲಂಡನ್‌ನಲ್ಲಿ ನೆಲೆಸಿರುವ ಪಾಕಿಸ್ತಾನಿಯರು ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದಾರೆ. ಕಳ್ಳಿ ಎಂದು ಜರೆದಿದ್ದಾರೆ. ಅಲ್ಲಿ ಪ್ರವಾಹ ಬಂದು ಜನ ಸಾಯ್ತಿದ್ರೆ, ನೀವು ಸರ್ಕಾರದ ದುಡ್ಡಲ್ಲಿ ಇಲ್ಲಿಗೆ ಬಂದು ಮಜಾ ಮಾಡ್ತಿದ್ದೀರಾ ಎಂದು ಕ್ಲಾಸ್ ತೆಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಪ್ರಧಾನಿಯ ಆಡಿಯೋ ಲೀಕ್ – 26 ಕೋಟಿಗೆ ಡಾರ್ಕ್ ವೆಬ್‌ನಲ್ಲಿ ಹರಾಜು

    ಪಾಕ್ ಪ್ರಧಾನಿಯ ಆಡಿಯೋ ಲೀಕ್ – 26 ಕೋಟಿಗೆ ಡಾರ್ಕ್ ವೆಬ್‌ನಲ್ಲಿ ಹರಾಜು

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ (Pakistan PM) ಶೆಹಬಾಜ್ ಷರಿಫ್ (Shehbaz Sharif) ಅವರ ಸುಮಾರು 115 ಗಂಟೆಗಳ ಸರ್ಕಾರಿ ಚರ್ಚೆಯ ಆಡಿಯೋ ಲೀಕ್ (Audio Leak) ಆಗಿದ್ದು, ಅದನ್ನು ಡಾರ್ಕ್ ವೆಬ್‌ನಲ್ಲಿ (Dark Web) 3.5 ಮಿಲಿಯನ್ ಡಾಲರ್ (ಸುಮಾರು 29 ಕೋಟಿ ರೂ.ಗೆ) ಹರಾಜು ಮಾಡಲಾಗಿದೆ ಎಂಬ ಆಘಾತಕಾರಿ ಸಂಗತಿಯನ್ನು ಪಿಟಿಐ ನಾಯಕ ಫವಾದ್ ಚೌಧರಿ ತಿಳಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಚೌಧರಿ, ಪ್ರಧಾನ ಮಂತ್ರಿಯವರ ಕಚೇರಿಗೆ ಭದ್ರತೆಯೇ ಇಲ್ಲ. ಇದೀಗ ಸೋರಿಕೆಯಾಗಿರುವ ಆಡಿಯೊ ಡಾರ್ಕ್ ವೆಬ್‌ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗಿದೆ. ಇದು ಭದ್ರತಾ ಏಜೆನ್ಸಿಗಳ ವೈಫಲ್ಯ ಎಂದು ಆರೋಪಿಸಿದ್ದಾರೆ.

    ಸೋರಿಕೆಯಾದ ಆಡಿಯೋದಲ್ಲಿ, ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ ಉಪಾಧ್ಯಕ್ಷ ಮರ್ಯಮ್, ರಕ್ಷಣಾ ಸಚಿವ ಖವಾಜಾ ಆಸಿಫ್, ಕಾನೂನು ಸಚಿವ ಅಜಮ್ ತರಾರ್, ಆಂತರಿಕ ಸಚಿವ ರಾಣಾ ಸನಾವುಲ್ಲಾ, ಮಾಜಿ ಎನ್‌ಎ ಸ್ಪೀಕರ್ ಅಯಾಜ್ ಸಾದಿಕ್ ಹಾಗೂ ಪ್ರಧಾನಿ ಶೆಹಬಾಜ್ ಷರೀಫ್ ನಡುವಿನ ಸಂಭಾಷಣೆಗಳು ಕೇಳಿಬಂದಿದೆ. ಇದನ್ನೂ ಓದಿ: ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    Shehbaz Sharif

