ಇಸ್ಲಾಮಾಬಾದ್: ನಮ್ಮ ನಾಯಕ ಹೇಡಿ. ಭಾರತದ ಪ್ರಧಾನಿ ಮೋದಿ (PM Modi) ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ವಿರುದ್ಧ ಸಂಸದ ಶಾಹಿದ್ ಖಟ್ಟಕ್ ಗುಡುಗಿದ್ದಾನೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಶುಕ್ರವಾರ ನಡೆದ ಚರ್ಚೆಯಲ್ಲಿ ಪಾಕಿಸ್ತಾನ ಸಂಸತ್ತು ತೀವ್ರ ಕದನಗಳ ತಾಣವಾಯಿತು. ಇದನ್ನೂ ಓದಿ: ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ
In an outburst, a Pakistani MP slammed Prime Minister Shehbaz Sharif as ‘Buzdil’ (coward), accusing him of lacking the courage to even utter Prime Minister @narendramodi‘s name. The MP laments that Pakistan’s army is demoralized and the nation stands helpless, unable or unwilling… pic.twitter.com/s6EjlDDlj3
ಶುಕ್ರವಾರ ನಡೆದ ಸಂಸತ್ ಅಧಿವೇಶನದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ದಕ್ಷಿಣ ವಲಯ ಖೈಬರ್ ಪಖ್ತುನ್ಖ್ವಾ ಅಧ್ಯಕ್ಷನೂ ಆಗಿರುವ ಪಾಕಿಸ್ತಾನ ಸಂಸದ ಶಾಹಿದ್ ಖಟ್ಟಕ್, ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾನೆ. ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡದ ಹೇಡಿ ಎಂದು ಟೀಕಿಸಿದ್ದಾನೆ.
ಸರ್ಕಾರದ ವಿಧಾನವನ್ನು ಟೀಕಿಸಿದ ಸಂಸದ ಖಟ್ಟಕ್, ಭಾರತದ ವಿರುದ್ಧ ಒಂದೇ ಒಂದು ಹೇಳಿಕೆ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಮ್ಮ ನಾಯಕ, ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪಾಕ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ಗುಜರಾತ್ ಸಿಎಂ ಜೊತೆ ಗಡಿ ಜಿಲ್ಲೆಗಳ ಭದ್ರತೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಜನರ ಪ್ರಾಣವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇ 7 ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಲಾಗಿದೆ.
– ಬ್ಯಾಂಕ್‌ಗಳಲ್ಲಿ ಹಣ ಖಾಲಿ, ಎಟಿಎಂ ಮಿತಿ 3,000 ರೂ.ಗೆ ಇಳಿಕೆ
ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ (India) ದಿಟ್ಟ ಉತ್ತರ ನೀಡಿದೆ. ಭಾರತದ ಮಿಲಿಟರಿ ದಾಳಿಗೆ ತತ್ತರಿಸಿರುವ ಪಾಕ್ (Pakistan) ಇದೀಗ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ.
Govt of Pakistan appeals to International Partners for more loans after heavy losses inflected by enemy. Amid escalating war and stocks crash, we urge international partners to help de-escalate. Nation urged to remain steadfast. @WorldBank#IndiaPakistanWar#PakistanZindabad
— Economic Affairs Division, Government of Pakistan (@eadgop) May 9, 2025
ಭಾರತದ ನಡೆಸಿದ ಮಿಸೈಲ್ ದಾಳಿಯಿಂದ ಪಾಕಿಸ್ತಾನದ ವಾಯುನೆಲೆ (Naval Base) ಸೇರಿದಂತೆ ಪಾಕ್‌ನ ಮೂಲಭೂತ ಸೌಕರ್ಯಗಳು ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಹೀಗಾಗಿ ಇಸ್ಲಾಮಾಬಾದ್ (Islamabad) ಶುಕ್ರವಾರ ತುರ್ತು ಸಾಲ ನೀಡುವಂತೆ ವಿಶ್ವಬ್ಯಾಂಕ್ (World Bank) ಸೇರಿದಂತೆ ತನ್ನ ಅಂತರರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?
ತನ್ನ ಎಕ್ಸ್ ಖಾತೆಯಲ್ಲಿ ಅಧಿಕೃತ ಸಂದೇಶ ಹಂಚಿಕೊಂಡಿರುವ ಪಾಕಿಸ್ತಾನ ಸರ್ಕಾರವು, ಶತ್ರುಗಳಿಂದ ಉಂಟಾದ ಭಾರೀ ನಷ್ಟದ ನಂತರ ಪಾಕಿಸ್ತಾನ ಸರ್ಕಾರ ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡುತ್ತಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಕುಸಿತದ ಮಧ್ಯೆ, ಆರ್ಥಿಕ ದುಸ್ತರ ಕಡಿಮೆ ಮಾಡಲು ಸಹಾಯ ಮಾಡುವಂತೆ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ಮನವಿ ಮಾಡುತ್ತಿದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ
