Tag: Sheetal Shetty

  • ಜೂನ್ 6ಕ್ಕೆ ‘ವಿಂಡೋಸೀಟ್’ ಟ್ರೈಲರ್ ಅನಾವರಣ- ಶೀಘ್ರದಲ್ಲಿ ಆರಂಭವಾಗಲಿದೆ ರಘು ಪಯಣ!

    ಜೂನ್ 6ಕ್ಕೆ ‘ವಿಂಡೋಸೀಟ್’ ಟ್ರೈಲರ್ ಅನಾವರಣ- ಶೀಘ್ರದಲ್ಲಿ ಆರಂಭವಾಗಲಿದೆ ರಘು ಪಯಣ!

    ನ್ನಡ ಸಿನಿಮಾ ಲೋಕ ಬದಲಾಗಿದೆ. ಬದಲಾವಣೆಗೆ ತಕ್ಕಂತ ಸಿನಿಮಾಗಳು ಕೂಡ ಪ್ರೇಕ್ಷಕರ ಮಡಿಲು ಸೇರ್ತಿವೆ. ಅದರ ಮುಂದುವರಿದ ಭಾಗವೆಂಬಂತೆ ಈಗ ಮತ್ತೊಂದು ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾ ಚಿತ್ರರಸಿಕರನ್ನು ರಂಜಿಸಲು ಬರ್ತಿದೆ. ಅದೇ ವಿಂಡೋಸೀಟ್. ಆರಂಭದಿಂದಲೂ ಟೈಟಲ್, ಟೀಸರ್, ಹಾಡಿನ ಮೂಲಕ ಹೊಸ ಲೋಕ ಸೃಷ್ಟಿಸಿದ್ದ ವಿಂಡೋಸೀಟ್ ಸಿನಿಮಾದ ಮೊದಲ ನೋಟ ಅಂದ್ರೆ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಜೂನ್ 6ರಂದು ನಿಮಾದ ಟ್ರೈಲರ್ ಅನಾವರಣವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ, ಟ್ರೈಲರ್ ಪ್ರೋಮೋ ಝಲಕ್ ವೊಂದನ್ನು ರಿಲೀಸ್ ಮಾಡಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

    ಪ್ರತಿಯೊಬ್ಬರಿಗೂ ಒಂದೊಂದು ಜರ್ನಿ ಇರುತ್ತದೆ. ಅದ್ರಲ್ಲೂ ವಿಂಡೋಸೀಟ್ ನಲ್ಲಿ ಕುಳಿತು ಜರ್ನಿ ಮಾಡುವ ಅನುಭವದ ಕಥೆಯನ್ನು ಟ್ರೈಲರ್ ಪ್ರೋಮೋದಲ್ಲಿ ಕಟ್ಟಿಕೊಡಲಾಗಿದೆ. ಬರೀ ಪಯಣದ ಅನುಭವದ ಕಥೆ ಮಾತ್ರವಲ್ಲ ಪ್ರೀತಿ, ಜಗಳ, ಕೋಪ ನ್ಯಾಯಕ್ಕಾಗಿ ಹೋರಾಡಿದ ಕಥೆಯನ್ನು ಹೇಳಲು ಹೊರಟಿರುವ ನಾಯಕ ರಘುವಿನ ಝಲಕುಗಳನ್ನು ಹೊತ್ತ ಟ್ರೈಲರ್ ಜೂನ್ 6ಕ್ಕೆ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ದಾಖಲೆ: 21 ಸಿಟಿಗಳಲ್ಲಿ ಚಾರ್ಲಿ-777 ಪ್ರೀಮಿಯರ್

    ನಾಯಕಿ ಹಾಗೂ ನಿರೂಪಕಿಯಾಗಿ ಗಮನಸೆಳೆದಿರುವ ಶೀತಲ್ ಶೆಟ್ಟಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ವಿಂಡೋಸೀಟ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ಮಿಂಚಿದ್ದು, ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗರ್ ನಾಯಕಿಯಾರಾಗಿ ಕಾಣಿಸಿಕೊಂಡಿದ್ದು, ರವಿಶಂಕರ್, ಮಧುಸೂದನ್ ರಾವ್, ಲೇಖ, ಸೂರಜ್ ಸೇರಿದಂತೆ ಇನ್ನಿತರ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಜಾಕ್ ಮಂಜು ಬಂಡವಾಳ ಹಾಕಿರುವ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೆಶ್ ರಾಜ್ ಛಾಯಾಗ್ರಹಣವಿದ್ದು, ಋತಿಕ್ ಸಂಕಲನ ನೀಡಿದ್ದಾರೆ. ಇದೇ ಜೂನ್ 6ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದ ರಘು ಹೊಸ ಪಯಣದ ಹಾದಿ ತೆರೆದುಕೊಳ್ಳಲಿದೆ.

  • `ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    `ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ಸಾಯಿ ಪಲ್ಲವಿ `ಗಾರ್ಗಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. `ಗಾರ್ಗಿ’ ಚಿತ್ರಕ್ಕೆ ಕನ್ನಡದಲ್ಲಿ ಸಾಯಿ ಪಲ್ಲವಿ ಧ್ವನಿ ನೀಡಿದ್ದಾರೆ. ಇನ್ನು ಸಾಯಿ ಪಲ್ಲವಿ ಕನ್ನಡ ಕಲಿಯಲು ನಟಿ ಶೀತಲ್ ಶೆಟ್ಟಿ ಸಾಥ್ ನೀಡಿದ್ದಾರೆ.

    ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ `ಗಾರ್ಗಿ’ ಸಿನಿಮಾಗೆ ಗೌತಮ್ ರಾಮಚಂದ್ರನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ಸಾಯಿಪಲ್ಲವಿ ಕನ್ನಡ ಸಿನಿಮಾರಂಗಕ್ಕೂ ಪಾದಾರ್ಪಣೆ ಮಾಡ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ಕಮಾಲ್ ಮಾಡುತ್ತಿದೆ. `ಗಾರ್ಗಿ’ ಚಿತ್ರಕ್ಕಾಗಿ ತಮ್ಮ ಪಾತ್ರಕ್ಕೆ ಸಾಯಿ ಪಲ್ಲವಿ ಅವರೇ 5 ದಿನಗಳಲ್ಲಿ ಕನ್ನಡ ಕಲಿತು ಡಬ್ ಮಾಡಿದ್ದಾರೆ. ನಟಿಯ ಕನ್ನಡ ಕಲಿಕೆಗೆ ಶೀತಲ್ ಶೆಟ್ಟಿ ಕೈ ಜೋಡಿಸಿದ್ದಾರೆ.

