Tag: Shehbaz Sharif

  • ಮತ್ತೊಮ್ಮೆ ಭಾರತದ ಜೊತೆ ಶಾಂತಿ ಮಾತುಕತೆಯ ಪ್ರಸ್ತಾಪ ಇರಿಸಿದ ಪಾಕ್‌

    ಮತ್ತೊಮ್ಮೆ ಭಾರತದ ಜೊತೆ ಶಾಂತಿ ಮಾತುಕತೆಯ ಪ್ರಸ್ತಾಪ ಇರಿಸಿದ ಪಾಕ್‌

    ಟೆಹರಾನ್‌: ಪಾಕಿಸ್ತಾನದ (Pakistan) ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಮತ್ತೊಮ್ಮೆ ಭಾರತದ (India) ಜೊತೆ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಇರಿಸಿದ್ದಾರೆ.

    ಟರ್ಕಿಯ ನಂತರ ಷರೀಫ್ ಈಗ ಎರಡು ದಿನಗಳ ಭೇಟಿಗಾಗಿ ಇರಾನ್‌ಗೆ (Iran) ಆಗಮಿಸಿದ್ದಾರೆ. ಈ ವೇಳೆ ಟೆಹರಾನ್‌ನಲ್ಲಿ ಮಾತನಾಡಿದ ಅವರು, ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ, ನೀರು ಹಂಚಿಕೆ ಮತ್ತು ವ್ಯಾಪಾರ ಸೇರಿದಂತೆ ಎರಡು ನೆರೆಯ ರಾಷ್ಟ್ರಗಳ ನಡುವಿನ ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುನೀರ್‌ಗೆ ಬೆಂಕಿ ಫೋಟೋ ಗಿಫ್ಟ್‌ ನೀಡಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕ್‌!

    ಕಾಶ್ಮೀರ ಸಮಸ್ಯೆ ಮತ್ತು ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ವಿವಾದಗಳನ್ನು ಮಾತುಕತೆಗಳ ಮೂಲಕ ಪರಿಹರಿಸಲು ನಾವು ಬಯಸುತ್ತೇವೆ. ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ನಮ್ಮ ನೆರೆಹೊರೆಯವರೊಂದಿಗೆ ಮಾತನಾಡಲು ಸಹ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

    ಭಯೋತ್ಪಾದನೆ ಮತ್ತು ಮಾತುಕತೆ ಜೊತೆಯಾಗಿ ನಡೆಯಲು ಸಾಧ್ಯವಿಲ್ಲ ಎಂದು ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ. ಭಯೋತ್ಪಾದನೆ ಮತ್ತು ವ್ಯಾಪಾರ ಜತೆಯಾಗಿ ನಡೆಯಲು ಸಾಧ್ಯವಿಲ್ಲ ಮತ್ತು ನೀರು ಮತ್ತು ರಕ್ತ ಒಟ್ಟಿಗೇ ಹರಿಯಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

    ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುತ್ತದೆ ಎಂದಾದರೆ, ಅದು ಭಯೋತ್ಪಾದನೆ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಇರುತ್ತದೆ ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ.

  • ಮುನೀರ್‌ಗೆ ಬೆಂಕಿ ಫೋಟೋ ಗಿಫ್ಟ್‌ ನೀಡಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕ್‌!

    ಮುನೀರ್‌ಗೆ ಬೆಂಕಿ ಫೋಟೋ ಗಿಫ್ಟ್‌ ನೀಡಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕ್‌!

    ಇಸ್ಲಾಮಾಬಾದ್‌: ಸದಾ ಸುಳ್ಳು ಹೇಳುವ ಮೂಲಕ ಜಗತ್ತಿನ ಮುಂದೆ ಬೆತ್ತಲಾಗುವ ಪಾಕಿಸ್ತಾನ (Pakistan) ಈಗ ಮತ್ತೆ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.

    ಭಾರತದ ಜೊತೆ ಕರೆ ಮಾಡಿ ಕದನ ವಿರಾಮ ಘೋಷಣೆ ಮಾಡುವಂತೆ ಬೇಡಿಕೊಂಡ ಬಳಿಕ ಪಾಕಿಸ್ತಾನ ಈಗ ಸಮರವನ್ನು ಗೆದ್ದಂತೆ ಪೋಸ್‌ ನೀಡಿ ಸಂಭ್ರಮಿಸುತ್ತಿದೆ. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ (Shehbaz Sharif), ಪಾಕ್‌ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ಗೆ (Asim Munir) ನೀಡಿದ ಗಿಫ್ಟ್‌ ಫೋಟೋ ಈಗ ಸಾಮಾಜಿಕ ದೊಡ್ಡ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ


    ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಅಸಿಮ್‌ ಮುನೀರ್‌ ಪಾಕಿಸ್ತಾನದ ರಾಜಕಾರಣಿಗಳಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ಈ ವೇಳೆ ಶಹಬಾಜ್‌ ಷರೀಫ್‌ ದೀರ್ಘ ವ್ಯಾಪ್ತಿಯ ರಾಕೆಟ್ ಲಾಂಚರ್‌ನಿಂದ ಕ್ಷಿಪಣಿ ಚಿಮ್ಮುತ್ತಿರುವ ಫೋಟೋವನ್ನು ಗಿಫ್ಟ್‌ ನೀಡಿದ್ದರು. ಇದನ್ನೂ ಓದಿ: ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

    ಶಹಬಾಜ್‌ ಷರೀಫ್‌ ಗಿಫ್ಟ್‌ ನೀಡುತ್ತಿರುವ ಫೋಟೋವನ್ನು ಪಾಕಿಸ್ತಾನ ISPR ಹಂಚಿಕೊಂಡಿತ್ತು. ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಈ ಫೋಟೋದ ಸತ್ಯಾಸತ್ಯತೆ ಪರಿಶೀಲನೆ ಇಳಿದಾಗ ಚೀನಾ (China) ಸೇನೆಯ ಫೋಟೋ ಎನ್ನುವುದು ದೃಢಪಟ್ಟಿದೆ. 2017 ರಲ್ಲಿ ಚೀನಾ ಪರೀಕ್ಷೆ ಮಾಡಿದ್ದ ಫೋಟೋವನ್ನು ಎಡಿಟ್‌ ಮಾಡಿ ಗಿಫ್ಟ್‌ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನೆಟ್ಟಿಗರು ಪಾಕಿಸ್ತಾನವನ್ನು ಫುಲ್‌ ಟ್ರೋಲ್‌ ಮಾಡಲು ಆರಂಭಿಸಿದ್ದಾರೆ.

