Tag: Shehbaz Sharif

  • ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

    ಪಾಕ್‌ನಲ್ಲಿ ರಾಜಕೀಯ ಕೋಲಾಹಲ – ಜೈಲುಪಾಲಾದ ಕ್ರಿಕೆಟ್‌ ದಂತಕಥೆಯ ಜೀವಕ್ಕೆ ಇದೆಯಾ ಆಪತ್ತು? 

    ಒಂದು ಕಾಲದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕನಾಗಿ ವಿಶ್ವಕಪ್‌ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಮಾಜಿ ಕ್ರಿಕೆಟಿಗ ಇದೀಗ ರಾಜಕೀಯ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿದ್ದಾರೆ. ಹೌದು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಬಂಧನವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಚುನಾವಣಾ ಆಯೋಗ ಇಮ್ರಾನ್‌ ಖಾನ್‌ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಿದೆ. ಇದರಿಂದ ಖಾನ್‌ ಬೆಂಬಲಿಗರು ಕೆಂಡಾಮಂಡಲವಾಗಿದ್ದಾರೆ. 

    ಒಂದೆಡೆ ದೇಶದಲ್ಲಿ ಪ್ರತ್ಯೇಕತೆಯ ಕೂಗಿನಿಂದ ಅರಾಜಕತೆ ಉಂಟುಮಾಡುವ ಸನಿಹದಲ್ಲಿದ್ದರೆ ಮತ್ತೊಂದೆಡೆ, ರಾಜಕೀಯ ಅರಾಜಕತೆ ತಲೆದೋರಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಇದು ನುಂಗಲಾರದ ತುತ್ತಾಗಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ಸ್ಪರ್ಧಿಸದಂತೆ ಅವರನ್ನ ತಡೆಯವುದು ಎದುರಾಳಿ ಬಣದ ಹುನ್ನಾರವಾಗಿದೆ. ಆದ್ದರಿಂದಲೇ ಇಮ್ರಾನ್‌ ಬಂಧಿಸುವ ಅಸ್ತ್ರವನ್ನ ಆಡಳಿತ ಪಕ್ಷ ಪ್ರಯೋಗಿಸಿದೆ. ಹಾಗಿದ್ದರೆ ಪಾಕಿಸ್ತಾನದ (Pakistan) ಸುತ್ತ ನಡೆಯುತ್ತಿರುವ ಒಳ ಕದನಗಳ ಒಂದು ನೋಟ ಇಲ್ಲಿದೆ… 

    ಇಮ್ರಾನ್‌ ಖಾನ್‌ ಜೀವಕ್ಕೆ ಅಪಾಯವಿದೆಯಾ?

    ಸದ್ಯ ಇಮ್ರಾನ್‌ ಖಾನ್‌ ಅವ್ರನ್ನ ಪೂರ್ವ ಪಂಜಾಬ್ ಪ್ರಾಂತ್ಯದ ಅಟಾಕ್ ಜೈಲಿನಲ್ಲಿ ಇರಿಸಲಾಗಿದೆ. ಜೈಲು ಶಿಕ್ಷೆಗೆ ಗುರಿಯಾದ ಉಗ್ರರನ್ನೂ ಈ ಜೈಲಿನಲ್ಲಿ ಇರಿಸಲಾಗುತ್ತದೆ. ಇಲ್ಲಿನ ಪರಿಸ್ಥಿತಿ ಭಯಾನವಾಗಿರುತ್ತದೆ. ಯಾರೊಂದಿಗೂ ಮಾತನಾಡುವುದಕ್ಕೂ ಬಿಡುವುದಿಲ್ಲ. ಕಾನೂನು ತಂಡವನ್ನೂ ಒಳಗೆ ಬಿಡುತ್ತಿಲ್ಲ ಎಂದು ಪಿಟಿಐ ವಕೀಲ ಶೋಹಿಬ್ ಷಹೀನ್ ಕಿಡಿಕಾರಿದ್ದಾರೆ. ಈ ನಡುವೆ ಇಮ್ರಾನ್‌ ಖಾನ್‌ ಜೀವಕ್ಕೆ ಅಪಾಯವಿದೆ ಎಂಬುದಾಗಿಯೂ ಪಿಟಿಐ ಪಕ್ಷದ ಶಾ ಮೊಹಮದ್‌ ಖುರೇಷಿ ಆರೋಪಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

    ಇಮ್ರಾನ್‌ ಬಂಧನವಾಗಿದ್ದೇಕೆ? 

    150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಂಟೆಡ್‌ ಆಗಿರುವ ಇಮ್ರಾನ್‌ ಖಾನ್‌ ಪ್ರಧಾನಿ ಹುದ್ದೆಯಲ್ಲಿದ್ದಾಗ ತಮಗೆ ಬಂದ ಉಡುಗೊರೆಗಳನ್ನ ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ ನ್ಯಾಯಾಲಯ ಖಾನ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 5 ವರ್ಷ ಸಕ್ರಿಯ ರಾಜಕಾರಣದಿಂದಲೂ ಬ್ಯಾನ್‌ ಮಾಡಿದೆ. ಈ ವರ್ಷದ ಅಕ್ಟೋಬರ್‌ ನವೆಂಬರ್‌ನಲ್ಲೇ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್‌ ನಾಯಕತ್ವದ ಪಾಕಿಸ್ತಾನ ತಹ್ರಿಕ್‌ – ಇನ್ಸಾಫ್‌ (ಪಿಟಿಐ) ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯುತ್ತದೆ ಎನ್ನಲಾಗ್ತಿದೆ. ಆದ್ರೆ ಇದಕ್ಕೆ ಆಸ್ಪದ ಕೊಡಬಾರದು ಎನ್ನುವ ನಿಟ್ಟಿನಲ್ಲಿ ಎದುರಾಳಿ ಪಾಳಯದಲ್ಲಿ ಮತ್ತೆ ಇಮ್ರಾನ್‌ ಖಾನ್‌ ರಾಜಕೀಯ ರಂಗದಲ್ಲಿ ತಲೆ ಎತ್ತದಂತೆ ನೋಡಿಕೊಳ್ಳಲು ಜೈಲುವಾಸಿಯನ್ನಾಗಿ ಮಾಡಿದೆ. ಈಗಿನ ಮಟ್ಟಿಗೆ ಅವರು ಚುನಾವಣೆ ಅಖಾಡ ಪ್ರವೇಶಿಸುವ ಅರ್ಹತೆ ಕಳೆದುಕೊಂಡಿದ್ದಾರೆ. ಪಾಕ್‌ನಲ್ಲಿ ಪ್ರಧಾನಿ ಹಾಗೂ ಅಧ್ಯಕ್ಷರಾದವವರ ಪೈಕಿ ಬಹುತೇಕರು ಸೆರೆವಾಸ ಅನುಭವಿಸಿದ್ದಾರೆ.