    `ಗಾರ್ಗಿ’ ಚಿತ್ರ ತೆಲುಗು, ತಮಿಳು, ಮಲಯಾಳಂ ಜತೆ ಕನ್ನಡದಲ್ಲೂ ತೆರೆ ಕಾಣುತ್ತಿದೆ. ಈ ಚಿತ್ರದ ಕನ್ನಡ ಡಬ್ಬಿಂಗ್‌ಗಾಗಿ ನಟಿ ಸಾಯಿ ಪಲ್ಲವಿ ಬೆಂಗಳೂರಿಗೆ ಬಂದಿದ್ರು. ನಿಷ್ಠೆಯಿಂದ ಕನ್ನಡ ಕಲಿತು `ಗಾರ್ಗಿ’ಗೆ ಸ್ವತಃ ಫಿದಾ ನಟಿ ಡಬ್ಬಿಂಗ್ ಮಾಡಿದ್ದಾರೆ. ಕನ್ನಡ ಹಿರಿಯ ನಿರ್ದೇಶಕ ಎಆರ್ ಬಾಬು ಅವರ ಪುತ್ರ ಎಆರ್ ಶಾನ್ ತಮಿಳು ಅವತರಣಿಕೆಯನ್ನ ಕನ್ನಡಕ್ಕೆ ಭಾಷಾಂತರ ಮಾಡಿದ್ರು. ಶೀತಲ್ ಶೆಟ್ಟಿ ಅವರ `ಶೀ ಟೈಲ್ಸ್’ ಡಬ್ಬಿಂಗ್ ಸ್ಟುಡಿಯೋದಲ್ಲಿ ಸಾಯಿ ಪಲ್ಲವಿ ಕನ್ನಡ ಅವತರಣಿಕೆಯಲ್ಲಿ ಡಬ್ಬಿಂಗ್ ಮಾಡಿದ್ದಾರೆ. ಮೊದಲ ಪ್ರಾಜೆಕ್ಟ್ ಸಾಯಿ ಪಲ್ಲವಿ ಜತೆ ಕೆಲಸ ಮಾಡಿದ ಕುರಿತು ಶೀತಲ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖುಷಿಯಿಂದ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!

     

    View this post on Instagram

     

    A post shared by Sheetal Shetty (@isheetalshetty)

    `ಗಾರ್ಗಿ’ ಎನ್ನುವ ತಮಿಳು ಸಿನಿಮಾ ಶೀಟೈಲ್ಸ್ ಸ್ಟುಡಿಯೋಗೆ ಭಾಷಾನುವಾದ ಹಾಗೂ ಧ್ವನಿ ಮರುಲೇಪನಕ್ಕೆ ಬಂದಾಗ, ನಮಗೆ ಹೆಮ್ಮೆ ಜೊತೆಗೆ ಭಯ, ದುಗುಡ, ಸಾಯಿ ಪಲ್ಲವಿ ಎನ್ನುವ ಬೃಹತ್ ಕಲಾವಿದೆಯ ಅಭಿಮಾನ ಎಲ್ಲವೂ ಜೊತೆಗೆ ಸೇರಿ ಬಂದಿತ್ತು. ಆದರೆ ಸಾಯಿ ಪಲ್ಲವಿ ಅವ್ರಿಗೆ ಕನ್ನಡ ಹೇಳಿಕೊಟ್ಟಿದ್ದು ಒಂದು ಪುಟ್ಟ ಮಗುವಿಗೆ ತುತ್ತನ್ನಿಟ್ಟು ಕನ್ನಡ ಕಲಿಸಿದಂತೆ ಆಯ್ತು. ನಮ್ಮ ಸ್ಟೂಡಿಯೋಗೆ ಬಂದು, ನಮ್ಮ ಕನ್ನಡ ಭಾಷೆಯನ್ನು ಸಂಕೋಚವಿಲ್ಲದೆ ಕಲಿತು, ಸುಲಲಿತವಾಗಿ ತಮ್ಮ ಸಿನಿಮಾಗೆ, ಭಾಷೆಗೆ ತಕ್ಕ ಭಾವ ತುಂಬಿಸಿ ಈಗ ನಮ್ಮವರು ಹೆಮ್ಮೆ ಪಡುವಂತಹ ಕನ್ನಡತಿಯಾಗಿದ್ದೀರಿ. ನಿಮಗೆ ತುಂಬು ಹೃದಯದ ಧನ್ಯವಾದಗಳು. ಈ ಅವಕಾಶಕ್ಕೆ ಮುಖ್ಯ ಕಾರಣರಾದ `ಗಾರ್ಗಿ’ ಸಿನಿಮಾದ ನಿರ್ದೇಶಕ ಗೌತಮ್ ರಾಮಚಂದ್ರನ್ ಮತ್ತು ನಟ ರಕ್ಷಿತ್ ಶೆಟ್ಟಿಗೆ ಶೀತಲ್ ಧನ್ಯವಾದ ತಿಳಿಸಿದ್ದಾರೆ.

     

    View this post on Instagram

     

    A post shared by Sheetal Shetty (@isheetalshetty)

    ಸಾಯಿ ಪಲ್ಲವಿ ಬೆಂಗಳೂರಿಗೆ ಬಂದು ಶೀತಲ್ ಶೆಟ್ಟಿ ಮತ್ತು ಟೀಮ್‌ನೊಂದಿಗೆ 5 ದಿನಗಳಲ್ಲಿ ಕನ್ನಡ ಕಲಿತು ನಿಷ್ಠೆಯಿಂದ ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದರೂ ಕಲಿಕೆ, ಸಿನಿಮಾ ಅಂತಾ ಬಂದಾಗ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಇನ್ನು ವೈರಲ್ ಆಗ್ತಿರೋ `ಗಾರ್ಗಿ’ ಕನ್ನಡ ವಿಡಿಯೋ ನೋಡಿ ಫಿದಾ ಆಗಿರೋ ಫ್ಯಾನ್ಸ್, ಸಿನಿಮಾಗಾಗಿ ಕಾಯ್ತಿದ್ದಾರೆ.

  • ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ಸಿನಿಮಾ ಮಾಡುವುದು ಒಂದು ಸವಾಲು. ಅದರಲ್ಲಿಯೂ ಮಾಡಿದ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದು ದೊಡ್ಡ ಸವಾಲು. ಅದೇ ರೀತಿ ಸಿನಿಮಾ ರಿಲೀಸ್ ಆದ್ಮೇಲೆ ಸೌಂಡ್ ಮಾಡೋದು ಕಾಮನ್. ಆದರೆ ‘ಈಟ್ಸ್ ನಾಟ್ ಎ ಈಸಿ ಜಾಬ್’ ಹಾಡು ರಿಲೀಸ್‍ಗೂ ಮುನ್ನ ಸ್ಯಾಂಪಲ್‌ನಿಂದಲೇ ಕಿಚ್ಚು ಹಚ್ಚಿದೆ. ಆದರೆ ಹಾಡುಗಳು, ಟೀಸರ್ ಮೂಲಕವೇ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ‘ಚೇಸ್’.

    ಬೆಳ್ಳಿತೆರೆ ಬಾನಂಗಳದಲ್ಲಿ ಮಿಂಚಲು ಸನ್ನದ್ಧವಾಗಿರುವ ‘ಚೇಸ್’ ಸಿನಿಮಾದ ಆರು ಹಾಡುಗಳು ವೈರೆಟಿ ಫ್ಲೇವರ್‌ಗಳು. ಮೆಲೋಡಿ, ಎನರ್ಜಿಟಿಕ್ ನಂಬರ್ ಎಲ್ಲವೂ ಕೇಳುಗರಿಗೆ ಮುದ ನೀಡುತ್ತಿವೆ. ನಿಂತಲ್ಲೇ ಗುನುಗುವಂತೆ ಮಾಡಿವೆ. ಈಗ ಚಿತ್ರತಂಡ ಇಡೀ ಆಲ್ಬಂ ಗಾನಲಹರಿ ಬಿಡುಗಡೆ ಮಾಡಿ ಗಮನಸೆಳೆಯುತ್ತಿದೆ. ಇದನ್ನೂ ಓದಿ:  90 ಕಿ.ಮೀವರೆಗೂ ಬೈಕ್‍ನಲ್ಲಿ ಮೃತಮಗನ ಸಾಗಿಸಿದ ತಂದೆ

    ವಿಜಯ್ ಪ್ರಕಾಶ್ ಮತ್ತು ಕೇರಳದ ಪ್ರಖ್ಯಾತ ಗಾಯಕ ಮನ್ಸೂರ್ ಮೊಹಮದ್ ಕಂಠಸಿರಿಯಲ್ಲಿ ಮೂಡಿಬಂದಿರುವ ‘ಮನದ ಹೊಸಿಲಾ ಡ್ಯುಯೇಟ್ ಸಿಂಗಿಂಗು’, ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಕಂಠಕುಣಿಸಿರುವ ‘ಶಾ ಲಾಲಾ ಗಾನಬಜಾನ’, ಸಂಚಿತ್ ಹೆಗ್ಡೆ ಧ್ವನಿಯಾಗಿರುವ ಹಾಡು, ಟೈಟಲ್ ಟ್ರ್ಯಾಕ್ ಸೇರಿದಂತೆ ಚೇಸ್ ಸಿನಿಮಾದ ಎಲ್ಲ ಹಾಡುಗಳು ಸಂಗೀತ ಪ್ರಿಯರ ಮನಸ್ಸಿನಲ್ಲಿ ನೆಲೆಸಿವೆ.

    ಇಷ್ಟು ಹಾಡುಗಳನ್ನು ನಿರ್ದೇಶಕ ಅಲೋಕ್ ಶೆಟ್ಟಿ ಚೆಂದವಾಗಿ ರೂಪಿಸುವುದರ ಜೊತೆಗೆ ಹಾಡೊಂದಕ್ಕೆ ತಾವೇ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ ಎಲ್ಲ ಗಾನಲಹರಿಗೂ ಉಮೇಶ್ ಪಿಲಿಕುಡೇಲು ಸಾಹಿತ್ಯದ ತಂಪು, ಕಾರ್ತಿಕ್ ಆಚಾರ್ಯ ಸಂಗೀತದ ಇಂಪು ಹಾಡುಗಳಿಗಿದೆ.

    ಮನೋಹರ್ ಸುವರ್ಣ ನಿರ್ಮಾಣದ ಚೇಸ್ ಸಿನಿಮಾಗೆ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಅನಂತ್ ರಾಜ್ ಅರಸ್ ಕ್ಯಾಮೆರಾ ಕೈಚಳಕ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಸಿನಿಮಾಕ್ಕಿದೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಮಿ, ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ:  ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್ 

    ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

  • ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

    ಜಾಝ್ ಶೈಲಿಯಲ್ಲಿ ‘ಸರೆಂಡರ್’ ಮಾಡಲು ಬಂದ ‘ವಿಂಡೋಸೀಟ್’ ನಟಿಮಣಿಯರು

    ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಸಿನಿಮಾ ಸ್ಯಾಂಡಲ್‍ವುಡ್ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು.

    ರೋಮ್ಯಾಂಟಿಕ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ‘ವಿಂಡೋಸೀಟ್’ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ಮುಖ್ಯ ಭೂಮಿಕೆಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಲೇ ಬಂದಿರುವ ಈ ಚಿತ್ರ ಇದೀಗ ಚಿತ್ರದ ಹಾಡೊಂದನ್ನ ವಿಶೇಷ ಶೈಲಿಯಲ್ಲಿ ಚಿತ್ರೀಕರಿಸಿ ಎಲ್ಲರ ಚಿತ್ತ ಸೆಳೆದಿದೆ.