ಎಟಿಎಂಗಳಲ್ಲಿ ಹಣ ಡ್ರಾ ಮಿತಿ ಇಳಿಕೆ:
ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಪಾಕ್‌ನ 16 ಕಡೆ ಭಾರತದ ದಾಳಿಯಿಂದ ಮೂಲ ಸೌಕರ್ಯಗಳು ನಷ್ಟವಾಗಿದೆ. ಹಲವೆಡೆ ಬ್ಯಾಂಕ್‌ಗಳಲ್ಲೂ ಹಣ ಖಾಲಿಯಾಗಿದ್ದು, ಎಟಿಎಂಗಳಲ್ಲಿ ಹಣದ ಡ್ರಾ ಮಿತಿಯನ್ನು 3 ಸಾವಿರ ಪಾಕಿಸ್ತಾನಿ ರೂಪಾಯಿಗೆ ಇಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಬಿಎಸ್‌ಎಫ್ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್ ಉಗ್ರರ ಹತ್ಯೆ
ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿಗೆ ಭಾರತದ (India) ಪ್ರತೀಕಾರ ಮುಂದುವರೆದಿದ್ದು, ಪಾಕ್ (Pakistan) ತತ್ತರಿಸಿ ಹೋಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ನಿವಾಸದ ಸಮೀಪದಲ್ಲೇ ಸ್ಫೋಟ ಸಂಭವಿಸಿದ್ದು, ಪ್ರಾಣಭಯದಲ್ಲಿ ಅವರು ಬಂಕರ್ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಆ ಮನೆಯಿಂದ 20 ಕಿಮೀ ದೂರದಲ್ಲೇ ಭಾರೀ ಸ್ಫೋಟದ ಸದ್ದಾಗಿದೆ. ಇದರಿಂದ ಪಾಕ್ ಪ್ರಧಾನಿ ಬೆಚ್ಚಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಇದರ ನಡುವೆಯೇ ಪಾಕಿಸ್ತಾನದ ಪೈಲಟ್‌ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
– ಶೆಹಬಾಜ್ ಷರೀಫ್ ಮನೆಗೆ 20 ಕಿಮೀ ದೂರದಲ್ಲಿ ಸ್ಫೋಟದ ಸದ್ದು
ಇಸ್ಲಾಮಾಬಾದ್: ಭಾರತ ನಡೆಸಿದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಡುಗುವಂತಾಗಿದೆ. ಪಾಕ್ ಪ್ರಧಾನಿ ಮನೆ ಬಳಿಯೇ ದಾಳಿಯಾಗಿದೆ ಎಂದು ವರದಿಯಾಗಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಮನೆಗೆ 20 ಕಿಮೀ ದೂರದಲ್ಲೇ ಸ್ಫೋಟದ ಸದ್ದಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ
ಭಾರತದ ದಾಳಿಗೆ ಪಾಕ್ ಪ್ರಧಾನಿಯೂ ಬೆಚ್ಚಿದ್ದಾರೆ. ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತಗಳಿಂದ ಸೂಚನೆ ನೀಡಿದೆ. ಪಾಕಿಸ್ತಾನದ ಪೈಲಟ್‌ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿರೋದು ಎನ್ನಲಾಗಿದೆ. ಇದನ್ನೂ ಓದಿ: ಭಾರತದ ಮೇಲೆ ಪಾಕ್‌ನಿಂದ 100 ಕ್ಷಿಪಣಿ ದಾಳಿ
Pakistani PM Shehbaz Sharif told Parliament that PAF was ready to intercept Indian aircraft during Operation Sindoor. He claimed 5 Indian jets and 2 drones were downed, adding that restraint was shown despite capability to shoot down more
ತಡರಾತ್ರಿ ಪಾಕ್ ಮತ್ತು ಪಿಒಕೆ ಹಲವಾರು ಸ್ಥಳಗಳಲ್ಲಿ ಭಾರತ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದರು. ಈ ದಾಳಿ ಅಚ್ಚರಿ ಮೂಡಿಸಿತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಭಾರತೀಯ ವಿಮಾನಗಳು ತಮ್ಮ ದೇಶವನ್ನು ಪ್ರವೇಶಿಸಿದರೆ ಸಮುದ್ರಕ್ಕೆ ಎಸೆಯಲು ಪಾಕಿಸ್ತಾನ ವಾಯುಪಡೆ ಸಿದ್ಧವಾಗಿದೆ ಮತ್ತು ಅದಕ್ಕಾಗಿ ಕಾಯುತ್ತಿದೆ. ಪಾಕಿಸ್ತಾನವು 5 ರಫೇಲ್ ಜೆಟ್‌ಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ಹಸಿಹಸಿ ಸುಳ್ಳು ಹೇಳಿದ್ದಾರೆ. ಇದನ್ನೂ ಓದಿ: ಲಡಾಖ್‍ನಲ್ಲಿ ಪ್ರವಾಸಿಗರಿಗೆ ಉಚಿತ ವಸತಿ!
ಪಾಕಿಸ್ತಾನ ವಾಯುಪಡೆಯು ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ರಾತ್ರಿಯನ್ನು ಐತಿಹಾಸಿಕ ರಾತ್ರಿಯನ್ನಾಗಿ ಮಾಡಿತು. ದಾಳಿಯಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಅನೇಕ ಪಾಕಿಸ್ತಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಾಕ್ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಪಹಲ್ಗಾಮ್ ದಾಳಿಯು ನಾನು ಟರ್ಕಿಯಲ್ಲಿದ್ದಾಗ ನಡೆದಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿಲ್ಲ. ಈ ವಿಷಯದ ಬಗ್ಗೆ ತನಿಖೆಗೆ ಆಹ್ವಾನ ನೀಡಿದ್ದೇನೆ. ತನಿಖೆಗೆ ಸಹಕರಿಸಲು ಪಾಕಿಸ್ತಾನ ಸಿದ್ಧವಾಗಿದೆ. ಆದಾಗ್ಯೂ, ಭಾರತ ಈ ಪ್ರಸ್ತಾಪವನ್ನು ತಿರಸ್ಕರಿಸಿತು ಎಂದು ಹೇಳಿಕೆ ನೀಡಿದ್ದಾರೆ.