    ಏನಿದು ತೋಶಖಾನ?

    ತೋಶಖಾನ (Toshakhana) ಸರ್ಕಾರದ ಖಜಾನೆಯಾಗಿದ್ದು, ಸರ್ಕಾರಕ್ಕೆ ಬಂದ ಕಾಣಿಕೆಗಳನ್ನ ನಿರ್ವಹಣೆ ಮಾಡುತ್ತದೆ. 1974ರಲ್ಲಿ ತೋಶಖಾನ ಇಲಾಖೆಯನ್ನ ಸ್ಥಾಪಿಸಲಾಯಿತು. ಭಾರತ ಸೇರಿದಂತೆ ಅನೇಕ ದೇಶಗಳು ತೋಶಖಾನಗಳನ್ನು ಹೊಂದಿವೆ. ಅಲ್ಲಿ ಇದನ್ನು ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತದೆ. ಉಡುಗೊರೆಗಳನ್ನು ದೇಶದ ಆಸ್ತಿ ಎಂದು ಭಾವಿಸಲಾಗುತ್ತದೆ. ಸದ್ಯ ಇಮ್ರಾನ್‌ ಖಾನ್‌ ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಬಂದ ಉಡುಗೊರೆಗಳನ್ನು  ಈ ತೋಶಖಾನ ನಿಧಿಗೆ ನೀಡಬೇಕಿತ್ತು. ಆದ್ರೆ ಖಾನ್‌ ಅದನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಖಾನ್ ಅವರು 2018ರ ನವೆಂಬರ್‌ನಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಂದ ಪಡೆದ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ. ಪ್ರಾಚೀನ ಗಡಿಯಾರ, ಚಿನ್ನದ ಪೆನ್, ಉಂಗುರ, ನೆಕ್ಲೆಸ್‌ ಮತ್ತು ಇತರೆ ಅಮೂಲ್ಯ ಉಡುಗೊರೆಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳು ಇದೆ. ಪಕ್ಷದ ಮಾಜಿ ಅಧ್ಯಕ್ಷರಾದವರ ಪೈಕಿ ಆಸಿಫ್‌ ಅಜಿ ಜರ್ಧಾರಿ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ಯೂಸೂಫ್‌ ರಾಜಾ ಗಿಲಾನಿ ಕೂಡ ಇಂತಹ ಅಪರಾಧ ಎಸಗಿದ್ದಾರೆ. 

    ತೋಶಖಾನಾ ಕೇಸ್‌ ಹಿನ್ನೆಲೆ ಏನು?

    ಆಗಸ್ಟ್ 2022: ಪ್ರಕರಣವನ್ನ ಚುನಾವಣಾ ಆಯೋಗದ ಪರಿಶೀಲನೆಗೆ ಒಪ್ಪಿಸಿದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ರಾಜಾ

    ಅಕ್ಟೋಬರ್‌ 21, 2022: ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ಆಯೋಗ

    ಅಕ್ಟೋಬರ್‌ 21, 2022: ಇಮ್ರಾನ್‌ಖಾನ್‌ರಿಂದ ತಪ್ಪು ಹೇಳಿಕೆ, ಅಸಮರ್ಪಕ ಆಸ್ತಿ ಘೋಷಣೆ ಎಂದು ತೀರ್ಪು. ಸದಸ್ಯತ್ವ ರದ್ದು.

    ನವೆಂಬರ್‌ 21,2022: ಕ್ರಿಮಿನಲ್ ವಿಚಾರಣೆ ಕೋರಿ ಖಾನ್ ವಿರುದ್ಧ ಸೆಷನ್ ಕೋರ್ಟ್‌ಗೆ ಆಯೋಗದಿಂದ ದೂರು.

    ಜುಲೈ 4, 2023: ಅರ್ಜಿದಾರರ ವಾದ ಮರು ಆಲಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ.

    ಜುಲೈ 8, 2023: ಪ್ರಕರಣ ವಿಚಾರಣೆಗೆ ಅರ್ಹ ಎಂದು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಘೋಷಣೆ.

    ಆಗಸ್ಟ್‌ 2, 2023: ಇಮ್ರಾನ್ ಖಾನ್ ಸಲ್ಲಿಸಿದ್ದ ಸಾಕ್ಷಿಗಳ ಪಟ್ಟಿ ತಿರಸ್ಕರಿಸಿದ ಕೋರ್ಟ್.

    ಆಗಸ್ಟ್‌ 5, 2023: ಆರೋಪ ಸಾಬೀತು. 3 ವರ್ಷ ಶಿಕ್ಷೆ ವಿಧಿಸಿ ಆದೇಶ.

    ಖಾನ್‌ ರಾಜಕೀಯ ಭವಿಷ್ಯ ಅಂತ್ಯವೇ? 

    ಪಾಕಿಸ್ತಾನ ರಾಜಕೀಯ ಇತಿಹಾಸದಲ್ಲಿ ಜೈಲಿಗೆಹೋಗಿ ಬಂದ ನಂತರ ಅನೇಕರು ಜನಪ್ರಿಯತೆ ಗಳಿಸಿದ ಉದಾಹರಣೆಗಳಿವೆ. ಭ್ರಷ್ಟಾಚಾರ ಮತ್ತು ಇತರೆ ಪ್ರಕರಣಗಳಲ್ಲಿ ಮಾಜಿ ಪ್ರಧಾನಿಗಳಿಗೆ ಜೈಲು ಶಿಕ್ಷೆಗೆ ಗುರಿಯಾಗಿರುವವರಲ್ಲಿ ಇಮ್ರಾನ್‌ ಖಾನ್‌ ಮೊದಲಿಗರಲ್ಲ. ಹಾಲಿ ಪ್ರಧಾನಿಯೂ ಸೇರಿದಂತೆ ಅನೇಕರು ಜೈಲು ಪಾಲಾದ ಹಿನ್ನೆಲೆ ಇದೆ. 

    * 1962ರಲ್ಲಿ ಪಾಕಿಸ್ತಾನದ 5ನೇ ಪ್ರಧಾನಿ ಹುಸೇನ್ ಶಾಹಿದ್‌ ಸುಹ್ರವರ್ದಿ (Huseyn Shaheed Suhrawardy) ಸುಳ್ಳು ಆರೋಪ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿದ್ದರು. ಆಗಿನ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್‌ರಿಗೆ ಬೆಂಬಲಿಸಲಿಲ್ಲ ಎಂಬುದು ನೈಜ ಕಾರಣವಾಗಿತ್ತು.