    ಚಿತ್ರದ ‘ಸರೆಂಡರ್’ ಹಾಡನ್ನು ಚಿತ್ರತಂಡ ವಿಭಿನ್ನವಾಗಿ, ವಿಶೇಷವಾಗಿ ಚಿತ್ರೀಕರಿಸಿ ಸುದ್ದಿಯಲ್ಲಿದೆ. ಜಾಝ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಹಾಡು ಕನ್ನಡದ ಮಟ್ಟಿಗಂತೂ ಇದೇ ಮೊದಲ ಪ್ರಯೋಗ. ಸರೆಂಡರ್ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು, ಈ ಹಾಡು ಎಲ್ಲರ ಗಮನವನ್ನು ತನ್ನತ್ತ ಆಕರ್ಷಿಸಿದೆ. ಈ ಪ್ರಯೋಗಾತ್ಮಕ ಹಾಡಿಗೆ ಮಹೇಶ್ ರಘುನಂದನ್ ಸಾಹಿತ್ಯ, ಸೌಂದರ್ಯ ಜಯಚಂದ್ರನ್ ಗಾಯನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮ್ಯೂಸಿಕ್ ಮೋಡಿ ಇದೆ. ಇದನ್ನೂ ಓದಿ:  ಕೆಜಿಎಫ್ ಶೂಟಿಂಗ್ ನಡೆದ ಬಂಜರು ಭೂಮಿಗೆ ಮತ್ತೆ ಜೀವ ನೀಡುತ್ತಿದೆ ಹೊಂಬಾಳೆ ಫಿಲಂಸ್

    ಈಗಾಗಲೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಇಷ್ಟೊತ್ತಿಗಾಗಲೇ ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊರೊನಾ ಅದಕ್ಕೆಲ್ಲ ಬ್ರೇಕ್ ಹಾಕಿತ್ತು. ಆದ್ರೀಗ ಎಲ್ಲವೂ ಸುಧಾರಣೆಯ ಹಂತಕ್ಕೆ ಬಂದು ತಲುಪಿದ್ದು, ‘ವಿಂಡೋಸೀಟ್’ ಚಿತ್ರತಂಡ ಕೂಡ ಸಿನಿರಸಿಕರಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ.

    ಮೇಕಿಂಗ್, ಟೀಸರ್, ಹಾಡುಗಳು ಸೃಷ್ಟಿಸಿರೋ ಬಝ್, ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ಅನ್ನೋ ಕ್ಯೂರಿಯಾಸಿಟಿ, ಆದಿ ಲಕ್ಷ್ಮೀ ಪುರಾಣ ನಂತರ ನಿರೂಪ್ ಭಂಡಾರಿ ಯಾವುದೇ ಸಿನಿಮಾಗಳು ತೆರೆ ಕಾಣದಿರುವುದು, ಈ ಎಲ್ಲವೂ ಪ್ರೇಕ್ಷಕ ಪ್ರಭುಗಳ ಮನಸ್ಸಲ್ಲಿ ‘ವೀಂಡೋಸೀಟ್’ ಚಿತ್ರದ ಮೇಲೆ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿವೆ.

    ಕೆ ಎಸ್ ಕೆ ಶೋರೀಲ್ ಬ್ಯಾನರ್ ನಡಿ ನಿರ್ಮಾಣವಾದ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಾರಥ್ಯ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್, ರಿತ್ವಿಕ್ ಸಂಕಲನವಿದೆ. ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಒಳಗೊಂಡಂತೆ ಹಲವು ಕಲಾವಿದರು ‘ವಿಂಡೋಸೀಟ್’ ತಾರಾ ಬಳಗದಲ್ಲಿದ್ದಾರೆ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

  • ಬಹು ನಿರೀಕ್ಷಿತ ಹಾಡಿನ ಬಿಡುಗಡೆ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ ‘ಚೇಸ್’ ಚಿತ್ರತಂಡ

    ಬಹು ನಿರೀಕ್ಷಿತ ಹಾಡಿನ ಬಿಡುಗಡೆ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ ‘ಚೇಸ್’ ಚಿತ್ರತಂಡ

    ನಸೂರೆಗೊಳ್ಳುವ ಹಾಡು ಬಿಡುಗಡೆ ಮಾಡುವ ಮೂಲಕ ‘ಚೇಸ್’ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದೆ. ‘ಚೇಸ್’ ಚಿತ್ರದ ಮನದ ಹೊಸಿಲ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಕಳೆದ ವರ್ಷ ಪ್ರಾಮಿಸಿಂಗ್ ಟೀಸರ್ ಮೂಲಕ ‘ಚೇಸ್’ ಸಿನಿಮಾ ಸೌಂಡ್ ಮಾಡಿತ್ತು. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದ ಚಿತ್ರತಂಡ ಇಂದು ಚಿತ್ರದ ಬಹು ನಿರೀಕ್ಷಿತ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ.

    ಕೇಳಲು ಇಂಪಾಗಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಹಾಗೂ ಮೊಹಮ್ಮದ್ ಮಕ್ಬುಲ್ ಮನ್ಸೂರ್ ದನಿಯಾಗಿದ್ದಾರೆ. ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜನೆ ಉಮೇಶ್ ಪಿಲಿಕುಡೆಲು ಸಾಹಿತ್ಯದಲ್ಲಿ ಮೂಡಿ ಬಂದಿರುವ ‘ಚೇಸ್’ ಸಿನಿಮಾದ ಮನದ ಹೊಸಿಲು ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

    ವಿಲೋಕ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಚೇಸ್ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಂದೊಂದು ಕ್ರೈಂ, ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರವಾಗಿದ್ದು ಹೊಸ ಬಗೆಯ ನಿರೂಪಣೆ ಹಾಗೂ ತಾಂತ್ರಿಕತೆಗೆ ಹೆಚ್ಚು ಒತ್ತನ್ನು ಸಿನಿಮಾದಲ್ಲಿ ನೀಡಲಾಗಿದೆ.

    ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್, ವೀಣಾ ಸುಂದರ್, ಸುಂದರ್, ಪ್ರಿಯಾ ಷಟಮರ್ಷನ್, ನಾಗಾರ್ಜುನ ಬಿ ರಾಜಶೇಖರ್, ಉಷಾ ಭಂಡಾರಿ, ಡಾ.ಕಿಂಗ್ ಮೋಹನ್ ಹೀಗೆ ಕಲಾವಿದರ ದೊಡ್ಡ ದಂಡೇ ‘ಚೇಸ್’ ತಾರಾಬಳಗದಲ್ಲಿದ್ದಾರೆ. ಮ್ಕಾಕ್ಸ್ ಎನ್ನುವ ನಾಯಿ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.

    ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು. ಮಂಗಳೂರು, ಬೆಂಗಳೂರು, ಕೊಚ್ಚಿ, ಹಿಮಾಚಲ ಪ್ರದೇಶದ ಕಲರ್ ಫುಲ್ ಲೋಕೇಷನ್ ಗಳಲ್ಲಿ ಚೇಸ್ ಸಿನಿಮಾ ಚಿತ್ರೀಕರಣಗೊಂಡಿದ್ದು, ಅನಂತ್ ರಾಜ್ ಅರಸ್ ಕ್ಯಾಮೆರಾ ನಿರ್ದೇಶಕರಾಗಿ ದುಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಚೇಸ್ ಚಿತ್ರಕ್ಕಿದೆ.

  • ವಿಂಡೋಸೀಟ್ ಚಿತ್ರದ `ಖಾಲಿ ಆಕಾಶ’ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್..!!

    ವಿಂಡೋಸೀಟ್ ಚಿತ್ರದ `ಖಾಲಿ ಆಕಾಶ’ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್..!!

    ಬೆಂಗಳೂರು: ರೋಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರ ಒಳಗೊಂಡಿರುವ `ವಿಂಡೋಸೀಟ್’ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಸಾಂಗ್ ಬಿಡುಗೆಯಾಗಿದೆ. ಅತಿ ಚೆಂದದ ಹೂ ಗೊಂಚಲು ಹಾಡಿನ ಸೂಪರ್ ಸಕ್ಸಸ್ ನಂತರ `ಖಾಲಿ ಆಕಾಶ ನನ್ನೇ ನೋಡಿದೆ’ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಕವಿರಾಜ್ ಸಾಹಿತ್ಯ ಕೃಷಿಯಲ್ಲಿ ಅರಳಿದ ಪ್ಯಾಥೋ ಸಾಂಗ್‍ಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ, ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ದನಿ ಹೊಸದೊಂದು ಸ್ಪರ್ಶ ನೀಡಿದೆ. ಹೊಸತನದಿಂದ ಕೂಡಿದ ಈ ಹಾಡಿಗೆ ಗಾನಪ್ರಿಯರು ತಲೆದೂಗಿದ್ದಾರೆ.

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ್ ಪ್ರಕಾಶ್ ಇಬ್ಬರ ತಲ್ಲೀನತೆ ಲಿರಿಕಲ್ ವಿಡಿಯೋದಲ್ಲಿ ನೋಡುಗರನ್ನು ಸೆಳೆಯದೇ ಇರದು. ವಿಶೇಷ ಅಂದ್ರೆ `ಖಾಲಿ ಆಕಾಶ’ `ವಿಂಡೋಸೀಟ್’ ಚಿತ್ರ ತಂಡಕ್ಕೂ ಬಲು ಅಚ್ಚುಮೆಚ್ಚಿನ ಸಾಂಗ್ ಆಗಿದೆ. ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಟನೆಯ ಬಹುನಿರೀಕ್ಷಿತ ಚಿತ್ರಕ್ಕೆ ಶೀತಲ್ ಶೆಟ್ಟಿ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿದ್ದು, ನಿರೂಪ್ ಭಂಡಾರಿಗೆ ಜೋಡಿಯಾಗಿ ಸಂಜನಾ ಆನಂದ್, ಅಮೃತ ಐಯ್ಯಂಗಾರ್ ನಾಯಕ ನಟಿಯರಾಗಿ ತೆರೆಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹಾಕಿದ್ದು, ವಿಘ್ನೇಶ್ ರಾಜ್ ಕ್ಯಾಮೆರಾ ಕಣ್ಣಲ್ಲಿ ವಿಂಡೋಸೀಟ್ ಸಿನಿಮಾ ಸೆರೆಯಾಗಿದೆ. ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.

  • ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ನಿರೂಪ್ ಭಂಡಾರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಂಡೋಸೀಟ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ‘ವಿಂಡೋಸೀಟ್’ ಚಿತ್ರತಂಡ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಲು ಸಜ್ಜಾಗಿದೆ.

    ಈಗಾಗಲೇ ಯೋಗರಾಜ್ ಭಟ್ ಸಾಹಿತ್ಯ ಕೃಷಿಯಲ್ಲಿ ಅರಳಿರೋ ‘ಅತಿ ಚೆಂದದ ಹೂಗೊಂಚಲು’ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿ ಹಿಟ್ ಆಗಿದೆ. ಇದೀಗ ಅದೇ ಖುಷಿಯಲ್ಲಿ ಚಿತ್ರತಂಡ ‘ಖಾಲಿ ಆಕಾಶ’ ಎಂಬ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡುತ್ತಿದ್ದು, ಡಿಸೆಂಬರ್ 18ಕ್ಕೆ ಆನಂದ್ ಆಡಿಯೋನಲ್ಲಿ ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗುತ್ತಿದೆ. ಮೊದಲ ಲಿರಿಕಲ್ ವೀಡಿಯೋಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಲ್ಲಿರುವ ‘ವಿಂಡೋಸೀಟ್’ ಚಿತ್ರತಂಡ ‘ಖಾಲಿ ಆಕಾಶ’ ಹಾಡಿಗೆ ಯಾವ ರೀತಿ ಪ್ರೇಕ್ಷಕ ಪ್ರಭುವಿನ ಪ್ರತಿಕ್ರಿಯೆ ಸಿಗುತ್ತೆ ಅನ್ನೋದನ್ನ ಎದುರು ನೋಡುತ್ತಿದೆ.