    ವಿಜಯೋತ್ಸವ ಆಚರಿಸಲು ಪಾಕಿಸ್ತಾನಕ್ಕೆ ಯಾವುದೇ ಫೋಟೋ ಸಿಕ್ಕಿಲ್ಲ. ಈ ಕಾರಣಕ್ಕೆ ಚೀನಾ ಸೇನೆಯ ಫೋಟೋವನ್ನು ಎಡಿಟ್‌ ಮಾಡಿ ಗಿಫ್ಟ್‌ ನೀಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಫೋಟೋ ವೈರಲ್‌ ಆಗಿದೆ.

  • ಭಾರತದ ದಾಳಿಗೆ ಬೆಚ್ಚಿ ಬಚ್ಚಿಟ್ಟುಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ

    ಭಾರತದ ದಾಳಿಗೆ ಬೆಚ್ಚಿ ಬಚ್ಚಿಟ್ಟುಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ

    ನವದೆಹಲಿ: ಭಾರತದ ʻಆಪರೇಷನ್‌ ಸಿಂಧೂರʼಕ್ಕೆ (Operation Sindoor) ಬೆಚ್ಚಿ ಬಂಕರ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಪಾಕ್‌ ಸರ್ಕಾರ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡಿದೆ.

    ಭಾರತದೊಂದಿಗಿನ (India) ಇತ್ತೀಚಿನ ಸಂಘರ್ಷದಲ್ಲಿ ಸಶಸ್ತ್ರ ಪಡೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಹಾಗೂ ಅವರ ಕಾರ್ಯತಂತ್ರವನ್ನು ಗುರುತಿಸಿ ಜನರಲ್ ಅಸೀಮ್ ಮುನೀರ್‌ಗೆ ಬಡ್ತಿ ನೀಡಿರುವುದಾಗಿ ಪಾಕಿಸ್ತಾನ (Pakistan) ಸರ್ಕಾರ ಹೇಳಿಕೊಂಡಿದೆ. ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಭಾರತದ ಪರಾಕ್ರಮಕ್ಕೆ ಬೆದರಿ ಬಂಕರ್‌ನಲ್ಲಿ ಅಡಗಿದ್ದ ಅಸಿಮ್‌ ಮುನೀರ್‌!

    ಜೊತೆಗೆ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಜಹೀರ್ ಬಾಬರ್ ಸಿಧು ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರವೂ ಸೇವೆಯಲ್ಲಿ ಉಳಿಸಿಕೊಳ್ಳಲು ಸಂಪುಟವು ಸರ್ವಾನುಮತದಿಂದ ನಿರ್ಧರಿಸಿದೆ. ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ಅಸೀಮ್‌ ಮುನೀರ್‌ 2022ರ ನವೆಂಬರ್‌ನಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಅವಧಿಯಲ್ಲಿ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರೊಂದಿಗಿನ ಭಿನ್ನಾಭಿಪ್ರಾಯದ ವರದಿಯ ನಂತರ ಕೇವಲ 8 ತಿಂಗಳಲ್ಲೇ ಹೊರನಡೆಸಿದ್ದರು. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆ – ಬ್ರಿಟಿಷ್‌ ಕಾಶ್ಮೀರಿ ಪ್ರೊಫೆಸರ್‌ ಸಾಗರೋತ್ತರ ಪೌರತ್ವ ರದ್ದು

  • ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    – ಒಟ್ಟು 50 ಕಂಡೀಷನ್‌; ಪಾಲಿಸದಿದ್ರೆ ಹಣ ಸಿಗಲ್ಲ ಅಂತ ವಾರ್ನಿಂಗ್‌

    ಇಸ್ಲಾಮಾಬಾದ್‌: ಭಾರತದ ಆಪರೇಷನ್‌ ಸಿಂಧೂರ (Operation Sindoor) ಬಳಿಕ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಇದೀಗ ತನ್ನ ವರಸೆ ಬದಲಿಸಿದೆ. ಸಾಲದ ಹಣ ಬಿಡುಗಡೆ ಮಾಡುವುದಕ್ಕೆ ಮೊದಲೇ 11 ಹೊಸ ಷರತ್ತುಗಳನ್ನು ಪಾಕಿಸ್ತಾನಕ್ಕೆ ವಿಧಿಸಿದೆ. ಜೊತೆಗೆ ಷರತ್ತು ಪಾಲಿಸದಿದ್ದರೆ ಹಣ ಸಿಗುವುದಿಲ್ಲ ಅಂತ ಎಚ್ಚರಿಕೆಯನ್ನೂ ನೀಡಿದೆ.

    ಹೌದು.. ಪಾಕಿಸ್ತಾನಕ್ಕೆ ಸಾಲ (Pakistan Loan) ಮಂಜೂರು ಮಾಡಿದ ಬಳಿಕ ಐಎಂಎಫ್‌ಗೆ ಸಾಲ ಮರುಪಾವತಿ ಆಗುತ್ತದೆಯೇ ಇಲ್ಲವೇ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಸಾಲ ಮಂಜೂರು ಮಾಡಿದ್ದ ಐಎಂಎಫ್‌ 11 ಹೊಸ ಷರತ್ತುಗಳನ್ನು ವಿಧಿಸಿದೆ. ಇದರಿಂದ ಪಾಕ್‌ ಮೇಲೆ ಈವರೆಗೆ ವಿಧಿಸಿರುವ ಒಟ್ಟು ಷರತ್ತುಗಳು 50ಕ್ಕೆ ಏರಿಕೆಯಾಗಿದೆ. ಈ ಷರತ್ತುಗಳನ್ನು ಪೂರೈಸದ್ದರೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಐಎಂಎಫ್‌ ಖಡಕ್ಕಾಗಿ ಹೇಳಿದೆ. ಇದನ್ನೂ ಓದಿ: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು – ಪಾಕ್‌ನಲ್ಲಿ ಹೆಚ್ಚಿದ ಹಸಿವು; 1.1 ಕೋಟಿ ಜನರಿಗೆ ಆಹಾರ ಅಭದ್ರತೆ

    india pakistan

    ಜೊತೆಗೆ ಭಾರತ-ಪಾಕಿಸ್ತಾನದ ಉದ್ವಿಗ್ನತೆ (India Pakistan Clash) ಮುಂದುವರಿದ್ರೆ ಅದರ ಪರಿಣಾಮವು ಹಣಕಾಸು ವ್ಯವಸ್ಥೆ, ದೇಶದ ಆಂತರಿಕ ಮತ್ತು ಬಾಹ್ಯ ಸುಧಾರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ

    17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಅನುಮೋದನೆ ನೀಡುವುದು, ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ ತರುವುದು, ವಿದ್ಯುತ್ ಬಿಲ್‌ಗಳ ಮೇಲೆ ಹೆಚ್ಚಿನ ಸರ್‌ಚಾರ್ಜ್ ವಿಧಿಸುವುದು ಸೇರಿದಂತೆ 11 ಷರತ್ತುಗಳನ್ನು ವಿಧಿಸಿದೆ. ಇದು ದುಸ್ಥಿತಿಯಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಏನೇನು ಷರತ್ತುಗಳು?
    * ಮುಂದಿನ ಜುಲೈ 1ರೊಳಗೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯ ಅಧಿಸೂಚನೆ ಹೊರಡಿಸುವುದು.
    * 2026ರ ಫೆಬ್ರವರಿ 15 ರೊಳಗೆ ಅರ್ಧ ವಾರ್ಷಿಕ ಅನಿಲ ದರ ಹೊಂದಾಣಿಕೆ.
    * ವಿದ್ಯುತ್‌ ಸ್ಥಾವರಗಳ ಮೇಲೆ ವಿಧಿಸುವ ಶುಲ್ಕಕ್ಕೆ ಈ ವರ್ಷದ ಅಂತ್ಯದೊಳಗೆ ಸುಗ್ರೀವಾಜ್ಞೆ ಶಾಶ್ವತಗೊಳಿಸಬೇಕು (ಕೈಗಾರಿಕಾ ಇಂಧನ ಬಳಕೆಯನ್ನು ರಾಷ್ಟ್ರೀಯ ಗ್ರಿಡ್‌ಗೆ ಬದಲಾಯಿಸುವ ಗುರಿ)
    * ಮುಂದಿನ ಜೂನ್ ಅಂತ್ಯದ ವೇಳೆಗೆ ಸಾಲ ಸೇವಾ ಸರ್‌ಚಾರ್ಜ್‌ನ ಪ್ರತಿ ಯೂನಿಟ್‌ಗೆ 3.21 ರೂ. ಮಿತಿ ತೆಗೆದುಹಾಕುವುದು.
    * 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ
    * ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ
    * ದೀರ್ಘ ಕಾಲಕ್ಕೆ ಹಣಕಾಸು ವಲಯಕ್ಕೆ ಕಾರ್ಯತಂತ್ರ
    * ವಿಶೇಷ ತಂತ್ರಜ್ಞಾನ ವಲಯಗಳ ಪ್ರೋತ್ಸಾಹಕ್ಕಾಗಿ ಹಂತ-ಹಂತದ ಯೋಜನೆ
    * 3 ವರ್ಷಗಳು ಮಾತ್ರ ಉಪಯೋಗಿಸಿದ ಕಾರು ಆಮದು ಉದಾರೀಕರಣ
    * ಅಭಿವೃದ್ಧಿ ವೆಚ್ಚದ ಬದ್ಧತೆ
    * 6 ಟ್ರಿಲಿಯನ್ ಬಜೆಟ್‌ನಲ್ಲಿ 1.07 ಟ್ರಿಲಿಯನ್ ಅಭಿವೃದ್ಧಿ ವೆಚ್ಚಕ್ಕೆ ಮೀಸಲಿಡಬೇಕು.

    IMF ಗುರಿಗಳಿಗೆ ಅನುಗುಣವಾಗಿ ಷರತ್ತು
    IMF ವರದಿಯ ಪ್ರಕಾರ, ಪಾಕಿಸ್ತಾನದ ಮುಂಬರುವ ರಕ್ಷಣಾ ಬಜೆಟ್ ವೆಚ್ಚ 2,414 ಶತಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 12% ಹೆಚ್ಚಾಗಲಿದೆ. ಆದರೆ ಇತ್ತೀಚೆಗೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ಈ ತಿಂಗಳ ಆರಂಭದಲ್ಲಿ ಇದನ್ನು 2,500 ಶತಕೋಟಿ ರೂ. ಅಂದರೆ 18% ಹೆಚ್ಚಿಸಲು ನಿರ್ಧರಿಸಿದೆ, ಇದು IMF ಹಣಕಾಸಿನ ಸಮತೋಲನ ಗುರಿಗೆ ವಿರುದ್ಧವಾಗಿದೆ. IMF ಗುರಿಗಳಿಗೆ ಅನುಗುಣವಾಗಿ ಇದೇ ಜೂನ್ ತಿಂಗಳ ಒಳಗೆ 2026ರ ಬಜೆಟ್ ಅನ್ನು ಅಂಗೀಕರಿಸುವಂತೆ ಐಎಂಎಫ್‌ ಸಂಸತ್ತಿಗೆ ಹೇಳಿದೆ. ಇದನ್ನೂ ಓದಿ: Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!

  • ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    – ಖಂಡಾಂತರ ಕ್ಷಿಪಣಿ ದಾಳಿಗೆ ನೂರ್‌ ಖಾನ್‌ ವಾಯುನೆಲೆ ಧ್ವಂಸ – ತಪ್ಪೊಪ್ಪಿಕೊಂಡ ಪಾಕ್‌

    ಇಸ್ಲಾಮಾಬಾದ್: ಪಾಪಿ ಪಾಕಿಸ್ತಾನಕ್ಕೆ ಭಾರತ ಕೊಟ್ಟ ʻಆಪರೇಷನ್‌ ಸಿಂಧೂರʼ (Operation Sindoo0 ಏಟಿನ ಎಫೆಕ್ಟ್‌ ಒಂದೊಂದಾಗಿ ಆಚೆ ಬರ್ತಿದೆ. ಭಾರತೀಯ ಸೇನೆ ಕೊಟ್ಟ ಪ್ರತ್ಯುತ್ತರಕ್ಕೆ ಸುಧಾರಿಸಿಕೊಳ್ಳಲು ಆಗದೇ ಪಾಕಿಸ್ತಾನ ವಿಲ ವಿಲ ಒದ್ದಾಡುತ್ತಿದೆ. ವಿಶ್ವದ ಮುಂದೆ ಏನೂ ಆಗಿಲ್ಲ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕೊನೆಗೂ ಭಾರತದ ದಾಳಿಯನ್ನ ಒಪ್ಪಿಕೊಂಡಿದ್ದಾರೆ.

    ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ, ʻಆಪರೇಷನ್ ಸಿಂಧೂರʼದ ಯಶಸ್ಸನ್ನು ಒಪ್ಪಿಕೊಂಡಿದ್ದಾರೆ. ಮೇ 10ರಂದು ಭಾರತೀಯ ಖಂಡಾಂತರ ಕ್ಷಿಪಣಿಗಳು (Ballistic Missiles) ನೂರ್‌ ಖಾನ್‌ ವಾಯುನೆಲೆ ಸೇರಿದಂತೆ ಹಲವು ಸ್ಥಳಗಳನ್ನು ಧ್ವಂಸಗೊಳಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ನಿನ್ನೆ ವರೆಗೂ ಏನೂ ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಪಾಕ್‌, ತನ್ನ ದೇಶದ ನಾಗರಿಕರನ್ನ ಮೂರ್ಖರನ್ನಾಗಿಸಿ ವಿಜಯೋತ್ಸವ ಆಚರಿಸುತ್ತಿದ್ದ ಪಾಕಿಸ್ತಾನ ಇದೀಗ ಇಡೀ ವಿಶ್ವದ ಮುಂದೆ ತಪ್ಪೊಪ್ಪಿಕೊಂಡಿದೆ. ಈ ಕುರಿತು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಮಾತನಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲೂ ಹರಿದಾಡುತ್ತಿದೆ. ಇದನ್ನೂ ಓದಿ: ಅಣ್ವಸ್ತ್ರ ಸಂಗ್ರಹ ಇರೋ ಬೆಟ್ಟದ ಮೇಲೆ ದಾಳಿ ಚರ್ಚೆ – ಪತ್ರಕರ್ತನಿಗೆ ಥ್ಯಾಂಕ್ಸ್‌ ಹೇಳಿದ ವಾಯುಸೇನೆ

    ವೈರಲ್‌ ವಿಡಿಯೋನಲ್ಲಿ ಏನಿದೆ?
    ಇಸ್ಲಾಮಾಬಾದ್‌ನ ಸಮಾರಂಭದಲ್ಲಿ ಮಾತನಾಡುವ ಶೆಹಬಾಜ್ ಷರೀಫ್, ಮೇ 9 ಮತ್ತು 10ರ ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ, ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌ ನನಗೆ ಫೋನ್‌ನಲ್ಲಿ ಸುರಕ್ಷಿತವಾಗಿರುವಂತೆ ಹೇಳಿದ್ದರು. ಸಾಹಿಬ್‌… ಭಾರತವು ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಉಡಾಯಿಸಿದೆ. ಅದರಲ್ಲಿ ಒಂದು ನೂರ್‌ಖಾನ್‌ ವಾಯುನೆಲೆಯ ಮೇಲೆ ಬಿದ್ದಿದೆ ಮತ್ತು ಕೆಲವು ಇತರ ಪ್ರದೇಶಗಳಲ್ಲಿ ಬಿದ್ದಿವೆ. ನಮ್ಮ ವಾಯುಪಡೆಯು ನಮ್ಮ ದೇಶವನ್ನ ರಕ್ಷಿಸಲು ಸ್ಥಳೀಯ ತಂತ್ರಜ್ಞಾನವನ್ನ ಬಳಸಿತು ಜೊತೆಗೆ ಚೀನೀ ಯುದ್ಧ ವಿಮಾನಗಳಲ್ಲಿ ಆಧುನಿಕ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನವನ್ನೂ ಸಹ ಬಳಸಿದೆʼ ನೀವು ಸುರಕ್ಷಿತ ಸ್ಥಳದಲ್ಲಿರಿ ಎಂದು ಎಚ್ಚರಿಸಿದ್ದರುʼ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಪರಾಕ್ರಮಕ್ಕೆ ಬೆದರಿ ಬಂಕರ್‌ನಲ್ಲಿ ಅಡಗಿದ್ದ ಅಸಿಮ್‌ ಮುನೀರ್‌!

    ನೂರ್‌ಖಾನ್‌ ಪಾಕ್‌ನ ಪ್ರಮುಖ ವಾಯುನೆಲೆ
    ನೂರ್‌ ಖಾನ್‌ ವಾಯುನೆಲೆ ಪಾಕ್‌ನ ಹೃದಯವಿದ್ದಂತೆ. ಇದು ಪಾಕಿಸ್ತಾನದ ಉನ್ನತ ಮಟ್ಟದ ಮಿಲಿಟರಿ ಸೌಲಭ್ಯ ಹೊಂದಿರುವ ಪ್ರಮುಖ ಕೇಂದ್ರವಾಗಿತ್ತು. ದೇಶದ ಉನ್ನತ ವಿವಿಐಪಿಗಳು ವಾಯು ಸಾರಿಗೆಗಾಗಿ ಇದನ್ನ ಬಳಸುತ್ತಾರೆ.