    * 9ನೇ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರಿಗೆ 1974ರಲ್ಲಿ ರಾಜಕೀಯ ವಿರೋಧಿಯ ಕೊಲೆಗೆ ಸಂಚು ನಡೆಸಿದ್ದ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ್ದು, 1979ರ ಏಪ್ರಿಲ್ 4ರಂದು ಗಲ್ಲುಶಿಕ್ಷೆಗೆ ಒಳಪಡಿಸಲಾಗಿತ್ತು. ಇಮ್ರಾನ್‌ ಖಾನ್‌ ಪಾಕಿಸ್ತಾನದ 7ನೇ ಮಾಜಿ ಪ್ರಧಾನಿಯಾಗಿದ್ದಾರೆ. 

    * ಎರಡು ಬಾರಿ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಭ್ರಷ್ಟಾಚಾರ ಪ್ರಕರಣದಲ್ಲಿ ಹಲವು ಬಾರಿ ಬಂಧನಕ್ಕೆ ಒಳಗಾಗಿದ್ದರು. 1999ರ ಏಪ್ರಿಲ್‌ನಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆಗ ಸ್ವಯಂ ಗಡೀಪಾರಿಗೆ ಒಳಗಾಗಿದ್ದರಿಂದ ಬಂಧನದಿಂದ ತಪ್ಪಿಸಿಕೊಂಡಿದ್ದರು.

    * ಜನರಲ್ ಪರ್ವೇಜ್ ಮುಷರಫ್ ಅವರ ಅವಧಿಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು 1999ರಲ್ಲಿ ಬಂಧಿಸಿದ್ದು, ನಂತರ 10 ವರ್ಷದ ಅವಧಿಗೆ ಗಡೀಪಾರು ಮಾಡಲಾಗಿತ್ತು.

    * ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರನ್ನ 2020, ಸೆ.28 ರಂದು ಬಂಧಿಸಲಾಗಿತ್ತು. ಎನ್‌ಎಬಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್‌ ಜಾಮೀನು ನಿರಾಕರಿಸಿದ ನಂತರ ಬಂಧನಕ್ಕೀಡಾಗಿದ್ದರು. ಸುಮಾರು 7 ತಿಂಗಳ ನಂತರ ಅವರನ್ನು ಲಾಹೋರ್‌ನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.

    * 21ನೇ ಪ್ರಧಾನಿಯಾಗಿದ್ದ ಶಾಹೀದ್ ಖಾನ್ ಅಬ್ಬಾಸಿ ಅವರನ್ನು ಎಲ್‌ಎನ್‌ಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

    * ಇಮ್ರಾನ್ ಖಾನ್ ಅವರನ್ನು ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ 2023ರ ಮೇ 9ರಂದು ಬಂಧಿಸಲಾಗಿತ್ತು. ಕೋರ್ಟ್ ಮಧ್ಯಸ್ಥಿಕೆ ನಂತರ ಬಿಡುಗಡೆ ಮಾಡಲಾಗಿತ್ತು. ಈಗ ತೋಶಖಾನ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ​ತೋಶಖಾನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಖಾನ್‌ ಇನ್ನು ಮುಂದೆ ಪಿಟಿಐ ಮುಖ್ಯಸ್ಥ ಹುದ್ದೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲ ಜುಲ್ಫಿಕರ್‌ ಅಹ್ಮದ್‌ ಭುಟ್ಟೋ ಹೇಳಿದ್ದಾರೆ. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

    ಕ್ರೀಡಾ ಕಣದಲ್ಲಿ ಖಾನ್‌ ಲೈಫ್‌ ಹೇಗಿತ್ತು?: 

    ಇದೀಗ ಆಡಳಿತ ಪಕ್ಷದ ನಾಯಕರ ಪಾಲಿಗೆ ರಾಜಕೀಯ ವಿಲನ್‌ ಆಗಿರುವ ಇಮ್ರಾನ್‌ ಒಂದು ಕಾಲದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡವನ್ನು ಮುನ್ನಡೆಸಿ ಪ್ರಶಸ್ತಿಗಳನ್ನು ತಂದುಕೊಟ್ಟ ದಂತಕತೆಯಾಗಿದ್ದಾರೆ. 88 ಟೆಸ್ಟ್‌, 175 ಏಕದಿನ ಪಂದ್ಯ, 382 ಪ್ರಥಮದರ್ಜೆ ಕ್ರಿಕೆಟ್‌ ಹಾಗೂ ಲಿಸ್ಟ್‌-ಎ ನಲ್ಲಿ 425 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 3,807 ರನ್‌, ಏಕದಿನ ಕ್ರಿಕೆಟ್‌ನಲ್ಲಿ 3,709 ರನ್‌, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17,771 ರನ್‌ ಹಾಗೂ ಲಿಸ್ಟ್‌ ಎ ನಲ್ಲಿ 10,100 ರನ್‌ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೇ ಸ್ಟಾರ್‌ ಆಲ್‌ರೌಂಡರ್‌ ಆಗಿದ್ದ ಖಾನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 362 ವಿಕೆಟ್‌, ಏಕದಿನ ಕ್ರಿಕೆಟ್‌ನಲ್ಲಿ 182 ವಿಕೆಟ್‌, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,287 ವಿಕೆಟ್‌ ಹಾಗೂ ಲಿಸ್ಟ್‌ ಎ ನಲ್ಲಿ 507 ವಿಕೆಟ್‌ ಪಡೆದು ಇತಿಹಾಸ ನಿರ್ಮಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    ಡ್ರೋನ್ ಮೂಲಕ ಪಂಜಾಬ್‌ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ

    ಇಸ್ಲಾಮಾಬಾದ್/ ನವದೆಹಲಿ: ಪಾಕಿಸ್ತಾನದ (Pakistan) ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಪ್ರಮುಖ ಆಪ್ತ ಸಹಾಯಕ ಭಾರತದ ಗಡಿಯುದ್ದಕ್ಕೂ ಡ್ರಗ್ಸ್ (Drugs) ಪೂರೈಕೆಯನ್ನು ಹೆಚ್ಚಿಸಲು ಡ್ರೋನ್‌ಗಳನ್ನು (Drone) ಬಳಸಲಾಗುತ್ತಿರುವುದಾಗಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

    ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಷರೀಫ್ ಅವರ ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮೊಹಮ್ಮದ್ ಅಹ್ಮದ್ ಖಾನ್ (Malik Muhammad Ahmad Khan) ಪಾಕಿಸ್ತಾನ-ಭಾರತ ಗಡಿಯ ಬಳಿ ಕಸೂರ್‌ನ ಪ್ರವಾಹ ಪೀಡಿತ ಪ್ರದೇಶದಲ್ಲಿ ಡ್ರೋನ್‌ಗಳನ್ನು ಬಳಸಿ ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಲಾಗಿದ್ದು, ಇಲ್ಲದೇ ಹೋದರೆ ಸಂತ್ರಸ್ತರು ಕಳ್ಳಸಾಗಣೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ತಿಳಿಸಿರುವುದಾಗಿ ಹಮೀದ್ ಮಿರ್ ಜುಲೈ 17ರಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಿರ್, ಮೊಹಮ್ಮದ್ ಅಹ್ಮದ್ ಖಾನ್ ಅವರು ಕಸೂರ್‌ನಿಂದ ಎಂಪಿಎ ಆಗಿದ್ದಾರೆ. ಅವರು ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಸ್ಥಾಪನೆಗೆ ಬಹಳ ಹತ್ತಿರವಾಗಿದ್ದಾರೆ. ಅವರು ಹಿಂದಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಈಗಿನ ಮಿಲಿಟರಿ ಶ್ರೇಣಿಗೆ ತುಂಬಾ ಹತ್ತಿರವಾಗಿದ್ದರು ಎಂದಿದ್ದಾರೆ. ಇದನ್ನೂ ಓದಿ: ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್

    ಕಸೂರ್ ಹಳ್ಳಿಗರಿಗೆ ಮೊಬೈಲ್ ಸಿಗ್ನಲ್‌ಗಳು ಸಿಗುವುದಿಲ್ಲ ಎಂದು ಹೇಳುತ್ತಾರೆ. ಅವರು ಡ್ರೋನ್‌ಗಳ ಚಲನೆ, ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ಮದ್ಯದ ಸಾಗಾಟದ ಬಗ್ಗೆ ಮಾತನಾಡುತ್ತಾರೆ. ಗಡಿಯಾಚೆಗಿನ ಡ್ರೋನ್ ಚಲನವಲನಗಳಿಂದಾಗಿ ಇಲ್ಲಿನ ಮೊಬೈಲ್ ಸಿಗ್ನಲ್‌ಗಳು ಭದ್ರತಾ ಏಜೆನ್ಸಿಗಳಿಂದ ಜಾಮ್ ಆಗಿವೆ ಎಂದು ಖಾನ್ ನನಗೆ ತಿಳಿಸಿದ್ದಾರೆ ಎಂದು ಮಿರ್ ಹೇಳಿದ್ದಾರೆ.

    ಕಸೂರ್ ಪಂಜಾಬ್‌ನ ಖೇಮ್‌ಕರನ್ ಮತ್ತು ಫಿರೋಜ್‌ಪುರ ಪ್ರದೇಶದ ಗಡಿಗೆ ಅಂಟಿಕೊಂಡಿದೆ. ಪಂಜಾಬ್ ಪೊಲೀಸರ ಅಂಕಿಅಂಶಗಳ ಪ್ರಕಾರ ಫಿರೋಜ್‌ಪುರ ಜಿಲ್ಲೆಯೊಂದರಲ್ಲೇ 2022-2023 ಜುಲೈ ವರೆಗೆ ಎನ್‌ಡಿಪಿಎಸ್ ಕಾಯ್ದೆಯಡಿ 795 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪಾಕಿಸ್ತಾನದ ಗಡಿಯಲ್ಲಿರುವ ಪಂಜಾಬ್‌ನ ಆ ಜಿಲ್ಲೆಗಳಿಂದ ಹೆಚ್ಚಿನ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದತ್ತಾಂಶವು ತೋರಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಾಹುಲ್‌ಗೆ ಮೊಣಕಾಲು ನೋವು – ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ ಪಿಎಂ ಶೆಹಬಾಜ್‌ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ

    ಪಾಕ್‌ ಪಿಎಂ ಶೆಹಬಾಜ್‌ ಎದುರೇ ಭಯೋತ್ಪಾದನೆ ವಿರುದ್ಧ ಗುಡುಗಿದ ಮೋದಿ

    ನವದೆಹಲಿ: ಎಸ್‌ಸಿಒ (SCO) ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಯೋತ್ಪಾದನೆ (Terrorism) ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಉಪಸ್ಥಿತಿಯಲ್ಲೇ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಟಾಂಗ್‌ ಕೊಟ್ಟಿದ್ದಾರೆ.

    ಭಯೋತ್ಪಾದಕ ಚಟುವಟಿಕೆಗಳನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಟೀಕಿಸಲು ಬಣ ಹಿಂಜರಿಯಬಾರದು ಎಂದು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವರ್ಚುವಲ್ ಶೃಂಗಸಭೆಯಲ್ಲಿ ಮೋದಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪರಿಸರ ನಿಯಮ ಉಲ್ಲಂಘಿಸಿದ್ದಕ್ಕೆ ಫುಟ್‌ಬಾಲ್‌ ತಾರೆ ನೇಮರ್‌ಗೆ 27 ಕೋಟಿ ರೂ. ದಂಡ

    ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ವ್ಲಾಡಿಮಿರ್ ಪುಟಿನ್ ಅವರ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

    ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ. ಇಂತಹ ಗುಂಪುಗಳ ಬೆದರಿಕೆಯನ್ನು ಎದುರಿಸಲು ಪರಸ್ಪರ ಸಹಕಾರವನ್ನು ವಿಸ್ತರಿಸಬೇಕು ಎಂದು ಜಾಗತಿಕ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು Meta ಮಾಸ್ಟರ್‌ ಪ್ಲ್ಯಾನ್‌

    ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ಹೋರಾಡೋಣ. ಅದು ಯಾವುದೇ ಸ್ವರೂಪದಲ್ಲೇ ಇರಲಿ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಂದ್ವ ನಿಲುವು ಇರಬಾರದು ಎಂದು ಹೇಳಿದ್ದಾರೆ.