    ‘ವಿಂಡೋಸೀಟ್’ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು ನಟಿ ಶೀತಲ್ ಶೆಟ್ಟಿ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಜಾಕ್ ಮಂಜುನಿರ್ಮಾಣದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಚಿತ್ರದಲ್ಲಿ ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ನಿರೂಪ್ ಭಂಡಾರಿ ಜೊತೆ ನಾಯಕಿಯರಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮೂಡಿ ಬಂದಿವೆ.

  • ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಾಲೆಂಜ್ ಗೆಲ್ಲಿ, ಪ್ರೀಮಿಯರ್ ಶೋನಲ್ಲಿ ಭಾಗವಹಿಸಿ

    ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಾಲೆಂಜ್ ಗೆಲ್ಲಿ, ಪ್ರೀಮಿಯರ್ ಶೋನಲ್ಲಿ ಭಾಗವಹಿಸಿ

    ಸ್ಟ್ ಲುಕ್, ಟೀಸರ್ ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಿತ್ರ ಈಗ ‘ವಿಂಡೋಸೀಟ್ ಇನ್ವೆಸ್ಟಿಗೇಶನ್ ಚಾಲೆಂಜ್’ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ಅರೇ ಇದೇನಪ್ಪಾ ಚಾಲೆಂಜ್ ಅಂದ್ಕೋಂಡ್ರಾ..? ಖಂಡಿತವಾಗಿಯೂ ಇದು ಚಿತ್ರತಂಡ ಸಿನಿರಸಿಕರಿಗೆ ನೀಡಿರೋ ಚಾಲೆಂಜ್. ಈ ಚಾಲೆಂಜ್ ಗೆದ್ದವರು ವಿಂಡೋಸೀಟ್ ಚಿತ್ರತಂಡದ ಜೊತೆ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡೋ ಅವಕಾಶ ಗಿಟ್ಟಿಸಿಕೊಳ್ಳಬಹುದು.

    ಹೌದು. ಚಾಲೆಂಜ್ ಗೆಲ್ಲಲು ಮಾಡಬೇಕಾಗಿದ್ದು ಇಷ್ಟೆ ಇಂದು ಸಂಜೆ ಏಳು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ‘ವಿಂಡೋಸೀಟ್ ಇನ್ವೆಸ್ಟಿಗೇಶನ್ ಚಾಲೆಂಜ್’ನಲ್ಲಿ ಭಾಗವಹಿಸಬೇಕು. ಅದಕ್ಕೂ ಮುನ್ನ ವಿಂಡೋ ಸೀಟ್ ಚಿತ್ರದ ಟೀಸರ್ ಮಿಸ್ ಮಾಡ್ದೆ ನೋಡಬೇಕು. ಟೀಸರ್ ನಲ್ಲಿರೋ ನಿಗೂಢ ಘಟನೆ ನಿಮ್ಮ ಸುತ್ತಮುತ್ತ ನಡೆದಾಗ ಒಬ್ಬ ತನಿಖಾಧಿಕಾರಿಯಾಗಿ ರಹಸ್ಯವನ್ನು ಯಾವ ರೀತಿ ಬಗೆಹರಿಸುತ್ತೀರಾ ಅನ್ನೋದು ಚಿತ್ರತಂಡದ ಚಾಲೆಂಜ್. ಸರಿಯಾದ ಉತ್ತರ ನೀಡಿದವರಿಗೆ ಪ್ರೀಮಿಯರ್ ಶೋನಲ್ಲಿ ಇಡೀ ಚಿತ್ರತಂಡದ ಜೊತೆ ಸಿನಿಮಾ ನೋಡೋ ಬಂಪರ್ ಅವಕಾಶ ಸಿಗಲಿದೆ.

    ರೊಮ್ಯಾಂಟಿಂಕ್ ಥ್ರಿಲ್ಲರ್ ಕಥಾಹಂದರವವುಳ್ಳ ‘ವಿಂಡೋಸೀಟ್’ ಚಿತ್ರದಲ್ಲಿ ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸದ್ಯಕ್ಕಂತೂ ವಿಂಡೋಸೀಟ್ ಟೀಸರ್ ನೋಡಿದವರು ಹೇಗಪ್ಪಾ ಈ ರಹಸ್ಯ ಭೇದಿಸೋದು ಎಂದು ಯೋಚಿಸುತ್ತಿರೋದಂತೂ ಸತ್ಯ.

  • ‘ವಿಂಡೋಸೀಟ್’ನಲ್ಲಿ ಕುಳಿತು ನೋಡೋದೆ ಚೆಂದ ಅಂತಿದ್ದಾರೆ ನಿರೂಪ್

    ‘ವಿಂಡೋಸೀಟ್’ನಲ್ಲಿ ಕುಳಿತು ನೋಡೋದೆ ಚೆಂದ ಅಂತಿದ್ದಾರೆ ನಿರೂಪ್

    – ಎಲ್ಲರನ್ನ ಆಕರ್ಷಿಸುತ್ತಿರುವ ವಿಂಡೋಸೀಟ್ ಟೀಸರ್ !

    ನಿರೂಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡ ಶೀತಲ್ ಶೆಟ್ಟಿ ‘ವಿಂಡೋಸೀಟ್’ ಸಿನಿಮಾದಿಂದ ನಿರ್ದೇಶಕಿಯಾಗುತ್ತಿದ್ದಾರೆ. ಇದಾಗಲೇ ಎರಡು ಕಿರುಚಿತ್ರ ಮಾಡಿ ಗೆದ್ದವರು ಶೀತಲ್ ಶೆಟ್ಟಿ. ಆಕರ್ಷಕ ಟೈಟಲ್ ಮೂಲಕ ಸದ್ದು ಮಾಡುತ್ತಿರುವ ವಿಂಡೋಸೀಟ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.