    ಮೇ 10 ರಂದು ಕ್ಷಿಪಣಿ ದಾಳಿ ನಡೆದ ಬಳಿಕ ಭಾರತ ಉಪಗ್ರಹ ಚಿತ್ರ ಸಹಿತ ಸಾಕ್ಷ್ಯವನ್ನ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

  • ಕೊನೆಗೂ ಭಾರತದ ಮುಂದೆ ಮಂಡಿಯೂರಿದ ಪಾಕ್‌ – ಶಾಂತಿ ಮಾತುಕತೆಗೆ ಪಾಕ್‌ ಪ್ರಧಾನಿ ಆಹ್ವಾನ

    ಕೊನೆಗೂ ಭಾರತದ ಮುಂದೆ ಮಂಡಿಯೂರಿದ ಪಾಕ್‌ – ಶಾಂತಿ ಮಾತುಕತೆಗೆ ಪಾಕ್‌ ಪ್ರಧಾನಿ ಆಹ್ವಾನ

    – ಪಾಕಿಸ್ತಾನ ಶಾಂತಿಗಾಗಿ ತೊಡಗಿಸಿಕೊಳ್ಳು ಸಿದ್ಧ: ಶೆಹಬಾಜ್‌ ಷರೀಫ್‌

    ಇಸ್ಲಾಮಾಬಾದ್: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್‌ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ತತ್ತರಿಸಿದ ಪಾಕಿಸ್ತಾನ (Pakistan) ಕೊನೆಗೂ ಭಾರತದ (India) ಮುಂದೆ ಮಂಡಿಯೂರಿದೆ. ಪಾಕಿಸ್ತಾನ ಶಾಂತಿಗಾಗಿ ತೊಡಗಿಸಿಕೊಳ್ಳಲು ಸಿದ್ಧವಾಗಿದೆ ಎಂದು ಪ್ರಧಾನಿ ಶೆಹಬಾಜ್‌ ಶರೀಫ್‌ ಭಾರತದ ಮುಂದೆ ಮಾತುಕತೆ ಪ್ರಸ್ತಾಪ ಇಟ್ಟಿದ್ದಾರೆ.

    ಭಾರತದೊಂದಿಗಿನ ಮಿಲಿಟರಿ ಮುಖಾಮುಖಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಲು ಗುರುವಾರ ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶೆಹಬಾಜ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಡಮ್ಮಿ ಜೆಟ್‌, 15 ಬ್ರಹ್ಮೋಸ್‌ ಕ್ಷಿಪಣಿ ದಾಳಿ, 11 ಏರ್‌ಬೇಸ್‌ ಧ್ವಂಸ – ಪಾಕ್‌ ಕರೆಯ ಹಿಂದಿದೆ ಭಾರತದ ಪರಾಕ್ರಮದ ಕಥೆ

    ಶಾಂತಿಗಾಗಿ ನಾವು ಅದರೊಂದಿಗೆ (ಭಾರತ) ಮಾತುಕತೆಗೆ ಸಿದ್ಧರಿದ್ದೇವೆ. ಶಾಂತಿಗಾಗಿ ಷರತ್ತುಗಳು ಕಾಶ್ಮೀರ ಸಮಸ್ಯೆಯನ್ನೂ ಒಳಗೊಂಡಿವೆ ಎಂದು ಶೆಹಬಾಜ್‌ (Shehbaz Sharif) ತಿಳಿಸಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿರುತ್ತವೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮೊದಲು ಉಗ್ರರನ್ನು ಹಸ್ತಾಂತರಿಸಿ – ಪಾಕ್‌ನ ಸಿಂಧೂ ನದಿ ಒಪ್ಪಂದ ಮನವಿಗೆ ಜೈಶಂಕರ್‌ ಮಾತು

    ಶೆಹಬಾಜ್ ಅವರೊಂದಿಗೆ ಉಪ ಪ್ರಧಾನಿ ಇಶಾಕ್ ದಾರ್, ರಕ್ಷಣಾ ಸಚಿವ ಖವಾಜಾ ಆಸಿಫ್, ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ವಾಯುಪಡೆಯ ಮುಖ್ಯಸ್ಥ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಕೂಡ ಗುರುವಾರ ವಾಯುನೆಲೆಗೆ ಬಂದಿದ್ದರು.

    ಪಹಲ್ಗಾಮ್‌ ಭಯೋತ್ಪಾದಕ ದಾಳಿಯಿಂದಾಗಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡರು. ಇದಕ್ಕೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಇದನ್ನೂ ಓದಿ: ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

    ನಂತರ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಹಲವಾರು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಪ್ರತ್ಯುತ್ತರವಾಗಿ ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿಯದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ಭೀಕರ ಪ್ರತಿದಾಳಿ ನಡೆಸಿದವು.

  • ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ

    ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ

    ಇಸ್ಲಾಮಾಬಾದ್‌: ಪ್ರಧಾನಿ ನರೇಂದ್ರ ಮೋದಿ (PM Modi) ಭಾಷಣಕ್ಕೆ ಟಕ್ಕರ್‌ ಕೊಡಲು ಹೋಗಿ ಮತ್ತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif) ನಗೆಪಾಟಲಿಗೀಡಾದ್ದಾರೆ. ಧ್ವಂಸಗೊಂಡಿದ್ದ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಸಂವಾದ ನಡೆಸಿ ಟ್ರೋಲ್‌ ಆಗಿದ್ದಾರೆ.

    ಭಾರತದ ಅದಂಪುರ ವಾಯುನೆಲೆಯನ್ನು ಧ್ವಂಸಗೊಳಿಸಿದ್ದೇವೆಂದು ಪಾಕ್‌ ಸುಳ್ಳು ಸುದ್ದಿ ಹರಿಬಿಟ್ಟಿತ್ತು. ಅದೇ ಸ್ಥಳಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ಮಾತನಾಡಿ ಪ್ರಧಾನಿ ಮೋದಿ ಅವರು ಪಾಕ್‌ಗೆ ತಿರುಗೇಟು ಕೊಟ್ಟಿದ್ದರು. ಈಗ ಭಾರತದ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕರನ್ನು ಪಾಕ್‌ ಪ್ರಧಾನಿ ಭೇಟಿಯಾಗಿದ್ದಾರೆ. ಇದು ಪ್ರಧಾನಿ ಮೋದಿ ಅವರ ನಕಲು ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಡ್ಯಾಮೇಜ್ ಆಗಿರುವ ಏರ್‌ಫೀಲ್ಡ್ ಮುಚ್ಚಿಕೊಳ್ಳಲು ಮೈದಾನದಂತಹ ಜಾಗದಲ್ಲಿ ಸೈನಿಕರ ಜೊತೆ ಶೆಹಬಾಜ್‌ ಷರೀಫ್‌ ಸಂವಾದ ನಡೆಸಿದ್ದಾರೆ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸಿ ಸಂವಾದದ ವೀಡಿಯೋ ರಿಲೀಸ್‌ ಮಾಡಿದ್ದಾರೆ.

