Tag: Sheezan khan

  • ತುನಿಷಾಳನ್ನು ಆಕೆ ತಾಯಿ ಸರಿಯಾಗಿ ನೋಡಿಕೊಳ್ತಿರಲಿಲ್ಲ; ಅಣ್ಣನ ವಿರುದ್ಧದ ಆರೋಪಗಳು ಸುಳ್ಳು – ಶೀಜಾನ್‌ ಖಾನ್‌ ಸಹೋದರಿ

    ತುನಿಷಾಳನ್ನು ಆಕೆ ತಾಯಿ ಸರಿಯಾಗಿ ನೋಡಿಕೊಳ್ತಿರಲಿಲ್ಲ; ಅಣ್ಣನ ವಿರುದ್ಧದ ಆರೋಪಗಳು ಸುಳ್ಳು – ಶೀಜಾನ್‌ ಖಾನ್‌ ಸಹೋದರಿ

    ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕುಟುಂಬಸ್ಥರು ಮಾಡಿರುವ ಆರೋಪಗಳನ್ನು ನಟ ಶೀಜಾನ್‌ ಖಾನ್‌ (Sheezan Khan) ಸಹೋದರಿ ಶಫಕ್ ನಾಜ್ (Shafaq Naaz) ತಳ್ಳಿಹಾಕಿದ್ದಾರೆ.

    ನಟಿ ಕುಟುಂಬಸ್ಥರು ನನ್ನ ಸಹೋದರನ ಮೇಲೆ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿದೆ. ತುನಿಷಾ ಶರ್ಮಾಳನ್ನು ಇಸ್ಲಾಂಗೆ ಮತಾಂತರವಾಗುವಂತೆ ಯಾರೂ ಕೂಡ ಒತ್ತಾಯಿಸಿರಲಿಲ್ಲ. ಆಕೆ ಹಿಜಬ್‌ ಧರಿಸಿದ್ದಳು ಎನ್ನುವುದು ಕೂಡ ಸುಳ್ಳು ಎಂದು ಶಫಕ್‌ ನಾಜ್‌ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನಟಿ ತುನಿಷಾ ಆತ್ಮಹತ್ಯೆ: ಬಾಯ್ ಫ್ರೆಂಡ್ ಶಿಜಾನ್ ಜೊತೆಗಿನ ವಾಗ್ವಾದದ ದೃಶ್ಯ ಪತ್ತೆ

    ಶೀಜಾನ್ ಯಾವತ್ತೂ ಡ್ರಗ್ಸ್ ಸೇವಿಸುತ್ತಿರಲಿಲ್ಲ. ತುನಿಷಾ ಶರ್ಮಾ ಅವರ ತಾಯಿ ಮಾಡಿರುವ ಆರೋಪ ಸಂಪೂರ್ಣ ತಪ್ಪು. ಈ ಆರೋಪಗಳು ಆಧಾರರಹಿತ, ಸುಳ್ಳಿನಿಂದ ಕೂಡಿದೆ ಎಂದು ತಿಳಿಸಿದ್ದಾರೆ.

    ತುನಿಷಾಳ ತಾಯಿ ಮಗಳನ್ನು ಸದಾ ನಿರ್ಲಕ್ಷಿಸುತ್ತಿದ್ದರು. ಅವರು ತುನಿಷಾಳನ್ನು ಕೇರ್‌ ಮಾಡುತ್ತಿರಲಿಲ್ಲ. ಈ ವಿಚಾರವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಈ ಕಾರಣಗಳಿಂದಾಗಿ ತುನಿಷಾ ಬಾಲ್ಯದಿಂದಲೂ ಖಿನ್ನತೆಗೆ ಒಳಗಾಗುತ್ತಿದ್ದಳು ಎಂದು ಶಫಕ್‌ ನಾಜ್‌ ಆರೋಪಿಸಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆಗೂ 2 ನಿಮಿಷ ಮುನ್ನ ಬಾಯ್ ಫ್ರೆಂಡ್ ಗೆ ಕಾಲ್ ಮಾಡಿದ್ದ ತುನಿಷಾ ಶರ್ಮಾ