    ಇಷ್ಟು ದಿನ ‘ವಿಂಡೋಸೀಟ್’ ಎಂದಾಕ್ಷಣಾ ವಿಭಿನ್ನ ಟೈಟಲ್ ಅನ್ನಿಸುತ್ತಾ ಇತ್ತು. ಆದರೀಗ ಆ ವಿಂಡೋಸೀಟ್ ನ ಅನುಭವ ಮಾಡಿಕೊಟ್ಟಿದೆ. ಟೀಸರ್. ಟ್ರೈನ್ ಜರ್ನಿ ಮಾಡಿದ ಎಲ್ಲರಿಗೂ ಈ ವಿಂಡೋಸೀಟ್ ಹಿಂದೆ ಒಂದು ಕಥೆ ಇರುತ್ತೆ. ವಿಂಡೋಸೀಟ್ ನಲ್ಲಿ ಕುಳಿತು ಹೊರಗಿನ ಸೌಂದರ್ಯ ಸವಿಯುವುದೇ ಒಂದು ಖುಷಿ. ಆ ಸೌಂದರ್ಯ ಸವಿಯೋದಕ್ಕೆ ಹೋಗಿ.

    ವಿಂಡೋಸೀಟ್ ನಲ್ಲಿ ಒಂದು ಮಧುರ ಪ್ರೇಮ ಕಥೆ ಅಡಗಿದೆ. ಇಬ್ಬರು ನಾಯಕಿಯರ ಪ್ರೀತಿಯ ಜಗತ್ತು ಇದರಲ್ಲಿ ತೆರೆದುಕೊಂಡಿದೆ. ತಾನಿಷ್ಟಪಟ್ಟ ಹುಡುಗಿ ಒಂದು ಕಡೆ. ತನ್ನನ್ನು ಇಷ್ಟ ಪಡುತ್ತಿರುವ ಹುಡುಗಿ ಇನ್ನೊಂದು ಕಡೆ. ಹುಟ್ಟಿ ಬೆಳೆದ ಹಳ್ಳಿಯ ಸೊಬಗು, ಊರ ಬಿಟ್ಟು ಬೇರೆಲ್ಲೋ ಸೇರಿ ಅಪ್ಪ-ಅಮ್ಮನ ನೆನಪಿಗಾಗಿ ಉಳಿದ ಆ ಮನೆಯ ನೆನಪುಗಳು ಎಲ್ಲವೂ ಟೀಸರ್ ನಲ್ಲಿ ಹಿಡಿದಿಡುತ್ತದೆ.

    ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯಲ್ಲಿ ನಾಯಕನ ಹುಡುಗಿ ತೊಂದರೆಗೆ ಸಿಕ್ಕಾಗ ಆಕೆಯನ್ನ ಬಚಾವ್ ಮಾಡುವುದು ಹೇಗೆ, ಇನ್ನೊಬ್ಬಳು ನಾಯಕಿಯ ಕಥೆ ಏನು ಈ ಎಲ್ಲಾ ಪ್ರಶ್ನೆಗಳು ಸಾಕಷ್ಟು ಕುತೂಹಲವನ್ನ ಹುಟ್ಟು ಹಾಕಿವೆ. ಕಥೆಯ ತಿರುಳಂತು ತಿಳಿಯಿತು ಆದ್ರೆ ಮುಂದೇನು, ಕಥೆ ಸಾಗುವ ಮಾರ್ಗದ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿವೆ. ಇದಕ್ಕೆಲ್ಲಾ ಉತ್ತರ ಸಿನಿಮಾದಲ್ಲಿದೆ.

    ಶೀತಲ್ ಶೆಟ್ಟಿಯ ದೊಡ್ಡ ಕನಸು ಈ ವಿಂಡೋಸೀಟ್. ನಿರೂಪ್ ಭಂಡಾರಿಯನ್ನ ನಿರೂಪಿಸಿರುವ ರೀತಿ ಅದ್ಭುತವಾಗಿದೆ. ಸ್ಯಾಂಡಲ್‍ವುಡ್ ನಲ್ಲಿ ಇತ್ತೀಚೆಗೆ ಬ್ಯುಸಿ ಎನಿಸಿಕೊಂಡಿರುವ ಅಮೃತಾ ಅಯ್ಯರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿದ್ದಾರೆ. ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದು, ಟೀಸರ್ ನಲ್ಲಿ ಆ ಸೌಂದರ್ಯವನ್ನು ಕಟ್ಟಿಕೊಟ್ಟಿದ್ದಾರೆ.

    ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಗೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾದಲ್ಲಿ ಸುಂದರ ಸಿನಿಮಾ ಸೆರೆಯಾಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  • ದೀಪಾವಳಿಗೆ ಹೊಸ ರಂಗು ತುಂಬಲಿದೆ ‘ವಿಂಡೋ ಸೀಟ್’ ಟೀಸರ್!

    ದೀಪಾವಳಿಗೆ ಹೊಸ ರಂಗು ತುಂಬಲಿದೆ ‘ವಿಂಡೋ ಸೀಟ್’ ಟೀಸರ್!

    – ಕಿಚ್ಚ ಕ್ರಿಯೇಷನ್ಸ್ ನಲ್ಲಿ ಮಸ್ತ್ ಮೇಕಿಂಗ್ ವೀಡಿಯೋ

    ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈಗಾಗಲೇ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್‍ನಿಂದ ವಿಂಡೋ ಸೀಟ್ ಹಂಗಾಮಾ ಶುರುವಾಗಿದೆ. ವಿಂಡೋ ಸೀಟ್‍ನಲ್ಲಿ ಚೇತೋಹಾರಿಯಾದದ್ದೇನೋ ಇದೆ ಎಂಬ ಭರವಸೆಯನ್ನು ಶೀತಲ್ ಪ್ರೇಕ್ಷಕರ ಮನಸಲ್ಲಿ ಭದ್ರವಾಗಿಯೇ ನೆಲೆಯೂರಿಸಿದ್ದಾರೆ. ಈ ಸಿನಿಮಾದ ಮುಂದಿನ ಅಪ್‍ಡೇಟ್ಸ್ ಗಾಗಿ ಕಾದು ಕೂತಿದ್ದವರಿಗೀಗ ಚಿತ್ರತಂಡ ಡಬಲ್ ಧಮಾಕಾವನ್ನೇ ಕೊಡಮಾಡಿದೆ. ಈ ಮೂಲಕ ಮತ್ತೆ ವಿಂಡೋ ಸೀಟ್ ದೀಪಾವಳಿಯ ಪ್ರಭಾವಳಿಗೆ ಹೊಸ ಮೆರುಗು ನೀಡಲು ಅಣಿಗೊಂಡಿದೆ.