    ಪ್ರಧಾನಿ ಮೋದಿ ಅದಂಪುರ ವಾಯುನೆಲೆಯಲ್ಲಿ ಸೈನಿಕರನ್ನುದ್ದೇಶಿಸಿ ಮಾತಾನಾಡಿ ಜೈಕಾರ ಕೂಗಿದ್ದರು. ಅದನ್ನು ಅನುಕರಿಸಲು ಹೋಗಿ ಪಾಕ್‌ ಪ್ರಧಾನಿ ನಗೆಪಾಟಲಿಗೀಡಾಗಿದ್ದಾರೆ. ಗುಡ್ಡಗಾಡು ಬೆಟ್ಟದ ಮಧ್ಯೆ ಕಾಣುವ ಮೈದಾನದಂತಹ ಜಾಗದಲ್ಲಿ ಪಾಕ್ ಪ್ರಧಾನಿ, ಪಾಕ್‌ನ ಸೇನಾ ಮುಖ್ಯಸ್ಥ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

    ಡ್ಯಾಮೇಜ್ ಆಗಿರುವ ಏರ್‌ಪೀಲ್ಡ್‌ನಲ್ಲಿ ಸಂವಾದ ಮಾಡಿದರೆ ಮರ್ಯಾದೆ ಪೂರ್ತಿ ಹೋಗುತ್ತದೆ ಎಂದು ಪಾಕಿಸ್ತಾನ ಈ ಕಸರತ್ತು ಮಾಡಿದೆ.

  • ಉಗ್ರ ಮಸೂದ್ ಅಜರ್‌ಗೆ 14 ಕೋಟಿ ರೂ. ಪರಿಹಾರ ಘೋಷಿಸಿದ ಪಾಕಿಸ್ತಾನ

    ಉಗ್ರ ಮಸೂದ್ ಅಜರ್‌ಗೆ 14 ಕೋಟಿ ರೂ. ಪರಿಹಾರ ಘೋಷಿಸಿದ ಪಾಕಿಸ್ತಾನ

    ಇಸ್ಲಾಮಾಬಾದ್: ಪಾಕಿಸ್ತಾನ (Pakistan) ಉಗ್ರ ಪೋಷಕ ರಾಷ್ಟ್ರ ಎಂಬುದು ಮತ್ತೆ ಸಾಬೀತಾಗಿದೆ. ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್‌ ಮುಖ್ಯಸ್ಥ ಉಗ್ರ ಮಸೂದ್ ಅಜರ್‌ನ (Masood Azhar) 14 ಮಂದಿ ಕುಟುಂಬ ಸದಸ್ಯರ ಹತ್ಯೆ ಹಿನ್ನೆಲೆ ಪಾಕಿಸ್ತಾನ ಸರ್ಕಾರ ಮಸೂರ್ ಅಜರ್‌ಗೆ 14 ಕೋಟಿ ರೂ. ಪರಿಹಾರ ಘೋಷಿಸಿದೆ.

    ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಮಂದಿ ಸೇರಿ 14 ಮಂದಿ ಹತ್ಯೆಯಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಣೆ ಯಾಕೆ? ಮೋದಿ ಉತ್ತರ ಕೊಡಲಿ – ದಿನೇಶ್ ಗುಂಡೂರಾವ್

    ಪಾಕ್‌ನ ಬಹಾವಲ್ಪುರದಲ್ಲಿ ಉಗ್ರ ಸಂಘಟನೆಯ ಪ್ರಧಾನ ಕಚೇರಿಯ ಮೇಲೆ ನಡೆಸಿದ ದಾಳಿಯಲ್ಲಿ ಮಸೂದ್ ಕುಟುಂಬದ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಹಿಮಾಲಯದ ಮೌಂಟ್ ಕುವಾರಿ ಶಿಖರ ಏರಿದ ಪೌರಕಾರ್ಮಿಕರ ಮಕ್ಕಳು

    ಬಹಾವಲ್ಪುರದ ಸುಭಾನ್ ಅಲ್ಲಾ ಮಸೀದಿ ಮೇಲಿನ ದಾಳಿಯಲ್ಲಿ ಬಲಿಯಾದವರಲ್ಲಿ ಪೈಕಿ ಜೆಇಎಂ ಮುಖ್ಯಸ್ಥನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ಕುಟುಂಬದ 5 ಮಕ್ಕಳು ಸೇರಿದ್ದಾರೆ. ಇದರ ಜೊತೆಗೆ ಮಸೂದ್‌ನ ಆಪ್ತ ಸಹಚರ, ಆತನ ತಾಯಿ ಸೇರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಜರ್ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಉಗ್ರರ ಹತ್ಯೆ- ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆ

    ಉಗ್ರರು ಮಾತ್ರವಲ್ಲ ಅವರ ಕುಟುಂಬವನ್ನು ನಾಶ ಮಾಡಬೇಕು. ಆಗ ಉಗ್ರರ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ. ಅವರಿಗೂ ನೋವು ಏನು ಎನ್ನುವುದು ಗೊತ್ತಾಗಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಈ ಜನರ ಆಗ್ರಹದಂತೆ ಮಸೂದ್ ಕುಟುಂಬವನ್ನೇ ಭಾರತ ನಾಶ ಮಾಡಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷನಾಗಿ ಕಾಂಗ್ರೆಸ್ ಮುಖಂಡ, ಮಾಜಿ ರೌಡಿಶೀಟರ್ ಆಯ್ಕೆ