    ತುನಿಷಾ ಹಿಜಬ್‌ ಧರಿಸುವಂತೆ ಮಾಡಿದ್ದರು ಅನ್ನೋದೆಲ್ಲ ಸುಳ್ಳು. ಚಿತ್ರೀಕರಣದ ಭಾಗವಾಗಿದ್ದ ಕಾರ್ಯಕ್ರಮದ ಸೆಟ್‌ನಿಂದ ಹಿಜಬ್ ಧರಿಸಿರುವ ತುನಿಷಾ ಚಿತ್ರವು ಎಲ್ಲೆಡೆ ವೈರಲ್‌ ಆಗುತ್ತಿದೆ. ಆಕೆ ಚಿತ್ರೀಕರಣಕ್ಕೆ ಹಿಜಬ್‌ ಧರಿಸಿದ್ದ ದೃಶ್ಯ ಅದು ಎಂದು ಸಾಕ್ಷಿ ಸಮೇತ ನಾಜ್‌ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ತುನಿಷಾ ಶರ್ಮಾ ಸಾವು ಪ್ರಕರಣ – ಆರೋಪಿ ಶಿಜಾನ್‌ ಖಾನ್‌ ಬೆಂಬಲಕ್ಕೆ ನಿಂತ ಊರ್ಫಿ

    ನಟಿ ತುನಿಷಾ ಶರ್ಮಾ ಸಾವು ಪ್ರಕರಣ – ಆರೋಪಿ ಶಿಜಾನ್‌ ಖಾನ್‌ ಬೆಂಬಲಕ್ಕೆ ನಿಂತ ಊರ್ಫಿ

    ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತುನಿಷಾ ಸಾವಿಗೆ ಲವ್‌ ಜಿಹಾದ್‌ ಕಾರಣ ಎಂದು ನಟಿಯ ಕುಟುಂಬಸ್ಥರು ಸಹನಟ ಶಿಜಾನ್‌ ಖಾನ್‌ (Sheezan Khan) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರ ಮಧ್ಯೆ, ಪ್ರಕರಣದ ಆರೋಪಿ ಶಿಜಾನ್‌ ಬೆಂಬಲಕ್ಕೆ ನಿಂತು ಬಿಗ್‌ ಬಾಸ್‌ ಒಟಿಟಿ ಖ್ಯಾತಿಯ ನಟಿ ಊರ್ಫಿ ಜಾವೇದ್‌ (Uorfi Javed) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

    ತುನಿಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಊರ್ಫಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ. “ತುನಿಷಾ ಪ್ರಕರಣದಲ್ಲಿ ನನ್ನ 2 ಅಭಿಪ್ರಾಯಗಳಿವೆ. ಹೌದು.. ಅವನಿಂದ ತಪ್ಪಾಗಿರಬಹುದು. ಅವನು ಅವಳಿಗೆ ಮೋಸ ಮಾಡಿರಬಹುದು. ಆದರೆ ಅವಳ ಸಾವಿಗೆ ನಾವು ಅವನನ್ನು ದೂಷಿಸಲು ಸಾಧ್ಯವಿಲ್ಲ. ಉಳಿಯಲು ಇಷ್ಟಪಡದ ಯಾರನ್ನೂ ನಿಮ್ಮೊಂದಿಗೆ ಇರುವಂತೆ ಮಾಡಲು ಸಾಧ್ಯವೇ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಮಾಲಿಗುಡ್ಡದ ಕಥೆ ಹೇಳಲು ಡಾಲಿ, ಅದಿತಿ ರೆಡಿ

    “ಕೆಲವೊಮ್ಮೆ ಇದು ಪ್ರಪಂಚದ ಅಂತ್ಯದಂತೆ ತೋರುತ್ತದೆ. ಹಾಗಂತ ಅಮೂಲ್ಯವಾದ ಜೀವವನ್ನು ತ್ಯಜಿಸುವುದು ಸರಿಯಲ್ಲ. ನಿಮ್ಮನ್ನು ಪ್ರೀತಿಸುವ ಜನರ ಬಗ್ಗೆ ಯೋಚಿಸಿ. ನಿಮ್ಮನ್ನು ನೀವೇ ಪ್ರೀತಿಸಲು ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿ. ನಿಮಗೆ ನೀವೇ ನಾಯಕರಾಗಿ. ದಯವಿಟ್ಟು ಸ್ವಲ್ಪ ಸಮಯ ಕೊಡಿ. ಆತ್ಮಹತ್ಯೆಯ ನಂತರ ಸಂಕಟ ಕೊನೆಗೊಳ್ಳುವುದಿಲ್ಲ. ಇದರಿಂದ ಉಳಿದವರು ಇನ್ನಷ್ಟು ಬಳಲುತ್ತಿದ್ದಾರೆ” ಎಂದು ನಟಿ ಪೋಸ್ಟ್‌ ಮಾಡಿದ್ದಾರೆ.