ಭಾರತ ನಡೆಸುತ್ತಿರುವ ದಾಳಿಗಳ ಬಗ್ಗೆ ನಮಗೆ ಮಾಹಿತಿ ಇದೆ. ದಾಳಿಯಲ್ಲಿ ಒಟ್ಟು 80 ಯುದ್ಧ ವಿಮಾನಗಳು ಭಾಗಿಯಾಗಿದ್ದು, ದೇಶದ ಆರು ಸ್ಥಳಗಳಲ್ಲಿ ಅವು ದಾಳಿ ನಡೆಸಿವೆ. ಇದಕ್ಕೆ ಪಿಎಎಫ್ ಸಿದ್ಧವಾಗಿತ್ತು. ಭಾರತೀಯ ಯುದ್ಧ ವಿಮಾನಗಳು ಪೇಲೋಡ್ ಅನ್ನು ಬಿಡುಗಡೆ ಮಾಡಿದ ನಂತರ ಅವುಗಳ ಮೇಲೆ ದಾಳಿ ಮಾಡಿತು. ಐದು ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಲು ಸಾಧ್ಯವಾಯಿತು. ಒಂದು ವಿಮಾನ ಪಂಜಾಬ್‌ನ ಭಟಿಂಡಾದಲ್ಲಿ ಬಿದ್ದಿತು. ಪ್ರತಿದಾಳಿಯಲ್ಲಿ ಎರಡು ಡ್ರೋನ್‌ಗಳನ್ನು ಸಹ ಹೊಡೆದುರುಳಿಸಲಾಗಿದೆ. ಇದು ಸಾಂಪ್ರದಾಯಿಕ ಯುದ್ಧವಾಗಿತ್ತು. ಪಾಕಿಸ್ತಾನವು ಈ ಸಾಂಪ್ರದಾಯಿಕ ಯುದ್ಧದಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಯಿತು. ಪಾಕಿಸ್ತಾನ ಸೇನೆಯು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ. ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಜಗತ್ತಿಗೆ ಈಗ ತಿಳಿದಿದೆ ಎಂದು ಪಾಕ್ ಪ್ರಧಾನಿ ಬುರುಡೆ ಬಿಟ್ಟಿದ್ದಾರೆ.
ಇಸ್ಲಾಮಾಬಾದ್: ಕಾಶ್ಮೀರದಲ್ಲಿ (Kashmir) ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರದ ದಾಳಿ ನಡೆಸಿದೆ. ʻಆಪರೇಷನ್ ಸಿಂಧೂರʼ ಹೆಸರಿನಡಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) 9 ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಆದ್ರೂ ಕುತಂತ್ರ ಬುದ್ದಿ ಬಿಡದ ಪಾಕ್ ಭಾರತದ ವಿರುದ್ಧ ಪ್ರತಿದಾಳಿಗೆ ಸಂಚು ರೂಪಿಸುತ್ತಿದೆ.
ಇಂದು ಮಧ್ಯಾಹ್ನದ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ಕರೆದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif), ಭಾರತದ ಪ್ರತೀಕಾರದ ದಾಳಿಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಪ್ರಚೋದಿತ ಮತ್ತು ಕಾನೂನುಬಾಹಿರ ಯುದ್ಧ ಕೃತ್ಯ ಎಂದು ಕರೆದಿದ್ದಾರೆ. ಅಲ್ಲದೇ ಭಾರತದ ವಿರುದ್ಧ ದಾಳಿಗೆ ಸೇನೆಗೆ (Pakistan Army) ಅಧಿಕಾರ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಏನಿದು ʻಆಪರೇಷನ್ ಸಿಂಧೂರʼ?
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ.
ಮೋಸ್ಟ್‌ವಾಂಟೆಡ್‌ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ದಾಳಿ ನಡೆದಿದೆ?
1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.
2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.
3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್‌ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.
4) ಸವಾಯಿ: ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್‌ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.
5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್ ಪ್ಯಾಡ್ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.
6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.
7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.
8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.
9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.
– ಭಾರತದ ಕ್ರಮಗಳ ಬಳಿಕ ಪಾಕ್ ಪ್ರಧಾನಿ ನೇತೃತ್ವದಲ್ಲಿ ಸಭೆ
– ಭಾರತದ ಜೊತೆಗಿನ ಎಲ್ಲ ಒಪ್ಪಂದಗಳಿಗೆ ಬ್ರೇಕ್ – ಶಿಮ್ಲಾ ಒಪ್ಪಂದ ಅಮಾನತು
– ಭಾರತದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ: ಎನ್‌ಎಸ್‌ಸಿ ಆರೋಪ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) 26 ಮಂದಿ ಅಮಾಯಕರ ಸಾವಿನ ನಂತರ ಭಾರತವು ಪಾಕ್ ಜೊತೆಗಿನ ರಾಜತಾಂತ್ರಿಕ ಸಬಂಧವನ್ನು ಕಡಿದುಕೊಂಡಿದೆ. 1960ರ ಸಿಂಧೂ ನದಿ ಒಪ್ಪಂದ ರದ್ದು ಸೇರಿದಂತೆ ಹಲವು ಕಠಿಣ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿರುವ ಪಾಕ್ (Pakistan) ಪ್ರಜೆಗಳು ದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಇಂದು ಮಹತ್ವದ ಭದ್ರತಾ ಸಭೆ ನಡೆಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ (Islamabad) ಪಾಕಿಸ್ತಾನದ ಮೂರು ಸೇನಾಪಡೆಗಳ ಮುಖ್ಯಸ್ಥರು, ಪ್ರಮುಖ ಸಚಿವರು, ಉನ್ನತ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳೊಂದಿಗೆ ಪಾಕ್ ಪ್ರಧಾನಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾಕಿಸ್ತಾನ ಪಾಲಿನ ನೀರನ್ನು ತಡೆಯಲು ಭಾರತ ಪ್ರಯತ್ನಿಸಿದ್ರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ – ಪಾಕ್ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ
ಭಾರತಕ್ಕೆ ಪಾಕ್ ಏರ್‌ಸ್ಪೇಸ್ ಬಂದ್:
ಇನ್ನೂ ಭಾರತ ಸರ್ಕಾರ (Indian Government) ಕಠಿಣ ನಿರ್ಧಾರ ಕೈಗೊಂಡಂತೆ ಪಾಕಿಸ್ತಾನ ಸಹ ಭಾರತ ವಿರೋಧಿ ನಿರ್ಧಾರಗಳನ್ನು ಇಂದಿನ ಪ್ರಮುಖ ಸಭೆಯಲ್ಲಿ ತೆಗೆದುಕೊಂಡಿದೆ. ಭಾರತದ ಒಡೆತನದ ಮತ್ತು ಭಾರತದ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನದ ವಾಯುಸೀಮೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಜೊತೆಗೆ ಭಾರತದ ಜೊತೆಗಿನ ಎಲ್ಲಾ ಒಪ್ಪಂದಗಳನ್ನು ಕಡಿದುಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದಾಳಿ ಎಸಗಿದ ಉಗ್ರರಿಗೆ, ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿ ಶಿಕ್ಷೆ ಕೊಡುತ್ತೇವೆ: ಘರ್ಜಿಸಿದ ಮೋದಿ
ಮುಸ್ಲಿಮರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ:
ಮುಂದುವರಿದು… ಭಾರತದಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಆರೋಪಿಸಿದೆ. ಭಾರತ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ ಮುಸ್ಲಿಂ ಸಮುದಾಯವನ್ನು ಅಂಚಿನಲ್ಲಿಡುತ್ತಿದೆ. ಈ ರೀತಿ ಮಾಡಿ ರಾಜಕೀಯ ಲಾಭ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಎನ್‌ಎಸ್‌ಸಿ ಆರೋಪಿಸಿದೆ. ಅಲ್ಲದೇ ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಗೆಹರಿಯದ ವಿವಾದವಾಗಿದೆ ಎಂದು ಹೇಳಿದೆ.