    ಅಜರ್ ಹಿನ್ನೆಲೆ ಏನು?
    ನಿಷೇಧಿತ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಪುಲ್ವಾಮಾ ದಾಳಿಯ ರೂವಾರಿ ಆಗಿದ್ದಾನೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‌ನಲ್ಲಿರುವ ಜೈಷ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ 2019ರ ಮೇ 1ರಂದು ವಿಶ್ವಸಂಸ್ಥೆ ಅಜರ್‌ನನ್ನ ಜಾಗತಿಕ ಉಗ್ರ ಎಂದು ಘೋಷಿಸಿತ್ತು. ಇದನ್ನೂ ಓದಿ: ʻಬಿಬಿಎಂಪಿʼ ಹೆಸರು ಇತಿಹಾಸ ಪುಟಕ್ಕೆ – ಮೇ 15ರಿಂದ ʻಗ್ರೇಟರ್‌ ಬೆಂಗಳೂರುʼ ಆಡಳಿತ ಜಾರಿ

    ಅಲ್ಲದೇ ಪಾಕ್ ಸೇನೆ ಹಾಗೂ ಉಗ್ರರ ನಂಟಿನ ಮಗದೊಂದು ಸ್ಫೋಟಕ ವೀಡಿಯೋ ಕೂಡ ರಿಲೀಸ್ ಆಗಿದೆ. ಭಾರತದ ಆಪರೇಷನ್ ಸಿಂಧೂರದಲ್ಲಿ ಹತನಾದ ಮೋಸ್ಟ್ ವಾಟೆಂಡ್ ಲಷ್ಕರ್ ಉಗ್ರ ಮುದಾಸೀರ್ ಮನೆಗೆ ಪಾಕಿಸ್ತಾನದ ಲೆಫ್ಟಿನೆಂಟ್ ಜನರಕ್ ಫಯಾಸ್ ಹುಸೇನ್ ಷಾ ಭೇಟಿ ನೀಡಿದ್ದಾರೆ. ಇವರಿಗೆ ಉನ್ನತ ಸ್ಥಾನದಲ್ಲಿರುವ ಇನ್ನಿತರ ಮಿಲಿಟರಿ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಕರ್ನಲ್ ಸೋಫಿಯಾ ಪತಿ ಮನೆ ಮೇಲೆ RSS ದಾಳಿ ವದಂತಿ – ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಮನವಿ

  • ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

    ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

    – ಚೀನಾ ನಮ್ಮೊಂದಿಗಿದೆ, ಟ್ರಂಪ್‌ಗೂ ಧನ್ಯವಾದ ಹೇಳಿದ ಷರೀಫ್​
    – ಭಾರತದ ದಾಳಿಗಳು ವಿಫಲವಾಗಿದೆ ಎಂದು ಬುರುಡೆ ಬಿಟ್ಟ ಪಿಎಂ

    ನವದೆಹಲಿ: ಕದನ ವಿರಾಮ (Ceasefire) ಮುರಿಯುವುದು ಪಾಕ್‌ ಹಳೆಯ ಚಾಳಿಯಾಗಿಬಿಟ್ಟಿದೆ. ಭಾರತೀಯ ಸೇನಾ ದಾಳಿಗೆ ʻಕಪಟ ವಿರಾಮʼದ ನಾಟಕವಾಡಿದ್ದ ಪಾಕ್‌ ಮತ್ತೆ ಬಾಲ ಬಿಚ್ಚಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳ‌ ಬಳಿಕ ಭಾರತದ ಗಡಿಯಲ್ಲಿ ದಾಳಿ ನಡೆಸಿದೆ ಎನ್ನಲಾಗಿದ್ದು, ಜಮ್ಮುವಿನ ಅಖ್ನೂರ್‌, ಕನಾಚಕ್‌, ಪರ್ಗ್ವಾಲ್‌, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟದ ಸದ್ದು ಕೇಳಿಬಂದಿವೆ.

    Ceasefire violation

    ಶನಿವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif), ಭಾರತ ಇತ್ತೀಚೆಗೆ ಮಾಡಿದ್ದು ತಪ್ಪು, ಅದಕ್ಕೆ ನಮ್ಮ ಸೇನೆ ಸೂಕ್ತ ಉತ್ತರ ಕೊಟ್ಟಿದೆ. ಪಹಲ್ಗಾಮ್ ದಾಳಿಯನ್ನ ನೆಪವಾಗಿಟ್ಟುಕೊಂಡು ಭಾರತ ನಮ್ಮ ಮೇಲೆ ಯುದ್ಧ ಹೇರಿತು. ಭಾರತದ ಆಧಾರರಹಿತ ಆರೋಪಗಳ ಬಗ್ಗೆ ಪಾಕಿಸ್ತಾನ ಮತ್ತೊಮ್ಮೆ ನಿಷ್ಪಕ್ಷಪಾತ ತನಿಖೆಯನ್ನು ನಡೆಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಕದನ ವಿರಾಮ ಉಲ್ಲಂಘಿಸಿ ಬಾಲ ಬಿಚ್ಚಿದ ಪಾಕ್‌ – ಜಮ್ಮು, ರಾಜಸ್ಥಾನದ ಹಲವೆಡೆ ಸ್ಫೋಟದ ಸದ್ದು

    ಭಾರತವು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಮೂಲಕ ಪಾಕಿಸ್ತಾನಿ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಭಾರತ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ನಮ್ಮ ತಾಳ್ಮೆಯನ್ನ ಪರೀಕ್ಷಿಸಿತು. ಪಾಕಿಸ್ತಾನದ ಸೇನಾ ಶಿಬಿರಗಳು ಮತ್ತು ಶಸ್ತ್ರಾಸ್ತ್ರ ಡಿಪೋಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಭಾರತೀಯ ಸೇನೆ ವಿಫಲ ಪ್ರಯತ್ನಗಳನ್ನು ಮಾಡಿತು ಎಂದು ಬೊಗಳೆ ಬಿಟ್ಟಿದ್ದಾರೆ. ಇದನ್ನೂ ಓದಿ: ಭೂ, ಜಲ, ವಾಯು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಕದನ ವಿರಾಮಕ್ಕೆ ಭಾರತ-ಪಾಕ್‌ ಒಪ್ಪಿಗೆ