    ಭಾರತದ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಭಾಗವಹಿಸಿದ್ದರು. ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ಮೋದಿ ಅವರು ವಿವಿಧ ಜಾಗತಿಕ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬೆಂಕಿ – 5 ತಿಂಗಳಲ್ಲಿ ಖಲಿಸ್ತಾನಿ ಬೆಂಬಲಿಗರ 2ನೇ ದಾಳಿ

    ವಿವಾದಗಳು, ಉದ್ವಿಗ್ನತೆ ಮತ್ತು ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿರುವ ವಿಶ್ವದ ಎಲ್ಲಾ ದೇಶಗಳಿಗೆ ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ದೊಡ್ಡ ಸವಾಲಾಗಿದೆ. ಅದನ್ನು ಎದುರಿಸಲು ಒಗ್ಗಟ್ಟಿನ ಪ್ರಯತ್ನ ಇರಬೇಕು ಎಂದು ಮೋದಿ ಪ್ರತಿಪಾದಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ನಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ – ಶೆಹಬಾಜ್ ಷರೀಫ್ ಆಪ್ತ

    ಪಾಕ್‌ನಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್, ಬಿಜೆಪಿಯೇ ಹೊಣೆ – ಶೆಹಬಾಜ್ ಷರೀಫ್ ಆಪ್ತ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನದ ಬಳಿಕ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದೆ. ಹಲವು ನಗರಗಳಲ್ಲಿ ನಡೆದಿರುವ ಘರ್ಷಣೆಗೆ ಹತ್ತಾರು ಜನ ಬಲಿಯಾಗಿ ನೂರಾರು ಜನರು ಗಾಯಗೊಂಡಿದ್ದಾರೆ. ಇದೀಗ ಪಾಕಿಸ್ತಾನದಲ್ಲಿ ಮುಂದುವರಿದಿರುವ ಈ ಎಲ್ಲಾ ಹಿಂಸಾಚಾರಕ್ಕೂ ಬಿಜೆಪಿ (BJP) ಹಾಗೂ ಆರ್‌ಎಸ್‌ಎಸ್ (RSS) ಹೊಣೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಆಪ್ತರೊಬ್ಬರು ಆರೋಪಿಸಿದ್ದಾರೆ.

    ಪಾಕಿಸ್ತಾನದ ಹಿಂಸಾಚಾರದ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಷರೀಫ್ ಆಪ್ತ ಸಹಾಯಕ ಅತ್ತ ತರಾರ್ (Atta Tarar), ಪಾಕಿಸ್ತಾನದಲ್ಲಿ ಬೆಂಕಿ ಹಚ್ಚುತ್ತಿರುವ ಹಾಗೂ ವಿಧ್ವಂಸಕರ ಕೃತ್ಯಗಳಲ್ಲಿ ಭಾಗಿಯಾದವರು ಎಲ್ಲರೂ ಭಾರತದ ಆರ್‌ಎಸ್‌ಎಸ್ ಹಾಗೂ ಬಿಜೆಪಿಯಿಂದ ಕಳುಹಿಸಲ್ಪಟ್ಟವರು. ಇಷ್ಟಕ್ಕೇ ನಿಲ್ಲದೇ ಪಾಕಿಸ್ತಾನದ ಪರಿಸ್ಥಿತಿಯನ್ನು ಕಂಡು ಭಾರತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

    ಮಂಗಳವಾರ ಪ್ರಕರಣವೊಂದರ ವಿಚಾರಣೆಗೆಂದು ಇಸ್ಲಾಮಾಬಾದ್‌ನ ಹೈಟೋರ್ಟ್ಗೆ ತೆರಳುತ್ತಿದ್ದ ವೇಳೆ ಇಮ್ರಾನ್ ಖಾನ್ ಅವರನ್ನು ಪ್ಯಾರಾ ಮಿಲಿಟರಿ ಪಡೆ ಬಂಧಿಸಿತು. ಇದಾದ ಬಳಿಕ ಖಾನ್ ಬೆಂಬಲಿಗರು ಬಂಧನವನ್ನು ವಿರೋಧಿಸಿ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಮಾರಿಷಸ್‌ ಸಂಸತ್ತಿಗೆ ಸರ್ಕಾರ ಉತ್ತರ

    ಇಲ್ಲಿಯವರೆಗೆ ಪಾಕಿಸ್ತಾನದಾದ್ಯಂತ ಪ್ರತಿಭಟನೆ ನಡೆಸಿದ ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘರ್ಷಣೆಯಲ್ಲಿ 8ಕ್ಕೂ ಹೆಚ್ಚು ಜನರ ಸಾವಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂರು ಬುಕ್ಕಿಗಳ ಬಂಧನ – 1.84 ಕೋಟಿ ರೂ. ವಶ

  • ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ರೆ ನೀವು ಕ್ರಿಕೆಟ್‌ ನೋಡಿ ಎಂಜಾಯ್‌ ಮಾಡ್ತಿದ್ದೀರಾ – ಪಾಕ್‌ ಪ್ರಧಾನಿಗೆ ಜನ ಕ್ಲಾಸ್‌

    ಇಸ್ಲಾಮಾಬಾದ್: ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ತಲೆದೂರಿರುವ ಸಂದರ್ಭದಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್‌ ಶರೀಫ್‌ (Shehbaz Sharif) ಅವರ ವರ್ತನೆಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೇ ರಾಜಕೀಯ ಬಿಕ್ಕಟ್ಟು ಕೂಡ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಪಾಕ್‌ ಪ್ರಧಾನಿ ಕ್ರಿಕೆಟ್‌ ವೀಕ್ಷಿಸಿ ಎಂಜಾಯ್‌ ಮಾಡುತ್ತಿದ್ದಾರೆಂದು ದೇಶದ ಜನತೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ʼಪವರ್‌ ಹಿಟ್ಟಿಂಗ್‌ ಮಾಡಿದ ಮತ್ತೊಬ್ಬ ಅಫ್ರಿದಿʼ ಎಂದು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸಂಬಂಧಿಸಿದಂತೆ ಶಾಹೀನ್ ಅಫ್ರಿದಿಯನ್ನು ಹಾಡಿಹೊಗಳಿ ಪಾಕ್‌ ಪ್ರಧಾನಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಮತ್ತೊಂದು ಟ್ವೀಟ್‌ನಲ್ಲಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸ್ಥಳೀಯ ಸರ್ಕಾರ ಮತ್ತು ನಿರ್ವಾಹಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಪಾಕ್‌ ಪ್ರಧಾನಿ ಟ್ವೀಟ್‌ಗೆ ದೇಶದ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಕಡೆ ಗಮನಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ನತ್ತ ತೆರಳಿದ ಪಾಕ್ ಮಾಜಿ ಪ್ರಧಾನಿ – ಇಮ್ರಾನ್ ಮನೆಗೆ ನುಗ್ಗಿದ ಪೊಲೀಸರು