    ಇತ್ತೀಚೆಗೆ ಲಾಂಚ್ ಆಗಿದ್ದ ಫಸ್ಟ್ ಲುಕ್‍ನಲ್ಲಿಯೇ ಒಂದಷ್ಟು ಅಂಶಗಳು ಪ್ರೇಕ್ಷಕರನ್ನ ತಲುಪಿಕೊಂಡಿದ್ದವು. ಆ ಘಳಿಗೆಯಲ್ಲಿ ಶೀಘ್ರದಲ್ಲಿಯೇ ಟೀಸರ್ ಲಾಂಚ್ ಮಾಡೋದಾಗಿಯೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿಕೊಂಡಿದ್ದರು. ಅದಕ್ಕೀಗ ಅವರು ದೀಪಾವಳಿಯಂದು ಮುಹೂರ್ತ ನಿಗದಿ ಮಾಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿದೆ. ಅದಲ್ಲದೇ ಇಂದು ಸಂಜೆ ಆರು ಗಂಟೆಗೆ ಸರಿಯಾಗಿ ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ವಿಂಡೋ ಸೀಟ್‍ನ ಮಸ್ತ್ ಆಗಿರೋ ಮೇಕಿಂಗ್ ವೀಡಿಯೋ ಕೂಡಾ ಬಿಡುಗಡೆಗೊಂಡಿದೆ. ಅದರಲ್ಲಿ ಸದರಿ ಸಿನಿಮಾ ಬಗೆಗಿನ ಮತ್ತೊಂದಷ್ಟು ರಸವತ್ತಾದ ಹೊಳಹುಗಳು ಜಾಹೀರಾಗಿದೆ.

    ಕೊರೊನೋತ್ತರ ಕಾಲದಲ್ಲಿ ಚಿತ್ರರಂಗಕ್ಕೆ ಹೊಸಾ ಆವೇಗ ನೀಡಬಲ್ಲ ಭರವಸೆ ಮೂಡಿಸಿರುವ ಒಂದಷ್ಟು ಸಿನಿಮಾಗಳಿದ್ದಾವೆ. ಆ ಯಾದಿಯಲ್ಲಿ ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬಂದಿರುವ ವಿಂಡೋ ಸೀಟ್ ಕೂಡಾ ಸೇರಿಕೊಂಡಿದೆ. ಇದೀಗ ಲಾಂಚ್ ಆಗಿರೋ ಮೇಕಿಂಗ್ ವೀಡಿಯೋದಲ್ಲಿ ವಿಂಡೋ ಸೀಟ್‍ನ ಕಥಾ ಹಂದರದ ಝಲಕ್‍ಗಳೂ ಕೂಡಾ ಸ್ಪಷ್ಟವಾಗಿ ಕಾಣಿಸಿದೆ. ಒಂದೊಳ್ಳೆ ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾನಕವನ್ನು ಶೀತಲ್ ಶೆಟ್ಟಿ ಕಟ್ಟಿ ಕೊಟ್ಟಿದ್ದಾರೆಂಬುದೂ ಸ್ಪಷ್ಟವಾಗಿದೆ. ಅದಲ್ಲದೇ ನಿರೂಪ್ ಭಂಡಾರಿ ಇಲ್ಲಿ ಯಾವ್ಯಾವ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆಂಬ ಪ್ರೇಕ್ಷಕರ ಕ್ಯೂರಿಯಾಸಿಟಿ ಕೂಡಾ ಕೊಂಚ ತಣಿದಂತಾಗಿದೆ. ಒಟ್ಟಾರೆಯಾಗಿ ಈ ಮೇಕಿಂಗ್ ವೀಡಿಯೋ ಟೀಸರ್ ಆಗಿ ತದೇಕಚಿತ್ತದಿಂದ ಕಾಯುವಂತೆ ಮಾಡುವಷ್ಟು ಶಕ್ತವಾಗಿ ಮೂಡಿ ಬಂದಿದೆ.

    ವಿಂಡೋ ಸೀಟ್ ಈ ಪರಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು, ಅದ್ಯಾವತ್ತು ರಿಲೀಸಾಗುತ್ತೆ ಅಂತ ಜಾತಕ ಪಕ್ಷಿಗಳಂತೆ ಕಾಯುವಂತಾಗಿರಲು ನಿಖರವಾದ ಕಾರಣಗಳಿವೆ. ಮೊದಲನೆಯದಾಗಿ ನಿರ್ದೇಶಕಿ ಶೀತಲ್ ಈವರೆಗಿನ ಕೆಲಸ ಕಾರ್ಯಗಳಲ್ಲಿಯೇ ಆ ರೀತಿಯಲ್ಲೊಂದು ಭರವಸೆ ಮೂಡಿಸಿದ್ದಾರೆ. ಇನ್ನುಳಿದಂತೆ ಕಥೆ, ಪಾತ್ರವರ್ಗ, ಒಂದಿಡೀ ತಂಡವನ್ನು ಅವರು ಬಲು ಜಾಣ್ಮೆಯಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ. ಒಂದಿಡೀ ಪಾತ್ರವರ್ಗ ಮತ್ತು ತಂಡ ಅದೆಂಥಾ ಉತ್ಸಾಹದಿಂದ ಈ ಸಿನಿಮಾವನ್ನು ರೂಪಿಸಿದೆ. ಅದರ ಬಗ್ಗೆ ಯಾವ ಥರದ ಭರವಸೆಯಿಟ್ಟುಕೊಂಡಿದೆ ಅನ್ನೋದೂ ಈ ಮೇಕಿಂಗ್ ವೀಡಿಯೋದಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.