    ಟ್ರಂಪ್‌ಗೆ ಕೃತಜ್ಞತೆ
    ಇದೇ ವೇಳೆ ಕದನ ವಿರಾಮಕ್ಕಾಗಿ ಶೆಹಬಾಜ್ ಷರೀಫ್ ಚೀನಾ, ಡೊನಾಲ್ಡ್ ಟ್ರಂಪ್ ಮತ್ತು ಗಲ್ಫ್ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದರು. ನಾನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜೊತೆಗೆ ಕದನ ವಿರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಸೌದಿ ಅರೇಬಿಯಾ, ಯುಎಇ, ಟರ್ಕಿ ಮತ್ತು ಕತಾರ್‌ಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್‌ ಒಪ್ಪಂದ: ಜೈಶಂಕರ್‌

    ಚೀನಾಕ್ಕೆ ವಿಶೇಷ ಧನ್ಯವಾದ
    ಇನ್ನೂ ಪಾಕ್‌ ಪ್ರಧಾನಿ ಚೀನಾವನ್ನ ತನ್ನ ವಿಶ್ವಾಸಾರ್ಹ ಸ್ನೇಹಿತ ಎಂದು ಬಣ್ಣಿಸಿದ್ರು. ಚೀನಾವನ್ನ ಉಲ್ಲೇಖಿಸದೆ ನನ್ನ ಭಾಷಣ ಅಪೂರ್ಣ. ನಾನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸುತ್ತೇನೆ. 5 ದಶಕಗಳಿಗೂ ಹೆಚ್ಚು ಕಾಲ, ಪ್ರತಿಯೊಂದು ಬಿಕ್ಕಟ್ಟಿನಲ್ಲಿಯೂ ಚೀನಾ ನಮ್ಮೊಂದಿಗೆ ನಿಂತಿದೆ ಎಂದು ಬೀಗಿದರು. ಇದನ್ನೂ ಓದಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

  • ಭಾರತದ ದಾಳಿಗೆ ಬೆಚ್ಚಿದ ಪಾಕ್‌ – ಅಣ್ವಸ್ತ್ರ ನಿರ್ಧಾರ ಕೈಗೊಳ್ಳುವ ತುರ್ತು ಸಭೆ ಕರೆದ ಪ್ರಧಾನಿ

    ಭಾರತದ ದಾಳಿಗೆ ಬೆಚ್ಚಿದ ಪಾಕ್‌ – ಅಣ್ವಸ್ತ್ರ ನಿರ್ಧಾರ ಕೈಗೊಳ್ಳುವ ತುರ್ತು ಸಭೆ ಕರೆದ ಪ್ರಧಾನಿ

    ಇಸ್ಲಾಮಾಬಾದ್‌: ಭಾರತದ (India) ದಾಳಿಗೆ ತತ್ತರಿಸಿದ ಪಾಕಿಸ್ತಾನ (Pakistan) ಈಗ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಬಗ್ಗೆ  ನಿರ್ಧಾರ ಕೈಗೊಳ್ಳುವ ಸಭೆಯನ್ನು ಕರೆದಿದೆ.

    ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು National Command Authority ತುರ್ತು ಸಭೆಯನ್ನು ಕರೆದಿದ್ದಾರೆ. ಇದು ದೇಶದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ಕಾರ್ಯಾಚರಣೆಯ  ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಮಾತ್ರ ಈ ಸಭೆಯನ್ನು ಕರೆಯಲಾಗುತ್ತದೆ. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದ ಪಾಕ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಹರ್ಯಾಣದಲ್ಲೇ ಛಿದ್ರ!

     

    ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಬಾಂಬ್‌ ಹೊಂದಿದೆ. ಭಾರತ ತಾನೂ ಯಾವತ್ತೂ ಮೊದಲು ಪರಮಾಣು ಅಸ್ತ್ರವನ್ನು ಪ್ರಯೋಗಿಸುವುದಿಲ್ಲ ಎಂದು ವಿಶ್ವಕ್ಕೆ ಹೇಳಿದೆ. ಆದರೆ ತನ್ನ ಮೇಲೆ ಪ್ರಯೋಗ ಮಾಡಿದರೆ ಪ್ರಯೋಗಿಸುತ್ತೇನೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಶಕ್ತಿಶಾಲಿ ಅಸ್ತ್ರಗಳಿಂದಲೇ ಪಾಕ್‌ಗೆ ಶತಕೋಟಿ ಲಾಸ್‌ – ದಿವಾಳಿಯತ್ತ ʻಭಿಕಾರಿಸ್ತಾನʼ

    ಈ ಹಿಂದೆ ರಷ್ಯಾ-ಉಕ್ರೇನ್‌, ಇಸ್ರೇಲ್‌-ಹಮಾಸ್‌, ಇರಾನ್‌ ಯುದ್ಧ ನಡೆಯುವಾಗಲೂ ಪರಮಾಣು ಬಾಂಬ್‌ ಬಳಸುವ ಬಗ್ಗೆ ಬಹಳಷ್ಟು ಸುದ್ದಿಗಳು ಪ್ರಕಟವಾಗಿದ್ದವು. ಆದರೆ ಯಾರೂ ಅಣು ಬಾಂಬ್‌ ಪ್ರಯೋಗಿಸುವ ಧೈರ್ಯ ಮಾಡಿರಲಿಲ್ಲ. ಒಂದು ವೇಳೆ ಯಾವುದಾದರೂ ದೇಶ ಪರಮಾಣು ಬಾಂಬ್‌ ಬಳಸಿದರೆ ಆ ದೇಶದ ಜೊತೆ ವಿಶ್ವವೇ ಆರ್ಥಿಕ ಸಂಬಂಧವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಿ ಎರಡನೇ ಮಹಾಯುದ್ಧದ ಬಳಿಕ ಇಲ್ಲಿಯವರೆಗೆ ಯಾವುದೇ ದೇಶ ಪರಮಾಣು ಅಸ್ತ್ರವನ್ನು ಬಳಸಿಲ್ಲ.