ಭಾರತದ ಕ್ರಮಗಳಿಗೆ ತತ್ತರಿಸಿದ ಪಾಕ್
ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತದ ಕ್ರಮಗಳಿಂದ ತತ್ತರಿಸಿರುವ ಪಾಕಿಸ್ತಾನ, ಭಾರತ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಭಾರತ ತೆಗೆದುಕೊಂಡ ಕ್ರಮಗಳು ಏಕಪಕ್ಷೀಯವಾಗಿದೆ, ಇದು ಅನ್ಯಾಯ, ರಾಜಕೀಯ ಪ್ರೇರಿತ, ಬೇಜವಾಬ್ದಾರಿ ಮತ್ತು ಆಧಾರರಹಿತ ಹೇಳಿದೆ. ಇದನ್ನೂ ಓದಿ: ಭಾರತದಿಂದ ದಾಳಿ ಭೀತಿ – ಕ್ಷಿಪಣಿ ಪರೀಕ್ಷೆಗೆ ಮುಂದಾದ ಪಾಕ್
ಪಾಕ್ ಸಭೆಯ ಪ್ರಮುಖ ನಿರ್ಣಯಗಳೇನು?
* ಸಿಂಧೂ ನದಿ ನೀರು ಒಪ್ಪಂದವನ್ನು ನಿಲ್ಲಿಸುವ ಭಾರತದ ನಿರ್ಧಾರವನ್ನು ಪಾಕಿಸ್ತಾನ ತಿರಸ್ಕರಿಸಿದೆ. ಈ ಒಪ್ಪಂದವು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಏಕಪಕ್ಷೀಯವಾಗಿ ಅಮಾನತುಗೊಳಿಸಲಾಗುವುದಿಲ್ಲ ಎಂದು NSC ಹೇಳಿದೆ.
* ಭಾರತವು ನೀರನ್ನು ನಿಲ್ಲಿಸಲು ಅಥವಾ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೆ, ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಪೂರ್ಣ ಬಲದಿಂದ ಪ್ರತಿಕ್ರಿಯಿಸಲಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.
* ಶಿಮ್ಲಾ ಒಪ್ಪಂದ ಸೇರಿದಂತೆ ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಪಾಕಿಸ್ತಾನ ಹೇಳಿದೆ.
* ಜೊತೆಗೆ ಪಾಕಿಸ್ತಾನ ಸಹ ವಾಘಾ ಗಡಿಯನ್ನು ತಕ್ಷಣದಿಂದಲೇ ಮುಚ್ಚುತ್ತಿದ್ದು, ಅನುಮತಿ ಇರುವವರು ಮಾತ್ರ ಏಪ್ರಿಲ್ 30ರ ಒಳಗೆ ಹಿಂದಿರುಗಬಹುದು.
* ಸಾರ್ಕ್ ವೀಸಾ ಯೋಜನೆಯಡಿಯಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳ ವೀಸಾಗಳನ್ನು ರದ್ದುಪಡಿಸಲಾಗಿದೆ. ಸಿಖ್ ಯಾತ್ರಿಕರಿಗೆ ಮಾತ್ರ ವಿನಾಯಿತಿ ನೀಡಲಾಗುವುದು. ಉಳಿದ ಭಾರತೀಯರು 48 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ಸೂಚಿಸಲಾಗಿದೆ.
* ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರಿಗೆ ಪಾಕಿಸ್ತಾನ ತೊರೆಯುವಂತೆ ಆದೇಶಿಸಲಾಗಿದೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ನ ಸಿಬ್ಬಂದಿಯನ್ನ 30ಕ್ಕೆ ಇಳಿಸಲಾಗಿದೆ.
– ಭಾರತದೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದ ಬಂದ್‌ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇಸ್ಲಾಮಾಬಾದ್: ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸದಿದ್ದರೆ, ನನ್ನ ಹೆಸರು ಶೆಹಬಾಜ್ ಷರೀಫೇ ಅಲ್ಲ ಎಂದು ಪಾಕ್ ಪ್ರಧಾನಿ ಷರೀಫ್ ಸವಾಲು ಹಾಕಿದ್ದಾರೆ.
ರ‍್ಯಾಲಿಯೊಂದರಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ. ಪಾಕಿಸ್ತಾನದ ಪರಿಸ್ಥಿತಿ ಸುಧಾರಿಸಲು ನಾವು ಹಗಲಿರುಳು ಕೆಲಸ ಮಾಡುತ್ತೇವೆ. ಸರ್ವಶಕ್ತನು ಯಾವಾಗಲೂ ಪಾಕಿಸ್ತಾನವನ್ನು ಆಶೀರ್ವದಿಸಿದ್ದಾನೆ. ಅಭಿವೃದ್ಧಿ ಮತ್ತು ಪ್ರಗತಿಯ ವಿಷಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರನ್ನೇ ಬದಲಾಯಿಸುತ್ತೇನೆಂದು ತಿಳಿಸಿದ್ದಾರೆ.