    ಆಡಿಯೋ ಸೋರಿಕೆಯ ಮಾಹಿತಿಯನ್ನು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಭವನದ ಭದ್ರತೆಯನ್ನು ಉಲ್ಲಂಘಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಿಂದ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ: ಅಮೆರಿಕಗೆ ನೇರವಾಗಿ ಜೈಶಂಕರ್ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • ಮಿತ್ರ ರಾಷ್ಟ್ರಗಳು ನಮ್ಮನ್ನು ಭಿಕ್ಷುಕನಂತೆ ನೋಡುತ್ತಿವೆ – ಪಾಕ್ ಪ್ರಧಾನಿ

    ಮಿತ್ರ ರಾಷ್ಟ್ರಗಳು ನಮ್ಮನ್ನು ಭಿಕ್ಷುಕನಂತೆ ನೋಡುತ್ತಿವೆ – ಪಾಕ್ ಪ್ರಧಾನಿ

    ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ (Economic Crisis) ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಿಶ್ವದ ಕಣ್ಣಲ್ಲಿ ಪಾಕ್ (Pakistan) ಸ್ಥಿತಿ ಏನು ಎನ್ನುವುದನ್ನು ಪ್ರಧಾನಿ ಷೆಹಬಾಜ್ (Shehbaz Sharif) ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

    ಉಜ್ಬೇಕಿಸ್ತಾನ ಶಾಂಘೈ ಸಹಕಾರ ಸಂಘಟನೆ ದೇಶಗಳ (SCO) ಶೃಂಗಸಭೆಯಲ್ಲಿಂದು ಮಾತನಾಡಿದ ಶೆಹಬಾಜ್ ಷರೀಫ್, ಮಿತ್ರದೇಶಗಳು ಪಾಕಿಸ್ತಾನವನ್ನು ಭಿಕ್ಷುಕನಂತೆ (Begging) ನೋಡುತ್ತಿವೆ. ಯಾವುದೇ ದೇಶದ ಮುಖ್ಯಸ್ಥರಿಗೆ ಕರೆ ಮಾಡಿದ್ರೂ, ಇವರೇನೋ ಕೇಳೋಕೆ ಕರೆ ಮಾಡಿದ್ದಾರೆ ಅಂತಾನೆ ಭಾವಿಸುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು

    ದೇಶದಲ್ಲಿ ಭಾರಿ ಪ್ರವಾಹದಿಂದ (Flood) ಉಂಟಾದ ವಿನಾಶದ ಬಗ್ಗೆ ಮಾತನಾಡುತ್ತಾ ಪಿಎಂ ಶೆಹಬಾಜ್ ಷರೀಫ್, ಪ್ರವಾಹಕ್ಕೂ ಮುನ್ನ ನಮ್ಮ ಆರ್ಥಿಕತೆ ಹೆಣಗಾಡುತ್ತಿತ್ತು. ಈಗ ಪ್ರವಾಹ ಬಂದು ಇನ್ನಷ್ಟು ಹದಗೆಡಿಸಿತು. ನಾನು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಆರ್ಥಿಕತೆ ಅಳಿವಿನ ಅಂಚಿನಲ್ಲಿತ್ತು. ನಮ್ಮ ಸರ್ಕಾರ (Pakistan Government) ಸ್ಥಾಪನೆಯಾದ ಬಳಿಕ ಸತತ ಪರಿಶ್ರಮದಿಂದ ದೇಶ ಉಳಿದಿದೆ ಜೊತೆಗೆ ಆರ್ಥಿಕ ಅಸ್ಥಿರತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶೇಷತೆ ಏನು? ತಯಾರಿ ಹೇಗೆ?

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹಣದುಬ್ಬರ ಗಗನಕ್ಕೇರುವಂತೆ ಮಾಡಿದ್ದಾರೆ. ಅನೇಕ ಒಪ್ಪಂದದ ನಿಯಮಗಳನ್ನು ಹಿಂದಿನ ಸರ್ಕಾರ ಉಲ್ಲಂಘಿಸಿದೆ. ಇದೆಲ್ಲವೂ ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]