    ಪ್ರಧಾನಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಮಿಸ್ಟರ್ ಪ್ರಧಾನ ಮಂತ್ರಿಗಳು ಕ್ರಿಕೆಟ್ ನೋಡುವುದರಲ್ಲಿ ನಿರತರಾಗಿದ್ದಾರೆ. ಏಕೆಂದರೆ ಪಾಕಿಸ್ತಾನವು ಅತ್ಯಧಿಕ ಹಣದುಬ್ಬರ ದರವನ್ನು ದಾಖಲಿಸಿದೆ. ಇದುವರೆಗೆ IMFನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಾಗಿಲ್ಲ. ತಾಯ್ನಾಡಿಗಾಗಿ ಕಳೆದ 11 ತಿಂಗಳಲ್ಲಿ ನಿಮ್ಮ ಉತ್ತಮ ಸೇವೆಗಳಿಗೆ ತುಂಬಾ ಧನ್ಯವಾದಗಳು ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

  • ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ

    ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ

    ರೋಮ್: ಇಲ್ಲಿನ ಕರಾವಳಿ ಪ್ರದೇಶದ ನಗರ ಕ್ರೋಟೋನ್‌ನಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ದುರಂತಕ್ಕೀಡಾಗಿದ್ದು (Italy Boat Wreck), ಭಾರತ (India), ಪಾಕಿಸ್ತಾನ (Pakistan) ಹಾಗೂ ಅಫ್ಘಾನಿಸ್ತಾನದ 40ಕ್ಕೂ ಹೆಚ್ಚು ವಲಸಿಗರು (Migrants) ಸಾವನ್ನಪ್ಪಿರುವ ಘಟನೆ ನಡೆದಿದೆ.

    120 ಮಂದಿಯನ್ನು ಹೊತ್ತ ದೋಣಿಯು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿ, ತುಂಡು ತುಂಡಾಗಿದೆ. ದಡದಿಂದ ಕೆಲವು ಮೀಟರ್‌ಗಳ ಅಂತರದಲ್ಲೇ ಈ ಅವಘಡ ಸಂಭವಿಸಿದ್ದು, ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈಗಾಗಲೇ 43 ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸಾವಿರಾರು ಮೈಲಿ ದೂರವಿದ್ದರೂ ಸಿಗುತ್ತೆ ನೈಜ ಮುತ್ತಿನ ಗಮ್ಮತ್ತು – ಏನಿದು ಕಿಸ್ಸಿಂಗ್ ಡಿವೈಸ್ ಕರಾಮತ್ತು?

    ಪಾಕಿಸ್ತಾನದ 24 ಮಂದಿ ಸಾವು: ದೋಣಿ ದುರಂತದಲ್ಲಿ ಪಾಕಿಸ್ತಾನದ 24ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕಂಬನಿ ಮಿಡಿದಿದ್ದಾರೆ. ಅಲ್ಲದೇ ಇಟಲಿಯ ದೋಣಿ ದುರಂತದಲ್ಲಿ 24ಕ್ಕೂ ಹೆಚ್ಚು ಪಾಕಿಸ್ತಾನಿಯರು ಮುಳುಗಿ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ಆದಷ್ಟು ಬೇಗನೆ ಇರದ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚುವಂತೆ ವಿದೇಶಾಂಗ ಕಚೇರಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದ್ದಾರೆ.

    ಇಟಲಿ ಸರ್ಕಾರವು ಸಂಸತ್ತಿನಲ್ಲಿ ನಿನ್ನೆಯಷ್ಟೇ ವಲಸಿಗರ ರಕ್ಷಣೆಗಾಗಿ ಹೊಸ ಮಸೂದೆ ಮಂಡಿಸಿದ್ದು, ಅದರ ಬೆನ್ನಲ್ಲೇ ದೋಣಿ ಮುಳುಗಡೆ ನಡೆದಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

  • ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಇಸ್ಲಾಮಾಬಾದ್: ಸಚಿವರು ಇನ್ಮುಂದೆ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣ ಮಾಡುವಂತಿಲ್ಲ. ಅಷ್ಟೇ ಅಲ್ಲದೇ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿಯುವಂತಿಲ್ಲ ಎಂದು ಪಾಕಿಸ್ತಾನ ಸರ್ಕಾರ (Pakistan Government) ಸೂಚನೆ ನೀಡಿದೆ.

    ತಮ್ಮ ಸಂಬಳವನ್ನು ಕಡಿತ ಮಾಡಲು ಒಪ್ಪಿಕೊಂಡಿದ್ದಕ್ಕೆ ಸಚಿವರಿಗೆ ಧನ್ಯವಾದಗಳು ಎಂದು ಸರ್ಕಾರ ಹೇಳಿದೆ. ಹಣದುಬ್ಬರ, ಸಾಲದ ಹೊರೆ ತಪ್ಪಿಸಲು ವೆಚ್ಚ ಕಡಿತದ ಕ್ರಮಗಳನ್ನು ಸರ್ಕಾರ ಅನಾವರಣಗೊಳಿಸಿದೆ. ಜುಲೈನಲ್ಲಿ ಮುಂದಿನ ಬಜೆಟ್‌ನಲ್ಲಿ ಸರ್ಕಾರವು ಮತ್ತಷ್ಟು ಕಠಿಣ ಕ್ರಮಗಳನ್ನು ಅನುಸರಿಸಲಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧಕ್ಕೆ 1 ವರ್ಷ – ಮತದಾನದಿಂದ ದೂರ ಉಳಿದ ಭಾರತ

    ಇಸ್ಲಾಮಾಬಾದ್‌ನಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಂತರ ಮಾತನಾಡಿದ ಅವರು, ಇದು ಈ ಸಮಯದ ಅಗತ್ಯವಾಗಿದೆ. ಸಮಯವು ನಮ್ಮಿಂದ ಸಂಯಮ, ಸರಳತೆ ಮತ್ತು ತ್ಯಾಗವನ್ನು ಬಯಸಿದೆ ಎಂದು ಷರೀಫ್‌ ತಿಳಿಸಿದ್ದಾರೆ. ಇದನ್ನೂ ಓದಿ: Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ

    ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 5ನೇ ರಾಷ್ಟ್ರವಾಗಿರುವ ಪಾಕಿಸ್ತಾನ ದೇಶವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶದ ದುರ್ಬಲ ಪರಿಸ್ಥಿತಿ ವಿರುದ್ಧ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಬಿಕಟ್ಟಿನ ಸನ್ನಿವೇಶ ನಿಭಾಯಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಉನ್ನತ ಶ್ರೇಣಿಯ ಸರ್ಕಾರಿ ಅಧಿಕಾರಿಗಳಲ್ಲದೆ ಹಲವಾರು ಫೆಡರಲ್ ಮತ್ತು ರಾಜ್ಯ ಸಚಿವರು ತಮ್ಮ ಸಂಬಳ ಮತ್ತು ಸವಲತ್ತುಗಳನ್ನು ತ್ಯಜಿಸಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ ಎಂದು ಷರೀಫ್ ಹೇಳಿದರು. ಮುಂದಿನ ವರ್ಷದವರೆಗೆ ಐಷಾರಾಮಿ ವಸ್ತುಗಳು ಮತ್ತು ಕಾರುಗಳ ಖರೀದಿಯನ್ನು ಸರ್ಕಾರ ನಿಷೇಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಏತನ್ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) 2022ರ ಆರಂಭದಿಂದ ಬೆಂಚ್‌ಮಾರ್ಕ್ ದರವನ್ನು 725 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. SBP ತನ್ನ ಮುಂದಿನ ನೀತಿ ಪರಾಮರ್ಶೆಯನ್ನು ಮಾರ್ಚ್ 16 ರಂದು ನಡೆಸಲಿದೆ. ಇದನ್ನೂ ಓದಿ: ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ

    Allah ಮೋದಿಯನ್ನು ನಮಗೆ ಕೊಡು, ಅವರೇ ನಮ್ಮ ದೇಶ ಆಳಲಿ: ದೇವರ ಮೊರೆಹೋದ ಪಾಕ್ ಪ್ರಜೆ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ಬೇಸತ್ತಿರುವ ಪಾಕಿಸ್ತಾನದ (Pakistan) ಪ್ರಜೆಯೊಬ್ಬರು ಇದೀಗ `ಅಲ್ಲಾ (Allah) ಮೋದಿಯನ್ನು (Narendra Modi) ನಮಗೆ ಕೊಡು, ಅವರೇ ನಮ್ಮ ದೇಶವನ್ನಾಳಲಿ’ ಎಂದು ದೇವರ ಮೊರೆ ಹೋಗಿರುವ ಪ್ರಸಂಗವೊಮದು ನಡೆದಿದೆ.

    Pakistan

    ಹೌದು. ವಿಶ್ವದಾದ್ಯಂತ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದ ಪ್ರಜೆಯೊಬ್ಬ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಾಡಿಹೊಗಳಿದ ವೀಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ಸ್ವತಃ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಮೋದಿ ಅವರೇ ಪಾಕಿಸ್ತಾನವನ್ನು ಆಳುತ್ತಿದ್ದರೆ ಚೆನ್ನಾಗಿರುತ್ತಿತ್ತು. ಮೋದಿ ಪಾಕ್‌ನಲ್ಲಿ ಇದ್ದಿದ್ದರೇ ಸಮಂಜಸವಾದ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಬಹುದಿತ್ತು ಎಂದು ಅಲವತ್ತುಕೊಂಡಿದ್ದಾರೆ. ಇದನ್ನೂ ಓದಿ: ಯೋಧರಿಗೆ ಆಹಾರ ನೀಡಲು ಒದ್ದಾಡುತ್ತಿದೆ ಪಾಕ್!

    ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ. ನಾವಿಲ್ಲಿ ಟೊಮೆಟೋವನ್ನ ಕೆ.ಜಿ 20 ರೂ., 1 ಕೆಜಿ ಕೋಳಿ 150 ರೂ. ಮತ್ತು ಪೆಟ್ರೋಲ್‌ಗೆ 1 ಲೀಟರ್ 50 ರೂ.ಗೆ (ಪಾಕಿಸ್ತಾನದ ರೂಪಾಯಿ ದರದಲ್ಲಿ) ಖರೀದಿಸುತ್ತೇವೆ ಎಂದಿದ್ದಾರೆ.

    Khawaja Asif

    ನಾವು ಇಸ್ಲಾಂ ರಾಷ್ಟ್ರವನ್ನು ಪಡೆದಿರುವುದು ದುರದೃಷ್ಟಕರ, ಇಲ್ಲಿ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. `ಅಲ್ಲಾ ನಮಗೆ ಮೋದಿ ಸಿಕ್ಕರೇ ಸಾಕು ನವಾಜ್ ಷರೀಫ್, ಇಮ್ರಾನ್‌ಖಾನ್, ಬೆನಜೀರ್, ಜನರಲ್ ಮುಷರಫ್ ಯಾರೊಬ್ಬರೂ ಬೇಡ. ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರ ಆಡಳಿತದಲ್ಲಿ ಬದಕುಲು ನಾವು ಬಯಸುತ್ತೇವೆ. ಮೋದಿ ಎಲ್ಲ ರೀತಿಯ ಅಂಶಗಳನ್ನು ನಿಭಾಯಿಸುತ್ತಿದ್ದಾರೆ. ಆದ್ದರಿಂದಲೇ ಭಾರತ ಆರ್ಥಿಕತೆಯಲ್ಲಿ ವಿಶ್ವದ 5ನೇ ಅತಿದೊಡ್ಡ ರಾಷ್ಟ್ರವಾಗಿದೆ. ಅದಕ್ಕಾಗಿ `ಅಲ್ಲಾ ಮೋದಿಯನ್ನು ನಮಗೆ ನೀಡಿ, ಅವರೇ ನಮ್ಮ ದೇಶವನ್ನು ಆಳಲಿ’ ಎಂದು ನಾನು ಸರ್ವಶಕ್ತನನ್ನ ಪ್ರಾರ್ಥಿಸುವುದಾಗಿ ಭಾವುಕರಾಗಿದ್ದಾರೆ.

    Khawaja Asif Shehbaz Sharif

    ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸ್ವತಃ ರಕ್ಷಣಾ ಸಚಿವರೇ ನಗದು ಕೊರತೆಯಿಂದ ನಮ್ಮ ದೇಶ ದಿವಾಳಿಯಾಗಿದೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಆರ್ಥಿಕ ಸ್ಥಿತಿ ದಿನಕಳೆದಂತೆ ದಿವಾಳಿ ಸ್ಥಿತಿಗೆ ತಲುಪುತ್ತಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಷರತ್ತುಗಳಂತೆ ಭಾರೀ ಪ್ರಮಾಣದಲ್ಲಿ ತೈಲಬೆಲೆ ಹೆಚ್ಚಿಸಿದೆ (Fuel Prices Hike).