ತಮ್ಮ ಹಿರಿಯ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆಯೂ ಪ್ರಮಾಣ ಮಾಡುತ್ತಾ, ನಾನು ನವಾಜ್ ಷರೀಫ್ ಅವರ ಅಭಿಮಾನಿ. ಅವರ ಅನುಯಾಯಿ. ಇಂದು ಅವರ ಮೇಲೆ ಪ್ರಮಾಣ ಮಾಡುತ್ತೇನೆ. ನನಗೆ ಶಕ್ತಿ ಮತ್ತು ಇಚ್ಛಾಶಕ್ತಿ ಇರುವವರೆಗೂ, ನಾವೆಲ್ಲರೂ ಒಟ್ಟಾಗಿ ಪಾಕಿಸ್ತಾನವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಮತ್ತು ಭಾರತವನ್ನು ಸೋಲಿಸಲು ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಪಾಕಿಸ್ತಾನವು ಹಲವಾರು ವರ್ಷಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಬೃಹತ್ ಅಂತರರಾಷ್ಟ್ರೀಯ ಸಾಲದ ಹೊರೆಯಲ್ಲಿದೆ. ಇದು ಸಾಲವನ್ನು ಮರುಪಾವತಿಸಲು ಕಠಿಣ ಕ್ರಮಗಳಿಗೆ ಕಾರಣವಾಗಿದೆ.
ನವದೆಹಲಿ: ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಭಾರತದೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.
ಕಾಶ್ಮೀರಿಗಳಿಗೆ ಬೆಂಬಲ ತೋರಿಸುವ ವಾರ್ಷಿಕ ಪಾಕಿಸ್ತಾನಿ ಕಾರ್ಯಕ್ರಮವಾದ ಕಾಶ್ಮೀರ ಒಗ್ಗಟ್ಟಿನ ದಿನದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕ್ ಆಕ್ರಮಿತ ಕಾಶ್ಮೀರ (POK) ಅಸೆಂಬ್ಲಿಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಷರೀಫ್ ಅವರು ಶಾಂತಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟರು. ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್ ಸಹಿ
ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು. ಭಾರತವು 2019, ಆ.5ರ ಚಿಂತನೆಯಿಂದ ಹೊರಬಂದು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಸಂವಾದವನ್ನು ಪ್ರಾರಂಭಿಸಬೇಕು ಎಂದು ಷರೀಫ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಹಳಸಿದ ಸಂಬಂಧಗಳನ್ನು ಸರಿಪಡಿಸಲು ಏಕೈಕ ಮಾರ್ಗವೆಂದರೆ ಅದು ಮಾತುಕತೆ. 1999 ರ ಲಾಹೋರ್ ಘೋಷಣೆಯಲ್ಲಿ ಉಲ್ಲೇಖಿಸಿದಂತೆ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಸಹಿ ಹಾಕಲಾದ ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ಇದನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ
ಭಾರತವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ಪ್ರಧಾನಿ ಷರೀಫ್ ಆರೋಪಿಸಿದರು. ಇದು ಈ ಪ್ರದೇಶದಲ್ಲಿ ಶಾಂತಿಯನ್ನು ತರುವುದಿಲ್ಲ ಎಂದು ಪ್ರತಿಪಾದಿಸಿದರು. ಭಾರತವು ಬುದ್ಧಿವಂತರಾಗಿರಬೇಕು. ಮುಂದುವರಿಯಲು ಏಕೈಕ ಮಾರ್ಗವೆಂದರೆ ಶಾಂತಿ ಎಂದು ಅವರು ಹೇಳಿದರು. ಕಾಶ್ಮೀರ ಸಮಸ್ಯೆಗೆ ಏಕೈಕ ಪರಿಹಾರವೆಂದರೆ ವಿಶ್ವಸಂಸ್ಥೆಯ ನಿರ್ಣಯದ ಅಡಿಯಲ್ಲಿ ಸ್ವಯಂ ನಿರ್ಣಯದ ಹಕ್ಕು ಎಂದು ಅವರು ಪ್ರತಿಪಾದಿಸಿದರು.
1971ರ ವಿಮೋಚನಾ ಯುದ್ಧದ ನಂತರ ಬದ್ಧ ವೈರಿಗಳಾಗಿದ್ದ ಪಾಕ್ – ಬಾಂಗ್ಲಾದೇಶ (Pakistan – Bangladesh) ಇದೀಗ ಆಪ್ತಮಿತ್ರರಾಗುತ್ತಿವೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ನೇರ ಸಮುದ್ರ ವ್ಯಾಪಾರ ಶುರುವಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಹೌದು. ಪಾಕಿಸ್ತಾನದ ಮೊದಲ ಸರಕು ಹಡಗು ಕಳೆದ ವಾರ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರು ತಲುಪಿದೆ. ಇದು ದ್ವಿಪಕ್ಷೀಯ ಸಂಬಂಧಲ್ಲಿ ಪ್ರಮುಖ ಹೆಜ್ಜೆ ಎಂದು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಹ್ಮದ್ ಮರೂಫ್ ಹೇಳಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ.