    ನಟಿ ತುನಿಷಾ ಶರ್ಮಾ ಇದೇ ಡಿ.24 ರಂದು ಸಿನಿಮಾ ಶೂಟಿಂಗ್‌ ವೇಳೆ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ಶ್ರದ್ಧಾ ವಾಕರ್‌ (Shraddha Walkar) ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದರಿಂದ ನಮಗೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ತುನಿಷಾಳಿಂದ ನಾನು ದೂರವಾದೆ ಎಂದು ಶಿಜಾನ್‌ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ನಮ್ಮ ಹುಡುಗಿ ಹಿಜಬ್‌ ಧರಿಸುತ್ತಿದ್ದಳು – ನಟಿಯ ಚಿಕ್ಕಪ್ಪ ಆರೋಪ

    ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ನಮ್ಮ ಹುಡುಗಿ ಹಿಜಬ್‌ ಧರಿಸುತ್ತಿದ್ದಳು – ನಟಿಯ ಚಿಕ್ಕಪ್ಪ ಆರೋಪ

    ಮುಂಬೈ: ಕಿರುತೆರೆ ನಟಿ ತುನಿಷಾ ಶರ್ಮಾ (Tunisha Sharma) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್‌ ಖಾನ್‌ (Sheezan Khan) ವಿರುದ್ಧ ʼಲವ್‌ ಜಿಹಾದ್‌ʼ (Love Jihad) ಆರೋಪಗಳು ಕೇಳಿ ಬರುತ್ತಿವೆ. ನಟಿ ತುನಿಷಾ ಅವರ ಚಿಕ್ಕಪ್ಪ ಪವನ್‌ ಶರ್ಮಾ ಅವರು ಶಿಜಾನ್‌ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

    ನಮ್ಮ ಮಗಳು ತುನಿಷಾ ಶರ್ಮಾ, ಶಿಜಾನ್‌ ಖಾನ್‌ ಭೇಟಿಯಾದ ಬಳಿಕ ಆಕೆ ನಡೆ, ಉಡುಗೆ-ತೊಡುಗೆಯಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ತುನಿಷಾ ಹಿಜಬ್‌ (Hijab) ಕೂಡ ಧರಿಸುತ್ತಿದ್ದಳು. ಆಕೆ ಲವ್‌ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಪವನ್‌ ಶರ್ಮಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ‘ಲವ್ ಜಿಹಾದ್’ ಗೆ ಹೆದರಿಕೊಂಡು ತುನಿಷಾ ಶರ್ಮಾಳಿಂದ ದೂರವಾಗಿದ್ದ ಬಾಯ್ ಫ್ರೆಂಡ್

    ಶಿಜಾನ್‌ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಇಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸಾಧ್ಯವಿರುವ ಎಲ್ಲ ಕೋನಗಳಿಂದ ಅವರು ತುನಿಷಾ ಸಾವಿನ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ತುನಿಷಾ ಸಾವನ್ನಪ್ಪಿದ ದಿನ ಶಿಜಾನ್ ತನ್ನ‌ ಮತ್ತೊಬ್ಬ ಗೆಳತಿಯೊಂದಿಗೆ ಒಂದರಿಂದ ಒಂದೂವರೆ ಗಂಟೆಗಳ ಕಾಲ ಚಾಟ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಶಿಜಾನ್‌ ವಿಚಾರಣೆ ವೇಳೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಗರ್ಭಿಣಿ ಆಗಿದ್ದು ನಿಜ: ಗೆಳತಿ ನೀಡಿದ ಶಾಕಿಂಗ್ ನ್ಯೂಸ್

    ಕೆಲ ದಿನಗಳ ಹಿಂದಷ್ಟೇ ಕಿರುತೆರೆ ನಟಿ ತುನಿಷಾ ಶರ್ಮಾ ಶೂಟಿಂಗ್‌ ಸೆಟ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ನಟನ ವಿರುದ್ಧ ತುನಿಷಾ ಅವರ ಪೋಷಕರು ಲವ್‌ ಜಿಹಾದ್‌ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]