    ಬುಧವಾರ ರಾತ್ರೋ ರಾತ್ರಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 22.20 ರೂ. ದಿಢೀರ್ ಏರಿಕೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಠ 272 ರೂ.ಗಳಿಗೆ ತಲುಪಿದೆ. ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಅಪಮೌಲ್ಯದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಇದೇ ರೀತಿ ಹೈಸ್ಪೀಡ್ ಡೀಸೆಲ್ (Diesel) ಬೆಲೆ 17.20 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 280 ರೂ.ಗೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ 12.90 ರೂ. ಹೆಚ್ಚಿಸಿದ್ದು ಪ್ರತಿ ಲೀಟರ್‌ಗೆ 202.73 ರೂ.ಗಳಿಗೆ ಮಾರಾಟವಾಗುತ್ತಿದೆ. ಜೊತೆಗೆ ಲಘು ಡೀಸೆಲ್ ಬೆಲೆ 9.68 ರೂ. ಹೆಚ್ಚಿಸಿದ್ದು, ಪ್ರತಿ ಲೀಟರ್ 196.68 ರೂ.ಗಳಿಗೆ ಮಾರಾಟವಾಗುತ್ತಿದೆ. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಈ ನಿಯಮ ಜಾರಿಗೆ ಬಂದಿವೆ. ಸದ್ಯ ಎಎಂಎಫ್ ಕಠಿಣ ನಿಯಮಗಳ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಆತಂಕಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೇಶಾವರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು (Suicide Bomb Attack) ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ (Maryam Nawaz) ಖಂಡಿದ್ದಾರೆ.

    ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ 101 ಜನರ ಸಾವಿಗೆ ಮಾಜಿ ಐಎಸ್‌ಐ (ISI) ಮುಖ್ಯಸ್ಥ ಹಾಗೂ ಪೇಶಾವರ ಕಾರ್ಪ್ಸ್ ಕಮಾಂಡರ್ ಫೈಜ್ ಹಮೀದ್ ಹೊಣೆಗಾರ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ

    ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ - ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಇಮ್ರಾನ್ ಖಾನ್ (Imran Khan) ಯಾರನ್ನ ತನ್ನ ಕಣ್ಣು, ಕೈ ಹಾಗೂ ಕಿವಿ ಎಂದು ಕರೆಯುತ್ತಿದ್ದರೋ ಆ ಒಬ್ಬನನ್ನು ಪೇಶಾವರಲ್ಲಿ ನಿಯೋಜಿಸಲಾಗಿತ್ತು. ಅವನೇಕೆ ಭಯೋತ್ಪಾದಕರಿಗೆ ಬಾಗಿಲು ತೆರೆಯಬೇಕಿತ್ತು? ಭಯೋತ್ಪಾದಕರು ನಮ್ಮ ಸಹೋದರರು ಎಂದು ಏಕೆ ಹೇಳಿದ? ಭಯೋತ್ಪಾದಕನನ್ನ ಪಾಕಿಸ್ತಾನಕ್ಕೆ ಆಹ್ವಾನಿಸಿದ್ದೇಕೆ? ಜೈಲಿನಿಂದ ಹಾರ್ಡ್ಕೋರ್ ಭಯೋತ್ಪಾದಕರನ್ನ ಬಿಡುಗಡೆ ಮಾಡಿದ್ದೇಕೆ? ಅವನು (ಜನರಲ್ ಹಮೀದ್) ನಿಜವಾಗಿಯೂ ಪಾಕಿಸ್ತಾನದ ಕಣ್ಣು, ಕೈ ಮತ್ತು ಕಿವಿ ಆಗಿದ್ದರೆ, ಈ ಪರಿಸ್ಥಿತಿ (ಭಯೋತ್ಪಾದನೆಯ) ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ನನ್ನ ತಂದೆ ದೇಶವನ್ನು ಭಯೋತ್ಪಾದನೆ ದಾಳಿಯಿಂದ ಮುಕ್ತಗೊಳಿದ್ದರು. ಆದರೆ ಇಮ್ರಾನ್ ಖಾನ್ ಆಡಳಿತದ ಕೆಟ್ಟ ನೀತಿಗಳಿಂದ ಮತ್ತೆ ಭಯೋತ್ಪಾದನೆ ಮರಳಿತು. ನವಾಜ್ ಷರೀಫ್ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೆ, ಇಮ್ರಾನ್ ಖಾನ್ ಅವರ 4 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹಾಲು ಮತ್ತು ಜೇನುತುಪ್ಪದ ನದಿಗಳು ಹರಿಯಬೇಕಾಗಿತ್ತು. ಆದರೆ ನವಾಜ್ ಷರೀಫ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ದೇಶವನ್ನು ಉಳಿಸಿದ್ದಾರೆ. ಈ ದೇಶವನ್ನು ಶ್ರೀಲಂಕಾದಂತೆ ಆಗುವುದನ್ನು ತಡೆದಿದ್ದಾರೆ ಎಂದು ಸ್ಮರಿಸಿದರು.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಯಾರಿದು ಹಮೀದ್?
    ಐಎಸ್‌ಐ ಮುಖ್ಯಸ್ಥನ ಹುದ್ದೆಯನ್ನು ಪಾಕಿಸ್ತಾನ ಸೇನೆಯಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲಾಗಿದೆ. ಇದು ತನ್ನ 75 ವರ್ಷಗಳ ಅಸ್ತಿತ್ವದಲ್ಲಿ ಅರ್ಧಕ್ಕಿಂತ ಹೆಚ್ಚು ವರ್ಷಗಳ ಕಾಲ ದೇಶವನ್ನು ಆಳಿದೆ. 2019ರ ಜೂನ್ ನಿಂದ 2021ರ ನವೆಂಬರ್ ವರೆಗೆ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಮುಖ್ಯಸ್ಥನಾಗಿದ್ದ ಲೆಫ್ಟಿನೆಂಟ್ ಜನರಲ್ ಹಮೀದ್, 2021ರ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೊದಲ ಉನ್ನತ ಶ್ರೇಣಿಯ ವಿದೇಶಿ ಅಧಿಕಾರಿ ಎನ್ನಿಸಿಕೊಂಡಿದ್ದ. ಕೊನೆಯದಾಗಿ ಅವರನ್ನು ಪೇಶಾವರಕ್ಕೆ ಕಾರ್ಪ್ಸ್ ಕಮಾಂಡರ್ ಆಗಿ ನಿಯೋಜಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k