ಪ್ರಧಾನಿ ಮುಹಮ್ಮದ್ ಯೂನಸ್ (Muhammad Yunus) ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರನ್ನು ಭೇಟಿಯಾಗಿದ್ದರು. ಅಲ್ಲಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಿದ್ದು, ಇದು ಹೊಸ ಅಧ್ಯಾಯ ಶುರು ಮಾಡುವ ಅಗತ್ಯತೆಗಳ ಬಗ್ಗೆ ಒತ್ತಿ ಹೇಳಿದ್ದರು. ಈ ಬೆನ್ನಲ್ಲೇ ಪಾಕ್ ಮತ್ತು ಬಾಂಗ್ಲಾ ನಡುವಿನ ನೇರ ವ್ಯಾಪಾರ ಶುರುವಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
1971ರ ವಿಮೋಚನಾ ಯುದ್ಧದ ನಂತರ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಇದು ಮೋದಲ ನೇರ ಸರಕು ಸಾಗಣೆಯಾಗಿದೆ. ಕರಾಚಿ ಬಂದರಿನಿಂದ ನಮ್ಮ ಜವಳಿ ಮತ್ತು ಸೆರಾಮಿಕ್ ಕೈಗಾರಿಕೆಗಳಿಗೆ ಕಚ್ಛಾವಸ್ತುಗಳನ್ನು ಸಾಗಿಸಲಾಗಿದೆ ಎಂದು ಚಿತ್ತಗಾಂಗ್ (Chittagong Port) ಬಂದರು ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ. 1971ರಲ್ಲಿ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಯುದ್ಧ ನಡೆದು ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶ ಎಂಬ ಹೆಸರಿನಲ್ಲಿ ಸ್ವತಂತ್ರ ದೇಶವಾಯಿತು. ಆ ನಂತರ ಎರಡು ದೇಶಗಳ ನಡುವೆ ನೇರ ಸರಕು ವ್ಯಾಪಾರ ಸ್ಥಗಿತಗೊಂಡಿತ್ತು. ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಶ್ರೀಲಂಕಾ, ಸಿಂಗಾಪುರ ಅಥವಾ ಮಲೇಶ್ಯಾದಂತಹ ಮೂರನೇ ದೇಶದ ಮೂಲಕ ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಆದ್ರೆ ಉಭಯ ದೇಶಗಳ ನಡುವೆ ಇದೇ ಮೊದಲಬಾರಿಗೆ ನೇರ ಸರಕು ವ್ಯಾಪಾರ ಶುರುವಾಗಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಬಾಂಗ್ಲಾ ಮತ್ತು ಪಾಕಿಸ್ತಾನ ನಡುವಿನ ನೇರ ವ್ಯಾಪಾರ ಭಾರತಕ್ಕೆ ಸಮಸ್ಯೆ ತಂದೊಡ್ಡಲಿದೆಯೇ ಎಂಬ ಆತಂಕ ಶುರುವಾಗಿದೆ. ಅಷ್ಟಕ್ಕೂ ಪಾಕ್, ಬಾಂಗ್ಲಾ ನಡುವೆ ವ್ಯಾಪಾರ ಶುರುವಾಗಲು ಕಾರಣ ಏನು? ಇವೆರಡರ ನಡುವಿನ ಸಂಬಂಧ ಭಾರತಕ್ಕೆ ಏಕೆ ಸಮಸ್ಯೆ ಉಂಟು ಮಾಡುತ್ತದೆ ಎಂಬುದನ್ನು ತಿಳಿಯೋಣ… ಅದಕ್ಕೂ ಮುನ್ನ 1971ರ ವಿಮೋಚನಾ ಯುದ್ಧದ ಬಗ್ಗೆ ತಿಳಿಯೋಣ….
1971ರ ವಿಮೋಚನಾ ಯುದ್ಧದಲ್ಲಿ ಏನಾಯ್ತು?
1971ಕ್ಕೂ ಮೊದಲು ಬಾಂಗ್ಲಾದೇಶ ಪಾಕಿಸ್ತಾನದ ಭಾಗವಾಗಿತ್ತು. ಆಗ ಅದನ್ನು ಪೂರ್ವ ಪಾಕಿಸ್ತಾನ ಎಂದೇ ಕರೆಯಲಾಗುತ್ತಿತ್ತು. ಆದರೆ ಪೂರ್ವ ಪಾಕಿಸ್ತಾನದಲ್ಲಿ ಸೇನಾಪಡೆ ಅಲ್ಲಿನ ಜನರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ ನಡೆಸುತ್ತಿದ್ದರು. ಇದರಿಂದಾಗಿ ಸುಮಾರು 30 ಲಕ್ಷ ಮಂದಿ ಜೀವ ಕಳೆದುಕೊಂಡರು, ಸಾವಿರಾರು ಜನ ಚಿತ್ರಹಿಂಸೆ ಅನುಭವಿಸಿದರು, ಮಹಿಳೆಯರು ಅತ್ಯಾಚಾರಕ್ಕೂ ಒಳಗಾದರು. ಈ ವೇಳೆ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನಡೆಸುತ್ತಿದ್ದ ಕೃತ್ಯವನ್ನು ವಿರೋಧಿಸಿದ ಬಾಂಗ್ಲಾದೇಶಕ್ಕೆ ಭಾರತ ಬೆಂಬಲ ನೀಡಿತ್ತು. ಇದನ್ನೂ ಓದಿ: ಬಾಂಗ್ಲಾದಲ್ಲಿ ಈಗ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ, ಮೂವರು ಸಾವು – ಆಸ್ಪತ್ರೆಗೆ 35 ಕೋಟಿ ನಷ್ಟ
ಬಾಂಗ್ಲಾದೇಶ ವಿಮೋಚನೆಗೆ ಭಾರತ ಬೆಂಬಲ ನೀಡಿದ್ದು, ಪಾಕಿಸ್ತಾನದ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್‌ಗೆ ತೀವ್ರ ಹಿನ್ನಡೆಯಾದಂತಾಗಿತ್ತು. ಅಲ್ಲದೇ 1971ರ ಡಿಸೆಂಬರ್ 3ರಂದು ಪೂರ್ವ ಪಾಕಿಸ್ತಾನದ ಜನರನ್ನು ರಕ್ಷಿಸುವ ನಿಟ್ಟನಲ್ಲಿ ಪಾಕಿಸ್ತಾನದ ವಿರುದ್ಧ ಸಮರ ನಡೆಸಲು ಸಜ್ಜಾಗಿ ಎಂದು ಭಾರತೀಯ ಸೇನೆಗೆ ಭಾರತದ ಸರ್ಕಾರ ಆದೇಶ ನೀಡಿತ್ತು. ಬಂಗಾಳಿ ಮುಸ್ಲಿಮರು ಮತ್ತು ಹಿಂದೂಗಳನ್ನು ರಕ್ಷಿಸುವ ನಿಟ್ಟಿನಲ್ಲಿ 1971ರ ಡಿಸೆಂಬರ್ 03ರಂದು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಲು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಇದನ್ನೂ ಓದಿ: ಮತ್ತೆ ಕೆಣಕಿದ ಹಿಜ್ಬುಲ್ಲಾ – 250 ರಾಕೆಟ್, ಡೆಡ್ಲಿ ಡ್ರೋನ್‌ಗಳಿಂದ ಇಸ್ರೇಲ್ ಮೇಲೆ ಭೀಕರ ದಾಳಿ
ಬಾಂಗ್ಲಾ ವಿಮೋಚನೆಯ ಹಾದಿ
* 1947: ಭಾರತದಲ್ಲಿ ಬ್ರಿಟಿಷರ ಅಧಿಪತ್ಯ ಅಂತ್ಯವಾಗಿ, ದೇಶವು ವಿಭಜನೆಯಾಯಿತು. ಬಹುಸಂಖ್ಯಾತ ಮುಸ್ಲಿಮರಿಂದ ಕೂಡಿದ ‘ಪಾಕಿಸ್ತಾನ’ ಉದಯವಾಯಿತು
* 1949: ಪಶ್ಚಿಮ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಪೂರ್ವ ಪಾಕಿಸ್ತಾನವನ್ನು ಅಸ್ತಿತ್ವಕ್ಕೆ ತರುವ ಉದ್ದೇಶದಿಂದ ʻಅವಾಮಿ ಲೀಗ್ ಸಂಘಟನೆʼ ಹುಟ್ಟಿಕೊಂಡಿತು
* 1970: ಪೂರ್ವ ಪಾಕಿಸ್ತಾನದಲ್ಲಿ ನಡೆದ ಚುನಾವಣೆಗಳಲ್ಲಿ ಅವಾಮಿ ಲೀಗ್ ಪ್ರಚಂಡ ಜಯಭೇರಿ ಬಾರಿಸಿತು. ಆದರೆ ಫಲಿತಾಂಶವನ್ನು ಒಪ್ಪಲು ಪಶ್ಚಿಮ ಪಾಕಿಸ್ತಾನ ಸಿದ್ಧವಿರಲಿಲ್ಲ. ಇದು ಗಲಭೆಗೆ ಕಾರಣವಾಯಿತು. ಈ ವೇಳೆ ಅಪ್ಪಳಿಸಿದ ದೊಡ್ಡ ಚಂಡಮಾರುತವು ಈ ಭಾಗದ 5 ಲಕ್ಷ ಜನರನ್ನು ಬಲಿ ಪಡೆಯಿತು
* 1971: ಸ್ವತಂತ್ರ ‘ಬಾಂಗ್ಲಾದೇಶ’ ಉದಯವನ್ನು ಅವಾಮಿ ಲೀಗ್ ಘೋಷಿಸಿತು. ಆದರೆ ಇದಕ್ಕೆ ಪಶ್ಚಿಮ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತು. ಆದರೆ ಭಾರತದ ಸೇನಾ ಸಹಕಾರದೊಂದಿಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲಾಯಿತು. ಈ ಯುದ್ಧದಲ್ಲಿ ಭಾರತದ ಬಲಿಷ್ಠ ಸೇನಾ ಸಾಮರ್ಥ್ಯ ಅನಾವರಣಗೊಂಡಿತು
* 1972: ಶೇಕ್ ಮುಜೀಬರ್ ರೆಹಮಾನ್ ಅವರು ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಮುಖ ಉದ್ದಿಮೆಗಳನ್ನು ಅವರು ರಾಷ್ಟ್ರೀಕರಣ ಮಾಡಿದರು ಆದರೆ, 1975ರಲ್ಲಿ ನಡೆದ ಸೇನಾ ದಂಗೆಯಲ್ಲಿ ಅವರ ಹತ್ಯೆಯಾಯಿತು.
ಹಸೀನಾ, ಪಾಕಿಸ್ತಾನ ಮತ್ತು ಭಾರತ
ಶೇಖ್ ಹಸೀನಾ ತನ್ನ ಅಧಿಕಾರ ಅವಧಿಯಲ್ಲಿ (1996-2001, 2009-2024) 1971ರ ಯುದ್ಧ ಅಪರಾಧ ಎಸಗಿದ ಕಾರಣಗಳಿಗಾಗಿ ರಜಾಕರ ವಿರುದ್ಧ ನಿರ್ದಯವಾಗಿ ಕ್ರಮ ಜರುಗಿಸಿದ್ದರು. 2010ರಲ್ಲಿ ಯುದ್ಧ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲು ಅಂತಾರಾಷ್ಟ್ರೀಯ ಅಪರಾಧ ಮಂಡಳಿಯನ್ನು ಸ್ಥಾಪಿಸಿದರು. ಅಂದು 344 ನಾಗರಿಕರನ್ನು ಕೊಂದಿದ್ದ ಹಾಗೂ ಇತರ ಯುದ್ಧಾಪರಾಧ ಕಾರಣಗಳಿಂದಾಗಿ 2013ರಲ್ಲಿ ಜಮಾತ್ ನಾಯಕ ಅಬ್ದುಲ್ ಕ್ವಾದರ್ ಮೊಲ್ಲಾಹ್‌ಗೆ ಮರಣದಂಡನೆ ವಿಧಿಸಲಾಯಿತು. ಇದಕ್ಕೆ ಪಾಕ್ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನದ ಸಂಸತ್ತು ಮೊಲ್ಲಾನ ಮರಣದಂಡನೆಯನ್ನು ಖಂಡಿಸುವ ನಿರ್ಣಯ ಅಂಗೀಕರಿಸಿತು. 1975ರಲ್ಲಿ ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಹತ್ಯೆಗೀಡಾದ ನಂತರ ಅಂದಿನ ಭಾರತ ಸರ್ಕಾರ ಅವರಿಗೆ ನವದೆಹಲಿಯಲ್ಲಿ ಆಶ್ರಯ ನೀಡಿತ್ತು. ಆ ನಂತರ ಹಸೀನಾ ತನ್ನ ಅಧಿಕಾರದಲ್ಲಿ ಭಯೋತ್ಪಾದನೆ, ಧಾರ್ಮಿಕ ಉಗ್ರವಾದದ ಮೇಲೆ ಕಡಿವಾಣ ಹಾಕಿದರು. ಭಾರತದೊಂದಿಗೆ ನಿರಂತರವಾಗಿ ಆಪ್ತತೆಯಿಂದಿದ್ದರು.
ಭಾರತಕ್ಕೆ ಏನು ಆತಂಕ?
ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಾಸ್ ಬಾರ್ಡರ್ ಟೆರರಿಸಂ ನಡೆಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಡಿತ ಸಾಧಿಸಿ ಭಾರತದ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಿ, ಭಾರತದಲ್ಲಿ ಅಸ್ತಿರತೆ ಸೃಷ್ಟಿಸುವ ತಂತ್ರವನ್ನು ಹೆಣೆದಿದೆ. ಇತ್ತ ಅರುಣಾಚಲ ಪ್ರದೇಶ ನನ್ನದು ಎಂದು ಕುಳಿತಿರುವ ಚೀನಾ ಕೂಡ ಬಾಂಗ್ಲಾದೇಶದ ಮೂಲಕ ಈಶಾನ್ಯ ಭಾರತವನ್ನು ಕಬಳಿಸುವ ಷಡ್ಯಂತ್ರ ಹೆಣೆದಿದೆ. ಈ ನಡುವೆ ಪಾಕ್ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧವು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.
2004ರಲ್ಲಿ ಚಿತ್ತಗಾಂಗ್ ತಲುಪಿದ್ದ ಸರಕು ಹಡಗೊಂದು 4.5 ರಿಂದ 7 ಶತಕೋಟಿ ಡಾಲರ್‌ನಷ್ಟು ಮೌಲ್ಯದ ಚೀನಾ ನಿರ್ಮಿತ ಮದ್ದು ಗುಂಡುಗಳನ್ನು 1,500 ಬಾಕ್ಸ್‌ಗಳಲ್ಲಿ ಹೊತ್ತು ತಂದಿತ್ತು. ಈ ಘಟನೆಯ ನಂತರ ಚಿತ್ತಗಾಂಗ್ ಮತ್ತು ಮೊಂಗ್ಲಾ ಬಂದರುಗಳನ್ನು ಸಂಪರ್ಕಿಸುವ ಮಾರ್ಗಗಳ ಬಗ್ಗೆ ಭಾರತೀಯ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ವರ್ಷವಷ್ಟೇ ಮೊಂಗ್ಲಾ ಬಂದರಿನಲ್ಲಿ ಟರ್ಮಿನಲ್ ಕಾರ್ಯಾಚರಣೆಯ ಹಕ್ಕುಗಳನ್ನು ಭಾರತ ಪಡೆದುಕೊಂಡಿತು. ಆದ್ರೆ ಈಗ ಪಾಕಿಸ್ತಾನಕ್ಕೆ ಚಿತ್ತಗಾಂಗ್ ಬಂದರಿಗೆ ನೇರ ಪ್ರವೇಶ ಹೊಂದುವ ಅವಕಾಶವಿದೆ. ಅಲ್ಲದೇ ಚಿತ್ತಗಾಂಗ್ ಬಂದರು ಮ್ಯಾನ್ಮಾರ್‌ಗೂ ಹತ್ತಿರವಿದೆ. ಇದರಿಂದ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಭದ್ರತಾ ಪಡೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವಾರ ಚಿತ್ತಾಗಾಂಗ್ ಬಂದರು ತಲುಪಿದ ‘ಎಂವಿ ಯುವಾನ್ ಕ್ಸಿಯಾನ್ ಫಾ ಝಾಂಗ್’ ಬಾಂಗ್ಲಾದೇಶದ ಪ್ರಮುಖ ಗಾರ್ಮೆಂಟ್ ಉದ್ಯಮಕ್ಕೆ ಕಚ್ಚಾ ವಸ್ತುಗಳು ಮತ್ತು ಮೂಲ ಆಹಾರ ಪದಾರ್ಥಗಳು ಸೇರಿದಂತೆ ಹಲವು ಪ್ರಮುಖ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ. ಆದ್ರೆ ಕಚ್ಚಾ ವಸ್ತುಗಳಿಗೂ ಮುನ್ನ ಕೆಲವು 40 ಅಡಿ ಎತ್ತರದ ಕಂಟೈನರ್‌ಗಳನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ಸುತ್ತಲೂ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಸರ್ಪಗಾವಲನ್ನೇ ರಚಿಸಲಾಗಿತ್ತು. ಇದರಲ್ಲಿ ನಿಶಿದ್ಧ ಶಸ್ತ್ರಾಸ್ತ್ರಗಳು ಪೂರೈಕೆಯಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಶೇಖ್ ಹಸೀನಾ ಅವರ ಆಪ್ತಮೂಲವೊಂದು ತಿಳಿಸಿರುವುದಾಗಿ ಟೆಲಿಗ್ರಾಫ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. s
ಅಲ್ಲದೇ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ ಯುದ್ಧ ಸಾಮಗ್ರಿಗಳು ಎಲ್ಲೆಂದರಲ್ಲಿ ಸಿಗುತ್ತಿವೆ. ಈ ನಡುವೆ ಬಾಂಗ್ಲಾದೇಶವು ಪಾಕಿಸ್ತಾನದಿಂದ 40,000 ಮದ್ದುಗುಂಡುಗಳು, ಸ್ಫೋಟಕಗಳು ಮತ್ತು40 ಟನ್ ಆರ್‌ಡಿಎಕ್ಸ್ ಅನ್ನು ಒಳಗೊಂಡಿರುವ ಫಿರಂಗಿ ಮದ್ದುಗುಂಡುಗಳನ್ನು ಹೊಸದಾಗಿ ಪೂರೈಸಲು ಆದೇಶಿಸಿದೆ ಎಂಬ ವರದಿಗಳು ಎದೆ ಬಡಿತ ಹೆಚ್ಚಿಸಿದೆ. ಹೀಗಿರುವಾಗ ಢಾಕಾ ಮತ್ತು ಇಸ್ಲಾಮಾಬಾದ್ ನಡುವಿನ ವ್ಯಾಪಾರ ಅಭಿವೃದ್ಧಿಯು ಭಾರಿ ಕಳವಳಕ್ಕೆ ಕಾರಣವಾಗಿದೆ. ಇದು ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.